Connect with us

ಕರ್ನಾಟಕ

Rain News | ಮಳೆ ಅವಾಂತರದ ಮಾಹಿತಿ ಪಡೆದ ಸಿಎಂ, ರಾಮನಗರಕ್ಕೆ ಹೆಲಿಕಾಪ್ಟರ್‌ ಮೂಲಕ ಹೋಗಲು ನಿರ್ಧಾರ

ರಾಜ್ಯದ 16 ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದುಕೊಂಡಿದ್ದಾರೆ.

VISTARANEWS.COM


on

Male bus
ರಾಮನಗರ ಬಳಿಯ ಹೆದ್ದಾರಿಯಲ್ಲಿ ಬಸ್‌ಗಳು ಮಳೆ ನೀರಿನಲ್ಲಿ ಮುಳುಗಿರುವುದು.
Koo

ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಭಾರಿ ಮಳೆ ಅನಾಹುತ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ಪಡೆದುಕೊಂಡಿದ್ದು, ಅಲ್ಲಿಗೆ ಹೆಲಿಕಾಪ್ಟರ್‌ ಮೂಲಕ ಪ್ರಯಾಣಿಸಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಕೆರೆ ಕಟ್ಟೆಗಳು ಒಡೆದಿದೆ. ರಸ್ತೆ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ನೀರು ತುಂಬಿವೆ. ಹೀಗಾಗಿ ಬೆಂಗಳೂರು-ಮೈಸೂರು ನಡುವೆ ಸಂಚಾರವೇ ಸ್ತಬ್ಧಗೊಂಡಿವೆ. ಇದರ ಜತೆಗೆ ರಾಜ್ಯದ ಇತರ ಭಾಗಗಳಲ್ಲೂ ದೊಡ್ಡ ಮಟ್ಟದ ಮಳೆ ಹಾನಿ ಸಂಭವಿಸಿರುವ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.

ʻʻರಾಜ್ಯದ ೧೬ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ಅವಾಂತರದ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಸ್ತೆಯಲ್ಲಿ ನೀರು ನಿಂತಿದ್ದು ತೆರವು ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರ್ಯಾಯ ಮಾರ್ಗವಾಗಿ ವಾಹನಗಳು ಹೋಗಲು ಸೂಚನೆ ನೀಡಲಾಗಿದೆʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ʻʻತುರ್ತು ಕ್ರಮವಾಗಿ ಹೆದ್ದಾರಿಯಲ್ಲಿ ನಿಂತ ನೀರನ್ನು ಕ್ಲಿಯನ್‌ ಮಾಡಲು ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಸೂಚನೆ ನೀಡಿದ್ದೇನೆ. ಮೈಸೂರು, ರಾಮನಗರ, ಮಂಡ್ಯ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿಯೂ ಮಳೆ ಹಾನಿಗೆ ತುರ್ತು ಪರಿಹಾರ ನೀಡುವಂತೆ ತಿಳಿಸಲಾಗಿದೆʼʼ ಎಂದು ಸಿಎಂ ಹೇಳಿದರು.

ಕೆರೆ ಕಟ್ಟೆಗಳ ಮೇಲೆ ನಿಗಾ
ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆರೆಗಳು ತುಂಬಿವೆ. ಇವುಗಳು ಒಡೆಯದಂತೆ ಸುರಕ್ಷಿತ ಕ್ರಮ ವಹಿಸಬೇಕಾಗಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದಲ್ಲಿ ಜನರನ್ನು ಕೂಡಲೇ ಸ್ಥಳಾಂತರಿಸಲು, ಕಾಳಜಿ ಕೇಂದ್ರ ತೆರೆಯಲು ಆದೇಶವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತುರ್ತು ಕೆಲಸಗಳಿಗಾಗಿ ೯೦೦ ಕೋಟಿ ನೀರು ಮೀಸಲು ಇಡಲಾಗಿದೆ.

