Bigg Boss Kannada | ವಿಸ್ತಾರ ನ್ಯೂಸ್‌ ಜತೆ ಕಿರಣ್‌ ಯೋಗೇಶ್ವರ್‌ ಎಕ್ಸ್‌ಕ್ಲೂಸಿವ್‌ ಮಾತು! - Vistara News

ಒಟಿಟಿ

Bigg Boss Kannada | ವಿಸ್ತಾರ ನ್ಯೂಸ್‌ ಜತೆ ಕಿರಣ್‌ ಯೋಗೇಶ್ವರ್‌ ಎಕ್ಸ್‌ಕ್ಲೂಸಿವ್‌ ಮಾತು!

‘ಬಿಗ್‌ಬಾಸ್‌ (Bigg Boss Kannada) ಶೋ ಇದೀಗ ಒಟಿಟಿ ಪ್ಲಾಟ್‌ಫಾರಂ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಒಟ್ಟು 42 ದಿನಗಳ ಕಾಲ ನಡೆಯುವ ‘ಬಿಗ್‌ಬಾಸ್‌’ ಒಟಿಟಿ ಸೀಸನ್‌-1ರಲ್ಲಿ ಈಗಾಗಲೇ ಎಲಿಮಿನೇಟ್‌ ಆಗಿರುವ ರಾಜಸ್ಥಾನ ಮೂಲದ ಬೆಡಗಿ ಕಿರಣ್‌ ಯೋಗೇಶ್ವರ್‌ ‘ವಿಸ್ತಾರ ನ್ಯೂಸ್’ಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿದ್ದು, ಅದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

VISTARANEWS.COM


on

bigg boss kiran yogeshwar 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: “ಬಿಗ್‌ಬಾಸ್‌ ಒಟಿಟಿ ಸೀಸನ್‌-1 ಕೇವಲ 42 ದಿನಕ್ಕೆ ಮುಗಿದು ಹೋಗುವುದಿಲ್ಲ. ಕಾರಣ, ಇಲ್ಲಿ ಆಯ್ಕೆಯಾಗುವ ಕೆಲವು ಸ್ಪರ್ಧಿಗಳು ಮುಂದೆ ನಡೆಯುವ ಬಿಗ್‌ಬಾಸ್‌ ಟೆಲಿವಿಷನ್‌ ಸೀಸನ್‌-9ಕ್ಕೂ ಆಯ್ಕೆ ಆಗಲಿದ್ದಾರೆ. ಹೀಗಾಗಿ ‘ಬಿಗ್‌ಬಾಸ್‌’ ಒಟಿಟಿ ಸೀಸನ್‌-1 ಅನ್ನು ‘ಮಿನಿ ಬಿಗ್‌ಬಾಸ್’ ‌ಎಂದು ಕರೆಯುವುದುಂಟು”.

ಇದು ‘ಮಿನಿ ಬಿಗ್‌ಬಾಸ್’ ಸೀಸನ್‌-1ರಲ್ಲಿ ಮೊದಲನೇ ವಾರವೇ ಎಲಿಮಿನೇಟ್‌ ಆಗಿರುವ ಸ್ಪರ್ಧಿ ಕಿರಣ್‌ ಯೋಗೇಶ್ವರ್‌ ಅವರ ಮನದಾಳದ ಮಾತು. ಅವರು ತಮ್ಮ ಅನುಭವವನ್ನು ವಿಸ್ತಾರ ನ್ಯೂಸ್‌ ಜತೆ ಹಂಚಿಕೊಂಡಿದ್ದು, ಈಗಲೂ ತಾವು ಎಲಿಮಿನೇಟ್‌ ಆದ ಕಾರಣವನ್ನು ಹುಡುಕುತ್ತಿದ್ದಾರೆ. ಅವರ ಜತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಹೇಗಿತ್ತು ಬಿಗ್‌ಬಾಸ್‌ ಅನುಭವ?

