Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ? - Vistara News

Latest

Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ?

ಪ್ರೇಮಿಗಳ ದಿನದ (Valentine’s Week) ವಿಶೇಷತೆಯೇನು? ಅದರ ಹಿಂದಿನ ಇತಿಹಾಸವೇನು ಎಂದು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರೇಮಿಗಳ ವಾರ (Valentine’s Week) ಶುರುವಾಗಿಯೇಬಿಟ್ಟಿದೆ. ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರೊಂದಿಗೆ ಈ ವಾರವನ್ನು ಆಚರಿಸಲು ಆರಂಭಿಸಿದ್ದಾರೆ. ಈ ದಿನ ಶುರುವಾಗಿದ್ದಾದರೂ ಹೇಗೆ? ಯಾರಿಂದಾಗಿ ಮತ್ತು ಏಕೆ ಎನ್ನುವ ಬಗ್ಗೆ ನಿಮಗೆ ಗೊತ್ತಿದೆಯೇ? ಪ್ರೀತಿಯ ದಿನದ ಹೊಸ್ತಿಲಲ್ಲಿ ಇರುವಾಗ ಆ ದಿನದ ಮಹತ್ವವನ್ನೂ ತಿಳಿದು ಬರೋಣ ಬನ್ನಿ.

ಇದನ್ನೂ ಓದಿ: Valentine’s Week 2023: ಇಂದಿನಿಂದ ಪ್ರತಿದಿನವೂ ಹಬ್ಬ: ಪ್ರೇಮಿಗಳ ಈ ವಾರವಿಡೀ ಪ್ರೀತಿ ಮಾಡಿ!
ಈ ಪ್ರೇಮಿಗಳ ದಿನ ಆರಂಭವಾಗಿದ್ದು ವ್ಯಾಲೆಂಟೈನ್‌ ಹೆಸರಿನ ಸಂತನೊಬ್ಬನಿಂದ. ರೋಮ್‌ ಸಾಮ್ರಾಜ್ಯದಲ್ಲಿದ್ದ ಆ ಸಂತನ ಸಾವಿನ ದಿನವನ್ನೇ ಇಂದಿಗೂ ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್‌ ಡೇ ಆಗಿ ಆಚರಿಸಲಾಗುತ್ತಿದೆ.
ಕ್ರಿ.ಶ.270ರ ಕಾಲದಲ್ಲಿ ರೋಮ್ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್‌ ಹೆಸರಿನ ಸಂತನಿದ್ದ. ಆಗ ಎರಡನೇ ಕ್ಲಾಡಿಯಸ್‌ ಹೆಸರಿನ ರಾಜನ ಆಳ್ವಿಕೆಯಿತ್ತು. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಆತ ಯಾವೊಬ್ಬ ಸೈನಿಕನಿಗೂ ಮದುವೆ ಆಗುವುದಕ್ಕೆ ಬಿಡುತ್ತಿರಲಿಲ್ಲ. ಯುವಕರು ಮದುವೆಯಾಗದೆ ಒಬ್ಬಂಟಿಯಾಗಿಯೇ ಇದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಆಸೆ ಅವನದ್ದಾಗಿತ್ತು. ಇದರಿಂದಾಗಿ ಅನೇಕ ಸೈನಿಕರು ತಮ್ಮ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿತ್ತು.

love letter


ರಾಜನ ಈ ನಿರ್ಧಾರದ ಬಗ್ಗೆ ಆತನ ಆಸ್ಥಾನದಲ್ಲಿದ್ದ ಸಂತ ವ್ಯಾಲೆಂಟೈನ್‌ಗೆ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿಯೇ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ವ್ಯಾಲೆಂಟೈನ್‌ ಮಾತ್ರ. ಅಷ್ಟದೇ ಅಲ್ಲದೆ ಆತ ರಾಜನಿಗೆ ತಿಳಿಯದಂತೆ ಸೈನಿಕರನ್ನು ಅವರ ಪ್ರೀತಿ ಪಾತ್ರರೊಂದಿಗೆ ಒಂದುಗೂಡಿಸುವ ಕೆಲಸವನ್ನೂ ಮಾಡುತ್ತಿದ್ದ. ಮದುವೆ ಆಗಬೇಕೆಂದುಕೊಂಡಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ.


