Hombale Films: ವರ್ಲ್ಡ್ ವೈಡ್ ನಮ್ದೇ ಹವಾ; ಹೊಂಬಾಳೆ ಫಿಲ್ಮ್ಸ್‌ಸಂಚಲನ! - Vistara News

South Cinema

Hombale Films: ವರ್ಲ್ಡ್ ವೈಡ್ ನಮ್ದೇ ಹವಾ; ಹೊಂಬಾಳೆ ಫಿಲ್ಮ್ಸ್‌ಸಂಚಲನ!

Hombale Films: ಕೋವಿಡ್ ನಂತರ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಕಾಂತಾರ ಹಾಗೂ ಕೆಜಿಎಫ್‌ 2 ನೀಡಿತ್ತು. ಇದೀಗ ಸಲಾರ್‌ ಸಿನಿಮಾ ಮೂಲಕ ಮತ್ತೆ ವಿಶ್ವಾದ್ಯಂತ ಸದ್ದು ಮಾಡಲು ತಯಾರಾಗಿ ನಿಂತಿದೆ.

VISTARANEWS.COM


on

Hombale Films next Movies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ (Hombale Films) ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ನಮ್ಮ ಹೆಮ್ಮೆಯ ಕನ್ನಡ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್‌ ವರ್ಲ್ಡ್ ವೈಡ್ ಸುದ್ದಿ ಮಾಡುತ್ತಿದೆ. ಕೋವಿಡ್ ನಂತರ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಕಾಂತಾರ ಹಾಗೂ ಕೆಜಿಎಫ್‌ 2 ನೀಡಿತ್ತು. ಇದೀಗ ಸಲಾರ್‌ ಸಿನಿಮಾ ಮೂಲಕ ಮತ್ತೆ ವಿಶ್ವಾದ್ಯಂತ ಸದ್ದು ಮಾಡಲು ತಯಾರಾಗಿ ನಿಂತಿದೆ.

ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿರುವುದು ಗೊತ್ತಿರುವ ವಿಚಾರ. ಕನ್ನಡದಲ್ಲಿ ‘ಕಾಂತಾರ’- 2, ‘ರಿಚರ್ಡ್ ಆಂಟನಿ’, ‘ಯುವ’, ‘ಧೂಮಂ’, ‘ಬಘೀರ’ ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ ಎನ್ನಲಾಗಿದೆ.

ಇತ್ತೀಚೆಗಷ್ಟೆ ‘ಧೂಮಂ’ ಸಿನಿಮಾ ಬಿಡುಗಡೆಗೊಂಡು ಸಾಕಷ್ಟು ಸದ್ದು ಮಾಡಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದರು. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಪ್ರಭಾಸ್ ನಟನೆಯ ‘ಸಲಾರ್’ ಇದೀಗ ರಿಲೀಸ್‌ ಆಗಲು ಕೇವಲ ಒಂದೇ ದಿನ ಬಾಕಿ ಇದೆ.

ದೇಶಾದ್ಯಂತ ಸಂಚಲನ ಮೂಡಿಸಿಲಿದೆ ಸಲಾರ್‌!

ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ವಿಜಯ್‌ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ʼಸಲಾರ್‌ʼ ಚಿತ್ರದ ಬಿಡುಗಡೆಯ ತಯಾರಿಯಲ್ಲಿದೆ. ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ʼಸಲಾರ್‌ʼ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಡಿಸೆಂಬರ್ 15ರಂದು ಶುರುವಾಗಿತ್ತು. ಪ್ರಭಾಸ್‌ ಚಿತ್ರ ತನ್ನ ಆರಂಭಿಕ ದಿನದಂದು 5.99 ಕೋಟಿ ರೂ. ಗಳಿಸಿದೆ. ಸಲಾರ್‌ʼ ಚಿತ್ರದ ಟಿಕೆಟ್ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ಇದು ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ; Salman Khan: ಪೋಷಕರ ಮುಂದೆಯೇ ಫೋಟೊಗ್ರಾಫರ್‌ಗಳ ಮೇಲೆ ಸಲ್ಮಾನ್‌ ಖಾನ್‌ ಗರಂ!

