Grama Deviya Jatre: ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ ಚಾಲನೆ; ಜನಸಾಗರದ ಮಧ್ಯೆ ಅಕ್ಕ ತಂಗಿಯರ ಆಗಮನ - Vistara News

ಉತ್ತರ ಕನ್ನಡ

Grama Deviya Jatre: ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ ಚಾಲನೆ; ಜನಸಾಗರದ ಮಧ್ಯೆ ಅಕ್ಕ ತಂಗಿಯರ ಆಗಮನ

Grama Deviya Jatre: ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ ಅದ್ಧೂರಿ ಚಾಲನೆ ದೊರೆತಿದ್ದು, ಸಹಸ್ರಾರು ಭಕ್ತರು ಆಗಮಿಸಿದ್ದರು.

VISTARANEWS.COM


on

Grama Deviya Jatre yallapura
ದೇವಿಯ ವೈಭವದ ಮೆರವಣಿಗೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಲ್ಲಾಪುರ: ಸಹಸ್ರಾರು ಜನ ಭಕ್ತಾದಿಗಳ ಜಯಘೋಷ, ಕಣ್ಣು ಹಾಯಿಸಿದಷ್ಟು ಜನಸಾಗರದ ಮಧ್ಯೆ ಅಕ್ಕ, ತಂಗಿಯರ ಆಗಮನ. ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ (Grama Deviya Jatre:) ಬುಧವಾರ (ಫೆ.೨೩) ಮಧ್ಯಾಹ್ನ ಅದ್ಧೂರಿ ಚಾಲನೆ ದೊರೆಯಿತು.

ಬೆಳಗ್ಗೆ 11 ಗಂಟೆ ಹೊತ್ತಿಗೆ ದೇವಿಯರ ಲಗ್ನ ಕಾರ್ಯ ನೆರವೇರಿಸಲಾಯಿತು. ನಂತರ 4 ಗಂಟೆ ಹೊತ್ತಿಗೆ ದೇವಿ ದೇವಸ್ಥಾನದಿಂದ ಧಾರ್ಮಿಕ ವಿಧಿ ವಿಧಾನ ಪೂರೈಸಿ, ದೇವಿಯರ ಮೆರವಣಿಗೆ ಗದ್ದುಗೆಯೆಡೆಗೆ ಆರಂಭವಾಯಿತು. ರಂಗವಲ್ಲಿ, ತಳಿರು, ತೋರಣ, ಕೇಸರಿ ಪತಾಕೆಗಳಿಂದ ಶೃಂಗಾರಗೊಂಡ ಪೇಟೆಯ ಬೀದಿಯಲ್ಲಿ ಮೆರವಣಿಗೆ ಸಾಗಿ ಉಡುಪಿಯ ತಂಡದ ಚಂಡೆ ವಾದನ, ರಾಮಾಪುರ-ಕಾಜಲವಾಡ ವಾದ್ಯ ತಂಡಗಳು, ಹೆಗ್ಗೂಡಿನ ಗಾರುಡಿ ಗೊಂಬೆಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು.

ಇದನ್ನೂ ಓದಿ: Women’s T20 World Cup: ಆಸ್ಟ್ರೇಲಿಯಾವನ್ನು ಮಣಿಸಲು ದೊಡ್ಡ ಮೊತ್ತ ಅಗತ್ಯ; ರಿಚಾ ಘೋಷ್​

ದೇವಿ ದೇವಸ್ಥಾನದಿಂದ ಮೈದಾನದವರೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ದಾರಿಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಜಯಘೋಷಗಳನ್ನು ಹಾಕುತ್ತಾ ದೇವಿಯರ ಹೊನ್ನಾಟವನ್ನು ವೀಕ್ಷಿಸಿದರು. ಸಂಜೆ 5.15ರ ಸುಮಾರಿಗೆ ಶ್ರೀದೇವಿಯರು ಜಾತ್ರಾ ಮಂಟಪದಲ್ಲಿ ವಿರಾಜಮಾನರಾದರು.

