Amrit Mahotsav | ಪ್ರಥಮ ಸ್ವಾತಂತ್ರ್ಯ ಸೇನಾನಿ ತಿರುನಲ್ವೇಲಿಯ ಪೂಲಿತ್ತೇವನ್ - Vistara News

ಅಂಕಣ

Amrit Mahotsav | ಪ್ರಥಮ ಸ್ವಾತಂತ್ರ್ಯ ಸೇನಾನಿ ತಿರುನಲ್ವೇಲಿಯ ಪೂಲಿತ್ತೇವನ್

ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ್‌ರಂಥವರ ಚರಿತ್ರೆಯನ್ನು ನಮ್ಮ ಮಕ್ಕಳಿಂದ ಉರು ಹೊಡೆಸುತ್ತಾರೆ. ಆದರೆ ವೀರ ಪರಾಕ್ರಮಿ ಪೂಲಿತ್ತೇವನ್ ಅಂಥವರ ಬಗ್ಗೆ ಕಿಂಚಿತ್ತೂ ಹೇಳಿಕೊಡದಿರುವುದು ವಿಷಾದನೀಯ.

VISTARANEWS.COM


on

amrit mahotsav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪೂಲಿತ್ತೇವನ್- ಈ ಹೆಸರೇ ವಿಚಿತ್ರ. ಬಹುಶಃ ತಮಿಳಿಗರಲ್ಲದವರು ಕೇಳಿಯೇ ಇರದ ಹೆಸರದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೂಲಿತ್ತೇವನ್ ಭಾರತ ಸ್ವಾತಂತ್ರ್ಯ ಹೋರಾಟದ ಮೊಟ್ಟಮೊದಲ ಸೇನಾನಿ ಎಂದರೆ ಬಹುಶಃ ಇತಿಹಾಸಜ್ಞರು ನಂಬಲಿಕ್ಕಿಲ್ಲ. ಆದರಿದು ನಿಜ. 1855ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೂ (ಅದನ್ನು ಬ್ರಿಟಿಷರು ಮತ್ತು ಎಡಪಂಥೀಯ ಇತಿಹಾಸಕಾರರು ‘ಸಿಪಾಯಿ ದಂಗೆ’ ಎಂದು ಕರೆದು ಅವಮಾನಿಸಿದ್ದರು) ಮುನ್ನ, ನೂರು ವರ್ಷಗಳಿಗೂ ಹಿಂದೆ ಪೂಲಿತ್ತೇವನ್ ಬ್ರಿಟಿಷರ ವಿರುದ್ಧ ಮೊದಲು ಕತ್ತಿ ಝಳಪಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಮಹಾನ್ ವೀರ.

ಈತನ ಮೂಲ ಹೆಸರು ಕಟ್ಟಪ್ಪ ಪೂಲಿತ್ತೇವನ್. ತಿರುನಲ್ವೇಲಿ ಜಿಲ್ಲೆಯ ನೆರಕ್ಕತ್ತನ್ ಸೆವ್ವಲ್ ಎಂಬ ಊರಿನಲ್ಲಿ ಚಿತಿರಪುತಿರ ಥೇವರ್ ಮತ್ತು ಶಿವಜ್ಞಾನ ನಾಚಿಯಾರ್ ದಂಪತಿಗಳ ಮಗನಾಗಿ 1-5-1715ರಲ್ಲಿ ಜನಿಸಿದ. ಆಗ ತಿರುನಲ್ವೇಲಿಯ ದಕ್ಷಿಣ ಭಾಗ ಪಾಂಡ್ಯ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು. ಪೂಲಿತ್ತೇವನ್ ತಂದೆ ಚಿತಿರಪುತಿರ ಥೇವರ್ 63 ವರ್ಷಗಳ ಕಾಲ ನೆರಕ್ಕತ್ತನ್ ಸೆವ್ವಲ್ ಪಾಳಯಂ (ಸಣ್ಣ ಸಾಮ್ರಾಜ್ಯ) ಆಳಿದ ಶೂರ. ಉಳಿದ ಪಾಳಯಂಗಳ ದೊರೆಗಳು ಚಿತಿರಪುತಿರ ಥೇವರ್‌ನನ್ನು ಬಹಳ ಭಯಭಕ್ತಿಯಿಂದ ಗೌರವಿಸಿದ್ದರು. ಅಂತಹ ಕಾಲದಲ್ಲಿ ಜನಿಸಿದ ಪೂಲಿತ್ತೇವನ್ ಸಹಜವಾಗಿಯೇ ವೀರಾಧಿವೀರನಾಗಿ ಬೆಳೆದ. ಚಿಕ್ಕಂದಿನಲ್ಲೇ ದೇವರು ಮತ್ತು ಧರ್ಮದ ಬಗ್ಗೆ ಅಗಾಧ ಶ್ರದ್ಧೆ, ಗೌರವ. ಇಲಂಜಿ ಸುಬ್ರಮಣಿಯನ್ ಪಿಳ್ಳೆ ಅವರಿಂದ ಚಿಕ್ಕಂದಿನಲ್ಲೇ ತಮಿಳು, ವ್ಯಾಕರಣ, ಸಾಹಿತ್ಯವನ್ನು ಅಭ್ಯಸಿಸಿದ ಪೂಲಿತ್ತೇವನ್ ಅನಂತರ ತಮಿಳಿನಲ್ಲಿ ಹಲವಾರು ಕವನಗಳನ್ನು ರಚಿಸಿದ್ದ. 12 ವರ್ಷದವನಿದ್ದಾಗ ಪೂಲಿತ್ತೇವನ್ ಸಮರ ಕಲೆ, ಕುದುರೆ ಸವಾರಿ, ಆನೆ ಸವಾರಿ, ಕುಸ್ತಿ, ಧನುರ್ವಿದ್ಯೆ, ಖಡ್ಗಯುದ್ಧ, ಹುಲಿಶಿಕಾರಿ ಇತ್ಯಾದಿ ಕಲೆಗಳನ್ನು ಕರಗತ ಮಾಡಿಕೊಂಡ. ಹುಲಿಯ ಚರ್ಮದ್ದೇ ಉಡುಗೆ, ಜೊತೆಗೆ ಹುಲಿಯುಗುರು ಧರಿಸುತ್ತಿದ್ದ. ಹಾಗಾಗಿಯೇ ಆತನಿಗೆ ಪೂಲಿತ್ತೇವನ್ ಎಂಬ ಜನಪ್ರಿಯ ಹೆಸರು ಅಂಟಿಕೊಂಡಿತ್ತು.