ಹೊಸ ಚಿತ್ರದ ಅಪ್‌ಡೇಟ್‌

ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್‌ ನೀಡಿದೆ. ಕೀರ್ತಿ ಸುರೇಶ್‌ (Keerthy Suresh) ನಟನೆಯ ʼರಘು ತಾತʼ ಚಿತ್ರವನ್ನು ಘೋಷಿಸಿದ್ದ ʼಹೊಂಬಾಳೆ ಫಿಲ್ಮ್ಸ್ʼ ಇದೀಗ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್ ʼರಘು ತಾತʼ ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಸುಮನ್‌ ಕುಮಾರ್‌ ರಚಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೀರ್ತಿ ಸುರೇಶ್‌ ನಾಯಕಿಯಾಗಿ ನಟಿಸುವ ʼರಘು ತಾತʼ ಸಿನಿಮಾ ಆರಂಭವಾದಾಗಿನಿಂದಲೂ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರದ ಸಣ್ಣ ಝಲಕ್‌ ಬಿಡುಗಡೆ ಮಾಡಿ ಚಿತ್ರತಂಡ ಕುತೂಹಲ ಮೂಡಿಸಿದೆ. ಬಹು ದಿನಗಳ ಬಳಿಕ ತೆರೆ ಮೇಲೆ ಕೀರ್ತಿ ಸುರೇಶ್‌ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಆ್ಯಕ್ಷನ್ ಪ್ಯಾಕ್ಡ್ ‘ಬಘೀರ’ ಟೀಸರ್‌ ಔಟ್‌!

ಕೆಜಿಎಫ್ ಚಾಪ್ಟರ್ 2ʼ ಮತ್ತು ʼಕಾಂತಾರʼ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ʼಬಘೀರʼ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ʼಲಕ್ಕಿʼ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ.ಬಹುನಿರೀಕ್ಷಿತ ‘ಬಘೀರ’ ಟೀಸರ್ ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಗಡ್‌ ಲುಕ್‌ನಲ್ಲಿ ಶ್ರೀ ಮುರುಳಿ ಮಿಂಚಿದ್ದಾರೆ.ಸೂರಿ ಅವರು ಯಶ್‌ ಅವರ ʼಲಕ್ಕಿ ʼ ಚಿತ್ರದ ನಂತರ ನಾಲ್ಕು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಬರುತ್ತಿದ್ದಾರೆ. ಮಫ್ತಿ, ಭರಾಟೆ, ರಥಾವರ, ಕಂಠಿ ಚಿತ್ರಗಳಲ್ಲಿ ಅಬ್ಬರಿಸಿದ ಶ್ರೀಮುರುಳಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಕ್ಷಿತ್‌ ಶೆಟ್ಟಿ ನಟನೆಯ ʻಸಪ್ತ ಸಾಗರದಾಚೆ ಎಲ್ಲೋʼ, ಗಣೇಶ್ ನಟನೆಯ “ಬಾನ ದಾರಿಯಲ್ಲಿʼ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ರುಕ್ಮಿಣಿ ವಸಂತ್ ಈಗ “ಬಘೀರʼ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

Kannada New Movie: ಕರ್ನಾಟಕ- ಕೇರಳ ಗಡಿಯ ಕಥೆ ʻಎಂಥಾ ಲೋಕವಯ್ಯʼ ಚಿತ್ರಕ್ಕೆ ಖ್ಯಾತ ಮಾಲಿವುಡ್‌ ನಿರ್ದೇಶಕ ಸಾಥ್‌

