ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿ ಹೊರಹೊಮ್ಮಿದ ರಷ್ಯಾ - Vistara News

ಪ್ರಮುಖ ಸುದ್ದಿ

ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿ ಹೊರಹೊಮ್ಮಿದ ರಷ್ಯಾ

ಭಾರತದ ಕಚ್ಚಾ ತೈಲ ಖರೀದಿಯಲ್ಲಿ ಬದಲಾವಣೆ ಕಂಡುಬರುತ್ತಿದ್ದು, ರಷ್ಯಾದಿಂದ ಆಮದು ಅಭೂತಪೂರ್ವ ಮಟ್ಟಕ್ಕೆ ಏರಿಕೆಯಾಗಿದೆ. ಸೌದಿ ಅರೇಬಿಯಾಕ್ಕಿಂತಲೂ ಹೆಚ್ಚಿನ ತೈಲವನ್ನು ರಷ್ಯಾ ನೀಡುತ್ತಿದೆ.

VISTARANEWS.COM


on

crude oil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತಕ್ಕೆ ರಷ್ಯಾದಿಂದ ಕಚ್ಚಾ ತೈಲದ ಆಮದು ಅಭೂತಪೂರ್ವ ಮಟ್ಟದಲ್ಲಿ ಏರಿಕೆಯಾಗಿದೆ.

ಇದುವರೆಗೆ ಸೌದಿ ಅರೇಬಿಯಾ, ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲವನ್ನು ರಫ್ತು ಮಾಡುವ ಎರಡನೇ ರಾಷ್ಟ್ರವಾಗಿತ್ತು. ಆದರೆ ಕಳೆದ ಏಪ್ರಿಲ್‌ನಿಂದ ರಷ್ಯಾ ಎರಡನೇ ಸ್ಥಾನವನ್ನು ಗಳಿಸಿದೆ. ಸೌದಿ ಅರೇಬಿಯಾ ಮೂರನೇ ಸ್ಥಾನಕ್ಕಿಳಿದಿದೆ.

ರಷ್ಯಾದ ತೈಲ ಖರೀದಿದಾರರಲ್ಲಿ ಇದುವರೆಗೂ ಭಾರತ ನಗಣ್ಯವಾಗಿತ್ತು. ಆದರೆ ಇದೀಗ ರಷ್ಯಾದಿಂದ ಸಮುದ್ರ ಮಾರ್ಗದ ಮೂಲಕ ಕಚ್ಚಾ ತೈಲ ಖರೀದಿಸುತ್ತಿರುವ ಎರಡನೇ ಪ್ರಮುಖ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ರಷ್ಯಾ ತೈಲ ಕೊಳ್ಳುವ ಮೊದಲ ಎರಡು ದೇಶಗಳಲ್ಲಿ ಚೀನಾ ಮತ್ತು ಭಾರತ ಮುಂಚೂಣಿಗೆ ಬಂದಿವೆ.

ಭಾರತಕ್ಕೆ ಇರಾಕ್‌ ಅತಿ ಹೆಚ್ಚು ಕಚ್ಚಾ ತೈಲವನ್ನು ಸರಬರಾಜು ಮಾಡುತ್ತಿದೆ. ಇದುವರೆಗೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿತ್ತು. ರಷ್ಯಾ-ಉಕ್ರೇನ್‌ ಸಮರದ ಬಳಿಕ ಈ ಭಾರಿ ಬದಲಾವಣೆ ಸಂಭವಿಸಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತದ ರಿಫೈನರಿಗಳು 2.8 ಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ. ಈಗ ರಷ್ಯಾದ ಎಲ್ಲ ಬಂದರುಗಳಿಂದ ಭಾರತ ತೈಲವನ್ನು ತರಿಸಿಕೊಳ್ಳುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ.5ಕ್ಕೆ ಏರಿತ್ತು. ಇದಕ್ಕೂ ಹಿಂದೆ 2021ರಲ್ಲಿ ಕೇವಲ 1% ಮಾತ್ರ ಇತ್ತು ಎಂಬುದನ್ನಿಲ್ಲಿ ಗಮನಿಸಬಹುದು.

ಭಾರತ ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ಮತ್ತು ಬಳಕೆದಾರ ರಾಷ್ಟ್ರ. ಮೇನಲ್ಲಿ ಇರಾಕ್‌ ಎಂದಿನಂತೆ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸಿದ್ದರೆ, ಎರಡನೇ ಸ್ಥಾನದಲ್ಲಿ ಸೌದಿ ಅರೇಬಿಯಾದ ಬದಲು ರಷ್ಯಾ ಹೊರಹೊಮ್ಮಿದೆ.

