IND VS AUS: ಮೂರನೇ ಟೆಸ್ಟ್​ ಪಂದ್ಯ ಗೆಲ್ಲಲು ಪಣ ತೊಟ್ಟ ಆಸ್ಟ್ರೇಲಿಯಾ - Vistara News

ಕ್ರಿಕೆಟ್

IND VS AUS: ಮೂರನೇ ಟೆಸ್ಟ್​ ಪಂದ್ಯ ಗೆಲ್ಲಲು ಪಣ ತೊಟ್ಟ ಆಸ್ಟ್ರೇಲಿಯಾ

ಭಾರತ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಆಟಗಾರರು ದಿಲ್ಲಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

VISTARANEWS.COM


on

IND VS AUS: Australia bets to win the third Test match
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಈಗಾಗಲೇ ಭಾರತ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡೂ ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ ಮೂರನೇ ಪಂದ್ಯವನ್ನಾಡು ಸಜ್ಜಾಗಿದೆ. ಭಾರತ ಮತ್ತು ಆಸೀಸ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯ ಮಾರ್ಚ್​ 1 ರಿಂದ ಇಂದೋರ್​ನಲ್ಲಿ ಆರಂಭವಾಗಲಿದೆ. ಆಸೀಸ್​ ಈ ಪಂದ್ಯದಲ್ಲಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಂತೆ ಕಾಣುತ್ತಿದೆ.

ಹೌದು, ಭಾರತೀಯ ಆಟಗಾರರು ದಿಲ್ಲಿ ಟೆಸ್ಟ್​ ಮುಗಿದ ಬಳಿಕ ತಮ್ಮ ಮನೆಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಆದರೆ ಆಸೀಸ್ ಆಟಗಾರರು ಮಾತ್ರ ಅರುಣ್​ ಜೇಟ್ಲಿ ಮೈದಾನದಲ್ಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.​ ದಿನಕ್ಕೆ 4 ರಿಂದ 5 ಗಂಟೆಗಳ ಕಾಲ ಅಭ್ಯಾಸ ಮಾಡುವ ಮೂಲಕ ಭಾರತವನ್ನು ಮೂರನೇ ಟೆಸ್ಟ್​ನಲ್ಲಿ ಮಣಿಸುವ ಯೋಜನೆಯಲ್ಲಿದ್ದಾರೆ.

ಮೂರನೇ ಟೆಸ್ಟ್ ಪಂದ್ಯವನ್ನಾಡಲು ಆಸ್ಟ್ರೇಲಿಯಾ ಭಾನುವಾರ ದೆಹಲಿಯಿಂದ ಇಂದೋರ್​ಗೆ ಪ್ರಯಾಣಿಸಲಿದೆ. ಅದಕ್ಕೂ ಮುನ್ನ ದೆಹಲಿಯ ಸ್ಪಿನ್ ಪಿಚ್‌ಗನಲ್ಲಿ ಆಸೀಸ್​ ಆಟಗಾರರು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ ಮತ್ತು ಆರ್​.ಅಶ್ವಿನ್​ ದಾಳಿಯನ್ನು ಸಮರ್ಥವಾಗಿ ಎದರಿಸಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ IND VS AUS: ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗುಳಿದ ಪ್ಯಾಟ್​ ಕಮಿನ್ಸ್​; ಸ್ಟೀವನ್​ ಸ್ಮಿತ್​ಗೆ​ ನಾಯಕತ್ವ

ಮೂರನೇ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ಕ್ಯಾಮರೂನ್​ ಗ್ರೀನ್ ಮತ್ತು ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಕಣಕ್ಕಿಳಿಯುವುದು ಖಚಿತವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs SL: ಭಾರತ-ಲಂಕಾ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ?; ಇಲ್ಲಿದೆ ಉತ್ತರ

IND vs SL: ದ್ವಿಪಕ್ಷೀಯ ಏಕದಿನ ಪಂದ್ಯದಲ್ಲಿ ಸೂಪರ್​ ಓವರ್ ಆಡಿಸದಿದ್ದರೂ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್​ ಓವರ್​ ನಡೆಸಲಾಗುತ್ತದೆ.

