Greece Train Crash: ಗ್ರೀಸ್​​ನಲ್ಲಿ ಪ್ರಯಾಣಿಕರ ರೈಲಿಗೆ ಡಿಕ್ಕಿಯಾದ ಸರಕು ರೈಲು; 32 ಮಂದಿ ಸಾವು, 85ಕ್ಕೂ ಹೆಚ್ಚು ಜನರಿಗೆ ಗಾಯ - Vistara News

ವಿದೇಶ

Greece Train Crash: ಗ್ರೀಸ್​​ನಲ್ಲಿ ಪ್ರಯಾಣಿಕರ ರೈಲಿಗೆ ಡಿಕ್ಕಿಯಾದ ಸರಕು ರೈಲು; 32 ಮಂದಿ ಸಾವು, 85ಕ್ಕೂ ಹೆಚ್ಚು ಜನರಿಗೆ ಗಾಯ

ಹೆಲೆನಿಕ್​ ಟ್ರೇನ್​ ಎಂಬ ಖಾಸಗಿ ಗ್ರೀಕ್​ ರೈಲ್ವೆ ಕಂಪನಿಗೆ ಸೇರಿದ ಪ್ರಯಾಣಿಕರ ರೈಲೊಂದು ಅಥೆನ್ಸ್​​ನಿಂದ ಥೆಸಲೋನಿಕಿ ನಗರಕ್ಕೆ ಪ್ರಯಾಣ ಮಾಡುತ್ತಿತ್ತು. ಈ ರೈಲಿನಲ್ಲಿ 350 ಮಂದಿ ಪ್ರಯಾಣಿಕರು ಇದ್ದರು.

VISTARANEWS.COM


on

32 Died in Greece Train Crash over 85 people Injured
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗ್ರೀಸ್ ದೇಶದ ಲಾರಿಸ್ಸಾ ನಗರದಲ್ಲಿ ಭೀಕರ ರೈಲು ಅಪಘಾತ (Greece Train Crash) ನಡೆದಿದೆ. ಎರಡು ರೈಲುಗಳು ಡಿಕ್ಕಿಯಾಗಿ 32 ಮಂದಿ ಮೃತಪಟ್ಟಿದ್ದು, 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಡಿಕ್ಕಿಯ ರಭಸಕ್ಕೆ ರೈಲುಗಳ ಎರಡು ಕ್ಯಾರೇಜ್​​ಗಳಿಗೆ ಬೆಂಕಿ ಬಿದ್ದು, ಸುಟ್ಟುಹೋಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ಅಗ್ನಿಶಾಮಕದಳ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೇ, ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಹೆಲೆನಿಕ್​ ಟ್ರೇನ್​ ಎಂಬ ಖಾಸಗಿ ಗ್ರೀಕ್​ ರೈಲ್ವೆ ಕಂಪನಿಗೆ ಸೇರಿದ ಪ್ರಯಾಣಿಕರ ರೈಲೊಂದು ಅಥೆನ್ಸ್​​ನಿಂದ ಥೆಸಲೋನಿಕಿ ನಗರಕ್ಕೆ ಪ್ರಯಾಣ ಮಾಡುತ್ತಿತ್ತು. ಈ ರೈಲಿನಲ್ಲಿ 350 ಮಂದಿ ಪ್ರಯಾಣಿಕರು ಇದ್ದರು. ಟೆಂಪ್​ ವ್ಯಾಲಿ ಎಂಬಲ್ಲಿ ಈ ರೈಲಿಗೆ ಸರಕು ಸಾಗಣೆ ರೈಲೊಂದು ಡಿಕ್ಕಿಯಾಗಿದೆ. ಎರಡೂ ರೈಲುಗಳ ಬೋಗಿಗಳಿಗೆ ಹಾನಿಯಾಗಿದೆ. ಪ್ರಯಾಣಿಕರು ಇದ್ದ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಬಿದ್ದು, ಅವರು ಹಳಿ ತಪ್ಪಿ ಬಿದ್ದಿವೆ. ಹೀಗೆ ಹಳಿ ತಪ್ಪಿ ಬಿದ್ದ ಬೋಗಿಗಳ ಅವಶೇಷಗಳಡಿಯಿಂದ ಪ್ರಯಾಣಿಕರನ್ನು ಹೊರಗೆತೆಗೆಯಲು ಹಲವು ತಾಸುಗಳ ಕಾರ್ಯಾಚರಣೆಯನ್ನೇ ನಡೆಸಬೇಕಾಯಿತು ಎಂದು ಅಗ್ನಿಶಾಮಕದಳದ ವಕ್ತಾರ ಹೇಳಿದ್ದಾರೆ. ರೈಲುಗಳ ಅಪಘಾತದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Google: ಲಕ್ಷಾಂತರ ಜನರ ಡೇಟಾವನ್ನು ಗೂಗಲ್‌ ಕ್ಲೌಡ್‌ನಿಂದ ಅಳಿಸಿಹಾಕಿದ ಬಳಿಕ ಗೂಗಲ್‌ ಸಂಸ್ಥೆ ಕ್ಷಮೆಯಿರಲಿ ಎಂದಷ್ಟೇ ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಮಾಹಿತಿ ಡಿಲೀಟ್‌ ಆದ ಕಾರಣ ಯುನಿಸೂಪರ್‌ ಸಂಸ್ಥೆಯು ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಲಕ್ಷಾಂತರ ಜನರ ಲಕ್ಷಾಂತರ ಕೋಟಿ ರೂ. ಮಾಹಿತಿ ಡಿಲೀಟ್‌ ಆದ ಕಾರಣ ಅವರೆಲ್ಲ ಆತಂಕಕ್ಕೀಡಾಗಿದ್ದಾರೆ.

