Powerful Kannada Movies | ಈ ಹಳೇ ಕನ್ನಡ ಸಿನಿಮಾಗಳಿಗೂ ಪ್ಯಾನ್ ಇಂಡಿಯಾ ಖದರು‌ ಇತ್ತು! - Vistara News

ಸಿನಿಮಾ

Powerful Kannada Movies | ಈ ಹಳೇ ಕನ್ನಡ ಸಿನಿಮಾಗಳಿಗೂ ಪ್ಯಾನ್ ಇಂಡಿಯಾ ಖದರು‌ ಇತ್ತು!

ಕನ್ನಡ ಚಿತ್ರರಂಗದಲ್ಲಿ (Kannada Movies) ಹಿಂದೆ ಬಂದು ಹೋದ ಸಾಕಷ್ಟು ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಬಹುದಾಗಿದ್ದ ಅರ್ಹತೆ ಹೊಂದಿದ್ದವು. ಅವುಗಳ ಕುರಿತು ಮಾಹಿತಿ ಇಲ್ಲಿವೆ.

VISTARANEWS.COM


on

Kannada Movies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈಗ ಪ್ಯಾನ್‌ ಇಂಡಿಯಾ ಸಿನಿಮಾ ಕಾಲ. ಒಂದೇ ಸಿನಿಮಾ ಇಡೀ ದೇಶವನ್ನು ತುದಿಗಾಲಿನಲ್ಲಿ ನಿಲ್ಲಿಸುವಷ್ಟು ಪವರ್‌ ಮತ್ತು ಪ್ರೆಸೆಂಟೇಷನ್‌ ಹೊಂದಿರಬೇಕು ಎನ್ನುವುದು ಪ್ಯಾನ್‌ ಇಂಡಿಯಾ ಕಲ್ಪನೆಯ ಮೂಲ ಹೂರಣ. ಹಿಂದೆ ಕೆಲವೇ ಬಾಲಿವುಡ್‌ ಸಿನಿಮಾಗಳು ಮಾತ್ರ ಇಡೀ ದೇಶವನ್ನು ಆಕ್ರಮಿಸಿಕೊಂಡು ಮನೆ ಮನೆಯನ್ನು ತಲುಪುತ್ತಿದ್ದವು. ಅದಕ್ಕಿದ್ದ ಭಾಷಾ ಶಕ್ತಿ, ತಾರಾ ಆಕರ್ಷಣೆಗಳು ಅವುಗಳನ್ನು ದೇಶವ್ಯಾಪಿ ಹಿಟ್‌ ಮಾಡಿಸುತ್ತಿದ್ದವು. ಮುಂದೆ ತೆಲುಗು ಮತ್ತು ತಮಿಳು ಭಾಷಾ ಚಿತ್ರಗಳು ಉತ್ತರದಲ್ಲೂ ಅಬ್ಬರಿಸಲು ಶುರು ಮಾಡಿದವು. ಈಗ ಅವೆಲ್ಲವನ್ನೂ ಮೀರಿ ಕನ್ನಡ ಚಿತ್ರಗಳು ದೇಶಾದ್ಯಂತ ಜಬರ್ದಸ್ತ್‌ ಆಗಿ ಮೆರೆಯುತ್ತಿದೆ. ಕೆಜಿಎಫ್‌-೨ ಚಿತ್ರವಂತೂ ಬಾಕ್ಸಾಫೀಸ್‌ ದಾಖಲೆಗಳನ್ನೆಲ್ಲ ಚಿಂದಿ ಮಾಡಿದೆ. ಇನ್ನೂ ಹಲವು ಚಿತ್ರಗಳು ಈಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿವೆ.

