Rakshabandhan | ರಕ್ಷಾಬಂಧನಕ್ಕೆ ಎಂಟ್ರಿ ಕೊಟ್ಟ ಕಲರ್‌ಫುಲ್‌ ರಾಖಿ - Vistara News

ಫ್ಯಾಷನ್

Rakshabandhan | ರಕ್ಷಾಬಂಧನಕ್ಕೆ ಎಂಟ್ರಿ ಕೊಟ್ಟ ಕಲರ್‌ಫುಲ್‌ ರಾಖಿ

ರಕ್ಷಾಬಂಧನಕ್ಕೆ (Rakshabandhan) ನಾನಾ ವಿನ್ಯಾಸದ ಕಲರ್‌ಫುಲ್‌ ಡಿಸೈನರ್‌ ರಾಖಿಗಳು ಎಂಟ್ರಿ ನೀಡಿದ್ದು, ಈ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ವರದಿ.

VISTARANEWS.COM


on

Rakshabandhan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಫ್ಯಾಷನ್‌ ಪತ್ರಕರ್ತೆ
ರಕ್ಷಾ ಬಂಧನ ಅಂದರೆ ರಾಖಿ ಹಬ್ಬದ ಅಂಗವಾಗಿ ಊಹೆಗೂ ಮೀರಿದ ಬಗೆಬಗೆಯ ಫ್ಯಾಷೆನಬಲ್‌ ರಾಖಿಗಳು (Rakshabandhan) ಮಾರುಕಟ್ಟೆಗೆ ಕಾಲಿಟ್ಟಿವೆ. ಕಾಲೇಜು ಹುಡುಗರಿಗೆಂದೇ ಫಂಕಿ ರಾಖಿ, ಟೆಕ್ನಾಲಜಿ ಪ್ರಿಯರಿಗೆ ಟಾಕಿಂಗ್‌ ರಾಖಿ, ಫ್ಯಾಮಿಲಿ ಪ್ರಿಯರಿಗೆ ಫೋಟೋ ರಾಖಿ, ಆರ್ಟಿಸ್ಟಿಕ್‌ ಮನಸ್ಸಿನವರಿಗೆ ಕುಂದನ್‌, ಹ್ಯಾಂಡ್‌ಮೇಡ್‌ , ಪರ್ಲ್‌, ಮೊಟಿಫ್‌, ಮಿರರ್‌ ರಾಖಿ, ಕಲರ್‌ಫುಲ್‌ ಮನಸ್ಸಿನವರಿಗೆ ವರ್ಣಮಯ ಪೋಂ ಪೋಂ ರಾಖಿ ಸೇರಿದಂತೆ ನಾನಾ ಬಗೆಯ ವೈವಿಧ್ಯಮಯ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟಿವೆ.

“ಅಣ್ಣ-ತಮ್ಮಂದಿರೊಂದಿಗೆ ಅನ್ಯೋನ್ಯತೆ ಬಿಂಬಿಸುವ ಜತೆಗೆ ಸಂಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನ ಅಕ್ಕ-ತಂಗಿಯರ ಪ್ರೀತಿ, ವಾತ್ಸಲ್ಯದ ಪ್ರತೀಕ. ಇದಕ್ಕೆ ಪೂರಕ ಎಂಬಂತೆ, ನೂತನ ವಿನ್ಯಾಸದ ರಾಖಿಗಳು ಆನ್‌ಲೈನ್‌ ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ”ಎನ್ನುತ್ತಾರೆ ಮಾರಾಟಗಾರರು.

ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್‌ ಸೆನ್ಸ್‌

ಟ್ರೆಡಿಷನಲ್‌ ರಾಖಿ
ಫ್ಲೋರಲ್‌ ವಿನ್ಯಾಸ ಹೊಂದಿರುವ ಇವು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ದೊರೆಯುತ್ತವೆ. ಬಣ್ಣ ಬಣ್ಣದ ದಾರಗಳನ್ನು ಒಳಗೊಂಡಿರುತ್ತದೆ. ಟ್ರೆಡಿಷನಲ್‌ ಫಾರ್ಮಲ್‌ ಉಡುಪು ಧರಿಸುವವರಿಗೆ ಬೆಸ್ಟ್‌ . ಕೆಲವಲ್ಲಿ ಗಣೇಶ, ಲಕ್ಷ್ಮಿ, ಸರಸ್ವತಿ, ಬಾಬಾ ಹೀಗೆ ಮುಂತಾದ ದೇವರುಗಳ ಚಿತ್ರಗಳನ್ನು ಕಾಣಬಹುದು.

