ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ಅಮೂಲ್ಯ - Vistara News

ಲೈಫ್‌ಸ್ಟೈಲ್

ಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಮಕ್ಕಳನ್ನು ಪರಿಚಯಿಸಿದ ಸ್ಯಾಂಡಲ್‌ವುಡ್‌ ಕ್ವೀನ್‌ ಅಮೂಲ್ಯ

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳನ್ನು ಕೃಷ್ಣ ಜನ್ಮಾಷ್ಟಮಿ ದಿನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

VISTARANEWS.COM


on

Amulya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರು ತಮ್ಮಿಬ್ಬರು ಮಕ್ಕಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯ ತಿಳಿಸಿದ್ದಾರೆ. ಮಕ್ಕಳ ವಿಶೇಷ ಫೋಟೊಗ್ರಫಿಯನ್ನು ಮಾಡಿರುವ ಅಮೂಲ್ಯ- ಜಗದೀಶ್‌ ದಂಪತಿ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಮಾಡಿದ್ದಾರೆ. ಈ ಮಕ್ಕಳು ಶಿವರಾತ್ರಿ ದಿನ ಹುಟ್ಟಿದ್ದು, ಜನ್ಮಾಷ್ಟಮಿ ದಿನ ಎಲ್ಲರಿಗೂ ಪರಿಚಿತರಾಗಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್‌ ಅಮೂಲ್ಯ ಅವರು ಕಳೆದ ಮಾರ್ಚ್‌ ೨೧ರಂದು ಅಂದರೆ ಶಿವರಾತ್ರಿ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಪತಿ ಜಗದೀಶ್ ಆರ್‌. ಚಂದ್ರ ಅವರು ಆ ಸುದ್ದಿಯನ್ನು ಟ್ವೀಟ್‌ ಮೂಲಕ ಪ್ರಕಟಿಸಿದ್ದರು. ಇದೀಗ ಮಕ್ಕಳ ಚಿತ್ರವನ್ನು ಪ್ರಕಟಿಸಿ ಹರಸುವಂತೆ ಕೋರಿದ್ದಾರೆ.

ಮಕ್ಕಳ ಫೋಟೋಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಅಮೂಲ್ಯ ಅವರ ಮಕ್ಕಳ ಚಿತ್ರಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ ಕ್ವೀನ್‌ ಬೆಳೆದು ಬಂದ ಹಾದಿ

ಬಾಲನಟಿಯಾಗಿದ್ದ ಅಮೂಲ್ಯ ‘ಚೆಲುವಿನ ಚಿತ್ತಾರ’ ಸಿನಿಮಾದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದರು. ಸಣ್ಣ ವಯಸ್ಸಿನಲ್ಲಿಯೇ ಪ್ರಮುಖ ಕಲಾವಿದರೊಂದಿಗೆ ನಟಿಸಿ ಖ್ಯಾತಿ ಗಳಿಸಿಕೊಂಡಿದ್ದರು. ಗಣೇಶ್​, ಯಶ್​, ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಕಲಾವಿದರ ಜತೆ ಅಮೂಲ್ಯ ನಟಸಿದ್ದಾರೆ. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್​ ರೈ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು ಅಮೂಲ್ಯ. ‘ಮುಗುಳು ನಗೆ’ ಚಿತ್ರದಲ್ಲಿ ಕೊನೆಯ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಚಿತ್ರರಂಗದಲ್ಲಿ ​ಬೇಡಿಕೆ ಇರುವಾಗಲೇ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಉದ್ಯಮಿ ಜಗದೀಶ್​ ಚಂದ್ರ ಜೊತೆ 017ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಬಳಿಕ ಸಿನಿಮಾ ಕ್ಷೇತ್ರದಿಂದ ದೂರವುಳಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

ಒಡೆದ ಹಿಮ್ಮಡಿಗಳಿಗೆ (Home Remedy For Cracked Heels) ಮದ್ದರೆಯುವುದಕ್ಕೆ ಪರಂಪರಾಗತ ಔಷಧಿಯಾಗಿ ಬಳಕೆಯಲ್ಲಿರುವ ವಸ್ತುಗಳ ಪೈಕಿ ಕರ್ಪೂರ ಸಹ ಒಂದು. ಒಣಗಿ ಪುಡಿಯಾಗುವ ಚರ್ಮಕ್ಕೆ ಅಗತ್ಯವಾದ ತೇವವನ್ನು ಒದಗಿಸುವುದರ ಜೊತೆಗೆ, ಇದರ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಹಿಮ್ಮಡಿಯ ಆರೈಕೆಗೆ ಪೂರಕವಾಗುತ್ತವೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Home Remedy For Cracked Heels
Koo

