Ganesh Chaturthi 2022 | ತತ್ವಮಯನಾದ ದೇವ ಗಣಪತಿ - Vistara News

ಗಣೇಶ ಚತುರ್ಥಿ

Ganesh Chaturthi 2022 | ತತ್ವಮಯನಾದ ದೇವ ಗಣಪತಿ

ಗಣಪತಿಯ ಆಕಾರ ವಿಚಿತ್ರವಾಗಿದ್ದರೂ ಆತನ ರೂಪವು ವ್ಯಕ್ತಪಡಿಸುವ ತತ್ವಕ್ಕೆ ಸಮವಾದುದು ಯಾವುದೂ ಇಲ್ಲ. ಗಣಪತಿ ಹಬ್ಬದ (Ganesh Chaturthi 2022) ಸಂದರ್ಭದಲ್ಲಿ ಆತನ ನಾಮ, ರೂಪಗಳೆಲ್ಲವನ್ನೂ ತಾತ್ವಿಕವಾಗಿ ತಿಳಿಯೋಣ.

VISTARANEWS.COM


on

Ganesh Chaturthi 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಲೇಖನವನ್ನು ಇಲ್ಲಿ ಕೇಳಿ

ಡಾ. ಗಣಪತಿ ಆರ್. ಭಟ್
ಗಣಪತಿ, ವಿಘ್ನನಿವಾರಕ, ಆದಿಪೂಜಿತ ಹೀಗೆ ಅನೇಕ ಹೆಸರುಗಳಿಂದ ಸ್ತುತಿಸಲ್ಪಡುವ ಏಕದಂತನ ಹಬ್ಬ ಬಂದಿದೆ (Ganesh Chaturthi 2022). ಸಮಸ್ತವನ್ನೂ ಮುನ್ನಡೆಸುವ ವಿನಾಯಕ, ವಿಘ್ನಗಳನ್ನು ನಿವಾರಿಸುವ ವಿಘ್ನರಾಜ, ಗಂಗೆ, ಪಾರ್ವತಿಯರಿಬ್ಬರ ಪ್ರೇಮವ ಪಡೆದ ದ್ವೈಮಾತುರ, ಶಿವಗಣಗಳ ಒಡೆಯ ಗಣಾಧಿಪ… ಹೇಗೆ ನಾನಾ ಕಾರಣಗಳಿಂದ ನಾನಾ ಹೆಸರುಗಳನ್ನು ಪಡೆದ ಗಣಪತಿಯು ತನ್ನ ತಂದೆ, ತಾಯಿಯರಲ್ಲೇ ಜಗತ್ತನ್ನು ಕಂಡ ಮಹಾನ್ ಮೇಧಾವಿ. ಮೂಷಕಾಸುರ, ಅನಲಾಸುರ, ಗಜಮೂಕಾಸುರರನ್ನು ಸಂಹರಿಸಿದ ಪರಾಕ್ರಮಿ ಕೂಡ. ಭಾದ್ರಪದ ಮಾಸದ ಶುಕ್ಲ ಚೌತಿಯಂದು ಮನೆ ಮನೆಯ ದೇವರ ಪೀಠವನ್ನು, ಮಂಟಪವನ್ನು ಅಲಂಕರಿಸುವ ಗಣೇಶನು ತನ್ನ ಆಕಾರ ಮತ್ತು ತತ್ವಗಳಿಂದ ಬಲು ಆಕರ್ಷಕನೂ ಹೌದು.

