Modi in Karnataka : ಮೋದಿಗೆ ಸಿದ್ದರಾಮಯ್ಯ 21 ಪ್ರಶ್ನೆ; ಅದಾನಿ, ಎಚ್‌ಎಎಲ್‌, ವಿದ್ಯುತ್‌ ಸೇರಿ ನಾನಾ ವಿಷಯಗಳ ಮೂಲಕ ಕೆಣಕಿದ ಕೈ ನಾಯಕ - Vistara News

ಕರ್ನಾಟಕ

Modi in Karnataka : ಮೋದಿಗೆ ಸಿದ್ದರಾಮಯ್ಯ 21 ಪ್ರಶ್ನೆ; ಅದಾನಿ, ಎಚ್‌ಎಎಲ್‌, ವಿದ್ಯುತ್‌ ಸೇರಿ ನಾನಾ ವಿಷಯಗಳ ಮೂಲಕ ಕೆಣಕಿದ ಕೈ ನಾಯಕ

ಕರ್ನಾಟಕಕ್ಕೆ ಆಗಮಿಸಿದ ಮೋದಿ (Modi in Karnataka) ಅವರ ಮುಂದೆ 21 ಪ್ರಶ್ನೆಗಳನ್ನು ಇಟ್ಟ ಸಿದ್ದರಾಮಯ್ಯ ಅವರು ತನ್ನ ಬಳಿ ಸಾವಿರ ಪ್ರಶ್ನೆಗಳಿವೆ ಅಂದಿದ್ದಾರೆ.

VISTARANEWS.COM


on

Modi siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ (Modi in Karnataka) ಹಲವು ಪ್ರಶ್ನೆಗಳ ಮೂಲಕ ಕೆಣಕುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯೂ ೨೧ ಪ್ರಶ್ನೆಗಳನ್ನು ಕೇಳಿದ್ದಾರೆ. ʻʻಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಂದ 21 ಪ್ರಶ್ನೆಗಳುʼʼ ಎಂಬ ಪ್ರಶ್ನಾವಳಿಯನ್ನೇ ಅವರು ಮುಂದಿಟ್ಟಿದ್ದಾರೆ.

ʻʻಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರೆ, 21 ಪ್ರಶ್ನೆಗಳ ಮೂಲಕ ನಿಮಗೆ ಸ್ವಾಗತ
ಚುನಾವಣೆಗೆ ಮೊದಲು ಕರ್ನಾಟಕವೆಂಬುದೊಂದು ರಾಜ್ಯವಿದೆ ಎಂಬುದನ್ನೆ ಮರೆತುಬಿಟ್ಟಿದ್ದ ತಾವು ಮತ್ತು ತಮ್ಮ ಗೃಹ ಸಚಿವರಿಗೆ ಈಗ ಓಟು ಬೇಕು. ಆದ್ದರಿಂದ ಪದೇಪದೆ ಕರ್ನಾಟಕ ನೆನಪಾಗುತ್ತಿದೆ. ಕನಾಟಕದಲ್ಲಿ ನೀವು ಸಾಲು ಸಾಲು ಉದ್ಘಾಟಿಸುತ್ತಿರುವ ಬಹುಪಾಲು ಕಾಮಗಾರಿಗಳು/ ಯೋಜನೆಗಳು ಕಾಂಗ್ರೆಸ್ ಸರ್ಕಾರದವು ಎಂಬುದನ್ನು ನೆನಪಿಸಿಕೊಂಡು ಉದ್ಘಾಟನೆ ಮಾಡಿ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಹಾಗೆ ಸ್ಮರಣೆ ಮಾಡಿಕೊಂಡು ಕಾಮಗಾರಿ ಉದ್ಘಾಟಿಸುವುದು ನೈತಿಕ ರಾಜಕಾರಣದ ಮಾದರಿ ಎಂಬುದನ್ನು ನಿಮಗೆ ನೆನಪಿಸಿ ನೀವು ಈ ಸಂದರ್ಭದಲ್ಲಿ ಕನ್ನಡಿಗರಿಗೆ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಬೇಕೆಂದು ಆಗ್ರಹಿಸುತ್ತೇನೆʼʼ ಎಂದಿರುವ ಅವರು, ಅದಾನಿ ಷೇರು ಹಗರಣ, ಎಚ್‌ಎಎಲ್‌ಗೆ ಅನ್ಯಾಯವೂ ಸೇರಿದಂತೆ ಕಾಂಗ್ರೆಸ್‌ ಪ್ರತಿಪಾದಿಸುತ್ತಿರುವ ಹಲವು ಸಂಗತಿಗಳನ್ನು ಉಲ್ಲೇಖ ಮಾಡಿದ್ದಾರೆ.

ವಿದ್ಯುತ್‌ ಉತ್ಪಾದನೆಯ ಕ್ರೆಡಿಟ್‌ ಯಾರಿಗೆ?