ಹಾಗಿದ್ದರೆ, ಹಿಂದೆಲ್ಲ ಕನ್ನಡದಲ್ಲಿ ಪ್ಯಾನ್‌ ಇಂಡಿಯಾದಲ್ಲಿ ಮಿಂಚಬಹುದಾಗಿದ್ದ ಕನ್ನಡ ಚಿತ್ರಗಳು ಬರುತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ನಿಜವೆಂದರೆ, ಕನ್ನಡ ಚಿತ್ರರಂಗ ಬಹು ಹಿಂದಿನಿಂದಲೇ ಇಡೀ ದೇಶವೇ ತಿರುಗಿ ನೋಡುವಂಥ, ಭಾಷೆ, ಜನ, ವರ್ಗಗಳನ್ನು ಮೀರಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಬಹುದಾದ ಚಿತ್ರಗಳನ್ನು ಸೃಷ್ಟಿಸಿದೆ. ಅದರಲ್ಲೂ ಉಪೇಂದ್ರ ನಿರ್ದೇಶನ ಮಾಡಿದ ಹಲವು ಚಿತ್ರಗಳು, ಶಿವರಾಜ್‌ ಕುಮಾರ್ ಅಭಿನಯದ ಸಿನಿಮಾಗಳು ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಬಲ್ಲ ಚಿತ್ರಗಳೇ ಆಗಿದ್ದವು. ಆದರೆ, ಆಗೆಲ್ಲ ಇವುಗಳನ್ನು ಮಾರುಕಟ್ಟೆ ಮಾಡುವಷ್ಟು ಯೋಚನೆಗಳನ್ನು ಮಾಡಿರಲಿಲ್ಲ. ಈಗಿನ ಹಾಗೆ ಪ್ಯಾನ್‌ ಇಂಡಿಯಾ ಕನಸುಗಳೂ ಇರಲಿಲ್ಲ. ಇದ್ದಿದ್ದರೆ ಈ ಕೆಳಗೆ ಹೇಳಿದ ಮತ್ತು ಹೇಳದೆ ಇರುವ ಇನ್ನೂ ಹಲವು ಚಿತ್ರಗಳು ಆಗಲೇ ಪ್ಯಾನ್‌ ಇಂಡಿಯಾದಲ್ಲಿ ಹುಡಿ ಹಾರಿಸುತ್ತಿದ್ದವು.

1. ‘ಎ’ ಚಿತ್ರ (A Film)

1998ರಲ್ಲಿ ತೆರೆಗೆ ಬಂದ ಉಪೇಂದ್ರ ನಿರ್ದೇಶನದ ರೊಮ್ಯಾಂಟಿಕ್‌ ಸೈಕಲಾಜಿಕಲ್‌ ಥ್ರಿಲ್ಲರ್‌ ‘ಎ’. ಒಬ್ಬ ಸಿನಿಮಾ ನಿರ್ದೇಶಕ ಮತ್ತು ನಾಯಕಿ ನಡುವಿನ ಪ್ರೇಮ ಕಥೆಯನ್ನು ಹೊಂದಿರುವ, ರಿವರ್ಸ್‌ ಸ್ಕ್ರೀನ್‌ ಪ್ಲೇ ಹೊಂದಿರುವ ಈ ಸಿನಿಮಾ ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಕಥನವನ್ನು, ರಾಜಕೀಯವನ್ನು ೨೪ ವರ್ಷಗಳ ಹಿಂದೆಯೇ ತೆರೆದಿಟ್ಟಿತ್ತು. ಸಿನಿಮಾರಂಗದ ಕಹಿ ಸತ್ಯಗಳನ್ನು ಹಸಿಹಸಿಯಾಗಿ ತೆರೆದಿಟ್ಟಿದ್ದ ಈ ಸಿನಿಮಾ ಭಾಷೆಗಳ ಹಂಗಿಲ್ಲದೆ ಗೆಲ್ಲಬಲ್ಲ ತಾಕತ್ತನ್ನು ಹೊಂದಿತ್ತು.

ಇದನ್ನೂ ಓದಿ | Cinedubs Mobile App | ವಿಕ್ರಾಂತ್‌ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್‌ ಆ್ಯಪ್‌; ಏನಿದರ ವಿಶೇಷತೆ?

ಉಪೇಂದ್ರ ಅವರು ಈ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ (1998) ಮತ್ತು ಗುರುಕಿರಣ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ (1998) ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ₹1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ₹20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲಿ 25 ವಾರಗಳ ಯಶಸ್ವಿ ಪ್ರದರ್ಶನ ಕಂಡ ʻಎʼ ತೆಲುಗಿನಲ್ಲಿ ಶತ ದಿನೋತ್ಸವ ಆಚರಿಸಿತ್ತು.

2. ಉಪೇಂದ್ರ ಸಿನಿಮಾ

ಮಾನವ ಸಂಬಂಧಗಳನ್ನು ಪಾತ್ರಗಳ ಮೂಲಕ ಪ್ರೆಸೆಂಟ್‌ ಮಾಡಿದ ಉಪೇಂದ್ರ ಅವರ ಮತ್ತೊಂದು ಸೈಕಲಾಜಿಕಲ್‌ ಸಿನಿಮಾ. ೧೯೯೯ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯ ಜತೆ ಮೂವರು ನಾಯಕಿಯರು ಹೊಂದಿರುವ ಸಂಬಂಧಗಳ ಕಥಾನಕವಿದೆ. ಉಪೇಂದ್ರ, ಪ್ರೇಮಾ, ದಾಮಿನಿ ಮತ್ತು ರವೀನಾ ಚಿತ್ರದಲ್ಲಿ ನಟಿಸಿದ್ದರು. ಈ ನಟ ಮತ್ತು ನಾಯಕಿಯರ ಹೆಸರನ್ನು ಸೇರಿಸಿದರೂ ಉಪೇಂದ್ರ ಎಂದೇ ಆಗುತ್ತದೆ. ಆ ಮಟ್ಟಿಗಿನ ಲೆಕ್ಕಾಚಾರದಲ್ಲಿ ಉಪೇಂದ್ರ ಈ ಚಿತ್ರವನ್ನು ಕಟ್ಟಿದ್ದರು. ಉಪೇಂದ್ರ ಅವರೇ ಸಾಹಿತ್ಯ ಬರೆದು, ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ ಸಿನಿಮಾ ಇದು. ಚಿತ್ರದ ಪ್ರತಿ ಹಾಡೂ ಹಿಟ್‌ ಆಗಿತ್ತು.

