ಯಾರಿವರು ಗೊಟಬಯ ರಾಜಪಕ್ಸ, ಅವರ ಪಲಾಯನಕ್ಕೆ ಶ್ರೀಲಂಕಾದಲ್ಲಿ ಸಂಭ್ರಮವೇಕೆ? - Vistara News

ಪ್ರಮುಖ ಸುದ್ದಿ

ಯಾರಿವರು ಗೊಟಬಯ ರಾಜಪಕ್ಸ, ಅವರ ಪಲಾಯನಕ್ಕೆ ಶ್ರೀಲಂಕಾದಲ್ಲಿ ಸಂಭ್ರಮವೇಕೆ?

ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸ ಪಲಾಯನ ಮಾಡುವುದರೊಂದಿಗೆ ರಾಜಪಕ್ಸ ಕುಟುಂಬದ ಪ್ರಾಬಲ್ಯ ಅಂತ್ಯವಾಗಿದೆ. ಪ್ರತಿಭಟನಾಕಾರರ ಪ್ರಕಾರ ಶ್ರೀಲಂಕಾ ದಿವಾಳಿಯಾಗಲು ರಾಜಪಕ್ಸ ಕುಟುಂಬದ ದುರಾಡಳಿತ ಕಾರಣ.

VISTARANEWS.COM


on

gotabaya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಮುಂಜಾನೆ ಪತ್ನಿ ಮತ್ತು ಇಬ್ಬರು ಅಂಗರಕ್ಷರೊಡನೆ ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ. ಇದಕ್ಕಾಗಿ ಲಂಕಾದಲ್ಲಿ ಸಾವಿರಾರು ಜನ ಬೀದಿಗಿಳಿದು ಸಂಭ್ರಮಾಚರಿಸಿದ್ದಾರೆ. ಯುದ್ಧದಲ್ಲಿ ಗೆದ್ದಂತೆ ಬೀಗಿದ್ದಾರೆ.

ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯ ಹೀರೊ

ಅಧ್ಯಕ್ಷ ಗೊಟಬಯ ರಾಜಪಕ್ಸ ಈ ಹಿಂದೆ ಶ್ರೀಲಂಕಾದ ಅತ್ಯಂತ ಶಕ್ತಿಶಾಲಿ ರಾಜಕಾರಣಿಯಾಗಿ ಮೆರೆದವರು. ೨೦೦೯ರಲ್ಲಿ ಎಲ್‌ಟಿಟಿಇ ದಂಗೆಯನ್ನು ಮಟ್ಟ ಹಾಕಿದ ಮಿಲಿಟರಿ ಕಾರ್ಯಾಚರಣೆಯ ಮುಂಚೂಣಿಯಲ್ಲಿ ಇದ್ದವರು ಇದೇ ಗೊಟಬಯ ರಾಜಪಕ್ಸ. ಲಂಕಾ ಸೇನಾಪಡೆಯ ಉನ್ನತ ಹುದ್ದೆಯಲ್ಲಿದ್ದ ರಾಜಪಕ್ಸ ಬಳಿಕ ರಾಜಕಾರಣಿಯಾಗಿ ಬೆಳೆದು ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದರು.

ಹೀಗಿದ್ದರೂ, ಎಲ್‌ಟಿಟಿ ವಿರುದ್ಧದ ಕಾರ್ಯಾಚರಣೆಯ ವೇಳೆ ಸಾವಿರಾರು ಮಂದಿ ತಮಿಳರ ವಿರುದ್ಧ ಭಾರಿ ದೌರ್ಜನ್ಯ ಎಸಗಿದ ಆರೋಪವನ್ನೂ ಗೊಟಬಯ ಎದುರಿಸುತ್ತಿದ್ದಾರೆ.

