Viral News : ಈ ಫೋಟೋದಲ್ಲಿ ಗೊಂಬೆಯನ್ನು ಹುಡುಕೋದು ಎಷ್ಟೊಂದು ಕಷ್ಟ! ನೀವೇನಾದರೂ ಹುಡುಕಬಲ್ಲಿರಾ? - Vistara News

ವೈರಲ್ ನ್ಯೂಸ್

Viral News : ಈ ಫೋಟೋದಲ್ಲಿ ಗೊಂಬೆಯನ್ನು ಹುಡುಕೋದು ಎಷ್ಟೊಂದು ಕಷ್ಟ! ನೀವೇನಾದರೂ ಹುಡುಕಬಲ್ಲಿರಾ?

ಫೋಟೋದಲ್ಲಿ ಅಡಗಿಕೊಂಡಿರುವ ಗೊಂಬೆಯನ್ನು ಹುಡುಕುವ ಆಟವಿದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿರುವ ಈ ಆಟದಲ್ಲಿ ನೀವು ಗೆಲ್ಲಬಲ್ಲಿರಾ?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೈಂಡ್ ಗೇಮ್ ಎಲ್ಲದಕ್ಕಿಂತ ದೊಡ್ಡ ಗೇಮ್. ಮನುಷ್ಯನ ಮೆದುಳಿಗೆ ಕೆಲಸ ಕೊಡುವ ಈ ಆಟ ನೋಡುವುದಕ್ಕೆ ಚಿಕ್ಕದೆನಿಸಿದರೂ ಆಡುವಾಗ ಚಾಣಾಕ್ಷತನ ಇರಬೇಕಾಗುತ್ತದೆ. ಅದೇ ರೀತಿ ಮೆದುಳು ಮತ್ತು ಕಣ್ಣಿಗೆ ಕೆಲಸ ಕೊಡುವ ಫೋಟೋ ಒಂದನ್ನು ನಾವಿಲ್ಲಿ ಕೊಡುತ್ತಿದ್ದೇವೆ. ಅದರಲ್ಲಿ ನೀವು ಮಾಡಬೇಕಾಗಿರುವುದು ಗೊಂಬೆಯನ್ನು ಹುಡುಕುವ (Viral News) ಕೆಲಸ.

ಇದನ್ನೂ ಓದಿ: Viral Video: ಹಿರಿಯ ನಟಿ ರೇಖಾರನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ತಬ್ಬಿಕೊಂಡ ಅಲಿಯಾ ಭಟ್
ಈ ಚಿತ್ರದಲ್ಲಿ ಬಾತು ಕೋಳಿ, ಟೆಡ್ಡಿ ಬೇರ್ ಸೇರಿ ಅನೇಕ ರೀತಿಯ ಚಿಕ್ಕ ಚಿಕ್ಕ ಚಿತ್ರಗಳಿವೆ. ಆದರೆ ಇದರಲ್ಲಿ ಒಂದೇ ಒಂದು ಗೊಂಬೆಯೂ ಇದೆ. ಅದನ್ನು ಹುಡುಕುವ ಆಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಮತ್ತೇನಕ್ಕೆ ತಡ, ನೀವೂ ಒಮ್ಮೆ ಚಿತ್ರವನ್ನು ಕೂಲಂಕುಷವಾಗಿ ನೋಡಿ ಗೊಂಬೆಯನ್ನು ಹುಡುಕಿ.


ಚಿತ್ರದ ಎಡಭಾಗದಲ್ಲಿ ಗೊಂಬೆಯಿದೆ. ಫೋನು, ಬಾತುಕೋಳಿ, ಚೆಂಡು, ಟೆಡ್ಡಿ ಬೇರ್ ಮತ್ತು ಕಾರು ಈ ಗೊಂಬೆಯನ್ನು ಅಲ್ಪಸ್ವಲ್ಪ ಮುಚ್ಚಿವೆ. ಈ ಫೋಟೋ ನೋಡಿ ಗೊಂಬೆ ಹುಡುಕಲಾಗದೆ ಅನೇಕರು ಸೋತಿದ್ದಾರೆ. ಎಲ್ಲೋ ಕೆಲವರು ಮಾತ್ರ ಗೊಂಬೆಯನ್ನು ಪತ್ತೆ ಹಚ್ಚಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ಇಷ್ಟಕ್ಕೇ ಆಕೆಯು, ಗಂಡನಿಗೆ ಇನ್ನಿಲ್ಲದ ಕಿರುಕುಳ ನೀಡಿ, ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

