Israeli Missile Strikes: ಸಿರಿಯಾ ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ; 15 ಮಂದಿ ಸಾವು - Vistara News

ವಿದೇಶ

Israeli Missile Strikes: ಸಿರಿಯಾ ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ; 15 ಮಂದಿ ಸಾವು

ಇಸ್ರೇಲ್​-ಸಿರಿಯಾ ನಡುವೆ ಯುದ್ಧ ಸನ್ನಿವೇಶ ಉಂಟಾಗಿ ಹಲವು ವರ್ಷಗಳೇ ಕಳೆದು ಹೋಗಿವೆ. ಸಿರಿಯಾದಲ್ಲಿ ಇರಾನ್​ ತನ್ನ ಪ್ರಭಾವ ಹೆಚ್ಚಿಸಲು ಪ್ರಯತ್ನ ಮಾಡುತ್ತಿರುವುದನ್ನು ಸಹಿಸಲಾಗದ ಇಸ್ರೇಲ್​ ನಿರಂತರವಾಗಿ ದಾಳಿ ನಡೆಸುತ್ತಿದೆ.

VISTARANEWS.COM


on

Stop Air Strike, hostages will be killed, Hamas threatens Israel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿರಿಯಾದ ರಾಜಧಾನಿ ಡೆಮಾಸ್ಕಸ್​​ನಲ್ಲಿರುವ ಕಾಫರ್ ಸೌಸಾದ ವಸತಿ ಕಟ್ಟಡದ ಮೇಲೆ ಶನಿವಾರ ರಾತ್ರಿ ಇಸ್ರೇಲ್​ ಹಾರಿಸಿದ ಕ್ಷಿಪಣಿ ಅಪ್ಪಳಿಸಿದ (Israeli Missile Strikes) ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲಿ ಕಳೆದ 15ದಿನಗಳ ಹಿಂದಷ್ಟೇ 7.8 ಮ್ಯಾಗ್ನಿಟ್ಯೂಡ್ ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿ, ಸಾವಿರಾರು ಜನರು ಮೃತಪಟ್ಟಿದ್ದಾರೆ. ಭೂಕಂಪದ ಹಾನಿಯಿಂದ ಇನ್ನೂ ಸಿರಿಯಾ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದೆ. ಈ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಸಿರಿಯಾ ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 12.30ರ ಹೊತ್ತಿಗೆ ಡೆಮಾಸ್ಕಸ್​​ನಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿತು. ಡೆಮಾಸ್ಕಸ್​​ನ ಸುತ್ತಲೂ ಆಕಾಶದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗಿದೆ. ವಸತಿ ಕಟ್ಟಡವೊಂದಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ಸಿರಿಯಾ ವಾಯುಪಡೆ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿತ್ತು. ಡೆಮಾಸ್ಕಸ್​ನಲ್ಲಿರುವ ಇರಾನ್​​ನ ಸಾಂಸ್ಕೃತಿಕ ಕೇಂದ್ರದ ಸಮೀಪದ ಉನ್ನತ ಮಟ್ಟದ ಭದ್ರತಾ ಸಂಕೀರ್ಣದ ಹತ್ತಿರವೇ ಸ್ಫೋಟ ಉಂಟಾಗಿದೆ. ಇದೊಂದು ಜನನಿಬಿಡ ಪ್ರದೇಶವಾಗಿದೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ರಾಯಿಟರ್ಸ್ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: Shehbaz Sharif: ಆರ್ಥಿಕವಾಗಿ ಕಂಗೆಟ್ಟ ಪಾಕ್‌ನಲ್ಲೊಬ್ಬ ಮಹಾ ದಾನಿ, ಟರ್ಕಿ, ಸಿರಿಯಾಗೆ 248 ಕೋಟಿ ರೂ. ದಾನ, ಮೆಚ್ಚಿದ ಪ್ರಧಾನಿ

ಇಸ್ರೇಲ್​-ಸಿರಿಯಾ ನಡುವೆ ಯುದ್ಧ ಸನ್ನಿವೇಶ ಉಂಟಾಗಿ ಹಲವು ವರ್ಷಗಳೇ ಕಳೆದು ಹೋಗಿವೆ. ಸಿರಿಯಾದಲ್ಲಿ ಇರಾನ್​ ತನ್ನ ಪ್ರಭಾವ ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ. ಶಸ್ತ್ರಾಸ್ತ್ರಗಳನ್ನು ಪೂರೈಸುವುದಲ್ಲದೆ, ಇರಾನ್​ನ ಸೈನಿಕರನ್ನು ಅಲ್ಲಿ ನಿಯೋಜಿಸಲಾಗುತ್ತಿದೆ ಎಂದು ಇಸ್ರೇಲ್​ ಹೇಳಿದ್ದು, ತನ್ನ ಗಡಿಯಲ್ಲಿ ಇರಾನ್​ ಪ್ರಭಾವ ಬೀರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ. ಹಾಗೇ, ನಿರಂತರವಾಗಿ ಸಿರಿಯಾ ಮೇಲೆ ರಾಕೆಟ್​-ಕ್ಷಿಪಣಿ ದಾಳಿ ನಡೆಸುತ್ತಲೇ ಬರುತ್ತದೆ. ಇತ್ತೀಚೆಗೆ ಅಂದರೆ ಜನವರಿಯಲ್ಲಿ, 2022ರ ಫೆಬ್ರವರಿ, ಸೆಪ್ಟೆಂಬರ್​ ತಿಂಗಳಲ್ಲೂ ಸಹ ಇಸ್ರೇಲ್​ ದಾಳಿ ನಡೆಸಿತ್ತು. ಆದರೆ ಹೀಗೆ ವಸತಿ ಕಟ್ಟಡಗಳ ಮೇಲೆ ಇಸ್ರೇಲ್​ ದಾಳಿ ಅಪರೂಪ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