ಪಟ್ಟಣದೆಲ್ಲೆಡೆ ಭಕ್ತಾದಿಗಳಿಗೆ ಸ್ವಯಂ ಸೇವಕರು, ಭಕ್ತರು ಪಾನಕ, ತಂಪು ಪಾನೀಯ ವಿತರಿಸುತ್ತಿದ್ದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: Yashaswini Scheme: ಯಶಸ್ವಿನಿ ಕಾರ್ಡ್‌ ಮಾಡಿಕೊಡುವುದಾಗಿ ವಂಚನೆ; ಯಶಸ್ವಿನಿ ಟ್ರಸ್ಟ್‌ನಿಂದ ದೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಮುಂದುವರಿಯಲಿದೆ ವಿಪರೀತ ಮಳೆ; ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Rain News : ಭಾನುವಾರದಂದು ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್‌ ಹಾಗೂ ಯೆಲ್ಲೋ ಎಚ್ಚರಿಕೆಯನ್ನು (Karnataka Weather Forecast) ನೀಡಲಾಗಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು ಮತ್ತೆ ಸಕ್ರಿಯವಾಗಿದೆ. ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಚದುರಿದಂತೆ ಹಗುರದಿಂದ ಲಘು ಮಳೆಯಾಗುವ ಸಾಧ್ಯತೆಯಿದೆ. ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪ್ರತ್ಯೇಕವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ಬಳ್ಳಾರಿ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ದಾವಣಗೆರೆ, ಕೋಲಾರ, ವಿಜಯನಗರದಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

ಉತ್ತರ ಒಳನಾಡಿನ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕರಾವಳಿಗೆ ಆರೆಂಜ್‌ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಗಾಳಿ ವೇಗವು 30-40 ಕಿ.ಮೀ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

Farmer Death: ರೈತನೊಬ್ಬ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ಮೊರಳ್ಳಿ ಮಾಣಿಗುಡ್ಡ ಬಳಿ ನಡೆದಿದೆ. ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಳ್ಳಿ ಮಾಣಿಗುಡ್ಡ ನಿವಾಸಿ ನಾಗರಾಜ ತಿಮ್ಮಪ್ಪ ಗೌಡ (37) ಮೃತಪಟ್ಟ ರೈತ ಎಂದು ತಿಳಿದುಬಂದಿದೆ.

VISTARANEWS.COM


on

Farmer dies after falling under power tiller wheel in Moralli village
Koo

ಅಂಕೋಲಾ: ರೈತನೊಬ್ಬ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದ ಘಟನೆ (Farmer Death) ತಾಲೂಕಿನ ಮೊರಳ್ಳಿ ಮಾಣಿಗುಡ್ಡ ಬಳಿ ನಡೆದಿದೆ. ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಳ್ಳಿ ಮಾಣಿಗುಡ್ಡ ನಿವಾಸಿ ನಾಗರಾಜ ತಿಮ್ಮಪ್ಪ ಗೌಡ (37) ಮೃತ ದುರ್ದೈವಿಯಾಗಿದ್ದಾನೆ.

ಇದನ್ನೂ ಓದಿ: Accident: ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ; ಮಹಿಳೆ ಬಲಿ; ಭೀಕರ ದೃಶ್ಯ ವೈರಲ್‌

ರೈತ ನಾಗರಾಜ ಶುಕ್ರವಾರ ಬೆಳಗ್ಗೆ ಮೊರಳ್ಳಿಯಲ್ಲಿರುವ ಸುರೇಶ ನಾಯಕ ಎಂಬುವವರ ಗದ್ದೆಯಲ್ಲಿ ಉಳುಮೆ ಮಾಡಲು ತೆರಳಿದ್ದ. ಈ ವೇಳೆ ವಿಪರೀತ ಮಳೆ ಬರುತ್ತಿದ್ದ ಹಿನ್ನಲೆ ವಾಪಸ್ಸಾಗಿದ್ದು, ಮದ್ಯಾಹ್ನದ ನಂತರ ಮಳೆ ಕಡಿಮೆಯಾದ ಬಳಿಕ ಮತ್ತೆ ಗದ್ದೆಗೆ ತೆರಳಿದ್ದ. ಪವರ್ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಚಕ್ರಕ್ಕೆ ಕಾಲು ಸಿಲುಕಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿದ್ದು, ಗದ್ದೆಯಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Karnataka Weather : ಹೊನ್ನಾವರದ ಹಲವೆಡೆ ನೆರೆ ಪರಿಸ್ಥಿತಿ; ಭಾನುವಾರವೂ ಮಳೆ ಎಚ್ಚರಿಕೆ