ಜೀವನದಲ್ಲಿ ಒಮ್ಮೆಯಾದರೂ ಇಂತಹ ಅನುಭವ ಪಡೆಯಲೇಬೇಕು. ಬೇರೆ ಬೇರೆ ಜಾಗದಿಂದ ಬಂದ, ವೈವಿಧ್ಯಮಯ ವ್ಯಕ್ತಿತ್ವಗಳ ಜತೆ ಬೆರೆಯಲು ನಮಗೆ ಅವಕಾಶ ಸಿಗುತ್ತದೆ. ‘ಬಿಗ್‌ಬಾಸ್‌’ ಶೋಗೆ ಹೋದ ಬಳಿಕ ನಾನು ತುಂಬಾ ಕಲಿತುಕೊಂಡೆ. ನೀವು ಹೊರಗಿನಿಂದ ಬಿಗ್‌ಬಾಸ್‌ ಮನೆ ಬಗ್ಗೆ ಜಡ್ಜ್‌ ಮಾಡಲು ಆಗುವುದಿಲ್ಲ. ಒಳಗೆ ಹೋದಾಗ ಮಾತ್ರ ‘ಬಿಗ್‌ಬಾಸ್‌’ ಪ್ರಪಂಚ ತಿಳಿಯುತ್ತದೆ. ಟಾಸ್ಕ್‌ ವಿಚಾರವೇ ಇರಬಹುದು ಅಥವಾ ತಪ್ಪು ಮಾಡಿದಾಗ ಬಿಗ್‌ಬಾಸ್‌ ಮನೆಯಲ್ಲಿ ನೀಡುವ ಶಿಕ್ಷೆಯ ವಿಚಾರವೇ ಆಗಿರಬಹುದು, ಎಲ್ಲವೂ ತುಂಬಾ ವಿಭಿನ್ನ. ‘ಬಿಗ್‌ಬಾಸ್‌’ನ ಆ ಒಂದು ವಾರ ಜೀವನದಲ್ಲಿ ಭಾವನಾತ್ಮಕ ಹಾಗೂ ಎಂದೂ ಮರೆಯಲಾಗದ ಅನುಭವವನ್ನು ನೀಡಿದೆ.

ಬಿಗ್‌ಬಾಸ್‌ನಿಂದ ಹೊರಬಂದ ಅನುಭವ ಹೇಗಿತ್ತು?

ಬಿಗ್‌ಬಾಸ್‌ ಶೋನಿಂದ ಎಲಿಮಿನೇಟ್‌ ಆಗಿರುವುದನ್ನು ಈಗಲೂ ನಂಬಲು ಆಗುತ್ತಿಲ್ಲ. ನಾನು ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರ ಜತೆಗೂ ಬೆರೆಯುತ್ತಿದ್ದೆ. ಟಾಸ್ಕ್‌ ವಿಚಾರದಲ್ಲೂ ತುಂಬಾ ಚೆನ್ನಾಗಿ ಭಾಗವಹಿಸುತ್ತಿದ್ದೆ. ಆದರೆ ನಾನು ಯಾಕೆ ಎಲಿಮಿನೇಟ್‌ ಆಗಿದ್ದೇನೆ ಎನ್ನುವುದು ಈವರೆಗೂ ಗೊತ್ತಾಗುತ್ತಿಲ್ಲ. ಸಾಕಷ್ಟು ಜನ ಈ ಬಗ್ಗೆ ನನಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ ಮಾಡಿ ಕೇಳಿದ್ದಾರೆ. ಬಿಗ್‌ಬಾಸ್‌ ಶೋನಿಂದ ಹೊರಬಂದ ಬಳಿಕ ಆ ಜಾಗ ಮತ್ತು ಅಲ್ಲಿನ ಸ್ಪರ್ಧಿಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನಗೆ ಸಫೋರ್ಟ್‌ ಸಿಗುತ್ತಿದೆ. ಈ ಬೆಂಬಲವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ.

ಯಾರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಿ?

ರಾಕೇಶ್‌ ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ ನಾನು ಮತ್ತು ರಾಕೇಶ್‌ ಒಟ್ಟಿಗೆ ಯೋಗ ಮಾಡುತ್ತಿದ್ದೆವು. ನಮ್ಮಿಬ್ಬರ ನಡುವೆ ಮಾತುಕತೆಯೂ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಹೀಗಾಗಿ ರಾಕೇಶ್‌ನ ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಜತೆಗೆ ನಂದು-ಜಶ್ವಂತ್ ಕೂಡ ನನಗೆ ತುಂಬಾ ಹತ್ತಿರವಾಗಿದ್ದರು. ಅವರನ್ನು ಕೂಡ ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

ಬಿಗ್‌ಬಾಸ್‌ಗೆ ಅವಕಾಶ ಸಿಕ್ಕಿದ್ದು ಹೇಗೆ?