Kupwara Encounter: ಹಫೀಜ್‌ ಸಯೀದ್‌ ಆಪ್ತ, ಪಾಕಿಸ್ತಾನದ ಸೇನೆಯ ಸ್ಪೆಷಲ್‌ ಸರ್ವಿಸ್‌ ಗ್ರೂಪ್‌ (SSG) ಕಮಾಂಡೋ ಕೂಡ ಆಗಿರುವ ನೊಮಾನ್‌ ಜಿಯಾವುಲ್ಲಾನನ್ನು ಭಾರತದ ಯೋಧರು ಹತ್ಯೆಗೈದಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ನೊಮಾನ್‌ ಜಿಯಾವುಲ್ಲಾ ಪ್ರಯತ್ನಿಸುತ್ತಿದ್ದ. ಆಗ ಭಾರತದ ಯೋಧರು ಗುಂಡಿನ ದಾಳಿ ಮೂಲಕ ಈತನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Kupwara Encounter
Koo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರ ಚಟುವಟಿಕೆಗಳು ಹೆಜ್ಜಾಗಿದ್ದು, ಸೈನಿಕರು ಹಾಗೂ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಜಾಸ್ತಿಯಾಗಿವೆ. ಭಾರತೀಯ ಸೇನೆಯೂ ಉಗ್ರರನ್ನು ಮಟ್ಟ ಹಾಕಲು ಸತತ ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಇದರ ಮಧ್ಯೆಯೇ, ಭಾರತೀಯ ಸೇನೆಯು (Indian Army) ಭಾರಿ ಮುನ್ನಡೆ ಸಾಧಿಸಿದೆ. ಮುಂಬೈ ದಾಳಿ ರೂವಾರಿ, ಜಾಗತಿಕ ಉಗ್ರ ಹಫೀಜ್‌ ಸಯೀದ್‌ ಆಪ್ತನನ್ನು ಭಾರತದ ಯೋಧರು ಕುಪ್ವಾರದಲ್ಲಿ (Kupwara Encounter) ಹೊಡೆದುರುಳಿಸಿದ್ದಾರೆ.

ಹೌದು, ಕುಪ್ವಾರದಲ್ಲಿ ಹಫೀಜ್‌ ಸಯೀದ್‌ ಆಪ್ತ, ಪಾಕಿಸ್ತಾನದ ಸೇನೆಯ ಸ್ಪೆಷಲ್‌ ಸರ್ವಿಸ್‌ ಗ್ರೂಪ್‌ (SSG) ಕಮಾಂಡೋ ಕೂಡ ಆಗಿರುವ ನೊಮಾನ್‌ ಜಿಯಾವುಲ್ಲಾನನ್ನು ಭಾರತದ ಯೋಧರು ಹತ್ಯೆಗೈದಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದ ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ನೊಮಾನ್‌ ಜಿಯಾವುಲ್ಲಾ ಪ್ರಯತ್ನಿಸುತ್ತಿದ್ದ. ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತದ ಯೋಧರು, ನೊಮಾನ್‌ ಜಿಯಾವುಲ್ಲಾನನ್ನು ಎನ್‌ಕೌಂಟರ್‌ ಮಾಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಜುಲೈ 27ರಂದೇ ನೊಮಾನ್‌ ಜಿಯಾವುಲ್ಲಾ ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದ. ಅದೇ ದಿನ ಸೈನಿಕರು ಹತ್ಯೆ ಮಾಡಿದ್ದಾರೆ. ನೊಮಾನ್‌ ಜಿಯಾವುಲ್ಲಾನು ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೋಗಳು ಧರಿಸುವ ಜಾಕೆಟ್‌ಗಳನ್ನು ಧರಿಸಿ ತೆಗೆಸಿಕೊಂಡ ಫೋಟೊಗಳು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈತನು ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವುದಲ್ಲದೆ, ಎಸ್‌ಎಸ್‌ಜಿ ಕಮಾಂಡೋ ಕೂಡ ಆಗಿದ್ದ ಎಂದು ತಿಳಿದುಬಂದಿದೆ. ಈತನ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ನ 600 ಕಮಾಂಡೋಗಳ ಪ್ರವೇಶ?

ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. “ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್‌ ಆಫಿಸರ್‌ ಕಮಾಂಡಿಂಗ್‌ (ಜಿಒಸಿ) ಮೇಜರ್‌ ಜನರಲ್‌ ಆದಿಲ್‌ ರೆಹಮಾನಿಯು ಜಮ್ಮು ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾನೆ. ಪಾಕಿಸ್ತಾನದ 600 ಕಮಾಂಡೋಗಳು ಭಾರತಕ್ಕೆ ನುಗ್ಗಿದ್ದು, ಕುಪ್ವಾರದಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದಾಗಿ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಕಣಿವೆಯಲ್ಲಿ ಪಾಕ್‌ ಕಮಾಂಡೋನನ್ನು ಹೊಡೆದುರುಳಿಸಿರುವುದು ಹಲವು ಅನುಮಾನ ಮೂಡಲು ಕಾರಣವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Continue Reading

ಸಿನಿಮಾ

Movies on Israel: ಪ್ಯಾಲೇಸ್ತಿನ್‌ ಉಗ್ರರ ವಿರುದ್ಧ ಇಸ್ರೇಲ್ ಸೇಡು! ಮೈನವಿರೇಳಿಸುವ ಈ ಸಿನೆಮಾಗಳನ್ನು ನೋಡಲೇಬೇಕು!