ಸ್ಥಳಕ್ಕೆ ಅಂಕೋಲಾ ಠಾಣೆಯ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಮಳೆ

Karnataka Weather : ಹೊನ್ನಾವರದ ಹಲವೆಡೆ ನೆರೆ ಪರಿಸ್ಥಿತಿ; ಭಾನುವಾರವೂ ಮಳೆ ಎಚ್ಚರಿಕೆ

Karnataka Weather Forecast : ಮಳೆಗೆ (Rain News) ಹೊನ್ನಾವರದಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದ್ದು, ಚೌಡಯ್ಯನ ಐಕ್ಯ ಮಂಟಪ ಮುಳುಗಡೆಯಾಗಿದೆ. ಉಕ್ಕಿ ಹರಿಯುವ ನದಿಯಲ್ಲಿ ಮೀನುಗಳನ್ನು ಹಿಡಿಯುವ ದುಸ್ಸಾಹಸಕ್ಕೆ ಮುಂದಾದ ಘಟನೆಯೂ ನಡೆದಿದೆ. ಭಾನುವಾರವೂ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

karnataka weather forecast
ಹೊನ್ನಾವರದ ಹಲವೆಡೆ ನೆರೆ ಪರಿಸ್ಥಿತಿ
Koo

ಉತ್ತರಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಭಾರಿ ಮಳೆಗೆ (Karnataka weather Forecast) ಶರಾವತಿ ನದಿ ಉಕ್ಕಿ ಹರಿದು ಹೊನ್ನಾವರ ಹಲವೆಡೆ ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ. ತಾಲೂಕಿನ ಸರಳಗಿ, ಮಾವಿನಹೊಳೆ, ಅಳ್ಳಂಕಿ ಸೇರಿ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ನೆರೆ ಆತಂಕದ ಸುಮಾರು 169ಕ್ಕೂ ಅಧಿಕ‌ ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದೆ. ಜಲಾಶಯದಿಂದ ಮತ್ತೆ ನೀರು ಬಿಡುಗಡೆ ಸಾಧ್ಯತೆ ಇದ್ದು, ನದಿ ಪಾತ್ರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಚೌಡಯ್ಯನ ಐಕ್ಯ ಮಂಟಪ ಮುಳುಗಡೆ

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದು ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚೌಡಯ್ಯಧಾನಪುರದ ನಿಜಶರಣ ಅಂಬಿಗರ ಚೌಡಯ್ಯನ ಐಕ್ಯ ಮಂಟಪ ಮುಳುಗಡೆಯಾಗಿದೆ. ಇತ್ತ ಮಲೆನಾಡಿನ ಶಿವಮೊಗ್ಗದಲ್ಲೂ ಮಳೆ ಅಬ್ಬರ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ 11 ಕ್ರಸ್ಟ್ ಗೇಟ್ ಮೂಲಕ 42,705 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಉಕ್ಕಿ ಹರಿಯುವ ನದಿಯಲ್ಲಿ ಮೀನುಗಳನ್ನು ಹಿಡಿಯುವ ದುಸ್ಸಾಹಸ

ಗದಗ ಜಿಲ್ಲೆಯಲ್ಲಿ ತುಂಗಭದ್ರಾ ನದಿಯು ಉಕ್ಕಿ ಹರಿಯುತ್ತಿದೆ. ಮುಂಡರಗಿ ತಾಲೂಕಿನ ಸಿಂಗಟಾಲೂರು ಬ್ಯಾರೇಜ್ ಭರ್ತಿಯಾಗಿದ್ದು, ಕೆಲವರು ಜೀವ ಭಯವಿಲ್ಲದೆ ಮೀನು ಹಿಡಿಯುವ ದುಸ್ಸಾಹಸಕ್ಕೆ ಇಳಿದಿದ್ದರು. ನದಿ ತಟಗಳಿಗೆ ಗದಗ ಜಿಲ್ಲಾಡಳಿತ ಹೋಗದಂತೆ ಸೂಚನೆ ನೀಡಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮೀನುಗಾರರು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ನಾಳೆ ಕರಾವಳಿಗೆ ಭಾರಿ ಮಳೆ ಎಚ್ಚರ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯ ವೇಗವು (30-40 ಕಿಮೀ) ತಲುಪುವ ಸಾಧ್ಯತೆಯಿದೆ ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ

ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ಕಿಮೀ ನಿಂದ 45 ಕಿಮೀ ವೇಗದಲ್ಲಿ 55 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ನೈರುತ್ಯ ದುರ್ಬಲ

ನೈರುತ್ಯ ಮಾನ್ಸೂನ್ ಕರಾವಳಿಯ ಸಕ್ರಿಯವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರಾವಳಿಯ ಬಹುತೇಕ ಸ್ಥಳಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ಆಗುಂಬೆಯಲ್ಲಿ 18, ಕ್ಯಾಸಲ್ ರಾಕ್ 12 ಸೆಂ.ಮೀ ಮಳೆಯಾಗಿದೆ.