ಮುಂದಿನ ತಿಂಗಳು ಪರಿಹಾರ
ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಸಂತ್ರಸ್ತ ರೈತರಿಗೆ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಮುಂದಿನ ತಿಂಗಳು ಪರಿಹಾರ ನೀಡಲು ಎಲ್ಲ ಸಿದ್ಧತೆಗಳು ನಡೆದಿವೆʼʼ ಎಂದು ಸಿಎಂ ತಿಳಿಸಿದರು.

ಎಚ್‌ಡಿಕೆ, ಅಶ್ವತ್ಥನಾರಾಯಣ ಜತೆ ಚರ್ಚೆ
ಈ ನಡುವೆ ಬೊಮ್ಮಾಯಿ ಅವರು ರಾಮನಗರ ಮತ್ತು ಚನ್ನಪಟ್ಟಣದ ಮಳೆ ಅವಾಂತರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಜತೆ ಚರ್ಚೆ ನಡೆಸಿದರು. ರೇಸ್ ಕೋರ್ಸ್ ನಿವಾಸಕ್ಕೆ ಅಶ್ವಥ್ ನಾರಾಯಣ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದರು. ಹೆಲಿಕಾಪ್ಟರ್‌ ಮೂಲಕ ರಾಮನಗರಕ್ಕೆ ತೆರಳಲು ನಿರ್ಧರಿಸಿರುವ ಸಿಎಂ ಅವರು ಎಲ್ಲೆಲ್ಲ ಭೇಟಿ ನೀಡಬೇಕು ಎನ್ನುವ ಬಗಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ| RAIN NEWS: ಬೆಂಗಳೂರು-ಮೈಸೂರು ರೋಡ್‌ಗೆ ನುಗ್ಗಿದ ನೀರು, ಸಂಚರಿಸಬೇಡಿ ಎಂದು ಮನವಿ ಮಾಡಿದ ಎಚ್‌ಡಿಕೆ

Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Border Dispute | ಶಾ ಜತೆ ಶಿವಸೇನೆ, ಎನ್‌ಸಿಪಿ ಚರ್ಚೆಗೆ ಬೊಮ್ಮಾಯಿ ತಿರುಮಂತ್ರ, ಶೀಘ್ರವೇ ಕೇಂದ್ರ ಸಚಿವರ ಭೇಟಿಗೆ ಸಿಎಂ ತೀರ್ಮಾನ

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟಿಗೆ (Border Dispute) ಸಂಬಂಧಿಸಿದಂತೆ ಶಿವಸೇನೆ ಮತ್ತು ಎನ್‌ಸಿಪಿ ನಿಯೋಗವು ಅಮಿತ್‌ ಶಾ ಅವರನ್ನು ಭೇಟಿಯಾಗಿದೆ. ಇದರ ಬೆನ್ನಲ್ಲೇ, ಶಿವಸೇನೆ, ಎನ್‌ಸಿಪಿಗೆ ತಿರುಗೇಟು ನೀಡಲು ಬಸವರಾಜ ಬೊಮ್ಮಾಯಿ ತಂತ್ರ ಹೆಣೆದಿದ್ದಾರೆ.

VISTARANEWS.COM


on

Edited by

Basavaraj Bommai On Border Dispute
Koo

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟಿಗೆ (Border Dispute) ಸಂಬಂಧಿಸಿದಂತೆ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ಎನ್‌ಸಿಪಿ ಸಂಸದರ ನಿಯೋಗವು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಕರ್ನಾಟಕದ ವಿರುದ್ಧ ದೂರು ನೀಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಸೇನೆ ಹಾಗೂ ಎನ್‌ಸಿಪಿಗೆ ತಿರುಮಂತ್ರ ಹೆಣೆದಿದ್ದಾರೆ. ಸೋಮವಾರ (ಡಿಸೆಂಬರ್‌ ೧೨) ರಂದು ಕರ್ನಾಟಕದ ಸಂಸದರಿಗೆ ಅಮಿತ್‌ ಶಾ ಅವರನ್ನು ಭೇಟಿಯಾಗಿ ಎಂದು ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಬಿಕ್ಕಟ್ಟಿನ ಕುರಿತು ಕರ್ನಾಟಕದ ನಿಲುವನ್ನೂ ರಾಜ್ಯದ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಿದ್ದಾರೆ. ಹಾಗೆಯೇ, ಬೊಮ್ಮಾಯಿ ಅವರೂ ಶೀಘ್ರದಲ್ಲಿಯೇ ಶಾ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ.

ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಅವರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಮಹಾರಾಷ್ಟ್ರದ ನಿಯೋಗವು ಅಮಿತ್‌ ಶಾ ಅವರನ್ನು ಭೇಟಿಯಾದ ಮಾತ್ರಕ್ಕೆ ಇದರಿಂದ ಕರ್ನಾಟಕಕ್ಕೆ ವ್ಯತ್ಯಾಸ ಆಗುವುದಿಲ್ಲ. ಗಡಿ ವಿಚಾರದಲ್ಲಿ ನಾವು ರಾಜಿ ಆಗುವ ಪ್ರಶ್ನೆಯೇ ಇಲ್ಲ. ಸೋಮವಾರ ಅಮಿತ್‌ ಶಾ ಅವರನ್ನು ಭೇಟಿಯಾಗುವಂತೆ ಕರ್ನಾಟಕದ ಸಂಸದರಿಗೆ ತಿಳಿಸಿದ್ದೇನೆ. ನಾನೂ ಶೀಘ್ರದಲ್ಲಿಯೇ ಸಚಿವರನ್ನು ಭೇಟಿಯಾಗುತ್ತೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

Continue Reading

ಕರ್ನಾಟಕ

karnataka Budget | ಗಂಗರ ಇತಿಹಾಸ ಅರಿಯಲು ಸಂಶೋಧನಾ ಪ್ರಾಧಿಕಾರ ರಚನೆ: ಸಿಎಂ ಬಸವರಾಜ ಬೊಮ್ಮಾಯಿ

ಜಯರಾಮ್ ರಾಯಪುರ ವಿರಚಿತ ಚಾವುಂಡರಾಯ ಪುಸ್ತಕ ಬಿಡುಗಡೆ ಮಾಡಿ ಭರವಸೆ ನೀಡಿದ ಸಿಎಂ.

VISTARANEWS.COM


on

karnataka budget
Koo

ಬೆಂಗಳೂರು : ತಲಕಾಡಿನ ಗಂಗರ ಇತಿಹಾಸವನ್ನು ತಿಳಿಯಲು ಸಂಶೋಧನಾ ಪ್ರಾಧಿಕಾರ ರಚನೆ ಬಗ್ಗೆ ಬರುವ ಬಜೆಟ್‌ನಲ್ಲಿ (karnataka Budget) ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಜಯರಾಮ್ ರಾಯಪುರ ವಿರಚಿತ ಚಾವುಂಡರಾಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ “ಶ್ರೇಷ್ಠ ಆಡಳಿತಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಸಾಹಿತ್ಯ ಬೆಳೆಯಲು ವ್ಯಕ್ತಿತ್ವವನ್ನು ಗುರುತಿಸುವ ಕೆಲಸವಾಗಬೇಕು. ಐತಿಹಾಸಿಕ ಸಾಹಿತ್ಯವನ್ನು ವ್ಯಕ್ತಿತ್ವದ ಮೂಲಕ ಪ್ರತಿಬಿಂಬಿಸಿದರೆ ಸತ್ಯಾಂಶ ತಿಳಿಯುತ್ತದೆ. ಐ.ಆರ್.ಎಸ್. ಅಧಿಕಾರಿ ಜಯರಾಮ್‌ ಅವರು ಸಾಕಷ್ಟು ಸಮಾಜಮುಖಿ ಕೃತಿಗಳನ್ನು ಬರೆದಿದ್ದಾರೆ,” ಎಂದರು.

“ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಜಯರಾಮ್ ರಾಯಪುರ ಅವರೊಂದಿಗೆ ನಮ್ಮ ಸ್ನೇಹವಾಗಿದ್ದೇ ಸಾಹಿತ್ಯದಿಂದ. ಬರವಣಿಗೆ ಹಾಗೂ ನಾಟಕ ಅವರ ಹವ್ಯಾಸ. ಸಂಪೂರ್ಣವಾಗಿ ಸಾಹಿತ್ಯ, ಚಿಂತನಾ ಲೋಕಕ್ಕೆ ಬಂದು ಕೃತಿಗೆ ಇಳಿಸಿದ್ದಲ್ಲದೇ ನಾಟಕವನ್ನು ಮಾಡಿಸಿದ್ದಾರೆ. ಅವರು ಕರ್ನಾಟಕದ ಅಧಿಕಾರಿ ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು,” ಎಂದರು.

“ಅವರ ನೇತೃತ್ವದಲ್ಲಿ ಹೊರಬರುತ್ತಿರುವ “ಸಮಾಜಮುಖಿ’ ಮಾಸಪತ್ರಿಕೆ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಸಮಾಜದ ಧ್ವನಿಯಾಗಿಯೂ ಹೊರಬರಲಿ,” ಎಂದರು.

ಸಾಧನೆಗಳ ಮೂಲಕ ಅವರ ವ್ಯಕ್ತಿತ್ವ ರಚನೆ

“ಹಲವಾರು ಪ್ರಯೋಗಗಳನ್ನು ಮಾಡಿದ ಅವರೊಬ್ಬ ಪ್ರಯೋಗಶೀಲ ಐಆರ್‌ಎಸ್ ಅಧಿಕಾರಿ. ಅವರ ಪ್ರಯೋಗಶೀಲತೆಯೇ ಚಾವುಂಡರಾಯ ಕೃತಿ. ಇದುವರೆಗೂ ಇತಿಹಾಸದಲ್ಲಿ ಪ್ರಕಟವಾಗದಿರುವ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯ ಮಾಡಿಸಿದ್ದಾರೆ. ಗಂಗರ ಬಗ್ಗೆ ತಿಳಿದಿರುವ ವಾವು ಚಾವುಂಡರಾಯ ಎಂಬ ದಂಡ ನಾಯಕನ ಬಗ್ಗೆ ಕೇಳಿರುವುದಿಲ್ಲ. ಈ ಮೂಲಕ ಕನ್ನಡದ ಸಾಹಿತ್ಯದಲ್ಲಿ ಹೊಸ ಆಯಾಮ ಬೆಳೆಸಿದ್ದಾರೆ,” ಎಂದರು.

ಅಹಿಂಸೆ ಮತ್ತು ತ್ಯಾಗದ ಪ್ರಬಲ ಪ್ರತಿಪಾದನೆ

ಗಂಗರು ಆಳಿರುವ ಪ್ರದೇಶದ ಬಂಕಾಪುರದಿಂದ ಪ್ರಾರಂಭವಾಗುತ್ತದೆ. ಗಂಗರ ಕಾಲ ಜೈನ ಮತ್ತು ಹಿಂದೂ ಧರ್ಮದ ಸಂಕ್ರಮಣ ಕಾಲವದು. ಜೈನ ಧರ್ಮದಲ್ಲಿ ಬದುಕಿನ ಬಗ್ಗೆ ಮತ್ತು ಸಾವಿನ ಬಗ್ಗೆ ಬಹಳ ಅದ್ಭುತ ಕಲ್ಪನೆ ಇದೆ. ಅಹಿಂಸೆ ಮತ್ತು ತ್ಯಾಗದ ಪ್ರತಿಪಾದನೇ ಬಹಳ ಪ್ರಬಲವಾಗಿದೆ. ರಾಜ ಮಾರಸಿಂಹ ಸಲ್ಲೇಖನ ಪ್ರಯೋಗದ ಸಂದರ್ಭದಲ್ಲಿ ನಡೆದ ಸಂಭಾಷಣೆ ಈ ನಾಟಕದ ಪ್ರಮುಖ ಅಂಶ. ರಾಜನಾದವನು ತನ್ನ ಸ್ಥಾನವನ್ನು ತ್ಯಾಗ ಮಾಡುವುದು ಒಂದು ಭಾಗವಾದರೆ, ತನ್ನನ್ನೇ ತ್ಯಾಗ ಮಾಡಿಕೊಳ್ಳುವುದು ಪರಿಪೂರ್ಣ ತ್ಯಾಗ,” ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು

ಗಂಗರು ಮತ್ತು ರಾಷ್ಟಕೂಟರು ಕನ್ನಡ ನಾಡಿನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ ವಂಶಗಳು. ನಾಡಿನ ಭಾಷೆ, ಸಂಸ್ಕೃತಿ, ಕಲೆ ಎಲ್ಲವೂ ಆಳವಾಗಿ ಬೇರೂರಿರುವುದು ಇವರ ಕಾಲದಲ್ಲಿ. ಈ ಇತಿಹಾಸವನ್ನು ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕು. ಆಗ ಮಾತ್ರ ಭವಿಷ್ಯದ ಸುಸಂಸ್ಕೃತ ನಾಡು ಕಟ್ಟಲು ಸಾಧ್ಯ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಾಹಿತಿ ಪ್ರೊ. ಎಚ್. ಎಸ್.ಶಿವಪ್ರಕಾಶ್, ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ, ಜಯರಾಮ ರಾಯಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ | Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯ ಆಹ್ವಾನ

Continue Reading

ಕರ್ನಾಟಕ

Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟಿನ ಕುರಿತು (Border Dispute) ಚರ್ಚಿಸಿದೆ. ಹಾಗೆಯೇ, ಕರ್ನಾಟಕದ ವಿರುದ್ಧ ದೂರು ನೀಡಿದೆ.

VISTARANEWS.COM


on

Edited by

Supriya Sule Meets Amit Shah
ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಎನ್‌ಸಿಪಿ, ಶಿವಸೇನೆ ನೇತೃತ್ವದ ನಿಯೋಗ.
Koo

ನವದೆಹಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಬಿಕ್ಕಟ್ಟು (Border Dispute) ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಹಾಗೂ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದರನ್ನು ಒಳಗೊಂಡ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಕರ್ನಾಟಕದ ವಿರುದ್ಧ ದೂರು ನೀಡಿದೆ. ಗಡಿ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದೂ ನಿಯೋಗವು ಮನವಿ ಮಾಡಿದೆ.

ಅಮಿತ್‌ ಶಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆ ಶಿವಸೇನೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, “ಗಡಿ ಬಿಕ್ಕಟ್ಟಿನ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿರುವ ಹೇಳಿಕೆಗಳು, ಕರ್ನಾಟಕದಲ್ಲಿರುವ ಮರಾಠಿಗರ ಮೇಲೆ ದಾಳಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ. ಮಹಾರಾಷ್ಟ್ರದ ಜನರ ಹಿತಾಸಕ್ತಿ ಕಾಪಾಡುವುದಾಗಿ ಅಮಿತ್‌ ಶಾ ಅವರು ಭರವಸೆ ನೀಡಿದ್ದಾರೆ” ಎಂದು ಹೇಳಿದರು.