ನಾನು ಮಾಡೆಲಿಂಗ್‌ನಲ್ಲಿ ಫೇಮಸ್‌ ಆಗಿದ್ದ ಕಾರಣ ಬಹುತೇಕರಿಗೆ ಪರಿಚಿತವಾಗಿದ್ದೆ. ಹೀಗಾಗಿ ನನಗೆ ಒಬ್ಬರು ಕರೆ ಮಾಡಿ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದ್ದರು. ನನಗೆ ಈ ಅವಕಾಶ ಸಿಕ್ಕಿದ್ದು ತುಂಬಾನೆ ಖುಷಿ ಕೊಟ್ಟಿತ್ತು. ಇದೇ ಕಾರಣಕ್ಕೆ ನಾನು ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿಕೊಂಡೆ. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವ ಅಲ್ಲಿಂದ ಸಿಕ್ಕಿದೆ.

ಹೊರಗಿನಿಂದ ಬಂದಿದ್ದು ಕಷ್ಟ ಆಯಿತಾ?

ನಾನು ಹೊರಗಿನಿಂದ ಬಂದಿದ್ದೀನಿ ಎಂದು ನನ್ನ ಎಲಿಮಿನೇಟ್‌ ಮಾಡಿದ್ದಾರೆಂದು ಕೆಲ ಸ್ಪರ್ಧಿಗಳು ಮಾತನಾಡಿದ್ದಾರೆ. ಇದನ್ನು ಹೊರಗೆ ಬಂದ ಬಳಿಕ ಗಮನಿಸಿದ್ದೇನೆ. ಆದರೆ, ನಾನು ಎಲ್ಲರ ಜತೆ ಬೆರೆಯಲು ತುಂಬಾ ಪ್ರಯತ್ನಿಸಿದೆ. ಆದರೆ ಬಹುತೇಕರು ನನ್ನ ಮಾತನ್ನು ಕೇಳುವುದಕ್ಕೆ ಸಿದ್ಧರಿರಲಿಲ್ಲ. ನಾನು ಮಾತನಾಡುವಾಗ ಅವರು ಬೇರೆ ಏನನ್ನೋ ಹೇಳುತ್ತಿದ್ದರು. ಇಂತಹ ಘಟನೆಗಳು ನನಗೆ ತುಂಬಾ ಬೇಸರ ತರಿಸಿತ್ತು.

ಸೋನು ಶ್ರೀನಿವಾಸ್‌ ಗೌಡ ಬಗ್ಗೆ ಏನಂತೀರ?

ಒಬ್ಬರ ಬಗ್ಗೆ ಮತ್ತೊಬ್ಬರು ಜಡ್ಜ್‌ ಮಾಡಲು ಆಗುವುದಿಲ್ಲ. ಹೀಗೆ ಸೋನು ಶ್ರೀನಿವಾಸ್‌ ಗೌಡ ಅವರನ್ನು ಗಮನಿಸಿದರೆ ಅವರು ಕೆಟ್ಟವರಲ್ಲ. ಆದರೆ, ಸೋನು ಶ್ರೀನಿವಾಸ್‌ ಗೌಡ ವಾಸ್ತವ ಅರ್ಥಮಾಡಿಕೊಳ್ಳಲ್ಲ. ಚೈಲ್ಡಿಶ್‌ ವರ್ತನೆ ಅವರಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ವರ್ತನೆ ಬದಲಾಯಿಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಒಳ್ಳೆಯದಾಗುತ್ತದೆ.

ಇದು ಮಿನಿ ಬಿಗ್‌ಬಾಸ್ ಸೀಸನ್‌-1 ರಲ್ಲಿ ಮೊದಲನೇ ವಾರವೇ ಎಲಿಮಿನೇಟ್‌ ಆದ ಸ್ಪರ್ಧಿ ಕಿರಣ್‌ ಯೋಗೇಶ್ವರ್‌ ಮನದಾಳದ ಮಾತು. ತಮ್ಮಲ್ಲಿರುವ ಕನ್ನಡ ಪ್ರೀತಿ ಸೇರಿದಂತೆ ಅನೇಕ ಸ್ವಾರಸ್ಯಕರ ಮಾಹಿತಿಯನ್ನು ವಿಸ್ತಾರ ನ್ಯೂಸ್‌ ಜತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Bigg Boss Kannada | ಮೊದಲ ದಿನವೇ ಜಶ್ವಂತ್ ಬೋಪಣ್ಣಗೆ ಸರ್ಪ್ರೈಸ್ ನೀಡಿದ ಬಿಗ್‌ ಬಾಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

OTT Release: ಈ ವಾರ ಕೂಡ ಒಟಿಟಿಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಹೌಸ್ ಆಫ್ ದಿ ಡ್ರ್ಯಾಗನ್, ಬ್ರಿಡ್ಜರ್ಟನ್, ದಿ ಬಾಯ್ಸ್, ಪ್ರಿಸ್ಯುಮಡ್ ಇನ್ನೊಸೆಂಟ್ ಹಾಗೂ ವಿದ್ಯಾಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಬಾಲಿವುಡ್ ಚಲನಚಿತ್ರ ದೋ ಔರ್ ದೋ ಪ್ಯಾರ್ ಕೂಡ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿವೆ. ಒಟ್ಟಾರೆ ಈ ವಾರ ಸಿನಿ ಪ್ರಿಯರಿಗೆ ಹಬ್ಬದೂಟವನ್ನು ಉಣಬಡಿಸಲಿದೆ.