VISTARANEWS.COM


on

Woman
Koo

ಲಖನೌ: ರಾತ್ರಿ ಗಂಡ ಕುಡಿದು ಮನೆಗೆ ಬಂದರೆ ಹೆಂಡತಿಗೆ ಕೋಪ ಬಂದೇ ಬರುತ್ತದೆ. ಆಗ ಅವರು ಬೈಯುತ್ತಾರೆ, ಊಟ ಕೊಡಲ್ಲ, ನಾನೇ ಸತ್ತುಹೋಗುತ್ತೇನೆ ಎಂದು ಹೆದರಿಸುತ್ತಾರೆ. ಆತನ ನಶೆ ಇಳಿದ ಮೇಲೆ ಸಂಬಂಧಿಕರನ್ನು ಕರೆಸಿ ಬುದ್ಧಿವಾದ ಹೇಳುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯೊಬ್ಬರು ತಾವೇ ಮದ್ಯಪಾನ ಮಾಡಿ, ಪತಿ ಗಂಡನ ಗುಪ್ತಾಂಗವನ್ನೇ ಸುಟ್ಟು, ಅದನ್ನು ಕತ್ತರಿಸಲು ಯತ್ನಿಸಿದ್ದಾರೆ. ಈ ಭೀಕರ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಅಮ್ರೋಹ ಜಿಲ್ಲೆಯ ಚಾಕ್‌ ಮೆಹೂದ್‌ ಗ್ರಾಮದಲ್ಲಿ ಮೆಹರ್‌ ಜಹಾನ್‌ ಎಂಬ 30 ವರ್ಷದ ಮಹಿಳೆಯು ಪತಿ ಮನ್ನಾನ್‌ ಜೈದಿಯ ಗುಪ್ತಾಂಗ ಸುಟ್ಟು, ಕತ್ತರಿಸಲು ಯತ್ನಿಸಿದ್ದಾರೆ. ದಿನವಿಡೀ ದುಡಿದು ಮನೆಗೆ ಬಂದ ಗಂಡನಿಗೆ ಮಹಿಳೆಯು ಹಾಲಿನಲ್ಲಿ ಮತ್ತು ಬರುವ ಅಂಶವನ್ನು ಸೇರಿಸಿ, ಆತ ನಶೆಗೆ ಜಾರುತ್ತಲೇ ಕೈ ಕಾಲು ಕಟ್ಟಿಹಾಕಿದ್ದಾರೆ. ಕೈ ಕಾಲು ಕಟ್ಟಿ, ಆತನ ಗುಪ್ತಾಂಗವನ್ನು ಸಿಗರೇಟಿನಿಂದ ಸುಟ್ಟ ಬಳಿಕವೇ ಮನ್ನಾನ್‌ ಜೈದಿಗೆ ಎಚ್ಚರವಾಗಿದೆ. ಇನ್ನೇನು ಗುಪ್ತಾಂಗ ಕತ್ತರಿಸಬೇಕು ಎನ್ನುವಷ್ಟರಲ್ಲೇ ಆತನು ಕೂಗಾಡಿದ್ದಾನೆ. ಬಳಿಕ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೆಹರ್‌ ಜಹಾನ್‌ನನ್ನು ಬಂಧಿಸಿದ್ದಾರೆ.