ಸಂಕಷ್ಟಹರ ಗಣಪತಿ
ಗಣಪತಿಯು ಸಂಕಷ್ಟಹರನೆಂದೇ ಪ್ರಸಿದ್ಧ. ನಮಗೇನಾದರೂ ತೊಂದರೆ, ಆತಂಕಗಳು ಎದುರಾದರೆ ವಿಘ್ನೇಶ್ವರನನ್ನು ಮರೆಯದೇ ಮೊರೆಹೋಗುತ್ತೇವೆ ತಾನೆ? ಆತನ ಸನ್ನಿಧಿಯಲ್ಲಿ ನಮ್ಮ ಸಂಕಟವನ್ನು ಹೇಳಿಕೊಂಡರೆ ಅದನೆಲ್ಲ ಆತ ಪರಿಹರಿಸಿಯೇ ಸಿದ್ಧನೆಂಬುದು ನಮ್ಮೆಲ್ಲರ ದೃಢ ನಂಬಿಕೆ. ನಮ್ಮಂಥ ಸಾಮಾನ್ಯರಾದ ಮನುಷ್ಯರಿಗಷ್ಟೇ ಅಲ್ಲ, ದೇವಾನುದೇವತೆಗಳಿಗೂ ಅಭಯ ನೀಡಿದ ಅಭಯದಾಯಕ ಆತನೆಂಬುದು ನಿಮಗೆ ಗೊತ್ತೆ?

ಹಿಂದೆ ಬ್ರಹ್ಮಾಂಡವನ್ನು ಸೃಷ್ಟಿಸುವದಕ್ಕೂ ಮೊದಲು ಬ್ರಹ್ಮದೇವನು ಧ್ಯಾನಾವಸ್ಥೆಯಲ್ಲಿ ಕುಳಿತುಕೊಂಡಿದ್ದ. ಆಗ ತನ್ನ ಕಾರ್ಯಕ್ಕೆ ವಿಘ್ನ ಎದುರಾಗುವುದೇನೋ ಎಂಬ ಆತಂಕ ಬ್ರಹ್ಮನಲ್ಲಿತ್ತು. ಆ ಸಮಯದಲ್ಲಿ ಓಂಕಾರರೂಪದಲ್ಲಿ ಕಾಣಿಸಿಕೊಂಡ ಗಣಪತಿಯು ಸೃಷ್ಟಿಕಾರ್ಯದಲ್ಲಿ ಯಾವ ತೊಂದರೆಯೂ ಬರುವುದಿಲ್ಲವಂದು ಬ್ರಹ್ಮನಿಗೆ ಅಭಯವನ್ನು ನೀಡಿದ. ಆ ಪ್ರಕಾರ ಯಾವ ತೊಂದರೆಯೂ ಬಾರದಂತೆ ನೋಡಿಕೊಂಡು ‘ಸಂಕಷ್ಟಹರ’ ಎನಿಸಿಕೊಡ. ಸೃಷ್ಟಿಗೂ ಮೊದಲೇ ಇದ್ದ ಈ ಆದಿದೇವ ಅನವರತವೂ ತನ್ನ ಭಕ್ತರ ವಿಘ್ನಬಾಧೆಗಳನ್ನು ನಿವಾರಿಸಿ ವಿಘ್ನೇಶ್ವರನೆನಿಸಿದ.

ಅನಾದಿ, ಅನಂತ, ವಿಶ್ವವ್ಯಾಪಿ
ಗಣಪತಿಯು ಭಾರತವಷ್ಟೇ ಅಲ್ಲದೆ, ಕಾಂಬೋಡಿಯಾ, ಜಾವಾ, ಚೀನಾ, ಶ್ರೀಲಂಕಾ ಹೀಗೆ ಏಷ್ಯಾಖಂಡದ ನಾನಾ ಭಾಗಗಳಲ್ಲಿ ಬಹಳ ಹಿಂದಿನಿಂದಲೂ ಪೂಜಿಸಲ್ಪಡುತ್ತಿರುವ ದೈವ. ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯವೆನಿದ ಋಗ್ವೇದಲ್ಲಿ ಆತನ ಕುರಿತಾದ ಮಂತ್ರಗಳು ಸಿಗುತ್ತದೆಯೆಂಬುದು ಗಣಪತಿಯ ಪ್ರಾಚೀನತೆಯನ್ನು ತಿಳಿಸಿದರೆ, ವಾಜಸನೇಯೀ ಸಂಹಿತೆ, ಬ್ರಹ್ಮಾಂಡಾದಿ ಪ್ರಮುಖ ಪುರಾಣಗಳು, ಯಾಜ್ಞ್ಯವಲ್ಕ್ಯಾದಿ ಸ್ಮೃತಿಗ್ರಂಥಗಳು ಗಣಪತಿಯ ವಿಷಯವನ್ನು ಪ್ರಸ್ತಾಪಿಸಿ ಗಣಪತಿಯ ವಿಷಯವ್ಯಾಪ್ತಿಯ ವೈಶಾಲ್ಯವನ್ನು ಹೇಳುತ್ತವೆ. ಭಾರತೀಯ ಕಾವ್ಯ, ಶಾಸ್ತ್ರ, ಕಲೆಗಳೆಲ್ಲವೂ ಗಣಪತಿಯನ್ನು ಆವಾಹಿಸಿ ಆತನ ತತ್ವದ ನಿರಂತರತೆಯನ್ನು ಹೇಳುತ್ತವೆ.