೧. ನೀವು ಇಂದು ಇಂಡಿಯಾ ಎನರ್ಜಿ ಸಪ್ತಾಹದಲ್ಲಿ ಭಾಗವಹಿಸುತ್ತಿದ್ದೀರಿ. ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ ಬಗ್ಗೆಯೂ ಮಾತನಾಡಲಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2013ರಲ್ಲಿ ಸೋಲಾರ್ ಮತ್ತು ವಿಂಡ್ ಪವರ್ ಎರಡೂ ಸೇರಿ ಸುಮಾರು 4500 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿತ್ತು. ಇದನ್ನು ನಮ್ಮ ಸರ್ಕಾರದ ಅಂತ್ಯದ ವೇಳೆಗೆ 13000 ಮೆಗಾವ್ಯಾಟ್‍ಗೆ ಹೆಚ್ಚಿಸಿದ್ದೆವು. ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ 14 ಸಾವಿರ ಮೆಗಾವ್ಯಾಟ್ ದಾಟಿತ್ತು. ಎಲ್ಲ ಮೂಲಗಳಿಂದ 2014 ರಲ್ಲಿ 14825 ಮೆಗಾವ್ಯಾಟ್ ಉತ್ಪಾದನೆ ಇತ್ತು. 2018ರ ವೇಳೆಗೆ 28000 ಮೆಗಾವ್ಯಾಟ್ ಆಗಿತ್ತು. ಹಾಗಿದ್ದರೆ ಇದರ ಕ್ರೆಡಿಟ್ ಯಾರಿಗೆ ಸಲ್ಲಬೇಕು?

ಹಿಮಾಲಯವನ್ನೇ ನಾಶ ಮಾಡಿದ್ದೀರಿ..

೨. ಕರ್ನಾಟಕದಲ್ಲಿ ವಿದ್ಯುತ್ ಬಳಕೆಯಾಗುತ್ತಿರುವುದು 11-12 ಸಾವಿರ ಮೆಗಾವ್ಯಾಟ್ ಮಾತ್ರ. ಈ ವಿದ್ಯುತ್ತನ್ನು ಖರೀದಿಸಿ ಉತ್ತರದ ರಾಜ್ಯಗಳಲ್ಲಿ ಬಳಸಬಹುದಲ್ಲ? ಅದನ್ನು ಬಿಟ್ಟು ಹಿಮಾಲಯಕ್ಕೆ ಹೋಗಿ ಜೆಸಿಬಿ, ಹಿಟಾಚಿಗಳನ್ನು ಮತ್ತು ಡೈನಾಮೈಟುಗಳನ್ನು ಬಳಸಿ ಭಾರತದ ಪವಿತ್ರವಾದ ಪರ್ವತಗಳನ್ನು ನಾಶ ಮಾಡಲು ಹೊರಟಿದ್ದೀರಿ? ಗಂಗೆ, ಯಮುನೆ, ಬಾಗೀರಥಿ, ಸರಸ್ವತಿ, ಗೋಮತಿ, ಸಿಂಧೂ ಎಂಬ ನಮ್ಮ ಪವಿತ್ರ ನದಿಗಳ ಮೇಲೆ ನೀವು ಮಾಡುತ್ತಿರುವುದು ಅತ್ಯಾಚಾರವೆನ್ನಿಸುತ್ತಿಲ್ಲವೆ? ನಮ್ಮ ಶೂದ್ರ ನಾಯಕ ದೇವರಾದ ಶಿವನ ಮೇಲೆ, ಶಿವನ ಹೆಸರಿನ ಜಾಗಗಳ ಮೇಲೆ ನೀವು ಮಾಡುತ್ತಿರುವ ದಾಳಿ, ಅತ್ಯಾಚಾರ, ಅನಾಚಾರಗಳನ್ನು ಕೂಡಲೆ ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ. ನಿಮಗೆ ಬೇಕಾದಷ್ಟು ವಿದ್ಯುತ್ತನ್ನು ಉತ್ಪಾದಿಸಿಕೊಡಲು ನಮ್ಮ ಕಾಂಗ್ರೆಸ್ ಸರ್ಕಾರ ಮುನ್ನುಡಿಯನ್ನು ಬರೆದಿದೆ. ಹೇಗಿದ್ದರೂ ನಮ್ಮ ರೈತರ ಎದೆಯ ಮೇಲೆ ಬರೆ ಎಳೆದ ಹಾಗೆ ವಿದ್ಯುತ್ ಲೈನುಗಳನ್ನು ದೇಶದ ಉದ್ದಗಲಕ್ಕೂ ಎಳೆದಿದ್ದೀರಿ. ಅದರ ಮೂಲಕ ನಾವು ವಿದ್ಯುತ್ ಸರಬರಾಜು ಮಾಡುತ್ತೇವೆ.

೩. ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಬ್ಯಾಂಕುಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋಗಲು 28 ಜನಕ್ಕೂ ಹೆಚ್ಚಿನ ದಗಾಕೋರ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆ 28 ಜನರಲ್ಲಿ 27 ಜನ ಗುಜರಾತಿನವರೆ ಇದ್ದಾರೆ, ಇದು ಕಾಕತಾಳಿಯವೊ ಇಲ್ಲ ಉದ್ದೇಶ ಪೂರ್ವಕವಾದ ದೇಶದ್ರೋಹವೊ?

ಬ್ಯಾಂಕ್‌ ವಿಲೀನದಿಂದ ರಾಜ್ಯಕ್ಕೆ ನಷ್ಟ ಮಾಡಿದಿರಿ..