VISTARANEWS.COM


on

Google
Koo

ವಾಷಿಂಗ್ಟನ್:‌ ಇದೇನಿದ್ದರೂ ಡಿಜಿಟಲ್‌ (Digital) ಯುಗ. ಎಲ್ಲ ಮಾಹಿತಿಯೂ ಈಗ ಕಂಪ್ಯೂಟರ್‌ನಲ್ಲಿ, ಗೂಗಲ್‌ ಕ್ಲೌಡ್‌ ಸೇರಿ ಹಲವು ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಬ್ಯಾಂಕಿಂಗ್‌ನಿಂದ ಹಿಡಿದು ಎಲ್ಲ ಕ್ಷೇತ್ರಗಳ ಮಾಹಿತಿಯೂ ಆನ್‌ಲೈನ್‌ನಲ್ಲೇ ಸಂಗ್ರಹಿಸಲಾಗುತ್ತದೆ. ಆದರೆ, ಈ ಮಾಹಿತಿ ಡಿಲೀಟ್‌ ಮಾಡಿದರೆ, ಯಾರಾದರೂ ಡಿಲೀಟ್‌ ಮಾಡಿದರೆ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗೂಗಲ್‌ (Google) ಸಂಸ್ಥೆಯು ಗೂಗಲ್‌ ಕ್ಲೌಡ್‌ನಲ್ಲಿ (Google Cloud) ಸುಮಾರು 10.43 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾವನ್ನು ಅಚಾತುರ್ಯವಾಗಿ ಡಿಲೀಟ್‌ ಮಾಡಿದೆ.

ಆಸ್ಟ್ರೇಲಿಯಾದ ನಿವೃತ್ತಿದಾರರಿಗೆ ಪಿಂಚಣಿ ಒದಗಿಸುವ ಯುನಿಸೂಪರ್‌ (UniSuper) ಎಂಬ ಸಂಸ್ಥೆಯ 6.2 ಲಕ್ಷ ಜನರ ಮಾಹಿತಿಯನ್ನು ಗೂಗಲ್‌ ಡಿಲೀಟ್‌ ಮಾಡಿದೆ. ಯುನಿಸೂಪರ್‌ ಸಂಸ್ಥೆಯು ಡೇಟಾ ಸಂಗ್ರಹಕ್ಕಾಗಿ ಗೂಗಲ್‌ ಕ್ಲೌಡ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಗೂಗಲ್‌ ಸಂಸ್ಥೆಯು ಅಚಾತುರ್ಯದಿಂದ 6.2 ಲಕ್ಷ ಜನರ ಡೇಟಾವನ್ನು ಡಿಲೀಟ್‌ ಮಾಡಿದೆ. ಕಳೆದ ಒಂದು ವಾರದಿಂದ ಯುನಿಸೂಪರ್‌ ಸದಸ್ಯರು ತಮ್ಮ ಪಿಂಚಣಿ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Sorry ಎಂದ ಗೂಗಲ್‌