Kannda New Movie: ದಿ ಗ್ರೇಟ್ ಇಂಡಿಯನ್ ಕಿಚನ್” ಮತ್ತು ಮಮ್ಮುಟ್ಟಿ ಹಾಗೂ ಜ್ಯೋತಿಕ ಅಭಿನಯದ “ಕಾದಲ್-ದಿ ಕೋರ್” ನಂತಹ ಜನ ಮೆಚ್ಚುಗೆ ಪಡೆದ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಪ್ರಭಾವಶಾಲಿ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ನಿರ್ದೇಶಕ ಜಿಯೋ ಬೇಬಿ ಅವರು ಈ ಹೊಸ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

VISTARANEWS.COM


on

Kannada New Movie malayali director jeo baby presents sithesh c govind directs
Koo

ಬೆಂಗಳೂರು: ಪ್ರಾದೇಶಿಕ ಪ್ರತಿಭೆಗಳ (Kannda New Movie) ಅಭಿನಯದೊಂದಿಗೆ ಪ್ರತಿಭಾನ್ವಿತ ನಿರ್ದೇಶಕ ಸಿತೇಶ್ ಸಿ ಗೋವಿಂದ್ ನಿರ್ದೇಶನದ “ಇದು ಎಂಥಾ ಲೋಕವಯ್ಯ” ಕನ್ನಡ ಚಲನಚಿತ್ರವನ್ನು ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿಯವರು ಅರ್ಪಿಸುತ್ತಿದ್ದಾರೆ. ಈ ಚಿತ್ರವು ಒಂದು ಹೊಸತನದ ಮತ್ತು ವಿಶಿಷ್ಟ ರೀತಿಯ ಸಿನಿಮಾ ಅನುಭವವನ್ನು ನೀಡುವ ಭರವಸೆಯೊಂದಿಗೆ ಮೂಡಿಬಂದಿದೆ.

“ದಿ ಗ್ರೇಟ್ ಇಂಡಿಯನ್ ಕಿಚನ್” ಮತ್ತು ಮಮ್ಮುಟ್ಟಿ ಹಾಗೂ ಜ್ಯೋತಿಕ ಅಭಿನಯದ “ಕಾದಲ್-ದಿ ಕೋರ್” ನಂತಹ ಜನ ಮೆಚ್ಚುಗೆ ಪಡೆದ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಪ್ರಭಾವಶಾಲಿ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ನಿರ್ದೇಶಕ ಜಿಯೋ ಬೇಬಿ ಅವರು ಈ ಹೊಸ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

“ಇದು ಎಂಥಾ ಲೋಕವಯ್ಯ” ಚಿತ್ರವನ್ನು ಪ್ರಸ್ತುತಪಡಿಸುವ ಅವರ ನಿರ್ಧಾರವು ಭಾರತದಲ್ಲಿನ ವಿವಿಧ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ನಡುವೆ ಬೆಳೆಯುತ್ತಿರುವ ಸಹಯೋಗತೆಯನ್ನು ಪ್ರದರ್ಶಿಸುತ್ತದೆ.
“ಇದು ಎಂಥಾ ಲೋಕವಯ್ಯ” ಒಂದು ಸಾಮಾಜಿಕ ವಿಡಂಬನಾತ್ಮಕ ಚಲನಚಿತ್ರವಾಗಿದ್ದು, ಇದು ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯಾಗಿದೆ.