ರಷ್ಯಾವು ಭಾರತಕ್ಕೆ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡುತ್ತಿರುವುದರಿಂದ ಅನುಕೂಲವಾಗಿದೆ. ಇದುವರೆಗೆ ಚೀನಾ ಮಾತ್ರ ಪೆಸಿಫಿಕ್‌ ಕರಾವಳಿ ವಲಯದ ಬಂದರುಗಳಿಂದ ರಷ್ಯಾ ತೈಲವನ್ನು ಅತಿ ಹೆಚ್ಚು ಖರೀದಿಸುತ್ತಿತ್ತು. ಈಗ ಎರಡನೇ ಸ್ಥಾನದಲ್ಲಿ ಭಾರತ ಇದೆ.

ಜೂನ್‌ ಮೊದಲ ವಾರದಲ್ಲಿ ದಿನಕ್ಕೆ ಸರಾಸರಿ 860,000 ಬ್ಯಾರೆಲ್‌ ಕಚ್ಚಾ ತೈಲ ಏಷ್ಯಾದ ಖರೀದಿದಾರರಿಗೆ ಸರಬರಾಜಾಗಿತ್ತು. ಉಕ್ರೇನ್‌ ವಿರುದ್ಧ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಯುರೋಪ್‌, ಸಮುದ್ರ ಮಾರ್ಗದ ಮೂಲಕ ರಷ್ಯಾದ ಕಚ್ಚಾ ತೈಲವನ್ನು ಖರೀದಿಸದಿರಲು ನಿರ್ಧರಿಸಿದೆ. ಮುಂಬರುವ ಡಿಸೆಂಬರ್‌ನಿಂದ ಯುರೋಪ್‌ ತನ್ನ ನಿರ್ಬಂಧಗಳ ಆರನೇ ಪ್ಯಾಕೇಜ್‌ ಅಂಗವಾಗಿ ಸಮುದ್ರ ಮಾರ್ಗದ ಮೂಲಕ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ. ಹೀಗಾಗಿ ಭಾರತಕ್ಕೆ ರಫ್ತು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ರಷ್ಯಾ ಡಿಸ್ಕೌಂಟ್‌ ದರದಲ್ಲಿ ತೈಲವನ್ನು ಪೂರೈಸಿದರೆ ಭಾರತಕ್ಕೆ ಕೊಲ್ಲಿ ರಾಷ್ಟ್ರಗಳ ಅವಲಂಬನೆಯನ್ನು ತಗ್ಗಿಸಲು ಸಾಧ್ಯವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Sonakshi Sinha: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

Sonakshi Sinha: ಇತ್ತೀಚೆಗಷ್ಟೇ ಜಹೀರ್ ಇಕ್ಬಾಲ್ ಜೊತೆ ಹೊಸ ಬದುಕಿಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾ ಈಗ ಪ್ರೆಗ್ನೆಂಟ್ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊ ತೆಗೆಯಲು ಪ್ರಯತ್ನಿಸಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Sonakshi Sinha
Koo

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಇತ್ತೀಚೆಗಷ್ಟೇ ತಮ್ಮ ಪ್ರೇಮಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಹೊಸತರಲ್ಲೇ ನಟಿ ತಮ್ಮ ಪತಿಯ ಜೊತೆ ಆಸ್ಪತ್ರೆಯೊಂದರ ಹೊರಗೆ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ಆಕೆ ಗರ್ಭಿಣಿಯೇ ಎಂಬ ಸಂಶಯ ನೆಟ್ಟಿಗರಲ್ಲಿ ವ್ಯಕ್ತವಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ನಟಿ ಸೋನಾಕ್ಷಿ ಅವರು ತಮ್ಮ ಪತಿ ಜಹೀರ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊಗಳಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

Sonakshi Sinha

ಯಾಕೆಂದರೆ ಈ ಹಿಂದೆ ಮದುವೆಯಾದ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್ ಅವರು ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಅನೇಕರು ಗಾಸಿಪ್ ಮಾಡಿದ್ದರು. ಹಾಗಾಗಿ ಸೋನಾಕ್ಷಿ ಅವರು ಕೂಡ ಇವರಂತೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ನೆಟ್ಟಿಜನ್ ಮನಸ್ಸಿನಲ್ಲಿ ಮೂಡಿದೆ ಎನ್ನಲಾಗಿದೆ. ಹಾಗಾಗಿ ನೆಟ್ಟಿಜನ್ ಸೋನಾಕ್ಷಿಯವರನ್ನು ಗರ್ಭಿಣಿ ಅವತಾರದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಜೂನ್ 23ರಂದು ವಿವಾಹವಾದರು. ಅವರ ಮದುವೆಯ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅವರ ಜೋಡಿ ನೋಡಿ ಸ್ವರ್ಗದಲ್ಲಿ ಮಾಡಿದ ಪರಿಪೂರ್ಣ ಜೋಡಿ ಎಂದು ಹೊಗಳಿದ್ದಾರೆ.