ಬಿಂದಾಸ್‌ ಹುಡುಗರಿಗೆ ಫಂಕಿ ರಾಖಿ
ಬಣ್ಣ ಬಣ್ಣದ ಕ್ರಿಸ್ಟಲ್‌ ಹಾಗೂ ಮಣಿಗಳಿರುವ ಈ ರಾಖಿ ಬಹಳಷ್ಟು ಕಾಲ ಧರಿಸಬಹುದು. ನೋಡಲು ಬ್ರೇಸ್‌ಲೇಟ್‌ನಂತೆ ಕಾಣುತ್ತದೆ. ಸ್ಟೈಲಿಶ್ ಆಗಿರುವವರಿಗೆ ಕಟ್ಟಬಹುದು.

ಮಕ್ಕಳಿಗೆ ಕಾರ್ಟೂನ್‌ ರಾಖಿ
ಚಿಕ್ಕ ಮಕ್ಕಳ ಸಂಭ್ರಮ ಹೆಚ್ಚಿಸುವ ಕಾರ್ಟೂನ್‌ ಪಾತ್ರಧಾರಿಗಳ ಕಲರ್‌ಫುಲ್‌ ರಾಖಿಗಳು ಮಕ್ಕಳು ಮಾತ್ರವಲ್ಲದೇ ದೊಡ್ಡವರನ್ನು ಸೆಳೆಯುತ್ತಿದೆ.

ಮಿನಿ ಗ್ರೀಟಿಂಗ್‌ ರಾಖಿ
ಇದನ್ನು ಟಾಕಿಂಗ್‌ ರಾಖಿ ಎನ್ನಲಾಗುತ್ತದೆ. ಸ್ವೀಟ್‌ ಬ್ರೋ, ಲವ್ಲಿ ಬ್ರದರ್‌, ಮೈ ಬೆಸ್ಟ್‌ ಬ್ರದರ್‌ ಹೀಗೆ ಸಹೋದರನ ಮೇಲಿನ ಪ್ರೀತಿ ವ್ಯಕ್ತ ಪಡಿಸುವ, ಪದಗಳಲ್ಲೇ ಮಾತನಾಡುವ ಟಾಕಿಂಗ್‌ ರಾಖಿಗಳು ಯುವಜನರನ್ನು ಹೆಚ್ಚು ಆಕರ್ಷಿಸುತ್ತಿವೆ.

ಕಸ್ಟಮೈಸ್ಡ್‌ ಫೋಟೋ ರಾಖಿ
ಆನ್‌ಲೈನ್‌ನಲ್ಲಿ ದೊರೆಯುತ್ತಿರುವ ಇವು ಕಸ್ಟಮೈಸ್ಡ್‌ ರಾಖಿಯಾಗಿದ್ದು, ಸಹೋದರನ ಜತೆ ಇರುವ ಫೋಟೋವನ್ನು ಮೊದಲೇ ನೀಡಿ, ರಾಖಿ ಡಿಸೈನ್‌ ಮಾಡಿಸಿಕೊಳ್ಳಬಹುದು.

ಬೆಳ್ಳಿ-ಬಂಗಾರದ ರಾಖಿಗೂ ಡಿಮ್ಯಾಂಡ್‌
ರಾಯಲ್‌ ಇಮೇಜ್‌ ನೀಡುವ ಬ್ರೇಸ್‌ಲೇಟ್‌ ಮಾದರಿಯ ಚಿನ್ನ ಮತ್ತು ಬೆಳ್ಳಿ ರಾಖಿಗೂ ಕೂಡ ಬೇಡಿಕೆ ಹೆಚ್ಚಿದೆ. ಕ್ರಿಸ್ಟಲ್‌ ಸ್ಟೋನ್ಸ್‌, ಪರ್ಲ್‌ ಬಳಸಿ ವಿನ್ಯಾಸಗೊಳಿಸ ಓಂ, ಸ್ವಸ್ತಿಕ್‌, ಲಕ್ಷ್ಮಿ ಚಕ್ರ, ಗಣೇಶ, ಸಾಯಿಬಾಬಾ, ಕೃಷ್ಣ ದೇವರಿರುವ ಚಿನ್ನ ಮತ್ತು ಬೆಳ್ಳಿಯ ರಾಖಿಗಳಿಗೆ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ಚಿನ್ನದ ಅಂಗಡಿ ವ್ಯಾಪಾರಿ ಜ್ಞಾನೇಶ್‌.