Movies on Israel: ಯುದ್ಧದ ಸನ್ನಿವೇಶವನ್ನು ಹಲವಾರು ಚಲನಚಿತ್ರಗಳು ಸೆರೆ ಹಿಡಿದಿದ್ದರೂ ಅದು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಕಡಿಮೆ. ಆದರೆ ಈ ಐದು ಚಲನಚಿತ್ರಗಳು ಮಾತ್ರ ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷದಿಂದ (Israel-Palestine Conflict) ಆಗುತ್ತಿರುವ ಪ್ರಮುಖ ಸಮಸ್ಯೆಗಳು ಮತ್ತು ಸಂಘರ್ಷದ ಮಧ್ಯೆ ವಾಸಿಸುವ ಜನರ ಬದುಕನ್ನು ತೆರೆದಿಟ್ಟಿದೆ. ತಮ್ಮ ದೇಶದ ಮೇಲೆ, ತಮ್ಮ ಜನರ ಮೇಲೆ ದಾಳಿ ಮಾಡುವ ಪ್ಯಾಲೇಸ್ತಿನ್‌ ಉಗ್ರರ ಮೇಲೆ ಇಸ್ರೇಲ್‌ ಬೇಹುಗಾರಿಕೆ ಪಡೆ ಪ್ರತಿದಾಳಿ ನಡೆಸುವ, ಅವರನ್ನು ಹುಡುಕಿ ಹುಡುಕಿ ನಾಶಪಡಿಸುವ ದೃಶ್ಯಗಳು ರೋಚಕವಾಗಿವೆ.

VISTARANEWS.COM


on

By

Movies on Israel
Koo

ಇಸ್ರೇಲ್-ಪ್ಯಾಲೇಸ್ತಿನ್‌ ಸಂಘರ್ಷ (Israel-Palestine Conflict) ಕೆಲವು ತಿಂಗಳುಗಳಿಂದ (Movies on Israel) ಉಲ್ಬಣಗೊಂಡಿದೆ. ಇದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ವಸತಿ ಕಳೆದುಕೊಂಡು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಯುದ್ಧದ (war) ಸನ್ನಿವೇಶವನ್ನು ಹಲವಾರು ಚಲನಚಿತ್ರಗಳು (film) ಸೆರೆ ಹಿಡಿದಿದ್ದರೂ ಅದು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಕಡಿಮೆ. ಆದರೆ ಈ ಐದು ಚಲನಚಿತ್ರಗಳು ಮಾತ್ರ ಯುದ್ಧದ ಚಿತ್ರಣವನ್ನು ಮನಮುಟ್ಟುವಂತೆ ಕಟ್ಟಿ ಕೊಟ್ಟಿದೆ.

ಮ್ಯೂನಿಚ್

2005ರ ಈ ಚಲನಚಿತ್ರವು ಪಶ್ಚಿಮ ಜರ್ಮನಿಯ ಮ್ಯೂನಿಚ್‌ನಲ್ಲಿ 1972ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 11 ಇಸ್ರೇಲ್ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಅಪಹರಣ-ಹತ್ಯೆಯನ್ನು ಆಧರಿಸಿದೆ.


ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ಈ ಚಲನಚಿತ್ರವು ‘ಬ್ಲ್ಯಾಕ್ ಸೆಪ್ಟೆಂಬರ್’ ಎಂಬ ಪ್ಯಾಲೆಸ್ತೀನಿಯನ್ ಭಯೋತ್ಪಾದಕ ಸಂಘಟನೆ ನಡೆಸಿದ ಭೀಕರ ಹತ್ಯೆಯ ಅನಂತರದ ಪರಿಣಾಮಗಳನ್ನು ಬಿಂಬಿಸಿದೆ. ಸೇಡಿನ ಕಥೆಯನ್ನು ಆಧರಿಸಿರುವ ಈ ಚಿತ್ರವು ಮುಯ್ಯಿಗೆ ಮುಯ್ಯಿ ಎಂಬಂತೆ ‘ಕಣ್ಣಿಗೆ ಕಣ್ಣು’ ಎಂಬುದನ್ನು ಉಲ್ಲೇಖಿಸುತ್ತದೆ. ತನ್ನ ದೇಶದ ಕ್ರೀಡಾಪಟುಗಳ ಬರ್ಬರ ಹತ್ಯೆ ನಡೆಸಿದ ಉಗ್ರರನ್ನು ಇಸ್ರೇಲ್‌ ಬೇಹುಗಾರಿಕೆ ಪಡೆ ಹುಡುಕಿ ಹುಡುಕಿ ಕೊಲ್ಲುವ ಸನ್ನಿವೇಶಗಳು ರೋಮಾಂಚನಗೊಳಿಸುತ್ತವೆ.