VISTARANEWS.COM


on

OTT Release
Koo

ಮುಂಬೈ : ಪ್ರತಿವಾರ ಒಟಿಟಿಯಲ್ಲಿ ಸಾಕಷ್ಟು ಸೂಪರ ಹಿಟ್ ಶೋಗಳು ರಿಲೀಸ್ ಆಗುತ್ತಿರುತ್ತವೆ. ಈ ಮೂಲಕ ಒಟಿಟಿ ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಹಾಗಾಗಿ ಈ ವಾರವೂ ಕೂಡ ಒಟಿಟಿ(OTT Release)ಯಲ್ಲಿ ಹಲವಾರು ಹಿಟ್ ಶೋಗಳು ರಿಲೀಸ್ ಆಗಲಿವೆ. ಗಲ್ಲಾ ಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವು ಬಾಲಿವುಡ್ ಚಲನಚಿತ್ರಗಳೂ ಈ ಬಾರಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅವುಗಳ ವಿವರ ಇಲ್ಲಿದೆ.

ಹೌಸ್ ಆಫ್ ದಿ ಡ್ರ್ಯಾಗನ್ (ಸೀಸನ್ 2)

ಎಚ್‌ಬಿಓನ ಸೀರಿಸ್ ʼಹೌಸ್ ಆಫ್ ದಿ ಡ್ರ್ಯಾಗನ್ʼ ಸೀಸನ್ 2 ಜೂನ್ 16ರಂದು ಹೊಸ ಸಂಘರ್ಷ, ಸೇಡು ತೀರಿಸಿಕೊಳ್ಳುವ ಹೊಸ ಕಥಾವಸ್ತುಗಳೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಜಾರ್ಜ್ ಆರ್ ಆರ್ ಮಾರ್ಟಿನ್ ಅವರ ʼಫೈರ್ ಆ್ಯಂಡ್ ಬ್ಲಡ್ʼ ಆಧರಿಸಿದ ಈ ಸರಣಿಯು ರಾಜ ಕುಟುಂಬದ ಕಥೆಯನ್ನು ಒಳಗೊಂಡಿದೆ. ರಾಜ ಕುಟುಂಬ ಅಧಿಕಾರದ ಸಂಘರ್ಷ, ಒಳಸಂಚು, ಕೌಟುಂಬಿಕ ಶತ್ರುತ್ವವನ್ನು ಇದರಲ್ಲಿ ಕಾಣಬಹುದು.
ಇದು ಜೂನ್ 16ರಂದು ಜಿಯೋ ಸಿನಿಮಾದಲ್ಲಿ ಬೆಳಗ್ಗೆ 6.30ರಿಂದ ಲಭ್ಯವಾಗಲಿದೆ.

ಬ್ರಿಡ್ಜರ್ಟನ್(ಸೀಸನ್ 3, ಭಾಗ 2)

ಇದರಲ್ಲಿ ಕಾಲಿನ್ ಮತ್ತು ಪೆನೆಲೋಪ್ ಅವರ ಪ್ರಣಯವನ್ನು ಪ್ರೇಕ್ಷಕರು ಕಣ್ತುಂಬಿಸಿಕೊಳ್ಳಬಹುದು. ಇದು ರೀಜೆನ್ಸಿ ಯುಗದ ಪ್ರಣಯ ಸರಣಿಯು ಜೂಲಿಯಾ ಕ್ವಿನ್ ಅವರ ಪುಸ್ತಕಗಳನ್ನು ಆಧರಿಸಿದೆ. ಪ್ರತಿಯೊಂದು ದೃಶ್ಯ ಬ್ರಿಡ್ಜರ್ಟನ್ ಕುಟುಂಬದ ಒಡಹುಟ್ಟಿದವರ ಮೇಲೆ ಕೇಂದ್ರೀಕರಿಸುತ್ತದೆ. ಮೂರನೇ ಸೀಸನ್‌ನಲ್ಲಿ ಪೆನೆಲೋಪ್ ಲೇಡಿ ವಿಸ್ಲ್ ಡೌನ್‌ನ ರಹಸ್ಯ ಗುರುತಿನಿಂದಾಗಿ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾಳೆ. ಅವಳ ಸತ್ಯ ಬಯಲಾಗುವುದೋ? ಅಥವಾ ಅವಳು ಸುಖವಾಗಿ ಬದುಕುವಳೋ? ಎಂಬುದನ್ನು ನೋಡಬೇಕು. ಇದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