೪. ನಿಮ್ಮ ರಾಜ್ಯದ ವ್ಯಾಪಾರಿಗಳಿಗೆ ಸಾಲಕೊಟ್ಟು ಅವರು ದೇಶದಿಂದ ಓಡಿಹೋಗಲು ಅವಕಾಶ ಮಾಡಿಕೊಟ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕು, ಬರೋಡಾ ಬ್ಯಾಂಕು ಮುಂತಾದ ಹಣಕಾಸು ಸಂಸ್ಥೆಗಳು ದಿವಾಳಿಯಾಗುವಂತೆ ಮಾಡಿದಿರಿ. ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೂಲದ ಸಂಪದ್ಭರಿತವಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯಾ ಬ್ಯಾಂಕು, ಕಾರ್ಪೊರೇಷನ್ ಬ್ಯಾಂಕು ಮುಂತಾದವುಗಳಲ್ಲಿದ್ದ ಲಕ್ಷಾಂತರ ಕೋಟಿ ಸಂಪತ್ತನ್ನು ದೋಚಿಕೊಂಡು ದಿವಾಳಿಯಾಗುತ್ತಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು ಸರಿಯೆ?

೫. ಅದಾನಿ ಎಂಬ ದೇಶದ್ರೋಹಿ ವ್ಯಾಪಾರಿಗೆ ನೀವೆ ಸ್ವತಃ ಸಾಲ ಕೊಡಿ ಎಂದು ಬ್ಯಾಂಕುಗಳಿಗೆ ಪತ್ರ ಬರೆದಿದ್ದೀರೆಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಇದು ನಿಜವೆ? ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮಾಡಲು 7500 ಕೋಟಿ ಕೊಡಿ ಎಂದು ಎಸ್‍ಬಿಐ ಗೆ ಬರೆದಿರುವುದು ನಿಜ ತಾನೆ?

೬. ಮೋದಿ ಸರ್ಕಾರದ ಅವಧಿಯಲ್ಲಿ ಜಗತ್ತಿನ ಯಾವ ದೇಶದಲ್ಲೂ ಇಲ್ಲದ ಪ್ರಮಾಣದಲ್ಲಿ ಕಾರ್ಪೊರೇಟ್ ಕರಪ್ಷನ್ ನಡೆಯುತ್ತಿದೆ ಎಂದು ನಾನು ಹೇಳುತ್ತಲೆ ಬಂದಿದ್ದೇನೆ, ನನ್ನ ಮಾತುಗಳು ನಿಮ್ಮ ಕಿವಿಗೂ ಬಿದ್ದಿರಬೇಕು. ಆದರೂ ನೀವು ಅದನ್ನು ತಡೆಯಲು ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ನಿಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ಭಾರತವು ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ. ಅದಾನಿ ದೇಶದ ಗೌರವನ್ನು ಬೀದಿಗೆ ಎಳೆದು ತಂದಿದ್ದಾನೆ. ಈಗ ಅದಾನಿ ಎಂದರೆ ಭಾರತ, ಭಾರತ ಎಂದರೆ ಅದಾನಿ ಎಂದು ಹೇಳುವ ಮಟ್ಟಕ್ಕೆ ಬರಲಾಗಿದೆ, ಇದು ನಾಚಿಕೆಗೇಡಿನ ಸಂಗತಿಯಲ್ಲವೆ?

೭. ಭಾರತದ ಬ್ಯಾಂಕುಗಳು, ಭಾರತದ ಪ್ರತಿಷ್ಠಿತವಾದ ಬಡವರು ಮತ್ತು ಮಧ್ಯಮ ವರ್ಗದ ಜನರ ಆಶಾಕಿರಣವಾದ ಎಲ್‍ಐಸಿ ಸೇರಿದಂತೆ ಎಲ್ಲ ಹಣಕಾಸು ಸಂಸ್ಥೆಗಳು ಸುಮಾರು 2.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಅದಾನಿಗೆ ಕೊಟ್ಟಿವೆ. ಈಗ ಆತನ ದುಷ್ಕೃತ್ಯದಿಂದಾಗಿ ಈ ಹಣಕಾಸು ಸಂಸ್ಥೆಗಳು ದಿವಾಳಿಯಾಗುವ ಹಂತಕ್ಕೆ ಬರುತ್ತಿವೆ. ಇವು ದಿವಾಳಿಯಾದರೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನ್ಯಾಯವಾಗುತ್ತದೆ. ಇದರ ಹೊಣೆಯನ್ನು ನೀವು ಮತ್ತು ನಿಮ್ಮ ಸರ್ಕಾರವೆ ಹೊರಲೇಬೇಕಲ್ಲವೆ?

೮. ಅದಾನಿಯ 720000000000 ಕೋಟಿಗೂ (72 ಸಾವಿರ ಕೋಟಿ ರೂ.) ಹೆಚ್ಚಿನ ಸಾಲವನ್ನು 2017ರ ವೇಳೆಗೆ ಮನ್ನಾ ಮಾಡಲಾಗಿದೆ. ಇದು ಅನ್ಯಾಯದ ಕೃತ್ಯವೆಂದು ನಿಮಗೆ ಅನ್ನಿಸುತ್ತಿಲ್ಲವೆ?

೯. ಮನಮೋಹನ್‌ ಸಿಂಗ್‌ ಅವರು ಕೋಟ್ಯಾಂತರ ರೈತರ 70 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಮನ್ನಾ ಮಾಡಿದಾಗ ನಿಮ್ಮನ್ನೂ ಸೇರಿದಂತೆ ನಿಮ್ಮ ಬಿಜೆಪಿ ಪಕ್ಷದವರು ಅಂದಿನ ಯುಪಿಎ ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದು ತಪ್ಪು ಎಂದು ಈಗಲಾದರೂ ಅನ್ನಿಸುತ್ತಿದೆಯೆ? ಅಥವಾ ಆತ್ಮಸಾಕ್ಷಿಯೆಂಬುದು ನಿಮ್ಮ ಪಕ್ಷದ ಜನರಿಗೆ ಸಂಪೂರ್ಣವಾಗಿ ಸತ್ತು ಹೋಗಿದೆಯೆ?