ಚಲನಚಿತ್ರವು ಎರಡು ದಿನಗಳಲ್ಲಿ ನಡೆಯುವ ಘಟನೆಗಳೊಂದಿಗೆ ತೆರೆದುಕೊಳ್ಳುತ್ತದೆ, ಇಲ್ಲಿನ ಪಾತ್ರಗಳ ಜೀವನದಲ್ಲಿ ಉಂಟಾಗುವ ಕೆಲವು ಆಳವಾದ ಬದಲಾವಣೆಗಳಿಗೆ ಕಾರಣವಾಗುವ ಘಟನೆಗಳು ಈ ಚಿತ್ರದಲ್ಲಿ ಹೊಂದಿರುತ್ತದೆ.
ಚಿತ್ರದಲ್ಲಿ ಕನ್ನಡ, ಮಲಯಾಳಂ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ವಿಶಿಷ್ಟಪೂರ್ಣ ಸಮ್ಮೇಳನವಾಗಿದೆ. ಇದು ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಕೂಡಾ ಪ್ರತಿಬಿಂಬಿಸುತ್ತದೆ. ಚಿತ್ರದ ಹಾಡುಗಳು ಸಹ ಮಿಶ್ರ ಭಾಷಾ ಛಾಯೆಗಳನ್ನು ಹೊಂದಿದ್ದು, ಚಿತ್ರದ ಮೆರುಗು ಮತ್ತು ಆಕರ್ಷಣೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ಈ ಅಪರೂಪದ ಹೈಪರ್‌ಲಿಂಕ್ ಚಿತ್ರವು ಒಂದು ಕುತೂಹಲಕಾರಿ ಘಟನೆ ಕೆಲವು ಕುಟುಂಬಗಳ ಮಧ್ಯದಲ್ಲಿ ಸಂಭವಿಸುವುದರದೊಂದಿಗೆ ಪ್ರಾರಂಭವಾಗುತ್ತದೆ, ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ಎತ್ತಿತೋರಿಸುತ್ತದೆ. ಮತ್ತು ಕೆಲವು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ. ಸಿತೇಶ್ ಸಿ ಗೋವಿಂದ್ ಅವರು ಕರ್ನಾಟಕ-ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ವ್ಯಾಖ್ಯಾನವನ್ನು ತಿಳಿಯಾದ ಹಾಸ್ಯದೊಂದಿಗೆ ಸಮತೋಲನಗೊಳಿಸಿ ಕಥೆಯನ್ನು ರಚಿಸಿದ್ದಾರೆ.

ಜಿಯೋ ಬೇಬಿ ಮತ್ತು ಸಿತೇಶ್ ಸಿ ಗೋವಿಂದ್ ನಡುವಿನ ಸಹಯೋಗವು ಚಲನಚಿತ್ರ ರಂಗದಲ್ಲಿ ಸಾಕಷ್ಟು ತರಂಗವನ್ನು ಅನ್ನು ಸೃಷ್ಟಿಸಿದೆ. ಜಿಯೋ ಬೇಬಿ ಅವರ ಈ ಒಂದು ಒಳಗೊಳ್ಳುವಿಕೆಯು ಗಮನಾರ್ಹವಾದ ಅನುಮೋದನೆಯಾಗಿ ಕಂಡುಬರುತ್ತದೆ, ಇದು ವ್ಯಾಪಕವಾಗಿ ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಕನ್ನಡ-ಮಾತನಾಡುವ ಪ್ರದೇಶಗಳನ್ನು ಮೀರಿ ಚಿತ್ರದ ಜನಪ್ರಿಯತೆಯನ್ನು ಹಾಗೂ ಗುರುತಿಸುವಿಕೆಯನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿನ ಮಟ್ಟಿಗೆ ಇರುತ್ತದೆ.

“ಇದು ಎಂಥಾ ಲೋಕವಯ್ಯ” ಆಗಸ್ಟ್ 9, 2024 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ನಿರೀಕ್ಷೆಯನ್ನು ಹೆಚ್ಚಿಸಿದಂತೆ, ಚಲನಚಿತ್ರವು ಒಂದು ಹೆಗ್ಗುರುತನ್ನೂ ಮೂಡಿಸಲು ಸಜ್ಜಾಗಿದೆ. ಇದು ಪ್ರಾದೇಶಿಕ ಸಿನಿಮಾ ಪ್ರತಿಭೆಗಳ ಸಾಮರಸ್ಯದ ಮಿಶ್ರಣವನ್ನು ತೋರಿಸುತ್ತದೆ. ಮತ್ತು ಎಲ್ಲರಿಗೂ ಮನರಂಜನೆಯ ಮತ್ತು ಪ್ರಬುದ್ಧವಾದ ಅನುಭವವನ್ನು ನೀಡುತ್ತದೆ.