ಡಿಸೆಂಬರ್‌ ೧೪ರಂದು ಸಿಎಂಗಳ ಸಭೆ?
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತೀವ್ರತರವಾಗಿ ಭುಗಿಲೆದ್ದಿರುವ ಗಡಿ ಬಿಕ್ಕಟ್ಟು ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಿಸೆಂಬರ್‌ ೧೪ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಯು ಸರ್ಕಾರದ ಭಾಗವಾಗಿದೆ. ಹೀಗಿರುವಾಗ ವಿವಾದ ಭುಗಿಲೆದ್ದಿರುವುದು, ಇದನ್ನು ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಹಾಗೂ ಎನ್‌ಸಿಪಿಯು ಇನ್ನಷ್ಟು ಕಾವೇರಿಸುತ್ತಿರುವುದು ಬಿಜೆಪಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಅಮಿತ್‌ ಶಾ ಅವರು ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Border Dispute | ಎಲೆಕ್ಷನ್ ಗೆಲ್ಲಲು ಮಹಾರಾಷ್ಟ್ರದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲಿದೆ ಬಿಜೆಪಿ: ಠಾಕ್ರೆ ಆರೋಪ

Continue Reading

ಕರ್ನಾಟಕ

Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯ ಆಹ್ವಾನ

ಹಾವೇರಿಯಲ್ಲಿ ಜ.6, 7, 8ರಂದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

VISTARANEWS.COM


on

ತುಮಕೂರು ಜನಸಂಕಲ್ಪ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ತಿರುಚುವಿಕೆ ಪ್ರಕರಣ
Koo

ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ.6, 7 ಮತ್ತು 8ರಂದು ಹಾವೇರಿಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಷಿ ಅವರ ಊರು ಹಾವೇರಿ ಆಗಿರುವುದು ವಿಶೇಷ!

ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ವಿಶೇಷವಾಗಿ ಮತ್ತು ಅದ್ಧೂರಿಯಾಗಿ ಆಯೋಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕನ್ನಡ ಡಿಂಡಿಮ ಬಾರಿಸುವ ಅಖಿಲ ಭಾರತ ಮಟ್ಟದ ಈ ಸಮ್ಮೇಳನಕ್ಕೆ ನಾಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿಯೋಣ

ಈ ಸಮ್ಮೇಳನದ ಮೂಲಕ ವಿಶ್ವ ಭೂಪಟದಲ್ಲಿ ಕನ್ನಡ ಬಾವುಟವನ್ನು ಎತ್ತಿ ಹಿಡಿಯುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ಅವರು ಆಶಿಸಿದ್ದಾರೆ. ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಸ್ತಾರ ನ್ಯೂಸ್‌ನ ಮಾಧ್ಯಮ ಸಹಯೋಗವಿದೆ.

ಇದನ್ನೂ ಓದಿ | Kannada Book | ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಅವಧಿ ವಿಸ್ತರಣೆ; ಕೊಳ್ಳೋಕೆ ಇನ್ನೆಷ್ಟು ದಿನ ಅವಕಾಶ?

Continue Reading
Advertisement
Horoscope Today
ಪ್ರಮುಖ ಸುದ್ದಿ18 mins ago

Horoscope Today | ಇಂದು ಮೂರು ರಾಶಿಯವರಿಗೆ ಶುಭ ಫಲ; ನಿಮ್ಮ ಭವಿಷ್ಯ ಹೇಗಿದೆ?

suvachana featured image
ಸುವಚನ18 mins ago

ದಿನಕ್ಕೊಂದು ಸುವಚನ, ಬದುಕಿನಲ್ಲಿ ಅಳವಡಿಸಿಕೊಳ್ಳೋಣ

BRS Party HD Kumaraswamy
ದೇಶ5 hours ago

Bharat Rashtra Samithi | ತೆಲಂಗಾಣದಲ್ಲಿ ಟಿಆರ್‌ಎಸ್‌ ಈಗ ಬಿಆರ್‌ಎಸ್‌, ಸಿಎಂ ಕೆಸಿಆರ್‌ಗೆ ಶುಭ ಕೋರಿದ ಕುಮಾರಸ್ವಾಮಿ