೧೦. ದೇಶದ್ರೋಹಿ ವ್ಯಾಪಾರಿ ಅದಾನಿಯ ವಿಮಾನಗಳನ್ನು ಬಳಸಿ ನೀವು ಚುನಾವಣಾ ರ‍್ಯಾಲಿಗಳನ್ನು ಮಾಡಿದಿರಿ, ಆ ಪಾಪದ ಕೊಳೆಯನ್ನು ಈಗ ಯಾವ ಗಂಗೆಯಲ್ಲಿ ತೊಳೆದುಕೊಂಡು ಪುನೀತರಾಗುತ್ತೀರಿ?

ಅದಾನಿಯ ಪಾಪವನ್ನು ನೀವು ಹೊರುವಿರಾ?

೧೧. ಅದಾನಿಗೆ ದೇಶದ ಬಹುಪಾಲು ಬಂದರುಗಳು, ವಿಮಾನ ನಿಲ್ದಾಣಗಳು, ಬಂದರುಗಳ ಹತ್ತಿರದ ಎಸ್‍ಇಜೆಡ್‍ಗಳನ್ನು ನೀಡಿದ್ದೀರಿ, ಆದರೆ ಗುಜರಾತಿನ ಮುಂದ್ರಾ ಬಂದರಿನಲ್ಲಿ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸೇರಿದಂತೆ ವಿದೇಶಿ ಡ್ರಗ್ಸ್ ಸಿಗುತ್ತಿದೆ. ಇಂದು ದೇಶದ ಯುವಜನರು ಮಾದಕ ವ್ಯಸನಗಳಿಗೆ ಬಲಿಯಾಗಿ ಲಕ್ಷಾಂತರ ಕುಟುಂಬಗಳ ಬದುಕು ಕತ್ತಲೆಯತ್ತ ಸಾಗುತ್ತಿದೆ, ತಂದೆ ತಾಯಿಗಳು ತಲೆಯ ಮೇಲೆ ಕೈಹೊತ್ತು ಕೂರುವಂತಾಗಿದೆ ಇದರ ಪಾಪವನ್ನು ನೀವು ಹೊರುತ್ತೀರೊ ಇಲ್ಲ ಅದಾನಿಯ ಮೇಲೆ ಹೊರಿಸುತ್ತೀರೊ?

೧೨. ಡ್ರಗ್ಸ್ ರಾಜಧಾನಿ ಅಫ್ಘನಿಸ್ತಾನವೆಂದು ಕೆಲವು ಮಾಧ್ಯಮಗಳು ಹೇಳುತ್ತಿವೆ. ಆದರೆ ಅಲ್ಲಿನ ತಾಲಿಬಾನ್ ಸರ್ಕಾರಕ್ಕೆ ದೇಶದಿಂದ ಹಣಕಾಸು ನೆರವು, ಧವಸ ಧಾನ್ಯ, ಔಷಧಗಳನ್ನು ತುಂಬಿ ಕಳಿಸುವುದರ ಜೊತೆಗೆ ಹತ್ತಾರು ಸಾವಿರ ಕೋಟಿ ನೆರವು ನೀಡುತ್ತಿದ್ದೀರಿ ಇದನ್ನು ಕೇವಲ ರಾಜತಾಂತ್ರಿಕ ಸಂಬಂಧಕ್ಕಾಗಿ ಕೊಡುತ್ತಿದ್ದೀರೊ? ಅದಾನಿ ಅಂಬಾನಿಗಳು ಸುಲಭವಾಗಿ ವ್ಯವಹಾರ ನಡೆಸಲಿ ಎಂದು ಕೊಡುತ್ತಿದ್ದೀರೊ ದೇಶದ ಜನರಿಗೆ ತಿಳಿಸಿ.