ಈ ವಿಚಾರ ಒಂದ ದಿನ ರಾಜ ಕ್ಲಾಡಿಯಸ್‌ಗೆ ಗೊತ್ತಾಗುತ್ತದೆ. ರಾಜಧರ್ಮವನ್ನು ಮೀರಿದ ಕಾರಣಕ್ಕೆ ವ್ಯಾಲೆಂಟೈನ್‌ ಅನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಅದೇ ಹಿನ್ನೆಲೆಯಲ್ಲಿ ಆತನನ್ನು ಫೆ.14ರಂದು ಸೆರೆಮನೆಗೆ ಹಾಕಲಾಗುತ್ತದೆ.

ಇದನ್ನೂ ಓದಿ: Valentine’s Week : ಪ್ರೇಮಿಗಳ ಈ ವಾರದಲ್ಲಿ ನೀವು ಕೇಳಲೇಬೇಕಾದ ಲೇಟೆಸ್ಟ್‌ ಲವ್‌ ಸಾಂಗ್‌ಗಳಿವು…
ಸೆರೆಮನೆಯಲ್ಲಿದ್ದರೂ ಹೆದರದ ವ್ಯಾಲೆಂಟೈನ್‌ ಅನೇಕ ಪವಾಡಗಳನ್ನು ಮಾಡಲಾರಂಭಿಸುತ್ತಾರೆ. ಸೆರೆಮನೆಯ ಅಧಿಕಾರಿಯ ಮಗಳಿಗೆ ದೃಷ್ಟಿ ಇಲ್ಲದಿರುವುದು ತಿಳಿದ ಅವರು ಆಕೆಗೆ ದೃಷ್ಟಿ ಬರುವಂತೆ ಮಾಡುತ್ತಾರೆ. ಇನ್ನೂ ಅನೇಕ ಪವಾಡಗಳು ಅವರಿಂದ ಆಗುತ್ತದೆ. ತಮ್ಮನ್ನು ಮದುವೆ ಮಾಡಿಸಿ, ಒಂದು ಮಾಡಿದ ವ್ಯಕ್ತಿ ಜೈಲಿನಲ್ಲಿ ಇರುವ ವಿಚಾರ ತಿಳಿದು ಅನೇಕ ಪ್ರೇಮಿಗಳು ವ್ಯಾಲೆಂಟೈನ್ ಅನ್ನು ನೋಡಲು ಸೆರೆಮನೆಗೆ ಬರುತ್ತಾರೆ.


ಇದೆಲ್ಲದರ ನಡುವೆ ಜೈಲಧಿಕಾರಿಯ ಮಗಳೊಬ್ಬಳಿಗೆ ವ್ಯಾಲೆಂಟೈನ್‌ ಮೇಲೆ ಪ್ರೀತಿ ಹುಟ್ಟುತ್ತದೆ. ಜೈಲಿನಲ್ಲಿದ್ದ ಆತನನ್ನು ಆಗಾಗ ಬಂದು ಭೇಟಿ ಮಾಡಿ ಹೋಗುತ್ತಿರುತ್ತಾಳೆ. ಆದರೆ ವ್ಯಾಲೆಂಟೈನ್‌ ಮುಂದೊಂದು ದಿನ ಜೈಲರ್‌ ಮಗಳಿಗಾಗಿ ಪ್ರೀತಿಯ ಪತ್ರವನ್ನು ಬರೆದಿಟ್ಟು ಇಹಲೋಕ ತ್ಯಜಿಸುತ್ತಾರೆ. ಪ್ರೇಮಿಗಳನ್ನು ಒಂದು ಮಾಡುತ್ತಲೇ ಪ್ರಾಣ ಬಿಟ್ಟ ವ್ಯಾಲೆಂಟೈನ್‌ ನೆನಪಿಗಾಗಿ ಪ್ರತಿ ವರ್ಷ ಫೆ.14ರಂದು ವ್ಯಾಲೆಂಟೈನ್‌ ಡೇ ಆಚರಿಸಬೇಕು ಎಂದು ಅಂದಿನ ರೋಮ್‌ ಫಾದರ್‌ಗಳು ನಿರ್ಧರಿಸುತ್ತಾರೆ. ಅದರಂತೆಯೇ ಇಂದಿಗೂ ಆ ಆಚರಣೆ ಚಾಲ್ತಿಯಲ್ಲಿದೆ.

ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಪ್ರೀತಿಯನ್ನು ಹೇಳಿಕೊಳ್ಳುವ ಮೂಲಕ, ವಿಶೇಷವಾಗಿ ಆರೈಕೆ ಮಾಡುವ ಮೂಲಕ, ಭವಿಷ್ಯದಲ್ಲಿ ಜತೆಯಾಗಿರುವ ಪ್ರಮಾಣ ಮಾಡುವ ಮೂಲಕ ಪ್ರೀತಿಯನ್ನು ಆಚರಿಸುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

IPL 2024 : ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ 277 ಮತ್ತು 287 ರನ್ ಗಳಿಸಿದ್ದರೆ, ಈ ಋತುವಿನಲ್ಲಿ ಹಲವು ತಂಡಗಳು 250 ಸ್ಕೋರ್​ಗಳ ಗಾಡಿ ಮೀರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 8 ಬ್ಯಾಟರ್​ಗಳನ್ನು ಆಡುವ ಸ್ವಾತಂತ್ರ್ಯವನ್ನು ನೀಡಿದೆ. ಇದು ದೊಡ್ಡ ಮೊತ್ತಕ್ಕೆ ಸಹಾಯ ಮಾಡುತ್ತದೆ ಎಂಬುದು ಅಶ್ವಿನ್ ವಾದವಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಆಧುನಿಕ ಕ್ರಿಕೆಟ್​​ನಲ್ಲಿ ಪವರ್ ಹಿಟ್ಟಿಂಗ್ ಬ್ಯಾಟಿಂಗ್​ ಪ್ರವೃತ್ತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳ ಗಾತ್ರದ ಪ್ರಾಮುಖ್ಯತೆಯನ್ನು ಕುಗ್ಗಿಸುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ (Rajastan Royals) ಪರ ಆಡುವ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ. ಇದು ಆಟವನ್ನು ಹೆಚ್ಚು ಏಕಪಕ್ಷೀಯವಾಗಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿ ಐಪಿಎಲ್​ನಲ್ಲಿ (IPL 2024) ಬೃಹತ್​​ ಮೊತ್ತಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಉಲ್ಲೇಖಿಸಿದ್ದಾರೆ.

ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ 277 ಮತ್ತು 287 ರನ್ ಗಳಿಸಿದ್ದರೆ, ಈ ಋತುವಿನಲ್ಲಿ ಹಲವು ತಂಡಗಳು 250 ಸ್ಕೋರ್​ಗಳ ಗಾಡಿ ಮೀರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 8 ಬ್ಯಾಟರ್​ಗಳನ್ನು ಆಡುವ ಸ್ವಾತಂತ್ರ್ಯವನ್ನು ನೀಡಿದೆ. ಇದು ದೊಡ್ಡ ಮೊತ್ತಕ್ಕೆ ಸಹಾಯ ಮಾಡುತ್ತದೆ ಎಂಬುದು ಅಶ್ವಿನ್ ವಾದವಾಗಿದೆ.

ಹಿಂದಿನ ದಿನಗಳಲ್ಲಿ ನಿರ್ಮಿಸಲಾದ ಕ್ರೀಡಾಂಗಣಗಳು ಆಧುನಿಕ ದಿನಗಳಲ್ಲಿ ಪ್ರಸ್ತುತವಲ್ಲ. ಆಗ ಬಳಸಲಾಗುತ್ತಿದ್ದ ಬ್ಯಾಟ್ ಗಳನ್ನು ಈಗ ಉಪಯೋಗಿಸುತ್ತಿಲ್ಲ. ಪ್ರಾಯೋಜಕರ ಎಲ್ಇಡಿ ಬೋರ್ಡ್​​ಗಳನ್ನು ಬಳಸುವುದರಿಂದ, ಬೌಂಡರಿ ಲೈನ್​ 10 ಗಜಗಳಷ್ಟು ಗಾತ್ರ ಚಿಕ್ಕದಾಗಿದೆ. ಹೀಗಾಗಿ ಬೌಲರ್​ಗಳು ದಂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮಾನಸಿಕ ಉತ್ತೇಜನದ ಅಗತ್ಯವಿದೆ ಎಂದು ಆರ್​ಆರ್​ ಪ್ರಚಾರ ಕಾರ್ಯಕ್ರಮದಲ್ಲಿ ಅಶ್ವಿನ್ ಹೇಳಿದರು.