ಲಕ್ಷಾಂತರ ಜನರ ಡೇಟಾವನ್ನು ಗೂಗಲ್‌ ಕ್ಲೌಡ್‌ನಿಂದ ಅಳಿಸಿಹಾಕಿದ ಬಳಿಕ ಗೂಗಲ್‌ ಸಂಸ್ಥೆ ಕ್ಷಮೆಯಿರಲಿ ಎಂದಷ್ಟೇ ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಮಾಹಿತಿ ಡಿಲೀಟ್‌ ಆದ ಕಾರಣ ಯುನಿಸೂಪರ್‌ ಸಂಸ್ಥೆಯು ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಲಕ್ಷಾಂತರ ಜನರ ಲಕ್ಷಾಂತರ ಕೋಟಿ ರೂ. ಮಾಹಿತಿ ಡಿಲೀಟ್‌ ಆದ ಕಾರಣ ಅವರೆಲ್ಲ ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂಬುದಾಗಿ ಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಗೂಗಲ್‌ ಜತೆಗಿನ ಒಪ್ಪಂದವನ್ನು ಯುನಿಸೂಪರ್‌ ರದ್ದುಗೊಳಿಸಿದೆ.

ಬ್ಯಾಕಪ್‌ಗಾಗಿ ಹರಸಾಹಸ

6 ಲಕ್ಷಕ್ಕೂ ಅಧಿಕ ಮಾಹಿತಿಯನ್ನು ಮರು ಸಂಗ್ರಹಿಸಲು (ಬ್ಯಾಕಪ್‌) ಯುನಿಸೂಪರ್‌ ಹರಸಾಹಸ ಮಾಡುತ್ತಿದೆ. ಡಿಲೀಟ್‌ ಆಗಿರುವ ಎಲ್ಲ ಮಾಹಿತಿಯನ್ನು ಬ್ಯಾಕಪ್‌ ಮಾಡಿಕೊಳ್ಳಲು ಬೇರೊಂದು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಮಾಹಿತಿಯು ತಾತ್ಕಾಲಿಕವಾಗಿ ಡಿಲೀಟ್‌ ಆಗಿದೆಯೋ, ಇಲ್ಲವೋ? ಅದನ್ನು ಬ್ಯಾಕಪ್‌ ಮಾಡುವುದು ಸುಲಭವೋ, ಇಲ್ಲವೋ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ಲಭ್ಯವಾಗುವವರೆಗೂ ಗ್ರಾಹಕರು ಹಾಗೂ ಕಂಪನಿಗೆ ಆತಂಕ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Continue Reading

ದೇಶ

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

ನರೇಂದ್ರ ಮೋದಿ ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸಾಜಿದ್‌ ತರಾರ್‌ ಹೇಳಿದ್ದಾರೆ.

VISTARANEWS.COM


on

Narendra Modi
Koo

ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ, ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಸಾಜಿದ್‌ ತರಾರ್‌ (Sajid Tarar) ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. “ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ” ಎಂದು ಉದ್ಯಮಿ ಹೇಳಿದ್ದಾರೆ.

“ನರೇಂದ್ರ ಮೋದಿ ಅದ್ಭುತ ನಾಯಕರಾಗಿರುವ ಕಾರಣದಿಂದಾಗಿಯೇ ಭಾರತ ಅಷ್ಟೊಂದು ಉತ್ತಮವಾಗಿ ಏಳಿಗೆ ಹೊಂದಿದೆ. ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ” ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ನಾಯಕತ್ವವು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿಯೇ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತವಾಗಿದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಪಾಕಿಸ್ತಾನದಿಂದ ಭಾರತಕ್ಕೂ ಅನುಕೂಲವಿದೆ. ಪಾಕಿಸ್ತಾನಕ್ಕೂ ಭಾರತದಿಂದ ಅನುಕೂಲವಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಿ ಸಂಬಂಧ ಸುಧಾರಿಸುವ ವಿಶ್ವಾಸವಿದೆ” ಎಂದು ಹೇಳಿದರು. ಪಾಕಿಸ್ತಾನದವರಾದ ಸಾಜಿದ್‌ ತರಾರ್‌, 1990ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿಯೇ ನೆಲೆಸಿದ್ದಾರೆ.

ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ಕೂಡ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದಾರೆ. ಆಗಾಗ ಅವರು ಮೋದಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಕೆಲ ತಿಂಗಳ ಹಿಂದಷ್ಟೇ ಮೇರಿ ಮಿಲ್​​ಬೆನ್ ಹೇಳಿದ್ದರು.

ಇದನ್ನೂ ಓದಿ: Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Continue Reading

ತಂತ್ರಜ್ಞಾನ

Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Facebook, Instagram Down: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ (Facebook, Instagram Down). ಸಾವಿರಾರು ಬಳಕೆದಾರರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆ ಹೇಳಿದೆ.

VISTARANEWS.COM


on

Facebook, Instagram Down
Koo

ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ (Facebook, Instagram Down). ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್‌ ಓಪನ್‌ ಮಾಡುವಾಗ ʼSomething went wrong. There’s an issue and the page could not be loadedʼ, ʼError loading media’ ಮುಂತಾದ ಮೆಸೇಜ್‌ ಕಂಡು ಬರುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂಟರ್‌ನೆಟ್‌ ಮೇಲ್ವಿಚಾರಣಾ ಗುಂಪು ನೆಟ್‌ಬ್ಲಾಕ್ಸ್‌ (NetBlocks) ಕೂಡ ಎರಡು ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳು ಪ್ರಸ್ತುತ ‘ಅಂತಾರಾಷ್ಟ್ರೀಯ ಸ್ಥಗಿತಗಳನ್ನು’ ಅನುಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದೆ.

“ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಸೇರಿದಂತೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ. ಇದು ದೇಶೀಯ ಮಟ್ಟದ ಇಂಟರ್‌ನೆಟ್‌ ಅಡೆತಡೆಗಳು ಅಥವಾ ಫಿಲ್ಟರಿಂಗ್‌ಗೆ ಸಂಬಂಧಿಸಿಲ್ಲ” ಎಂದು ನೆಟ್‌ಬ್ಲಾಕ್ಸ್‌ ತಿಳಿಸಿದೆ. ವಿಶೇಷವೆಂದರೆ ಈ ವರ್ಷದ ಮಾರ್ಚ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ತಮ್ಮ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಲಾಗ್ ಔಟ್ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು.

ನೆಟ್ಟಿಗರು ಏನಂದ್ರು?

ಮೆಟಾ ಫ್ಲಾಟ್‌ಫಾರ್ಮ್‌ನಲ್ಲಿ ಪದೇ ಪದೆ ಇಂತಹ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇರೆ ಯಾವ ಅಪ್ಲಿಕೇಷನ್‌ಗಳಲ್ಲಿಯೂ ಇಷ್ಟರ ಮಟ್ಟಿಗೆ ಸಮಸ್ಯೆ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿಯಿಂದ ನಿರಾಶೆಗೊಂಡ ಬಳಕೆದಾರರೊಬ್ಬರು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದ ಬಗೆಗಿನ ನೆಟ್‌ಬ್ಲಾಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಬಹುಶಃ ಈ ಸಮಸ್ಯೆ ಬಗೆಹರಿಯುವಂತೆ ಕಾಣಿಸುತ್ತಿಲ್ಲʼʼ ಎಂದು ಹೇಳಿದ್ದಾರೆ. ʼʼಮೆಟಾ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿರಬೇಕು. ಅದೇ ಕಾರಣಕ್ಕೆ ಫೇಸ್‌ಬುಕ್‌ ಕೂಡ ಕೆಲಸ ಮಾಡುತ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Facebook Server: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

ಈ ವರ್ಷ ಮಾರ್ಚ್‌ನಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿತ್ತು. ಕೆಲಹೊತ್ತು ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್‌ ಆಗಿದ್ದು, ಮತ್ತೆ ಲಾಗ್‌ಇನ್‌ ಆಗುತ್ತಿರಲಿಲ್ಲ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಇಲ್ಲದೆ ಜನ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮೆಟಾ ಕಂಪನಿಯು ಪ್ರತಿಕ್ರಿಯಿಸಿದ್ದು, ಜನರ ಕ್ಷಮೆಯಾಚಿಸಿತ್ತು.

