Good News | ಹಬ್ಬದ ವೇಳೆಗೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಎಸಿಗಳ ದರದಲ್ಲಿ ಇಳಿಕೆ ನಿರೀಕ್ಷೆ - Vistara News

ಪ್ರಮುಖ ಸುದ್ದಿ

Good News | ಹಬ್ಬದ ವೇಳೆಗೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಎಸಿಗಳ ದರದಲ್ಲಿ ಇಳಿಕೆ ನಿರೀಕ್ಷೆ

ಉಕ್ಕು, ತಾಮ್ರ ಇತ್ಯಾದಿ ಕಚ್ಚಾ ವಸ್ತುಗಳ ದರಗಳಲ್ಲಿ ಇತ್ತೀಚಿನ ಇಳಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಫ್ರಿಡ್ಜ್‌, ವಾಷಿಂಗ್‌ಮೆಷೀನ್‌ ಇತ್ಯಾದಿಗಳ ದರ ಶೀಘ್ರ ಇಳಿಕೆಯಾಗಲಿದೆ.

VISTARANEWS.COM


on

fridge
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಕಚ್ಚಾ ವಸ್ತುಗಳ ದರಗಳು ಇಳಿಯುತ್ತಿವೆ. ಇದರಿಂದಾಗಿ ಫ್ರಿಡ್ಜ್‌, ವಾಷಿಂಗ್‌ಮೆಷಿನ್, ಮೈಕ್ರೊವೇವ್‌, ಏರ್‌ ಕಂಡೀಷನರ್‌ಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ತಾಮ್ರದ ದರದಲ್ಲಿ ೨೧ % ಹಾಗೂ ಉಕ್ಕಿನ ದರದಲ್ಲಿ ೧೯ % ಇಳಿಕೆಯಾಗಿದೆ. ಅಲ್ಯುಮಿನಿಯಂ ದರದಲ್ಲಿ ೩೫ % ತಗ್ಗಿದೆ. ಹೀಗಾಗಿ ಈ ಹಿಂದೆ ಉತ್ಪಾದನಾ ವೆಚ್ಚ ಏರಿದ್ದರಿಂದ ದರಗಳನ್ನು ಹೆಚ್ಚಿಸಿದ್ದ ಗೃಹೋಪಕರಣಗಳ ಉತ್ಪಾದಕ ಕಂಪನಿಗಳು ಇದೀಗ ದರ ಇಳಿಕೆ ಮಾಡುವ ಸಾಧ್ಯತೆ ಇದೆ.

ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ಲೋಹ, ರಾಸಾಯನಿಕ ಸೇರಿದಂತೆ ಕೈಗಾರಿಕಾ ಕಚ್ಚಾ ವಸ್ತುಗಳ ದರಗಳು ಹಠಾತ್‌ ಜಿಗಿದಿತ್ತು. ಐಸಿಐಸಿಐ ಸೆಕ್ಯುರಿಟೀಸ್‌ ವರದಿಯ ಪ್ರಕಾರ ದರಗಳು ಇಳಿಯಲಿವೆ.

ಹಣದುಬ್ಬರ ಪರಿಣಾಮ ಭಾರತದಲ್ಲೂ ಕಳೆದ ಎರಡು ವರ್ಷಗಳಲ್ಲಿ ಗೃಹೋಪಯೋಗಿ ವಸ್ತುಗಳ ದರದಲ್ಲಿ ೨೦% ಹೆಚ್ಚಳವಾಗಿತ್ತು. ಕಚ್ಚಾವಸ್ತುಗಳ ಬೆಲೆ ಇಳಿದಿರುವುದರಿಂದ ಅದರ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಈ ವರ್ಷ ಹಬ್ಬಗಳ ಸೀಸನ್‌ನಲ್ಲಿ ದರ ಕಡಿತ ನಿರೀಕ್ಷಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