ಪ್ರತಿಭಾವಂತ ಬೌಲರ್ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಾನೆ. ತನ್ನ ಆವಿಷ್ಕಾರಗಳೊಂದಿಗೆ ಮೈದಾನದ ಉಳಿದ ಭಾಗಗಳಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾನೆ ಎಂದು ಅಶ್ವಿನ್ ಹೇಳಿದ್ದಾರೆ. ಇದೇ ವೇಳೆ ಅವರು ಚೆಂಡನ್ನು ಹೊಡೆಯುವ ಬ್ಯಾಟರ್​ಗಳ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್​​ ಬೌಲಿಂಗ್ ದಾಳಿಯು ಇತರ ಕೆಲವು ತಂಡಗಳಂತೆ ತೊಂದರೆ ಅನುಭವಿಸಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಬೌಲರ್​ಗಳು ರನ್ ಬಿಟ್ಟುಕೊಟ್ಟಿರುವ ಸರಾಸರಿ ರನ್​ ನೋಡಿದರೆ ಅಚ್ಚರಿಯಾಗುತ್ತದೆ. ಅದರಲ್ಲಿ ನಾವು (ರಾಜಸ್ಥಾನ್​ ಬೌಲರ್​ಗಳು) ಕಡಿಮೆ ರನ್ ನೀಡಿದ್ದೇವೆ. ಜೈಪುರದಲ್ಲಿ ನಡೆದ ಒಂದು ಪಂದ್ಯದಲ್ಲಿ ನಾವು 180 ರನ್ ಗಳನ್ನೂ ರಕ್ಷಿಸಿದ್ದೇವೆ. ಆದಾಗ್ಯೂ ದಿನದ ಕೊನೆಯಲ್ಲಿ, ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್ ಗಳನ್ನು ವೀಕ್ಷಿಸಲು ಬರುತ್ತಾರೆ ಎಂಬುದು ಸತ್ಯ. ಆದರೆ, ಬೌಲರ್​ಗಳ ದಂಡನೆ ನಿರಂತರ ಎಂದು ನುಡಿದಿದ್ದಾರೆ.

ಜೈಪುರದ ಮೈದಾನದ ಬೌಂಡರಿ ಲೈನ್​ ದೊಡ್ಡದಾಗಿದೆ. ಧ್ರುವ್ ಜುರೆಲ್ “ಇದು ತುಂಬಾ ದೊಡ್ಡದಾಗಿದೆ” ಎಂದು ಹೇಳಿದ್ದರು. ಅದರೆ, ನಾನು ಅದಾದರೂ ಇರಲಿ ಎಂದು ಹೇಳಿದೆ. ಈ ಕ್ರೀಡಾಂಗಣ ಸುತ್ತಲು ಬೈಸಿಕಲ್ ಬೇಕಾಗುತ್ತದೆ ಎಂದು ತಿಳಿದುಕೊಂಡೆ. ಅದರೆ, ಕೆಲವು ಕ್ರೀಡಾಂಗಣಗಳು ಚಿಕ್ಕದಾಗಿವೆ. ಚೂಯಿಂಗ್ ಗಮ್ ಜೋರಾಗಿ ಉಗಿದರೆ ಅದು ಬೌಂಡಿ ಲೈನ್​ಗಿಂತ ಆಚೆ ಹೋಗಿ ಬೀಳುತ್ತದೆ ಎಂದು ಹೇಳಿದರು.

Continue Reading

Latest

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Champions Trophy: ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 5) ನಡೆದ ಸಾಮಾನ್ಯ ಮಂಡಳಿ ಸಭೆಯ ಸಿದ್ಧತೆಯಲ್ಲಿ ಪಿಸಿಬಿ ಆರು ಪಿಎಸ್ಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಪ್ರಿಲ್ 7 ರಿಂದ ಮೇ 20 ರವರೆಗೆ ನಡೆಯಲಿದೆ.

VISTARANEWS.COM


on

Champions Trophy
Koo

ಬೆಂಗಳೂರು: ಪಾಕಿಸ್ತಾನ ಸೂಪರ್ ಲೀಗ್ (PSL) ನ 2025 ರ ಆವೃತ್ತಿಯನ್ನು ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಪ್ರಿಲ್ 7 ರಿಂದ ಮೇ 20 ರವರೆಗೆ ಸಮಯವನ್ನು ನಿಗದಿಪಡಿಸಿದೆ. ಇದರರ್ಥ ಮುಂದಿನ ವರ್ಷದ ಪಿಎಸ್ಎಲ್ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಋತುವಿನೊಂದಿಗೆ ಸಂಘರ್ಷ ಹೊಂದುತ್ತದೆ. ಫೆಬ್ರವರಿ-ಮಾರ್ಚ್​​ನಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಲಿರುವ 2025 ರ ಚಾಂಪಿಯನ್ಸ್ ಟ್ರೋಫಿಯಿಂದಾಗಿ (Champions Trophy) ಪಿಎಸ್ಎಲ್ 2025 ಅನ್ನು ವಿಳಂಬಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಬಿಸಿಸಿಐಗೆ ತೊಂದರೆ ನೀಡಲು ಪಾಕಿಸ್ತಾನ ಸಂಚು ರೂಪಿಸಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದು ಶತ್ರು ರಾಷ್ಟ್ರವನ್ನು ಕೆರಳಿಸಿದೆ. ಮತ್ತೊಂದು ಬಾರಿ ಆಗಲಿರುವ ಮುಜುಗರವನ್ನು ತಪ್ಪಿಸಿಕೊಳ್ಳುವುದಕ್ಕೆ ಭಾರತ ಮತ್ತು ಬಿಸಿಸಿಐಗೆ ಕಾಟ ಕೊಡಲು ಮುಂದಾಗಿದೆ. ಅರದಂತೆ ಫೆಬ್ರವರಿ ವೇಳೆಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಿ ಬಳಿಕ ಪಿಎಸ್​ಎಲ್​ ನಡೆಸಲು ಮುಂದಾಗಿದೆ. ಇದರಿಂದ ಭಾರತಕ್ಕೆ ಐಪಿಎಲ್​ ನಡೆಸಲು ತೊಂದರೆ ಆಗಲಿ ಮತ್ತು ವಿದೇಶಿ ಆಟಗಾರರ ಲಭ್ಯತೆ ಕಡಿಮೆಯಾಗಲಿ ಎಂದು ಯೋಜನೆ ರೂಪಿಸಿದೆ.

ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 5) ನಡೆದ ಸಾಮಾನ್ಯ ಮಂಡಳಿ ಸಭೆಯ ಸಿದ್ಧತೆಯಲ್ಲಿ ಪಿಸಿಬಿ ಆರು ಪಿಎಸ್ಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಪ್ರಿಲ್ 7 ರಿಂದ ಮೇ 20 ರವರೆಗೆ ನಡೆಯಲಿದೆ. ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಯೋಜಿಸಲಿದ್ದು, ಎರಡೂ ತಂಡಗಳು ತವರು ನೆಲದಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಆಡಲಿವೆ.

“ಪಿಸಿಬಿ ಹೆಚ್ಚುವರಿ ಸ್ಥಳಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತದೆ. ನಾಲ್ಕು ಪ್ಲೇಆಫ್​ಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ, “ಎಂದು ಪಿಸಿಬಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

ವಿದೇಶಿ ಆಟಗಾರರಿಗೆ ಸಮಸ್ಯೆ

2025 ರಲ್ಲಿ ಐಪಿಎಲ್ ಮತ್ತು ಪಿಎಸ್ಎಲ್ ದಿನಾಂಕಗಳ ನಡುವಿನ ಸಂಭಾವ್ಯ ಘರ್ಷಣೆಯು ಅನೇಕ ವಿದೇಶಿ ಆಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಏಕೆಂದರೆ ಅವರು ಎರಡು ಲೀಗ್​ಗಳ ನಡುವೆ ಒಂದನ್ನು ಮಾತ್ರ ಆರಿಸಬೇಕಾಗುತ್ತದೆ.

“ಎಂದಿನಂತೆ, ಪಾಕಿಸ್ತಾನ ಸೂಪರ್ ಲೀಗ್ 2025 ಗಾಗಿ ನಾವು ಫ್ರಾಂಚೈಸಿ ಮಾಲೀಕರೊಂದಿಗೆ ಬಹಳ ರೋಮಾಂಚಕಾರಿ ಮತ್ತು ಆಸಕ್ತಿದಾಯಕ ಸಭೆಯನ್ನು ನಡೆಸಿದ್ದೇವೆ. ಫ್ರಾಂಚೈಸಿ ಮಾಲೀಕರು 2025 ರ ಈವೆಂಟ್ ಮತ್ತು ಅದರಾಚೆಗೆ ಪಿಸಿಬಿ ಶಿಫಾರಸು ಮಾಡಿದ ವಿಂಡೋ ಮತ್ತು ಪ್ಲೇಆಫ್ ಸ್ಥಳಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

“ಈ ಸಭೆಯಲ್ಲಿ ಪಿಎಸ್ಎಲ್ 2025 ಮತ್ತು ಅದಕ್ಕಿಂತ ಹೆಚ್ಚಿನ ಸೂಕ್ತ ವಿಂಡೋಗೆ ಸಂಬಂಧಿಸಿದಂತೆ ಪಿಸಿಬಿ ಫ್ರಾಂಚೈಸಿ ಮಾಲೀಕರೊಂದಿಗೆ ಹೆಚ್ಚಿನ ಡೇಟಾ ಹಂಚಿಕೊಳ್ಳಲಿದೆ. ಇದರಿಂದ ಅವರು ತಮ್ಮೊಳಗೆ ಚರ್ಚಿಸಬಹುದು, ಹೆಚ್ಚು ಮಾಹಿತಿಯುತ ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ಸಾಮಾನ್ಯ ಮಂಡಳಿ ಸಭೆಯಲ್ಲಿ ತಮ್ಮ ಆಲೋಚನೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲಾಗಿದೆ ಎಂದು ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಹೇಳಿದ್ದಾರೆ.