Sonakshi Sinha

ಆದರೆ ಇವರಿಬ್ಬರು ಅಂತರ್ಧಮೀಯ ವಿವಾಹವಾಗಿದ್ದರಿಂದ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಕೂಡ ಅಸಮಾಧಾನಗೊಂಡಿದ್ದರು. ಅವರ ಮದುವೆಯಿಂದ ಅವರ ಕುಟುಂಬದವರು ಸಂತೋಷವಾಗಿಲ್ಲ ಎನ್ನಲಾಗಿತ್ತು. ಆದರೆ ಆ ಬಳಿಕ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಈ ದಂಪತಿ ಮದುವೆಗೂ ಮುನ್ನ 7 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಹಾಗಾಗಿ ಇವರು ಲಿವಿಂಗ್ ಟು ಗೇದರ್ ರಿಲೆಷನ್ಶಿಪ್‌ನಲ್ಲಿದ್ದರು ಎಂದು ಅನೇಕರು ಊಹಿಸಿದ್ದರು.

ಆದರೆ ನಟಿ ಈ ವದಂತಿಯನ್ನು ಅಲ್ಲಗೆಳೆದಿದ್ದು, ತಾನು ಹೆತ್ತವರೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದರು.

Continue Reading

ಪ್ರಮುಖ ಸುದ್ದಿ

Snake: ಮಲಗಿದ್ದವನ ಚಡ್ಡಿಯೊಳಗೆ ನುಗ್ಗಿದ ನಾಗರಹಾವು; ಅದು ಹೊರಬರುವ ಮುನ್ನ ಮಾಡಿದ ಅನಾಹುತ ಏನು?

Snake: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಆತನ ಚಡ್ಡಿಯೊಳಗೆ ಕಳೆದಿದ್ದು, ಯುವಕನು ಬೆಳಗ್ಗೆ ಎದ್ದು ನೋಡಿದಾಗ ಬರೀ ಆಘಾತವಲ್ಲ, ಮರ್ಮಾಘಾತವಾಗಿದೆ.

VISTARANEWS.COM


on

Snake
Koo

ನವದೆಹಲಿ: ಮಳೆಗಾಲ ಶುರುವಾಗಿದೆ. ಗ್ರಾಮೀಣ ಭಾಗಗಳಲ್ಲಿ ವಾಸಿಸುವವರು, ಬೆಟ್ಟ-ಗುಡ್ಡಗಳ ಪಕ್ಕದಲ್ಲಿ, ಜಮೀನಿನಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಾವುಗಳು (Snake) ಕಾಣಿಸುವುದು ಮಳೆಯಷ್ಟೇ ಸಹಜವಾಗಿರುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಹಾವುಗಳು ಮಳೆಗಾಲದಲ್ಲೂ ಕಾಣಿಸಿಕೊಳ್ಳುವುದು ವಿರಳ. ಆದರೂ, ಶೂನಲ್ಲೇ, ಹೆಲ್ಮೆಟ್‌ನಲ್ಲೋ, ಕಿಟಕಿಯಲ್ಲೋ ಕಾಣಿಸಿಕೊಳ್ಳುವ ಹಾವುಗಳು ಭಾರಿ ಆತಂಕ ಸೃಷ್ಟಿಸುತ್ತವೆ. ಆದರೆ, ಥಾಯ್ಲೆಂಡ್‌ನಲ್ಲಿ (Thailand) ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೇ ನಾಗರಹಾವೊಂದು ನುಗ್ಗಿದ್ದು, ಆತ ಎಚ್ಚರಗೊಂಡಾಗ ಪ್ರಾಣವು ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ.

ಹೌದು, ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳುತ್ತಲೇ ಯುವಕನಿಗೆ ತನ್ನ ಚಡ್ಡಿಯೊಳಗೆ ಏನೂ ನುಸುಳಿದ, ಅಲುಗಾಡಿದ ಅನುಭವವಾಗಿದೆ.

ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಆಗ ನಾಗರಹಾವು ಕಂಡ ಆತನಿಗೆ ಆಘಾತವಾಗಿದೆ. ಸ್ವಲ್ಪ ಅಲುಗಾಡಿದರೂ ಹಾವು ಕಚ್ಚುತ್ತದೆ ಎಂಬುದನ್ನು ಅರಿತ ಆತನು ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.