VISTARANEWS.COM


on

IND vs SL
Koo

ಕೊಲಂಬೊ: ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ(IND vs SL) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ಪಂದ್ಯ ಟೈಗೊಂಡರೂ ಕೂಡ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಏಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಿಗೆ ಕಾಡಿದೆ. ಇದಕ್ಕೆ ಉತ್ತರ ಇಲ್ಲಿದೆ.

ಲಂಕಾ ಮತ್ತು ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯ ಟೈ ಗೊಂಡಾಗ ಸೂಪರ್​ ಓವರ್​ ಆಡಿಸಲಾಗಿತ್ತು ಆದರೆ, ಏಕದಿನ ಪಂದ್ಯ ಟೈ ಆದಾಗ ಏಕೆ ಸೂಪರ್​ ಓಪರ್​ ಆಡಿಸಲಿಲ್ಲ ಎಂದು ಅನೇಕ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸೂಪರ್​ ಓವರ್ ಆಡಿಸದೇ ಇರಲು ಕೂಡ ಒಂದು ಕಾರಣವಿದೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ನಿಯಮಗಳ ಪ್ರಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಏಕದಿನ ಸರಣಿಯ ಪಂದ್ಯ ಟೈ ಆದರೆ ಇದನ್ನು ಟೈ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾವುದೇ ಸೂಪರ್ ಓವರ್​ ಆಡಿಸಲಾಗುವುದಿಲ್ಲ. ಆದರೆ, ಈ ನಿಯಮ ಟಿ20 ಕ್ರಿಕೆಟ್​ಗೆ ಅನ್ವಯವಾಗುವುದಿಲ್ಲ. ಇಲ್ಲಿ ಸೂಪರ್​ ಓವರ್​ ಆಡಿಸಲಾಗುತ್ತದೆ. ಸೂಪರ್​ ಓವರ್​ ಕೂಡ ಟೈಗೊಂಡರೆ ಮತ್ತೊಂದು ಸೂಪರ್​ ಓವರ್​ ಆಡಿಸಲಾಗುತ್ತದೆ. ಫಲಿತಾಂಶ ಬರುವ ತನಕವೂ ಸೂಪರ್ ಓವರ್​ ಆಡಿಸಲಾಗುತ್ತದೆ.​ ನಿನ್ನೆಯ ಪಂದ್ಯ ದ್ವಿಪಕ್ಷೀಯ ಸರಣಿಯ ಭಾಗವಾಗಿತ್ತು, ಆದ್ದರಿಂದ ಯಾವುದೇ ಸೂಪರ್ ಓವರ್ ಆಡಿಸಲಿಲ್ಲ. ಇನ್ನುಳಿದ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದವರು ಸರಣಿಯ ವಿಜೇತರಾಗಲಿದ್ದಾರೆ. ಒಂದೊಂದು ಪಂದ್ಯ ಗೆದ್ದರೆ ಸರಣಿ ಸಮಬಲವಾಗಲಿದೆ.

ಇದನ್ನೂ ಓದಿ IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

ಐಸಿಸಿ ಟೂರ್ನಿಯಲ್ಲಿ ಸಾಧ್ಯ

ದ್ವಿಪಕ್ಷೀಯ ಏಕದಿನ ಪಂದ್ಯದಲ್ಲಿ ಸೂಪರ್​ ಓವರ್ ಆಡಿಸದಿದ್ದರೂ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್​ ಓವರ್​ ನಡೆಸಲಾಗುತ್ತದೆ.

ರೋಚಕ ಪಂದ್ಯ

ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

ಭಾರತ ಪರ ಚೇಸಿಂಗ್​ನಲ್ಲಿ ನಾಯಕ ರೋಹಿತ್​ ಶರ್ಮ 47 ಎಸೆತಗಳಿಂದ 58 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಉಳಿದಂತೆ ಕೆ.ಎಲ್​ ರಾಹುಲ್​ 31, ಅಕ್ಷರ್​ ಪಟೇಲ್​ 33 ರನ್​ ಬಾರಿಸಿದರು.

Continue Reading

ಕ್ರೀಡೆ

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Rohit Sharma: ರೋಹಿತ್​ ತಮ್ಮ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ಸಿಕ್ಸರ್​​ ಬಾರಿಸುವ ಮೂಲಕ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು.