ಒಡೆದ ಹಿಮ್ಮಡಿಗಳಿಗೆ (Home Remedy For Cracked Heels) ಕಾಡುವುದಕ್ಕೆ ಚಳಿಗಾಲದವೇ ಆಗಬೇಕೆಂದಿಲ್ಲ. ಶುಷ್ಕವಾದ ಬಿರುಬೇಸಿಗೆಯಲ್ಲೂ ಹಿಮ್ಮಡಿಗಳು ಬಿರಿದು, ಅತೀವ ನೋವು ಕೊಡಬಹುದು. ಕೆಲವೊಮ್ಮೆ ಎಷ್ಟೇ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಜೊತೆಗೆ, ಬೇಸಿಗೆಯ ದಿನಗಳಲ್ಲಿ ತ್ವಚೆ ಅಂಟಾದಂತಾಗಿ ಅತಿಯಾಗಿ ಕ್ರೀಮುಗಳನ್ನು ಲೇಪಿಸುವುದಕ್ಕೂ ಕಷ್ಟವಾಗುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ನೋವು ಹೆಚ್ಚಾಗಿ, ಬಿರುಕು ಅತಿಯಾಗಿ ರಕ್ತ ಸೋರಲೂ ಬಹುದು. ಒಡೆದ ಹಿಮ್ಮಡಿಗಳಿಗೆ ಮದ್ದರೆಯುವುದಕ್ಕೆ ಪರಂಪರಾಗತ ಔಷಧಿಯಾಗಿ ಬಳಕೆಯಲ್ಲಿರುವ ವಸ್ತುಗಳ ಪೈಕಿ ಕರ್ಪೂರ ಸಹ ಒಂದು. ಒಣಗಿ ಪುಡಿಯಾಗುವ ಚರ್ಮಕ್ಕೆ ಅಗತ್ಯವಾದ ತೇವವನ್ನು ಒದಗಿಸುವುದರ ಜೊತೆಗೆ, ಇದರ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ನಿರೋಧಕ ಗುಣಗಳು ಹಿಮ್ಮಡಿಯ ಆರೈಕೆಗೆ ಪೂರಕವಾಗುತ್ತವೆ. ಮಾತ್ರವಲ್ಲ, ಕರ್ಪೂರದಲ್ಲಿ ಉರಿಯೂತ ಶಾಮಕ ಗುಣಗಳೂ ಇದ್ದು, ಹಿಮ್ಮಡಿಯ ನೋವು, ಊತ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಡೆದ ಹಿಮ್ಮಡಿಗಳು (Home Remedy For Cracked Heels) ಯಾವುದೇ ಪಾದಗಳನ್ನೂ ಕಾಡಬಹುದು. ಆ ಭಾಗದ ಚರ್ಮ ದಪ್ಪವಾಗಿ, ಒಣಗಿ, ಒರಟಾಗಿ ಬಿರಿಯಲು, ಪುಡಿಯಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಆರಂಭದಲ್ಲೇ ಮದ್ದರೆದರೆ ತಹಬಂದಿಗೆ ಬಂದೀತು. ಸ್ವಲ್ಪ ಅಜಾಗ್ರತೆ ತೋರಿದರೂ, ಹೆಜ್ಜೆ ಇಡಲಾಗದಂತೆ ನೋವು ಕಾಡುತ್ತದೆ. ಎಳೆಯರಿಂದ ಹಿಡಿದು ವಯಸ್ಸಾದವರವರೆಗೆ, ಸ್ತ್ರೀ-ಪುರುಷರೆನ್ನದೆ ಯಾರೂ ಈ ತೊಂದರೆಗೆ ತುತ್ತಾಗಬಹುದು. ಒಂದು ಸಮೀಕ್ಷೆಯ ಪ್ರಕಾರ, ಶೇ. ೨೦ರಷ್ಟು ವಯಸ್ಕರಲ್ಲಿ ಈ ಸಮಸ್ಯೆ ಒಂದಿಲ್ಲೊಂದು ಕಾಲದಲ್ಲಿ ಬಾಧಿಸುತ್ತದೆ.

cracked heels

ಕಾರಣಗಳೇನು?

ಎಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ ಹವಾಮಾನ. ಬೇಸಿಗೆಯಲ್ಲಿ ಅತಿಯಾದ ಶುಷ್ಕತೆಗೆ ಈ ತೊಂದರೆ ಎದುರಾದರೆ, ಚಳಿಗಾಲದಲ್ಲಿ ಒಣಹವೆಗೆ ಈ ಅವಸ್ಥೆ ಉಂಟಾಗಬಹುದು. ಮಳೆಗಾಲದಲ್ಲಿ ಮಣ್ಣು ನೀರು ಸೋಕುವುದು ಸಹ ಇರುವ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದಲ್ಲದೆ, ದೀರ್ಘ ಕಾಲದವರೆಗೆ ನಿಂತು ಕೆಲಸ ಮಾಡುವುದು, ಧೂಳಿಗೆ ತೆರೆದುಕೊಳ್ಳುವುದು, ಸದಾಕಾಲ ಪಾದ ಮುಚ್ಚದಂಥ ಪಾದರಕ್ಷೆಗಳ ಬಳಕೆ, ಬೊಜ್ಜು, ಮಧುಮೇಹ, ಥೈರಾಯ್ಡ್‌ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆಗಳು ಹಿಮ್ಮಡಿಯ ಒಡಕಿಗೆ ಕಾರಣವಾಗುತ್ತವೆ.