Continue Reading

ಟಾಲಿವುಡ್

Actor Naresh: ನನ್ನ ಬೇಬಿಯನ್ನು ದಯವಿಟ್ಟು ಹುಡುಕಿಕೊಡಿ ಎಂದು ಗಳಗಳನೇ ಅತ್ತ ನಟ ನರೇಶ್‌!

Actor Naresh: ಇದೀಗ ನಟ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ʻಬೇಬಿ ಎಲ್ಲೋ ಕಾಣೆಯಾಗಿದೆ. ದಯವಿಟ್ಟು ಹುಡುಕಿಕೊಡಿʼ ಎಂದು ಕಣ್ಣೀರಾಗಿದ್ದಾರೆ.

VISTARANEWS.COM


on

Actor Naresh Shares Emotional Video About His Baby And Taged Director Nag Ashwin
Koo

ಬೆಂಗಳೂರು: ನಟ ನರೇಶ್ (Actor Naresh) ಅವರು ಸಿನಿಮಾಗಳಲ್ಲದೆ ವೈಯಕ್ತಿಕ ಜೀವನ ವಿಚಾರವಾಗಿಯೂ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಪವಿತ್ರಾ ಲೋಕೇಶ್‌ ವಿಚಾರವಾಗಿಯೂ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದರು. ಇದೀಗ ನಟ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ʻಬೇಬಿ ಎಲ್ಲೋ ಕಾಣೆಯಾಗಿದೆ. ದಯವಿಟ್ಟು ಹುಡುಕಿಕೊಡಿʼ ಎಂದು ಕಣ್ಣೀರಾಗಿದ್ದಾರೆ.

ವಿಡಿಯೊದಲ್ಲಿ ಏನಿದೆ?

“ನನ್ನ ಬೇಬಿ ಎಲ್ಲೋ ಕಾಣೆಯಾಗಿದೆ. ಆ ಬೇಬಿಯನ್ನು ಒಂದೇ ಒಂದು ದಿನ ನೋಡದಿದ್ದರೂ ನಾನು ಏನನ್ನೋ ಕಳೆದುಕೊಂಡ ಭಾವ ನನ್ನನ್ನು ಕಾಡುತ್ತದೆ. ದಯಮಾಡಿ ನನ್ನ ಬೇಬಿಯನ್ನು ಹುಡುಕಿಕೊಡಿ. ಕಲ್ಕಿ 2898 AD ಸಿನಿಮಾ ಬೇರೆ ಬಿಡುಗಡೆ ಆಗಿದೆ. ನಮಗೆ ಬುಜ್ಜಿ ಗೊತ್ತು ಈ ಬೇಬಿ ಗೊತ್ತಿಲ್ಲ ಎನ್ನುತ್ತಿದ್ದಾರೆ. ನಿಮ್ಮ ಬುಜ್ಜಿಯಂತೆಯೇ ನನ್ನ ಬೇಬಿ ಕೂಡ ,ನಾಗ್ ಅಶ್ವಿನ್‌ ಅವರೇ ಹೇಗಾದರೂ ಮಾಡಿ ನಮ್ಮ ಮಗುವನ್ನು ಹುಡುಕಿಕೊಡಿ. ಯಾರಾದರೂ ನನ್ನ ಬೇಬಿ ನಿಮ್ಮ ಕಣ್ಣಿಗೆ ಬಿದ್ದರೆ ಹುಡುಕಿಕೊಡಿ ಸಾಕು” ಎಂದು ನರೇಶ್‌ ತಮ್ಮ ಎಕ್ಸ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದು, ಸದ್ಯ ಎಲ್ಲೆಡೆ ಅದು ವೈರಲ್‌ ಆಗಿದೆ.