VISTARANEWS.COM


on

Rohit Sharma
Koo

ಕೊಲಂಬೊ: ಶ್ರೀಲಂಕಾ(Sri Lanka vs India 1st ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ಹಕವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ದಾಖಲೆಯ ಪಟ್ಟಿ ಹೀಗಿದೆ.

ಸಿಕ್ಸರ್​ ದಾಖಲೆ

47 ಎಸೆತಗಳಿಂದ 58 ರನ್​ ಬಾರಿಸಿದ ರೋಹಿತ್​ ತಮ್ಮ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್​ ಬಾರಿಸಿದರು. ಈ ಮೂರು ಸಿಕ್ಸರ್​​ ಬಾರಿಸಿದ ವೇಳೆ ರೋಹಿತ್​ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್‌ ಮಾರ್ಗನ್​(233 ಸಿಕ್ಸರ್​) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್​)​ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್​ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರು


ರೋಹಿತ್​ ಶರ್ಮ-234 ಸಿಕ್ಸರ್​

ಇಯಾನ್​ ಮಾರ್ಗನ್​-233 ಸಿಕ್ಸರ್

ಮಹೇಂದ್ರ ಸಿಂಗ್​ ಧೋನಿ-211 ಸಿಕ್ಸರ್​

ರಿಕಿ ಪಾಂಟಿಂಗ್​-171 ಸಿಕ್ಸರ್​

ಬ್ರೆಂಡನ್​ ಮೆಕಲಮ್​-170 ಸಿಕ್ಸರ್​ 

ಆರಂಭಿಕನಾಗಿ 15 ಸಾವಿರ ರನ್​

ರೋಹಿತ್​ ಶರ್ಮ 58 ರನ್​ ಬಾರಿಸುಮ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಅತೀ ವೇಗವಾಗಿ 15 ಸಾವಿರ ರನ್ ಕಲೆಹಾಕಿದ ವಿಶ್ವದ 2ನೇ, ಒಟ್ಟಾರೆಯಾಗಿ 10ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಡೇವಿಡ್ ವಾರ್ನರ್ 15 ಸಾವಿರ ರನ್ ಪೂರೈಸಲು 361 ಇನಿಂಗ್ಸ್​ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಅತೀ ವೇಗವಾಗಿ 15000 ರನ್ ಕಲೆಹಾಕಿದ ವಿಶ್ವದ 2ನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದರು. ಇದೀಗ ರೋಹಿತ್​ ಕೇವಲ 352 ಇನಿಂಗ್ಸ್​ಗಳ ಮೂಲಕ 15 ಸಾವಿರ ರನ್ ಕಲೆಹಾಕಿ ವಾರ್ನರ್​ ದಾಖಲೆ ಹಿಂದಿಕ್ಕಿದ್ದಾರೆ. ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ ಆರಂಭಿಕನಾಗಿ 331 ಇನಿಂಗ್ಸ್​ಗಳ ಮೂಲಕ ಈ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ Rohit Sharma : ಟಿ20 ನಿವೃತ್ತಿಯಲ್ಲ, ಅದು ವಿಶ್ರಾಂತಿ; ಕೌತುಕ ಮೂಡಿಸಿದ ರೋಹಿತ್ ಶರ್ಮಾ ಹೇಳಿಕೆ

ಪಂದ್ಯ ಟೈ


ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್​ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್​ದೀಪ್​ ಸಿಂಗ್​ ಸತತವಾಗಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್​ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.

