Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ! - Vistara News

ಲೈಫ್‌ಸ್ಟೈಲ್

Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

ಕಳ್ಳತನ ಮಾಡಿದ. ಮಾದಕ ದ್ರವ್ಯ ವ್ಯಸನಿಯಾದ. ಜೈಲಿನಲ್ಲಿದ್ದ. ಆತ್ಮಹತ್ಯೆಗೆ ಪ್ರಯತ್ನಿಸಿದ. ಇದ್ದಕ್ಕಿದ್ದಂತೆ ಬದಲಾದ. ಬದುಕಿನ ಬದಲಾವಣೆ ಯಾವ ಹಂತದಲ್ಲೂ ಸಾಧ್ಯ ಎಂಬುದಕ್ಕೆ ಇವನು ಉದಾಹರಣೆ.

VISTARANEWS.COM


on

misheal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈತನ ಕಥೆ ಯಾವ ಸಿನೆಮಾದ ಕಥೆಗೂ ಕಡಿಮೆ ಇಲ್ಲ. ಇದು ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಕಳವು ಮತ್ತಿತರ ಅಪರಾಧಗಳನ್ನು ಮಾಡಿ, ಡ್ರಗ್‌ ವ್ಯಸನಿಯಾಗಿ, ಜೈಲಿಗೆ ಹೋಗಿ ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿ, ಕೊನೆಗೂ ಇವೆಲ್ಲವುಗಳಿಂದ ಹೊರಬಂದು ಹೊಸ ಮನುಷ್ಯನಾಗಿ ಬದಲಾವಣೆ ಹೊಂದಿ, ತನ್ನಂತೆ ಕಷ್ಟಡುತ್ತಿರುವವರ ಕಣ್ತೆರೆಸುವ ಕೆಲಸ ಮಾಡಿ ಪೊಲೀಸ್‌ ಪ್ರಶಸ್ತಿಯನ್ನೂ ತನ್ನದಾಗಿಸಿರುವ ಮೈಕೆಲ್‌ ಮೇಸೀ ಎಂಬಾತನ ಯಶೋಗಾಥೆ. ತಮ್ಮನ್ನು ತಾವು ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಿದೆ ಎಂದು ತೋರಿಸಿಕೊಟ್ಟು ಹಲವರಿಗೆ ಸ್ಪೂರ್ತಿಯಾದಾತನ Life story ಇದು!

ತೀರಾ ಸಣ್ಣ ವಯಸ್ಸಿನಲ್ಲೇ ಸ್ಯಾಂಡ್‌ವಿಚ್‌ ಮತ್ತಿತರ ತಿಂಡಿ ಕದಿಯುವುದರಿಂದ ಆರಂಭವಾದ ಈತನ ಅಪರಾಧ ಜಗತ್ತು, ಹದಿಹರೆಯದಲ್ಲೇ ದರೋಡೆಯವರೆಗೂ ವಿಸ್ತರಿಸಿತ್ತು. ತನ್ನ ಪಟಾಲಾಂ ಕಟ್ಟಿಕೊಂಡು ಸಣ್ಣ ವಯಸ್ಸಿನಲ್ಲಿ ಕದಿಯುವುದು, ದೋಚುವುದು ಮಾಡುತ್ತಾ, ಕೊನೆಗೆ ಕೇವಲ ಹನ್ನೆರಡರ ಸಣ್ಣ ವಯಸ್ಸಿಗೆ ಡ್ರಗ್‌ ಅಡಿಕ್ಟ್‌ ಆಗಿ, ಹದಿಹರೆಯದಲ್ಲೇ ಜೈಲು ಪಾಲಾದ ಮೈಕೆಲ್‌, ಇದೀಗ ಸಂಪೂರ್ಣ ಬದಲಾಗಿ ಇಬ್ಬರು ಮುದ್ದಾದ ಮಕ್ಕಳ ತಂದೆ! ಸುಖೀ ಸಂಸಾರ. ಈತನ ಪತ್ನಿ ಸಾಶಾ ರೈಟ್‌ ಬ್ಯೂಟಿ ಥೆರಪಿಸ್ಟ್‌. ಸದ್ಯ ೪೦ರ ಹರೆಯದ ಈ ಮೈಕೆಲ್‌ ೨೦೧೮ರಿಂದ ಸಿಐಪಿ (ಚೇಂಜ್‌ ಈಸ್‌ ಪಾಸಿಬಲ್)‌ ಎಂಬ ಕಮ್ಯೂನಿಟಿ ಸಪೋರ್ಟ್‌ ಗುಂಪೊಂದನ್ನು ಕಟ್ಟಿಕೊಂಡು, ತನ್ನಂತೆ ಸಣ್ಣ ವಯಸ್ಸಿನಲ್ಲಿ ತೊಂದರೆ ಎದುರಿಸುತ್ತಿರುವ ಮಂದಿಗೆ ಹೆಗಲಾಗಿದ್ದಾರೆ. ಅವರ ಪಾಲಿಗೆ ಭರವಸೆಯ ಬೆಳಕು ನೀಡಲು ಪ್ರಯತ್ನಿಸುತ್ತಿದ್ದಾರೆ!