ರಾಜಪಕ್ಸ ಕುಟುಂಬದ ಪ್ರಾಬಲ್ಯ ಅಂತ್ಯ

ಕಳೆದ ಎರಡು ದಶಕಗಳಿಂದಲೂ ರಾಜಪಕ್ಸ ಅವರ ಕುಟುಂಬವು ಶ್ರೀಲಂಕಾದ ರಾಜಕಾರಣದಲ್ಲಿ ಹಿಡಿತ ಸಾಧಿಸಿತ್ತು. ಗೊಟಬಯ ರಾಜಪಕ್ಸ ಅವರ ಸೋದರ ಮಹೀಂದ್ರಾ ರಾಜಪಕ್ಸ ಕೂಡ ಪ್ರಧಾನಿಯಾಗಿ ಅಧಿಕಾರದಲ್ಲಿ ಇದ್ದವರು. ೨೦೧೯ರ ನವೆಂಬರ್‌ನಲ್ಲಿ ಪ್ರಧಾನಿಯಾಗಿ, ೨೦೨೨ರ ಮೇನಲ್ಲಿ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟಿದ್ದಾರೆ. ಗೊಟಬಯ ರಾಜಪಕ್ಸ ಕೂಡ ೨೦೧೯ರಲ್ಲಿ ಅಧ್ಯಕ್ಷರಾಗಿದ್ದರು. ಹೀಗೆ ಶ್ರೀಲಂಕಾದ ಅಧ್ಯಕ್ಷ ಮತ್ತು ಪ್ರಧಾನಿ ಹುದ್ದೆಯನ್ನು ಅಣ್ಣ ಮತ್ತು ತಮ್ಮ ವಹಿಸಿಕೊಂಡಿದ್ದರು. ಸಿಂಹಳ ಬೌದ್ಧ ಸಮುದಾಯದ ಬೆಂಬಲವನ್ನು ರಾಜಪಕ್ಸ ಗಳಿಸಿದ್ದರು. ಆದರೆ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಶ್ರೀಲಂಕಾವನ್ನು ತೀವ್ರ ಆರ್ಥಿಕ ದುಸ್ಥಿತಿಗೆ ತಳ್ಳಿದ್ದು, ಜನಾಕ್ರೋಶದ ಪರಿಣಾಮ ರಾಜಪಕ್ಸ ಕುಟುಂಬದ ರಾಜಕೀಯ ಪಾರಮ್ಯ ಅಂತ್ಯವಾಗಿದೆ ಎನ್ನುತ್ತಾರೆ ವಿಶ್ಲೇಷಕರು. ಮಾತ್ರವಲ್ಲದೆ ರಾಜಪಕ್ಸ ಕುಟುಂಬಕ್ಕೆ ದೇಶದಿಂದಲೇ ಪಲಾಯನ ಮಾಡುವ ಸನ್ನಿವೇಶವನ್ನು ಸೃಷ್ಟಿಸಿದೆ. ಶ್ರೀಲಂಕಾದಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದಿದೆ ಎಂದು ಪ್ರಧಾನಿ ವಿಕ್ರಮಸಿಂಘೆ ಕೂಡ ಇತ್ತೀಚೆಗೆ ಹೇಳಿದ್ದರು.

ಶ್ರೀಲಂಕಾದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ

ಶ್ರೀಲಂಕಾದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಇದೆ. ಮಿಲಿಟರಿಯ ಮುಖ್ಯಸ್ಥರೂ ಅವರೇ ಆಗಿರುತ್ತಾರೆ. ಅವರು ಅಧಿಕಾರದಲ್ಲಿ ಇರುವ ತನಕ ಅರೆಸ್ಟ್‌ ಮಾಡುವಂತಿಲ್ಲ. ಅವರ ಅನುಪಸ್ಥಿತಿಯಲ್ಲಿ ಪ್ರಧಾನಿಯವರು ಡೆಪ್ಯುಟಿಯಾಗಿ ಜವಾಬ್ದಾರಿ ವಹಿಸಬಹುದು. ಆದರೆ ಲಂಕಾದಲ್ಲಿ ರಾಜಪಕ್ಸ ಕುಟುಂಬಕ್ಕೆ ಆಪ್ತರಾಗಿರುವ ಈಗಿನ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರಿಗೆ ಜನಪ್ರಿಯತೆ ಇಲ್ಲ.

ಕೊಲಂಬೊದಲ್ಲಿ ಸಂಭ್ರಮಾಚರಣೆ

ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ಬಿಟ್ಟು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿ ಸಾವಿರಾರು ಮಂದಿ ಬೀದಿಗಿಳಿದು ವಿಜಯೋತ್ಸವ ಆಚರಿಸಿದರು. ಪ್ರತಿಭಟನೆ ನಡೆಯುತ್ತಿರುವ ಸ್ಥಳ ಗಾಲೆ ಫೇಸ್‌ ಗ್ರೀನ್‌ನಲ್ಲಿ ಪ್ರತಿಭಟನಾಕಾರರು ಸಂಭ್ರಮಿಸಿದರು. ರಾಜಪಕ್ಸ ಕುಟುಂಬದಿಂದ ಭಾರಿ ವಂಚನೆಗೀಡಾಗಿರುವುದಾಗಿ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂದು ಸಂಜೆ ರಾಜೀನಾಮೆ ಸಂಭವ

ಇಷ್ಟೆಲ್ಲ ಆಗಿದ್ದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ಇನ್ನೂ ಸ್ಪೀಕರ್‌ಗೆ ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆಯ ವೇಳೆಗೆ ರಾಜೀನಾಮೆ ಪತ್ರ ರವಾನಿಸುವ ನಿರೀಕ್ಷೆ ಇದೆ.