ಈ ಚಿತ್ರ 1999ರಲ್ಲಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. 2001ರಲ್ಲಿ ಜಪಾನ್‌ನಲ್ಲಿ ನಡೆದ ಯುಬಾರಿ ಇಂಟರ್‌ನ್ಯಾಶನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರ ಪ್ರದರ್ಶನಗೊಂಡಿತ್ತು.

3. ಉಳಿದವರು ಕಂಡಂತೆ

ಸಿನಿಮಾ ನಿರ್ಮಾಣದಲ್ಲೇ ಒಂದು ಹೊಸ ಕ್ರಾಂತಿ ಮಾಡಿದ ಪಕ್ಕಾ ʻಸ್ಕ್ರಿಪ್ಟೆಡ್‌ʼ ಚಿತ್ರ ಇದು. ಪ್ಯಾನ್‌ ಇಂಡಿಯಾಕ್ಕೆ ಹೇಳಿ ಮಾಡಿಸಿದ ಸಬ್ಜೆಕ್ಟ್‌ ಮತ್ತು ನಿರ್ಮಾಣ. ಮುಂಬಯಿ ಭೂಗತ ಲೋಕ ಮತ್ತು ಕರ್ನಾಟಕ ಕರಾವಳಿಯ ಪುಟ್ಟ ಮೀನುಗಾರಿಕಾ ಪಟ್ಟಣವೊಂದರ ನಡುವಿನ ಕ್ರಿಮಿನಲ್‌ ಸಂಬಂಧದ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ಅಭಿನಯಿಸಿದ ಈ ಸಿನಿಮಾ ಅವರು ನಿರ್ದೇಶಿಸಿದ ಮೊದಲ ಚಿತ್ರವೂ ಹೌದು.

4. ಉಗ್ರಂ

ರೋರಿಂಗ್‌ ಸ್ಟಾರ್‌ ಶ್ರೀ ಮುರುಳಿ ಅಬ್ಬರಿಸಿದ ಈ ಚಿತ್ರ 2004ರಲ್ಲಿ ತೆರೆ ಕಂಡಿತ್ತು. ಕೆಜಿಎಫ್‌ನಂಥ ಅದ್ಧೂರಿ ಚಿತ್ರವನ್ನು ಕಟ್ಟಿಕೊಟ್ಟ ಪ್ರಶಾಂತ್‌ ನೀಲ್‌ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ಒಬ್ಬ ಅತಿಸಾಮಾನ್ಯ ವ್ಯಕ್ತಿ ಕ್ರೈಮ್‌ ಸಿಂಡಿಕೇಟ್‌ನೊಳಗೆ ಸಿಕ್ಕಿಹಾಕಿಕೊಳ್ಳುವ ಈ ಚಿತ್ರ ಯಾವುದೇ ಭಾರತೀಯ ಭಾಷೆಗೂ ಹೊಂದಿಕೊಳ್ಳಬಲ್ಲ ಕಂಟೆಂಟ್‌ ಹೊಂದಿದೆ. ಈ ಚಿತ್ರದಲ್ಲಿ ಸನ್ನಿವೇಶಗಳು, ಆಕ್ಷನ್‌ ಸೀಕ್ವೆನ್ಸ್‌ಗಳು ಇದರಲ್ಲಿವೆ. ಇದು ಭಾರತ್ ಗೋಲ್ಡ್ ಮೈನ್ಸ್‌ನ ಸೈನೈಡ್ ಡಂಪ್‌ನಲ್ಲಿ ಚಿತ್ರಿಸಿದ ಮೊದಲ ಚಲನಚಿತ್ರ. ಬಿಡುಗಡೆಯಾದ ಮೊದಲ ವಾರವೇ ಬಾಕ್ಸ್‌ ಆಫೀಸ್‌ನಲ್ಲಿ 30 ಕೋಟಿ ರೂ. ಬಾಚಿಕೊಂಡಿತು.