ರಾಖಿ ಪ್ರಿಯರಿಗೆ ಸಲಹೆ

  • ಸಹೋದರರ ಪರ್ಸನಾಲಿಟಿಗೆ ತಕ್ಕಂತಿರಲಿ.
  • ಸೋದರನ ವಯಸ್ಸು ಮತ್ತು ಸ್ಟೈಲ್‌ ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.
  • ಸೋದರರಿಗೆ ಯಾವ ರೀತಿಯ ರಾಖಿ ಇಷ್ಟವೆಂದು ತಿಳಿದುಕೊಳ್ಳಿ.
  • ರಾಖಿ ಶಾಪಿಂಗ್‌ಗೆ ಸಮಯವಿಲ್ಲದವರು ಆನ್‌ಲೈನ್‌ ಶಾಪಿಂಗ್‌ ಮೊರೆ ಹೋಗಬಹುದು.
  • ಸಹೋದರರ ಪರ್ಸನಾಲಿಟಿಗೆ ತಕ್ಕಂತಿರಲಿ.
  • ಸೋದರನ ವಯಸ್ಸು ಮತ್ತು ಸ್ಟೈಲ್‌ ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.
  • ಸೋದರರಿಗೆ ಯಾವ ರೀತಿಯ ರಾಖಿ ಇಷ್ಟವೆಂದು ತಿಳಿದುಕೊಳ್ಳಿ.
  • ರಾಖಿ ಶಾಪಿಂಗ್‌ಗೆ ಸಮಯವಿಲ್ಲದವರು ಆನ್‌ಲೈನ್‌ ಶಾಪಿಂಗ್‌ ಮೊರೆ ಹೋಗಬಹುದು.

ಇದನ್ನೂ ಓದಿ | Holiday Outfit: ಸಂಡೇ ಔಟಿಂಗ್‌ ಫ್ಯಾಷನ್‌ಗೆ ಸೈ ಎನ್ನಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಮೊದಲ ಬಾರಿ ಹೆಜ್ಜೆ ಹಾಕಿದ ಜಾನ್ವಿ ಕಪೂರ್‌!

Paris Fashion Week: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಹಾಟ್‌ ಕೌಚರ್‌ ವೀಕ್‌ನಲ್ಲಿ ಬಾಲಿವುಡ್‌ ತಾರೆ ಜಾನ್ವಿ ಕಪೂರ್‌ ಮೊತ್ತ ಮೊದಲ ಬಾರಿ ಹೆಜ್ಜೆ ಹಾಕಿದ್ದಾರೆ. ವಿದೇಶಿ ನೆಲದಲ್ಲಿ ಇದು ಅವರ ಡೆಬ್ಯೂ ಫ್ಯಾಷನ್‌ ಎಂಟ್ರಿ ಎನ್ನಲಾಗಿದೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Paris Fashion Week
ಚಿತ್ರಗಳು: ಜಾನ್ವಿ ಕಪೂರ್‌, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾನ್ವಿ ಕಪೂರ್‌ ಮೊತ್ತ ಮೊದಲ ಬಾರಿಗೆ ಪ್ಯಾರಿಸ್‌ನ ಹಾಟ್‌ ಕೌಚರ್‌ ವೀಕ್‌ 2024ರಲ್ಲಿ ಹೆಜ್ಜೆ ಹಾಕಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಫ್ಯಾಷನ್‌ ವೀಕ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್‌ ರಾಹುಲ್‌ ಮಿಶ್ರಾ ಅವರ ಔರಾ ಬ್ರಾಂಡ್‌ನ ಆಕರ್ಷಕ ಮೆರ್ಮೈಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Paris Fashion Week

ಜಾನ್ವಿ ಸೌಂದರ್ಯ ಹೆಚ್ಚಿಸಿದ ಮೆರ್ಮೈಡ್ ಡಿಸೈನರ್‌ವೇರ್

ರಾಹುಲ್‌ ಮಿಶ್ರಾ ಅವರು, ಜಾನ್ವಿ ಅವರಿಗಾಗಿಯೇ ಬಾಡಿಕಾನ್‌ ಮೆರ್ಮೈಡ್‌ ಸಿಕ್ವೀನ್ಸ್ ಸ್ಕರ್ಟ್ ಅದಕ್ಕೆ ಹೊಂದುವಂತಹ ಡಾರ್ಕ್‌ ಶೇಡ್‌ನ ಬಿಕಿನಿಯಂತಿರುವ ಸ್ಟ್ರಾಪ್‌ಲೆಸ್‌ ಬ್ಲೌಸ್‌ ಡಿಸೈನ್‌ ಮಾಡಿದ್ದು, ಜಾನ್ವಿ ವಾಕ್‌ ಮಾಡುವಾಗ ನೆಲವನ್ನು ಸಾವರಿಸಿಕೊಂಡು ಹೋಗುತ್ತಿದ್ದ ಲಾಂಗ್‌ ಸ್ಕರ್ಟ್ ಅಲ್ಲಿನ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮೀನಿನ ಚರ್ಮದಂತೆ ಬಿಂಬಿಸುವ ಬ್ಲ್ಯಾಕ್‌ ಹಾಗೂ ಗ್ರೇ ವರ್ಣದ ಡಿಸೈನ್‌ ಹೊಂದಿದ್ದ ಈ ಡಿಸೈನರ್‌ವೇರ್‌ ಜಾನ್ವಿಯ ಸೌಂದರ್ಯವನ್ನು ಹೆಚ್ಚಿಸಿತ್ತು. ವಿದೇಶಿಗರನ್ನು ಹೆಚ್ಚಾಗಿ ಸೆಳೆಯಿತು ಎಂದು ಖುದ್ದು ಡಿಸೈನರ್‌ ರಾಹುಲ್‌ ಮಿಶ್ರಾ ಸಂತಸ ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್‌ ಮೊದಲ ವಿದೇಶಿ ಫ್ಯಾಷನ್‌ ವೀಕ್‌