ದೋ ಔರ್ ದೋ ಪ್ಯಾರ್

ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡ ವಿದ್ಯಾ ಬಾಲನ್ ಅವರ ರೊಮ್ಯಾಂಟಿಕ್ ಕಾಮಿಡಿ ಇದೀಗ ಒಟಿಟಿಯಲ್ಲಿ ಕಾಣಿಸಿಕೊಂಡಿದೆ. ʼದೋ ಔರ್ ದೋ ಪ್ಯಾರ್‌ʼನಲ್ಲಿ ಕಾವ್ಯ ಮತ್ತು ಅನಿಯ ಪಾತ್ರದಲ್ಲಿ ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಊಟಿ ಪ್ರವಾಸದ ನಂತರ ವಿವಾಹೇತರ ಸಂಬಂಧದಲ್ಲಿ ತೊಡಗಿಕೊಂಡಿದ್ದರೂ ಸಹ ಪರಸ್ಪರ ಪ್ರೀತಿಸುವ ವಿವಾಹಿತ ದಂಪತಿಗಳಂತೆ ಇವರಿಬ್ಬರು ನಟಿಸುತ್ತಾರೆ. ಇದನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ದಿ ಬಾಯ್ಸ್ (ಸೀಸನ್ 4)

ವಿಡಂಬನಾತ್ಮಕ ಸೂಪರ್ ಹೀರೋ ಸರಣಿಯ ʼದಿ ಬಾಯ್ಸ್ʼ ಸೀಸನ್ 4ರ ಮೊದಲ ಮೂರು ಸಂಚಿಕೆಗಳನ್ನು ಗುರುವಾರ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. ಕಾರ್ಲ್ ಅರ್ಬನ್, ಜ್ಯಾಕ್ ಕ್ವೈಡ್, ಆಂಟೋನಿ ಸ್ಟಾರ್, ಜೆನ್ಸಿ ಟಿ ಉಷರ್, ಎರಿನ್ ಮೊರಿಯಾರ್ಟಿ ಮತ್ತು ಚೇಸ್ ಕ್ರಾಫೋರ್ಡ್ ಹಿಂದಿನ ಪಾತ್ರವರ್ಗದವರಾದರೆ ವ್ಯಾಲೋರಿ ಕರಿ ಮತ್ತು ಸುಸಾನ್ ಹೇವಾರ್ಡ್ ಇಬ್ಬರು ಹೊಸ ಸೂಪರ್ ಹೀರೋಗಳಾಗಿದ್ದಾರೆ. ಇದನ್ನು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ನಲ್ಲಿ ನೋಡಬಹುದು.

ಇದನ್ನೂ ಓದಿ: Yogi Adityanath: ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್! ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಯೋಗಿ ವಾರ್ನಿಂಗ್!

ಪ್ರಿಸ್ಯುಮಡ್ ಇನ್ನೊಸೆಂಟ್ (Presumed Innocent)

ಜೇಕ್ ಗಿಲೆನ್ ಹಾಲ್ ʼಪ್ರಿಸ್ಯುಮಡ್ ಇನ್ನೊಸೆಂಟ್‌ʼನಲ್ಲಿ ಕೊಲೆ ಪ್ರಕರಣದಲ್ಲಿನ ಪ್ರಾಸಿಕ್ಯೂಟರ್ ಆಗಿ ನಟಿಸಿದ್ದಾರೆ. ಇದು ಸ್ಕಾಟ್ ಟುರೊವ್ ಅವರ ಕಾದಂಬರಿ ಆಧರಿಸಿದೆ. ನಿಜ ಜೀವನದಲ್ಲಿ ಜೇಕ್‌ನ ಸಹೋದರಿ ಮ್ಯಾಗಿಯನ್ನು ಮದುವೆಯಾಗಿರುವ ಪೀಟರ್ ಸರ್ಸ್ ಗಾರ್ಡ್, ಗಿಲೆನ್ ಹಾಲ್‌ನ ನ್ಯಾಯಾಲಯದಲ್ಲಿ ಎದುರಾಳಿಯಾಗಿ ನಟಿಸಿದ್ದಾರೆ. ಇದನ್ನು ಆಪಲ್ ಟಿವಿ ಸ್ಟ್ರೀಮಿಂಗ್‌ನಲ್ಲಿ ನೋಡಬಹುದು.