5. ಟಗರು

2018ರಲ್ಲಿ ತೆರೆಕಂಡ ಈ ಸಿನಿಮಾ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ನಟಿಸಿರುವ ಚಿತ್ರ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ 100 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಂಡಿತು. 66ನೇ ಫಿಲ್ಮ್‌ಫೇರ್‌ ಪ್ರಶಸ್ತಿ, ದೊರೆತಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ದರೋಡೆಕೋರರನ್ನು ಒಂದುಗೂಡಿಸುವ ಸಂಬಂಧದ ನಿರೂಪಣೆಯೊಂದಿಗೆ ಕಥೆ ಸಾಗುತ್ತದೆ.

6. ರಂಗಿತರಂಗ

2015ರಲ್ಲಿಈ ಚಿತ್ರ ತೆರೆಗೆ ಬಂದಿದ್ದು, ಅನೂಪ್‌ ಭಂಡಾರಿ ಚಿತ್ರವನ್ನು ನಿರ್ದೇಶಿದ್ದಾರೆ. ರಂಗಿತರಂಗವು ಕರ್ನಾಟಕದ ಕರಾವಳಿ ಪ್ರದೇಶದ ಕಾಲ್ಪನಿಕ ಗ್ರಾಮವಾದ ಕಮರೊಟ್ಟು ಗ್ರಾಮದ ಕಥಾ ಹಂದರ ಹೊಂದಿದೆ. ಸೈಮಾ ಪ್ರಶಸ್ತಿ, ಫಿಲ್ಮ್‌ಫೇರ್‌ ಪ್ರಶಸ್ತಿ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ರಂಗಿತರಂಗ ದಿ ನ್ಯೂಯಾರ್ಕ್ ಟೈಮ್ಸ್‌ನ ವಾರಾಂತ್ಯದ ಬಾಕ್ಸ್ ಆಫೀಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಕನ್ನಡ ಚಲನಚಿತ್ರವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ಬಾಹುಬಲಿ ಚಿತ್ರಕ್ಕೆ ಸೆಡ್ಡು ಹೊಡೆದಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ, ಇದು ಅಮೆರಿಕಾದಲ್ಲಿ 50 ದಿನಗಳ ಪ್ರದರ್ಶನವನ್ನು ಪೂರೈಸಿದ ಸಿನಿಮಾ ಆಗಿದೆ. ಹಾಗೂ 21 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿತು.

7. ನಿಷ್ಕರ್ಷ ಸಿನಿಮಾ

ನಟ ವಿಷ್ಣುವರ್ಧನ್‌ ಅವರ 1993ರಲ್ಲಿ ತೆರೆ ಕಂಡ ಚಿತ್ರ ಇದಾಗಿದ್ದು, ಸಸ್ಪೆನ್ಸ್‌ ಥ್ರಿಲರ್‌ ಜಾನರ್‌ ಹೊಂದಿದ ಸಿನಿಮಾ ಆಗಿದೆ. ಆ ಸಮಯದಲ್ಲಿಯೇ 60 ಲಕ್ಷ ಬಜೆಟ್‌ ಸಿನಿಮಾ ಇದಾಗಿತ್ತು. ವಿಶೇಷ ಅಂದರೆ ಹಾಡುಗಳೇ ಇಲ್ಲದ ಈ ಸಿನಿಮಾವನ್ನು ಹಂಚಿಕೆದಾರರೂ ಕೊಳ್ಳಲು ಮುಂದೆ ಬಂದಿರುತ್ತಿರಲಿಲ್ಲ. ಆದರೂ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತು.

8. ಹಾಲಿವುಡ್‌ ಸಿನಿಮಾ

2002ರಲ್ಲಿ ಉಪೇಂದ್ರ ಅವರು ಬರೆದು, ದಿನೇಶ್‌ ಬಾಬು ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಆಂಡ್ರಾಯ್ಡ್ ರೋಬೋಟ್ ಪಾತ್ರವನ್ನು ನಿಭಾಯಿಸಿದ್ದರು.

9. ಓಂ ಸಿನಿಮಾ

1995ರಲ್ಲಿ ಬಿಡುಗಡೆಗೊಂಡ ಓಂ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್‌ ಹಾಗೂ ಪ್ರೇಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಇನ್ನೂ ವಿಶೇಷ ಎಂದರೆ ಡಾ.ರಾಜ್‌ಕುಮಾರ್‌ ಅವರು ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿ, ತೆಲಗುವಿನಲ್ಲಿ ರಿಮೇಕ್‌ ಮಾಡಲಾಯಿತು. ರೌಡಿಸಂನ ಕುರಿತ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದೆ.