ಕುಡಿತದ ಚಟ ಇರುವ ಮೆಹರ್‌

ಮೂಲಗಳ ಪ್ರಕಾರ, ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ನಿನ್ನ ತಂದೆ-ತಾಯಿಗೆ ಹೇಳುತ್ತೇನೆ ಎಂದಿದ್ದಾರೆ. ಇದರಿಂದಾಗಿ ಕುಪಿತಗೊಂಡ ಮೆಹರ್‌ ಜಹಾನ್‌, ಗಂಡನನ್ನು ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕುಡಿದ ನಶೆಯಲ್ಲಿಯೇ ಮಹಿಳೆಯು ಗಂಡನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದೆ. ವೈರಲ್‌ ಆದ ವಿಡಿಯೊದ ಪ್ರಕಾರ, ಪತ್ನಿಯು ಸಿಗರೇಟಿನಿಂದ ಸುಡುತ್ತಲೇ ಸಹಾಯಕ್ಕಾಗಿ ಅಂಗಲಾಚಿದ ಧ್ವನಿಯು ಕೇಳಿಸಿದೆ. ನನ್ನ ಪಾಡಿಗೆ ನಾನು ಮದ್ಯಪಾನ ಮಾಡಿಕೊಂಡು, ಸಿಗರೇಟು ಸೇದಿಕೊಂಡು ಇರುತ್ತೇನೆ. ಇದರ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂಬುದಾಗಿ ಮಹಿಳೆಯು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ, ಮನ್ನಾನ್‌ ಜೈದಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Continue Reading

ಕೊಡಗು

Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

Marriage Cancel : ಯಾವ್ಯಾವುದೋ ಕಾರಣಕ್ಕೆ ಮದುವೆಯ ದಿನ ಮುರಿದು ಬಿದ್ದಿರುವುದು ನೋಡಿದ್ದೇವೆ. ಆದರೆ ಕೊಡಗಿನಲ್ಲಿ ವರನ ಕಡೆಯವರಿಗೆ ಸಿಹಿ ತಿಂಡಿ‌ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯೊಂದು ಮುರಿದಿದೆ.

VISTARANEWS.COM


on

By

marriage cancel in kodagu
Koo

ಕೊಡಗು: ವರದಕ್ಷಿಣೆ ಕೊಡಲಿಲ್ಲ ಎಂದು ಮದುವೆ ದಿನವೇ ವರನೊಬ್ಬ ಮದುವೆ ಬೇಡ (Marriage Cancel) ಎಂದಿದ್ದಾನೆ. ಮದುವೆ ಬೇಡ ಎನ್ನಲು ಮೊದಲು ಕಾರಣ ಕೊಟ್ಟಿದ್ದು, ವರನ ಕಡೆಯವರಿಗೆ ಸಿಹಿತಿಂಡಿ ನೀಡಿಲ್ಲದ ಕಾರಣ ಹೇಳಿ ನನಗೆ ಈ ಮದುವೆ ಬೇಡ ಎಂದು ಗಲಾಟೆ ಮಾಡಿದ್ದಾನೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ಪೇಟೆಯ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ಘಟನೆ ನಡೆದಿದೆ. ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿ ಮತ್ತು ತುಮಕೂರು ಜಿಲ್ಲೆಯ ಯುವಕ ನೊಂದಿಗೆ ಮೇ 5ರಂದು ಮದುವೆ ನಿಶ್ಚಯಾಗಿವಾಗಿತ್ತು. ಆದರೆ ರಾತ್ರೋ ರಾತ್ರಿ ವರ ಉಂಗುರ ಕಳಚಿಕೊಟ್ಟು ಹೋಗಿದ್ದಾನೆ.

ವಿವಾಹಕ್ಕೂ ಮೊದಲು ವರನ ಕಡೆಯವರಿಂದ ವರದಕ್ಷಿಣೆ ಕೊಡುವಂತೆ ಒತ್ತಾಯವು ಕೇಳಿ ಬಂದಿತ್ತು ಎನ್ನಲಾಗಿದೆ. ಚಿನ್ನಾಭರಣ ಮತ್ತು ಬೆಂಗಳೂರಿನಲ್ಲಿ ಸೈಟ್ ಕೊಡುವಂತೆ ವರನ ಪೋಷಕರು ಒತ್ತಾಯಿಸಿದ್ದರು. ಮದುವೆ ದಿನ ಚಿನ್ನ ಕೊಟ್ಟಿಲ್ಲ ಎಂದು ಊಟದ ನೆಪ ಹೇಳಿ ಗಲಾಟೆ ತೆಗೆದು ಮದುವೆ ಬೇಡ ಎಂದು ಬಿಟ್ಟು ಹೋಗಿದ್ದಾರೆ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ.