ಇದುವರೆಗೂ ಸ್ಥಳೀಯ ರ‍್ಯಾಂಪ್‌ ಹಾಗೂ ಫ್ಯಾಷನ್‌ ಶೋಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಜಾನ್ವಿ ಕಪೂರ್‌, ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕ್‌ನಲ್ಲಿ, ಅದರಲ್ಲೂ ಪ್ಯಾರಿಸ್‌ನಲ್ಲಿ ಕಾಣಿಸಿಕೊಂಡಿರುವುದಂತೆ. ಈ ಹಿಂದೆ ಜಾನ್ವಿ ತಂಗಿ ಖುಷಿ ಕಪೂರ್‌, ಇದೇ ಫ್ಯಾಷನ್‌ ವೀಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗ ಜಾನ್ವಿ, ಸಿನಿಮಾ ಶೂಟಿಂಗ್‌ಗಳಲ್ಲಿ ಸಾಕಷ್ಟು ಬ್ಯುಸಿ ಇದ್ದ ಕಾರಣ, ವಿದೇಶಿ ಫ್ಯಾಷನ್‌ ವೀಕ್‌ಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲವಂತೆ ಹಾಗೆನ್ನುತ್ತವೆ ಅವರ ಆಪ್ತ ಮೂಲಗಳು.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ಫ್ಯಾಷನ್‌ ವಿಮರ್ಶಕರ ಮಾತು

ಇನ್ನು ಫ್ಯಾಷನ್‌ ವಿಮರ್ಶಕರಾದ ಜಾನ್‌ ಪ್ರಕಾರ, ಜಾನ್ವಿ ಅವರು ಪ್ರತಿ ಫ್ಯಾಷನ್‌ ಶೋಗಳಲ್ಲೂ ತಮ್ಮದೇ ಆದ ರ‍್ಯಾಂಪ್‌ ವಾಕ್‌ ಮೂಲಕ ಸೆಳೆಯುತ್ತಾರೆ. ಪ್ಯಾರಿಸ್‌ನ ಫ್ಯಾಷನ್‌ ವೀಕ್‌ಗಳಲ್ಲಿ, ರ‍್ಯಾಂಪ್‌ ಬದಲು ಫ್ಲೋರ್‌ ಮೇಲೆ ಮಾಡೆಲ್ಸ್ ವಾಕ್‌ ಮಾಡುವುದು ಸಾಮಾನ್ಯ ದೃಶ್ಯ. ನೆರೆದಿದ್ದ ಫ್ಯಾಷನ್‌ ಪ್ರಿಯರ ನಡುವೆಯೇ ಹಾದು ಹೋಗುತ್ತಾ, ಹೆಜ್ಜೆ ಹಾಕುವುದು, ಇವರೆಲ್ಲರ ಮಧ್ಯೆಯೇ ಸುಳಿದಾಡುವುದು ಇಲ್ಲಿನ ಫ್ಯಾಷನ್‌ ವೀಕ್‌ಗಳ ವಿಶೇಷತೆ. ಇದಕ್ಕೆ ತಕ್ಕಂತೆ ಜಾನ್ವಿ ಕೂಡ ಹೆಜ್ಜೆ ಹಾಕಿದ್ದಾರೆ. ಶೋ ಸ್ಟಾಪರ್‌ ಎನ್ನುವುದಕ್ಕಿಂತ ಇಂಟರ್‌ನ್ಯಾಷನಲ್‌ ಮಾಡೆಲ್‌ಗಳೊಂದಿಗೆ ಸೂಪರ್‌ ಮಾಡೆಲ್‌ನಂತೆ ನಡೆದಾಡಿದ್ದಾರೆ ಎನ್ನುತ್ತಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Balloon Denim Frock Fashion: ಹುಡುಗಿಯರ ಮಾನ್ಸೂನ್‌ ಫ್ಯಾಷನ್‌ಗೆ ಕಾಲಿಟ್ಟ ಬಲೂನ್‌ ಡೆನಿಮ್‌ ಡ್ರೆಸ್