ಸುಮಾರು 70 ಲಕ್ಷ ಬಜೆಟ್‌ನಲ್ಲಿ ತಯಾರಾದ ಚಿತ್ರ ಆ ಸಮಯದಲ್ಲಿಯೇ ಡಾ.ರಾಜ್ ಬ್ಯಾನರ್‌ಗೆ ಅತ್ಯಂತ ದುಬಾರಿ ಚಿತ್ರವಾಗಿತ್ತು. ಇದು ಸುಮಾರು 2 ಕೋಟಿಗಳಷ್ಟು ಪ್ರೀ-ರಿಲೀಸ್ ವ್ಯವಹಾರವನ್ನು ಮಾಡಿತು.

ಈ ಚಿತ್ರವು 550ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾಗಿ, ಲಿಮ್ಕಾ ದಾಖಲೆಯನ್ನು ಮಾಡಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರವು 30 ಬಾರಿ ಬಿಡುಗಡೆಯಾಗಿದ್ದು ದಾಖಲೆಯಾಗಿದೆ.

10. ಲೂಸಿಯಾ ಸಿನಿಮಾ

ಮನೋವೈಜ್ಞಾನಿಕ ಕಥಾ ಹಂದರ ಹೊಂದಿರುವ ಈ ಸಿನಿಮಾ ಪವನ್‌ ಒಡೆಯರ್‌ ನಿರ್ದೇಶಿಸಿ, ಸತೀಶ್‌ ನೀನಾಸಂ, ಶೃತಿ ಹರಿಹರನ್‌ ಹಾಗೂ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ನಡೆದ ಭಾರತೀಯ ಚಲನಚಿತ್ರ ಉತ್ಸವದಲ್ಲಿ ಮೆಚ್ಚುಗೆ ಪಡೆಯಿತು. ಮತ್ತು ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲ ಬಾರಿಗೆ ಪ್ರೇಕ್ಷಕರೇ ನಿರ್ಮಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ದೇಶ, ವಿದೇಶಗಳಲ್ಲಿ ಬಿಡುಗಡೆಗೊಂಡು ಜನಮನ್ನಣೆ ಪಡೆದುಕೊಂಡಿತು.

11. ಭಕ್ತ ಪ್ರಹ್ಲಾದ

ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌ ಅಭಿನಯದ ಭಕ್ತ ಪ್ರಹ್ಲಾದ ಸಿನಿಮಾ 1983ರಲ್ಲಿ ಬಿಡುಗಡೆಗೊಂಡಿತು. ಈ ಸಿನಿಮಾ ಛಾಯಾಗ್ರಹಣಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಇದು ತೆಲುಗಿನಲ್ಲಿ ರಿಮೇಕ್‌ ಆಗಿದೆ. ಇದರಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ನಟಿಸಿದ್ದು, ಜನಮನ್ನಣೆ ಪಡೆಯಿತು.ಇದರ ಜತೆಗೆ, ಡಾ.ರಾಜ್‌ಕುಮಾರ್ ಅವರ ಅನೇಕ ಪೌರಾಣಿಕ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Kavitha Gowda: ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಸಂಭ್ರಮದ ವಿಚಾರವನ್ನು ಹಂಚಿಕೊಂಡಿದೆ. ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕವಿತಾ ಗೌಡ ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದರು.

VISTARANEWS.COM


on

Kavitha Gowda chandan expected First Child
Koo

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ (Actor Chandan ) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಸಂಭ್ರಮದ ವಿಚಾರವನ್ನು ಹಂಚಿಕೊಂಡಿದೆ. 

ಇನ್‌ಸ್ಟಾ ಪೋಸ್ಟ್‌ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.

ಇಬ್ಬರೂ ಲಾಕ್‌ಡೌನ್ ಸಮಯಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Lakshmi Baramma Serial: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಹೊರಬಂದ್ರಾ ಕೀರ್ತಿ ಪಾತ್ರಧಾರಿ? ಸೀರಿಯಲ್‌ ನೋಡಲ್ಲ ಅಂದ್ರು ಫ್ಯಾನ್ಸ್‌!

ಕವಿತಾ ಗೌಡ ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದರು. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ. 

ಕವಿತಾ ಗೌಡ ಹಾಗೂ ಚಂದನ್‌ ಒಬ್ಬರನ್ನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಕವಿತಾ ಗೌಡ ಕೆಲ ವರ್ಷಗಳ ಕಾಲ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ, ನಂತರ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.ಅತ್ತ ನಟಿ ಕವಿತಾ ಗೌಡ ಅವರು ಕೂಡ ತಮಿಳಿನ ‘ಅನ್ಬೇ ಶಿವಂ’ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಒಂದಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.