ವರನ ಕಡೆಯವರು ಶನಿವಾರ ಸಂಜೆಯೇ ತುಮಕೂರಿನಿಂದ ಮಂಟಪಕ್ಕೆ ಆಗಮಿಸಿದ್ದರು. ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ, ಎಂದು ಸಣ್ಣ ಗಲಾಟೆ ತೆಗೆದಿದ್ದಾರೆ. ನಂತರ ಈ ಮದುವೆ ಗಲಾಟೆಯು ಪೊಲೀಸ್‌ ಠಾಣೆಯ ಮೆಟ್ಟಿಲೇರಿದಾಗ, ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದಾನೆ.

ಇದೆಲ್ಲ ಘಟನೆಯಿಂದ ಬೇಸತ್ತ ವಧು ಕೂಡ ಈ ಮದುವೆಯೇ ಬೇಡ, ಈಗಲೇ ಈ ರೀತಿ ವರ್ತಿಸುವ ಗಂಡು ನನಗೂ ಬೇಡಪ್ಪಾ ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ. ಹೀಗಾಗಿ ಗುರು ಹಿರಿಯರೆಲ್ಲರೂ ಸೇರಿ ನಿಶ್ಚಯಿಸಿದ ವಿವಾಹ ಕಾರ್ಯವು ಸಿಹಿ ತಿಂಡಿ ವಿಚಾರವಾಗಿ ಮುರಿದು ಬಿದ್ದಿದೆ.

ಇದನ್ನೂ ಓದಿ: 12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿದ್ದ ಯುವಕ- ಯುವತಿಯ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ದೆಹಲಿ ಮೆಟ್ರೋದಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿವರ್ತನೆ ಆಗುತ್ತಿದೆ ಎಂದು ಅಸಮಾಧಾನ (Namma Metro) ತೋರಿದ್ದಾರೆ.

ಸಾರ್ವಜನಿಕರ ಎದುರಿನಲ್ಲಿ ಈ ರೀತಿ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ. ಸಹ ಪ್ರಯಾಣಿಕರೊಬ್ಬರು ಯುವಕ-ಯುವತಿಯ ವಿಡಿಯೊ ಸೆರೆಹಿಡಿದು ಎಕ್ಸ್‌ನ ಸ್ಯಾಮ್‌ (Sam459om) ಎಂಬುವವರ ಖಾತೆಯಿಂದ ಪೋಸ್ಟ್‌ ಆಗಿದೆ. ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.

ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

India’s T20 World Cup Jersey: ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ

VISTARANEWS.COM


on

India's T20 World Cup Jersey
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಜೆರ್ಸಿಯ(India’s T20 World Cup Jersey) ಫೋಟೊ ವೈರಲ್​ ಆಗಿದೆ. ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್​ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್​ ಆಡಲಿದೆ ಎಂದು ಬರೆದುಕೊಂಡಿದೆ.

ವೈರಲ್​ ಆಗಿರುವ ಟೀಮ್​ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್​ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಸ್ವರೂಪ ಬದಲು

ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗನ್ನು ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್ ನಡೆಯಲಿದೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Continue Reading

ಬೆಂಗಳೂರು

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Assault Case : ರಸ್ತೆಯಲ್ಲಿ ಶುರುವಾದ ಒಂದು ಸಣ್ಣ ಗಲಾಟೆಯು ವಿಕೋಪಕ್ಕೆ ತಿರುಗಿ ವ್ಯಕ್ತಿಯ ಉಸಿರೇ ನಿಂತು ಹೋಗಿದೆ. ಎದುರು ಮನೆಯವನು ಕಪಾಳಕ್ಕೆ ಹೊಡೆದಿದ್ದಕ್ಕೆ ದುರಂತ ಅಂತ್ಯ ಕಂಡಿದ್ದಾರೆ.

VISTARANEWS.COM


on

By

assault case in bengaluru
Koo

ಬೆಂಗಳೂರು: ವಿಕೋಪಕ್ಕೆ ತಿರುಗಿದ ಜಗಳವು (Assault Case) ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ಘಟನೆ ನಡೆದಿದೆ.ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಪ್ರಾಣಪಕ್ಷಿಯೇ ಹಾರಿಹೋಗಿದೆ. ಪ್ರಭುರಾಮ್ ಪ್ರಸಾದ್ (33) ಮೃತ ದುರ್ದೈವಿ.