ಸುಳ್ಳಿನ ಫ್ಯಾಕ್ಟರಿಯಾದ ಬಜೆಟ್‌

೧೩. ಸುಳ್ಳಿನ ಫ್ಯಾಕ್ಟರಿಯಂತಾಗಿರುವ ನಿಮ್ಮ ಬಿಜೆಪಿ ಸರ್ಕಾರಗಳು ಈ ವರ್ಷದ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿ ಅನುದಾನ ಬರುತ್ತವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ, ಆದರೆ 2023ರ ಕಡೆಗೆ 4 ಲಕ್ಷ ಕೋಟಿ ರೂಪಾಯಿ ತೆರಿಗೆ, ಸೆಸ್ಸು, ಸರ್‍ಚಾರ್ಜುಗಳನ್ನು ಕರ್ನಾಟಕದಿಂದ ದೋಚಿಕೊಳ್ಳುತ್ತಿದ್ದೀರಿ. ಇದರಲ್ಲಿ ನಮಗೆ ಶೇ.42ರಷ್ಟು ಪಾಲು ಕೊಡಬೇಕು. ಹಾಗೆ ಕೊಟ್ಟರೆ ನಮಗೆ ನೀವು ನೀಡಬೇಕಾದ ಪಾಲು 1.70 ಲಕ್ಷ ಕೋಟಿ. ಆದರೆ ನೀವು ಈ ವರ್ಷ ಕೊಡುತ್ತೇವೆ ಎಂದು ಹೇಳುತ್ತಿರುವುದು ಕೇವಲ 37 ಸಾವಿರ ಕೋಟಿ ಮಾತ್ರ. 1.33 ಲಕ್ಷ ರೂಪಾಯಿಗಳನ್ನು ನಮಗೆ ಕೊಡದೆ ನೀವೆ ಕರ್ನಾಟಕದ ಜನರ ಋಣದಲ್ಲಿದ್ದೀರಿ. ಇದರ ಜೊತೆಗೆ 2.30 ಲಕ್ಷ ಕೋಟಿಯನ್ನು ನೀವೆ ಉಳಿಸಿಕೊಳ್ಳುತ್ತಿದ್ದೀರಿ. ಎರಡೂ ಸೇರಿದರೆ 3.63 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ವರ್ಷವೊಂದಕ್ಕೆ ಇಷ್ಟು ಮೊತ್ತವನ್ನು ಕೇಂದ್ರ ಸರ್ಕಾರವೆ ಉಳಿಸಿಕೊಂಡು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದು ನ್ಯಾಯವೆ?

೧೪. 3.63 ಲಕ್ಷ ಕೋಟಿ ರೂಗಳಷ್ಟು ಕರ್ನಾಟಕದ ಹಣವನ್ನು ತಮ್ಮ ಬಳಿಯೆ ಉಳಿಸಿಕೊಂಡು ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ, ರೈಲ್ವೆಗೆ 7 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳುವುದು ರಾಜ್ಯದ 7 ಕೋಟಿ ಜನರಿಗೆ ಮಾಡುವ ಅವಮಾನ ಎಂದು ನಿಮ್ಮ ಸರ್ಕಾರಕ್ಕೆ ಅನ್ನಿಸುತ್ತಿಲ್ಲವೆ? ಯಾಕೆಂದರೆ ಹತ್ತಾರು ರೈಲ್ವೆ ಯೋಜನೆಗಳು ಹಣ ಇಲ್ಲದೆ ನೆನೆಗುದಿಗೆ ಬಿದ್ದಿವೆ. ತುಮಕೂರು ರಾಯದುರ್ಗ ಮತ್ತು ದಾವಣೆಗೆರೆ ಯೋಜನೆಗಳಿಗೇನೆ ನೀವು ಕೊಡಬೇಕಾದಷ್ಟು ಹಣ ಕೊಟ್ಟಿಲ್ಲ.

೧೫. ಕರ್ನಾಟಕಕ್ಕೆ ನೀವು ಕೊಡುತ್ತಿರುವ ಕಿರುಕುಳಗಳ ನಡುವೆಯೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಆದೇಶ ಹೊರಡಿಸಿದ್ದೀರಿ. ಇದು ಕರ್ನಾಟಕಕ್ಕೆ ನೀವು ಕೊಡುತ್ತಿರುವ ಕೊಡುಗೆಯೆಂದು ಜನರು ಮೋದಿ ಮೋದಿ ಎಂದು ಸ್ವಾಗತಿಸಿ ಕೂಗಬೇಕೆ?

೧೬. ಎಚ್‍ಎಎಲ್‍ಗೆ ಕೊಡಬೇಕಾದ ಸಾವಿರಾರು ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಯಾವ ಅನುಭವವೂ ಇಲ್ಲದ ಅನಿಲ್ ಅಂಬಾನಿಗೆ ಕೊಟ್ಟು ರಾಫೆಲ್ ಹಗರಣಕ್ಕೆ ಸಾಕ್ಷಿಯಾದಿರಿ, ಇದು ಬೆಂಗಳೂರಿಗೆ ನೀವು ಕೊಟ್ಟ ಕೊಡುಗೆ ಎಂದು ಜನರು ಭಾವಿಸಬೇಕೆ?

೧೭. ತುಮಕೂರು ಜಿಲ್ಲೆ ಅಡಿಕೆ, ತೆಂಗು ಬೆಳೆಯುವ ಪ್ರಮುಖ ಜಿಲ್ಲೆ. ಕೊಬ್ಬರಿಯ ಬೆಲೆ ಬಿದ್ದು ಹೋಗಿದೆ, ಆದರೆ ನಿಮ್ಮ ಸರ್ಕಾರ ಮೌನವಾಗಿದೆ ಯಾಕೆ?

೧೮. ಅಡಿಕೆ ಬೆಲೆ ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ, ಆದರೂ ಭೂತಾನ್‍ನಿಂದ ಅಡಿಕೆ ಆಮದು ಮಾಡಿಕೊಂಡು ನಮ್ಮ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದ್ದೀರಿ ಇದು ನ್ಯಾಯವೆ?