ಅಸಲಿಗೆ ಈ ವಿಡಿಯೊ ಮಾಡಿದ್ದು ಸಿನಿಮಾ ಪ್ರಚಾರ ವಿಚಾರವಾಗಿ. ವೀರಾಂಜನೆಯಲು ವಿಹಾರಯಾತ್ರ ಎಂಬ ಹೊಸ ಸಿನಿಮಾದಲ್ಲಿ ನಟ ನರೇಶ್‌ ನಟಿಸುತ್ತಿದ್ದಾರೆ. ಇವರ ಜತೆಗೆ ಹಾಸ್ಯ ನಟ ಬ್ರಹ್ಮಾನಂದಂ ಸಹ ಜತೆಯಾಗಿದ್ದಾರೆ. ಈ ಸಿನಿಮಾದ ಬಗ್ಗೆ ಇದೀಗ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ನರೇಶ್.

ಇದನ್ನೂ ಓದಿ: Pavithra Naresh: ಒಟಿಟಿಯಲ್ಲಿ ನಾಪತ್ತೆಯಾದ ‘ಮದುವೆ’; ಗನ್ ಲೈಸೆನ್ಸ್ ಕೇಳಿದ ನರೇಶ್‌!

ನರೇಶ್‌ ಈ ರೀತಿ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವುದು ಹೊಸತೇನಲ್ಲ. ಮಲ್ಲಿ ಪೆಳ್ಳಿ ಸಿನಿಮಾದ ವೇಳೆ ಪವಿತ್ರಾ ಲೋಕೇಶ್‌ ಅವರ ಜತೆಗೆ ಮದುವೆ ಆದ ಸಿನಿಮಾದಲ್ಲಿನ ವಿಡಿಯೋವೊಂದನ್ನು ಶೇರ್‌ ಮಾಡಿ ಎಲ್ಲರಿಗೂ ಶಾಕ್‌ ನೀಡಿದ್ದರು.

ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ʻಮಳ್ಳಿಪೆಳ್ಳಿʼ ಎಂಬ ಟೈಟಲ್‌ನಡಿ ಮೇ 26ರಂದು ಬಿಡುಗಡೆಯಾಗಿತ್ತು. ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಸಿನಿಮಾ ಮಾಡಿದ್ದಾರೆ. 

Continue Reading

ಸ್ಯಾಂಡಲ್ ವುಡ್

Dhruva Sarja: ದರ್ಶನ್‌ ಪ್ರಕರಣದ ಕುರಿತು ಕೊನೆಗೂ ಪ್ರತಿಕ್ರಿಯೆ ನೀಡಿದ  ಧ್ರುವ ಸರ್ಜಾ!

Dhruva Sarja: ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಧ್ರುವಾ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು.  ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್‌ʼ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

VISTARANEWS.COM


on

Dhruva Sarja reaction about darshan isue
Koo

ಬೆಂಗಳೂರು: ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್‌ (Actor Darshan) ಹಾಗೂ ತಮ್ಮ ನಡುವಿನ ಎದ್ದು ತೋರಿದ ಮನಸ್ತಾಪದ ವಿಚಾರವನ್ನು ಧ್ರುವ ಸರ್ಜಾ (Dhruva Sarja) ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದರು. ದರ್ಶನ್ ಅವರ ಬಳಿ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದು ಹೇಳಿಕೆ ನೀಡಿದ್ದರು. ಧ್ರುವ ಅವರಿಗೆ ಈ ಹಿಂದೆ ದರ್ಶನ್‌ ಪ್ರಕರಣದ ಬಗ್ಗೆ ಕೇಳಿದಾಗ ಉತ್ತರಿಸಿರಲಿಲ್ಲ. ಇದೀಗ ಮಾಧ್ಯಮವೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಧ್ರುವ ಸರ್ಜಾ ಮಾತನಾಡಿ ʻʻಯಾರೋ ಲೋ ಆಗಿದ್ದಾರೆ, ಕುಗ್ಗಿದ್ದಾರೆ ಎಂದು ಏನೇನೋ ಮಾತನಾಡಬಾರದು. ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಕಾನೂನು ಎಲ್ಲಕ್ಕಿಂತ ದೊಡ್ಡದು. ಸುಮ್ಮನೇ ನಾವು ಏನೇನೋ ಮಾತನಾಡಬಾರದು.’ ಎಂದಿದ್ದಾರೆ.

ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಧ್ರುವಾ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು.  ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್‌ʼ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ ‘ಡಿವಿಲ್’ ಕೂಡ ಬಿಡುಗಡೆಯಾಗಲಿದೆ ಎಂದು ಘೋಷಣೆ ಆಗಿತ್ತು. ಆದರೆ ದರ್ಶನ್‌ ಜೈಲಿನಲ್ಲಿ ಇರುವುದರಿಂದ ಡೆವಿಲ್ ಈ ವರ್ಷ ಬರಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: Dhruva Sarja: 3 ವರ್ಷವಾದರೂ ʻಮಾರ್ಟಿನ್‌ʼ ಸಿನಿಮಾ ರಿಲೀಸ್‌ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?

ಧ್ರುವ ಮತ್ತು ದರ್ಶನ್ ನಡುವೆ ಇರುವ ಮನಸ್ತಾಪ ಏನು?

ಕಾವೇರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದೇ ವೇದಿಕೆಯನ್ನೇರಿದ್ದ ಸಮಯದಲ್ಲಿ ದರ್ಶನ್ ಮುಖವನ್ನ ಧ್ರುವ ಒಮ್ಮೆಯೂ ನೋಡಿರಲಿಲ್ಲ. ದರ್ಶನ್ ಬಂದಾಗ ಎಲ್ಲರೂ ಎದ್ದು ನಿಂತರೂ ಧ್ರುವ ಮಾತ್ರ ಕುರ್ಚಿಯಿಂದ ಕದಲಿರಲಿಲ್ಲ.

ಈ ಬಗ್ಗೆ ಧ್ರುವ ಮಾತನಾಡಿ ʻʻದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು. ನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸಲ್ಲೊಂದು ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲʼʼಎಂದಿದ್ದರು. ಸದ್ಯಕ್ಕೆ ಡಿಸೆಂಬರ್ ನಲ್ಲಿ ʻಡೆವಿಲ್ʼ ತೆರೆಗೆ ಬರಲು ಸಾಧ್ಯ ಇಲ್ಲ. ಹೀಗಾಗಿ ಗಲ್ಲಾಪೆಟ್ಟಿಗೆಯ ಅಖಾಡಕ್ಕೆ ಧ್ರುವ ಒಬ್ಬರೇ ಧುಮುಕಲಿದ್ದಾರೆ.

Continue Reading

ಟಾಲಿವುಡ್

Kalki 2898 AD: ಅಮಿತಾಭ್‌, ಪ್ರಭಾಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ ಕಾಂಗ್ರೆಸ್ ಮಾಜಿ ನಾಯಕ!

Kalki 2898 AD: ಚಿತ್ರದಲ್ಲಿ ದೇವರನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಹಿಂದೂ ಪುರಾಣಗಳಿಗಿಂತ ವಿಭಿನ್ನವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

VISTARANEWS.COM


on

Kalki 2898 AD makers served legal notice Kalki Dham Peethadheeshwar Acharya Pramod Krishnam
Koo