ಇನ್ನು ಆತನ ರೂಪದ ವಿಷಯಕ್ಕೆ ಬಂದರಂತೂ ಹೇರಂಭ ಗಣಪತಿ, ಹರಿದ್ರಾಗಣಪತಿ, ಶಕ್ತಿಗಣಪತಿ, ದುಂಡಿ ಗಣಪತಿ, ವಿಶ್ವಕ್ಸೇನ ಗಣಪತಿ ಇತ್ಯಾದಿಯಿಂದ ಹಿಡಿದು ನಾಟ್ಯಗಣಪತಿ, ದೃಷ್ಟಿಗಣಪತಿಯವರೆಗೆ ಅಂತ್ಯವೇ ಇಲ್ಲದ ನಾನಾ ರೂಪಗಳ ದೊಡ್ಡಪಟ್ಟಿಯನ್ನೇ ಮಾಡಬಹುದು. ಅನಾದಿಕಾಲದಿಂದಲೂ ಗಣಪತಿಯ ಕುರಿತಾದ ಚಿಂತನೆ ನಮ್ಮಲ್ಲಿ ಎಷ್ಟು ವಿಶಾಲವಾಗಿ ನೆಡೆದು ಬಂದಿದೆ ಎಂದು ತಿಳಿಯಲು ಆತನ ಅಸಂಖ್ಯ ನಾಮ ಮತ್ತು ರೂಪಗಳನ್ನು ಗಮನಿಸಿದರೆ ಸಾಕು.

ಕಥೆಗಳ ಹಿಂದಿದೆ ಜೀವನ ಸತ್ಯ
ಹುಟ್ಟುವಾಗ ಇದ್ದಿದ್ದು ಮನುಷ್ಯನ ಮುಖವೇ ಆದರೂ ನಂತರ ತಲೆ ಕಳೆದುಕೊಂಡ ಈತನಿಗೆ ಆನೆಯ ತಲೆಯನ್ನು ಕತ್ತರಿಸಿ ಜೋಡಿಸಲಾಯಿತೆಂಬ ಬಗೆ ಬಗೆಯ ಕಥೆಗಳು ಪುರಾಣಗಳಲ್ಲಿವೆ. ಯಾವುದೇ ಪೌರಾಣಿಕ ಕಥೆಯ ಹಿಂದಿರುವ ತತ್ವವನ್ನು ಅರಿತಾಗ ಮಾತ್ರವೇ ಅವುಗಳ ಮಹತ್ವವೂ ಗೊತ್ತಾಗುವುದು. ತಂದೆಯಾದ ಶಿವನೇ ಮಗನ ತಲೆಯನ್ನು ಕಡಿದನೆಂದರೆ ಅರ್ಥವೇನು? ತಂದೆಯೆಂದರೆ ಮಕ್ಕಳಿಗೆ ಸಂಸ್ಕಾರ ನೀಡುವ ಗುರುವೂ ಹೌದು. ಮಕ್ಕಳ ಬುದ್ಧಿಗೆ ಕವಿದ ಅಜ್ಞಾನವನ್ನು, ಅಹಂಕಾರವನ್ನು ತಿಳಿಹೇಳಿ, ದಂಡಿಸಿ ಕಳೆಯಬೇಕಾದುದು ತಂದೆಯಾದವನ ಕರ್ತವ್ಯ. ಶಿವನು ಗಣಪತಿಯ ತಲೆ ಕಡಿದುದರ ಹಿಂದಿನ ತತ್ವವೂ ಅದೇ. ಹೀಗೆ ವಿನಯಶೀಲನಾದ ಗಜಮುಖನು ಅಹಂಕಾರದಿಂದ ಮೆರೆಯುವವರಾರನ್ನೂ ಸಹಿಸಿಕೊಳ್ಳಲಿಲ್ಲ ಎಂಬುದನ್ನೂ ಗಮನಿಸಬೇಕು.