ಪಾಕಿಸ್ತಾನದ ಅತಿದೊಡ್ಡ ಬ್ರಾಂಡ್​​ ಒಂದರ ಭವಿಷ್ಯಕ್ಕಾಗಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಫ್ರಾಂಚೈಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಹೇಳಿದ್ದಾರೆ.

Continue Reading

Latest

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

Titanic Movie: ಪ್ರಭಾವಶಾಲಿ ಬ್ರಿಟಿಷ್ ಕಿರು ಸರಣಿ ‘ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ಸ್ಟಫ್’ ನಲ್ಲಿ ಕಾರ್ಮಿಕ ವರ್ಗದ ನಾಯಕ ಯೋಸರ್ ಹ್ಯೂಸ್ ಅವರಂತಹ ಸಂಕೀರ್ಣ ಪಾತ್ರಗಳನ್ನು ಮಾಡಿರುವ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಬರ್ನಾರ್ಡ್​ ಹಿಲ್​ ಭಾರತೀಯರಿಗೆ ಟೈಟಾನಿಕ್​ ಸಿನಿಮಾ ಮೂಲಕ ಪರಿಚಿತ. ಅವರು ಆ ಸಿನಿಮಾದಲ್ಲಿ ಹಡಗಿನ ಕ್ಯಾಪ್ಟನ್​ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿದ್ದರು.

VISTARANEWS.COM


on

Bernard Hill
Koo

ಬೆಂಗಳೂರು: ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಜಿ ಮತ್ತು ವಿಶ್ವ ವಿಖ್ಯಾತಿ ಪಡೆದ ಹಾಲಿವುಡ್​ ಸಿನಿಮಾ ‘ಟೈಟಾನಿಕ್’ ನಲ್ಲಿ (Titanic Movie) ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್ (Bernard Hill) ನಿಧನ ಹೊಂದಿದ್ದಾರೆ. ಅವರಿಗೆ ತಮ್ಮ 79 ವರ್ಷ. ಸ್ಕಾಟ್ಲೆಂಟ್​ನ ಜನಪ್ರಿಯ ಹಾಡುಗಾರ್ತಿ ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಕಟಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಲ್ ಅವರು 1982ರಲ್ಲಿ ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಕುರಿತು ರಿಚರ್ಡ್​ ಅಟೆನ್​ಬರೊ ಅವರ ಗಾಂಧಿ ಸಿನಿಮಾದಲ್ಲೂ ನಟಿಸಿದ್ದರು.

“ಬರ್ನಾರ್ಡ್ ಹಿಲ್ ಅವರ ನಿಧನದಿಂದ ನಾನು ದುಃಖ ತೃಪ್ತನಾಗಿದ್ದೇನೆ. ನಾವು 1974-1975 ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿಜವಾಗಿಯೂ ಗಮನಾರ್ಹ ನಟ. ಅವರೊಂದಿಗೆ ಕೆಲಸ ಮಾಡುವುದು ಒಂದು ಗೌರವವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಹಿಲ್ ಅವರ ನಿಧನದ ನಂತರ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಿದ್ದಾರೆ. ಅನೇಕರು ಅವರ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಪ್ರಭಾವಶಾಲಿ ಬ್ರಿಟಿಷ್ ಕಿರು ಸರಣಿ ‘ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ಸ್ಟಫ್’ ನಲ್ಲಿ ಕಾರ್ಮಿಕ ವರ್ಗದ ನಾಯಕ ಯೋಸರ್ ಹ್ಯೂಸ್ ಅವರಂತಹ ಸಂಕೀರ್ಣ ಪಾತ್ರಗಳನ್ನು ಮಾಡಿರುವ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಬರ್ನಾರ್ಡ್​ ಹಿಲ್​ ಭಾರತೀಯರಿಗೆ ಟೈಟಾನಿಕ್​ ಸಿನಿಮಾ ಮೂಲಕ ಪರಿಚಿತ. ಅವರು ಆ ಸಿನಿಮಾದಲ್ಲಿ ಹಡಗಿನ ಕ್ಯಾಪ್ಟನ್​ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿದ್ದರು.