ಯುವಕನ ಮನೆಗೆ ಬಂದ ಉರಗ ತಜ್ಞನು ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ. ಹಾವು ನೋಡಿದ ಕ್ಷಣದಿಂದ, ಗೆಳೆಯರಿಗೆ ಕರೆ ಮಾಡಿ, ಅವರು ಉರಗ ತಜ್ಞನನ್ನು ಕರೆದುಕೊಂಡು ಬಂದು, ಆತ ಹಾವನ್ನು ಹೊರಗೆ ತೆಗೆಯುವವರೆಗೂ ಯುವಕನು ಸ್ವಲ್ಪವೂ ಅಲುಗಾಡದೆ ಇದ್ದಿದ್ದು, ಹಾವು ಕೂಡ ಕೋಪದಲ್ಲಿ ಈತನಿಗೆ ಕಚ್ಚದೆ ಇದ್ದಿದ್ದು ಆತನ ಅದೃಷ್ಟವೇ ಸರಿ. ಇನ್ನು, ಯುವಕನ ಚಡ್ಡಿಯಿಂದ ಹಾವನ್ನು ತೆಗೆದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಇನ್ನು ಯುವಕನು ಮಲಗುವ ಮುನ್ನ ಹಾಗೂ ಎದ್ದ ನಂತರ ಚಡ್ಡಿಯನ್ನು ನೋಡಿಕೊಳ್ಳುವುದೇ ಕೆಲಸವಾಗಿದೆ. ಅವನಿಗೆ ಅಷ್ಟು ಆಘಾತವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ನಾಗರಹಾವು ಟಾಯ್ಲೆಟ್ ಕಮೋಡ್ ನೊಳಗೂ ಇರಬಹುದು, ಹುಷಾರ್! ಈ ವಿಡಿಯೊ ನೋಡಿ

Continue Reading

ಪ್ರಮುಖ ಸುದ್ದಿ

Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

Team India :

VISTARANEWS.COM


on

Team India
Koo

ಬೆಂಗಳೂರು: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಮಹಿಳೆಯರ ತಂಡ ದಾಖಲೆ ಬರೆದಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್​ಗೆ 525 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದೆ. ಇದು ಟೆಸ್ಟ್​ ಪಂದ್ಯವೊಂದರಲ್ಲಿ ಮಹಿಳೆಯರ ತಂಡ ದಿನವೊಂದರಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ.

ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು . ಮೊದಲ ದಿನ ಭಾರತವು 98 ಓವರ್ ಆಡಿ ಬೃಹತ್ ಮೊತ್ತ ಪೇರಿಸಿತು. ಈ ಮೂಲಕ ನಾಯಕಿಯ ನಿರ್ಧಾರವು ಸಂಪೂರ್ಣವಾಗಿ ಸಮರ್ಥನೀಯವಾಗಿತ್ತು. ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ದ್ವಿಶತಕ ಬಾರಿಸಿದರೆ, ಸ್ಮೃತಿ ಮಂಧಾನಾ ಶತಕ ಬಾರಿಸಿದರು.

ಬಲಗೈ ಬ್ಯಾಟರ್​ ಶಫಾಲಿ ಮಹಿಳೆಯರ ಟೆಸ್ಟ್​​ನಲ್ಲಿ ವೇಗವಾಗಿ ದ್ವಿಶತಕ ದಾಖಲಿಸಿದ ಸಾಧನೆಯೂ ಮಾಡಿದ್ದಾರೆ. ಅವರು ಕೇವಲ 198 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ದ್ವಿಶತಕವನ್ನು ಗಳಿಸಿದರು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ಸ್ 248 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಇದುವರೆಗೆ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದರು.