Balloon Denim frock Fashion: ಹುಡುಗಿಯರ ಮಾನ್ಸೂನ್‌ ಫ್ಯಾಷನ್‌ಗೆ ಲೈಟ್‌ವೈಟ್‌ ಬಲೂನ್‌ ಡೆನಿಮ್ ಡ್ರೆಸ್‌ಗಳು ಕಾಲಿಟ್ಟಿವೆ. ನೋಡಲು ಫಿಟ್‌ & ಫ್ಲೇನರ್‌ನಂತೆ ಕಾಣುವ ಈ ಡ್ರೆಸ್‌ಗಳು ಧರಿಸಿದಾಗ ಬೊಂಬೆಯಂತೆ ಬಿಂಬಿಸುತ್ತವೆ. ಹಾಗಾದಲ್ಲಿ, ಏನಿದು ಬಲೂನ್‌ ಡೆನಿಮ್‌ ಡ್ರೆಸ್‌ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Balloon Denim Frock Fashion
ಚಿತ್ರಗಳು: ಶಾರ್ವರಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಲೂನ್‌ ಡೆನಿಮ್‌ ಡ್ರೆಸ್‌ಗಳು (Balloon Denim frock Fashion) ಮಾನ್ಸೂನ್‌ ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ಈ ಬಾರಿಯ ಮಾನ್ಸೂನ್‌ ಸೀಸನ್‌ಗೆ ಕಾಲಿಟ್ಟಿರುವ ಲೈಟ್‌ವೈಟ್‌ ಬಲೂನ್‌ ಡೆನಿಮ್ ಡ್ರೆಸ್‌ಗಳು ವಿಶೇಷವಾಗಿ ಕಾಲೇಜು ಯುವತಿಯರನ್ನು ಸೆಳೆದಿವೆ. ತಕ್ಷಣಕ್ಕೆ ನೋಡಲು ಫಿಟ್‌ & ಫ್ಲೇನರ್‌ನಂತೆ ಕಾಣುವ ಈ ಔಟ್‌ಫಿಟ್‌, ಸ್ಲಿಮ್‌ ಹುಡುಗಿಯರು ಧರಿಸಿದಾಗ ಬಾಡಿ ಮಾಸ್‌ ಇಂಡೆಕ್ಸ್ ಹೈಲೈಟ್‌ ಮಾಡುವುದರೊಂದಿಗೆ ಆಕರ್ಷಕವಾಗಿ ಬಿಂಬಿಸುತ್ತವೆ.

Balloon Denim Frock Fashion

ಡೆನಿಮ್‌ ನ್ಯೂ ಲುಕ್‌

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಸಿನಿಮಾ ಇವೆಂಟ್‌ನಲ್ಲಿ ಬಾಲಿವುಡ್‌ ನಟಿ ಶಾರ್ವರಿ ಧರಿಸಿದ ಬಲೂನ್‌ ಡೆನಿಮ್‌ ಮಿನಿ ಡ್ರೆಸ್‌ ಫ್ಯಾಷನ್‌ ಪ್ರಿಯ ಹುಡುಗಿಯರನ್ನು ಆಕರ್ಷಿಸಿತ್ತು.

Balloon Denim Frock Fashion

ಟೀನೇಜ್‌ ಹುಡುಗಿಯರಿಗೆ ಪ್ರಿಯವಾದ ಮಿನಿ ಡೆನಿಮ್‌ ಬಲೂನ್‌ ಡ್ರೆಸ್

“ಇತ್ತೀಚೆಗೆ ನಾನಾ ಬಗೆಯ ಡೆನಿಮ್‌ ಡ್ರೆಸ್‌ಗಳು ಫ್ಯಾಷನ್‌ ಲೋಕದಲ್ಲಿ ಕಾಲಿಡುತ್ತಿದ್ದು, ಅವುಗಳಲ್ಲಿ ಇದೀಗ ಚಾಲ್ತಿಯಲ್ಲಿರುವ ಬಲೂನ್‌ ಡೆನಿಮ್‌ ಡ್ರೆಸ್‌ ಟೀನೇಜ್‌ ಯುವತಿಯರ ವಾರ್ಡ್ರೋಬ್‌ ಸೇರಿವೆ. ಅವುಗಳಲ್ಲಿ ಮಿನಿ ಅಥವಾ ಶಾರ್ಟ್ ಬಲೂನ್‌ ಡ್ರೆಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಸ್ಲಿಮ್‌ ಹುಡುಗಿಯರು ಧರಿಸಿದಾಗ ಬೊಂಬೆಯಂತೆ ಬಿಂಬಿಸುವ ಈ ಬಲೂನ್‌ ಡೆನಿಮ್‌ ಡ್ರೆಸ್‌ಗಳು ಈ ಸೀಸನ್‌ಗೆ ತಕ್ಕಂತಹ ಡಿಸೈನ್‌ನಲ್ಲಿ ಆಗಮಿಸಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಾಕೀರ್‌. ಅವರ ಪ್ರಕಾರ, ಈ ಡ್ರೆಸ್‌ಗಳು ಅತಿ ಹೆಚ್ಚಾಗಿ ಬಿಂದಾಸ್‌ ಹುಡುಗಿಯರನ್ನು ಸಿಂಗರಿಸಿವೆ.