ಗೊಟಬಯಗೆ ಸಹಕರಿಸಿಲ್ಲ ಎಂದು ಸ್ಪಷ್ಟಪಡಿಸಿದ ಭಾರತ

ಶ್ರೀಲಂಕಾ ಅಧ್ಯಕ್ಷ ಗೊಟಬಯ ಅವರು ಶ್ರೀಲಂಕಾದಿಂದ ಪರಾರಿಯಾಗಲು ಭಾರತ ಸಹಕರಿಸಿದೆ ಎಂಬ ವದಂತಿಗಳನ್ನು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಅಲ್ಲಗಳೆದಿದೆ.

ಇದನ್ನೂ ಓದಿ: ರಾಜೀನಾಮೆಗೆ ಮುನ್ನ ಶ್ರೀಲಂಕಾದಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡಿವ್ಸ್‌ಗೆ ಪಲಾಯನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

NDA 3.0: ರಾಜ್ಯಕ್ಕೆ ಸಿಗಲಿದ್ಯಾ 2+1 ಸಚಿವ ಸ್ಥಾನ? ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?

NDA 3.0: ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈಗಾಗಲೇ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿವೆ (NDA 3.0). ನಾಳೆ (ಜೂನ್‌ 9) ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಕರ್ನಾಟಕದಿಂದ ಯಾರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ ಒಲಿಯಲಿದೆ ಎಂಬ ಚರ್ಚೆ ಜೋರಾಗಿದೆ.

VISTARANEWS.COM


on

NDA 3.0
Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance) ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈಗಾಗಲೇ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿವೆ (NDA 3.0). ನಾಳೆ (ಜೂನ್‌ 9) ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಕರ್ನಾಟಕದಿಂದ ಯಾರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ ಒಲಿಯಲಿದೆ ಎಂಬ ಚರ್ಚೆ ಜೋರಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿರುವ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಕ್ಯಾಬಿನೆಟ್ ಮಂತ್ರಿ ಹುದ್ದೆ ಬಹುತೇಕ ಖಚಿತಗೊಂಡಿದೆ ಎನ್ನಲಾಗಿದ್ದು, ಬಿಜೆಪಿಯಿಂದ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಿದೆ.

ಮೂವರಿಗೆ ಸಚಿವ ಸ್ಥಾನ?

ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದ ಮೂವರಿಗೆ ಮಂತ್ರಿ ಪಟ್ಟ ಸಿಕ್ಕಂತಾಗಲಿದೆ. ಈಗಿನ ಸನ್ನಿವೇಶದಲ್ಲಿ ಮೂರಕ್ಕಿಂತ ಹೆಚ್ಚು ಸಚಿವ ಸ್ಥಾನ ರಾಜ್ಯಕ್ಕೆ ಸಿಗುವುದು ಕಷ್ಟ ಎನ್ನುವ ಮಾತೂ ಕೇಳಿ ಬಂದಿದೆ. ಮುಂಬರುವ ಚುನಾವಣಾ ರಾಜ್ಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈ ಕಮಾಂಡ್, ಮಹಾರಾಷ್ಟ್ರ, ಹರಿಯಾಣ ಸಂಸದರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಜತೆಗೆ ಮಿತ್ರ ಪಕ್ಷಗಳಿಗೂ ಆದ್ಯತೆ ನೀಡಬೇಕಿದೆ.

ಪ್ರಲ್ಹಾದ್ ಜೋಶಿಗೆ ಮತ್ತೆ ಅವಕಾಶ?

ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ. ಪ್ರಹ್ಲಾದ ಜೋಶಿ (Prahlad Joshi) ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್‌ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್‌ ಮಂಜುನಾಥ್‌ (Dr CN Manjunath) ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ. ಮಂಜುನಾಥ್‌ ಅವರ ಹಿರಿತನ, ಆರೋಗ್ಯ ಕ್ಷೇತ್ರದ ಅನುಭವ ಸರಕಾರದಲ್ಲಿ ನೆರವಾಗಲಿದೆ ಎಂಬ ಮುಂದಾಲೋಚನೆ. ಜತೆಗೆ ಹಲವು ಬಾರಿಯ ಸಂಸದರಾಗಿರುವ, ಕಾಂಗ್ರೆಸ್‌ನ ಹೆಬ್ಬಂಡೆ ಡಿ.ಕೆ ಸುರೇಶ್‌ (DK Suresh) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ ಹೆಗ್ಗಳಿಕೆ ಜತೆಗಿದೆ.