ರೈಡ್ ಆನ್ ಎಂಟೆಬ್ಬೆ

1977ರ ಈ ಚಲನಚಿತ್ರವು ʼಆಪರೇಷನ್ ಎಂಟೆಬ್ಬೆʼ ಮೇಲೆ ಆಧರಿತವಾಗಿದೆ. ನಾಲ್ವರು ಪ್ಯಾಲೇಸ್ತಿನಿಯನ್‌ ಭಯೋತ್ಪಾದಕರು ಹಲವಾರು ಇಸ್ರೇಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ಏರ್‌ಬಸ್ ಎ300 ಅನ್ನು ಹೈಜಾಕ್ ಮಾಡಿದ ಅನಂತರ ಇಸ್ರೇಲ್ ಸರ್ಕಾರವು ಯೋಜಿಸಿದ ರಕ್ಷಣಾ ಕಾರ್ಯಾಚರಣೆ ಇದಾಗಿದೆ.


ಚಿತ್ರವು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಿಂದ ಡೇರ್‌ಡೆವಿಲ್ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ‘ಆಪರೇಷನ್ ಥಂಡರ್ಬೋಲ್ಟ್’ ಶೀರ್ಷಿಕೆಯ ಕಾರ್ಯಾಚರಣೆಯು ಅತ್ಯಂತ ಕಷ್ಟಕರವಾಗಿತ್ತು. ಯಾಕೆಂದರೆ ಭಯೋತ್ಪಾದಕರು ಉಗಾಂಡಾದ ಅಧ್ಯಕ್ಷ ಇದಿ ಅಬಿನ್ ಅವರ ಬೆಂಬಲವನ್ನು ಹೊಂದಿದ್ದರು. ಆದರೂ ಇಸ್ರೇಲ್‌ ಯೋಧರು ಭಾರಿ ಸಾಹಸದಿಂದ ಮೇಲುಗೈ ಸಾಧಿಸಿದರು. ಈ ಚಿತ್ರವು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದೆ.

ಅಜಾಮಿ

ಈ ಚಲನಚಿತ್ರದ ಕತೆಯನ್ನು ಪ್ಯಾಲೇಸ್ತಿನಿಯನ್ ಸ್ಕ್ಯಾಂಡರ್ ಕಾಪ್ಟಿ ಮತ್ತು ಇಸ್ರೇಲ್ ಯಹೂದಿ ಯಾರೋನ್ ಶಾನಿ ಬರೆದಿದ್ದಾರೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜೀವನದ ಸುತ್ತ ಸುತ್ತುತ್ತದೆ.


ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಜಾಫಾ ಚಿತ್ರದ ಕೇಂದ್ರ ಬಿಂದು. ಇಲ್ಲಿ ಹಲವಾರು ಪಾತ್ರಗಳಿವೆ. ಅವರೆಲ್ಲರೂ ಬಡವರು ಮತ್ತು ಸಾಕಷ್ಟು ಸಂಘರ್ಷವನ್ನು ಎದುರಿಸುತ್ತಾರೆ. ಇಸ್ರೇಲ್ – ಅರಬ್ ಜಗತ್ತಿನಲ್ಲಿ ಜೀವನದ ಸಂಪೂರ್ಣ ವಾಸ್ತವ, ಹಿಂಸೆ, ಪ್ರೀತಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ಪ್ಯಾರಡೈಸ್ ನೌ

ಈ ಚಿತ್ರವು ಟೆಲ್ ಅವೀವ್‌ನ ಮಿಲಿಟರಿ ಚೆಕ್‌ಪಾಯಿಂಟ್‌ನಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಕಾರ್ಯವನ್ನು ವಹಿಸಿಕೊಂಡಿರುವ ಇಬ್ಬರು ಪ್ಯಾಲೇಸ್ತಿನಿಯನ್ ಆತ್ಮಹತ್ಯಾ ಬಾಂಬರ್‌ಗಳನ್ನು ಆಧರಿಸಿದೆ. ಮದುವೆಯಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಇಬ್ಬರು ಇಸ್ರೇಲ್ ಪ್ರಜೆಗಳಂತೆ ವೇಷ ಧರಿಸಿ ಸ್ಫೋಟಕ್ಕೆ ಮುಂದಾಗಿದ್ದರು.


ಇಸ್ರೇಲ್ ಗಡಿ ದಾಟುವಾಗ ನಡೆಯುವ ಘಟನೆಗಳು, ಆತ್ಮಹತ್ಯಾ ಬಾಂಬರ್‌ಗಳಾಗಲು ಕಾರಣವಾಗುವ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಸೂಕ್ಷ್ಮವಾಗಿ ಸಿನೆಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದು ಅತ್ಯುತ್ತಮ ವಿದೇಶಿ ಚಿತ್ರ ಎಂಬ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದೆ.

ಲೆಮನ್ ಟ್ರೀ

ಪ್ಯಾಲೇಸ್ತಿನಿಯನ್ ಮಹಿಳೆಯ ಹೋರಾಟದ ಕಟುವಾದ ಮತ್ತು ಸುಂದರವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಸ್ರೇಲ್ ಅಧಿಕಾರಿಗಳು ತನ್ನ ನಿಂಬೆ ತೋಟದಲ್ಲಿನ ಮರಗಳನ್ನು ಕಿತ್ತು ಹಾಕುವುದನ್ನು ತಡೆಯುವುದು ಈ ಚಿತ್ರದ ಸಾರ. ಪ್ರಪಂಚದಾದ್ಯಂತದ ವಿವಿಧ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ನವೊನ್ ಅವರು ಪ್ಯಾಲೇಸ್ತಿನಿಯನ್ ಮಹಿಳೆ ಸಲ್ಮಾ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು.