ಏನಿದು ಬಲೂನ್‌ ಡೆನಿಮ್‌ ಡ್ರೆಸ್‌

ನೋಡಲು ಮಿನಿ ಫ್ರಾಕ್‌ನಂತೆ ಕಾಣುವ ಬಲೂನ್‌ ಡ್ರೆಸ್‌ನ ಸ್ಲೀವ್‌ ಉದ್ದನಾಗಿರುತ್ತವೆ. ಫುಲ್ ಸ್ಲೀವ್‌ ಹೊಂದಿರುತ್ತದೆ. ಇನ್ನು ವೇಸ್ಟ್‌ಲೈನ್‌ವರೆಗೂ ಫಿಟ್‌ ಆಗಿರುತ್ತವೆ. ಡೆನಿಮ್‌ನಲ್ಲಿ ಕೆಳಗೆ ಫ್ಲೇರ್‌ ನೀಡಲಾಗುವುದಿಲ್ಲವಾದ್ದರಿಂದ ಬಲೂನ್‌ನಂತಹ ವಿನ್ಯಾಸ ಡಬ್ಬಲ್‌ ಮಡಿಸಿದ ರೀತಿಯ ಡಿಸೈನ್‌ ಬಲೂನ್‌ನಂತೆ ಬಿಂಬಿಸುತ್ತದೆ. ಕೆಲವು ಡ್ರೆಸ್‌ಗಳು ಮಿನಿ ಫ್ರಾಕ್‌ನಂತೆ ಇರುತ್ತವೆ. ಹೊಟ್ಟೆಯ ಭಾಗದಲ್ಲಿ ಟೈಟಾಗಿರುತ್ತವೆ. ಕ್ಯಾಶುವಲ್‌ ಲುಕ್‌ ನೀಡುತ್ತವೆ. ಸಾಮಾನ್ಯ ಸ್ಯಾಟಿನ್‌ ಫ್ಯಾಬ್ರಿಕ್‌ನಲ್ಲಿ ಟ್ರೆಂಡಿಯಾಗಿದ್ದ ಈ ವಿನ್ಯಾಸ ಇದೀಗ ಡೆನಿಮ್‌ ಫ್ಯಾಬ್ರಿಕ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಇದನ್ನೂ ಓದಿ: Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಬಲೂನ್‌ ಡ್ರೆಸ್‌ ಪ್ರಿಯರಿಗೆ ಒಂದಿಷ್ಟು ಸಿಂಪಲ್‌ ಸಲಹೆ

  • ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಬಲೂನ್‌ ಡ್ರೆಸ್ ಹೊಂದಬೇಕು.
  • ಟಮ್ಮಿ ಭಾಗ ಅಗಲವಾಗಿದ್ದಲ್ಲಿ ಈ ಔಟ್‌ಫಿಟ್‌ ಬೇಡ.
  • ಈ ಡ್ರೆಸ್‌ನೊಂದಿಗೆ ಹೈ ಹೀಲ್ಸ್ ಅಥವಾ ಸ್ನೀಕರ್ಸ್ ಮ್ಯಾಚ್‌ ಆಗುತ್ತದೆ.
  • ನೆಕ್‌ಲೈನ್‌ ಅಗಲವಾಗಿಲ್ಲದ ಕಾರಣ ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಈ ಡ್ರೆಸ್ ಎಂತಹವರಿಗೂ ಯಂಗ್‌ ಲುಕ್‌ ನೀಡುತ್ತದೆ.
  • ಸ್ಲಿಮ್‌ ಇರುವವರಿಗೆ ಹೇಳಿಮಾಡಿಸಿದ ವೆಸ್ಟರ್ನ್‌ ಔಟ್‌ಫಿಟ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

Crush Saree Fashion: ಡಿಸೈನರ್‌ ಕ್ರಶ್‌ ಸೀರೆಗಳು ಇದೀಗ ಟ್ರೆಂಡಿಯಾಗಿದ್ದು, ಸೀರೆ ಪ್ರಿಯರನ್ನು ಸೆಳೆದಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಶೇಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಸೆಲೆಕ್ಷನ್‌ ಹೇಗೆ ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Crush Saree Fashion
ಚಿತ್ರಗಳು: ಗುಲಾಟಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ಕ್ರಶ್‌ ಸೀರೆಗಳು ನೀರೆಯರನ್ನು (Crush Saree Fashion) ಸೆಳೆದಿವೆ. ಬಣ್ಣದ ಬಣ್ಣದ ಕ್ರಶ್‌ ಸೀರೆಗಳು ಮಾನೋಕ್ರೋಮ್‌, ಸಾಲಿಡ್‌ ಶೇಡ್‌ ಹಾಗೂ ಮಿಕ್ಸ್ ಶೇಡ್‌ಗಳಲ್ಲಿಆಗಮಿಸಿದ್ದು, ಫ್ಯಾಷನ್‌ ಪ್ರಿಯ ಮಾನಿನಿಯರನ್ನು ಬರಸೆಳೆದಿವೆ. ನೋಡಲು ಒಂದೇ ಡಿಸೈನ್‌ನಂತೆ ಕಂಡರೂ ಅವುಗಳ ಬಣ್ಣ ಹಾಗೂ ಡಿಸೈನ್‌ನಿಂದ ಡಿಫರೆಂಟ್‌ ಲುಕ್‌ ನೀಡುತ್ತಿವೆ.