ಪೂಲಿತ್ತೇವನ್ 18ರ ಹರೆಯದಲ್ಲಿದ್ದಾಗ ನೆರಕ್ಕತ್ತನ್ ಸೆವ್ವಲ್‌ನ ಹೊರಗೆ ಎರಡು ಪಾಳಯಂಗಳ ನಡುವಿನ ಗಡಿ ವಿವಾದ ಪರಿಹರಿಸಲು ಧಾವಿಸಿದ್ದ. ಆ ಸಂದರ್ಭದಲ್ಲಿ ಪೂಲಿತ್ತೇವನ್ ಊರಿನಲ್ಲಿಲ್ಲದಿದ್ದಾಗ ಶಿವಗಿರಿಯ ಪಾಳೇಗಾರ ನೆರಕ್ಕತ್ತನ್ ಸೆವ್ವಲ್‌ಗೆ 3 ಸಾವಿರ ಜನರೊಂದಿಗೆ ದಾಳಿ ಮಾಡಿ, ಕೆಲವು ಜಾನುವಾರುಗಳನ್ನು ವಶಪಡಿಸಿಕೊಂಡು ಹೋಗಿದ್ದ. ಈ ವಿಷಯ ಪೂಲಿತ್ತೇವನ್‌ಗೆ ಗೊತ್ತಾಗುತ್ತಲೇ, ಆತ 150 ಸೈನಿಕರೊಂದಿಗೆ ತೆರಳಿ, ಶಿವಗಿರಿ ಸೈನ್ಯದ ಮೇಲೆ ಮುಗಿಬಿದ್ದ. ಹಲವರು ಸಮರದಲ್ಲಿ ಯಮಪುರಿ ಸೇರಿದರು. ಉಳಿದವರು ಪಲಾಯನ ಮಾಡಿದರು. ಪೂಲಿತ್ತೇವನ್ ಶತ್ರುಗಳು ಕದ್ದೊಯ್ದಿದ್ದ ಅಷ್ಟೂ ಜಾನುವಾರುಗಳನ್ನು ವಾಪಸ್ ಹಿಡಿದು ತಂದಿದ್ದ.

ಮಧುರೈ ವಿಜಯರಂಗ ಚೊಕ್ಕನಾಥ ನಾಯಕರ್ (1704-1731) ಆಡಳಿತ ಕಾಲದಲ್ಲಿ ಮಧುರೈನ ಉತ್ತರ ಭಾಗದಲ್ಲಿ ಹುಲಿಯೊಂದು ಕದ್ದಡಗಿಕೊಂಡು ದಾರಿಹೋಕರನ್ನು ಕೊಂದು ಹಾಕುತ್ತಿತ್ತು. ದೊರೆ ನಾಯಕರ್ ಎಲ್ಲ ಪಾಳೇಗಾರರಿಗೆ ಆ ಹುಲಿಯನ್ನು ಕೊಂದು ಹಾಕಿದರೆ ಸೂಕ್ತ ಬಹುಮಾನ ನೀಡುವುದಾಗಿ ಸಂದೇಶ ಕಳಿಸಿದ. ಈ ಸಂದೇಶ ಪೂಲಿತ್ತೇವನ್‌ಗೆ ತಲುಪಿದ ಕೂಡಲೇ ಆತ ಮಧುರೈಗೆ ಧಾವಿಸಿಬಂದ. ಹೊಂಚುಹಾಕಿ ಹುಲಿಯ ಮೇಲೆರಗಿ ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಮೇಲೆತ್ತಿ ನೆಲಕ್ಕಪ್ಪಳಿಸಿದ. ಪೂಲಿತ್ತೇವನ್ ಅಪ್ಪಳಿಸಿದ ಹೊಡೆತಕ್ಕೆ ಆ ಹುಲಿ ಸತ್ತೇಹೋಯ್ತು. ಯಾವುದೇ ಆಯುಧವಿಲ್ಲದೆ ತನ್ನ ಬಲಶಾಲಿ ಕೈಗಳಿಂದಲೇ ಹುಲಿಯನ್ನು ಹಿಡಿದು ಸಾಯಿಸಿದ ಈ ಘಟನೆ ಆ ಪ್ರಾಂತದಲ್ಲೆಲ್ಲ ಭಾರೀ ಸುದ್ಧಿಯಾಗಿತ್ತು. ಮಧುರೈ ದೊರೆ ನಾಯಕರ್ ಆತನಿಗೆ ವಡಕ್ಕತ್ತನ್ ಪೂಲಿತ್ತೇವನ್ (ಸಾಮ್ರಾಜ್ಯ ರಕ್ಷಕ) ಎಂಬ ಬಿರುದು ನೀಡಿ ಸನ್ಮಾನಿಸಿದ್ದ.