೧೯. ಸಿರಿಧಾನ್ಯಗಳನ್ನು ಅತಿ ಹೆಚ್ಚು ಬೆಳೆಯುವ ಜಿಲ್ಲೆ ಕೂಡ ತುಮಕೂರೇ ಆಗಿದೆ. ಆದರೆ ನಿಮ್ಮ ಬಿಜೆಪಿ ಸರ್ಕಾರ ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ಕೊಡುತ್ತೇವೆ ಎಂದು ಹೇಳಿ 6 ಸಾವಿರಕ್ಕೆ ಇಳಿಸಿದ್ದಾರೆ. ಅದೂ ಕೂಡ ಸಮರ್ಪಕವಾಗಿ ಸಿಗುತ್ತಿಲ್ಲ. ಒಂದು ಎಕರೆಯಲ್ಲಿ 3-4 ಕ್ವಿಂಟಾಲ್ ಕೂಡ ಸಿರಿಧಾನ್ಯ ಬೆಳೆಯುವುದಿಲ್ಲ. ನೀವು ವಿದೇಶಗಳ ಮುಂದೆ ಸಿರಿಧಾನ್ಯಗಳ ಬಗ್ಗೆ ಭಾಷಣ ಬಿಗಿಯುವುದಕ್ಕೆ ನಮ್ಮ ರೈತರು ತಮ್ಮ ಬದುಕನ್ನು ಬರ್ಬಾದು ಮಾಡಿಕೊಂಡು ಬೆಳೆದುಕೊಡಬೇಕೆ? ರೈತರಿಗೆ ಏನು ಮಾಡಿದ್ದೀರಿ ಎಂದು ಹೇಳಿ ಮೊದಲು.

ಡೀಸೆಲ್‌ ಬೆಲೆ ೧೦೦ ರೂ. ದಾಟಿಸಿದ್ದೇ ಸಾಧನೆ

೨೦. ಮನಮೋಹನ್ ಸಿಂಗರ ಕಾಲದಲ್ಲಿ 47 ರೂಪಾಯಿ ಇದ್ದ ಡೀಸೆಲ್ ಬೆಲೆಯನ್ನು ಲೀಟರಿಗೆ 100 ರೂ ದಾಟಿಸಿದರಿ. ಈಗ 90 ರೂ ಇದೆ. ಡೀಸೆಲ್ ಬೆಲೆ ಹೆಚ್ಚಿಸಿದ್ದರಿಂದ ಜಾನುವಾರುಗಳಿಗೆ ಬಳಸುವ ಹಿಂಡಿ, ಬೂಸಾ, ಫೀಡ್ ಬೆಲೆಗಳು ಜಾಸ್ತಿಯಾಗಿವೆ. ಕೇವಲ 5 ವರ್ಷಗಳ ಹಿಂದೆ 300-400 ರೂ ಇದ್ದ ಹಿಂಡಿ, ಬೂಸ ಈಗ 45 ಕೆಜಿ ಚೀಲಕ್ಕೆ 1400 ರುಪಾಯಿವರೆಗೆ ರೈತರು ಪಾವತಿಸಬೇಕಾಗಿದೆ. ಆದರೆ ಹಾಲಿನ ಬೆಲೆ ಹಿಂದೆ 32 ರೂ ಸಿಗುತ್ತಿತ್ತು ಈಗ 36 ರೂ ಸಿಗುತ್ತಿದೆ. ನಿಮ್ಮ ತೆರಿಗೆ ದಾಹಕ್ಕೆ ಜನ ಕಂಗೆಟ್ಟು ಹೋಗಿದ್ದಾರೆ, ರಾಜ್ಯದ ಜನರ ಆದಾಯ ಹೆಚ್ಚುತ್ತಿಲ್ಲ, ಬಡವರಾಗುತ್ತಿದ್ದಾರೆ ಈ ಅನ್ಯಾಯಕ್ಕೆ ನೀವೆ ಹೊಣೆಯಲ್ಲವೆ ಮೋದೀಜಿ?

೨೧. ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ನಿಮ್ಮ ಬಿಜೆಪಿ ಸರ್ಕಾರವು 7200 ಕೋಟಿ ರೂ. ಖರ್ಚು ಮಾಡಿದೆಯಂತೆ. ಒಂದು ಗುಂಡಿ ಮುಚ್ಚಲು 9.2 ಲಕ್ಷ ರೂಪಾಯಿ ಖರ್ಚಾಗಿದೆಯಂತೆ, ಈ ಹಗಲು ದರೋಡೆಯ ಕುರಿತು ತನಿಖೆ ಮಾಡಿಸುತ್ತೀರಾ? ಅಥವಾ ‘ನಾ ಖಾವೂಂಗಾ ನಾ ಖಾನೆದೂಂಗ’ಎಂದು ಪುಕ್ಕಟ್ಟೆ ಮಂತ್ರ ಹೇಳಿ ಹಾಗೆ ಪುರ್ರೆಂದು ಹಾರಿ ಹೋಗುತ್ತೀರಾ?

ʻʻಕೇಳಬೇಕಾದ ಪ್ರಶ್ನೆಗಳು ನನ್ನ ಬಳಿ ಸಾವಿರ ಇವೆ. ನೀವು ಮತ್ತೆ ಮತ್ತೆ ಬರುತ್ತೀರಿ ಎಂಬುದು ನನಗೆ ಗೊತ್ತು. ಆದ್ದರಿಂದ ಒಂದೇ ದಿನ ನಿಮಗೆ ಹೆಚ್ಚು ತ್ರಾಸ ಕೊಡುವುದಿಲ್ಲ. ಇಂದು ಇಷ್ಟು ಪ್ರಶ್ನೆಗಳಿಗೆ ಉತ್ತರ ಹೇಳಿ ಸಾಕು. ನೀವು ಉತ್ತರ ಹೇಳದಿದ್ದರೆ ಕರ್ನಾಟಕಕ್ಕೆ ನೀವು ಮಾಡಿರುವ ದ್ರೋಹವನ್ನು ಒಪ್ಪಿಕೊಂಡಿದ್ದೀರಿ ಎಂದು ನನ್ನ ರಾಜ್ಯದ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಜನರು ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನಿಮಗೆ ಕೊಡುತ್ತಾರೆʼʼ ಎಂದಿದ್ದಾರೆ ಸಿದ್ದರಾಮಯ್ಯ.