Crush Saree Fashion

ಮಾಡರ್ನ್‌ ನೀರೆಯರ ಸೀರೆಗಳಿವು

ಮಾಡರ್ನ್‌ ಹಾಗೂ ಜೆನ್‌ ಜಿ ಹುಡುಗಿಯರ ಸೀರೆಗಳಿವು. ಯಾಕೆಂದರೆ, ಇವು ಟ್ರೆಡಿಷನಲ್‌ ಲುಕ್‌ ನೀಡುವುದಿಲ್ಲ, ಬದಲಿಗೆ ಪ್ರಯೋಗಾತ್ಮಕ ಡಿಸೈನರ್‌ ಬ್ಲೌಸ್‌ಗಳ ಜೊತೆಗೆ ಧರಿಸಬಹುದಾದಂತಹ ಸೀರೆಗಳಿವು. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಕ್ಷೇತ್ರದ ಮಾಡೆಲ್‌ಗಳು ಉಡುವಂತಹ ಸೀರೆಗಳು ಎನ್ನಬಹುದು. ಸಾಮಾನ್ಯವರ ಮಹಿಳೆಯರ ಚಾಯ್ಸ್‌ನಲ್ಲಿ ಹೆಚ್ಚಾಗಿ ಇಂತಹ ಸೀರೆಗಳು ಕಂಡು ಬರುವುದಿಲ್ಲ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಾಕಿ.

Crush Saree Fashion

ಟ್ರೆಂಡ್‌ನಲ್ಲಿರುವ ಕ್ರಶ್‌ ಸೀರೆಗಳು

ಜಾರ್ಜೆಟ್‌ ಕ್ರಶ್‌ ಸೀರೆ, ಶಿಫಾನ್‌, ಚಂದೇರಿ, ಸಿಲ್ಕ್‌ ಫ್ಯಾಬ್ರಿಕ್‌ನಲ್ಲೂ ಕ್ರಶ್‌ ಸೀರೆಗಳು ಇತ್ತೀಚೆಗೆ ಪ್ರಚಲಿತದಲ್ಲಿವೆ. ಆದರೆ, ಜಾರ್ಜೆಟ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಇವುಗಳೊಂದಿಗೆ ಕಸ್ಟಮೈಸ್ಡ್ ಕ್ರಶ್‌ ಸೀರೆಗಳು ಇದೀಗ ಹೆಚ್ಚು ಚಾಲ್ತಿಯಲ್ಲಿವೆ. ನಮಗೆ ಬೇಕಾದ ಕಲರ್‌ನವನ್ನು ಕಸ್ಟಮೈಸ್ಡ್‌ ಮಾಡಿಸಿ, ಮಿಕ್ಸ್ ಶೇಡ್‌ಗಳಲ್ಲಿ ಸಿದ್ಧಪಡಿಸಿ ಕೊಡುವ ಸೀರೆ ಮಾರಾಟಗಾರರು ಇದ್ದಾರೆ. ಬಹುತೇಕ ಸೆಲೆಬ್ರೆಟಿಗಳು ಕಸ್ಟಮೈಸ್ಡ್ ಕ್ರಶ್‌ ಸೀರೆಗಳನ್ನು ಉಡುತ್ತಾರೆ.

Crush Saree Fashion

ಕ್ರಶ್‌ ಸೀರೆಗಳ ರೂಲ್ಸ್

ಕ್ರಶ್‌ ಸೀರೆಗಳು ಸ್ಲಿಮ್‌ ಹಾಗೂ ಉದ್ದನಾಗಿರುವವರಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಯಾಕೆಂದರೆ, ಇವು ಹರಡಿಕೊಳ್ಳುತ್ತವೆ. ಕೆಲವು ಫ್ಯಾಬ್ರಿಕ್‌ ಸಾಫ್ಟಾಗಿರುತ್ತವೆ. ಅಂತವನ್ನು ಆಯ್ಕೆ ಮಾಡಿಕೊಂಡರೇ ಉತ್ತಮ ಎನ್ನುತ್ತಾರೆ ಸೀರೆ ಡ್ರೇಪರ್ಸ್.