croatia
ಕ್ರೀಡೆ5 hours ago

FIFA World Cup | ಬ್ರೆಜಿಲ್‌ಗೆ ಆಘಾತ ನೀಡಿದ ಕ್ರೊಯೇಷ್ಯಾ; ಸೆಮಿಫೈನಲ್ಸ್‌ಗೆ ಪ್ರವೇಶ

Basavaraj Bommai On Border Dispute
ಕರ್ನಾಟಕ5 hours ago

Border Dispute | ಶಾ ಜತೆ ಶಿವಸೇನೆ, ಎನ್‌ಸಿಪಿ ಚರ್ಚೆಗೆ ಬೊಮ್ಮಾಯಿ ತಿರುಮಂತ್ರ, ಶೀಘ್ರವೇ ಕೇಂದ್ರ ಸಚಿವರ ಭೇಟಿಗೆ ಸಿಎಂ ತೀರ್ಮಾನ

karnataka budget
ಕರ್ನಾಟಕ6 hours ago

karnataka Budget | ಗಂಗರ ಇತಿಹಾಸ ಅರಿಯಲು ಸಂಶೋಧನಾ ಪ್ರಾಧಿಕಾರ ರಚನೆ: ಸಿಎಂ ಬಸವರಾಜ ಬೊಮ್ಮಾಯಿ

Supriya Sule Meets Amit Shah
ಕರ್ನಾಟಕ6 hours ago

Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್‌ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?

ಪ್ರಮುಖ ಸುದ್ದಿ7 hours ago

ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ

ತುಮಕೂರು ಜನಸಂಕಲ್ಪ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ತಿರುಚುವಿಕೆ ಪ್ರಕರಣ
ಕರ್ನಾಟಕ7 hours ago

Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯ ಆಹ್ವಾನ

Woman Officers In Indian Army
ದೇಶ8 hours ago

Women Officers In Army | ಸೇನೆಯಲ್ಲಿ ಸ್ತ್ರೀಯರಿಗಿಲ್ಲ ಆದ್ಯತೆ, ಸುಪ್ರೀಂ ಕೋರ್ಟ್‌ ತೀವ್ರ ತರಾಟೆ, ಸುಧಾರಣೆಗೆ ಆಗ್ರಹ

7th Pay Commission
ನೌಕರರ ಕಾರ್ನರ್1 month ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Teacher Transfer
ನೌಕರರ ಕಾರ್ನರ್2 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ1 month ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

horoscope today
ಪ್ರಮುಖ ಸುದ್ದಿ4 months ago

Horoscope Today | ದ್ವಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

7th Pay Commission
ನೌಕರರ ಕಾರ್ನರ್4 weeks ago

7th Pay Commission | 7ನೇ ವೇತನ ಆಯೋಗ ರಚನೆ; ಶಿಫಾರಸನ್ನು ನಾವೇ ಜಾರಿಗೆ ತರುತ್ತೇವೆ ಎಂದ ಸಿಎಂ

suvachana featured image
ಸುವಚನ18 mins ago

ದಿನಕ್ಕೊಂದು ಸುವಚನ, ಬದುಕಿನಲ್ಲಿ ಅಳವಡಿಸಿಕೊಳ್ಳೋಣ

graduate teacher promotion
ನೌಕರರ ಕಾರ್ನರ್1 month ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ

Hariprakash Konemane
ಪ್ರಮುಖ ಸುದ್ದಿ5 months ago

ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು

wife finds out that husband
ವೈರಲ್ ನ್ಯೂಸ್3 months ago

ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

Rain News
ಕರ್ನಾಟಕ2 months ago

Rain News | ರಾಜ್ಯದಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

Anjanadri Hill ರಾಜ್ಯಪಾಲ
ಕರ್ನಾಟಕ14 hours ago

Anjanadri Hill | ಧರ್ಮ ಸಹಿಷ್ಣುತೆಗೆ ಸಾಕ್ಷಿಯಾದ ಅಂಜನಾದ್ರಿ; ಮುಸ್ಲಿಂ ಕುಟುಂಬದಿಂದ ಹನುಮನಿಗೆ ವಿಶೇಷ ಪೂಜೆ