Continue Reading

ಒಟಿಟಿ

Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

Bigg Boss OTT 3: ಮೂರನೇ ಸೀಸನ್​ನಲ್ಲಿ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಕಂದರ್​’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.. ಅನಿಲ್ ಕಪೂರ್ ಅವರ ಹೋಸ್ಟಿಂಗ್ ಜತೆಗೆ ಈ ಬಾರಿ ಜನಪ್ರಿಯ ತಾರೆಗಳಾದ ಶಿವಂಗಿ ಜೋಶಿ ಮತ್ತು ಶಫಕ್ ನಾಜ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Bigg Boss OTT 3 Anil Kapoor Replaces Salman Khan As Host
Koo

ಬೆಂಗಳೂರು: ಹಿಂದೆ ʻಬಿಗ್ ಬಾಸ್ OTTʼ ಹೊಸ ಸೀಸನ್‌ ಮತ್ತೆ ಬರುತ್ತಿದೆ. ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದೆ. ಹಿಂದಿಯ ‘ಬಿಗ್​ ಬಾಸ್​ ಒಟಿಟಿ 3 (Bigg Boss OTT 3) ಕಾರ್ಯಕ್ರಮವನ್ನು ಈ ಬಾರಿ ಅನಿಲ್​ ಕಪೂರ್​ (Anil Kapoor) ನಡೆಸಿಕೊಡಲಿದ್ದಾರೆ. ಸಲ್ಮಾನ್‌ ಖಾನ್‌ ಈ ಬಾರಿ ಒಟಿಟಿ ಸೀಸನ್‌ನಿಂದ ಹಿಂದೆ ಸರಿದಿದ್ದಾರೆ. ಜಿಯೋ ಸಿನಿಮಾ ಹೊಸ ಪ್ರೋಮೊ ಹಂಚಿಕೊಂಡಿದೆ.

“ಬಿಗ್ ಬಾಸ್ OTT ಯ ಹೊಸ ಸೀಸನ್‌ಗೆ ಹೊಸ ಹೋಸ್ಟ್ʼʼಎಂದು ಪ್ರೋಮೊ ಹಂಚಿಕೊಂಡಿದೆ ಜಿಯೋ ಸಿನಿಮಾ. ಆರಂಭದಲ್ಲಿ ಒಟಿಟಿ ಸೀಸನನ್ನು ಕರಣ್ ಜೋಹರ್ ಹೋಸ್ಟ್ ಮಾಡಿದರು, ನಂತರ ಎರಡನೇ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಮಾಡಿದರು. ಮೇಗೆ ಒಟಿಟಿ ಪ್ರೀಮಿಯರ್‌ ಆಗಲಿದೆ ಎನ್ನಲಾಗಿತ್ತು. ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್​ ಕಪೂರ್​ ಎಂಬುದು ಖಚಿತವಾಗಿದೆ.

ಮೂರನೇ ಸೀಸನ್​ನಲ್ಲಿ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಕಂದರ್​’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.. ಅನಿಲ್ ಕಪೂರ್ ಅವರ ಹೋಸ್ಟಿಂಗ್ ಜತೆಗೆ ಈ ಬಾರಿ ಜನಪ್ರಿಯ ತಾರೆಗಳಾದ ಶಿವಂಗಿ ಜೋಶಿ ಮತ್ತು ಶಫಕ್ ನಾಜ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

ದಿವ್ಯಾ ಅಗರ್ವಾಲ್ ಬಿಗ್ ಬಾಸ್ OTT ಮೊದಲ ಸೀಸನ್ ಗೆದ್ದಿದ್ದರು. ಎರಡನೇ ಸೀಸನ್‌ನಲ್ಲಿ, ಎಲ್ವಿಶ್ ಯಾದವ್ ಇತಿಹಾಸವನ್ನು ಬರೆದರು. ದಲ್ಜಿತ್ ಕೌರ್, ಶೆಹಜಾದಾ ಧಾಮಿ, ಪ್ರತೀಕ್ಷಾ ಹೊನ್ಮುಖೆ ಮತ್ತು ಅರ್ಹಾನ್ ಬೆಹ್ಲ್ ಅವರಂತಹ ಸೆಲೆಬ್ರಿಟಿಗಳು ‘ಬಿಗ್ ಬಾಸ್ OTT 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ʻಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ʼ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್.