ಇದನ್ನೂ ಓದಿ: Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

ಸಲ್ಮಾ ಅವರ ನಿಂಬೆ ತೋಟ ಅವರಿಗೆ ರಹಸ್ಯವಾಗಿ ಕಾಣುತ್ತದೆ ಮತ್ತು ಬೆದರಿಕೆಯನ್ನು ಒಡ್ಡಿದಂತೆ ಭಾಸವಾಗುತ್ತದೆ. ಹೀಗಾಗಿ ಅಧಿಕಾರಿಗಳು ಎಲ್ಲಾ ಮರಗಳನ್ನು ಕಿತ್ತುಹಾಕಲು ಯೋಜಿಸುತ್ತಾರೆ. ಆದರೆ ಸಲ್ಮಾ ಮತ್ತು ಅವರ ವಕೀಲರು ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ. ಚಲನಚಿತ್ರವು ವಿವಿಧ ವಿಷಯಗಳ ಮೇಲೆ ನೆಲೆಸಿದೆ. ಮಾನವ ಸಹಾನುಭೂತಿ ಮತ್ತು ಭಾವನೆಯ ಮೇಲೂ ಬೆಳಕು ಚೆಲ್ಲಿದೆ.

Continue Reading

ವಿದೇಶ

Mohammed Deif: ಹಮಾಸ್‌ ಉಗ್ರರಿಗಿಲ್ಲ ಉಳಿಗಾಲ; ಹಮಾಸ್‌ ಮಿಲಿಟರಿ ಚೀಫ್‌ನನ್ನೂ ಕೊಂದ ಇಸ್ರೇಲ್‌!

Mohammed Deif: ಕಳೆದ ಎರಡು ದಿನಗಳಲ್ಲಿ ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್‌ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ ಕೊಂದು ಹಾಕಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ಮಿಲಿಟರಿ ಮುಖ್ಯಸ್ಥನನ್ನೂ ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಘೋಷಣೆ ಮಾಡಿದೆ. ಇದರೊಂದಿಗೆ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಪ್ರಮುಖ ಉಗ್ರರನ್ನು ಇಸ್ರೇಲ್‌ ಹತ್ಯೆ ಮಾಡಿದಂತಾಗಿದೆ.

VISTARANEWS.COM


on

Mohammed Deif
Koo

ಜೆರುಸಲೇಂ: 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ (Israel Hamas War) ಮೇಲೆ ದಾಳಿ ಮಾಡಿದ ಬಳಿಕ “ಹಮಾಸ್‌ ಉಗ್ರರು ಯುದ್ಧ ಆರಂಭಿಸಿದ್ದಾರೆ ಹಾಗೂ ನಾವು ಯುದ್ಧವನ್ನು ಅಂತ್ಯಗೊಳಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದರು. ಈಗ ಅದರಂತೆ, ಇಸ್ರೇಲ್‌ ದಾಳಿಯನ್ನು ಚುರುಕುಗೊಳಿಸಿದ್ದು, ಇಸ್ರೇಲ್‌ ಮಿಲಿಟರಿ ಚೀಫ್‌ ಮೊಹಮ್ಮದ್‌ ಡೈಫ್‌ನನ್ನು (Mohammed Deif) ಹೊಡೆದುರುಳಿಸಿದೆ. ಈ ಕುರಿತು ಇಸ್ರೇಲ್‌ ಸೇನೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ.

ಹೌದು, ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿದ ದಾಳಿಯ ರೂವಾರಿಯಾದ ಮೊಹಮ್ಮದ್‌ ಡೈಫ್‌ನನ್ನು ಇಸ್ರೇಲ್‌ ಸೇನೆಯು ದಾಳಿ ಮೂಲಕ ಹತ್ಯೆ ಮಾಡಿದೆ. “ಇಸ್ರೇಲ್‌ ಡಿಫೆನ್ಸ್‌ ಪಡೆಗಳು ಜುಲೈ 13ರಂದು ಖಾನ್‌ ಯುನಿಸ್‌ನಲ್ಲಿ ನಡೆಸಿದ ವಾಯುದಾಳಿಯಲ್ಲಿ ಮೊಹಮ್ಮದ್‌ ಡೈಫ್‌ ಹತ್ಯೆಗೀಡಾಗಿದ್ದಾನೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಐಡಿಎಫ್‌ ದಾಳಿ ನಡೆಸಿ, ಅಕ್ಟೋಬರ್‌ 7ರ ದಾಳಿಯ ಮಾಸ್ಟರ್‌ಮೈಂಡ್‌ನನ್ನು ಹತ್ಯೆ ಮಾಡಲಾಗಿದೆ” ಎಂದು ಇಸ್ರೇಲ್‌ ಮಾಹಿತಿ ನೀಡಿದೆ.

ಕಳೆದ ಎರಡು ದಿನಗಳಲ್ಲಿ ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್‌ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ ಕೊಂದು ಹಾಕಿದೆ. ಈ ಮೂಲಕ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ಮಿಲಿಟರಿ ಮುಖ್ಯಸ್ಥನನ್ನೂ ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಘೋಷಣೆ ಮಾಡಿದೆ. ಇದರೊಂದಿಗೆ ಇಸ್ರೇಲ್‌ ಮೇಲೆ ದಾಳಿ ನಡೆಸಿದ ಪ್ರಮುಖ ಉಗ್ರರನ್ನು ಇಸ್ರೇಲ್‌ ಹತ್ಯೆ ಮಾಡಿದಂತಾಗಿದೆ.