ತನ್ನ ಪಾಳಯಂನಿಂದ ದೊರಕಿದ ಆದಾಯವೆಲ್ಲವನ್ನೂ ಆಡಳಿತ ಮತ್ತು ಜನರ ಕಲ್ಯಾಣಕಾರ‍್ಯಗಳಿಗೆ ಬಳಸಿದ. ಈ ಕಾರ‍್ಯಗಳಿಗೆ ಬಳಸಿ ಉಳಿಕೆಯಾದ ಹಣವನ್ನು ದೇಗುಲಗಳ ಅಭಿವೃದ್ಧಿ, ಜೀರ್ಣೋದ್ಧಾರಗಳಿಗಾಗಿ ಬಳಸಿದ. ವಿಲಾಸಿ ಬದುಕು ಆತನಿಗಿಷ್ಟವಿರಲಿಲ್ಲ. ತಿರುನಲ್ವೇಲಿ ಪ್ರದೇಶದಲ್ಲಿ ಒಂದು ಡಜನ್‌ಗೂ ಹೆಚ್ಚು ದೇಗುಲಗಳ ಜೀರ್ಣೋದ್ಧಾರ ಮಾಡಿಸಿದ. ಬಹುದೂರ ಪ್ರಯಾಣಿಸುವ ಯಾತ್ರಿಕರಿಗೆ ವಿಶ್ರಾಂತಿಗೃಹ, ಛತ್ರಗಳನ್ನು ನಿರ್ಮಿಸಿದ. ಕೆರೆಕಟ್ಟೆ, ಬಾವಿಗಳ ನಿರ್ಮಾಣ, ಒಣಭೂಮಿಯಲ್ಲಿ ಗಿಡ ನೆಟ್ಟು ಹಸಿರುತೋಪು ನಿರ್ಮಾಣ …. ಹೀಗೆ ಹಲವು ಜನಪರ ಕಾರ‍್ಯಗಳನ್ನು ವ್ಯವಸ್ಥಿತವಾಗಿ ಪೂಲಿತ್ತೇವನ್ ನಿರ್ವಹಿಸಿದ್ದ.

ಸುತ್ತಮುತ್ತಲಿನ ಎಲ್ಲ ಪಾಳೇಗಾರರನ್ನು ಒಗ್ಗೂಡಿಸಿ, ನಾವೆಲ್ಲರೂ ಒಂದಾಗಿದ್ದರೆ ನಮ್ಮ ವಿರುದ್ಧ ಪರಕೀಯರ ಆಕ್ರಮಣ ದುಸ್ಸಾಧ್ಯ ಎಂಬ ಸಂದೇಶ ಸಾರಿದ್ದ. ಇತ್ತ ನಾಯಕರ್‌ಗಳ ಸಣ್ಣಪುಟ್ಟ ಸಂಸ್ಥಾನಗಳು ದುರ್ಬಲ ಆಡಳಿತದಿಂದಾಗಿ ಸೊರಗಿದವು. ಕ್ರಮೇಣ ಆ ಸಂಸ್ಥಾನಗಳ ಮೇಲೆ ಮುಸ್ಲಿಮರ ಹಿಡಿತ ಪ್ರಬಲವಾಯಿತು. ಪಾಳೇಗಾರರಿಂದ ಕಂದಾಯ ವಸೂಲಿ ವಿಚಾರದಲ್ಲಿ ಆರ್ಕಾಟ್ ನವಾಬ ಮತ್ತು ಇನ್ನೊಬ್ಬ ಮುಸ್ಲಿಂ ದೊರೆಯ ನಡುವೆ ವಿವಾದ ಉಂಟಾಗಿ, ಪಾಳೇಗಾರರು ಕಂದಾಯ ಬಾಬ್ತು ಸಂಪೂರ್ಣ ನಿಲ್ಲಿಸಿದರು. ಆಗ ಆರ್ಕಾಟ್ ನವಾಬ ಈಸ್ಟ್ ಇಂಡಿಯಾ ಕಂಪನಿಯ ಇಂಗ್ಲಿಷರ ಮೊರೆ ಹೋದ. ಈಸ್ಟ್ ಇಂಡಿಯಾ ಕಂಪನಿ ಮಾಡಿಕೊಂಡ ಒಪ್ಪಂದದಂತೆ, ಪಾಳೇಗಾರರಿಂದ ತೆರಿಗೆ ಸಂಗ್ರಹಿಸುವ ಹೊಣೆ ಇಂಗ್ಲಿಷರ ಕೈಗೆ ಹಸ್ತಾಂತರವಾಯ್ತು. ಅಲ್ಲಿಂದಲೇ ಶುರುವಾಯ್ತು ಇಂಗ್ಲಿಷರು ಹಾಗೂ ಭಾರತೀಯ ದೊರೆಗಳ ನಡುವೆ ನಿಲ್ಲದ ಕದನ.