ಇದನ್ನೂ ಓದಿ : PM Modi in Karnataka : ರಾಜ್ಯದ ವರ್ಗಾವಣೆ ದಂಧೆ ಬಗ್ಗೆ ಮಾತಾಡಲ್ಲ; ಇದು ಮೋದಿ ಗ್ಯಾರಂಟಿ ಎಂದು ಗೇಲಿ ಮಾಡಿದ ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Road Accident : ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಪಕ್ಕದ ಹೆದ್ದಾರಿಗೆ ಹಾರಿದೆ. ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Road Accident
Koo

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಬಳಿ ಭಾರೀ ದುರಂತವೊಂದು (Road Accident) ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿತ್ತು. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಹೆದ್ದಾರಿಯ ತಡೆಗೋಡೆಯನ್ನು ಹಾರಿ ಪಕ್ಕದ ರಸ್ತೆಗೆ ಬಂದು ನಿಂತಿತ್ತು. ಇದು 40 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ವೇಳೆ ಬಸ್‌ ಏನಾದರೂ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೆ, ಪ್ರಯಾಣಿಕರ ಜೀವಕ್ಕೆ ಕುತ್ತು ಬರುತ್ತಿತ್ತು. ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳಬೇಕಿತ್ತು.

Road accidents in Bengaluru  Vijayanagar

ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಆರು ಮಂದಿಗೆ ಗಾಯವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ರಸ್ತೆಗೆ ಹಾರಿದ್ದ ಬಸ್‌ ಅನ್ನು ತೆರವುಗೊಳಿಸುತ್ತಿದ್ದಾರೆ.

Road accidents in Bengaluru  Vijayanagar

ಇದನ್ನೂ ಓದಿ: Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

HD Deve Gowda: ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

PM Modi wishes HD Deve Gowda on his 93rd birthday Jackfruit gift to former PM
Koo

ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD DeveGowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ದೇವೇಗೌಡರು ಅದರ ಪರಿಮಳವನ್ನು ಆಸ್ವಾದಿಸಿ ಖುಷಿಪಟ್ಟರು.

PM Modi wishes HD Deve Gowda on his 93rd birthday Jackfruit gift to former PM

ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಹಲಸಿನ ಹಣ್ಣು ಕೊಟ್ಟ ಕಾರ್ಯಕರ್ತ

ಇನ್ನು ಕಟ್ಟಾ ಅಭಿಮಾನಿಯೊಬ್ಬ ದೇವೇಗೌಡರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ, ಖುಷಿ ಖುಷಿಯಿಂದ ದೇವೇಗೌಡ ಅವರು ಸ್ವೀಕರಿಸಿದರು. ಅಲ್ಲದೆ, ಆ ಹಲಸಿನ ಹಣ್ಣಿನ ಬಳಿಗೆ ತಮ್ಮ ಮೂಗನ್ನು ಇಟ್ಟು ಅದರ ಪರಿಮಳವನ್ನು ಆಸ್ವಾದಿಸಿದರು. ಕಾರ್ಯಕರ್ತನ ಗಿಫ್ಟ್‌ ಬಗ್ಗೆ ಬಹಳವೇ ಖುಷಿಪಟ್ಟರು.

ಈ ಅವಮಾನದಿಂದ ಪಾರು ಮಾಡು: ದೇವೇಗೌಡರ ಮೌನ ಪ್ರಾರ್ಥನೆ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇಂದು ತಮ್ಮ ಹುಟ್ಟುಹಬ್ಬವನ್ನು ದೇವಾಲಯ ಭೇಟಿಯೊಂದಿಗೆ (Temple visit) ಸರಳವಾಗಿ ಆಚರಿಸಿಕೊಂಡಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.

ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್‌ ಶೇವ್‌ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.

ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.

ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ

“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.

ಕುಮಾರಸ್ವಾಮಿಗೆ ಹೋರಾಟದ ಛಲ ಇದೆ

ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.

“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.

“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

Continue Reading

ವಿಜಯಪುರ

Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

Robbery Case : ಮಿಡ್‌ನೈಟ್‌ನಲ್ಲಿ ಬೊಲೆರೋದಲ್ಲಿ ಬಂದ‌ ದುಷ್ಕರ್ಮಿಗಳು ಕ್ಯಾಂಟರ್‌ ವಾಹನಕ್ಕೆ ಅಡ್ಡಗಟ್ಟಿ, ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ 32 ಲಕ್ಷ ರೂ. ಕದ್ದು ಪರಾರಿ ಆಗಿದ್ದಾರೆ.