ಮಿಥಾಲಿ ರಾಜ್ ನಂತರ ಮಹಿಳಾ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವರ್ಮಾ 197 ಎಸೆತಗಳಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್ ಗಳ ಸಹಾಯದಿಂದ 205 ರನ್ ಗಳಿಸಿದ್ದಾರೆ. ವರ್ಮಾ ಅವರಲ್ಲದೆ, ಅವರ ಆರಂಭಿಕ ಪಾಲುದಾರೆ ಸ್ಮೃತಿ ಮಂದಾನ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ . 52ನೇ ಓವರ್​​ನಲ್ಲಿ ಡೆಲ್ಮಿ ಟಕರ್ ಅವರನ್ನು ಔಟ್ ಮಾಡುವ ಮೊದಲು 149 ರನ್ ಗಳಿಸಿದ್ದರು. ಔಟಾಗುವ ಮೊದಲು, ಮಂದಾನಾ ಮೊದಲ ವಿಕೆಟ್​ಗೆ ವರ್ಮಾ ಅವರೊಂದಿಗೆ ರನ್​ಗಳ ದಾಖಲೆಯ ಜೊತೆಯಾಟ ಹಂಚಿಕೊಂಡಿದ್ದರು.. ಜೆಮಿಮಾ ರೋಡ್ರಿಗಸ್ ಕೂಡ ಅರ್ಧಶತಕ ಗಳಿಸಿ 55 ರನ್ ಗಳಿಸಿದ ನಂತರ ನಿರ್ಗಮಿಸಿದರು. ಕೌರ್ 42 ಮತ್ತು ರಿಚಾ ಘೋಷ್ 43 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ಭಾರತಕ್ಕೆ ದಾಖಲೆಯ ದಿನ

ಅದ್ಭುತ ಬ್ಯಾಟಿಂಗ್ ಪ್ರದರ್ಶನವು ಭಾರತಕ್ಕೆ ಹಲವಾರು ಸ್ಮರಣೀಯ ದಾಖಲೆಗಳನ್ನು ಮುರಿಯಲು ಸಹಾಯ ಮಾಡಿತು. ಪುರುಷರ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡದ ದಾಖಲೆ ಅವರು ಮುರಿದಿದ್ದಾರೆ. 2002ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ 509 ರನ್ ಗಳಿಸಿತ್ತು.

ಇದನ್ನೂ ಓದಿ: GR vishwanath : ಬೆಂಗಳೂರು ನಗರ ವಿವಿಯಿಂದ ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್​ಗೆ ಗೌರವ ಡಾಕ್ಟರೇಟ್

ಮಹಿಳಾ ಕ್ರಿಕೆಟ್​ನಲ್ಲಿ ಒಂದು ದಿನದಲ್ಲಿ 500 ರನ್ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 431 ರನ್ ಗಳಿಸಿದ್ದು ಮಹಿಳಾ ಕ್ರಿಕೆಟ್​​ನಲ್ಲಿ ತಂಡವೊಂದರ ಗರಿಷ್ಠ ಒಂದು ದಿನ ಸ್ಕೋರ್ ಆಗಿದೆ. ಈ ವರ್ಷ ಭಾರತ ಒಂದೇ ದಿನದಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು ಎರಡನೇ ಬಾರಿ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು.

ಮಹಿಳಾ ಟೆಸ್ಟ್ ನಲ್ಲಿ ಒಂದು ದಿನದ ಆಟದಲ್ಲಿ ಅತಿ ಹೆಚ್ಚು ರನ್ ಗಳು

  • 525 ರನ್​ : ಭಾರತ ಮಹಿಳಾ (98 ಓವರ್​ಗಳಲ್ಲಿ 525/4) ದಕ್ಷಿಣ ಆಫ್ರಿಕಾ, ವಿರುದ್ಧ 2024 – ಚೆನ್ನೈ
  • 475 ರನ್​: ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ, 1935 – ಕ್ರೈಸ್ಟ್ಚರ್ಚ್
  • 449 ರನ್​ : ಇಂಗ್ಲೆಂಡ್ ಮಹಿಳಾ (245-9), ಆಸ್ಟ್ರೇಲಿಯಾ ವಿರುದ್ಧ, 2022 – ಕ್ಯಾನ್ಬೆರಾ
  • 410 ರನ್​: ಭಾರತ ತಂಡ, ಇಂಗ್ಲೆಂಡ್ ವಿರುದ್ಧ , 2023 – ನವೀ ಮುಂಬೈ
Continue Reading

ಆರೋಗ್ಯ

What Is Stage 3 Breast Cancer: ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು? ಇದರ ಲಕ್ಷಣಗಳೇನು?

What is Stage 3 Breast Cancer?: ಹಿರಿತೆರೆ ಮತ್ತು ಕಿರುತೆರೆ ನಟಿ ಹಿನಾ ಖಾನ್‌ ಅವರಿಗೆ ಮೂರನೇ ಹಂತದ ಸ್ತನ ಕ್ಯಾನ್ಸರ್‌ ಇದೆಯೆಂಬ ಸುದ್ದಿ ಅಧಿಕೃತ ಆಗುತ್ತಿದ್ದಂತೆಯೇ, ಈ ಕುರಿತಾದ ಚರ್ಚೆಗಳು ಇನ್ನಷ್ಟು ತೀವ್ರವಾಗುತ್ತಿವೆ. ಮೂರನೇ ಹಂತದ ಕ್ಯಾನ್ಸರ್‌ ಎಂದರೇನು? ಅದು ಗುಣವಾಗುತ್ತದೆಯೇ? ಅದಕ್ಕೆ ಚಿಕಿತ್ಸೆಯೇನು ಎಂಬೆಲ್ಲ ಆತಂಕಗಳ ನಡುವೆ, ಮಹಿಳೆಯರಿಗೆ ಉಪಯುಕ್ತವಾಗುವ ಒಂದಿಷ್ಟು ಮಾಹಿತಿ ಇಲ್ಲಿದೆ.