micheal

ಇಂಗ್ಲೆಂಡಿನ ಕ್ಲೇಹೈಡನ್‌ ಎಂಬ ಹಳ್ಳಿಯ ಆತನ ಈ ಹಾದಿಯ ಪಯಣದ ಬಗೆಗೆ ಆತನ ಮಾತಿನಲ್ಲೇ ಕೇಳಬೇಕು. “ಸಣ್ಣ ವಯಸ್ಸಿನಲ್ಲಿ ನಾನು ಬಹಳ ಸಿಟ್ಟಿನ, ಹೀಗೆ ಎಂದು ಹೇಳಲಾಗದ ವಿಚಿತ್ರ ಸ್ವಭಾವದ ಹುಡುಗನಾಗಿದ್ದೆ. ನಾನು ಶಾಲೆಯಲ್ಲೂ ಬಹಳ ತೊಂದರೆಗಳನ್ನು ಮಾಡಿದ್ದೇನೆ. ಹೀಗಾಗಿ ಅಲ್ಲಿ ನನ್ನನ್ನು ಎಲ್ಲರೂ ತಮ್ಮಿಂದ ದೂರವಿರಿಸಿದರು. ಹಿರಿಯರೂ ಕೂಡಾ ನನ್ನನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಸೂಪರ್‌ ಮಾರ್ಕೆಟಿನಲ್ಲಿ ಸ್ಯಾಂಡ್‌ವಿಚ್‌ ಕದಿಯುವುದರಿಂದ ಶುರುವಾದ ನನ್ನ ಕಳ್ಳತನದ ಕೆಲಸಗಳು ಮುಂದೆ ಹೆಚ್ಚಾಗುತ್ತಾ ಹೋಯಿತು. ಅಂಗಡಿಗಳಿಂದ, ದೊಡ್ಡ ದೊಡ್ಡ ಬಂಗಲೆ/ಕಾರುಗಳಿದ್ದ ಮನೆಯ ಕಾಂಪೌಂಡಿನಿಂದ ಏನಾದರೊಂದು ಕದಿಯುತ್ತಿದ್ದೆ. ಪ್ರತಿಸಲವೂ ೩೦೦ರಿಂದ ೬೦೦ ಪೌಂಡ್‌ ಮೌಲ್ಯದ ವಸ್ತುಗಳು ನನ್ನ ಪಾಲಾಗುತ್ತಿದ್ದವು. ಹೀಗೆ ಕದಿಯುತ್ತಾ ಕದಿಯುತ್ತಾ ಬೇರೆಯೇ ಪ್ರಪಂಚಕ್ಕೆ ಕಾಲಿಟ್ಟ ನನಗೆ ಡ್ರಗ್ಸ್‌ ಪರಿಚಯವಾಯಿತು. ಕೇವಲ ಹನ್ನೆರಡರ ವಯಸ್ಸಿಗೆ ಡ್ರಗ್‌ ದಾಸನಾಗಿಬಿಟ್ಟೆ. ನನ್ನ ಎಲ್ಲ ನೋವುಗಳನ್ನು ಮರೆಯಲು ಡ್ರಗ್‌ ಸೇವನೆ ಸುಲಭೋಪಾಯ ಎನಿಸುತ್ತಿತ್ತು. ಅದನ್ನು ಸೇವಿಸಿದ ತಕ್ಷಣ ನಾನು ಸ್ವರ್ಗದಲ್ಲಿದ್ದಂತೆ ಅನಿಸುತ್ತಿತ್ತು. ನನ್ನ ಪಾಲಿಗೆ ಡ್ರಗ್‌ ನಾನು ಮಾಡುತ್ತಿದ್ದ ಕೆಲಸಗಳಿಂದ ಸಿಗುತ್ತಿದ್ದ ಎಸ್ಕೇಪ್‌ ಆಗಿರುತ್ತಿತ್ತು.”

“ಹೀಗೆ ಕಳ್ಳತನವನ್ನೇ ಮುಂದುವರಿಸಿ ಒಂದು ದಿನ ಸಿಕ್ಕಿಬಿದ್ದೆ. ನನ್ನನ್ನು ಸಣ್ಣ ವಯಸ್ಸಿನ ಅಪರಾಧಿಗಳ ಜೈಲಿನಲ್ಲಿರಿಸಿದರು. ಆಗ ೧೯೯೯. ನನಗೆ ೧೮ ವರ್ಷವಾಗಿತ್ತು. ಪ್ರತಿ ದಿನವೂ ಬೆಳಗ್ಗೆದ್ದು ಡ್ರಗ್‌ ಸೇವಿಸುತ್ತಿದ್ದುದರಿಂದ ನನಗೆ ಜೈಲಿನಲ್ಲಿ ಅದರಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜೈಲಿನಲ್ಲಿ ಆತ್ಮಹತ್ಯೆಯ ಪ್ರಯತ್ನ ಮಾಡಿದೆ. ಆದರೆ, ಜೈಲಿನ ಗಾರ್ಡ್‌ ನನ್ನನ್ನು ರಕ್ಷಿಸಿದ. ನಾನು ಸಾಯುವುದು ಸ್ವಲ್ಪದರಲ್ಲಿ ತಪ್ಪಿತು. ಅದೇ ವರ್ಷದ ಕೊನೆಯಲ್ಲಿ ನನ್ನ ಬಿಡುಗಡೆಯೂ ಆಯಿತು. ನನಗೆ ಚಿಂದಿ ಆಯುವ ಕೆಲಸ ಕೊಟ್ಟರು. ಆ ಮೂಲಕ ಹೊಸ ಬದುಕು ಕಟ್ಟಲು ನಾನು ಆರಂಭಿಸಿದೆ.” ಎಂದು ವಿವರಿಸುತ್ತಾರೆ.