ಸದ್ಯ ಕರ್ನಾಟಕಕ್ಕೆ 2+1+1 ಫಾರ್ಮುಲಾ ಅನುಸರಿಸಲು ಬಿಜೆಪಿ ಹೈ ಕಮಾಂಡ್ ಚಿಂತನೆ ಎನ್ನಲಾಗಿದ್ದು, ಬಿಜೆಪಿಯಿಂದ 2 ಸಚಿವರು, ಜೆಡಿಎಸ್‌ಗೆ 1 ಹಾಗೂ 1 ರಾಜ್ಯ ಸಚಿವರನ್ನಾಗಿ ಮಾಡಲೂ ಬಿಜೆಪಿ ಚಿಂತನೆ ನಡೆಸದೆ ಎನ್ನಲಾಗಿದೆ.

ಇದನ್ನೂ ಓದಿ: Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Continue Reading

ಪ್ರಮುಖ ಸುದ್ದಿ

Rishabh Pant : ಸಂಜು ಸ್ಯಾಮ್ಸನ್​ ಜತೆಗಿನ ಒಳ ಜಗಳದ ಬಗ್ಗೆ ಸ್ಪಷ್ಟನೆ ನೀಡಿದ ರಿಷಭ್ ಪಂತ್​

Rishabh Pant: ಡೆಲ್ಲಿ ಕ್ಯಾಪಿಟಲ್ಸ್ ಪರ ಲೀಗ್​​ನಲ್ಲಿ ಕೆಲವು ಅದ್ಭುತ ಇನ್ನಿಂಗ್ಸ್​ಗಳನ್ನು ಆಡಿದ ರಿಷಭ್ ಪಂತ್ ಅವರು ಆಡಿದ 13 ಪಂದ್ಯಗಳಲ್ಲಿ 40 ಸರಾಸರಿ ಮತ್ತು 155 ಸ್ಟ್ರೈಕ್ ರೇಟ್​ನಲ್ಲಿ 446 ರನ್ ಗಳಿಸಿದ್ದಾರೆ. ಅವರು ಪಂದ್ಯಾವಳಿಯಲ್ಲಿ ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ.

VISTARANEWS.COM


on

Rishabh Pant
Koo

ನವದೆಹಲಿ: 2024 ರ ಟಿ 20 ವಿಶ್ವಕಪ್​ನ್ಲಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಭಾರತದ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ ಸಂಜು ಸ್ಯಾಮ್ಸನ್ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ತಮ್ಮ ನಡುವೆ ಯಾವುದೇ ಜಗಳವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಸಂಜು ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದು,ತ ತಾವಿಬ್ಬರೂ ಪರಸ್ಪರ ತುಂಬಾ ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ 2024 ರ ಟಿ 20 ವಿಶ್ವಕಪ್​​ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಆಯಾ ಫ್ರಾಂಚೈಸಿಗಳಿಗಾಗಿ ಅವರ ಅದ್ವಿತೀಯ ಪ್ರದರ್ಶನದ ಆಧಾರದ ಮೇಲೆ ಇವರಿಬ್ಬರು ತಂಡಕ್ಕೆ ಆಯ್ಕೆಯಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಲೀಗ್​​ನಲ್ಲಿ ಕೆಲವು ಅದ್ಭುತ ಇನ್ನಿಂಗ್ಸ್​ಗಳನ್ನು ಆಡಿದ ರಿಷಭ್ ಪಂತ್ ಅವರು ಆಡಿದ 13 ಪಂದ್ಯಗಳಲ್ಲಿ 40 ಸರಾಸರಿ ಮತ್ತು 155 ಸ್ಟ್ರೈಕ್ ರೇಟ್​ನಲ್ಲಿ 446 ರನ್ ಗಳಿಸಿದ್ದರು. ಅವರು ಪಂದ್ಯಾವಳಿಯಲ್ಲಿ ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸುಮಾರು 153 ಸ್ಟ್ರೈಕ್ ರೇಟ್​ನಲ್ಲಿ 531 ರನ್ ಗಳಿಸಿದ್ದಾರೆ. ಅವರು 5 ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ. ಅವರು ಪಂದ್ಯಾವಳಿಯನ್ನು 5 ನೇ ಪ್ರಮುಖ ಸ್ಕೋರರ್ ಆಗಿ ಕೊನೆಗೊಳಿಸಿದರು. ಅವರು ತಮ್ಮ ತಂಡವನ್ನು ಪ್ಲೇಆಫ್​ಗೆ ಮುನ್ನಡೆಸಿದ್ದರು.