Viral Video: ಮೊನ್ನೆಯಷ್ಟೇ ಮುಂಬೈಯಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಹುಡುಗಿಯೊಬ್ಬಳು ರೀಲ್ಸ್ ಮಾಡಿದ್ದಳು, ಅದಕ್ಕೂ ಮೊದಲು ಪುಣೆಯಲ್ಲಿ ಪಾಳುಬಿದ್ದ ಕಟ್ಟಡದ ಮೇಲಿಂದ ರೀಲ್ಸ್ ಮಾಡಿದ ಹುಡುಗಿ ಆರೆಸ್ಟ್ ಆಗಿದ್ದಳು. ದಿನ ಈ ಸುದ್ದಿ ನೋಡುತ್ತಿದ್ದರೂ, ಮತ್ತು ಅದೇ ತಪ್ಪುಗಳನ್ನು ಈಗಿನ ಯುವಪೀಳಿಗೆ ಮಾಡುತ್ತಿದೆ. ರೀಲ್ಸ್ ಮಾಡುವುದು ತಪ್ಪಲ್ಲ, ಆದರೆ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವಂತಹ ರೀಲ್ಸ್ ಮಾಡುವುದಿಂದ ಮನೆಯವರನ್ನು ಆಪತ್ತಿಗೆ ದೂಡಿದ ಹಾಗೇ ಆಗುವುಂತೂ ಗ್ಯಾರಂಟಿ. ಬೆಂಗಳೂರಿನ ಈ ವಿದ್ಯಾರ್ಥಿನಿಯು ನಟ್ಟನಡುವಿನ ರಸ್ತೆಯಲ್ಲಿ ರೀಲ್ಸ್ ಮಾಡಲು ಹೋಗಿ ಹೀನಾಯ ಪರಿಸ್ಥಿತಿಯನ್ನು ತಂದುಕೊಂಡಿದ್ದಾಳೆ.

VISTARANEWS.COM


on

Viral Video
Koo

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ರೀಲ್ಸ್‌ನಿಂದ ಫಾಲೋವರ್ಸ್ ಹೆಚ್ಚಿಸಿಕೊಂಡು ಫೇಮಸ್ ಆಗಲು ಯುವಕ, ಯುವತಿಯರು ಮಾತ್ರವಲ್ಲ ಕಾಲೇಜು ವಿದ್ಯಾರ್ಥಿಗಳು ಕೂಡ ಹಲವು ವಿಧದ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದಾರೆ. ಆದರೆ ಬೇರೆಯವರನ್ನು ಮೆಚ್ಚಿಸಲು ಹೋಗಿ ಅವರ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಅಂತಹದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ರೀಲ್ಸ್ ಗಾಗಿ ಸ್ಟಂಟ್ ಮಾಡಲು ಹೋಗಿ ಆಪತ್ತು ತಂದುಕೊಂಡಿದ್ದಾಳೆ. ಈ ವಿಡಿಯೊ ಎಲ್ಲೆಡೆ ವೈರಲ್‌ (Viral Video) ಆಗಿದೆ.

ಶಾಲಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿನಿಯರಿಬ್ಬರು ಸೋಶಿಯಲ್ ಮೀಡಿಯಾದ ರೀಲ್ಸ್ ಗಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಲು ಹೋಗಿದ್ದಾರೆ. ರೀಲ್ಸ್ ಮತ್ತಷ್ಟು ವೈರಲ್ ಆಗಲಿ ಎಂದು ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರಕ್ಕೆ ಹಾರಿದ ಹುಡುಗಿ ನೆಲದ ಮೇಲೆ ಇಳಿಯುವಾಗ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ದೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಇದರಿಂದ ಅವಳ ಬೆನ್ನುಮೂಳೆ ಮುರಿತಕ್ಕೊಳಗಾಗಿದೆ. ಹಾಗಾಗಿ ಆಕೆಗೆ ಮೇಲೆಳಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ವಿದ್ಯಾರ್ಥಿನಿ ಆಕೆಯನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸಿದರೂ ಆಕೆಗೆ ನಿಲ್ಲಲು ಆಗಲಿಲ್ಲ. ಇಂತಹ ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಓದಿ ವಿದ್ಯಾವಂತೆ ಆಗಬೇಕಿದ್ದ ವಿದ್ಯಾರ್ಥಿನಿ ತನ್ನ ಜೀವನವನ್ನೇ ಕತ್ತಲೆಗೆ ತಳ್ಳಿದ್ದಾಳೆ. ಅವಳ ಕಾಲು ಸ್ವಾಧೀನ ಕಳೆದುಕೊಂಡ ಪರಿಣಾಮ ಆಕೆಗೆ ನಿಲ್ಲಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಆಕೆ ಎದ್ದೇಳದಂತೆ, ನಡೆಯದಂತೆ ಮಲಗಿಕೊಂಡೇ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಪೋಸ್ಟ್ ಆಗಿದ್ದು, ಇದಕ್ಕೆ 17 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ ಮತ್ತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ನಿಮ್ಮ ಜೀವಕ್ಕೆ ಕುತ್ತು ತರುವಂತಹ ಈ ರೀತಿಯ ಸ್ಟಂಟ್ ಮಾಡಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಈ ರೀಲ್ಸ್ ನಿಂದ ಫೇಮಸ್ ಆದವರಿಗಿಂತ ಅಪಾಯಕ್ಕೆ ಒಳಗಾಗಿ ಜೀವ ಕಳೆದುಕೊಂಡವರೇ ಹೆಚ್ಚು. ಆದರೂ ಈ ಯುವಜನರಿಗೆ ರೀಲ್ಸ್ ಹುಚ್ಚು ಯಾವಾಗ ಬಿಟ್ಟು ಹೋಗುತ್ತದೆಯೋ ತಿಳಿಯದು. ಒಟ್ಟಾರೆ ಸೋಶಿಯಲ್ ಮೀಡಿಯಾದ ರೀಲ್ಸ್‌ಗಾಗಿ ಯುವ ಜನರು ಪ್ರತಿದಿನ ಯಾವ ಸಂಕಷ್ಟಕ್ಕೆ ತಂದುಕೊಳ್ಳುತ್ತಾರೋ ಎಂಬುದು ತಿಳಿಯುತ್ತಿಲ್ಲ.