ಇದನ್ನೂ ಓದಿ: Dogs Monsoon Fashion: ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

ಕ್ರಶ್‌ ಸೀರೆ ಪ್ರಿಯರಿಗೆ 5 ಟಿಪ್ಸ್

  • ನಿಯಾನ್‌ ವರ್ಣದವು ಸಖತ್‌ ಟ್ರೆಂಡ್‌ನಲ್ಲಿವೆ. ಇವುಗಳ ಆಯ್ಕೆ ಉತ್ತಮ.
  • ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಟ್ರೆಂಡಿಯಾಗಿರುವ ಸಾಲಿಡ್‌ ಕಲರ್‌ನವನ್ನು ಚೂಸ್‌ ಮಾಡಬೇಕು.
  • ಈ ಸೀರೆಗಳಿಗೆ ಗ್ಲಾಮರಸ್‌ ಬ್ಲೌಸ್‌ ಧರಿಸಿದಲ್ಲಿ ಮಾತ್ರ ಚೆನ್ನಾಗಿ ಕಾಣಿಸುವುದು.
  • ನಿಮ್ಮ ಪರ್ಸನಾಲಿಟಿಗೆ ಹೊಂದುವುದೇ ಎಂಬುದನ್ನು ನೋಡಿಕೊಂಡು ಖರೀದಿಸುವುದು ಉತ್ತಮ.
  • ಇವುಗಳಿಗೆ ಕಾಂಟ್ರಸ್ಟ್ ಬ್ಲೌಸ್‌ ಮ್ಯಾಚ್‌ ಮಾಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Monsoon trench coat fashion: ಚಳಿಗಾಲದಲ್ಲಿ ಮಾತ್ರ ಟ್ರೆಂಡಿಯಾಗುತ್ತಿದ್ದ ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿವೆ. ಕೇವಲ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿದ್ದ ಈ ಡ್ರೆಸ್‌ಕೋಡ್‌ ಇದೀಗ ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಏನಿದು ಟ್ರೆಂಚ್‌ ಕೋಟ್‌? ಇದನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Monsoon Trench Coat Fashion
ಚಿತ್ರಗಳು: ಸುಹಾನಾ ಖಾನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

Monsoon Trench Coat Fashion

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

  • ಟ್ರೆಂಚ್‌ ಕೋಟ್‌ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್‌ ಇನ್ನರ್‌ ಡ್ರೆಸ್‌ ಧರಿಸುವುದು ಬೆಸ್ಟ್.
  • ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್‌ ಕೋಟ್‌ ಆದರೂ ಸೂಟ್‌ ಆಗುತ್ತವೆ.
  • ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್‌ ಕೋಟ್‌ ಧರಿಸುವುದು ಉತ್ತಮ.
  • ವಿಂಟೆಂಜ್‌ ಹಾಗೂ ರಾಯಲ್‌ ಕಲರ್‌ಗಳ ಟ್ರೆಂಚ್‌ ಕೋಟ್‌ಗಳು ರಾಯಲ್‌ ಲುಕ್‌ ನೀಡುತ್ತವೆ.
  • ಪ್ರಿಂಟೆಡ್‌ ಕೋಟ್‌ಗಳು ಟ್ರೆಂಡ್‌ನಲ್ಲಿಲ್ಲ.
  • ಫಿಟ್ಟಿಂಗ್‌ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.
  • ( ಲೇಖಕಿ ಫ್ಯಾಷನ್‌ ಪತ್ರಕರ್ತೆ )
Continue Reading
Advertisement
honey trap harish gowda
ಕ್ರೈಂ4 mins ago

Honey Trap: ಎಂಎಲ್‌ಎ ಹರೀಶ್‌ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್‌ ಸೆರೆ, ಇವರ ಖತರ್‌ನಾಕ್‌ ಐಡಿಯಾ ನೋಡಿ!

Kangana Ranaut Chirag Paswan In Parliament
ಬಾಲಿವುಡ್16 mins ago

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Viral Video
Latest33 mins ago

Viral Video: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

Terrorist Killed
ದೇಶ34 mins ago

Terrorist Killed: ಮುಂದುವರಿದ ಉಗ್ರರ ಬೇಟೆ; ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Viral Video
Latest37 mins ago

Viral Video: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

AFG vs SA Semi Final
ಕ್ರೀಡೆ45 mins ago

AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

Development of Gaanagapura kshethra on Pandharpur, Thulajapur model says DC Fauzia Tarannum
ಕಲಬುರಗಿ51 mins ago

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

CM Siddaramaiah
ಪ್ರಮುಖ ಸುದ್ದಿ52 mins ago

CM Siddaramaiah: ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ; ಅಧಿಕಾರಿಗಳ ವಿಳಂಬ ಧೋರಣೆಗೆ ಸಿಎಂ ಗರಂ

Job Alert
ಉದ್ಯೋಗ54 mins ago

Job Alert: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಗಮನಿಸಿ-ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

Parliament Sessions
ದೇಶ1 hour ago

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