ಐಪಿಎಲ್ ಸಮಯದಲ್ಲಿ ವಿಶ್ವಕಪ್​ಗಾಗಿ ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಇತ್ತು ಎಂದು ಹೇಳುವುದು ನ್ಯಾಯಯುತವಾಗಿದೆ. ಕೆಎಲ್ ರಾಹುಲ್, ಜಿತೇಶ್ ಶರ್ಮಾ ಮತ್ತು ಇಶಾನ್ ಕಿಶನ್ ಅವರೊಂದಿಗೆ ಸ್ಪರ್ಧೆಯಲ್ಲಿದ್ದರು.

ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದರು. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಭಾರತೀಯ ತಂಡದಲ್ಲಿ ತಮ್ಮ ಸ್ಥಾನದಿಂದಾಗಿ ಇವರಿಬ್ಬರು ಪರಸ್ಪರ ಉತ್ತಮವಾಗಿ ಆಡುತ್ತಿಲ್ಲ ಎಂಬ ಬಗ್ಗೆ ವರ್ಷಗಳಿಂದ ಸಾಕಷ್ಟು ಮಾತುಕತೆಗಳು ನಡೆದಿವೆ.

ಆದರೆ ಇದೀಗ ರಿಷಭ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಆರಾಮವಾಗಿದ್ದಾರೆ ಮತ್ತು ಅವರು ಉತ್ತಮ ಸಂಬಂಧ ಹಂಚಿಕೊಂಡಿದ್ದಾರೆ ಎಂದು ಕೀಪರ್-ಬ್ಯಾಟರ್​ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆದಿವೆ ಆದರೆ ಅವರು ಅವುಗಳ ಬಗ್ಗೆ ಗಮನ ಹರಿಸುವುದಿಲ್ಲ ಮತ್ತು ಪರಸ್ಪರ ಮೆಚ್ಚಿಕೊಳ್ಳುತ್ತೇವೆ ಎಂದು ಅವರು ಒಪ್ಪಿಕೊಂಡರು.

ಇದನ್ನೂ ಓದಿ: T20 World Cup : ಪಾಕಿಸ್ತಾನ ತಂಡದ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

ನಾವು ಉತ್ತಮ ಸ್ನೇಹವನ್ನು ಹೊಂದಿದ್ದೇವೆ, ಸಂಜು ಶಾಂತವಾಗಿದ್ದಾರೆ. ಏಕೆಂದರೆ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ವಿಷಯಗಳು ನಡೆಯುತ್ತವೆ ಎಂದು ನಿಮಗೆ ತಿಳಿದಿದೆ ಆದರೆ ವೈಯಕ್ತಿಕವಾಗಿ ನಾವು ಈ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ ಮತ್ತು ನಾವು ತಂಡದ ಸದಸ್ಯರಾಗಿದ್ದೇವೆ. ನಾವು ಒಬ್ಬರನ್ನೊಬ್ಬರು ತುಂಬಾ ಮೆಚ್ಚುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಅಗತ್ಯ ಪ್ರಯತ್ನ

ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಸಂಜು ಸ್ಯಾಮ್ಸನ್​ಗಿಂತ ರಿಷಭ್ ಪಂತ್​ಗೆ ಭಾರತೀಯ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿದೆ. ಕೀಪರ್-ಬ್ಯಾಟರ್​ಗೆ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳಲಾಗಿದೆ. ಅವರು ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ತಂಡಕ್ಕಾಗಿ ಅದ್ಭುತವಾಗಿ ಕಾರ್ಯನಿರ್ವಹಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಅರ್ಧಶತಕ ಬಾರಿಸುವ ಮೂಲಕ ಪಂದ್ಯಾವಳಿಯನ್ನು ಉತ್ತಮವಾಗಿ ಪ್ರಾರಂಭಿಸಿದ್ದರು. ಮುಂದೆ, ಅವರು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕಾಗಿ ಉತ್ತಮವಾಗಿ ಆಡಿದ್ದರು. ಪಿಚ್ ಬ್ಯಾಟಿಂಗ್ ಮಾಡಲು ಕಠಿಣವಾಗಿದ್ದರೂ, ಅವರು ಅಜೇಯ 36 ರನ್ ಗಳಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದರು.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ರಿಷಭ್ ಪಂತ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ತಂಡಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ. ನ್ಯೂಯಾರ್ಕ್​ನ ನಸ್ಸಾವು ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 9 ರಂದು ನಡೆಯಲಿರುವ ಪಂದ್ಯದಲ್ಲಿ ತಂಡ ಅವರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ.