Camphor

ಕರ್ಪೂರ ಹೇಗೆ ಸಹಕಾರಿ?

ಹಿಂದಿನ ಕಾಲದಿಂದಲೂ ಒಡೆದ ಹಿಮ್ಮಡಿಗಳನ್ನು ಗುಣ ಪಡಿಸುವುದಕ್ಕೆ ಕರ್ಪೂರ ಬಳಕೆಯಲ್ಲಿದೆ. ಮೇಲ್ಮೈಗೆ ಇದನ್ನು ಲೇಪಿಸುವುದರಿಂದ ಚರ್ಮ ಮೃದುವಾಗಿ, ತೇವಭರಿತವಾಗಿ, ಒಡೆದು ಬಿರಿದ ಹಿಮ್ಮಡಿ ಕೂಡಿಕೊಳ್ಳುತ್ತದೆ. ಜೊತೆಗೆ, ಬಿರಿದ ಹಿಮ್ಮಡಿಗಳಲ್ಲಿ ಕೆಲವೊಮ್ಮೆ ಸೂಕ್ಷ್ಮ ಗಾಯಗಳಾಗಬಹುದು. ನೆಲದ ಧೂಳು, ಸೂಕ್ಷ್ಮಾಣುಗಳು ಈ ಗಾಯಗಳಲ್ಲಿ ಸೇರಿ, ಯಾವ ಕ್ರೀಮುಗಳನ್ನು ಹಚ್ಚಿದರೂ ಸಮಸ್ಯೆ ಪರಿಹಾರವಾಗದೆ ಉಳಿಯುವ ಸಂದರ್ಭವೇ ಹೆಚ್ಚಾಗುತ್ತದೆ. ಇಂಧ ಸಂದರ್ಭದಲ್ಲಿ ಕರ್ಪೂರದ ಚಿಕಿತ್ಸೆ ಪರಿಣಾಮಕಾರಿ. ಇದರಲ್ಲಿರುವ ಬ್ಯಾಕ್ಟೀರಿಯ ಮತ್ತು ಫಂಗಸ್‌ ವಿರೋಧಿ ಗುಣಗಳು, ಗಾಯದಲ್ಲಿರುವ ಸೋಂಕನ್ನು ಕಡಿಮೆ ಮಾಡುತ್ತವೆ. ಕರ್ಪೂರ ಪ್ರಬಲವಾದ ಉತ್ಕರ್ಷಣ ನಿರೋಧಕ. ಹಾಗಾಗಿಯೇ ಹಲವಾರು ವೇಪರ್‌ ರಬ್‌ಗಳು, ನೋವಿನ ಮುಲಾಮುಗಳಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದು ಊತವನ್ನು ಕಡಿಮೆ ಮಾಡಿ, ನೋವನ್ನೂ ಶಮನ ಮಾಡುತ್ತದೆ. ಇದನ್ನು ಒಡೆದ ಹಿಮ್ಮಡಿಗಳಿಗೆ ಹಚ್ಚುವುದರಿಂದ ಅಲ್ಲಿನ ಊತ ಮತ್ತು ನೋವು ಶಮನವಾಗುತ್ತದೆ. ಜೊತೆಗೆ ಹೊಸ ಕೋಶಗಳ ಉತ್ಪತ್ತಿಯನ್ನು ಇದು ಪ್ರೋತ್ಸಾಹಿಸುತ್ತದೆ. ಹಾಗಾಗಿ ತುಂಡಾದ ಚರ್ಮದಲ್ಲಿನ ಕೋಶಗಳು ನಾಶವಾಗಿ, ಹೊಸ ಚರ್ಮ ಮೂಡಿ, ಪಾದ ನಯವಾಗುತ್ತದೆ.

ಇದನ್ನೂ ಓದಿ: Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

ಉಪಯೋಗಿಸುವುದು ಹೇಗೆ?