ಇದನ್ನೂ ಓದಿ | ಮೊಸಳೆ ಜಂಪ್​ ಮಾಡಿ, ಓಡೋದನ್ನು ಎಂದಾದರೂ ನೋಡಿದ್ದೀರಾ? ಅಚ್ಚರಿ ಹುಟ್ಟಿಸುವ ವಿಡಿಯೋ ಇಲ್ಲಿದೆ !

“ಚಿಂದಿ ಆಯುವ ಉದ್ಯೋಗ ನನ್ನ ಜೀವನದ ಟರ್ನಿಂಗ್‌ ಪಾಯಿಂಟ್‌. ಆಗ ನನ್ನ ಜೀವನ ಇನ್ನೊಂದು ಮಗ್ಗುಲಿನತ್ತ ಹೊರಳಿತು. ನಿಧಾನವಾಗಿ ೧೮ರ ಆ ವಯಸ್ಸಿನಲ್ಲಿ ಜೀವನ ಆರಂಭಿಸಿದೆ. ಈ ಅವಧಿಯಲ್ಲಿ ಹಲವರು ಸಿಕ್ಕರು. ಎಲ್ಲರೂ ಎಷ್ಟೊಂದು ದಯೆ, ಪ್ರೀತಿ ಉಳ್ಳವರು ಎಂದು ಅನಿಸಲು ಶುರುವಾಯಿತು. ಇನ್ನೂ ಉತ್ತಮ ಕೆಲಸ, ಒಳ್ಳೆಯ ದುಡ್ಡು ಸಂಪಾದಿಸಲು ಕಷ್ಟಪಟ್ಟು ದುಡಿಯಬೇಕೆಂದುಕೊಂಡೆ. ೨೦೦೦ರಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್‌ ಮೀಟಿಂಗ್‌ನಲ್ಲಿ ಭಾಗವಹಿಸಿದೆ. ಇನ್ನೂ ಆರು ವರ್ಷದ ನಂತರ ಅಂದರೆ ನನ್ನ ೨೫ನೇ ವಯಸ್ಸಿನಲ್ಲಿ ಒಂದು ಬದಲಾವಣೆ ಆರಂಭವಾಯಿತು. ಅದು ೨೦೦೮, ಆಗ ನಾನೊಂದು ಕನ್ಸ್‌ಟ್ರಕ್ಷನ್‌ ಕಂಪನಿಯಲ್ಲಿ ಸೇಲ್ಸ್‌ ಕೆಲಸ ನೋಡಿಕೊಳ್ಳುತ್ತಿದ್ದೆ. ಇದರ ಜೊತೆಗೇ ಜೈಲುಗಳಲ್ಲಿ, ಸಣ್ಣ ವಯಸ್ಸಿಗೇ ಅಪರಾಧ ಜಗತ್ತಿಗೆ ಬಂದು ಕಷ್ಟ ಪಡುವವರ ಮನಃಪರಿವರ್ತನೆಗೆ ಸ್ವಯಂ ಆಸಕ್ತಿಯಿಂದ ಸೇರಿಕೊಂಡೆ. ನನ್ನದೇ ಉದಾಹರಣೆಯನ್ನು ಅವರಿಗೆ ಹೇಳಿದೆ. ಬದಲಾವಣೆ ಸಾಧ್ಯವಿದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಅವರಿಗೆ ವಿವರಿಸಿದೆ.”