ನಿನ್ನೆ ಭಾನುವಾರ ರಾತ್ರಿ ಪ್ರಭುರಾಮ್‌ ಹಬ್ಬಕ್ಕೆಂದು ಮಗನ ಜತೆ ಬೈಕ್‌ನಲ್ಲಿ ದೇಗುಲದ ಬಳಿ ಹೋಗಿದ್ದರು. ದಾರಿ ಮಧ್ಯೆ ಬರುವಾಗ ಸ್ಕೂಟರ್‌ನಲ್ಲಿ ಏನೋ ಸೌಂಡ್ ಬರುತ್ತಿದೆ ಎಂದು ಸೈಡ್‌ಗೆ ನಿಲ್ಲಿಸಿ, ಪರಿಶೀಲಿಸುತ್ತಿದ್ದರು. ಇದೇ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್‌ಗೆ ಟಚ್ ಮಾಡಿದ್ದಾಳೆ.

ಈ ಬಗ್ಗೆ ಪ್ರಭುರಾಮ್‌ ಪ್ರಶ್ನೆ ಮಾಡಿದ್ದಕ್ಕೆ ಮನೆ ಹತ್ರ ಬಾ ಎಂದು ಹೊರಟು ಹೋಗಿದ್ದಾಳೆ. ಬಳಿಕ ಮನೆ ಬಳಿ ಹೋದಾಗ ಮಹಿಳೆಯ ಪತಿ ಅನಿಲ್ ಎಂಬಾತ ಪ್ರಭುರಾಮ್‌ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪ್ರಭುರಾಮ್ ಕೆನ್ನೆಗೆ ಅನಿಲ್‌ 4-5 ಬಾರಿ ಬಲವಾಗಿ ಹೊಡೆದಿದ್ದಾನೆ. ಜಗಳದ ಬಳಿಕ ಮನೆಗೆ ಹೋದ ಪ್ರಭು ನೋವಿನಲ್ಲೇ ಮಲಗಿದ್ದಾನೆ. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.

ಪ್ರಭುರಾಮ್ ತಾಯಿ ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ‌ ಅನ್ವಯ IPC ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿದ್ದ ಯುವಕ- ಯುವತಿಯ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ದೆಹಲಿ ಮೆಟ್ರೋದಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿವರ್ತನೆ ಆಗುತ್ತಿದೆ ಎಂದು ಅಸಮಾಧಾನ (Namma Metro) ತೋರಿದ್ದಾರೆ.

ಸಾರ್ವಜನಿಕರ ಎದುರಿನಲ್ಲಿ ಈ ರೀತಿ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ. ಸಹ ಪ್ರಯಾಣಿಕರೊಬ್ಬರು ಯುವಕ-ಯುವತಿಯ ವಿಡಿಯೊ ಸೆರೆಹಿಡಿದು ಎಕ್ಸ್‌ನ ಸ್ಯಾಮ್‌ (Sam459om) ಎಂಬುವವರ ಖಾತೆಯಿಂದ ಪೋಸ್ಟ್‌ ಆಗಿದೆ. ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.

ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ10 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

IPL 2024
ಕ್ರೀಡೆ10 mins ago

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

CM Siddaramaiah
ಪ್ರಮುಖ ಸುದ್ದಿ20 mins ago

CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

Arvind Kejriwal
ದೇಶ32 mins ago

Arvind Kejriwal: ಖಲಿಸ್ತಾನಿ ಉಗ್ರರಿಂದ ದೇಣಿಗೆ; ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು!

karnataka weather forecast
ಮಳೆ52 mins ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Female foeticide
ಪ್ರಮುಖ ಸುದ್ದಿ56 mins ago

Female Foeticide: ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ59 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Summer Holiday Fashion
ಫ್ಯಾಷನ್60 mins ago

Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

Woman
ಪ್ರಮುಖ ಸುದ್ದಿ1 hour ago

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

IPL 2024
ಪ್ರಮುಖ ಸುದ್ದಿ1 hour ago

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ10 mins ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ52 mins ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ59 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ23 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