ಅಹಂಕಾರದಿಂದ ಮೆರೆಯುತ್ತಿದ್ದ ರಾವಣನ ಆತ್ಮಲಿಂಗವನ್ನು ಆಜ್ಞೆ ಮೀರಿ ನೆಲಕ್ಕಿಟ್ಟು ಆತನ ಗರ್ವಭಂಗ ಮಾಡಿದ ಪ್ರಸಂಗವು ಗಣಪತಿಯ ದಿಟ್ಟತನಕ್ಕೊಂದು ಉದಾಹರಣೆ. ತನ್ನ ತಂದೆ, ತಾಯಿಯರ ಪ್ರದಕ್ಷಿಣೆ ಹಾಕಿ ಅವರಲ್ಲಿಯೇ ಜಗತ್ತನ್ನು ಕಂಡು, ಮೆಚ್ಚುಗೆಗಳಿಸಿದ ಮತ್ತು ಆದಿಪೂಜೆಯ ವರವನ್ನು ಶಿವನಿಂದ ಪಡೆದ. ಈ ಪ್ರಸಂಗವು ಮಕ್ಕಳು ತಮ್ಮ ಹೆತ್ತವರ ಬಗ್ಗೆ ತೋರಬೇಕಾದ ಗೌರವಾದರ, ಅವರಿಂದ ಪಡೆಯಬೇಕಾದ ಪ್ರಶಂಸೆ, ಅದರಿಂದಲೇ ಜೀವನದಲ್ಲಿ ಔನತ್ಯದ ಪ್ರಾಪ್ತಿ ಇವುಗಳನೆಲ್ಲ ತಿಳಿಸುವುದು.

ಎಣಿಯಿಲ್ಲದ ತತ್ವ
ಕುಬ್ಜವಾದ ದೇಹ, ಡೊಳ್ಳುಹೊಟ್ಟೆ, ಆನೆಯ ಮುಖ, ಒಂದೇ ದಂತ ಹೀಗೆ ಗಣಪತಿಯ ಆಕಾರ ವಿಚಿತ್ರವಾಗಿದ್ದರೂ ಆತನ ರೂಪವು ವ್ಯಕ್ತಪಡಿಸುವ ತತ್ವಕ್ಕೆ ಸಮವಾದುದು ಯಾವುದೂ ಇಲ್ಲ.
ಮನುಷ್ಯನ ದೇಹಕ್ಕೆ, ಆನೆಯ ತಲೆಯನ್ನು ಜೋಡಿಸಿರುವುದರಿಂದ ಈತನಿಗೆ ದೇಹಕ್ಕಿಂತಲೂ ತಲೆಯೇ ದೊಡ್ಡದು. ದೇಹದಲ್ಲಿ ಉತ್ತಮಾಂಗವೆನಿಸಿದ ಶಿರಸ್ಸಿನ ಪ್ರಾಧಾನ್ಯತೆಯನ್ನು ಇದು ತಿಳಿಸುತ್ತದೆ. ಎಷ್ಟೆಂದರೂ ಜಗದ್ವಂದ್ಯರಾದ ಶಿವಪಾರ್ವತಿಯರ ಬುದ್ಧಿವಂತ ಮಗನಲ್ಲವೆ? ಈತನ ತಲೆ ಬುದ್ಧಿಶಕ್ತಿಯನ್ನು ಪ್ರತಿನಿಧಿಸುತ್ತದೆಯಷ್ಟೆ. ವಿದ್ಯಾಗಣಪತಿ ಎಂತಲೂ ಕರೆಸಿಕೊಳ್ಳುವ ಈತ ಸಕಲ ವಿದ್ಯೆಗಳಿಗೆ ಅಧಿಪತಿಯೆಂಬುದನ್ನು ಮರೆಯುವಂತಿಲ್ಲ.