VISTARANEWS.COM


on

Breast Cancer Awareness
Koo

ಬಾಲಿವುಡ್‌ ಮತ್ತು ಕಿರುತೆರೆ (What is Stage 3 Breast) Cancer? ನಟಿ ಹಿನಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಮೂರನೇ ಹಂತದಲ್ಲಿರುವ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಮಂದಿಗೆ ಕ್ಯಾನ್ಸರ್‌ ಎಂಬ ಹೆಸರು ಕೇಳುತ್ತಿದ್ದಂತೆಯೇ, ಮರಣ ಶಾಸನದಂತೆ ಕೇಳುತ್ತದೆ. ಅದರಲ್ಲೂ ಮೂರನೇ ಹಂತ ಎಂಬುದು ಇನ್ನೂ ಕಷ್ಟವಾಗುತ್ತದೆ. ಹಿನಾ ಖಾನ್ ಅವರಿಗೆ ರೋಗ ಆರಂಭಿಕ ಹಂತವನ್ನು ದಾಟಿದೆ ಎಂಬುದು ಹೌದು. ಆದರೆ ರೋಗಮುಕ್ತರಾಗುವ ಆಸೆಯನ್ನು ತ್ಯಜಿಸುವ ಅಗತ್ಯವಿಲ್ಲ. ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು ಎಂಬ ವಿವರಗಳು ಇಲ್ಲಿವೆ.

hina khan

ಹಂತಗಳೆಂದರೇನು?

ಕ್ಯಾನ್ಸರ್‌ ಗಡ್ಡೆ ಎಷ್ಟು ದೊಡ್ಡದಿದೆ ಮತ್ತು ಎಲ್ಲೆಲ್ಲಿ ಹಬ್ಬಿದೆ ಎನ್ನುವುದರ ಆಧಾರದ ಮೇಲೆ ಅದನ್ನು ಭಿನ್ನ ಹಂತಗಳನ್ನಾಗಿ ವಿಂಗಡಿಸಲಾಗುತ್ತದೆ. ಮೂರನೇ ಹಂತವೆಂದರೆ ಆರಂಭದ ಹಂತಗಳನ್ನು ದಾಟಿ ಬೆಳೆದಿದ್ದು, ಸ್ತನಗಳಿಂದ ಹೊರಗೂ ಕ್ಯಾನ್ಸರ್‌ ಹರಡಿದೆ ಎಂದು ಹೇಳಬಹುದು. ಆದರೆ ದೇಹದಲ್ಲಿ ಎಲ್ಲೆಲ್ಲೋ ಇರುವಂಥ ಅಂಗಾಂಗಗಳಿಗೆ ಇನ್ನೂ ಹರಡಿಲ್ಲ. ಸುತ್ತಮುತ್ತಲಿನ ಭಾಗದಲ್ಲಿ ಮಾತ್ರವೇ ವಿಸ್ತರಿಸಿದೆ ಎಂದು ಅರ್ಥ.

ಮೂರನೇ ಹಂತದಲ್ಲೂ ಮೂರು ಉಪವಿಭಾಗಗಳನ್ನು ವೈದ್ಯ ವಿಜ್ಞಾನ ಮಾಡುತ್ತದೆ. ಮೊದಲನೆಯದು 3ಎ ಹಂತ. ಇದರಲ್ಲಿ-