ಸಾಮಾನ್ಯವಾಗಿ ಕರ್ಪೂರದ ಎಣ್ಣೆ ಇಂಥ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಆದರೆ ಶುದ್ಧ ಎಣ್ಣೆಯನ್ನು ನೇರವಾಗಿ ಲೇಪಿಸಿದರೆ, ಅದರ ತೀವ್ರತೆಯಿಂದ ಚರ್ಮಕ್ಕೆ ಕಿರಿಕಿರಿ ಆಗಬಹುದು. ಹಾಗಾಗಿ ನಾಲ್ಕಾರು ಹನಿ ಕರ್ಪೂರದ ತೈಲವನ್ನು ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಮಿಶ್ರ ಮಾಡಿ, ಬೇಕಾದ ಭಾಗಕ್ಕೆ ಲೇಪಿಸುವುದು ಒಂದು ಕ್ರಮ. ಇದಲ್ಲದೆ, ಉಗುರು ಬಿಸಿಯಾದ ನೀರಿಗೆ ನಾಲ್ಕೆಂಟು ಹನಿ ಕರ್ಪೂರದ ತೈಲವನ್ನು ಬೆರೆಸಿ. ಆ ನೀರಿನಲ್ಲಿ 20 ನಿಮಿಷಗಳ ಕಾಲ ಪಾದವನ್ನು ನೆನೆಸುವುದು ಇನ್ನೊಂದು ಕ್ರಮ. ಇದನ್ನು ವಿವರವಾಗಿ ಹೇಳಬೇಕೆಂದರೆ, ಹಿಮ್ಮಡಿಗಳಿಗೆ ಕರ್ಪೂರದ ತೈಲವನ್ನು ಲೇಪಿಸಿದ 30 ನಿಮಿಷಗಳ ನಂತರ, ಉಗುರು ಬಿಸಿಯಾದ ಸೋಪಿನ ನೀರಿನಲ್ಲಿ 10 ನಿಮಿಷಗಳವರೆಗೆ ಪಾದಗಳನ್ನು ನೆನೆಸಿಡಿ. ನಂತರ ಆ ಬಿರುಕುಗಳನ್ನು ನಯವಾಗಿ ಉಜ್ಜಿ ಸ್ವಚ್ಛಗೊಳಿಸಿ. ಇದರಿಂದ ಬಿರುಕುಗಳು ಶುಚಿಯಾಗಿ, ಕರ್ಪೂರದೆಣ್ಣೆ ಆ ಬಿರುಕುಗಳ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರ ನಂತರ, ಪಾದಗಳನ್ನು ತೊಳೆದು ಶುಚಿ ಮಾಡಿ. ಸ್ವಚ್ಛವಾದ ಬಟ್ಟೆಯಿಂದ ಒರೆಸಿ, ಒಣಗಿಸಿ. ಈಗ ಕೊಬ್ಬರಿ ಎಣ್ಣೆಯ ಜೊತೆಗೆ ಸ್ವಲ್ಪವೇ ಕರ್ಪೂರದೆಣ್ಣೆ ಬೆರೆಸಿ ಪಾದಗಳಿಗೆ ನಯವಾಗಿ ಉಜ್ಜಿ. ಇದನ್ನು ರಾತ್ರಿ ಮಲಗುವ ಮುನ್ನ ಮಾಡುವುದು ಒಳ್ಳೆಯದು. ನಿಯಮಿತವಾಗಿ ಈ ಚಿಕಿತ್ಸೆಯನ್ನು ಮಾಡಿದಲ್ಲಿ, ಒಡೆದ ಹಿಮ್ಮಡಿಗಳಿಂದ ಮುಕ್ತರಾಗಬಹುದು.

Continue Reading

ಫ್ಯಾಷನ್

Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿಯ ಇಸ್ರೋ ರೂಪಾ ವ್ಯಾಖ್ಯಾನ ಹೀಗಿದೆ!

ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪಾ ಮಳಲಿ ಯಾರಿಗೆ ಗೊತ್ತಿಲ್ಲ! ಅವರ ಸಾಧನೆ ಎಲ್ಲರಿಗೂ ಗೊತ್ತಿದೆ. ಆದರೆ, ಅವರ ಸಿಂಪಲ್‌ ಕಾಟನ್‌ ಸೀರೆ ಫ್ಯಾಷನ್‌ (Cotton Saree Fashion) ಸ್ಟೇಟ್‌ಮೆಂಟ್‌ ಬಗ್ಗೆ ಗೊತ್ತೇ! ಈ ಕುರಿತಂತೆ ಖುದ್ದು ಅವರೇ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Cotton Saree Fashion Roopa Malali, Chandrayaan - 3 ISRO Deputy Project Director
ಚಿತ್ರಗಳು : ರೂಪ ಮಳಲಿ, ಚಂದ್ರಯಾನ - 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪ ಮಳಲಿ ಯಾರಿಗೆ ಗೊತ್ತಿಲ್ಲ! ಯಶಸ್ವಿ ಚಂದ್ರಯಾನ ಮೂರರ ನಂತರ ಸಾಕಷ್ಟು ಗುರುತಿಸಿಕೊಂಡವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ನಮ್ಮ ಕನ್ನಡತಿ. ಅವರ ಸಾಧನೆ ಬಗ್ಗೆ ಅವರ ಜೀವನಗಾಥೆ ಕುರಿತಂತೆ ಸಾಕಷ್ಟು ಕಡೆ ಸುದ್ದಿಯಾಗಿದೆ. ಅವರ ಕಾರ್ಯವೈಖರಿ ಕುರಿತಂತೆಯೂ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗಿರುವುದು, ನಾನಾ ಪ್ರಶಸ್ತಿ ಪುರಸ್ಕಾರ ದೊರೆತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮಧ್ಯೆ ಉದ್ಯಾನನಗರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ತಮ್ಮ ಸಿಂಪಲ್‌ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಬಗ್ಗೆ ಸಂದರ್ಶನ ನೀಡಿದರು. ಈ ಕುರಿತ (Cotton Saree Fashion) ಸಂಕ್ಷಿಪ್ತ ಸಾರಂಶ ಇಲ್ಲಿದೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಸದಾ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಝಿಯಾಗಿರುವ ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಜಾಗವಿದೆಯೇ!

ರೂಪಾ ಮಳಲಿ : ಖಂಡಿತಾ ಇಲ್ಲ! ನಾನೆಂದು ಫ್ಯಾಷನ್‌ ಹಾಗೂ ಸ್ಟೈಲ್‌ ಎಂದೆಲ್ಲಾ ತಲೆಕೆಡಿಸಿಕೊಂಡವಳಲ್ಲ! ನನ್ನ ಗುರಿ ನನ್ನ ಸಾಧನೆ ಬಗ್ಗೆ ಸದಾ ಯೋಚಿಸುವವಳು. ಇನ್ನು ಇವೆಲ್ಲದರ ಮಧ್ಯೆ ನನ್ನ ಜೀವನಶೈಲಿಗೆ ತಕ್ಕಂತೆ ಅಗತ್ಯವಿರುವುದನ್ನು ಫಾಲೋ ಮಾಡುತ್ತೇನಷ್ಟೇ!

ವಿಸ್ತಾರ ನ್ಯೂಸ್‌: ನಿಮಗೆ ಕಾಟನ್ ಸೀರೆಗಳೆಂದರೇ ಇಷ್ಟವಂತೆ ?

ರೂಪಾ ಮಳಲಿ : ಹೌದು. ನನಗೆ ಕಾಟನ್‌ ಸೀರೆಗಳೆಂದರೇ ತುಂಬಾ ಇಷ್ಟ. ನಾನು ಹೆಚ್ಚಾಗಿ ಕಾಟನ್ ಸೀರೆಗಳನ್ನೇ ಉಡುತ್ತೇನೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ಹಾಗಾದಲ್ಲಿ, ನೀವು ಸೀರೆ ಪ್ರೇಮಿಯಾ ?

ರೂಪಾ ಮಳಲಿ: ಪ್ರತಿ ಮಹಿಳೆಗೂ ಸೀರೆ ಪ್ರೇಮ ಇದ್ದೇ ಇರುತ್ತದೆ. ಅದರಲ್ಲೂ ನನಗೆ ಸಿಂಪಲ್‌ ಕಾಟನ್‌ ಸೀರೆಗಳೆಂದರೇ ಮೊದಲಿನಿಂದಲೂ ಪ್ರೀತಿ. ಇದಕ್ಕೆ ಕಾರಣವೂ ಇದೆ. ಅವು ಲೈಟ್‌ವೈಟ್‌ ಆಗಿರುತ್ತವೆ. ನೋಡಲು ಆಕರ್ಷಕವಾಗಿ ಕಾಣುತ್ತವೆ. ಇನ್ನು ಉಟ್ಟಾಗ ಎಲಿಗೆಂಟ್‌ ಲುಕ್‌ ನೀಡುತ್ತವೆ.

ವಿಸ್ತಾರ ನ್ಯೂಸ್‌: ನಿಮ್ಮ ಬಳಿ ಸೀರೆ ಕಲೆಕ್ಷನ್‌ ಇದೆಯಾ?

ರೂಪಾ ಮಳಲಿ : ಒಂದಿಷ್ಟು ಇದೆ. ಹಾಗೆಂದು ರಾಶಿ ರಾಶಿ ಸೀರೆಗಳ ಕಲೆಕ್ಷನ್‌ ಇಲ್ಲ! ನನಗೆ ಅಗತ್ಯವಿರುವಷ್ಟು ಸೀರೆಗಳಿವೆ. ರೇಷ್ಮೆ ಸೀರೆಗಳಿಗಿಂತ ಹೆಚ್ಚಾಗಿ ಕಾಟನ್‌ ಸೀರೆಗಳು ನನ್ನ ಬಳಿ ಇವೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ನಿಮಗೆ ಡ್ರೆಸ್‌ಕೋಡ್‌ ಇದೆಯಾ? ನಿಮ್ಮ ವರ್ಕಿಂಗ್‌ ನೇಚರ್‌ನಲ್ಲಿ ನೀವು ಪ್ರಿಫರ್‌ ಮಾಡುವ ಉಡುಪು ಯಾವುದು?