ಸಿದ್ದಾಪುರ 11, ಲೋಂಡಾ 10, ಕಾರ್ಕಳ, ಕೋಟ, ಕಾರವಾರದಲ್ಲಿ 9 ಸೆಂ.ಮೀ ಮಳೆಯಾಗಿದೆ. ಗೇರ್ಸೊಪ್ಪ, ಹೊನ್ನಾವರ, ಉತ್ತರ ಕನ್ನಡ, ಕೊಲ್ಲೂರು, ಗೋಕರ್ಣ, ಶೃಂಗೇರಿ ಎಚ್‌ಎಂಎಸ್ 8 ಸೆಂ.ಮೀ ಮಳೆಯಾಗಿದೆ. ಮೂಲ್ಕಿ , ಶಿರಾಲಿ ಪಿಟಿಒ , ಸಿದ್ದಾಪುರ, ಮಂಕಿ, ಕುಂದಾಪುರ , ಕದ್ರಾ, ಲಿಂಗನಮಕ್ಕಿ ಎಚ್‌ಎಂಎಸ್ , ಕಮ್ಮರಡಿ,ಚಿಕ್ಕಮಗಳೂರು, ಭಾಗಮಂಡಲ, ಜಯಪುರದಲ್ಲಿ 7 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

Karnataka Rain : ಕಾರವಾರದಲ್ಲಿ ಬಿಣಗಾ ಕಾರವಾರ ಟನೆಲ್‌ ಬಳಿ ಕಲ್ಲು ಕುಸಿದಿದ್ದು, ರಸ್ತೆ ಬಂದ್‌ ಮಾಡಿದ್ದಾರೆ. ಬೆಳಗಾವಿಯಲ್ಲಿ ದೇವಸ್ಥಾನದ ಗೋಪುರ ಕುಸಿದು ಬಿದ್ದಿದೆ. ವಿಜಯನಗರದಲ್ಲಿ ರಾಮ-ಲಕ್ಷ್ಮಣ ದೇಗುಲಕ್ಕೆ ಜಲದಿಗ್ಭಂದನ ಹಾಕಲಾಗಿದೆ.

VISTARANEWS.COM


on

By

karnataka rain
Koo

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ (Karnataka Rain) ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಸುರಂಗ ಮಾರ್ಗದಲ್ಲಿ ಕಲ್ಲು ಕುಸಿದಿದೆ. ಬಿಣಗಾದಿಂದ ಕಾರವಾರಕ್ಕೆ ಆಗಮಿಸುವ ಸುರಂಗದ ಎದುರು ಕಲ್ಲು, ಮಣ್ಣು ಜಾರಿ ಬಿದ್ದಿದೆ. ಅದೃಷ್ಟವಶಾತ್ ವಾಹನ ಸವಾರರು ಪಾರಾಗಿದ್ದಾರೆ.

ಸ್ಥಳಕ್ಕೆ ಕಾರವಾರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಐಆರ್‌ಬಿ ಕಾರ್ಮಿಕರಿಂದ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವು ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಣಗಾ ಕಾರವಾರ ಟನೆಲ್ ಬಂದ್ ಮಾಡಿದ್ದಾರೆ. ಬಿಣಗಾದಿಂದ ಬೈತಕೋಲ್ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