ವೈವಿಧ್ಯಮಯ ಪಾತ್ರ

ಹಿಲ್ ಅವರು ತಮ್ಮ ಐದು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರದಾದ್ಯಂತ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದರು. ‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್’ ಮತ್ತು ‘ಟೈಟಾನಿಕ್’ ಸಿನಿಮಾಗಳ ಮೂಲಕ ಅಕಾಡಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.

ಇದನ್ನೂ ಓದಿ: Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

ಬಿಬಿಸಿ ಟಿವಿ ಸರಣಿ “ವೂಲ್ಫ್ ಹಾಲ್” ನಲ್ಲಿ, ಬರ್ನಾರ್ಡ್ ಹಿಲ್ ಡ್ಯೂಕ್ ಆಫ್ ನಾರ್ಫೋಕ್ ಆಗಿ ಸ್ಮರಣೀಯ ಅಭಿನಯ ಮಾಡಿದ್ದರು. ಕಾರ್ಡಿನಲ್ ವೋಲ್ಸಿಯ ವಿರೋಧಿ ಮತ್ತು ಅನ್ನಿ ಬೊಲೆನ್ ಅವರ ಚಿಕ್ಕಪ್ಪನಾದ ಈ ಪಾತ್ರವು ಹಿಲ್ ಅವರ ಬಹುಮುಖ ನಟನಾ ಕೌಶಲ್ಯವನ್ನು ಪ್ರದರ್ಶಿಸಿತ್ತು.

ದಶಕಗಳ ಸುದೀರ್ಘ ವೃತ್ತಿಜೀವನದುದ್ದಕ್ಕೂ, ಹಿಲ್ ವಿವಿಧ ಪಾತ್ರಗಳನ್ನು ಮಾಡಿದ್ದರ. ಅದು ಶಾಶ್ವತ ಪರಿಣಾಮ ಬೀರಿತ್ತು. 1976 ರ ಗೌರವಾನ್ವಿತ ಬಿಬಿಸಿ ಸರಣಿ “ಐ, ಕ್ಲಾಡಿಯಸ್” ನಲ್ಲಿ ಕಾಣಿಸಿಕೊಂಡಾಗಿನಿಂದ ಹಿಡಿದು 1982 ರಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ “ಗಾಂಧಿ” ಯಲ್ಲಿನ ಅವರ ಸರ್ಜೆಂಟ್​ ಪುಟ್ನಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1989 ರಲ್ಲಿ “ಶೆರ್ಲಿ ವ್ಯಾಲೆಂಟೈನ್”, 2002 ರಲ್ಲಿ “ದಿ ಸ್ಕಾರ್ಪಿಯನ್ ಕಿಂಗ್” ಮತ್ತು 2008 ರ ಟಾಮ್ ಕ್ರೂಸ್ ಚಲನಚಿತ್ರ “ವಾಲ್ಕೈರಿ” ನಂತಹ ಸಿನಿಮಾಗಳಲ್ಲಿ ಪಾತ್ರ ವಹಿಸಿದ್ದರು.

Continue Reading

Latest

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

IPL 2024 : ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು.

VISTARANEWS.COM


on

IPL 2024
Koo

ಬೆಂಗಳೂರು: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) 53 ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 28 ರನ್​ಗಳ ಗೆಲವು ಸಾಧಿಸಿದೆ. ಅದರ ಹೊರತಾಗಿಯೂ ಸಿಎಸ್​ಕೆ ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿವೆ ಎಂಬುದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಗಾಯಕ್ವಾಡ್ ಟಾಸ್ ಸೋತರು. ಸಿಎಸ್​​ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡದ ಕಾರಣ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ರವೀಂದ್ರ ಜಡೇಜಾ (43) ಗರಿಷ್ಠ ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಮತ್ತು ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರು. ರವೀಂದ್ರ ಜಡೇಜಾ 20 ರನ್ ನೀಡಿ 3 ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್​ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು. ಸಿಮರ್ಜೀತ್ ಸಿಂಗ್ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ವೇಗಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರನ್ನು ಪರಿಚಯಿಸಲು ತಡ ಮಾಡಿಲ್ಲ ಎಂದ ಹೇಳಿದರ.