VISTARANEWS.COM


on

By

Robbery case
Koo

ವಿಜಯಪುರ: ಕ್ಯಾಂಟರ್ ವಾಹನಕ್ಕೆ ಅಡ್ಡಗಟ್ಟಿದ ದುಷ್ಕರ್ಮಿಗಳು 32 ಲಕ್ಷ ನಗದು ದರೋಡೆ ಮಾಡಿ (Robbery Case) ಪರಾರಿ ಆಗಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ಶುಕ್ರವಾರ (ಮೇ 17) ತಡರಾತ್ರಿ ದರೋಡೆ ನಡೆದಿದೆ. ಹತ್ತಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ದರೋಡೆ ನಡೆದಿದೆ.

ಕಲಬುರಗಿ ಜಿಲ್ಲೆ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವವರ ಹಣವನ್ನು ದರೋಡೆ ಮಾಡಿದ್ದಾರೆ. ಚಂದ್ರಕಾಂತ ಅವರು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರುವ ಕಾರ್ಖಾನೆಗೆ ಹತ್ತಿ ಮಾರಾಟ ಮಾಡಿ 32 ಲಕ್ಷ ರೂ. ನಗದು ಜತೆಗೆ ವಾಪಸ್ ಜೀವರ್ಗಿಗೆ ತೆರಳುತ್ತಿದ್ದರು.

ಇದನ್ನೂ ಓದಿ: Accident Case : ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರ

ಕೊಲ್ಹಾರ ಪಟ್ಟಣದ ಬಳಿ ಬರುವಾಗ ಬುಲೆರೋ ವಾಹನದಿಂದ ಬಂದ ದರೋಡೆಕೋರರು ಕ್ಯಾಂಟರ್‌ ವಾಹನಕ್ಕೆ ಅಡ್ಡಗಟ್ಟಿದ್ದಾರೆ. ನಂತರ ಏಕಾಏಕಿ ಕ್ಯಾಂಟರ್‌ ಗಾಜಿಗೆ ಕಲ್ಲು ಎಸೆದು, ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಂಟರ್‌ನಲ್ಲಿಟ್ಟಿದ್ದ 32 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿ ಆಗಿದ್ದಾರೆ.

ದರೋಡೆಕೋರರಿಂದ ಹಲ್ಲೆಗೀಡಾದ ವ್ಯಾಪಾರಿ ಚಂದ್ರಕಾಂತ ಅವರ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಅವರನ್ನು ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಮುಂದಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: ಬಂಗಾರದ ದರಗಳಲ್ಲಿ ಭಾರಿ ಏರಿಕೆ; ಇಂದು ಕೊಳ್ಳಲು ಮುಂದಾಗುತ್ತೀರಾ? ಗಮನಿಸಿ

Gold Rate Today: ಅಕ್ಷಯ ತದಿಗೆಯ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ದಿನೇ ದಿನೆ ಏರಿಳಿಕೆ ಸಾಮಾನ್ಯವಾಗಿದೆ. ನಿನ್ನೆ ದರ ಇಳಿಕೆಯಾಗಿತ್ತು. ಇಂದು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ.

VISTARANEWS.COM


on

gold rate today aditi
Koo

ಬೆಂಗಳೂರು: ಅಕ್ಷಯ ತದಿಗೆಯ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ದಿನೇ ದಿನೆ ಏರಿಳಿಕೆ ಸಾಮಾನ್ಯವಾಗಿದೆ. ನಿನ್ನೆ ದರ ಇಳಿಕೆಯಾಗಿತ್ತು. ಇಂದು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹80 ಹಾಗೂ ₹87 ಏರಿಕೆಯಾಗಿವೆ. ನಿನ್ನೆ ಚಿನ್ನದ ಬೆಲೆ ಗ್ರಾಂಗೆ 25 ರೂಪಾಯಿಗಳಷ್ಟು ಇಳಿಕೆಯಾಗಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,840ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,720 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹68,400 ಮತ್ತು ₹6,84,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,462 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,696 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,620 ಮತ್ತು ₹7,46,200 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹89, ಎಂಟು ಗ್ರಾಂ ₹712 ಮತ್ತು 10 ಗ್ರಾಂ ₹890ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,900 ಮತ್ತು 1 ಕಿಲೋಗ್ರಾಂಗೆ ₹89,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,55074,770
ಮುಂಬಯಿ68,40074,620
ಬೆಂಗಳೂರು68,40074,620
ಚೆನ್ನೈ68,50074,730

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Continue Reading
Advertisement
Road Accident
ಬೆಂಗಳೂರು ಗ್ರಾಮಾಂತರ19 mins ago

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Hyderabadi Biryani
ಪ್ರಮುಖ ಸುದ್ದಿ32 mins ago

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Job Alert
ಉದ್ಯೋಗ37 mins ago

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Sangeetha Sringeri Wore Lioness Logo On Her Belt
ಬಿಗ್ ಬಾಸ್39 mins ago

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

swati maliwal bibhav kumar
ಪ್ರಮುಖ ಸುದ್ದಿ53 mins ago

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

PM Modi wishes HD Deve Gowda on his 93rd birthday Jackfruit gift to former PM
ರಾಜಕೀಯ53 mins ago

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

Virat kohli
ಕ್ರೀಡೆ1 hour ago

Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

Robbery case
ವಿಜಯಪುರ1 hour ago

Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

Nitin Gadkari
Lok Sabha Election 20241 hour ago

Nitin Gadkari: ಯಾವ ಸರ್ಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

Mother Teresa Series life in the works
ಸಿನಿಮಾ1 hour ago

Mother Teresa Series: 30 ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ‘ಮದರ್ ಥೆರೆಸಾʼ ಸಿರೀಸ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ18 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