ನಮ್ಮ ದೇಹದ ಮೂಲಾಧಾರದಲ್ಲಿ ಕುಳಿತು ಬುದ್ಧಿಯನ್ನು ಪ್ರಚೋದಿಸುವ ಗಣಪ ನಾವು ಸದಾ ಜಾಗರೂಕರಾಗಿ ಇರುವಂತೆ ಮಾಡುತ್ತಾನೆ ಎಂಬುದು ಯೋಗಶಾಸ್ತ್ರೀಯವಾದ ನಂಬಿಕೆ. ಸಣ್ಣ ಕಣ್ಣು, ಅಗಲ ಕಿವಿಗಳು ಸೂಕ್ಷ್ಮ ಗ್ರಾಹಿತ್ವವನ್ನು ತಿಳಿಸಿದರೆ, ಆತನ ಏಕದಂತವು ನಮ್ಮೊಳಗಿನ ದ್ವಂದ್ವವನ್ನು ಮೀರಿದಾಗ ಕಾಣುವ ಅದ್ವೈತಮಯ ಜಗತ್ತನ್ನು ಸೂಚಿಸುವುದು. ಉದರವಂತೂ ಇಡೀ ಬ್ರಹ್ಮಾಂಡವನ್ನೇ ಹೋಲುತ್ತದೆ.

ಸುತ್ತಿ ಬಿಗಿದ ಹಾವು ಅದರ ರಹಸ್ಯವನ್ನು ತನ್ನೊಳಗೆ ಹಿಡಿದಿಟ್ಟಿರುವುದನ್ನು ತಿಳಿಸುತ್ತದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ರಹಸ್ಯವನ್ನು ಬೇಧಿಸಲು ಗಣಪತಿಯ ತತ್ವಾನುಸಂಧಾನ ಮಾಡಬೇಕು. ಹಾಗಾಗಿ ಗಣಪತಿಯನ್ನು ಯೋಗಿಗಳು ಪರಬ್ರಹ್ಮ ವಿಷಯವಾಗಿ ಕಂಡಿದ್ದಾರೆ. ಚತುರ್ಭುಜನಾದರೂ ಸೊಂಡಿಲು ಇರುವುದರಿಂದ ಗಣೇಶನು ಪಂಚಹಸ್ತನಾಗಿದ್ದಾನೆ. ಆಯುಧವಾಗಿ ಆತ ಧರಿಸಿರುವ ಪಾಶ ಮತ್ತು ಅಂಕುಶಗಳು ವಿಘ್ನಗಳನ್ನು ನಿವಾರಿಸಿ, ಸನ್ಮಾರ್ಗದಲ್ಲಿ ನಮ್ಮನ್ನು ಕೊಂಡೊಯ್ಯುವದಕ್ಕಾಗಿಯೇ ಇವೆ.

Ganesh Chaturthi 2022
Ganesh Chaturthi 2022

ಗಣಪತಿಯ ಕೈಯಲ್ಲಿರುವ ಮೋದಕವು ಕೇವಲ ಭಕ್ಷ್ಯವಲ್ಲ. ಸಾಧಕರಿಗೆ ಮುಕ್ತಿಯಿಂದ ಸಿಗುವ ನಿತ್ಯವಾದ ಸಂತಸವನ್ನು ಸೂಚಿಸುತ್ತದೆ ಮೋದಕ. ಅದಕ್ಕಾಗಿಯೇ ಶಂಕರಾಚಾರ್ಯರು “ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಮ್” ಎಂಬುದಾಗಿ ಸ್ತುತಿಸಿದ್ದಾರೆ.