Continue Reading

ಭವಿಷ್ಯ

Dina Bhavishya : ಹಣ ಗಳಿಸುವ ವಿವಿಧ ಮಾರ್ಗಗಳಿಗೆ ಈ ರಾಶಿಯವರಿಗೆ ಸಿಗಲಿದೆ ಪುಷ್ಟಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ದ್ವಿತೀಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶನಿವಾರ ಕಟಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಸಿಂಹ, ಕನ್ಯಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಹಣ ಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ, ಮನೆಯ ವಾತಾವರಣ ಕೆಡುವ ಸಾಧ್ಯತೆ ಇದೆ. ವೃಷಭ ರಾಶಿಯವರು ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (8-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ದ್ವಿತೀಯ 15:54 ವಾರ: ಶನಿವಾರ
ನಕ್ಷತ್ರ: ಆರಿದ್ರಾ 19:41 ಯೋಗ: ಗಂಡ 18:25
ಕರಣ: ಕೌಲವ 15:54 ಅಮೃತ ಕಾಲ: ಬೆಳಗ್ಗೆ 09:42 ರಿಂದ 11:18ರವರಗೆ
ದಿನದ ವಿಶೇಷ: ವಿಶ್ವ ಸಾಗರ ದಿನ

ಸೂರ್ಯೋದಯ : 05:53   ಸೂರ್ಯಾಸ್ತ : 06:45

ರಾಹುಕಾಲ : ಬೆಳಗ್ಗೆ9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹಣ ಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ, ಮನೆಯ ವಾತಾವರಣ ಕೆಡುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ವೃಷಭ:ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಮಿಥುನ:ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಭವಿಷ್ಯದ ಹೂಡಿಕೆ ಕುರಿತು ಯೋಚಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ದಿನದ ಮಟ್ಟಿಗೆ ಕಿರಿಕಿರಿಯಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ 2

Horoscope Today

ಕಟಕ:ಹೊಸ ವ್ಯವಹಾರದಲ್ಲಿ ತೊಡಗುವಿರಿ. ಆತುರದ ತೀರ್ಮಾನಗಳು ಬೇಡ. ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಅತಿಯಾದ ವ್ಯಾಮೋಹ ದುಃಖಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯವಿದು. ಆರೋಗ್ಯದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಕನ್ಯಾ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ, ಕೆಲಸ ಕಾರ್ಯಗಳು ನಿಧಾನವಾಗಲಿದೆ. ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ ಇದೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ : ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳನ್ನು ಕೇಳುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಪ್ರವಾಸದ ಕುರಿತು ಚರ್ಚೆ ಮಾಡುವಿರಿ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 7

Horoscope Today

ಮಕರ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತವಾಗುವ ಸಾಧ್ಯತೆ ಇದೆ. ದಿಢೀರ್ ಪ್ರಯಾಣ ಬೆಳೆಸಬೇಕಾಗಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ ಇರಲಿದೆ. ಅದೃಷ್ಟ ಸಂಖ್ಯೆ: 2

Horoscope Today

ಮೀನ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ, ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ ಮಾಡುವಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಕೆನಡಾ; ಐರ್ಲೆಂಡ್​ಗೆ ನಿರಾಸೆ

T20 World Cup : ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 137 ರನ್‌ ಬಾರಿಸಿತ್ತು. ಪ್ರತಿಯಾಗಿ ಆಡಿದ ಐರ್ಲೆಂಡ್‌ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾ 7 ವಿಕೆಟ್​ ಕಳೆದುಕೊಂಡು 125 ರನ್‌ ಗಳಿಸಿ ಸೋಲೋಪ್ಪಿಕೊಂಡಿತು. ಇದು ಕೂಡ ಟೂರ್ನಿಯ ಜಿದ್ದಾಜಿದ್ದಿನ ಪಂದ್ಯ ಎನಿಸಿಕೊಂಡಿತು.