ಇದನ್ನೂ ಓದಿ: Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

ಇಂತಹ ಘಟನೆಗಳು ಪ್ರತಿದಿನ ಒಂದಲ್ಲ ಒಂದು ನಡೆಯುತ್ತಿರುತ್ತದೆ. ಈ ಹಿಂದೆ ಪುಣೆಯಲ್ಲಿ ಹುಡುಗಿಯೊಬ್ಬಳು ಸ್ನೇಹಿತನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದಿಂದ ಇಳಿದು ನೇತಾಡುತ್ತಾ ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಅಲ್ಲದೇ ಮುಂಬೈ ಹುಡುಗಿಯೊಬ್ಬಳು ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಡ್ಯಾನ್ಸ್ ಮಾಡಿ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದ್ದಳು.

Continue Reading

ದೇಶ

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

JP Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅವಧಿಯು ಇದೇ ತಿಂಗಳು ಮುಗಿಯಲಿದೆ. 2020ರಿಂದ ಬಿಜೆಪಿ ಅಧ್ಯಕ್ಷರಾಗಿರುವ ನಡ್ಡಾ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈಗ ಜೆ.ಪಿ. ನಡ್ಡಾ ಅವರ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ, ಯಾರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ.

VISTARANEWS.COM


on

JP Nadda
Koo

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಜೆ.ಪಿ.ನಡ್ಡಾ (JP Nadda) ಅವರು ರಾಜ್ಯಸಭೆಯ (Rajya Sabha) ಸದನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದುವರೆಗೆ ಪಿಯೂಷ್‌ ಗೋಯಲ್‌ (Piyush Goyal) ಅವರು ಮೇಲ್ಮನೆಯಲ್ಲಿ ಸದನ ನಾಯಕರಾಗದ್ದರು. ಈಗ ಅವರ ಬದಲಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಆಯ್ಕೆ ಮಾಡಲಾಗಿದೆ. ಪಿಯೂಷ್‌ ಗೋಯಲ್‌ ಅವರು ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಆಯ್ಕೆಯಾದ ಕಾರಣ ಜೆ.ಪಿ.ನಡ್ಡಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಿಯೂಷ್‌ ಗೋಯಲ್‌ ಅವರು 2010ರ ಜುಲೈ 5ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರನ್ನು ರಾಜ್ಯಸಭೆ ಸದನ ನಾಯಕರನ್ನಾಗಿ 2021ರ ಜುಲೈ 14ರಂದು ಆಯ್ಕೆ ಮಾಡಲಾಗಿತ್ತು. ಜೂನ್‌ 24ರಂದು ಪಿಯೂಷ್‌ ಗೋಯಲ್‌ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೆ.ಪಿ. ನಡ್ಡಾ ಅವರು ವರ್ಷದ ಆರಂಭದಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಸದ್ಯ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ.

BJP National President JP Nadda Election campaign in Surapura

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅವಧಿಯು ಇದೇ ತಿಂಗಳು ಮುಗಿಯಲಿದೆ. 2020ರಿಂದ ಬಿಜೆಪಿ ಅಧ್ಯಕ್ಷರಾಗಿರುವ ನಡ್ಡಾ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈಗ ಜೆ.ಪಿ. ನಡ್ಡಾ ಅವರ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ, ಯಾರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ. ಜೆ.ಪಿ. ನಡ್ಡಾ ಅವರಿಗೆ ಆರೋಗ್ಯ ಖಾತೆ ಜತೆಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಗಳನ್ನೂ ನೀಡಲಾಗಿದೆ.