Continue Reading

ವಿದೇಶ

Shehbaz Sharif: ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಲು ನಿರ್ಧರಿಸಿದೆ ದಿವಾಳಿ ಪಾಕಿಸ್ತಾನ!

Shehbaz Sharif: ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನ ಇದೀಗ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಮಾಹಿತಿ ನೀಡಿ, ʼʼನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆʼʼ ಎಂದಿದ್ದಾರೆ.

VISTARANEWS.COM


on

Shehbaz Sharif
Koo

ಇಸ್ಲಾಮಾಬಾದ್:‌ ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನ(Pakistan) ಈಗ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ (Shehbaz Sharif) ಮಂಗಳವಾರ ತಿಳಿಸಿದರು.

ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಸರ್ಕಾರಿ ಉದ್ಯಮಗಳ (SOEs) ಖಾಸಗೀಕರಣ ಪ್ರಕ್ರಿಯೆಯ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು 2024ರಿಂದ 29ರವರೆಗೆ ಹಂತ ಹಂತವಾಗಿ ನಡೆಯಲಿರುವ ಖಾಸಗೀಕರಣದ ಮಾರ್ಗಸೂಚಿಯನ್ನು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

“ಲಾಭದಲ್ಲಿರಲಿ ಅಥವಾ ನಷ್ಟದಲ್ಲಿರಲಿ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುವುದು” ಎಂದು ಷರೀಫ್ ತಿಳಿಸಿದರು. ʼʼಈ ಕ್ರಮದಿಂದ ತೆರಿಗೆದಾರರ ಹಣವನ್ನು ಉಳಿಸಬಹುದುʼʼ ಎಂದು ಅವರು ಹೇಳಿದರು. ಆದರೆ ಯಾವ ಕ್ಷೇತ್ರಗಳನ್ನು ಕಾರ್ಯತಂತ್ರ ಮತ್ತು ಕಾರ್ಯತಂತ್ರೇತರ ಎಂದು ಪರಿಗಣಿಸಲಾಗುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಹೊರ ಬಿದ್ದಿಲ್ಲ. ಹೀಗಾಗಿ ಯಾವೆಲ್ಲ ಕಂಪನಿಗಳು ಖಾಸಗೀಕರಣಕ್ಕೆ ಒಳಪಡುತ್ತವೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ 3 ಶತಕೋಟಿ ಡಾಲರ್‌ ಮೊತ್ತದ ಸಾಲದ ಪ್ಯಾಕೇಜ್‌ ಒದಗಿಸಲು ಐಎಂಎಫ್‌ (International Monetary Fund) ಸಮ್ಮತಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಐಎಂಎಫ್‌ನ ಶಿಫಾರಸ್ಸು

ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ. ಸದ್ಯ ಪಾಕ್‌ ಹಣಕಾಸಿನ ಕೊರತೆಯಿಂದ ಬಳಲುತ್ತಿದೆ. ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕೆಲವು ಮಧ್ಯಪ್ರಾಚ್ಯ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದ ಸರ್ಕಾರಿ ಉದ್ಯಮಗಳು 2019ರಲ್ಲಿ ಜಿಡಿಪಿಯ ಶೇ. 44ರಷ್ಟು ಗಣನೀಯ ಪಾಲನ್ನು ಹೊಂದಿವೆ. 2019ರಲ್ಲಿ ಸುಮಾರು ಅರ್ಧದಷ್ಟು ಸರ್ಕಾರಿ ಉದ್ಯಮಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಐಎಂಎಫ್‌ ಹೇಳಿದೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಿಂದಿನ ಖಾಸಗೀಕರಣ ಪ್ರಯತ್ನಗಳು ವಿಫಲವಾಗಿದ್ದವು ಎಂದು ಆರ್ಥಿಕ ತಜ್ಞರು ಕಂಡುಕೊಂಡಿದ್ದಾರೆ. ನಷ್ಟದಲ್ಲಿರುವ ಅತಿದೊಡ್ಡ ಉದ್ಯಮಗಳಲ್ಲಿ ಒಂದಾದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಸೇರಿದಂತೆ ಹಲವು ಎಸ್ಒಇಗಳಿಗೆ ಪಾಕಿಸ್ತಾನ ವರ್ಷಗಳಿಂದ ಶತಕೋಟಿ ಡಾಲರ್‌ ಖರ್ಚು ಮಾಡುತ್ತಿದೆ. ಸದ್ಯ ಇದು ಮಾರಾಟದ ಅಂತಿಮ ಹಂತದಲ್ಲಿದೆ. ಖರೀದಿದಾರರಿಗೆ ಈ ವಾರಾಂತ್ಯದವರೆಗೆ ಗಡುವು ನೀಡಲಾಗಿದೆ.