“ನನಗೆ ನಾನು ಎಲ್ಲ ಚಟಗಳಿಂದಲೂ ಮುಕ್ತನಾಗಿ ಎಲ್ಲರಂತೆ ಸಮಾಜದಲ್ಲಿ ತಲೆಯೆತ್ತಿ ಕಷ್ಟ ಪಟ್ಟು ಕೆಲಸ ಮಾಡಿಕೊಂಡು ನನ್ನ ಹೊಟ್ಟೆಹೊರೆದುಕೊಳ್ಳುವುದು ಜೀವನದ ಅತ್ಯಮೂಲ್ಯ ಸಾಧನೆಯೆನಿಸಿತ್ತು. ನನ್ನ ಜಗತ್ತಿನಲ್ಲಿ ಹೀಗೆ ಬದಲಾದವರನ್ನು ನಾನು ನೋಡಿರಲಿಲ್ಲ. ಹಾಗಾಗಿ ನನ್ನನ್ನು ನೋಡಿ, ಅವರಿಗೂ ಬದಲಾಗಲು ನಾನೊಂದು ಉತ್ತಮ ಉದಾಹರಣೆಯಾಗಬಹುದು ಎನಿಸಿತ್ತು. ಈ ಎಲ್ಲ ಕೆಲಸಗಳಿಂದ ನನಗೆ ಜೀವನದಲ್ಲೊಂದು ತೃಪ್ತಿ ಸಿಕ್ಕಿತ್ತು. ೨೦೧೧ರಲ್ಲಿ ಸಾಶಾಳನ್ನು ಪ್ರೀತಿಸಿ ಮದುವೆಯಾದೆ. ನನ್ನ ಬದುಕು ಸಂಪೂರ್ಣ ಬದಲಾಗಿತ್ತು. ಹೊರಜಗತ್ತಿನ ಜನರಿಗೆ ನಾನೊಬ್ಬ ಎಲ್ಲರಿಗೂ ಸಹಾಯ ಮಾಡುವ ಜೈಲಿನಿಂದ ಹೊರಬಂದು ಬದಲಾದ ವ್ಯಕ್ತಿ. ಈಗ ನನಗೆ ಇತರರಿಗೆ ಸಹಾಯ ಮಾಡುವುದರ ಹಿಂದಿನ ಸಂತೋಷದ ಅರಿವಾಗಿದೆ” ಎನ್ನುತ್ತಾರೆ.

ಇದನ್ನೂ ಓದಿ | ಪೀರಿಯಡ್‌ ರೆಡ್‌ ಸ್ಟಿಕ್ಕರ್! ಋತುಸ್ರಾವ ಸೂಚನೆಗೆ ಇಲ್ಲೊಬ್ಬನ ವಿಚಿತ್ರ ಐಡಿಯಾ!

ಇತರರಿಗೆ ಸಹಾಯ ಮಾಡುವ, ಅನೇಕರ ಬದುಕಿಗೆ ದಾರಿದೀಪವಾಗಿ ಕೆಲಸ ಮಾಡುತ್ತಿರುವ ಈತನನ್ನು ಗುರುತಿಸಿದ ನಗರ ಪೊಲೀಸ್‌ ಇಲಾಖೆ ಈತನಿಗೆ ೨೦೧೪ರಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ೨೦೧೮ರಲ್ಲಿ ಈತ ತನ್ನ ಹುಟ್ಟೂರಿನಲ್ಲಿಯೇ ಸಿಐಪಿ (ಚೇಂಜ್‌ ಈಸ್‌ ಪಾಸಿಬಲ್)‌ ಪ್ರಾಜೆಕ್ಟ್‌ ಎಂಬ ಸ್ವಯಂಸೇವಾ ಸಂಸ್ಥೆಯೊಂದನ್ನೂ ಹುಟ್ಟುಹಾಕಿದ್ದು, ಆ ಮೂಲಕ ದುಶ್ಚಟಗಳ ದಾಸರಾದವರನ್ನು ಅದರಿಂದ ಹೊರಗೆ ತರುವಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಸಂಸ್ಥೆಗಾಗಿ ೨೫ ಎಕರೆ ಭೂಮಿಯನ್ನು ಹೊಂದಿದ್ದು, ಇಲ್ಲೇ ತನ್ನದೊಂದು ತಂಡ ಕಟ್ಟಿಕೊಂಡು, ಅನೇಕರನ್ನು ದುಶ್ಚಟಗಳಿಂದ ಹೊರತರಲು ಕಾರ್ಯಾಗಾರಗಳನ್ನು, ತರಬೇತಿಗಳನ್ನೂ ನಡೆಸುತ್ತಿದ್ದಾರೆ!

ಮೈಕಲ್‌ ಅವರೇ ಹೇಳುವಂತೆ, “ನಾನೀಗ ಒಳ್ಳೆಯ ಗಂಡ, ಮೇಲಾಗಿ ಒಳ್ಳೆಯ ಅಪ್ಪ. ನನ್ನ ಮಕ್ಕಳು ಎಂದಿಗೂ ನಾನು, ಕುಡಿಯುವುದನ್ನು, ಅಥವಾ ಡ್ರಗ್‌ ತೆಗೆದುಕೊಂಡಿದ್ದನ್ನು ನೋಡಿಲ್ಲ. ನನ್ನಲ್ಲಿನ ಈ ಬದಲಾವಣೆ ನನ್ನ ಜೀವಮಾನದ ಸಾಧನೆ. ಅದರ ಬಗ್ಗೆ ಅತ್ಯಂತ ಖುಷಿಯಿದೆ. ಇತರರೂ ಹೀಗೆ ಬದಲಾದರೆ ಅತ್ಯಂತ ಹೆಚ್ಚು ಖುಷಿ ಪಡುತ್ತೇನೆ. ಬದುಕಿನಲ್ಲಿ ಎಲ್ಲವೂ ಸಾಧ್ಯವಿದೆ ಎಂದು ತೋರಿಸಿಕೊಡಲು ಬಯಸುತ್ತೇನೆ” ಎನ್ನುತ್ತಾರೆ.