karnataka rain
karnataka rain

ಕುಸಿದು ಬಿದ್ದ ದೇವಸ್ಥಾನದ ಗೋಪುರ

ಬೆಳಗಾವಿ: ನಿರಂತರ ಮಳೆಗೆ ಬೆಳಗಾವಿಯ ಕಿತ್ತೂರಿನ ಕೊಂಡವಾಡ ಚೌಕಿನಲ್ಲಿರುವ ಕರೆಮ್ಮ ದೇವಿ ದೇವಸ್ಥಾನದ ಗೋಪುರ ಕುಸಿದು ಬಿದ್ದಿದೆ. ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಗೋಪುರ ಸಂಪೂರ್ಣವಾಗಿ ಕುಸಿದು, ಪಕ್ಕದ ಮಳಿಗೆಯ ಮೇಲೆ ಗೋಪುರ ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ನಿನ್ನೆ ಶುಕ್ರವಾರವಷ್ಟೇ ಕಿತ್ತೂರು ಕೋಟೆಯ ಆವರಣದಲ್ಲಿದ್ದ ಐತಿಹಾಸಿಕ ವಾಚ್ ಟವರ್ ಕುಸಿದು ಬಿದ್ದಿತ್ತು.

ರಾಮ-ಲಕ್ಷ್ಮಣ ದೇಗುಲಕ್ಕೆ ಜಲದಿಗ್ಭಂದನ

ಜಲಾಶಯದಿಂದ 1.80 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ವಿಜಯನಗರದ ವಿಶ್ವ ವಿಖ್ಯಾತ ಹಂಪಿಯಲ್ಲಿ ತುಂಗಭದ್ರಾ ಉಕ್ಕಿ ಹರಿಯುತ್ತಿದೆ. ನದಿಯ ರೌದ್ರ ನರ್ತನ ಹೆಚ್ಚಾಗಿದ್ದರಿಂದ ಹಂಪಿಯ ಹಲವು ಸ್ಮಾರಕಗಳು ಮುಳುಗಿವೆ. ಅದರಲ್ಲೂ ಐತಿಹಾಸಿಕ ರಾಮ – ಲಕ್ಷ್ಮಣ ದೇಗುಲಕ್ಕೆ ಜಲ ದಿಗ್ಭಂದನ ಹಾಕಲಾಗಿದೆ. ಪ್ರವಾಸಿಗರು ಉಳಿದುಕೊಳುತ್ತಿದ್ದ ಮೂರು ಕಲ್ಲಿನ ಮಂಟಪಗಳು ಮುಕ್ಕಾಲು ಭಾಗ ಮುಳುಗಡೆಯಾಗಿದೆ.

ತುಂಗಭದ್ರಾ ನದಿ ನೀರು ನುಗ್ಗಿದ್ದರಿಂದ ದೇಗುಲಕ್ಕೆ ಭಕ್ತರ ಸಂಖ್ಯೆಯಲ್ಲಿ ಭಾರೀ ವಿರಳವಾಗಿದೆ. ರಾಮ – ಲಕ್ಷ್ಮಣ, ಸೀತೆ ದೇಗುಲ 2011, 2017ರಲ್ಲಿ ಎರಡು ಬಾರಿ ಸಂಪೂರ್ಣ ಮುಳುಗಡೆ ಆಗಿತ್ತು. ವಾಲಿ ಎನ್ನುವ ರಾಜನನ್ನು ಸಂಹರಿಸಿ ಸುಗ್ರೀವ ಅನ್ನೋ ರಾಜನಿಗೆ ಪಟ್ಟಾಭಿಷೇಕ ಮಾಡಿದ ಜಾಗವೇ ರಾಮ-ಲಕ್ಷ್ಮಣ ದೇಗುಲವಾಗಿದೆ. ರಾಮ-ಲಕ್ಷ್ಮಣ, ಸೀತಾಮಾತೆ, ಆಂಜನೇಯ ಹಾಗೂ ಸುಗ್ರೀವ ರಾಜ ಸೇರಿ ಐದು ಜನರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ವಿಧಿ, ವಿಧಾನ ಮಂಟಪ, ಸ್ನಾನ ಘಟ್ಟ, ಪುರಂದರ ದಾಸರ ಮಂಟಪ ಸೇರಿ ಹತ್ತಾರು ಸ್ಮಾರಕಗಳು ಈಗಾಗಲೇ ಮುಳುಗಡೆಯಾಗಿದೆ. ಸ್ಮಾರಕಗಳು ಎಲ್ಲಿವೆ ಎಂಬುದು ಗೊತ್ತಾಗದ ರೀತಿ ತುಂಗಭದ್ರಾ ಉಕ್ಕಿ ಹರಿಯುತ್ತಿದೆ.