ಬಜೆಟ್‌ನಲ್ಲಿ ಹೊಸ ತೆರಿಗೆ ಸ್ಲ್ಯಾಬ್‌?

“ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Parliament Session 2024: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಎಚ್‌ಡಿಕೆ, ಶೋಭಾ ಕರಂದ್ಲಾಜೆ; Video ಇಲ್ಲಿದೆ

Continue Reading

ಪ್ರಮುಖ ಸುದ್ದಿ

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

LKG UKG in Anganwadis: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ.

VISTARANEWS.COM


on

LKG UKG in Anganwadis
Koo

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ (LKG UKG in Anganwadis) ಆರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ ಇನ್ನುಳಿದ ಭಾಗದಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಣದ ಸಚಿವ ಮಧು ಬಂಗಾರಪ್ಪ‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಭೆ ನಡೆಸಿದ್ದಾರೆ.

ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿ ರಚಿಸಲು ಸಿಎಂ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ತೀರ್ಮಾನ ಮಾಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ನೀಡುವು ನಮ್ಮ ಉದ್ದೇಶವಾಗಿದೆ,. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಇಲಾಖೆಯ ಮೂಲಕವೇ ಸಮವಸ್ತ್ರ, ಪುಸ್ತಕ, ಬ್ಯಾಗ್ ನೀಡಲು ತೀರ್ಮಾನ ಮಾಡಲಾಗಿದೆ. ಜತೆಗೆ ಶಾಲೆಗಳ ಮಾದರಿಯಲ್ಲೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚನೆ: ಲಕ್ಷ್ಮಿ ಹೆಬ್ಬಾಳ್ಕರ್‌

ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಇನ್ನುಳಿದಂತೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೆ ದೊರೆಯಬೇಕೆಂಬ ಕಳಕಳಿಯಿಂದ ಶಿಕ್ಷಣ ಇಲಾಖೆಯೂ ಸರ್ಕಾರಿ ಮಾಂಟೆಸರಿ ಆರಂಭಿಸಲು ಮುಂದಾಗಿದ್ದು, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ವಿರೋಧ ವ್ಯಕ್ತವಾಗಿದೆ. ಈ‌ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಗೊಳಿಸಿ, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಲಿಸುವ ಚಿಂತನೆ ಇದೆ ಎಂದು ಹೇಳಿದರು.

ಇದನ್ನೂ ಓದಿ | LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಸಂಬಂಧ ಈಗಾಗಲೇ ಅಂಗನವಾಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಾಗಿದೆ. ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ಪೈಕಿ 9 ಸಾವಿರ ಮಂದಿ ಪದವಿ ಪಡೆದವರಾಗಿದ್ದರೆ, ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಾಗಿ, ಗುಣಮಟ್ಟದ ಶಿಕ್ಷಣ ನೀಡಿಕೆಗೆ ಯಾವುದೇ ಸಮಸ್ಯೆ ಆಗದು ಎಂದು ಹೇಳಿದ ಸಚಿವರು, ಯಾರನ್ನೂ ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Continue Reading

ದೇಶ

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

AI Sex Dolls: ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ.

VISTARANEWS.COM


on

Sex Doll
Koo

ನವದೆಹಲಿ: ಭಾರತ ಸೇರಿ ಜಗತ್ತಿನೆಲ್ಲೆಡೆ ಪ್ರತಿಯೊಂದು ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ಕಾಲಿಟ್ಟಿದೆ. ಲವ್‌ ಲೆಟರ್‌ ಬರೆಯುವುದರಿಂದ ಹಿಡಿದು ಕೋಡ್‌ ರಚನೆವರೆಗೆ, ರೋಬೊಗಳು ಕುಳಿತಲ್ಲಿಗೆ ಬಂದು ಊಟ ಸರಬರಾಜು ಮಾಡುವವರೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪಸರಿಸಿದೆ. ಇದರ ಬೆನ್ನಲ್ಲೇ, ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೆಕ್ಸ್‌ ಬೊಂಬೆಗಳನ್ನು (AI Powered Sex Dolls) ಅಥವಾ ಸೆಕ್ಸ್‌ ರೋಬೊಗಳನ್ನು ಅಭಿವೃದ್ಧಿಪಡಿಸಿದ್ದು, ಇವು ಮನುಷ್ಯರಿಗೆ ನೈಜ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗಿಸುತ್ತವೆ ಎಂದು ತಿಳಿದುಬಂದಿದೆ.