ಈತನ ಬದುಕು ದಾರಿ ತಪ್ಪಿ ನಡೆದ ಹಲವರಿಗೆ ಸ್ಪೂರ್ತಿಯಾಗಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ಸಮಾಜದಲ್ಲಿ ಎಲ್ಲರೂ ಒಪ್ಪುವಂಥ, ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ (No Diet Day 2024) ಆಸೆ ಜನರಿಗೆ ಇರುತ್ತದೆ. ಹಾಗಾಗಿ, ಹೇಗೆಹೇಗೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆದು ದೇಹದ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲೆಂದು ʻಡಯೆಟ್‌ ರಹಿತ ದಿನʼ ಆಚರಿಸಲಾಗುತ್ತದೆ. ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

No Diet Day 2024
Koo

ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ (No Diet Day 2024) ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್‌ ನಿಯತಕಾಲಿಕಗಳಲ್ಲಿ ಫೋಟೋಶಾಪ್‌ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್‌ ಉದ್ದೇಶ ಇದ್ದರೆ ಒಂದು ಲೆಕ್ಕ. ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್‌ ರಹಿತ ದಿನʼವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.

Girl having a cheat day

ಏನಿದರರ್ಥ?

ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.

ಯಾಕೆ ಬಂತು ಈ ದಿನ?

ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್‌ ಯಂಗ್‌ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್‌ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್‌ ರೂಪದಲ್ಲಿ ಮೊದಲಾಯಿತು. ಡಯೆಟ್‌ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು. ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್‌ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.

Woman dieting and eating a salad

ಏನು ಮಾಡಬೇಕು?

ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್‌ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಸಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.

ಇದನ್ನೂ ಓದಿ: Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Continue Reading

ಆರೋಗ್ಯ

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗುವ ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಈ ಕುರಿತ (Cooking oils) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cooking Oils
Koo

ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.

Palm oil

ಪಾಮ್‌ ಎಣ್ಣೆ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್‌ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್‌ ಫ್ಯಾಟ್‌ ಇರುವುದರಿಂದ ಇದು ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.

Soybean oil

ಸೋಯಾಬೀನ್‌ ಎಣ್ಣೆ

ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.

Cottonseed oil

ಹತ್ತಿಬೀಜದ ಎಣ್ಣೆ

ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್‌ ಸೀಡ್‌ ಆಯಿಲ್‌ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್‌ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ವೆಜಿಟೆಬಲ್‌ ಆಯಿಲ್

ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್‌ ಆಯಿಲ್‌ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್‌ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್‌ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.

Hydrogenated oils

ಹೈಡ್ರೋಜಿನೇಟೆಡ್‌ ಆಯಿಲ್‌ಗಳು

ಹೈಡ್ರೋಜಿನೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

Continue Reading

ಆರೋಗ್ಯ

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಈ ಕುರಿತ (Pain relievers) ಮಾಹಿತಿ ಇಲ್ಲಿದೆ.

VISTARANEWS.COM


on

Pain relievers
Koo

ಪ್ರಕೃತಿಯಲ್ಲಿ ನಮ್ಮ ನೋವುಗಳಿಗೆಲ್ಲವೂ ಮದ್ದಿವೆ. ಪ್ರಕೃತಿಯ ಸಾನಿಧ್ಯ ನಮಗೆ ಮಾನಸಿಕ ನೆಮ್ಮದಿಯನ್ನು ನೀಡುವ ಜೊತೆಗೆ ದೇಹಕ್ಕೆ ಆದ ನೋವನ್ನೂ ಕಡಿಮೆ ಮಾಡಲು ಮೂಲಿಕೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಮನುಷ್ಯ ತನ್ನ ಆರೋಗ್ಯದ ಸಮಸ್ಯೆಗಳಿಗೆ ವೈದ್ಯ ಜಗತ್ತಿನಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಕೆಲವು ಸರಳವಾದ ಪ್ರಾಕೃತಿಕ ಆಹಾರಗಳು ಅವನ ಕೈಯನ್ನು ಬಿಡುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಹಾಗಾಗಿ, ಪ್ರಕೃತಿಯೇ ನಮಗೆ ನೀಡಿದ ಕೆಲವು ನೋವು ನಿವಾರಕಗಳೂ ಕೂಡ ಸಾಕಷ್ಟು ನೋವುಗಳನ್ನು ಕಡಿಮೆ ಮಾಡುವಲ್ಲಿ ಸಫಲವಾಗುತ್ತದೆ. ಬನ್ನಿ, ಪ್ರಕೃತಿದತ್ತ ನೋವು ನಿವಾರಕವಾಗಿ ಯಾವೆಲ್ಲ ಆಹಾರಗಳು ಕೆಲಸ ಮಾಡುತ್ತವೆ (Pain relievers) ಎಂಬುದನ್ನು ನೋಡೋಣ.