ಇದನ್ನೂ ಓದಿ: Murder case : ಮಲೆನಾಡಲ್ಲಿ ಒಂಟಿ ಮಹಿಳೆ ಕೊಲೆ; ಕತ್ತು ಹಿಸುಕಿ ಕೊಂದವರು ಯಾರು?

ಮುಳುಗಿದ ಸಂಗಮೇಶ್ವರ ದೇವಾಲಯ

ಮಲೆನಾಡಿನ ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಳೆ ಅಬ್ಬರಕ್ಕೆ ಮಲೆನಾಡಿನ ನದಿಗಳು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ಹರಿಯುತ್ತಿದೆ‌. ತುಂಗಾ, ಭದ್ರಾ ನದಿ ಸಂಗಮ ಕ್ಷೇತ್ರ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೂಡ್ಲಿ ತುಂಗಾ ಹಾಗೂ ಭದ್ರಾ ನದಿ ಬಂದು ಸಂಗಮ ಆಗುವ ಪುಣ್ಯಕ್ಷೇತ್ರವಾಗಿದ್ದು, ಸಂಗಮೇಶ್ವರ ದೇವಾಲಯ ಮುಳುಗಿದೆ.

ಏತ ನೀರಾವರಿ ಬ್ಯಾರೇಜ್‌ಗೆ ಪ್ರವಾಸಿಗರ ದಂಡು

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಮುಂಡರಗಿ ತಾಲೂಕಿನ ಹಮ್ಮಿಗಿ, ಗುಮ್ಮಗೋಳ, ವಿಠಲಾಪುರ ಸೇರಿದಂತೆ ಅನೇಕ ಗ್ರಾಮದ ರೈತರು ತತ್ತರಿಸಿದ್ದಾರೆ.

ಬ್ಯಾರೇಜ್‌ನ 26 ಗೇಟ್‌ಗಳಲ್ಲಿ 19 ಗೇಟ್‌ಗಳು ತೆರದು 2,90,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬ್ಯಾರೇಜ್‌ನಿಂದ ರಭಸವಾಗಿ ಹರಿಯುತ್ತಿರುವ ನೀರು ನೋಡಲು ಕಿರು ಆಣೆಕಟ್ಟು ವೀಕ್ಷಿಸಲು ಪ್ರವಾಸಿಗರು ದೌಡಯಿಸಿದ್ದಾರೆ. ಬ್ಯಾರೇಜ್ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಗೊಂಡಿದ್ದಾರೆ.

ಜೋಗ ಜಲಪಾತಕ್ಕೆ ಪ್ರವಾಸಿಗರು ಫಿದಾ

ಲಿಂಗನಮಕ್ಕಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಕಣ್ಮನ ಸೆಳೆಯುತ್ತಿದೆ. ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಜೋಗ ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Filmfare South 2024 mollywood tollywood 69th Filmfare Awards
South Cinema21 mins ago

Filmfare South 2024: ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್; ತೆಲುಗು, ತಮಿಳು ಹಾಗೂ ಮಲಯಾಳಂ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Amith Shah
ದೇಶ28 mins ago

Amit Shah: 2029ರ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು, ಕಾಂಗ್ರೆಸ್‌ ಪ್ರತಿಪಕ್ಷದಲ್ಲೇ; ಅಮಿತ್‌ ಶಾ ಭವಿಷ್ಯ

HD Deve Gowda
ದೇಶ29 mins ago

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಕ್ರೀಡೆ33 mins ago

Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಕರ್ನಾಟಕ58 mins ago

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

Dhruva Sarja martin trailer Out
ಸ್ಯಾಂಡಲ್ ವುಡ್1 hour ago

Dhruva Sarja : ʻಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರ ಬಲು ಜೋರು!

Drowned in water
ಬೆಳಗಾವಿ1 hour ago

Drowned in water : ಮಾರ್ಕಂಡೇಯ ನದಿಗೆ ಆಯತಪ್ಪಿ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

PSI Parashuram Case
ಕರ್ನಾಟಕ2 hours ago

PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

Wayanad Landslide
ದೇಶ2 hours ago

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Vastu Tips
ಧಾರ್ಮಿಕ2 hours ago

Vastu Tips: ಮನೆ ಸಂತೋಷದ ತಾಣವಾಗಬೇಕೆಂದರೆ ಮಲಗುವ ಕೋಣೆ ಹೀಗಿರಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