collage dance ಮುಸ್ಲಿಂ ವಿದ್ಯಾರ್ಥಿಗಳಿಂದ ಬುರ್ಖಾ ಹಾಕಿ ಡ್ಯಾನ್ಸ್‌
ಕರ್ನಾಟಕ19 hours ago

Item Song | ಬುರ್ಖಾ ಧರಿಸಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಮುಸ್ಲಿಂ ಯುವಕರು; ಕಾಲೇಜಿಂದ ನಾಲ್ವರು ಸಸ್ಪೆಂಡ್

Actress Haripriya
ಸಿನಿಮಾ3 days ago

Actress Haripriya | ನಾಯಿ ಮರಿ ತಂದಿತ್ತಂತೆ ಪ್ರೀತಿಯ ಸಂದೇಶ: ʻಸಿಂಹಪ್ರಿಯಾʼ ಕ್ಯೂಟ್‌ ಲವ್‌ ಸ್ಟೋರಿ ಏನು? ವಿಡಿಯೊ ವೈರಲ್‌!

Hanuman sankirtan yatra
ಕರ್ನಾಟಕ6 days ago

Hanuman sankirtan yatra | ಜಾಮಿಯಾ ಮಸೀದಿ ಜಾಗ ನಮ್ಮದು ಎಂದು ನುಗ್ಗಲು ಮಾಲಾಧಾರಿಗಳ ಯತ್ನ; ಶ್ರೀರಂಗಪಟ್ಟಣ ಉದ್ವಿಗ್ನ

Shivrajkumar
ಸಿನಿಮಾ6 days ago

Shivrajkumar | ಶಿವರಾಜ್‌ಕುಮಾರ್‌ ಅಭಿನಯದ ʻವೇದʼ ಟೀಸರ್ ರಿಲೀಸ್

Ranveer Singh (circus trailer out)
ಬಾಲಿವುಡ್1 week ago

Ranveer Singh | ರಣವೀರ್‌ ಸಿಂಗ್‌ ನಟನೆಯ ʻಸರ್ಕಸ್‌ʼ ಟ್ರೈಲರ್‌ ಔಟ್‌: ಸಖತ್‌ ಸ್ಟೆಪ್ಸ್‌ ಹಾಕಿದ ದೀಪಿಕಾ ಪಡುಕೋಣೆ!

ಕರ್ನಾಟಕ2 weeks ago

Elephant attack | ಚಿಕ್ಕಮಗಳೂರಲ್ಲಿ ಆಪರೇಷನ್‌ ಎಲಿಫೆಂಟ್; ಮೂರರಲ್ಲಿ ಒಂದು ಕಾಡಾನೆ ಸೆರೆ‌

ಕನ್ನಡ ಧ್ವಜ
ಕನ್ನಡ ರಾಜ್ಯೋತ್ಸವ2 weeks ago

Kannada Flag | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ರಾರಾಜಿಸಿದ ಕನ್ನಡ ಬಾವುಟ; ಮಗುವಿನ ಕಾಲಿಗೆ ನಮಸ್ಕರಿಸಿದ ಆನಂದ್‌ ಸಿಂಗ್‌

Operation Leopard
ಕರ್ನಾಟಕ2 weeks ago

Operation Leopard | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ; ಮರಿ ಚಿರತೆ ಜತೆ ಸೆಲ್ಫಿ

Nandamuri Balakrishna
ಟಾಲಿವುಡ್2 weeks ago

Nandamuri Balakrishna | ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

ಟ್ರೆಂಡಿಂಗ್‌

ಕಾಪಿರೈಟ್ © 2022 ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅವರಿಂದ ಕಸ್ಟಮೈಸ್ ಮಾಡಲಾಗಿದೆ

error: Content is protected !!