ginger

ಶುಂಠಿ

ಪ್ರಕೃತಿದತ್ತ ಆಂಟಿ ಇನ್‌ಫ್ಲಮೇಟರಿ ಗುಣಗಳುಳ್ಳ ಆಹಾರಗಳ ಪೈಕಿ ಶುಂಠಿ ಪ್ರಮುಖವಾದದ್ದು. ಇದರಲ್ಲಿ ಅತ್ಯಂತ ಶಕ್ತಿಯುತವಾದ ನೋವು ನಿವಾರಕ ಗುಣಗಳಿದ್ದು ಮಾಂಸಖಂಡಗಳ ಸೆಳೆತ, ಉರಿಯೂತ, ನೋವುಗಳನ್ನು ಇದು ಶಮನಗೊಳಿಸುವಲ್ಲಿ ನೆರವಾಗುತ್ತದೆ. ನೋವುಗಳಿದ್ದಾಗ ರಾತ್ರಿ ಮಲಗುವ ಮೊದಲು ಶುಂಠಿಯ ಚಹಾ ಕುಡಿಯುವ ಮೂಲಕ ಒಳ್ಲೆಯ ನಿದ್ರೆ ಹಾಗೂ ನೋವಿನಿಂದ ಕೊಂಚ ಆರಾಮ ಪಡೆಯಬಹುದು.

Anti-Inflammatory Properties Health Benefits Of Raw Turmeric

ಹಸಿ ಅರಿಶಿನ

ಮಸಾಲೆಯಾಗಿ ನಾವು ನಿತ್ಯ ಅರಿಶಿನವನ್ನು ಉಪಯೋಗಿಸಿದರೂ ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ನೋವುಗಳಿಗೆ ಒಳ್ಳೆಯ ಔಷಧಿ. ಇದರಲ್ಲಿ ಆಂಟಿಬಯಾಟಿಕ್‌ ಹಾಗೂ ಆಂಟಿಸೆಪ್ಟಿಕ್‌ ಗುಣಗಳು ಹೇರಳವಾಗಿವೆ. ಈ ಗುಣಗಳು ನೋವುನಿವಾರಕಗಳಂತೆ ಕೆಲಸ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವಲ್ಲಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಅರಿಶಿನ ಹಾಕಿದ ಹಾಲನ್ನು ಕುಡಿಯುವ ಮೂಲಕ ಅರಿಶಿನದ ಲಾಭವನ್ನು ಪಡೆಯಬಹುದು.

Anise

ಸೋಂಪು

ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂಥ ಸೋಂಪು ಅಸಿಡಿಟಿ ಹಾಗೂ ಗ್ಯಾಸ್‌ನ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಹೊಟ್ಟೆಯ ಸಮಸ್ಯೆಗಳು, ಗ್ಯಾಸ್‌ನಿಂದಾಗುವ ನೋವು, ಮಾಂಸಖಂಡಗಳ ಸೆಳೆತ ಇತ್ಯಾದಿ ನೋವುಗಳಿಗೆ ಸೋಂಪು ಅತ್ಯುತ್ತಮ ನೋವು ನಿವಾರಕವಾಗಿ, ಗ್ಯಾಸ್‌ನಿಂದ ಮುಕ್ತಿ ನೀಡುವ ಮನೆಮದ್ದಾಗಿ ಕೆಲಸ ಮಾಡುತ್ತದೆ. ಸೋಂಪನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅತಿಯಾಗಿ ಊಟ ಮಾಡಿದಾಗ, ಹೊರಗೆ ತಿಂದು ಬಂದಾಗ, ಸಮಾರಂಭಗಳಲ್ಲಿ ಊಟ ಮಾಡಿದಾಗ ಆಗುವ ಹೊಟ್ಟೆಯುಬ್ಬರಕ್ಕೆ ತಕ್ಷಣವೇ ಹೀಗೆ ಮಾಡುವ ಮೂಲಕ ಸಮಾಧಾನ ಸಿಗಬಹುದು.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಸಣ್ಣ ಪುಟ್ಟ ನೋವುಗಳಿಗೆ, ಯಾವಾಗಲೂ ಪ್ರಕೃತಿದತ್ತ ಇಂತಹ ನೋವು ನಿವಾರಕಗಳು, ಆಂಟಿಸೆಪ್ಟಿಕ್‌ ಗುಣಗಳ ಆಹಾರಗಳನ್ನು ನಮ್ಮ ನಿತ್ಯಾಹಾರದಲ್ಲಿ ಅಳವಡಿಸುವ ಮೂಲಕ ಪರಿಹಾರ ಕಂಡುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅತಿಯಾದ ಮಾತ್ರೆಗಳ ದಾಸರಾಗುವುದು, ಅಥವಾ ಸಣ್ಣ ಪುಟ್ಟ ನೋವುಗಳಿಗೂ ಮಾತ್ರೆಗಳ ಸಹಾಯ ಪಡೆಯುವುದರಿಂದ ಅಡ್ಡ ಪರಿಣಾಮಗಳನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಆದಷ್ಟೂ ಪ್ರಕೃತಿಯ ಕೊಡುಗೆಗಳನ್ನು ಸಮರ್ಪಕವಾಗಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂಬುದನ್ನು ಹಿರಿಯರಾದಿಯಾಗಿ ವೈದ್ಯಜಗತ್ತೂ ಕೂಡ ಒಪ್ಪಿಕೊಂಡ ಸತ್ಯ.