ಆರ್ಕಾಟ್ ನವಾಬನ ಸಾಮ್ರಾಜ್ಯಶಾಹಿ ದುರಾಸೆಯಿಂದಾಗಿ ಇಲ್ಲಿನ ಜನರು ಮುಂದೆ ಸುಮಾರು 200 ವರ್ಷಗಳ ಕಾಲ ಇಂಗ್ಲೀಷರ ಆಳ್ವಿಕೆಯನ್ನು ಸಹಿಸಿಕೊಳ್ಳಬೇಕಾಗಿ ಬಂದಿದೆ. ಈ ಇತಿಹಾಸ, ತೆರಿಗೆ ಕೊಡಲು ಒಪ್ಪದ ಪಾಳೇಗಾರರ ವಿರುದ್ಧ 1755ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕರ್ನಲ್ ಹೆರಾನ್ ಮತ್ತು ನವಾಬನ ಸೋದರ ಮಬೂಶ್‌ಖಾನ್ ನೇತೃತ್ವದಲ್ಲಿ ಸೈನ್ಯ ದಂಡೆತ್ತಿ ಬಂದಿತು. ಒಂದಿಷ್ಟು ಪಾಳೇಗಾರರು ಹೆದರಿ ತೆರಿಗೆ ನೀಡಿದರು. ಆದರೆ ನೆರಕ್ಕತ್ತನ್ ಸೆವ್ವಲ್‌ಗೆ ಕರ್ನಲ್ ಹೆರಾನ್ ಮತ್ತು ಮಬೂಶ್‌ಖಾನ್ ದಂಡೆತ್ತಿ ಹೋದಾಗ ನಿರಾಶೆ ಕಾದಿತ್ತು. ಪೂಲಿತ್ತೇವನ್ ತೆರಿಗೆ ಕೊಡಲೊಪ್ಪದೆ ಪ್ರತಿಭಟಿಸಿದ. ತಕ್ಷಣ ಹೆರಾನ್ ಮತ್ತು ಮಬೂಶ್‌ಖಾನ್ ಸೈನ್ಯ ಪೂಲಿತ್ತೇವನ್ ಕೋಟೆಯನ್ನು ವಶಪಡಿಸಿಕೊಂಡಿತು. ಇಂಗ್ಲಿಷರ ಸೈನ್ಯದಲ್ಲಿ ಬಂದೂಕುಗಳೂ, ಫಿರಂಗಿಗಳು, ಸ್ಫೋಟಕಗಳು ಇತ್ಯಾದಿ ಆಯುಧಗಳಿದ್ದವು. ಇಷ್ಟೆಲ್ಲ ಆಧುನಿಕ ಶಸ್ತ್ರಾಸ್ತ್ರಗಳಿದ್ದರೂ ಪೂಲಿತ್ತೇವನ್ ಕೋಟೆಯೊಳಗೆ ನುಗ್ಗಲು ಆ ಸೈನ್ಯಕ್ಕೆ ಸಾಧ್ಯವಾಗಲಿಲ್ಲ. ಶತ್ರುಸೈನ್ಯದಲ್ಲಿದ್ದ ಆಹಾರಪದಾರ್ಥ ಖಾಲಿಯಾಗುತ್ತ ಬಂತು. ಇದನ್ನೇ ಕಾಯುತ್ತಿದ್ದ ಪೂಲಿತ್ತೇವನ್ ಸೈನ್ಯದೊಂದಿಗೆ ಕೋಟೆಯಿಂದ ಹೊರಬಂದು ಶತ್ರುಸೈನಿಕರ ಮೇಲೆರಗಿ, ಎಲ್ಲರನ್ನೂ ಸಂಹಾರ ಮಾಡಿದ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕೆ 100 ವರ್ಷಗಳ ಹಿಂದೆಯೇ, ಹೀಗೆ 1755ರಲ್ಲಿ ಒಬ್ಬ ಸಾಮಾನ್ಯ ಪಾಳೇಗಾರ ಪೂಲಿತ್ತೇವನ್ ಇಂಗ್ಲಿಷರ ಮೇಲೆರಗಿ, ಸಂಪೂರ್ಣ ಸದೆಬಡಿದಿದ್ದ.

ಅನಂತರ 1772ರಲ್ಲಿ ಮುತ್ತುವಡಗನಾಥನ್ ಮತ್ತು ವೇಲು ನಾಚಿಯರ್ ನೇತೃತ್ವದಲ್ಲಿ, 1765ರಲ್ಲಿ ಮುತ್ತುರಾಮಲಿಂಗ ಸೇತುಪತಿ ಹಾಗೂ 1799ರಲ್ಲಿ ವೀರಪಾಂಡ್ಯ ಕಟ್ಟಬೊಮ್ಮನ್ ಸಾರಥ್ಯದಲ್ಲಿ ಬ್ರಿಟಿಷ್ ಸೈನ್ಯದ ಹುಟ್ಟಡಗಿಸಲಾಗಿತ್ತು.
ಇಂಗ್ಲಿಷರ ವಿರುದ್ಧ ಗೆಲುವು ಸಾಧಿಸಿದ್ದರೂ ಪೂಲಿತ್ತೇವನ್‌ಗೆ ಇಂಗ್ಲಿಷರು ಮತ್ತೆ ತನ್ನ ತಂಟೆಗೆ ಬರಲಾರರು ಎಂಬ ಖಾತ್ರಿಯೇನೂ ಇರಲಿಲ್ಲ. ಇಂಗ್ಲಿಷರ ‘ನರಿಬುದ್ಧಿ’ ಆತನಿಗೆ ಚೆನ್ನಾಗಿ ತಿಳಿದಿತ್ತು. ಅದಕ್ಕಾಗಿ ಆತ ಮತ್ತೆ ಪಾಳೇಗಾರರನ್ನು ಒಂದುಗೂಡಿಸುವ ಯತ್ನಕ್ಕೆ ಕೈಹಾಕಿದ. ಆದರೆ ಅಷ್ಟರಲ್ಲೇ ಪಾಳೇಗಾರರಲ್ಲಿ ಹಲವಾರು ಸ್ವಾರ್ಥಿಗಳಾಗಿ ಇಂಗ್ಲಿಷರ ಜೊತೆ ಕೈ ಜೋಡಿಸಿಬಿಟ್ಟಿದ್ದರು. ದೇಶಹಿತಕ್ಕಿಂತ ಅವರಿಗೆ ತಮ್ಮ ಸ್ವಂತ ಹಿತಾಸಕ್ತಿಯೇ ಮುಖ್ಯವೆನಿಸಿಬಿಟ್ಟಿತ್ತು. ತಮಗೆ ತಮ್ಮ ಪಾಳಯಂನ ಆಳ್ವಿಕೆ ಕೈತಪ್ಪದಿದ್ದರೆ ಅಷ್ಟೇ ಸಾಕು ಎಂಬ ಸ್ವಾರ್ಥಭಾವ ಹೆಪ್ಪುಗಟ್ಟಿತ್ತು. ಸ್ವಾರ್ಥಿ ಪಾಳೇಗಾರರ ಈ ಮನಸ್ಥಿತಿ ಅರಿತ ಇಂಗ್ಲಿಷರು ಯೂಸೂಫ್‌ಖಾನ್ ಎಂಬ ತಮಿಳುಮೂಲದ ವ್ಯಕ್ತಿಯ ನೇತೃತ್ವದಲ್ಲಿ ಸ್ವಾರ್ಥಿ ಪಾಳೇಗಾರರನ್ನೆಲ್ಲ ಒಗ್ಗೂಡಿಸಿ ‘ನೇಟಿವ್ ಆರ್ಮಿ’ ಸ್ಥಾಪಿಸಿ, ಪೂಲಿತ್ತೇವನ್ ವಿರುದ್ಧ ಈ ಸೈನ್ಯವನ್ನು ಛೂಬಿಟ್ಟರು.