ಸಲ್ಮಾನ್ ಖಾನ್ ‘ಬಿಗ್ ಬಾಸ್ OTT 2’ ಅನ್ನು ಆಯೋಜಿಸಿದ್ದರು. ಇದರಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿ ಹೊರಹೊಮ್ಮಿದ್ದರು. ಅಭಿಷೇಕ್ ಮಲ್ಹಾನ್ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮನೀಶಾ ರಾಣಿ ಎರಡನೇ ರನ್ನರ್ ಅಪ್ ಆಗಿದ್ದರು. ಎಲ್ವಿಶ್ ಯಾದವ್ ಗೆಲುವಿನ ನಂತರ ಹಲವು ವಿವಾದಗಳನ್ನು ಎದುರಿಸಿದ್ದರು. ವಿಶೇಷವಾಗಿ ಹಾವಿನ ವಿಷದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು, ಜಾಮೀನಿನ ಬಳಿಕ ಎಲ್ವಿಶ್ ಯಾದವ್ ಅವರನ್ನು ಬಿಡುಗಡೆ ಮಾಡಿದ್ದರು.

Continue Reading

ಸ್ಯಾಂಡಲ್ ವುಡ್

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

Kannada Cinema In OTT: ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು. ಆಶಿಕಾ ರಂಗನಾಥ್ ನಟನೆಯ ‘O2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು.

VISTARANEWS.COM


on

Kannada Cinema In OTT bad manners 02 Kannada Movie
Koo

ಬೆಂಗಳೂರು: ಇತ್ತೀಚಿಗೆ ‘ಯುವ’, ‘ಬ್ಲಿಂಕ್’, ‘ಅವತಾರ ಪುರುಷ’-2, ‘ಶಾಖಾಹಾರಿ’, ‘ಜೂನಿ’ ರೀತಿಯ ಸಿನಿಮಾಗಳು ವೀಕ್ಷಕರನ್ನು (Kannada Cinema In OTT) ರಂಜಿಸಿವೆ. ಅದರಲ್ಲೂ ‘ಬ್ಲಿಂಕ್’ ಹಾಗೂ ‘ಶಾಖಾಹಾರಿ’ ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ, ಆಶಿಕಾ ರಂಗನಾಥ್ ನಟನೆಯ ‘O2’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿವೆ.

ʼಬ್ಯಾಡ್‌ ಮ್ಯಾನರ್ಸ್‌ʼ

ʼಬ್ಯಾಡ್‌ ಮ್ಯಾನರ್ಸ್‌ʼ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶನವಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಅಭಿಷೇಕ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಡಿಂಪಲ್‌ ಕ್ವೀನ್‌ ರಚಿತಾ ರಾಮ್‌. ಕಳೆದ ವರ್ಷ ನವೆಂಬರ್ 24ಕ್ಕೆ ತೆರೆಗಪ್ಪಳಿಸಿದ್ದ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಇದೀಗ ಸನ್‌ನೆಕ್ಸ್ಟ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದರು.ಯುಗಾದಿ ಹಬ್ಬಕ್ಕೆ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡಿತ್ತು.

ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು. ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ ಈ ಗೀತೆಯ ಮೇಕಿಂಗ್ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

‘O2’ ಸಿನಿಮಾ

ಆಶಿಕಾ ರಂಗನಾಥ್ ನಟನೆಯ ‘O2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ನೀವು ನೋಡಿ ಎಂದು ಸಲಹೆ ನೀಡಿದ್ದರು. ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ತಮ್ಮ ಬ್ಯಾನರ್‌ನಲ್ಲಿ ಆರಂಭಿಸಿದ್ದ ಕೊನೆಯ ಸಿನಿಮಾ ‘O2’. ಆಶಿಕಾ ರಂಗನಾಥ್‌ ಜೊತೆ ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಇನ್ನು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಸಿನಿಮಾ ‘O2’ ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿದೆ. ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ’02’ ಒಂದು ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾ.

Continue Reading

ಒಟಿಟಿ

Bujji and Bhairava: ಅಮೆಜಾನ್​ಗೆ ಬಂದ ‘ಕಲ್ಕಿ’ಯ ಬುಜ್ಜಿ-ಭೈರವ; ಹೆಚ್ಚಾಯ್ತು ‘ಕಲ್ಕಿ 2898 ಎಡಿ’ ನಿರೀಕ್ಷೆ!

Bujji and Bhairava: ‘ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಯಂತ್ರವಿದೆ. ಇನ್ನು ʻಬುಜ್ಜಿʼ ಯಂತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ.