Continue Reading

ಬಾಲಿವುಡ್

Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

Met Gala 2024: ಮೆಟ್‌ ಗಾಲಾ ಈ ಬಾರಿ ನಾಳೆ (ಮೇ.6)ರಂದು ನಡೆಯಲಿದೆ. ಮೆಟ್ ಗಾಲಾ ಅತಿಥಿ ಪಟ್ಟಿಯನ್ನು ಮುಖ್ಯ ಕಾರ್ಯಕ್ರಮದ ಹಿಂದಿನ ಸಂಜೆಯವರೆಗೂ ರಹಸ್ಯವಾಗಿ ಇರಿಸಲಾಗುತ್ತದೆ. ಸುಮಾರು 450 ಜನರು ಈ ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ ಎಂದು ವರದಿಯಾಗಿದೆ. ಹೊಸ ಊಹಾಪೋಹಗಳೆಂದರೆ ಸೆಲೆಬ್ರಿಟಿ ಜೋಡಿ ಟೇಲರ್ ಸ್ವಿಫ್ಟ್ ಮತ್ತು ಟ್ರಾವಿಸ್ ಕೆಲ್ಸೆ ಈ ವರ್ಷ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Met Gala 2024 Alia Bhatt attend
Koo

ಬೆಂಗಳೂರು: ನಟಿ ಆಲಿಯಾ ಭಟ್‌ (Alia Bhatt) ಈಗಾಗಲೇ ಭಾರತದ ಹಲವರ ಮನಸ್ಸು ಗೆದ್ದಿರುವ ನಟಿ. 2022ರಲ್ಲಿ ನಟಿ ಹಿಂದಿ ಚಿತ್ರೋದ್ಯಮದಲ್ಲಿ ಹಿಟ್‌ ಮೇಲೆ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ವಿಶ್ವದ ಸೆಲೆಬ್ರಿಟಿಗಳ ಅತ್ಯಂತ ದೊಡ್ಡ ಫ್ಯಾಷನ್‌ ಕಾರ್ಯಕ್ರಮವಾದ ಮೆಟ್‌ ಗಾಲಾದ ( Met Gala 2024) ರೆಡ್‌ ಕಾರ್ಪೆಟ್‌ ಮೇಲೆ ಹಿಂದಿನ ವರ್ಷ ಆಲಿಯಾ ಹೆಜ್ಜೆ ಹಾಕಿದ್ದರು. ಈ ಬಾರಿಯೂ ನಟಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮೆಟ್ ಗಾಲಾ 2024ರ ಭಾಗವಾಗಿರುವ ಕೆಲವೇ ಕೆಲವು ಭಾರತೀಯ ಹೆಸರುಗಳಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಈ ಈವೆಂಟ್‌ಗೆ ಭಾಗವಾಗುತ್ತಿರುವುದು ಆಲಿಯಾ ಎರಡನೇ ಬಾರಿ. ಮೇ 4ರ ರಾತ್ರಿ ಮುಂಬೈನ ಅಂತಾರಾಷ್ಟ್ರೀಯ ಖಾಸಗಿ ಟರ್ಮಿನಲ್‌ನಿಂದ ನ್ಯೂಯಾರ್ಕ್‌ಗೆ ನಟಿ ಪ್ರಯಾಣಿಸಿರುವುದು ವರದಿಯಾಗಿದೆ.

ಮೆಟ್‌ ಗಾಲಾ ಈ ಬಾರಿ ನಾಳೆ (ಮೇ.6)ರಂದು ನಡೆಯಲಿದೆ. ಮೆಟ್ ಗಾಲಾ ಅತಿಥಿ ಪಟ್ಟಿಯನ್ನು ಮುಖ್ಯ ಕಾರ್ಯಕ್ರಮದ ಹಿಂದಿನ ಸಂಜೆಯವರೆಗೂ ರಹಸ್ಯವಾಗಿ ಇರಿಸಲಾಗುತ್ತದೆ. ಸುಮಾರು 450 ಜನರು ಈ ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ ಎಂದು ವರದಿಯಾಗಿದೆ. ಹೊಸ ಊಹಾಪೋಹಗಳೆಂದರೆ ಸೆಲೆಬ್ರಿಟಿ ಜೋಡಿ ಟೇಲರ್ ಸ್ವಿಫ್ಟ್ ಮತ್ತು ಟ್ರಾವಿಸ್ ಕೆಲ್ಸೆ ಈ ವರ್ಷ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಲಾರೆನ್ ಸ್ಯಾಂಚೆಜ್, ಕೈಟ್ಲಿನ್ ಕ್ಲಾರ್ಕ್, ಸ್ಯಾಮ್ ಆಲ್ಟ್‌ಮನ್, ಜೆಫ್ ಬೆಜೋಸ್ ಸಹ ಈ ವರ್ಷದ ಮೆಟ್ ಗಾಲಾದಲ್ಲಿ ನಿರೀಕ್ಷಿಸಲಾದ ಕೆಲವು ಹೆಸರುಗಳು. ಪ್ರಿಯಾಂಕಾ ಚೋಪ್ರಾ ಈ ಬಾರಿ ಗೈರಾಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Heeramandi Trailer: ʻಹೀರಾಮಂಡಿʼ ಟ್ರೈಲರ್‌ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ ಫಿದಾ!