Continue Reading

ಫ್ಯಾಷನ್

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಈ ಬೇಸಿಗೆಯಲ್ಲಿ ಟೊರ್ನ್‌ ಜೀನ್ಸ್‌ ಪ್ಯಾಂಟ್‌ (Torn Jeans Styling Tips) ಖರೀದಿಸುವವರು ಹಾಗೂ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಇವನ್ನು ಧರಿಸುವವರು ಒಂದಿಷ್ಟು ಅಂಶಗಳನ್ನು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವು ಯಾವುವು? ಇಲ್ಲಿದೆ ವಿವರ.

VISTARANEWS.COM


on

Torn Jeans Styling Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟೊರ್ನ್‌ ಜೀನ್ಸ್‌ ಧರಿಸುವ ಹುಡುಗಿಯರು (Torn Jeans Styling Tips) ಕೇವಲ ಫ್ಯಾಷನ್‌ಗೆ ಮಾತ್ರ ಬೆಲೆ ನೀಡದೇ, ಇವನ್ನು ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೈಲಿಂಗ್‌ ಮಾಡುವುದು ಉತ್ತಮ ಎನ್ನುತ್ತಾರೆ. ಇಲ್ಲವಾದಲ್ಲಿ, ನೋಡುಗರ ಕೆಂಗಣ್ಣಿಗೆ ಗುರಿಯಾಗಬಹುದು ಅಥವಾ ಧರಿಸುವವರಿಗೆ ಮುಜುಗರವಾಗಬಹುದು. ಹಾಗಾಗಿ ಈ ಪ್ಯಾಂಟ್‌ ಪ್ರಿಯರು ಆದಷ್ಟೂ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅಂದಹಾಗೆ, ಟೊರ್ನ್‌ ಜೀನ್ಸ್‌ ಫ್ಯಾಷನ್‌ ನಿನ್ನೆ ಮೊನ್ನೆಯದಲ್ಲ! ಸುಮಾರು ವರ್ಷಗಳಿಂದಲೂ ಇದು ನಾನಾ ಅವತಾರಗಳಲ್ಲಿ ಮಾಡರ್ನ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಕೆಲವು ಚಿಂದಿ ಉಡುಗೆಯಂತೆ ಕಂಡರೇ, ಇನ್ನು ಕೆಲವು ಫ್ಯಾಷೆನಬಲ್‌ ಪ್ಯಾಂಟ್‌ನಂತೆ ಕಾಣಬಹುದು. ಇದು ಆಯ್ಕೆ ಮಾಡುವವರ ಹಾಗೂ ಧರಿಸುವವರ ಮೇಲೆ ನಿರ್ಧರಿತವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಜೆನ್‌ ಜಿ ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ನಲ್ಲೂ ಇವು ಸ್ಥಾನ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಟೊರ್ನ್‌ ಪ್ಯಾಂಟ್‌ ಆಯ್ಕೆ ಹೀಗಿರಲಿ

ಟೊರ್ನ್‌ ಪ್ಯಾಂಟ್‌ ಆಯ್ಕೆ ಮಾಡುವಾಗ ಮೊದಲು ಆ ಪ್ಯಾಂಟ್‌ನ ವಿನ್ಯಾಸ ಅದರಲ್ಲೂ, ಯಾವ ಮಟ್ಟಿಗೆ ಟೊರ್ನ್‌ ಆಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಯಾವ ಭಾಗದಲ್ಲಿ ಈ ಟೊರ್ನ್‌ ವಿನ್ಯಾಸವಿದೆ. ಕಾಲಿನ ಭಾಗದಲ್ಲಾದರೇ ಓಕೆ. ಅದೇ ತೊಡೆ ಅಥವಾ ಹಿಂಭಾಗದಲ್ಲಿ ಇದ್ದರೇ ಖರೀಸಬೇಡಿ. ಇದ್ದರೂ ಧರಿಸುವುದನ್ನು ಆವಾಯ್ಡ್‌ ಮಾಡಿ. ಇದು ನಿಮ್ಮನ್ನು ಇತರರ ಮುಂದೆ ಮುಜುಗರಕ್ಕೆ ಈಡುಮಾಡಬಹುದು.