ಇದನ್ನೂ ಓದಿ: ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

ಮಾರಾಟ ಮಾಡಲು ನಿರ್ಧರಿಸಿರುವ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್ಹ್ಯಾಟನ್‌ನಲ್ಲಿರುವ ಐಷಾರಾಮಿ ರೂಸ್‌ವೆಲ್ಟ್‌ ಹೋಟೆಲ್ ಮತ್ತು ಎರಡು ವಿಮಾ ಕಂಪೆನಿಗಳು ಸೇರಿವೆ. ಇದರ ಜತೆಗೆ ನಾಲ್ಕು ವಿದ್ಯುತ್ ಸ್ಥಾವರಗಳೂ ಇವೆ. ʼʼನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಂತ ಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆʼʼ ಎಂದು ಪ್ರಧಾನಿ ಶೆಹಬಾಜ್ ಷರೀಫ್ ವಿವರಿಸಿದ್ದಾರೆ.

Continue Reading
Advertisement
Kannada New Movie swapna mantapa shooting compleated
ಸ್ಯಾಂಡಲ್ ವುಡ್15 mins ago

Kannada New Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಚಿತ್ರೀಕರಣ ಮುಕ್ತಾಯ

ಫ್ಯಾಷನ್16 mins ago

Star saree fashion: ಯುವತಿಯರನ್ನು ಸೆಳೆಯುತ್ತಿದೆ ನಟಿ ಭಾವನಾ ರಾವ್‌ ಸ್ಯಾಟೀನ್‌ ಸಿಲ್ಕ್‌ ಸೀರೆ

Google
ವಿದೇಶ29 mins ago

Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Crazy MS Dhoni fan
ಕ್ರಿಕೆಟ್29 mins ago

Crazy MS Dhoni fan: 2100 ಕಿ.ಮೀ ದೂರ ಸೈಕಲ್​ ತುಳಿದು ದಿಲ್ಲಿಯಿಂದ ಚೆನ್ನೈಗೆ ಬಂದ ಧೋನಿ ಅಭಿಮಾನಿ; 23 ದಿನಗಳಲ್ಲಿ ಮಿಷನ್​ ಕಂಪ್ಲೀಟ್​

Money Guide
ಮನಿ-ಗೈಡ್31 mins ago

Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಬ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Prajwal Revanna Case Prajwal never boarded a flight from Germany
ಕ್ರೈಂ34 mins ago

Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

B C Mylarappa
ಕರ್ನಾಟಕ37 mins ago

B C Mylarappa: ಅಕ್ರಮ ಭೂ ವ್ಯವಹಾರ; ಪ್ರೊ. ಮೈಲಾರಪ್ಪ ಅಮಾನತಿಗೆ ಉನ್ನತ ಶಿಕ್ಷಣ ಇಲಾಖೆ ಸೂಚನೆ

Job Alert
ಉದ್ಯೋಗ38 mins ago

Job Alert: ಐಐಎಂಬಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

House of the Dragon season 2 new trailer hints at a bloody
ಸಿನಿಮಾ51 mins ago

House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್‌ ಔಟ್‌!

Google Update
ತಂತ್ರಜ್ಞಾನ52 mins ago

Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ9 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ12 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ22 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202424 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