ಗಣಪತಿಯ ಪೂಜೆಗೆ ಸಲ್ಲುವ ಕೆಂಪುಪುಷ್ಪಗಳು ಅದ್ವೈತಾದಿಗಳಲ್ಲಿ ಹೇಳಿರುವ ಜಾಗೃತಾವಸ್ಥೆಯನ್ನು ಹೇಳಿದರೆ, ದೂರ್ವಾಂಕುರವು ಮತ್ತೆ ಮತ್ತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಜಿಜ್ಞಾಸೆಯನ್ನು ಹೇಳುತ್ತದೆ.

ಬ್ರಹ್ಮಚಾರಿ ಈ ಗಣೇಶ
ಗಣೇಶನು ಬ್ರಹ್ಮಚಾರಿಯೆಂಬುದು ನಿಸ್ಸಂಶಯವಾದ ವಿಚಾರ. ಆದರೂ ಸಿದ್ಧಿ ಬುದ್ಧಿಯರ ಕಾಂತ ಈತನೆಂದು ಹೇಳುವುದು ಕೇವಲ ತಾತ್ವಿಕವಾಗಿಯಷ್ಟೆ. ಅಣಿಮಾ, ಮಹಿಮಾ ಇತ್ಯಾದಿ ಅಷ್ಟಸಿದ್ಧಿಗಳನ್ನು ಯೋಗಿಗಳಿಗೆ ಕರುಣಿಸುವವ ಈತ. ಇನ್ನು ಬುದ್ಧಿಯೂ ಕೂಡ ಈ ಮೊದಲೇ ವಿವರಿಸಿದಂತೆ ಗಣಪತಿಯ ಅಧೀನವಷ್ಟೆ. ಹೀಗೆ ಸಿದ್ಧಿ, ಬುದ್ಧಿಗಳೆರಡೂ ಆತನ ಜೊತೆಗೇ ಇರುವ ಕಾರಣದಿಂದಷ್ಟೆ ಅವೆರಡೂ ಆತನ ಪತ್ನಿಯರಿದ್ದಂತೆ ಎಂದು ಭಾವಿಸಿರಬೇಕು.

ಕೃಷಿಕರ ದೇವತೆ
ಕೃಷಿಪ್ರಧಾನವಾದ ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ಕೃಷಿಕರ ಆರಾಧ್ಯದೈವವಾಗಿಯೂ ಸಲ್ಲಿದವ ಈ ಗಣಪತಿ. ದೊಡ್ಡ ಹೊಟ್ಟೆ ಧಾನ್ಯ ತುಂಬಿದ ಕಣಜವಾದರೆ, ಕಿವಿಯು, ಧಾನ್ಯಗಳನ್ನು ಶುಚಿಗೊಳಿಸುವ ಮೊರವಾಗಿ ಕಾಣಿಸುತ್ತದೆ. ಇಲಿಯು ಧಾನ್ಯಗಳ ತಿನ್ನುವ, ರೈತನ ವೈರಿಯಾದರೆ ಅದರ ವೈರಿ ಹಾವು ರೈತನಿಗೆ ಉಪಕಾರಿಯೇ ಸರಿ. ಕೈಯಲ್ಲಿ ಹಿಡಿದಿರುವ ಪಾಶ, ಅಂಕುಶಗಳು ಕೃಷಿಕರ ಹೈನುಗಳ ನಿಯಂತ್ರಣಕಾಕಾಗಿ ಇರುವವಷ್ಟೆ. ಮೃಣ್ಮಯವಾದ ಮೂರ್ತಿಯೂ ಕೂಡ ರೈತನಿಗಿರಬೇಕಾದ ಮಣ್ಣಿನ ಕುರಿತಾದ ಪ್ರಜ್ಞೆಯನ್ನೇ ತಿಳಿಸುತ್ತದೆ.

‘ತ್ವಂ ಭೂಮಿರಾಪೋsನಿಲೋನಲಃ’ ಎಂಬುದಾಗಿ ಪಂಚಭೂತಗಳನ್ನೂ ವ್ಯಾಪಿಸಿದ ಗಣಪತಿಯೇ ಪರಬ್ರಹ್ಮನೆಂದು ಗಣಪತಿ ಅಥರ್ವಶೀರ್ಷಮಂತ್ರವು ನಮಗೆ ತಿಳಿಸುತ್ತದೆ. ಇಂಥಹ ಪ್ರಕೃತಿಸ್ವರೂಪನಾದ ಗಣಪತಿಯ ವಿಗ್ರಹವನ್ನು ನೈಸರ್ಗಿಕ ವಸ್ತುಗಳಿಂದಲೇ ಮಾಡಿ ಪೂಜಿಸಬೇಕು.