ರೂಪಾ ಮಳಲಿ : ಡ್ರೆಸ್‌ಕೋಡ್‌ ಇಲ್ಲ! ನಮ್ಮ ವರ್ಕ್‌ ನೇಚರ್‌ನಲ್ಲಿ ಇದೇ ಉಡುಪು ಧರಿಸಬೇಕೆಂಬ ನಿಯಮವೇನೂ ಇಲ್ಲ! ಆಯಾ ವ್ಯಕ್ತಿಗೆ ಅನುಗುಣವಾಗಿ ಅವರವರು ತಂತಮ್ಮ ಡ್ರೆಸ್‌ಕೋಡ್‌ ನಿರ್ಧರಿಸುತ್ತಾರೆ. ಹಾಗೆಯೇ ನಾನು ಕೂಡ. ಸಿಂಪಲ್‌, ಎಲಿಗೆಂಟ್‌ ಹಾಗೂ ಡಿಸೆಂಟ್‌ ಉಡುಪನ್ನು ಧರಿಸಲು ಇಷ್ಟಪಡುತ್ತೇನೆ.

ವಿಸ್ತಾರ ನ್ಯೂಸ್‌: ನಿಮ್ಮ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್‌ ಬಗ್ಗೆ ಹೇಳಿ ?

ರೂಪ ಮಳಲಿ : ನನ್ನದು ಯೂನಿಕ್‌ ಎನ್ನುವುದಕ್ಕಿಂತ ಸದಾ ಸಿಂಪಲ್‌ ಕಾಟನ್‌ ಸೀರೆ, ಅದಕ್ಕೊಂದು ಪರ್ಲ್‌ ನೆಕ್‌ಪೀಸ್‌, ಸ್ಟಡ್ಸ್‌ ಧರಿಸುತ್ತೇನೆ. ಇದು ನನ್ನ ಆಲ್‌ ಟೈಮ್‌ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್ಸ್.‌

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಉದ್ಯೋಗಸ್ಥ ಮಹಿಳೆಯರಿಗೆ ನೀವು ನೀಡುವ ಟಿಪ್ಸ್‌ ಏನು ?

ರೂಪಾ ಮಳಲಿ : ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಿಮ್ಮ ಲೈಫ್‌ಸ್ಟೈಲ್‌ ರೂಪಿಸಿಕೊಳ್ಳಿ. ಗುರಿಯೊಂದಿಗೆ ನಿಮ್ಮ ಚಾಯ್ಸ್ಗೂ ಅವಕಾಶ ನೀಡಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಇನ್ನು, ಫ್ಯಾಷನ್‌ ವಿಷಯಕ್ಕೆ ಬಂದಲ್ಲಿ, ನಿಮ್ಮ ಮನಸ್ಸಿಗೆ ಮುದ ನೀಡುವ ಉಡುಗೆಗಳನ್ನು ಧರಿಸಿ. ಇಡೀ ದಿನ ಉಲ್ಲಾಸಮಯವಾಗಿರುತ್ತದೆ.

(ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

Continue Reading

ಆರೋಗ್ಯ

Vampire Facial: ಹೆಣ್ಣುಮಕ್ಕಳೇ ಎಚ್ಚರ; ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ!

Vampire Facial: ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಆದರೆ, ಇದು ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Vampire Facial
Koo

ನವದೆಹಲಿ: ಹೆಣ್ಣುಮಕ್ಕಳಿಗೆ ಸೌಂದರ್ಯದ (Beauty) ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಹೆಚ್ಚು ವಯಸ್ಸಾದರೂ 18ರ ಯುವತಿಯಂತೆ ಕಾಣಲು ಹಲವು ಕಸರತ್ತು ಮಾಡುತ್ತಾರೆ. ಇನ್ನು ನಗರ ಹಾಗೂ ಮಹಾನಗರಗಳಲ್ಲಂತೂ ಬ್ಯೂಟಿ ಪಾರ್ಲರ್‌ಗಳಿಗೆ ನಿಯಮಿತವಾಗಿ ತೆರಳಿ ಮೇಕಪ್‌, ಫೇಶಿಯಲ್‌ (Facial) ಮಾಡಿಸಿಕೊಳ್ಳುತ್ತಾರೆ. ಆದರೆ, ಅಮೆರಿಕದಲ್ಲಿ ಸ್ಪಾಗಳಲ್ಲಿ ಫೇಶಿಯಲ್‌ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು (HIV) ತಗುಲಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವ್ಯಾಂಪೈರ್‌ ಫೇಶಿಯಲ್‌ (Vampire Facial) ಮಾಡಿಸಿಕೊಂಡ ಕಾರಣ ಇವರಿಗೆ ಎಚ್‌ಐವಿ ತಗುಲಿದೆ ಎಂಬ ಮಾಹಿತಿಯು ಅಧ್ಯಯನ ವರದಿಯಿಂದ ಲಭ್ಯವಾಗಿದೆ.

ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್‌ ಇಂಜೆಕ್ಷನ್‌ ಪ್ರೊಸೀಜರ್‌ ಮೂಲಕ ನಡೆಸುವ ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್‌ ಫೇಶಿಯಲ್‌ಅನ್ನು ಕಡಿಮೆ ಬೆಲೆಗೆ ಮಾಡುವುದರಿಂದ ಹೆಚ್ಚಿನ ಮಹಿಳೆಯರು, ಅದರಲ್ಲೂ 40 ವರ್ಷ ದಾಟಿದವರು ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಈಗ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ಏನಿದು ವ್ಯಾಂಪೈರ್‌ ಫೇಶಿಯಲ್?‌

ವ್ಯಾಂಪೈರ್‌ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್‌ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್‌ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್‌ ರಿಚ್‌ ಫೈಬ್ರಿನ್‌ (PRF) ಎಂದು ಕೂಡ ಕರೆಯಲಾಗುತ್ತದೆ.

ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಆಗಿದೆ. ಇದನ್ನು ಭಾರತದ ಪ್ರಮುಖ ನಗರಗಳು ಸೇರಿ ಜಗತ್ತಿನಾದ್ಯಂತ ಸ್ಪಾಗಳಲ್ಲಿ ಮಾಡುತ್ತಾರೆ. ಆದರೆ, ಈ ಫೇಶಿಯಲ್‌ ಈಗ ಮಹಿಳೆಯರ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹೆಣ್ಣುಮಕ್ಕಳ ಕೈಗಳಿಂದ ರಕ್ತವನ್ನು ತೆಗೆದು, ಅದರಿಂದ ಪ್ಲೇಟ್‌ಲೆಟ್‌ಗಳನ್ನು ವಿಗಂಡಣೆ ಮಾಡಿ, ಆ ರಕ್ತವನ್ನು ಸಣ್ಣ ಸೂಜಿಯ ಮೂಲಕ ಮುಖಕ್ಕೆ ಅಳವಡಿಸುತ್ತಾರೆ. ಇದರಿಂದ ಚರ್ಮವು ಹೊಳೆಯುತ್ತದೆ. ಸುಕ್ಕುಗಳು ಮಾಯವಾಗುತ್ತಿವೆ. ಇದು ಸುಲಭ ಹಾಗೂ ಅಷ್ಟೇನೂ ಹೆಚ್ಚಿನ ಹಣ ಖರ್ಚಾಗದ ಕಾರಣ ಜಾಸ್ತಿ ಮಹಿಳೆಯರು ಈ ಫೇಶಿಯಲ್‌ ಮೊರೆಹೋಗುತ್ತಿದ್ದಾರೆ ಎನ್ನಲಾಗಿದೆ. ಇಂತಹ ಫೇಶಿಯಲ್‌ ಮಾಡಿಸಿಕೊಳ್ಳುವ ಮೊದಲು ಹೆಣ್ಣುಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!

Continue Reading

ಆರೋಗ್ಯ

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆ. ದುರ್ಬಲ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಇದರಿಂದ ಸಿಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Ayushman Bharat Yojana
Koo

ಲಕ್ಷಾಂತರ ಭಾರತೀಯರಿಗೆ (indian) ಆರೋಗ್ಯ (health) ಸೇವೆಯನ್ನು (service) ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಪ್ರಯೋಜನ ಪಡೆಯುವುದು ಇನ್ನೂ ಹಲವಾರು ಮಂದಿಗೆ ಸವಾಲಾಗಿ ಪರಿಣಮಿಸಿದೆ. 2018ರಲ್ಲಿ ಜಾರಿಯಾಗಿರುವ ಆಯುಷ್ಮಾನ್ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪುವುದು ಸಾಧ್ಯವಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸವಾಲಾಗಿದೆ. ಇದನ್ನು ಗುರುತಿಸಿ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಆಯುಷ್ಮಾನ್ ಭಾರತ್ ಯೋಜನೆಯು ಏನನ್ನು ಒಳಗೊಳ್ಳುತ್ತದೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಮಾಹಿತಿ ಇಲ್ಲಿದೆ.


ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ದುರಂತದ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಮೊತ್ತದವರೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನೋಂದಣಿ ಹೇಗೆ?

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಲು ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.

ಅರ್ಹತೆಯನ್ನು ಪರಿಶೀಲಿಸಿ

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಣಿ ನಡೆಸುವ ಮೊದಲು ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಅರ್ಹತೆ ನಿಮಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಇದು ಪ್ರಾಥಮಿಕವಾಗಿ ಸಾಮಾಜಿಕ ಆರ್ಥಿಕ ಅಂಶಗಳು ಮತ್ತು ಮನೆಯ ಆದಾಯವನ್ನು ಆಧರಿಸಿರುತ್ತದೆ.


ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಪ್ರದೇಶದಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರಗಳನ್ನು ಪತ್ತೆ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಲ್ಲಿಗೆ ಭೇಟಿ ಮಾಡಿ.