ಈ ಹಿಂದೆಯೂ ಬಾಲಿವುಡ್‌ನ ಅನೇಕ ನಟಿಯರು ಈ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ನಲ್ಲಿ ವಿಶೇಷವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ನತಾಶಾ ಅವರು ಸಬ್ಯಸಾಚಿ ಸೀರೆ ತೊಟ್ಟು ಅದರೊಂದಿಗೆ ಚಿನ್ನದ ಬಣ್ಣದ ಲೋಹದ ಕೋಟ್‌ ಧರಿಸಿ ಕಾಣಿಸಿಕೊಂಡಿದ್ದರು. ನಟಿಯ ಈ ಲುಕ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು. ಹಾಗೆಯೇ 2017ರಲ್ಲಿ ದೀಪಿಕಾ ಪಡುಕೋಣೆ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೇಲೆ ಮೊದಲನೇ ಬಾರಿಗೆ ಕಾಣಿಸಿಕೊಂಡಿದ್ದರು. 2018ರಲ್ಲಿ ಮತ್ತೊಮ್ಮೆ ರೆಡ್‌ ಕಾರ್ಪೆಟ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆಗ ನಟಿ ಪ್ರಬಲ್‌ ಗುರುಂಗ್‌ ಅವರು ವಿನ್ಯಾಸ ಮಾಡಿದ್ದ ಕೆಂಪು ಬಣ್ಣದ ಉಡುಗೆ ತೊಟ್ಟಿದ್ದರು. ಒಂದು ಶೋಲ್ಡರ್‌ನ ಆ ಉಡುಗೆಯ ಫೋಟೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಯಾಂಕಾ ಚೋಪ್ರಾ ಅವರು 2017ರಲ್ಲಿ ಮೆಟ್‌ ಗಾಲಾದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಈಗಿನ ಪತಿ ನಿಕ್‌ ಜೋನಾಸ್‌ ಅವರ ಜತೆಗೆ ಕಾಣಿಸಿಕೊಂಡಿದ್ದರು. ಉದ್ದನೆಯ ವೇಲು ರೀತಿಯಲ್ಲಿ ಬಟ್ಟೆ ಹೊಂದಿರುವ ಟ್ರೆಂಚ್‌ ಕೋಟ್‌ ಉಡುಗೆಯಲ್ಲಿ ನಟಿ ಮಿಂಚಿದ್ದರು

Continue Reading

ಸಿನಿಮಾ

Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

Kannada New Movie: ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೂ ಎಲ್ಲರ ಗಮನ ಸೆಳದಿದೆ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗುತ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಈ ಚಿತ್ರದ ಆಡಿಯೊ ಹಕ್ಕು ಪ್ರತಿಷ್ಠಿತ ಆಡಿಯೊ ಸಂಸ್ಥೆ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

VISTARANEWS.COM


on

Kannada New Movie Adhipatra audio rights
Koo

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ (Kannada New Movie) ರೂಪೇಶ್ ಶೆಟ್ಟಿ (Roopesh shetty) ನಟನೆಯ‌ ಬಹು ನಿರೀಕ್ಷಿತ ಸಿನಿಮಾ ʻಅಧಿಪತ್ರʼ.(Adhipatra) ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೊ ಹಕ್ಕು ಪ್ರತಿಷ್ಠಿತ ಆಡಿಯೊ ಸಂಸ್ಥೆ ಲಹರಿ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

ಮೇ‌ 10ಕ್ಕೆ ಅಧಿಪತ್ರ ಟೀಸರ್

ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೂ ಎಲ್ಲರ ಗಮನ ಸೆಳದಿದೆ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗುತ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ ಝಲಕ್ ಹೊರಬೀಳಲಿದೆ. ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ.

ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್‌ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಇವರು ನಿರ್ದೇಶನ ಮಾಡಿದ ಶಾರ್ಟ್ ಫಿಲಂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ಪಡೆದಿತ್ತು ಹಾಗೂ ಕೆಲವು ಜಾಹೀರಾತುಗಳಿಗೆ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಚಯನ್ ಶೆಟ್ಟಿ ʼಅಧಿಪತ್ರʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕೆ ಆರ್ ಸಿನಿ ಕಂಬೈನ್ಸ್ ಬ್ಯಾನರ್ ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು . ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.