ತಂಡದಲ್ಲಿದೆ ಸಮಸ್ಯೆ

ನಮ್ಮ ತಂಡದಲ್ಲಿ ಸಮಸ್ಯೆಯಿದೆ. ಆಟಗಾರರು ಜ್ವರದಿಂದ ಬಳಲುತ್ತಿದ್ದಾರೆ. ಯಾರು ಆಡುತ್ತಿದ್ದಾರೆ ಅಥವಾ ಇಲ್ಲ ಎಂದು ಬೆಳಿಗ್ಗೆಯವರೆಗೆ ಖಚಿತವಾಗಿರಲಿಲ್ಲ. ಹೀಗಾಗಿ ಗೆಲುವು ನಿಜವಾಗಿಯೂ ಸಂತೋಷ ಕೊಟ್ಟಿದೆ ಎಂದು ಹೇಳದಿರು.

ಐದು ಸೋಲುಗಳನ್ನು ಕಂಡಿದ್ದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ದಾಖಲೆಯನ್ನು ಹೊಂದಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿರುವ ಸಿಎಸ್​ಕೆ ತಂಡ ಪಿಬಿಕೆಎಸ್ ವಿರುದ್ಧ 15-14 ಗೆಲುವಿನ ಅಂತರದ ಮುನ್ನಡೆ ಹೊಂದಿದೆ. ಆದಾಗ್ಯೂ, ಹಿಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅವರು ಆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

ಐಪಿಎಲ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸತತ ಐದು ಪಂದ್ಯಗಳಲ್ಲಿ ಸೋಲಿಸಿವೆ, ಮೊದಲ ತಂಡ ಮುಂಬೈ ಇಂಡಿಯನ್ಸ್ ಮತ್ತು ಇನ್ನೊಂದು ತಂಡ ಪಂಜಾಬ್ ಕಿಂಗ್ಸ್, ಇದು 2021 ರಲ್ಲಿ ತಮ್ಮ ಗೆಲುವಿನ ಸರಣಿಯನ್ನು ಪ್ರಾರಂಭಿಸಿತು ಮತ್ತು ಮೇ 1 ರ ಬುಧವಾರ ಚೆಪಾಕ್​​ನಲ್ಲಿ ಸಿಎಸ್ಕೆ ವಿರುದ್ಧ ಏಳು ವಿಕೆಟ್​​ಗಳಿಂದ ಸೋಲಿಸುವ ಮೂಲಕ ಮುಂಬೈ ದಾಖಲೆ ಸರಿಗಟ್ಟಿತು.

ಅಕ್ಟೋಬರ್ 7, 2021 ರಂದು, ಪಿಬಿಕೆಎಸ್ 42 ಎಸೆತಗಳು ಬಾಕಿ ಇರುವಾಗ 6 ವಿಕೆಟ್​​ಗಳಿಂದ ಗೆದ್ದಿತು ಮತ್ತು ಐಪಿಎಲ್ 2022ರಲ್ಲಿ ಕ್ರಮವಾಗಿ 54 ಮತ್ತು 11 ರನ್​ಗಳಿಂದ ಸತತ ಗೆಲುವುಗಳನ್ನು ದಾಖಲಿಸಿತು. ಐಪಿಎಲ್ 2023 ರಲ್ಲಿ, ಅವರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು ಏಪ್ರಿಲ್ 30 ರಂದು ನಡೆದ ಪಂದ್ಯವನ್ನು ಪಿಬಿಕೆಎಸ್ 4 ವಿಕೆಟ್​​ಗಳಿಂದ ಗೆದ್ದಿತು.

ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದ ಮುಕ್ತಾಯದ ನಂತರ, ಸಿಎಸ್​ಕೆ ಪರವಾಗಿ 16-14 ಅಂತರದ ದಾಖಲೆ ಹೊಂದಿದೆ.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ7 mins ago

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ; ಎಸ್‌ಐಟಿ ಎಚ್ಚರಿಕೆ

IPL 2024
ಕ್ರೀಡೆ11 mins ago

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

Narendra Modi
ದೇಶ16 mins ago

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Prajwal Revanna Case
ಕರ್ನಾಟಕ37 mins ago

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

IPL 2024
ಪ್ರಮುಖ ಸುದ್ದಿ51 mins ago

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

Farooq Abdullah
ದೇಶ60 mins ago

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

Champions Trophy
Latest1 hour ago

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Fire Accident
ಕರ್ನಾಟಕ2 hours ago

Fire Accident: ಬೆಂಗಳೂರಿನ ಎಂ.ಜಿ. ರಸ್ತೆಯ ಆಪ್ಟಿಕಲ್ಸ್‌ ಮಳಿಗೆಯಲ್ಲಿ ಬೆಂಕಿ ಅವಘಡ

IPL 2024
ಕ್ರೀಡೆ2 hours ago

IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

Al Jazeera
ಪ್ರಮುಖ ಸುದ್ದಿ3 hours ago

Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ6 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ6 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ19 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