VISTARANEWS.COM


on

T20 World Cup
Koo

ಬೆಂಗಳೂರು : ಗುರುವಾರವಷ್ಟೇ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡ ಟಿ20 ಕ್ರಿಕೆಟ್ ವಿಶ್ವ ಕಪ್​ನಲ್ಲಿ ಐತಿಹಾಸಿಕ ವಿಜಯವೊಂದನ್ನು ದಾಖಲಿಸಿತ್ತು. ಇದೀಗ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ ಟೂರ್ನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಈ ತಂಡವು ತನಗಿಂತ ಸ್ವಲ್ಪ ಮಟ್ಟಿಗೆ ಬಲಿಷ್ಠವಾಗಿರುವ ಐರ್ಲೆಂಡ್ ವಿರುದ್ಧ ವಿಜಯ ಸಾಧಿಸಿದೆ.

ನ್ಯೂಯಾರ್ಕ್‌ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್‌ 7ರ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನಡಾ ತಂಡ 12 ರನ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 137 ರನ್‌ ಬಾರಿಸಿತ್ತು. ಪ್ರತಿಯಾಗಿ ಆಡಿದ ಐರ್ಲೆಂಡ್‌ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾ 7 ವಿಕೆಟ್​ ಕಳೆದುಕೊಂಡು 125 ರನ್‌ ಗಳಿಸಿ ಸೋಲೋಪ್ಪಿಕೊಂಡಿತು. ಇದು ಕೂಡ ಟೂರ್ನಿಯ ಜಿದ್ದಾಜಿದ್ದಿನ ಪಂದ್ಯ ಎನಿಸಿಕೊಂಡಿತು.

ಕೆನಡಾ ತಂಡ ಪರ ಅ್ಯರೋನ್​ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಬ್ಯಾಟಿಂಗ್ ಆರಂಭಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಮೊದಲ ವಿಕೆಟ್‌ಗೆ ಕೇವಲ 12 ರನ್‌ಗಳನ್ನು ದಾಖಲಾಯಿತು. ಧಲಿವಾಲ್ ಆರು ರನ್ ಗೆ ಔಟಾದರು. ಬಳಿಕ ಪರ್ಗತ್ ಸಿಂಗ್ 18 ರನ್‌ ಗಳಿಸಿ ನಿರ್ಗಮಿಸಿದರು. ಅತ್ತ ಜಾನ್ಸನ್ ಮೂರು ಬೌಂಡರಿಗಳ ನೆರವಿನಿಂದ 14 ರನ್ ಗಳಿ ಪೆವಿಲಿಯನ್​ಗೆ ಮರಳಿದರು. ಜಾನ್ಸನ್ ಔಟಾದ ನಂತರ ಕ್ರೀಸ್​ಗೆ ಇಳಿದ ದಿಲ್‌ಪ್ರೀತ್ ಬಾಜ್ವಾ 7 ರನ್‌ ಔಟಾದರು. ಬಳಿಕ ನಿಕೋಲಸ್ ಕಿರ್ಟನ್ ಮೊವ್ವಾ ಉತ್ತಮ ಜೊತೆಯಾಟವಾಡಿದರು. 15.2 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿತು. ಏತನ್ಮಧ್ಯೆ ಮೆಕಾರ್ಥಿ ಎಸೆದ 19ನೇ ಓವರ್‌ನಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿತು. 35 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 49 ರನ್ ಗಳಿಸಿದ್ದ ಕಿರ್ಟನ್‌ 1 ರನ್​ನಿಂದ ಅರ್ಧ ಶತಕದ ಅವಕಾಶ ನಷ್ಟ ಮಾಡಿಕೊಂಡರು. ಆದಾಗ್ಯೂ ತಂಡ ಪರ ಗರಿಷ್ಠ ಮೊತ್ತ ಬಾರಿಸಿದರು. ಮೊವ್ವ 36 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 37 ರನ್ ಗಳಿಸಿದರು.

ಇದನ್ನೂ ಓದಿ : T20 World Cup : ಪಾಕಿಸ್ತಾನ ತಂಡದ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

ಐರ್ಲೆಂಡ್‌ ಬೌಲಿಂಗ್​ನಲ್ಲಿ ಯಂಗ್ ಮತ್ತು ಮೆಕಾರ್ಥಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್​ನಲ್ಲಿ ಅನುಕ್ರಮವಾಗಿ 32 ಮತ್ತು 24 ರನ್‌ ಬಿಟ್ಟುಕೊಟ್ಟು ತಲಾ ಎರಡು ವಿಕೆಟ್ ಪಡೆದರು. ಅದೈರ್ ಮತ್ತು ಡೆಲಾನಿ ತಲಾ ಒಂದು ವಿಕೆಟ್ ಕಬಳಿಸಿದರು.