Torn Jeans Styling Tips

ಸಂದರ್ಭಕ್ಕೆ ತಕ್ಕಂತೆ ಧರಿಸಿ

ಯಾವುದೇ ಟ್ರೆಡಿಷನಲ್‌ ಕಾರ್ಯಕ್ರಮಕ್ಕೆ ಇವನ್ನು ಧರಿಸಬೇಡಿ. ಅದರಲ್ಲೂ ಶುಭ ಸಮಾರಂಭಗಳಲ್ಲಿ ಈ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳಲೇಬೇಡಿ. ಹಿರಿಯರ ಸಮ್ಮುಖದಲ್ಲಿ ನಡೆಯುವ ಪ್ರೋಗ್ರಾಂಗಳಲ್ಲೂ ಕೂಡ ಇವನ್ನು ಧರಿಸಬೇಡಿ. ಅವರ ಕಂಗೆಣ್ಣಿಗೆ ನೀವು ಗುರಿಯಾಗಬೇಕಾದಿತು.

Torn Jeans Styling Tips

ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಬೇಡ

ಫ್ಯಾಷನ್‌ನಲ್ಲಿದೆ ಎಂದು ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಆಯ್ಕೆ ಬೇಡ. ಇವು ನಿಮ್ಮನ್ನು ಬಿಕ್ಷುಕರಂತೆ ಬಿಂಬಿಸಬಹುದು. ನೀವು ಹುಡುಗ ಅಥವಾ ಹುಡುಗಿಯಾಗಿರಬಹುದು. ಅದು ಯಾರೇ ಆಗಿರಲಿ, ನಿಮ್ಮ ಘನತೆಗೆ ತಕ್ಕುದಾದುದಲ್ಲ ಎಂಬುದು ನೆನಪಿರಲಿ. ಕಚೇರಿಗಂತೂ ಧರಿಸುವುದೇ ಬೇಡ. ಆಫೀಸ್‌ನ ಮೀಟಿಂಗ್‌ಗಳಲ್ಲೂ ಇವನ್ನು ಧರಿಸಬೇಡಿ.

Torn Jeans Styling Tips

ಔಟಿಂಗ್‌ -ವೀಕೆಂಡ್‌ಗೆ ಮಾತ್ರ ಸೀಮಿತವಾಗಿರಲಿ

ಸ್ನೇಹಿತರೊಂದಿಗೆ ಅಥವಾ ಔಟಿಂಗ್‌-ವೀಕೆಂಡ್‌ ಹೋಗುತ್ತಿದ್ದಲ್ಲಿ ಆಗ ಮಾತ್ರ ಟೊರ್ನ್‌ ಪ್ಯಾಂಟ್‌ ಧರಿಸಿ. ಇದು ಹಾಲಿಡೇ ಲುಕ್‌ಗೂ ಮ್ಯಾಚ್‌ ಆಗುತ್ತದೆ. ಫ್ಯಾಷೆನಬಲ್‌ ಆಗಿ ಕಾಣಿಸುತ್ತದೆ.

ಇದನ್ನೂ ಓದಿ: Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

ಟೊರ್ನ್‌ ಪ್ಯಾಂಟ್‌ ಲೆಂಥ್‌

ಕೇಪ್ರಿಸ್‌ನಂತಿರುವ, ಆಂಕೆಲ್‌ ಲೆಂಥ್‌ ಅಥವಾ ಶಾರ್ಟ್ಸ್‌ ಟೊರ್ನ್‌ ಲೆಂಥ್‌ನವು ಇಂದು ಟ್ರೆಂಡ್‌ನಲ್ಲಿವೆ. ಸೀಸನ್‌ಗೆ ಹೊಂದುವಂತದ್ದನ್ನು ಸೆಲೆಕ್ಟ್‌ ಮಾಡಬಹುದು. ಇವಕ್ಕೆ ಸೂಕ್ತ ಟಾಪ್‌ಗಳನ್ನು ಮ್ಯಾಚ್‌ ಮಾಡಬಹುದು. ಒಟ್ಟಿನಲ್ಲಿ, ನಿಮ್ಮ ಪಸನಾಲಿಟಿಗೆ ಹೊಂದುವಂತದ್ದನ್ನು ಮಾತ್ರ ಧರಿಸಿ, ಕಾಣಿಸಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
assault case in bengaluru
ಬೆಂಗಳೂರು40 mins ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ50 mins ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

No Diet Day 2024
ಆರೋಗ್ಯ1 hour ago

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

pakistan team
ಕ್ರೀಡೆ1 hour ago

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Gold Rate Today
ಕರ್ನಾಟಕ1 hour ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Puttakkana makkalu sahana dead
ಕಿರುತೆರೆ1 hour ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Rekha Jhunjhunwala
ವಾಣಿಜ್ಯ1 hour ago

Rekha Jhunjhunwala: ಷೇರು ಮಾರುಕಟ್ಟೆಯಲ್ಲಿ ರೇಖಾ ಜುಂಜುನ್‌ವಾಲಾಗೆ 805 ಕೋಟಿ ರೂ. ನಷ್ಟ; ಕಾರಣವೇನು?

viral news
ಕ್ರಿಕೆಟ್2 hours ago

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Sunita Williams
ವಿದೇಶ2 hours ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು2 hours ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ20 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ22 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ22 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