Continue Reading

ಪ್ರಮುಖ ಸುದ್ದಿ

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Paris Olympics 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Oylmpics 2024 ) ವಿಶೇಷವಾದ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲ್​ಗಳ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಆಸೀಸ್ ತಂಡದ ವಿರುದ್ಧ 52 ವರ್ಷಗಳ ಬಳಿಕ ದೊರೆತ ಜಯವಾಗಿದೆ. ಅಲ್ಲದೆ ಕಳೆದ ಒಂದು ವರ್ಷದ 8ನೇ ಮುಖಾಮುಖಿಯಲ್ಲಿ ಮೊದಲ ವಿಜಯವೂ ಹೌದು. ಆದರೆ, ಈ ಸಂದರ್ಭವನ್ನೇ ಮುಂದಿಟ್ಟುಕೊಂಡು ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೇವಡಿ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹಚ್ಚಲು ಕಾರಣವಾಗಿದೆ. ಎರಡೂ ತಂಡಗಳ ಅಭಿಮಾನಿಗಳು ಈ ವಿಚಾರವಾಗಿ ಪರಸ್ಪರ ದೂಷಣೆಗಳನ್ನು ಶುರು ಮಾಡಿದ್ದಾರೆ.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ. 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಸಿಎಸ್​ಕೆಯನ್ನು ಸೋಲಿಸಿದ ಬಳಿಕ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದಿರುವ ಮಾತಿನ ಸಮರ ದೊಡ್ಡ ಮಟ್ಟದ್ದರು. ಇಂಥ ಸೂಕ್ಷ್ಮವನ್ನು ಮುಂದಿಟ್ಟುಕೊಂಡ ಆರ್​ಸಿಬಿ ಸೋಶಿಯಲ್ ಮೀಡಿಯಾದ ಅಡ್ಮಿನ್​ ಆ ತಂಡದ ಕಾಲೆಳೆದಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಕೆಂಪು ದಿರಸನ್ನು ಹಾಕಿಕೊಂಡರೆ, ಸಿಎಸ್​ಕೆ ಹಳದಿ ಬಣ್ಣವನ್ನು ಧರಿಸುತ್ತದೆ. ಆರ್​ಸಿಬಿ ಆರಂಭದಿಂದ ಇಲ್ಲಿಯವರೆಗೆ ಹಲವು ಭಾರಿ ತಮ್ಮ ಜೆರ್ಸಿಯನ್ನು ಬದಲಾಯಿಸಿದೆ. ಆದರೆ ಸಿಎಸ್​ಕೆ ಎಂದಿದೂ ತಮ್ಮ ಯೆಲ್ಲೋ ಬಣ್ಣವನ್ನು ಬದಲಾಯಿಸಿಲ್ಲ. ಅದೇ ಬಣ್ಣದಲ್ಲಿ ಆಡಿ ಐದು ಕಪ್​ಗಳನ್ನು ಗೆದ್ದಿದೆ.

ಆರ್​​ಸಿಬಿಯ ಸೋಶಿಯಲ್​ ಮೀಡಿಯಾ ಮೆಸೇಜ್ ನೋಡಿದ ಸಿಎಸ್​ಕೆ ಅಭಿಮಾನಿಗಳು ಕೆರಳಿದ್ದಾರೆ. ಟ್ವೀಟ್​ನ ಪ್ರತಿಕ್ರಿಯೆಯೂ ಆಸಕ್ತಿಕಾರವಾಗಿದೆ. ಯೆಲ್ಲೊ ಜೆರ್ಸಿಯಿಂದ ಹೊಡೆಸಿಕೊಳ್ಳುವುದು ಕೂಡ ಖುಷಿಯ ವಿಚಾರ ಅಲ್ವೇ ಎಂದು ಒಬ್ಬರು ಕೇಳಿದರೆ, ವಿಷಲ್​ಪೋಡು ಸಿಎಸ್​​ಕೆ ಫ್ಯಾನ್​ ಪೇಜ್​, ನಾವು ಹಳದಿ ಬಣ್ಣ ಧರಿಸುವುದಕ್ಕೆ ಖುಷಿಯಿದೆ. ಆ ಕೆಂಪು ಮತ್ತು ಬಂಗಾರದ ಬಣ್ಣ ಧರಿಸಿದ್ದರೆ ನಮ್ಮ ಕತೆ ಕೇಳುವುದೇ ಬೇಡ ಎಂದು ತಿರುಗೇಟು ಕೊಟ್ಟಿದೆ.

ಹಾಖಿ ಪಂದ್ಯದಲ್ಲಿ ಏನಾಯಿತು?