ಗಣಪತಿಯ ನಾಮ, ರೂಪಗಳೆಲ್ಲವನ್ನೂ ತಾತ್ವಿಕವಾಗಿ ತಿಳಿದು ಗಣೇಶ ಹಬ್ಬವನ್ನು ಆಚರಿಸಿದರೆ ಆಚರಣೆ ಹೆಚ್ಚು ಸೂಕ್ತವೂ ಫಲಪ್ರದವಾಗಿಯೂ ಇರುವುದು.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ಇದನ್ನೂ ಓದಿ| ಗಣಪತಿ ಬಪ್ಪಾ ಮೋರ‍್ಯಾ ಎಂದರೇನು ಗೊತ್ತಾ? ಈ ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Ganesh Fest 2024 : ಯಡವಟ್ಟು ಆಯ್ತು ತಲೆ ಕೆಟ್ಟು ಹೋಯ್ತು; 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು!

Ganesh Fest 2024: ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದರು. ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿ, ಯಡವಟ್ಟು ಮಾಡಿಕೊಂಡಿದ್ದರು.

VISTARANEWS.COM


on

By

Youth immerse Ganesh with 65 grams of gold chain
Koo

ಬೆಂಗಳೂರು: ಆ ಯುವಕರಿಗೆ ಒಂದು ಕ್ಷಣ ಹೋದ ಜೀವ ವಾಪಸ್‌ ಬಂದಿತ್ತು. ಒಂದು ಸಣ್ಣ ಯಡವಟ್ಟಿನಿಂದ ಇಡೀ ರಾತ್ರಿ ಯುವಕರ ತಲೆ ಕೆಟ್ಟು ಹೋಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಯ ಜೋಶ್‌ನಲ್ಲಿ ಯುವಕರು ಯಡವಟ್ಟು ಮಾಡಿಕೊಂಡಿದ್ದರು. ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದರು. ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಬೆಂಗಳೂರಿನ ಮಾಗಡಿರೋಡ್‌ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ಘಟನೆ ನಡೆದಿದೆ.

ಏರಿಯಾದಲ್ಲಿ ಮನೆಯಲ್ಲಿಟ್ಟ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿದೆ. ಎದ್ದನೋ ಬಿದ್ದನೋ ಓಡಿದ ಯುವಕರು ತಕ್ಷಣ ಟ್ರಕ್‌ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.

Youth immerse Ganesh with 65 grams of gold chain
Youth immerse Ganesh with 65 grams of gold chain

ಈ ವೇಳೆ ಟ್ರಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ‌ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ಸಿಕ್ಕಿದೆ. ಚಿನ್ನದ ಸರ ಕಂಡು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು

Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

VISTARANEWS.COM


on

By

nishal tej
ಮೃತ ಬಾಲಕ ನಿಶಾಲ್‌ ತೇಜ್
Koo

ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.

ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್‌ ತೇಜ್‌ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು

ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.

ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್‌ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

By

Food Poisoning
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
Koo

ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.

ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಗಣೇಶ ಚತುರ್ಥಿ

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.

VISTARANEWS.COM


on

By

Ganesh Chaturthi Vehicular traffic on this route to be restricted tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ

ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ

1) ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್‌ ಮನೆ ಜಂಕ್ಷನ್‌, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

  1. ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್‌ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  2. ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  3. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್‌ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.

ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್

‌ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್‌ ಆಗಲಿದೆ.
-ಕೆನ್ಸಿಂಗ್‌ಟನ್‌ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Dina Bhavishya
ಭವಿಷ್ಯ10 ಗಂಟೆಗಳು ago

Dina Bhavishya : ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ

Dina Bhavishya
ಭವಿಷ್ಯ1 ದಿನ ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ2 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು3 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು3 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ4 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