ಆರಂಭದಲ್ಲಿ ತಿರುವಾಂಕೂರಿನ ರಾಜ ಮಾರ್ತಾಂಡವರ್ಮ ಮತ್ತಿತರ ಕೆಲವು ಪಾಳೇಗಾರರು ಪೂಲಿತ್ತೇವನ್‌ಗೆ ಬೆಂಬಲ ನೀಡಿದರಾದರೂ, ಅನಂತರ ಬೆಂಬಲ ಹಿಂತೆಗೆದುಕೊಂಡರು. ಆದರೂ 1755ರಿಂದ 1767ರವರೆಗೆ ಹನ್ನೆರಡು ವರ್ಷಗಳ ಕಾಲ ಇಂಗ್ಲಿಷರ ವಿರುದ್ಧ ಪೂಲಿತ್ತೇವನ್ ನಿರಂತರವಾಗಿ ಸೆಣಸಿ, ಸೋಲುಣಿಸಿದ್ದ. ಆದರೆ ಇಂಗ್ಲಿಷ್ ಸೈನಿಕರು ಇಂಗ್ಲೆಂಡಿನಿಂದ ತರಿಸಿದ್ದ ಭರ್ಜರಿ ಫಿರಂಗಿಗಳ ಮೂಲಕ ಪೂಲಿತ್ತೇವನ್ ಭದ್ರಕೋಟೆಯನ್ನೊಡೆಯುವಲ್ಲಿ ಸಫಲರಾದರೂ, ಪೂಲಿತ್ತೇವನ್‌ಗೆ ತಪ್ಪಿಸಿಕೊಳ್ಳದೆ ಅನ್ಯಮಾರ್ಗವೇ ಈಗ ಉಳಿದಿರಲಿಲ್ಲ. ಈಗ ಕುಂಭದ್ರೋಣವಾಗಿ ಸುರಿಯುತ್ತಿದ್ದ ಮಳೆಗಾಲ ಪೂಲಿತ್ತೇವನ್‌ಗೆ ತಪ್ಪಿಸಿಕೊಳ್ಳಲು ನೆರವಾಗಿತ್ತು.
ಪೂಲಿತ್ತೇವನ್ ಸಾವಿನ ಬಗ್ಗೆ ಎರಡು ಬಗೆಯ ವ್ಯಾಖ್ಯಾನಗಳಿವೆ. ಆತನನ್ನು ಇಂಗ್ಲಿಷರು ಕೋಳ ತೊಡಿಸಿ ಬಂಧಿಸಿ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲಿ ಶಂಕರನ್ ಕೊಯಿಲ್ ದೇಗುಲದಲ್ಲಿ ಪೂಜೆ ಸಲ್ಲಿಸುವ ಬಯಕೆ ವ್ಯಕ್ತಪಡಿಸಿದನಂತೆ, ಇಂಗ್ಲಿಷರು ಅದಕ್ಕೆ ಅವಕಾಶ ನೀಡಿದರು. ಆ ಸಮಯದಲ್ಲಿ ದಿವ್ಯಜ್ಯೋತಿಯೊಂದು ಪ್ರತಿಫಲಿಸಿ, ಆ ಜ್ಯೋತಿಯಲ್ಲಿ ಪೂಲಿತ್ತೇವನ್ ವಿಲೀನನಾದ ಎಂಬುದು ಒಂದು ವ್ಯಾಖ್ಯಾನವಾದರೇ, ಇಂಗ್ಲಿಷರು ಆತನನ್ನು ಬಂಧಿಸಿ ಕರೆದೊಯ್ದು ಗಲ್ಲಿಗೇರಿಸಿ ಸಾಯಿಸಿದರು ಎಂಬುದು ಇನ್ನೊಂದು ವ್ಯಾಖ್ಯಾನ. ಆದರೆ ಯಾವುದಕ್ಕೂ ದಾಖಲೆ ಈಗ ಇಲ್ಲ.