ಒಲಿಂಪಿಕ್ಸ್​ನ ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ: Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

Continue Reading

ಕ್ರಿಕೆಟ್

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

IND vs SL ODI: ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

VISTARANEWS.COM


on

IND vs SL ODI
Koo

ಕೊಲೊಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ (IND vs SL ODI ) ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿದೆ. ಕೊನೇ ಹಂತದಲ್ಲಿ ನಡೆದ ನಾಟಕೀಯ ತಿರುವು ಮೂಲಕ ಲಂಕಾ ತಂಡವವು ಭಾರತಕ್ಕೆ ಗೆಲುವು ನಿರಾಕರಿಸಿತು. ಅಂದ ಹಾಗೆ ಇದು ಲಂಕಾ ಪ್ರವಾಸದಲ್ಲಿ ಸತತವಾಗಿ ಎರಡನೇ ಪಂದ್ಯ ಟೈ ಆಗುತ್ತಿರುವುದು. ಟಿ20 ಸರಣಿಯ ಮೂರನೇ ಪಂದ್ಯ ಟೈ ಆಗಿತ್ತು. ಬಳಿಕ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಅದು ಮುಗಿದು ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮೂಡಿ ಬಂದಿರುವುದು ಕಾಕತಾಳೀಯವಾಗಿದೆ. ಶಿವಂ ದುಬೆ ಫೋರ್ ಬಾರಿಸಿದಾಗ ಭಾರತದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಆದರೆ, ನಂತರದ ಎರಡು ಎಸೆತಗಳಲ್ಲಿ ಎರಡು ವಿಕೆಟ್​ ಕಳೆದುಕೊಂಡಾಗ ಭಾರತದ ಡ್ರೆಸಿಂಗ್​ ರೂಮ್ ಆಘಾತಕ್ಕೆ ಒಳಗಾಯಿತು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 101ರನ್​ಗಳಿ 5 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ಚೇತರಿಸಿಕೊಂಡು 230 ರನ್​ಗಳ ಹೋರಾಟದ ಮೊತ್ತವನ್ನು ದಾಖಲಿಸಿತು. ದುನಿತ್ ವೆಲ್ಲಾಲಗೆ ಅವರ ಚೊಚ್ಚಲ ಅರ್ಧಶತಕ ಆ ತಂಡಕ್ಕೆ ನೆರವಾಯಿತು. ಇದಕ್ಕೆ ಉತ್ತರವಾಗಿ ರೋಹಿತ್ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಭಾರತವು ಮೊದಲ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಆದರೆ ನಂತರದಲ್ಲಿ ಶ್ರೀಲಂಕಾದ ಸ್ಪಿನ್ನರ್ ಗಳು ಭಾರತದ ವೇಗಕ್ಕೆ ಬ್ರೇಕ್ ಹಾಕಿದರು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿದ ನಂತರ ಔಟಾದರು. ಅನುಭವಿ ಜೋಡಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ಆಡಲಿಲ್ಲ. ಶ್ರೀಲಂಕಾ ಅವರನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಭಾರತ ತಂಡ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಂಡಿತು. ಕೆಎಲ್ ರಾಹುಲ್ (31) ಮತ್ತು ಅಕ್ಷರ್ (33) ಸ್ವಲ್ಪ ಹೊತ್ತು ತಂಡಕ್ಕೆ ಆಧಾರವಾದರು. ಆದರೆ, ಹಸರಂಗ ರಾಹುಲ್ ಔಟ್ ಮಾಡಿದರೆ, ಅಕ್ಷರ್​ ಪಟೇಲ್​ಗೆ ಅಸಲಂಕಾ ಪೆವಿಲಿಯನ್ ದಾರಿ ತೋರಿದರು. ಬಳಿಕ ಕುಲ್ದೀಪ್ ಯಾದವ್​ ಹಸರಂಗ ಎಸೆತಕ್ಕೆ ಔಟಾದಾಗ ಗೆಲುವು ಲಂಕಾ ಕಡೆಗೆ ತಿರುಗಿತ್ತು. ಆದರೆ, ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಬಂದ ಶಿವಂ ದುಬೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವುದರೊಂದಿಗೆ ಭಾರತದ ಪಾಳೆಯದಲ್ಲಿ ನಗು ಮೂಡಿಸಿದರು. ಆದರೆ ಗೆಲ್ಲಲು ಒಂದು ರನ್ ಬೇಕಾಗಿದ್ದಾಗ ಅವರು ಔಟಾದರು. ನಂತರದ ಎಸೆತದಲ್ಲಿ ಅರ್ಶ್​ದೀಪ್ ಸಿಂಗ್ ಔಟಾಗಿ ನಿರ್ಗಮಿಸಿದರು.