  • ಸ್ತನಗಳಲ್ಲಿ ಯಾವುದೇ ಗಡ್ಡೆಗಳಿಲ್ಲ. ಆದರೆ 4ರಿಂದ 9 ದುಗ್ಧ ರಸ ಗ್ರಂಥಿ (lymph nodes) ಗಳಲ್ಲಿ ಕ್ಯಾನ್ಸರ್‌ ಕೋಶಗಳು ಕಾಣುತ್ತಿವೆ.
  • 5 ಸೆಂ.ಮೀ. ಗಿಂತ ದೊಡ್ಡದಾದ ಕ್ಯಾನ್ಸರ್‌ನ ಗಡ್ಡೆಯಿದ್ದು, ಲಿಂಫ್‌ ನೋಡ್‌ಗಳಲ್ಲಿ ಸಣ್ಣದಾದ ಕ್ಯಾನ್ಸರ್‌ ಕೋಶಗಳ ಗೊಂಚಲುಗಳಿವೆ.
  • 5 ಸೆಂ.ಮೀ.ಗಿಂತ ದೊಡ್ಡದಾದ ಕ್ಯಾನ್ಸರ್‌ ಗಡ್ಡೆಯಿದ್ದು, ಕಂಕುಳಿನ 3 ಲಿಂಫ್‌ ನೋಡ್‌ಗಳಿಗೆ ಹರಡಿದೆ. ಎದೆಯ ಮೂಳೆಗಳ ದುಗ್ಧ ರಸ ಗ್ರಂಥಿಗಳಿಗೂ ಹರಡಿರಬಹುದು.
  • ಎರಡನೇ ಹಂತ 3ಬಿ- ಎದೆಯ ಗೋಡೆಗಳಿಗೆ ಅಥವಾ ಚರ್ಮಕ್ಕೆ ಅಂಟಿ, ಉರಿಯೂತ ಕಾಣಿಸಿರಬಹುದು. ಜೊತೆಗೆ 9 ಲಿಂಫ್‌ ನೋಡ್‌ಗಳವರೆಗೆ ಹರಡಿರಬಹುದು.
  • ಮೂರನೇ ಹಂತ 3ಸಿ- ಇದರಲ್ಲಿ 10ಕ್ಕಿಂತ ಹೆಚ್ಚು ಲಿಂಫ್‌ ನೋಡ್‌ಗಳಿಗೆ ಕ್ಯಾನ್ಸರ್‌ ಹರಡಿದೆ. ಕಾಲರ್‌ಬೋನ್‌ ಕೆಳಗೆ ಮೇಲೆಲ್ಲ ವ್ಯಾಪಿಸಿದೆ.

ಇದಕ್ಕೇನು ಕಾರಣ?

ಇದಕ್ಕೆ ನಿಖರವಾದ ಕಾರಣವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ. ಆದರೆ ಇದರ ಭೀತಿಯನ್ನು ಹೆಚ್ಚಿಸುವಂಥ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

  • ಆನುವಂಶಿಕ ಕಾರಣಗಳು: BRCA1 ಮತ್ತು BRCA2 ವಂಶವಾಹಿಗಳು ಬದಲಾಗುವುದು.
  • ಕೌಟುಂಬಿಕ ಹಿನ್ನೆಲೆ: ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್‌ ಇದ್ದರೆ ಭೀತಿ ಹೆಚ್ಚು
  • ವಯಸ್ಸು: ವಯಸ್ಸು ಹೆಚ್ಚುತ್ತಿದ್ದಂತೆ ಈ ತೊಂದರೆಗಳು ಹತ್ತಿರವಾಗಬಹುದು
  • ಹಾರ್ಮೋನು: ಈಸ್ಟ್ರೋಜೆನ್‌ನಂಥ ಚೋದಕಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದು
  • ಜೀವನಶೈಲಿ: ಬೊಜ್ಜು, ಜಡ ಜೀವನ, ಆಲ್ಕೋಹಾಲ್‌ನಂಥ ಚಟಗಳು ಈ ರೋಗವನ್ನು ಹತ್ತಿರ ತರುತ್ತವೆ
Breast Cancer picture

ಲಕ್ಷಣಗಳೇನು?

ಕ್ಯಾನ್ಸರ್‌ನ ಮೂರನೇ ಹಂತದಲ್ಲಿ ಸ್ತನಗಳಲ್ಲಿ ಕಾಣುವಂಥ ಲಕ್ಷಣಗಳೇನು ಎಂಬುದನ್ನು ತಿಳಿಯೋಣ. ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ಗಡ್ಡೆ ಕಾಣಿಸುತ್ತದೆ. ಸ್ತನಗಳು ಮೇಲ್ನೋಟಕ್ಕೆ ಬದಲಾದಂತೆ ಗೋಚರಿಸುತ್ತವೆ. ಸ್ತನಗಳಲ್ಲಿ ಸ್ರಾವ ಕಾಣಬಹುದು. ನೋವು, ಊತವೂ ಇದ್ದೀತು. ಚರ್ಮ ಕೆಂಪಾಗಿ ಹೆಕ್ಕಳಿಕೆ ಎದ್ದಂತೆ ಕಾಣಬಹುದು. ಇಂಥ ಯಾವುದೇ ಲಕ್ಷಣಗಳು ಕಂಡರೂ ತುರ್ತಾಗಿ ವೈದ್ಯರನ್ನು ಕಾಣಬೇಕು.