ಅಗತ್ಯ ದಾಖಲೆಗಳನ್ನು ಒದಗಿಸಿ

ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಅರ್ಹತೆಯನ್ನು ಸ್ಥಾಪಿಸಲು ನೀವು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಆದಾಯ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಸಂಪೂರ್ಣ ನೋಂದಣಿ ಅರ್ಜಿ

ಒದಗಿಸಿದ ಮಾಹಿತಿಯ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಸೇವಾ ಕೇಂದ್ರದಲ್ಲಿ ಒದಗಿಸಲಾದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರು, ಆದಾಯ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ವಿವರಗಳನ್ನು ಒದಗಿಸಿ.

ಪರಿಶೀಲನೆ ಪ್ರಕ್ರಿಯೆ

ನೋಂದಣಿ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ ಅಧಿಕಾರಿಗಳು ಆಯುಷ್ಮಾನ್ ಭಾರತ್ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಒದಗಿಸಲಾದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡುವುದನ್ನು ಒಳಗೊಂಡಿರುತ್ತದೆ.

ಆಯುಷ್ಮಾನ್ ಕಾರ್ಡ್ ಸ್ವೀಕರಿಸಿ

ಅರ್ಹತೆಯ ಯಶಸ್ವಿ ಪರಿಶೀಲನೆಯ ಅನಂತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಯುಷ್ಮಾನ್ ಕಾರ್ಡ್ ಅನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್ ಯೋಜನೆಯಲ್ಲಿ ನಿಮ್ಮ ದಾಖಲಾತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ.

doctor

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಆಯುಷ್ಮಾನ್ ಕಾರ್ಡ್‌ನೊಂದಿಗೆ ನೀವು ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವುದೇ ಎಂಪನೆಲ್ ಮಾಡಲಾದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದು. ನಗದು ರಹಿತ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಕಾರ್ಡ್ ಅನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ನೀಡಿ.

ಪ್ರಯೋಜನಗಳು ಏನೇನು?

ಆಯುಷ್ಮಾನ್ ಕಾರ್ಡ್‌ ಹೊಂದಿರುವುದರಿಂದ ಪ್ರಮುಖ ಪ್ರಯೋಜನಗಳು ಇಂತಿವೆ.

ದುರ್ಬಲ ಕುಟುಂಬಗಳಿಗೆ ರಕ್ಷಣೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚಿನ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ನೀಡುತ್ತದೆ.

ನಗದು ರಹಿತ ಚಿಕಿತ್ಸೆ

ಯೋಜನೆಯ ಫಲಾನುಭವಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

ವ್ಯಾಪಕ ಆಸ್ಪತ್ರೆ ನೆಟ್‌ವರ್ಕ್

ಅಯುಷ್ಮಾನ್ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿತ ಆಸ್ಪತ್ರೆಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದು ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಹಕರಿಸುತ್ತದೆ.

Ayushman Card

ಆಯುಷ್ಮಾನ್ ಕಾರ್ಡಗೆ ಅಗತ್ಯವಿರುವ ದಾಖಲೆಗಳು

1. ನಿವಾಸದ ಗುರುತು ಪತ್ರ
2. ವಯಸ್ಸು ಮತ್ತು ಗುರುತಿನ ಪುರಾವೆ- ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
3. ಜಾತಿ ಪ್ರಮಾಣಪತ್ರ
4. ಸಂಪರ್ಕ ಮಾಹಿತಿ- ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ
5. ಆದಾಯ ಪ್ರಮಾಣ ಪತ್ರ
6. ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಸೂಚಿಸುವ ದಾಖಲೆಗಳು

Continue Reading
Advertisement
Swiggy fined
ಬೆಂಗಳೂರು1 hour ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ1 hour ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

IPL 2024
ಪ್ರಮುಖ ಸುದ್ದಿ2 hours ago

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

CBI Raid
ದೇಶ2 hours ago

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

Hassan Pen Drive Case
ಪ್ರಮುಖ ಸುದ್ದಿ2 hours ago

Hassan Pen Drive Case: ಎಸ್‌ಐಟಿ ತನಿಖೆ ಆದೇಶಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ ಪ್ರಜ್ವಲ್ ರೇವಣ್ಣ!

KL Rahul
ಕ್ರಿಕೆಟ್2 hours ago

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

Modi in Karnataka
ಪ್ರಮುಖ ಸುದ್ದಿ3 hours ago

Modi in Karnataka: ಬೆಳಗಾವಿಗೆ ಆಗಮಿಸಿದ ಪ್ರಧಾನಿ‌ ಮೋದಿ; ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ವಾಸ್ತವ್ಯ

Hasan pen drive case
ಹಾಸನ3 hours ago

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Air Force Chopper
ದೇಶ3 hours ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20248 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ13 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ20 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ3 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