ಮೊಹಮ್ಮದ್‌ ಡೈಫ್‌ ಯಾರು?

ಮೊಹಮ್ಮದ್‌ ಡೈಫ್‌ ಹಮಾಸ್‌ ಉಗ್ರ ಸಂಘಟನೆಯ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಈತ 1965ರಲ್ಲಿ ಜನಿಸಿದ್ದು, ಈತ ತನ್ನ 15ನೇ ವಯಸ್ಸಿನಲ್ಲಿಯೇ ಹಮಾಸ್‌ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ಮೊಹಮ್ಮದ್‌ ಡೈಫ್‌ 2021ರಲ್ಲಿ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದು, ಸಾವಿರಾರು ರಾಕೆಟ್‌ಗಳು ಇಸ್ರೇಲ್‌ ಮೇಲೆ ಎರಗುವ ಯೋಜನೆಗೆ ಈತನೇ ರೂವಾರಿ ಎಂದು ತಿಳಿದುಬಂದಿದೆ. ಆದರೂ, ಈತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

Continue Reading

ವಿದೇಶ

Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್‌ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ (Israel Attack) ಕೊಂದು ಹಾಕಿದೆ. ಈ ಮೂಲಕ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ಇಸ್ರೇಲ್‌ ಗುಪ್ತಚರ ದಳ ʼಮೊಸಾದ್‌ʼ ಪ್ಯಾಲೆಸ್ತೀನ್‌ ಕಮಾಂಡರ್‌ನನ್ನು ಅತ್ಯಂತ ಚಾಣಾಕ್ಷತನದಿಂದ ಕೊಂದು ಹಾಕಿತ್ತು. ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.

VISTARANEWS.COM


on

By

Israel Attack
Koo

ಇಬ್ಬರು ದೊಡ್ಡ ಶತ್ರುಗಳನ್ನು ಇಸ್ರೇಲ್ (Israel Attack) ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಕೊಂದು ಹಾಕಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕರ್ (Fuad Shukar) ಮೇಲೆ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿದೆ. ಈ ಎರಡೂ ಘಟನೆಗಳ ಹಿಂದೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ (Israel’s intelligence agency Mossad) ಕೈವಾಡ ಇರುವುದು ಅತ್ಯಂತ ಸ್ಪಷ್ಟವಾಗಿದೆ.

ಇಸ್ರೇಲ್ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ʼಮೊಸಾದ್‌ʼ ಪ್ಯಾಲೇಸ್ಟಿನಿಯನ್ ಕಮಾಂಡರ್ ವಾಡಿ ಹಡ್ಡಾಡ್‌ನನ್ನು (Wadie Haddad) ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿ ಕೊಂದು ಹಾಕಿತ್ತು!

ಪ್ಯಾಲೆಸ್ತೀನ್‌ ವಿಮೋಚನೆಗಾಗಿ ಪಾಪ್ಯುಲರ್ ಫ್ರಂಟ್ ಎಂಬ ಪ್ಯಾಲೆಸ್ತೀನ್ ಸಂಘಟನೆಯ ಮುಖ್ಯಸ್ಥನಾಗಿದ್ದ ವಾಡಿ ಹಡ್ಡಾಡ್‌ನನ್ನು 1978ರಲ್ಲಿ ಕೊಲ್ಲಲಾಯಿತು. ಬಾಗ್ದಾದ್‌ನಲ್ಲಿ ಊಟ ಸೇವಿಸಿದ ಬಳಿಕ ಆತ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸಿದ್ದ. ಅನಂತರ ಅವನಿಗೆ ಹಸಿವು ಕಡಿಮೆಯಾಗಿತ್ತು. ಸುಮಾರು 25 ಪೌಂಡ್‌ಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡ. ಆತನ ಸ್ಥಿತಿ ಗಂಭೀರವಾದಾಗ ಇರಾನಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ಹೆಪಟೈಟಿಸ್ ಅನ್ನು ಶಂಕಿಸಿದರು. ಶಕ್ತಿಯುತವಾದ ಪ್ರತಿಜೀವಕಗಳನ್ನು ನೀಡಲಾಯಿತು. ಅತ್ಯುತ್ತಮ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು. ಆದರೆ ಹಡ್ದಾಡ್‌ನ ಸ್ಥಿತಿ ಸುಧಾರಿಸಲಿಲ್ಲ. ಕೂದಲು ಉದುರಲಾರಂಭಿಸಿತು. ಜ್ವರ ಕಡಿಮೆಯಾಗಲೇ ಇಲ್ಲ. ವಿಷ ಉಣಿಸಿರುವ ಶಂಕೆ ವ್ಯಕ್ತವಾದರೂ ಅದು ಯಾವುದು, ಹೇಗೆ ಅದನ್ನು ನೀಡಲಾಯಿತು ಎಂಬುದನ್ನು ವೈದ್ಯರಿಗೆ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.