ಬೆಂಗಳೂರು: ಮಾಜಿ ಕಾಂಗ್ರೆಸ್ ನಾಯಕ ಮತ್ತು ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಹಿಂದೂ ಧಾರ್ಮಿಕ (Kalki 2898 AD) ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬ್ಲಾಕ್ ಬಸ್ಟರ್ ಚಿತ್ರ ಕಲ್ಕಿ 2898 ಚಿತ್ರದ ನಿರ್ಮಾಪಕರು ಮತ್ತು ನಟರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ದೇವರನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಹಿಂದೂ ಪುರಾಣಗಳಿಗಿಂತ ವಿಭಿನ್ನವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ʻʻ”ನಿಮ್ಮ ಚಲನಚಿತ್ರವು ಭಗವಾನ್ ಕಲ್ಕಿಯ ಪರಿಕಲ್ಪನೆಯನ್ನು ಬದಲಾಯಿಸಿರುವಂತೆ ಇದೆ, ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದ ಮತ್ತು ವಿವರಿಸಿದ ಕಾರಣಗಳಿಗಾಗಿ, ಭಗವಾನ್ ಕಲ್ಕಿಯ ಕಥೆಯ ಚಿತ್ರಣ ಮತ್ತು ಚಿತ್ರಣವು ಸಂಪೂರ್ಣವಾಗಿ ತಪ್ಪಾಗಿದೆ. ಹಾಗಾಗಿ ಈ ಪವಿತ್ರ ಗ್ರಂಥಗಳಿಗೆ ಅಗೌರವವಾಗಿದೆ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ.” ಎಂದು ನೋಟಿಸ್ ನೀಡಿದ್ದಾರೆ.

ಆಚಾರ್ಯ ಪ್ರಮೋದ್ ಕೃಷ್ಣಂ ಈ ಬಗ್ಗೆ ಮಾತನಾಡಿ “ಕಲ್ಕಿ ಅವತಾರವು ವಿಷ್ಣುವಿನ ಕೊನೆಯ ಅವತಾರವಾಗಿದೆ. ನಮ್ಮ ಹಲವಾರು ‘ಪುರಾಣ’ಗಳು ಆತನಿಗೆ ಸಮರ್ಪಿತವಾಗಿವೆ. ಪ್ರಧಾನಿ ಮೋದಿ ಅವರು ಫೆಬ್ರವರಿ 19 ರಂದು ಯುಪಿಯ ಸಂಭಾಲ್‌ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಉದ್ಘಾಟನೆ ಮಾಡಿದರು. ಅಲ್ಲಿ ಭಗವಾನ್ ಕಲ್ಕಿ ಜನಿಸಲಿದ್ದಾರೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ ಈ ಚಿತ್ರವು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆʼʼಎಂದು ಎಂದು ಮಾಜಿ ಕಾಂಗ್ರೆಸ್ ನಾಯಕ ಹೇಳಿಕೆ ನೀಡಿದರು. ಆಚಾರ್ಯ ಪ್ರಮೋದ್ ಕೃಷ್ಣಂ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಉಜ್ಜವಲ್ ಆನಂದ್ ಶರ್ಮಾ ಅವರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್‌ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್‌ ಮಾಡಿದ ಸಿನಿಮಾವಾಗಿದೆ.

Continue Reading
Advertisement
News
ದೇಶ2 hours ago

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

Mumbai Indians
ಕ್ರಿಕೆಟ್2 hours ago

Mumbai Indians : ಮುಂದಿನ ಐಪಿಎಲ್​ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​

Abhinav Bindra
ಕ್ರೀಡೆ2 hours ago

Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

BJP strongly condemns MLA Shivaram Hebbar statement about MP Vishweshwar Hegde Kageri says hariprakash konemane
ಕರ್ನಾಟಕ2 hours ago

Uttara Kannada News: ಸಂಸದ ಕಾಗೇರಿ ಬಗ್ಗೆ ಶಾಸಕ ಹೆಬ್ಬಾರ್‌ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

Chaluvadi Narayanaswamy
ಕರ್ನಾಟಕ3 hours ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ4 hours ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ4 hours ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ4 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ4 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ4 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ7 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