ಅದೇನೇ ಇರಲಿ, ಇಂಗ್ಲಿಷರ ದುರಾಡಳಿತದ ವಿರುದ್ಧ ಪೂಲಿತ್ತೇವನ್ ತನ್ನುಸಿರಿನ ಕೊನೆಯವರೆಗೂ ಹೋರಾಡಿದ ಮೊಟ್ಟಮೊದಲ ಸ್ವಾತಂತ್ರ್ಯ ಸೇನಾನಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಪಾಶ್ಚಾತ್ಯ ಇತಿಹಾಸಕಾರರಾಗಲಿ, ನಮ್ಮದೇ ಇತಿಹಾಸಕಾರರಾಗಲಿ ಪೂಲಿತ್ತೇವನ್ ಎಂಬ ಪರಾಕ್ರಮಿ ಸ್ವಾತಂತ್ರ್ಯ ಸೇನಾನಿಯ ಬಗ್ಗೆ ಒಂದಕ್ಷರವನ್ನು ದಾಖಲಿಸದಿರುವುದು ನಮ್ಮ ಸ್ವಾತಂತ್ರ್ಯ ಸಮರ ಇತಿಹಾಸಕ್ಕೆ ಎಸಗಿರುವ ಘೋರ ಅಪಚಾರವೇ ಸರಿ. ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ್‌ರಂತಹ ಪರಮಪಾಪಿ ದ್ರೋಹಿಗಳ ಚರಿತ್ರೆ ಉರುಹೊಡೆಯುವ ನಮ್ಮ ಮಕ್ಕಳಿಗೆ ಹುಲಿಯಂತಹ ವೀರ ಪರಾಕ್ರಮಿ ಪೂಲಿತ್ತೇವನ್ ಬಗ್ಗೆ ಕಿಂಚಿತ್ತು ತಿಳಿಯದಿರುವುದು ಇತಿಹಾಸದ ಘೋರ ವ್ಯಂಗ್ಯವಲ್ಲದೆ ಮತ್ತೇನು?

ಇದನ್ನೂ ಓದಿ | ಕ್ರಾಂತಿಯ ಕಿಡಿಗಳು ಅಂಕಣ | 24 ವರ್ಷ ಸೆರೆಯಲ್ಲಿದ್ದ ಸ್ವಾತಂತ್ರ್ಯ ಸೇನಾನಿ ಸೇತುಪತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಅಂಕಣ

ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

ರಾಜಮಾರ್ಗ ಅಂಕಣ: ಆಕ್ರಮಣಕಾರಿ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ. ಆದರೆ ಈಗ, ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

VISTARANEWS.COM


on

Rishabh Pant
Koo

ಹೋರಾಟಗಾರ ಕ್ರಿಕೆಟರ್ ಕ್ರಿಟಿಕಲ್ ಇಂಜುರಿ ಗೆದ್ದು ಬಂದ ಕಥೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 2022 ಡಿಸೆಂಬರ್ 30ರ ಮಧ್ಯರಾತ್ರಿ ರೂರ್ಕಿ ಎಂಬಲ್ಲಿ ಆ ಕ್ರಿಕೆಟರ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಆ ಅಪಘಾತದ ತೀವ್ರತೆಯನ್ನು ನೋಡಿದವರು ಆತ ಬದುಕಿದ್ದೇ ಗ್ರೇಟ್ ಅಂದಿದ್ದರು. ಬಲಗಾಲಿನ ಮಂಡಿ ಚಿಪ್ಪು ಸಮೇತ 90 ಡಿಗ್ರೀಯಷ್ಟು ತಿರುಗಿ ನಿಂತಿತ್ತು! ಮೈಯೆಲ್ಲಾ ಗಾಯಗಳು ಮತ್ತು ಎಲುಬು ಮುರಿತಗಳು! ಡೆಹ್ರಾಡೂನ್ ಆಸ್ಪತ್ರೆಯ ವೈದ್ಯರು ಆತನ ದೇಹದಲ್ಲಾದ ಗಾಯ ಮತ್ತು ಮೂಳೆ ಮುರಿತಗಳನ್ನು ನೋಡಿದಾಗ ‘ನೀನಿನ್ನು ಕ್ರಿಕೆಟ್ ಆಡೋದು ಕಷ್ಟ’ ಅಂದಿದ್ದರು. ಒಬ್ಬರಂತೂ ‘ನೀನು ನಿನ್ನ ಕಾಲುಗಳ ಮೇಲೆ ನಿಂತರೆ ಅದೇ ದೊಡ್ಡ ಸಾಧನೆ’ ಅಂದಿದ್ದರು!

ಅಮ್ಮಾ ನನಗೆ ಸಹಾಯ ಮಾಡು, ನಾನು ವಿಶ್ವಕಪ್ ಆಡಬೇಕು!

ಆ ಕ್ರಿಕೆಟಿಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಚೀರಿ ಚೀರಿ ಹಾಗೆ ಹೇಳುತ್ತಿದ್ದರೆ ನರ್ಸ್ ಮತ್ತು ವೈದ್ಯರು ಕಣ್ಣೀರು ಸುರಿಸುತ್ತಿದ್ದರು! ಕ್ರಿಕೆಟ್ ವಿಶ್ವಕಪ್ ಆರಂಭವಾಗಲು ಕೇವಲ ಒಂದೂವರೆ ವರ್ಷ ಬಾಕಿ ಇತ್ತು. ವೈದ್ಯರು ‘ಅನಿವಾರ್ಯ ಆದರೆ ಆತನ ಒಂದು ಕಾಲು ತುಂಡು ಮಾಡಬೇಕಾಗಬಹುದು!’ ಎಂದು ಅವನ ಅಮ್ಮನ ಕಿವಿಯಲ್ಲಿ ಪಿಸುಗುಟ್ಟಿದ್ದು, ಆತನ ಅಮ್ಮ ಬಾತ್ ರೂಮ್ ಒಳಗೆ ಹೋಗಿ ಕಣ್ಣೀರು ಸುರಿಸಿದ್ದು ಎಲ್ಲವೂ ನಡೆದು ಹೋಗಿತ್ತು!

ಆತ ರಿಶಭ್ ಪಂತ್ – ಆಕ್ರಮಣಕ್ಕೆ ಇನ್ನೊಂದು ಹೆಸರು!