ಐರ್ಲೆಂಡ್‌ ಚೇಸಿಂಗ್ ಫೇಲ್​

ಗುರಿ ಬೆನ್ನಟ್ಟಲು ಶುರು ಮಾಡಿದ ಐರ್ಲೆಂಡ್ ಸತತವಾಗಿ ಮೇಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಪೌಲ್‌ ಸ್ಟಿರ್ಲಿಂಗ್ ವಿಫಲರಾಗಿ ಕೇವಲ 9 ರನ್‌ ಗಳಿಸಿ ಔಟಾದರು. ಬಾಲ್ಬಿರ್ನಿ ಕೊಡುಗೆ 17 ರನ್‌. ಹ್ಯಾರಿ ಟೆಕ್ಟರ್‌ 7 ರನ್‌ ಗಳಿಸಿದರೆ, ಲೋರ್ಕನ್ ಟಕರ್ 10 ರನ್‌ ಗಳಿಸಿ ನಿರ್ಗಮಿಸಿದರು. ಕರ್ಟಿಸ್ ಕ್ಯಾಂಫರ್ 4 ರನ್‌ಗೆ ಸೀಮಿತಗೊಂಡರು. ದಿಢೀರನೆ ಕುಸಿತ ಕಂಡ ತಂಡಕ್ಕೆ ಡಾಕ್ರೆಲ್‌ ಹಾಗೂ ಮಾರ್ಕ್‌ ಅಡೈರ್‌ ಆಸರೆಯಾದರು. ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು.‌ ಆದರೆ, ಕೆನಡಾ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಕೊನೇ ಓವರ್​ನಲ್ಲಿ 17 ರನ್ ಗೆಲುವಿಗೆ ಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

Continue Reading
Advertisement
NDA 3.0
ಕರ್ನಾಟಕ1 min ago

NDA 3.0: ರಾಜ್ಯಕ್ಕೆ ಸಿಗಲಿದ್ಯಾ 2+1 ಸಚಿವ ಸ್ಥಾನ? ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?

Lok Sabha Election 2024
ರಾಜಕೀಯ8 mins ago

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

Kotee Movie Kannada Team Gives First Ticket To Kichcha Sudeep
ಸ್ಯಾಂಡಲ್ ವುಡ್11 mins ago

Kotee Movie Kannada: ಕಿಚ್ಚ ಸುದೀಪ್​ಗೆ ‘ಕೋಟಿ’ ಸಿನಿಮಾದ ಮೊದಲ ಟಿಕೆಟ್​!

Viral Video
ವೈರಲ್ ನ್ಯೂಸ್19 mins ago

Viral Video: ಮೆಟ್ರೊ ರೈಲಿನೊಳಗೆ ʼವಿದ್ಯಾವಂತ ಮಹಿಳೆಯರʼ ಫೈಟ್‌ ಹೇಗಿದೆ ನೋಡಿ!

crime news
ಕರ್ನಾಟಕ30 mins ago

ಸಂಬಂಧ ಕಡಿಯಲು ಸೆಂಟಿಮೆಂಟ್ ಬೇಕಿಲ್ಲ, ಕ್ಷುಲ್ಲಕ ಕಾರಣ ಸಾಕು; ಪತಿಯ ಪೊಸೇಸೀವ್‌ನೆಸ್‌ಗೆ ಬೇಸತ್ತ ಪತ್ನಿ ಪರಾರಿ

Viral Video
ವೈರಲ್ ನ್ಯೂಸ್37 mins ago

Viral Video: ಗ್ರಹಚಾರ ಕೆಟ್ಟಾಗ ಕಾರಿನ ಚಕ್ರ ಕಳಚಿ ತಲೆಗೆ ಅಪ್ಪಳಿಸಬಹುದು! ವಿಡಿಯೊ ನೋಡಿ

Ramoji Rao passed away
ದೇಶ47 mins ago

Ramoji Rao passed away: ಮಾಧ್ಯಮ ಲೋಕದ ದಿಗ್ಗಜ ಇನ್ನಿಲ್ಲ; ರಾಮೋಜಿ ರಾವ್ ವಿಧಿವಶ

Vastu Tips
ಧಾರ್ಮಿಕ1 hour ago

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

Monsoon Tour
ದೇಶ1 hour ago

Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

Karnataka Weather Forecast
ಮಳೆ2 hours ago

Karnataka Weather : ರಾಜ್ಯಾದ್ಯಂತ ಮುಂದುವರಿದ ಮಳೆ; 19 ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್‌ ಅಲರ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ15 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