ಹೌದು, ಚೀನಾದ ಶೆಂಝೆನ್‌ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್‌ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪುರುಷರು, ಮಹಿಳೆಯರು ಸೇರಿ ಯಾರಿಗೇ ಆಗಲಿ ಲೈಂಗಿಕ ಸುಖ ಅನುಭವಿಸಲು ಬೇರೊಬ್ಬರ ಅವಶ್ಯಕತೆಯೇ ಇರುವುದಿಲ್ಲ. ಸೆಕ್ಸ್‌ ಡಾಲ್‌ಗಳ ಮೂಲಕವೇ ಸಂಭೋಗ ಸುಖ ಅನುಭವಿಸಬಹುದು ಎಂದು ಹೇಳಲಾಗುತ್ತಿದೆ.

ಇವುಗಳ ಕಾರ್ಯನಿರ್ವಹಣೆ ಹೇಗೆ?

ಜಗತ್ತಿನಲ್ಲಿ ಇದುವರೆಗೆ ಕೃತಕವಾಗಿ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿರಲಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚೀನಾ ವಿಜ್ಞಾನಿಗಳು ನೈಜ ಸುಖ ಅನುಭವಿಸುವ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸೆಕ್ಸ್‌ ಡಾಲ್‌ಗಳು ಬ್ಯಾಟರಿ ಚಾಲಿತ ಆಗಿರುತ್ತವೆ. ಅವುಗಳ ಮಾಂಸಖಂಡಗಳು ಕೂಡ ಮನುಷ್ಯರ ಹಾಗೆ ಇರಲಿದ್ದು, ಫ್ಲೆಕ್ಸಿಬಲ್‌ ಕೂಡ ಆಗಿರಲಿವೆ. ಮನುಷ್ಯರ ಭಾವನೆಗಳಿಗೆ ಸ್ಪಂದಿಸಿ, ನಿಜವಾದ ಲೈಂಗಿಕ ಸುಖವನ್ನು ಅನುಭವಿಸಲು ಇವು ನೆರವಾಗಲಿವೆ ಎಂದು ಹೇಳಲಾಗುತ್ತಿದೆ. ಹಲವು ಸವಾಲುಗಳನ್ನು ಮೀರಿಯೂ ವಿಜ್ಞಾನಿಗಳು ಈ ಕನಸು ನನಸಾಗಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ರೇಟ್‌ ಎಷ್ಟಾಗಬಹುದು?

ವಿಜ್ಞಾನಿಗಳು ಈಗಾಗಲೇ ಸೆಕ್ಸ್‌ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 5.6 ಅಡಿಯ ರೋಬೊಗಳನ್ನು ತಯಾರಿಸುತ್ತಿದ್ದು, ಬಳಸುವವರಿಗೆ ಅನುಕೂಲವಾಗಲಿ ಎಂದು 29 ಕೆ.ಜಿ ತೂಕದ ಡಾಲ್‌ಗಳನ್ನು ತಯಾರಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಇವುಗಳನ್ನು ತಯಾರಿಸುವ ಕಾರಣ ಆರಂಭದಲ್ಲಿ ಇವುಗಳ ಬೆಲೆಯು 1.25 ಲಕ್ಷ ರೂ.ನಿಂದ 6 ಲಕ್ಷ ರೂ.ವೆರೆಗೆ ಇರಲಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಸೆಕ್ಸ್‌ ರೋಬೊಗಳನ್ನು ತಯಾರಿಸುವುದರಿಂದ ಮನುಷ್ಯ ಮನುಷ್ಯನ ಸಂಬಂಧ, ಬಾಂಡಿಂಗ್‌ ಹಾಳಾಗುತ್ತದೆ ಎಂದು ಒಂದಷ್ಟು ಮಡಿವಂತರು ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Love Sex Dhoka: ಪ್ರೀತಿಸುವ ನಾಟಕವಾಡಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌; ಯುವಕನ ಬಂಧನಕ್ಕಾಗಿ ಪೊಲೀಸ್‌ ಠಾಣೆ ಮುಂದೆ ಯುವತಿ ಧರಣಿ

Continue Reading
Advertisement
Viral Video
Latest3 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ9 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ10 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್19 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್34 mins ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ42 mins ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

LKG UKG In Govt Schools
ಕರ್ನಾಟಕ47 mins ago

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

Sex Doll
ದೇಶ55 mins ago

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

Job Alert
ಉದ್ಯೋಗ56 mins ago

Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

Unusual Story
Latest57 mins ago

Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