ಅಪಘಾತ ಆಗುವ ಮೊದಲು ಆತ ಭಾರತೀಯ ಕ್ರಿಕೆಟ್ ತಂಡದ ಮೂರೂ ಫಾರ್ಮಾಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದ! ಆಕ್ರಮಣಕ್ಕೆ ಹೆಸರಾಗಿದ್ದ. ಸಲೀಸಾಗಿ ಒಂದೇ ಅವಧಿಯಲ್ಲಿ ಡಬಲ್ ಸೆಂಚುರಿ ಹೊಡೆಯುತ್ತಿದ್ದ. ವಿಕೆಟ್ ಹಿಂದೆ ಪಾದರಸದ ಚುರುಕು ಇತ್ತು. ಆತನ ಆಟವನ್ನು ನೋಡಿದವರು ʻಈತ ಧೋನಿಯ ಉತ್ತರಾಧಿಕಾರಿ ಆಗುವುದು ಖಂಡಿತ’ ಅನ್ನುತ್ತಿದ್ದರು!

ಅಂತಹ ರಿಶಭ್ ಪಂತ್ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಅರ್ಧ ಹೆಣವಾಗಿ ಮಲಗಿದ್ದ! ಯಾರಿಗೂ ಆತ ಮರಳಿ ಕ್ರಿಕೆಟ್ ಆಡುವ ಭರವಸೆ ಇರಲಿಲ್ಲ.

ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ

ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂದು ನಿದ್ದೆಯಲ್ಲಿಯೂ ಕನವರಿಸುತ್ತಿದ್ದ ಆತನ ನೆರವಿಗೆ ನಿಂತವರು ಕೇವಲ ನಾಲ್ಕೇ ಜನ. ಅವರೆಲ್ಲರೂ ಆತನ ಕ್ರಿಕೆಟ್ ದೈತ್ಯ ಪ್ರತಿಭೆಯನ್ನು ಕಂಡವರು. ಒಬ್ಬರು ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ ಮುಂಬಯಿಯ ಅಂಬಾನಿ ಆಸ್ಪತ್ರೆಯ ಖ್ಯಾತ ಸರ್ಜನ್ ದಿನ್ ಶಾ ಪಾದ್ರಿವಾಲ. ಇನ್ನೊಬ್ಬರು ಉತ್ತರಾಖಂಡದ ಶಾಸಕ ಉಮೇಶ್ ಕುಮಾರ್. ಇನ್ನೊಬ್ಬರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆದ ಧನಂಜಯ್ ಕೌಶಿಕ್. ನಾಲ್ಕನೆಯರು ರಿಷಭನ ತಾಯಿ! ಆಕೆ ನಿಜಕ್ಕೂ ಗಾಡ್ಸ್ ಗ್ರೇಸ್ ಅನ್ನಬಹುದು. ಅವರೆಲ್ಲರಿಗೂ ಆತ ಭಾರತಕ್ಕೆ ಎಷ್ಟು ಅಮೂಲ್ಯ ಆಟಗಾರ ಎಂದು ಗೊತ್ತಿತ್ತು! ಆಸ್ಪತ್ರೆಯ ಹಾಸಿಗೆಗೆ ಒರಗಿ ಆತ ಪಟ್ಟ ಮಾನಸಿಕ ಮತ್ತು ದೈಹಿಕ ನೋವು, ಹೊರಹಾಕಿದ ನಿಟ್ಟುಸಿರು ಎಲ್ಲವೂ ಆ ನಾಲ್ಕು ಮಂದಿಗೆ ಗೊತ್ತಿತ್ತು.

ಆ ಹದಿನೈದು ತಿಂಗಳು…!

Rishabh Panth

ಆ ಅವಧಿಯಲ್ಲಿ ಏಷಿಯಾ ಕಪ್, ವಿಶ್ವ ಟೆಸ್ಟ್ ಚಾಂಪಿಯನಶಿಪ್, ವಿಶ್ವ ಕಪ್ ಎಲ್ಲವೂ ನಡೆದುಹೋಯಿತು! ಭಾರತ ಹಲವು ವಿಕೆಟ್ ಕೀಪರಗಳ ಪ್ರಯೋಗ ಮಾಡಿತು. ಭಾರತ ಒಂದೂ ಕಪ್ ಗೆಲ್ಲಲಿಲ್ಲ. ಭಾರತಕ್ಕೆ ಶಾಶ್ವತವಾದ ವಿಕೆಟ್ ಕೀಪರ್ ಸಿಗಲಿಲ್ಲ! ರಿಷಭ್ ಈ ಎಲ್ಲ ಪಂದ್ಯಗಳನ್ನು ನೋಡುತ್ತಿದ್ದ. ವಿಕೆಟ್ ಹಿಂದೆ ಅವನಿಗೆ ಅವನೇ ಕಾಣುತ್ತಿದ್ದ!

ಹಾಸಿಗೆಯಿಂದ ಎದ್ದು ಕ್ರಚಸ್ ಹಿಡಿದು ನಡೆದದ್ದು, ನಂತರ ಕ್ರಚಸ್ ಬದಿಗೆ ಇಟ್ಟು ಗೋಡೆ ಹಿಡಿದು ನಡೆದದ್ದು, ನಂತರ ಎಲ್ಲವನ್ನೂ ಬಿಟ್ಟು ನಿಧಾನವಾಗಿ ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತದ್ದು, ಜಾಗಿಂಗ್ ಮಾಡಿದ್ದು, ಓಡಿದ್ದು, ಕಾಲುಗಳಿಗೆ ಫಿಸಿಯೋ ಥೆರಪಿ ಆದದ್ದು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೌನ್ಸೆಲಿಂಗ್ ನೆರವು ಪಡೆದದ್ದು….ಇವೆಲ್ಲವೂ ಕನಸಿನಂತೆ ಗೋಚರ ಆಗುತ್ತಿದೆ. ಮುಂದೆ ನಿರಂತರ ಕ್ರಿಕೆಟ್ ಕೋಚಿಂಗ್, ಮೈದಾನದಲ್ಲಿ ಬೆವರು ಹರಿಸಿದ್ದು, ಅಪಘಾತವಾದ ಕಾಲು ಬಗ್ಗಿಸಲು ತುಂಬ ಕಷ್ಟಪಟ್ಟದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಅನ್ನಿಸುತ್ತಿದೆ.