VISTARANEWS.COM


on

Bujji and Bhairava Prabhas animated show raises
Koo

ಬೆಂಗಳೂರು: ಕೆಲವು ದಿನಗಳ ಹಿಂದೆ ಭೈರವ ಹಾಗೂ ಬುಜ್ಜಿಯ ಟೀಸರ್‌ವನ್ನು ‘ಕಲ್ಕಿ 2898 ಎಡಿ’ ತಂಡ ಬಿಡುಗಡೆಗೊಳಿಸಿತ್ತು. ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸಿರೀಸ್‌ವನ್ನು ಈಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. . ಪ್ರಭಾಸ್ ಮತ್ತು ನಾಗ್ ಅಶ್ವಿನ್ ಅವರ ‘ಬಿ&ಬಿ: ಬುಜ್ಜಿ ಮತ್ತು ಭೈರವ’ ಜೋಡಿಯ (Bujji and Bhairava) ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕಲ್ಕಿ 2898 ಎಡಿ’ (Kalki 2989 ad) ತಂಡ, ಸಿನಿಮಾದ ಅನಿಮೇಟೆಡ್ ಸರಣಿಯನ್ನು ಬಿಡುಗಡೆ ಮಾಡಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಅದರ ಅನಿಮೇಟೆಡ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಪ್ರೇಕ್ಷಕರು ಸಖತ್‌ ಖುಷ್‌ ಆಗಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಯಂತ್ರವಿದೆ. ಇನ್ನು ʻಬುಜ್ಜಿʼ ಯಂತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ, ‘ಬಿ&ಬಿ: ಬುಜ್ಜಿ ಮತ್ತು ಭೈರವ’ ಸಾಕಷ್ಟು ಆಕ್ಷನ್ ಮತ್ತು ಕಾಮಿಡಿ ಇದೆ. ಅನಿಮೇಟೆಡ್ ಸರಣಿಯ ಭೈರವನ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. 

ಇದನ್ನೂ ಓದಿ: Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರ ಸದ್ಯ ಸದ್ದು ಮಾಡುತ್ತಿದೆ. ಜೂನ್ 27ರಂದು ತೆರೆಗೆ ಬರಲು ಸಜ್ಜಾಗಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆದಿದೆ.

ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ

ಐದನೇ ಸೂಪರ್‌ ಸ್ಟಾರ್‌ ಬುಜ್ಜಿ ಬೇರೆ ಯಾರೂ ಅಲ್ಲ ನಾಯಕ ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ ಎಂದೇ ಕರೆಯಲ್ಪಡುವ ವಿಶೇಷ ವಾಹನ. ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಎನಿಸಿಕೊಂಡಿದೆ ಎಂದು ಚಿತ್ರ ತಂಡ ವಿವರಿಸಿದೆ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿತ್ತು.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜತೆಗೆ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

Continue Reading
Advertisement
AFG vs SA Semi Final
ಕ್ರೀಡೆ3 mins ago

AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

Development of Gaanagapura kshethra on Pandharpur, Thulajapur model says DC Fauzia Tarannum
ಕಲಬುರಗಿ8 mins ago

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

CM Siddaramaiah
ಪ್ರಮುಖ ಸುದ್ದಿ9 mins ago

CM Siddaramaiah: ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ; ಅಧಿಕಾರಿಗಳ ವಿಳಂಬ ಧೋರಣೆಗೆ ಸಿಎಂ ಗರಂ

Job Alert
ಉದ್ಯೋಗ11 mins ago

Job Alert: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಗಮನಿಸಿ-ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

Parliament Sessions
ದೇಶ21 mins ago

Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Pavithra Gowda lipstick case Notice to PSI
ಕ್ರೈಂ37 mins ago

Pavithra Gowda: ಪವಿತ್ರಾಗೆ ಲಿಪ್‌ಸ್ಟಿಕ್‌ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದ ಮಹಿಳಾ `PSI’ಗೆ ನೋಟಿಸ್‌!

PGCET 2024
ಕರ್ನಾಟಕ47 mins ago

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

Liquor Price karnataka
ಕರ್ನಾಟಕ49 mins ago

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Lok Sabha Speaker
ದೇಶ1 hour ago

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Tharun Sudhir and sonal monteiro love story support By Darshan
ಸ್ಯಾಂಡಲ್ ವುಡ್1 hour ago

Tharun Sudhir: ದರ್ಶನ್‌ ತಮಾಷೆಯಿಂದಲೇ ಹುಟ್ಟಿತು ತರುಣ್‌- ಸೋನಲ್‌ ಪ್ರೀತಿ? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