ಪ್ಯಾಲೆಸ್ತೀನ್‌ ಲಿಬರೇಶನ್ ಆರ್ಗನೈಸೇಶನ್‌ನ ನಾಯಕ ಯಾಸರ್ ಅರಾಫತ್, ಪೂರ್ವ ಜರ್ಮನಿಯ ರಹಸ್ಯ ದಳವಾದ ʼಸ್ಟಾಸಿʼಯಿಂದ ಸಹಾಯ ಪಡೆಯಲು ಸಹಾಯಕರನ್ನು ಕೇಳಿದರು. ಇದು ಸೋವಿಯತ್ ರಷ್ಯಾ ಪ್ಯಾಲೆಸ್ತೀನ್‌ ಹೋರಾಟಗಾರರಿಗೆ ಸಹಾಯ ಮಾಡಿದ ಸಮಯವಾಗಿತ್ತು. ಅವರಿಗೆ ಪಾಸ್‌ಪೋರ್ಟ್‌, ಆಶ್ರಯ, ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಒದಗಿಸಿತು.

Israel Attack
Israel Attack


ಅರಾಫತ್‌ನ ಸಹಾಯಕನು ಪೂರ್ವ ಜರ್ಮನ್ ರಹಸ್ಯ ಸೇವೆ ಅಥವಾ ಸ್ಟಾಸಿಯನ್ನು ತಲುಪಿದಾಗ ಹಡ್ಡಾಡ್‌ನನ್ನು 1978ರ ಮಾರ್ಚ್ 19ರಂದು ಇರಾಕ್‌ ರಾಜಧಾನಿ ಬಾಗ್ದಾದ್‌ನಿಂದ ಪೂರ್ವ ಬರ್ಲಿನ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಗುಪ್ತಚರ ಮತ್ತು ರಹಸ್ಯ ಸೇವೆಯ ಸಮುದಾಯದ ಸದಸ್ಯರು ಚಿಕಿತ್ಸೆ ನೀಡಿದರು. ಅದಾಗಲೇ ಎರಡು ತಿಂಗಳ ನೋವಿನಿಂದ ಒದ್ದಾಡಿದ್ದ ಹಡ್ಡಾಡ್‌ಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಲು ಅಲ್ಲೂ ಸಾಧ್ಯವಾಗಲಿಲ್ಲ.

ಆದರೆ ಬಾಗ್ದಾದ್‌ನಿಂದ ಏರ್‌ಲಿಫ್ಟ್‌ ಆಗುತ್ತಿರುವಾಗ ಹಡ್ಡಾಡ್‌ನ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿದಾಗ ಅದರಲ್ಲಿ ಟೂತ್‌ಪೇಸ್ಟ್‌ನ ಟ್ಯೂಬ್ ಒಂದು ಪತ್ತೆಯಾಯಿತು. ನಲವತ್ತೊಂದು ವರ್ಷದ ಹಡ್ಡಾಡ್‌ನನ್ನು ಪೂರ್ವ ಬರ್ಲಿನ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅದಾಗಲೇ ಆತನ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ, ನಾಲಿಗೆ, ಪ್ಲೆರಲ್ ಪೊರೆಗಳು, ಟಾನ್ಸಿಲ್‌, ಮೂತ್ರ, ಮಲದಲ್ಲೂ ರಕ್ತ ಸೋರಿಕೆಯಾಗಿದ್ದು ಮಾತ್ರವಲ್ಲ ಪ್ಲೇಟ್ಲೆಟ್ ಸಂಖ್ಯೆ ಅಪಾಯಕಾರಿಯಾಗಿ ಕುಸಿಯಿತು.

ವೈದ್ಯರು ಆತನಿಗೆ ಸಾಧ್ಯವಿರುವ ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಆದರೆ ಏನೂ ಫಲಿತಾಂಶ ಹೊರಬರಲಿಲ್ಲ. ಆತನಿಗೆ ಇಲಿ ವಿಷ ಅಥವಾ ಥಾಲಿಯಮ್ ನೀಡಲಾಗಿದೆ ಎಂದು ಊಹಿಸಲಾಯಿತು. ಆದರೆ ಇದಕ್ಕೂ ಸ್ಪಷ್ಟತೆ ಸಿಗಲಿಲ್ಲ. ಅಲ್ಲಿ ಆತ ತೀವ್ರವಾಗಿ ನೋವಿನಿಂದ ಒದ್ದಾಡುತ್ತಿದ್ದ. ಆತನ ಕಿರುಚಾಟ, ನರಳಾಟ ಆಸ್ಪತ್ರೆಯ ತುಂಬೆಲ್ಲ ಕೇಳುತ್ತಿತ್ತು. ವೈದ್ಯರು ಹಗಲು ರಾತ್ರಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಬೇಕಾಯಿತು.

ಅಲ್ಲಿ ಹತ್ತು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿ ಮಾರ್ಚ್ 29ರಂದು ಹಡ್ಡಾಡ್‌ ಸತ್ತೇ ಹೋದ. ಅನಂತರ ಸಂಪೂರ್ಣ ಶವಪರೀಕ್ಷೆ ನಡೆಸಲಾಯಿತು. ಗುಪ್ತಚರ ಸಂಸ್ಥೆ ʼಸ್ಟಾಸಿʼಯ ಫೋರೆನ್ಸಿಕ್ ತಜ್ಞ ಪ್ರೊಫೆಸರ್ ಒಟ್ಟೊ ಪ್ರೊಕೊಪ್ ಅವರು ಈ ಕುರಿತು ಮಾಹಿತಿ ನೀಡಿ, ಹಡ್ಡಾಡ್‌ ಮೆದುಳಿನ ರಕ್ತಸ್ರಾವ ಮತ್ತು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ. ಆತನನ್ನು ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.

ಇದನ್ನೂ ಓದಿ: Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್‌ ಮೆಶಾಕ್‌? ಈತನ ಹಿನ್ನೆಲೆ ಏನು?