2024 ಮಾರ್ಚ್ 12….

ಒಬ್ಬ ಕ್ರಿಕೆಟರ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕು. ಅದು ಸುಲಭದ ಕೆಲಸ ಅಲ್ಲ. ಅಲ್ಲಿ ಕೂಡ ರಿಶಭ್ ಇಚ್ಛಾಶಕ್ತಿ ಗೆದ್ದಿತ್ತು. ಮಾರ್ಚ್ 12ರಂದು ಆತನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಣೆ ಮಾಡಿದಾಗ ಆತ ಮೈದಾನದ ಮಧ್ಯೆ ಕೂತು ಜೋರಾಗಿ ಕಣ್ಣೀರು ಹಾಕಿದ್ದನು! ಎರಡೇ ದಿನದಲ್ಲಿ ಡೆಲ್ಲಿ ಐಪಿಎಲ್ ತಂಡವು ಆತನನ್ನು ತೆರೆದ ತೋಳುಗಳಿಂದ ಸ್ವಾಗತ ಮಾಡಿ ನಾಯಕತ್ವವನ್ನು ಕೂಡ ಆತನಿಗೆ ನೀಡಿತ್ತು! ಈ ಐಪಿಎಲ್ ಸೀಸನ್‌ನಲ್ಲಿ ವಿಕೆಟ್ ಮುಂದೆ ಮತ್ತು ಹಿಂದೆ ಆತ ಆಕ್ರಮಣಕಾರಿ ಆಗಿ ಆಡುತ್ತಿರುವುದನ್ನು ನೀವು ನೋಡಿಯೇ ನೋಡಿರುತ್ತೀರಿ!

ಮುಂದಿನ T20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಒಬ್ಬ ಅದ್ಭುತ ಬ್ಯಾಟರ್ ಮತ್ತು ವಿಕೆಟ್ ಕೀಪರ್ ದೊರಕಿದ್ದನ್ನು ನಾವು ಸಂಭ್ರಮಿಸಲು ಯಾವ ಅಡ್ಡಿ ಕೂಡ ಇಲ್ಲ ಎನ್ನಬಹುದು. ಆತನಿಗೆ ಶುಭವಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading
Advertisement
Karnataka Weather
ಕರ್ನಾಟಕ16 mins ago

Karnataka Weather: ರಾಜ್ಯದಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು!

IPL 2024
ಪ್ರಮುಖ ಸುದ್ದಿ34 mins ago

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

Rescue of a boy who drowned at Malpe beach Two boys die after taking bath in Sindagi
ಕ್ರೈಂ41 mins ago

Malpe Beach: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ; ಸಿಂದಗಿಯಲ್ಲಿ ಸ್ನಾನಕ್ಕೆಂದು ಬಾವಿಗಿಳಿದಿದ್ದ ಬಾಲಕರಿಬ್ಬರ ಸಾವು

Fortis Hospital Launches Deep Brain Stimulation DBS Clinic to Treat Parkinson Disease
ಕರ್ನಾಟಕ52 mins ago

Fortis Hospital: ಪಾರ್ಕಿನ್ಸನ್‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್‌ ಆರಂಭಿಸಿದ ಫೋರ್ಟಿಸ್‌ ಆಸ್ಪತ್ರೆ

Divorce Celebration
ವೈರಲ್ ನ್ಯೂಸ್58 mins ago

Divorce Celebration: ಗಂಡನ ಬಿಟ್ಟು ಬಂದ ಮಗಳನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆ ತಂದ ಅಪ್ಪ!

RBI Guideline
ವಾಣಿಜ್ಯ59 mins ago

RBI Guideline: ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್‌ಬಿಐ; ಸಂಗ್ರಹಿಸಿದ ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ

IPL 2024
ಪ್ರಮುಖ ಸುದ್ದಿ1 hour ago

IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

Minister Lakshmi hebbalkar spoke in Prajadhwani 02 Lok Sabha election campaign programme at Gokak
ಕರ್ನಾಟಕ1 hour ago

Lok Sabha Election: ಸಿದ್ದರಾಮಯ್ಯ ಸರ್ಕಾರ ಕೆಡವಲು ನಿಮಗೇನು ನೈತಿಕತೆ ಇದೆ? ರಮೇಶ್‌ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನೆ

Ballari Lok Sabha constituency Congress candidate eTukaram election campaign in Hosapete
ಬಳ್ಳಾರಿ1 hour ago

Lok Sabha Election 2024: ಜನರ ಬದುಕಿನ ಭಾರ ಕಡಿಮೆ ಮಾಡಿದ್ದು ಕಾಂಗ್ರೆಸ್‌ ಎಂದ ಈ. ತುಕಾರಾಂ

Hassan Pen Drive case
ಪ್ರಮುಖ ಸುದ್ದಿ2 hours ago

Hassan Pen Drive Case: 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ; ಪ್ರಜ್ವಲ್‌, ರೇವಣ್ಣಗೆ ಎಸ್‌ಐಟಿ ನೋಟಿಸ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ16 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