ಈ ಫಲಿತಾಂಶದೊಂದಿಗೆ ಲಂಕಾ ತಂಡ ನಿರಾಳವಾಗಲಿದೆ. ಟಿ 20 ಪಂದ್ಯಗಳಲ್ಲಿ ನಾಟಕೀಯ ಕುಸಿತದಿಂದ ತಂಡ ಟೀಕೆಗಳನ್ನು ಎದುರಿಸಿತ್ತು. ಆದರೆ, ಈಗ ಭಾರತವನ್ನೇ ನಾಟಕೀಯವಾಗಿ ಕುಸಿಯುಂತೆ ಮಾಡಿದೆ. ಅದರಲ್ಲೂ ಸ್ಪಿನ್ನರ್​ಗಳು ಆ ತಂಡಕ್ಕೆ ಆಧಾರವಾದರು. ಭಾನುವಾರ ಇತ್ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ.

Continue Reading
Advertisement
Neeraj Chopra
ಕ್ರೀಡೆ3 mins ago

Neeraj Chopra: ನೀರಜ್​ ಚಿನ್ನ ಗೆದ್ದರೆ ನೀವು ಕೂಡ ಉಚಿತ ವಿದೇಶ ಪ್ರವಾಸ ಕೈಗೊಳ್ಳಬಹುದು; ಇದು ಹೇಗೆ ಸಾಧ್ಯ?

World Bank
ವಾಣಿಜ್ಯ9 mins ago

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

Rakshit Shetty Richard Anthony Produce By Hombale
ಅವಿಭಾಗೀಕೃತ14 mins ago

US Military: ಇರಾನ್, ಹಮಾಸ್, ಹಿಜ್ಬುಲ್ಲಾ ದಾಳಿಯಿಂದ ಇಸ್ರೇಲ್ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಅಮೆರಿಕ

Jr NTR -Janhvi Kapoor Devara Song take centre stage
ಟಾಲಿವುಡ್33 mins ago

Jr NTR -Janhvi Kapoor: ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜ್ಯೂನಿಯರ್‌ ಎನ್‌ಟಿಆರ್- ಜಾಹ್ನವಿ; ಆ.5ಕ್ಕೆ ಚಿತ್ರತಂಡದಿಂದ ಗಿಫ್ಟ್‌!​

IND vs SL
ಕ್ರೀಡೆ33 mins ago

IND vs SL: ಭಾರತ-ಲಂಕಾ ಏಕದಿನ ಪಂದ್ಯ ಟೈ ಆದರೂ ಸೂಪರ್​ ಓವರ್​ ಏಕೆ ಆಡಿಸಲಿಲ್ಲ?; ಇಲ್ಲಿದೆ ಉತ್ತರ

UGCET 2024
ಪ್ರಮುಖ ಸುದ್ದಿ53 mins ago

UGCET 2024: ಆ.7ರಂದು ಮಧ್ಯಾಹ್ನ 2 ಗಂಟೆಗೆ ಸಿಇಟಿ ಅಣಕು ಸೀಟು ಹಂಚಿಕೆ ಪ್ರಕಟ; ಆಪ್ಶನ್ ಎಂಟ್ರಿಗೆ ನಾಳೆ ಲಾಸ್ಟ್ ಡೇಟ್

Lion & Lioness Name
ದೇಶ1 hour ago

Lion & Lioness Name: ಅಕ್ಬರ್‌-ಸೀತಾ ಸಿಂಹಗಳಿಗೆ ಹೊಸ ಹೆಸರು; ವಿವಾದಕ್ಕೆ ತೆರೆ ಎಳೆದ ದೀದಿ ಸರ್ಕಾರ

Kamala Harris
ವಿದೇಶ1 hour ago

Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

Kannada New Movie Tenant sonu gowda First look out
ಸ್ಯಾಂಡಲ್ ವುಡ್1 hour ago

Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

Rohit Sharma
ಕ್ರೀಡೆ1 hour ago

Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​ ಶರ್ಮ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ6 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