ಟೂತ್ ಪೇಸ್ಟ್‌ನಲ್ಲಿತ್ತು ವಿಷ!

ಹಡ್ಡಾಡ್‌ನ ಸಾವು ಸಹಜ ಎಂದು ಕಾಣುವಂತೆ ಮಾಡಲು ಆತ ಬಳಸುತ್ತಿದ್ದ ಟೂತ್ ಪೇಸ್ಟ್ ಅನ್ನೇ ಅಸ್ರ್ರವಾಗಿ ಬಳಸಲಾಗಿತ್ತು. ಹಡ್ಡಾಡ್ ನಿತ್ಯ ಬಳಸುವ ಟೂತ್ ಪೇಸ್ಟ್ ಅನ್ನು ವಿಷಕಾರಿ ಟೂತ್ ಪೇಸ್ಟ್ ನೊಂದಿಗೆ ಬದಲಾಯಿಸಲಾಗಿತ್ತು! ಆತನ ಮರಣದ ಬಳಿಕ ಪರೀಕ್ಷೆ ಮಾಡಿದ ಟೂತ್ ಪೇಸ್ಟ್ ಟ್ಯೂಬ್‌ನಲ್ಲಿ ವಿಷ ಕಂಡು ಬಂದಿತ್ತು. ಟೆಲ್ ಅವೀವ್‌ನ ಆಗ್ನೇಯ ಭಾಗದಲ್ಲಿರುವ ನೆಸ್ ಜಿಯೋನಾದಲ್ಲಿರುವ ಇಸ್ರೇಲ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್‌ನಲ್ಲಿ ಈ ವಿಷವನ್ನು ಅಭಿವೃದ್ಧಿಪಡಿಸಲಾಗಿತ್ತು. ಹಡ್ಡಾಡ್‌ ಹಲ್ಲುಜ್ಜುತ್ತಿದ್ದಾಗ ಈ ವಿಷವು ಅವನ ದೇಹವನ್ನು ಪ್ರವೇಶಿಸುತ್ತಿತ್ತು. ಇದು ನಿಧಾನವಾಗಿ ನಿರ್ಣಾಯಕ ಮಟ್ಟ ತಲುಪಿದಾಗ ಆತನ ಜೀವಕ್ಕೆ ಮಾರಕವಾಯಿತು. ಹೀಗೆ ಅತ್ಯಂತ ಚಾಣಾಕ್ಷತನದಿಂದ ಇಸ್ರೇಲ್‌ ಗುಪ್ತಚರ ದಳವು ತನ್ನ ವೈರಿ ʼಉಗ್ರ ನಾಯಕʼನನ್ನು ಕೊಂದು ಹಾಕಿತ್ತು!

Continue Reading
Advertisement
Paris Olympics 2024
ಪ್ರಮುಖ ಸುದ್ದಿ14 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಕಣಕ್ಕೆ ಇಳಿಯಲಿರುವ ಭಾರತದ ಸ್ಪರ್ಧಿಗಳು ಯಾರ್ಯಾರು? ಇಲ್ಲಿದೆ ಎಲ್ಲ ವಿವರ

Tea vs Coffee
ಆರೋಗ್ಯ14 mins ago

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

karnataka Rain
ಮಳೆ14 mins ago

Karnataka Weather : 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ತಜ್ಞರು

Dina Bhavishya
ಭವಿಷ್ಯ44 mins ago

Dina Bhavishya : ಈ ರಾಶಿಯವರು ದಿನ ಕೊನೆಯಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವಿರಿ

Rahul Gandhi
ದೇಶ6 hours ago

Rahul Gandhi: ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ 10 ಲಕ್ಷ ರೂ. ಆಫರ್;‌ ಆದರೂ ಮಾರದ ಚಮ್ಮಾರ!

Kupwara Encounter
ದೇಶ6 hours ago

ಕಾಶ್ಮೀರದಲ್ಲಿ ಮುಂಬೈ ದಾಳಿ ರೂವಾರಿ ಹಫೀಜ್‌ ಸಯೀದ್‌ ಆಪ್ತನ ಹತ್ಯೆ; ಈತ ಪಾಕ್‌ ಕಮಾಂಡೋ ಕೂಡ ಹೌದು!

PV Sindhu
ಪ್ರಮುಖ ಸುದ್ದಿ6 hours ago

PV Sindhu : ಪಿವಿ ಸಿಂಧು ಹ್ಯಾಟ್ರಿಕ್​ ಒಲಿಂಪಿಕ್ಸ್​ ಪದಕದ ಕನಸು ಭಗ್ನ, 16ನೇ ಸುತ್ತಿನಲ್ಲಿ ಸೋಲು

Prajwal Revanna
ಕರ್ನಾಟಕ6 hours ago

Prajwal Revanna: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಅಸಲಿ; ಎಫ್‌ಎಸ್‌ಎಲ್‌ ವರದಿ ಬಹಿರಂಗ, ಎಸ್‌ಐಟಿ ತನಿಖೆಗೆ ಬಲ!

MS Dhoni
ಪ್ರಮುಖ ಸುದ್ದಿ6 hours ago

MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

Kabini dam not cracked no need to worry says DCM DK Shivakumar
ಕರ್ನಾಟಕ7 hours ago

Kabini Dam: ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿಲ್ಲ, ಆತಂಕ ಬೇಡ; ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ17 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ17 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