ತಪಾಸಣೆ

ಮೊದಲಿಗೆ ವೈದ್ಯರು ದೈಹಿಕ ಬದಲಾವಣೆಗಳನ್ನು ತಪಾಸಣೆ ಮಾಡುತ್ತಾರೆ. ಮೊಮೊಗ್ರಾಮ್‌, ಅಲ್ಟ್ರಾಸೌಂಡ್‌ಗಳ ಮೂಲಕ ಈ ಗಡ್ಡೆಗಳು ಮತ್ತು ಕೋಶಗಳನ್ನು ಪರಿಶೀಲಿಸಲಾಗುತ್ತದೆ. ಇವುಗಳ ಸಣ್ಣ ಭಾಗವನ್ನು ತೆಗೆದು ಬಯಾಪ್ಸಿ ಮಾಡಲಾಗುತ್ತದೆ. ದುಗ್ಧರಸ ಗ್ರಂಥಿಗಳಿಗೆ ಅಂಟಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: Hina Khan: ಬಿಗ್ ಬಾಸ್ ಸ್ಪರ್ಧಿ, ʻಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಧಾರಾವಾಹಿ ಖ್ಯಾತಿಯ ನಟಿಗೆ ಸ್ತನ ಕ್ಯಾನ್ಸರ್!

ಚಿಕಿತ್ಸೆ

ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಗಳನ್ನು ತೆಗೆಯಲಾಗುತ್ತದೆ. ಕೆಲವೊಮ್ಮೆ ಸ್ತನಗಳನ್ನೇ ಸಂಪೂರ್ಣವಾಗಿ ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ. ತೀವ್ರ ಶಕ್ತಿಯ ಕಿರಣಗಳ ಮೂಲಕ (ರೇಡಿಯೇಶನ್)‌ ಕ್ಯಾನ್ಸರ್‌ ಕೋಶಗಳನ್ನು ಸಾಯಿಸಲಾಗುತ್ತದೆ. ಇರುವ ಕೋಶಗಳನ್ನು ಸಾಯಿಸಿ, ಮುಂದೆ ಹರಡದಂತೆ ಮಾಡಲು ಕಿಮೊ ಸಹ ಅಗತ್ಯ. ಉಳಿದಂತೆ ಹಾರ್ಮೋನ್‌ ಥೆರಪಿ, ಇಮ್ಯುನೋಥೆರಪಿಯಂಥ ಚಿಕಿತ್ಸೆಗಳನ್ನು ವೈದ್ಯರು ನಿರ್ಧರಿಸುತ್ತಾರೆ.

Continue Reading
Advertisement
Sonakshi Sinha
Latest5 mins ago

Sonakshi Sinha: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

Snake
ಪ್ರಮುಖ ಸುದ್ದಿ6 mins ago

Snake: ಮಲಗಿದ್ದವನ ಚಡ್ಡಿಯೊಳಗೆ ನುಗ್ಗಿದ ನಾಗರಹಾವು; ಅದು ಹೊರಬರುವ ಮುನ್ನ ಮಾಡಿದ ಅನಾಹುತ ಏನು?

Team India
ಪ್ರಮುಖ ಸುದ್ದಿ12 mins ago

Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

Parliament Sessions
ದೇಶ19 mins ago

Parliament Sessions: ಅಧಿವೇಶನದ ವೇಳೆ ತಲೆಸುತ್ತಿ ಬಿದ್ದ ಸಂಸದೆ; ವಿಡಿಯೋ ಇದೆ

Breast Cancer Awareness
ಆರೋಗ್ಯ34 mins ago

What Is Stage 3 Breast Cancer: ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು? ಇದರ ಲಕ್ಷಣಗಳೇನು?

Nita Ambani
ವಾಣಿಜ್ಯ41 mins ago

Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?

Monsoon Footwear Fashion
ಫ್ಯಾಷನ್55 mins ago

Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌

Narayana Health City Performs 300 Robotic Knee Replacements in Six Months
ಬೆಂಗಳೂರು58 mins ago

Narayana Health: ನಾರಾಯಣ ಹೆಲ್ತ್ ಸಿಟಿಯಲ್ಲಿ 6 ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳು

Post Office
ಪ್ರಮುಖ ಸುದ್ದಿ1 hour ago

Post Office: ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ; ಬಡ್ಡಿಯ ಪಟ್ಟಿ ಇಲ್ಲಿದೆ

Congress government
ಕರ್ನಾಟಕ1 hour ago

Congress government: ಕೈ ಶಾಸಕರಿಂದಲೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದ ಆರ್.ಅಶೋಕ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