Continue Reading

ಸಿನಿಮಾ

Prajwal Revanna Case: ವೈರಲ್ ಆಗುತ್ತಿರುವ 2976 ವಿಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ ಎಂದ ಹರ್ಷಿಕಾ ಪೂಣಚ್ಚ!

Prajwal Revanna Case: ತಮಿಳು ನಟಿ ಕಸ್ತೂರಿ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ತೆಲುಗು ನಟಿ, ನಿರೂಪಕ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದರು.ಈ ನಡುವೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್‌ ಮುಖಂಡರು ಮನವೊಲಿಸಿದ್ದು, ಅವರು ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್‌ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್‌ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

VISTARANEWS.COM


on

Prajwal Revanna Case reaction by Harshika Poonacha
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣವು (Hassan Pen Drive Case) ದಿನೇ ದಿನೆ ಜಟಿಲವಾಗುತ್ತಾ ಸಾಗಿದೆ. ಈ ನಡುವೆ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಿನಿಮಾ ತಾರೆಯರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಎಕ್ಸ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.”ದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆʼʼಎಂದು ಬರೆದುಕೊಂಡಿದ್ದಾರೆ.

ಹರ್ಷಿಕಾ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವಿಡಿಯೊಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು” ಎಂದು ಹರ್ಷಿಕಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

ಮತ್ತೊಂದು ಎಕ್ಸ್‌ನಲ್ಲಿ ʻʻಈ ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರನ್ನು ನೋಡಿ ನೋವಾಗುತ್ತಿದೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದಿಂದ ಬಂದವರ ಎಂದು ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರʼʼಎಂದು ಬರೆದುಕೊಂಡಿದ್ದಾರೆ.

ʻʻಕೊನೆಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್‌ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ? ಇನ್ನು ಮುಂದೆ ಅವರನ್ನು ಯಾವ ದೃಷಿಯಲ್ಲಿ ಜನ ನೋಡಲಿದ್ದಾರೆ? ಅವರ ಕುಟುಂಬ ಮತ್ತು ಮಕ್ಕಳ ಗತಿ ಏನು? ಎಂದು ಹರ್ಷಿಕಾ ಕಳವಳ ವ್ಯಕ್ತಪಡಿಸಿದ್ದಾರೆ.

ತಮಿಳು ನಟಿ ಕಸ್ತೂರಿ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ತೆಲುಗು ನಟಿ, ನಿರೂಪಕ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದರು.

ಈ ನಡುವೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್‌ ಮುಖಂಡರು ಮನವೊಲಿಸಿದ್ದು, ಅವರು ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್‌ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್‌ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್‌ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಟೀಂ ಬೀಡುಬಿಟ್ಟಿದೆ. ಆದರೆ, ಪ್ರಜ್ವಲ್‌ ರೇವಣ್ಣ ಈವರೆಗೂ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾಗಿದ್ದಾರೆ.

ಆದರೆ, ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್‌ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

Continue Reading
Advertisement
Ramanagara News
ಕರ್ನಾಟಕ4 hours ago

Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Narendra Modi
ದೇಶ4 hours ago

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

IPL 2024
ಪ್ರಮುಖ ಸುದ್ದಿ4 hours ago

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

Prajwal Revanna Case
ಪ್ರಮುಖ ಸುದ್ದಿ4 hours ago

Prajwal Revanna Case: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಶೇರ್‌ ಮಾಡಿದ್ರೆ ಕೇಸ್‌ ಗ್ಯಾರಂಟಿ; ಎಸ್‌ಐಟಿ ಎಚ್ಚರಿಕೆ

IPL 2024
ಕ್ರೀಡೆ4 hours ago

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

Narendra Modi
ದೇಶ4 hours ago

Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Prajwal Revanna Case
ಕರ್ನಾಟಕ5 hours ago

Prajwal Revanna Case: ಜಡ್ಜ್‌ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್‌.ಡಿ.ರೇವಣ್ಣ!

IPL 2024
ಪ್ರಮುಖ ಸುದ್ದಿ5 hours ago

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

Farooq Abdullah
ದೇಶ5 hours ago

ಪಿಒಕೆ ನಮ್ಮದು ಎಂದಿದ್ದಕ್ಕೆ ಪಾಕ್ ಬಳೆ ತೊಟ್ಟಿಲ್ಲ ಎಂದ ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ!‌ ಇವರ ಬೆಂಬಲ ಯಾರಿಗೆ?

Champions Trophy
Latest5 hours ago

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ8 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ9 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ10 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ23 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