ವಿಸ್ತಾರ ಸಂಪಾದಕೀಯ: ಏರೋ ಇಂಡಿಯಾ ಪ್ರದರ್ಶನ, ಆತ್ಮ ನಿರ್ಭರತೆಯ ದರ್ಶನ Vistara News

Aero India

ವಿಸ್ತಾರ ಸಂಪಾದಕೀಯ: ಏರೋ ಇಂಡಿಯಾ ಪ್ರದರ್ಶನ, ಆತ್ಮ ನಿರ್ಭರತೆಯ ದರ್ಶನ

ಏರೋ ಇಂಡಿಯಾ (aero india 2023) ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿ. ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಏರೋ ಶೋ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.

VISTARANEWS.COM


on

Aero india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಗತ್ತಿನ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ-2023ಕ್ಕೆ (2023 Aero India) ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿ. ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದ್ದು, ಇದೊಂದು ಅವಕಾಶಗಳ ವೇದಿಕೆಯಾಗಿದೆ ಎಂದಿದ್ದಾರೆ. ಏರೋ ಇಂಡಿಯಾ ಆಯೋಜನೆ ಭಾರತದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕ. ಇಷ್ಟು ದೇಶಗಳು ಭಾಗವಹಿಸುತ್ತಿರುವುದನ್ನು ನೋಡಿದರೆ, ಭಾರತದ ಕುರಿತು ವಿಶ್ವದ ವಿಶ್ವಾಸವನ್ನು ತೋರಿಸುತ್ತದೆ. ಆತ್ಮನಿರ್ಭರವಾಗುವ ಭಾರತದ ಶಕ್ತಿ ಹೀಗೇ ಮುಂದುವರಿಯಲಿ ಎಂದು ಆಶಿಸಿದ್ದಾರೆ. ಭಾರತದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಷ್ಟ್ರೀಯ- ಅಂತಾರಾಷ್ಟ್ರೀಯ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್‌ ಶೋ ಎನಿಸಿದ ಈ ಪ್ರದರ್ಶನ 1996ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಸಲದ ಏರ್‌ ಶೋ 14ನೇ ಆವೃತ್ತಿ. ಹಲವಾರು ದೇಶಗಳ ರಕ್ಷಣಾ ಸಚಿವರು, ಹಲವಾರು ವೈಮಾನಿಕ ಸಂಸ್ಥೆಗಳ ಮುಖ್ಯಸ್ಥರು ಶೋದಲ್ಲಿ ಭಾಗವಹಿಸುತ್ತಾರೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ಜನರು ವೀಕ್ಷಿಸಿದರೆ, ಅದೇ ವೇಳೆಗೆ ಉನ್ನತ ಮಟ್ಟದಲ್ಲಿ ವಿಮಾನಗಳ ಕೊಡು ಕೊಳ್ಳುವಿಕೆಯ ಮಾತುಕತೆಗಳು ನಡೆಯುತ್ತವೆ. ಹೀಗಾಗಿಯೇ ಇದು ಭಾರತದ ಶಕ್ತಿ ಪ್ರದರ್ಶನವೂ ಹೌದು, ವಾಣಿಜ್ಯ ಅವಕಾಶವೂ ಹೌದು.

ಈ ಬಾರಿ ಏರೋ ಶೋದಲ್ಲಿ 98 ದೇಶಗಳಿಂದ 809 ಕಂಪನಿಗಳು ಭಾಗಿಯಾಗಿವೆ. ಭಾರತೀಯ ಹಾಗೂ ವಿದೇಶಿ ಕಂಪನಿಗಳ ನಡುವೆ ಅನೇಕ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿದ್ದು, ಸುಮಾರು 251 ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ. ಜತೆಗೆ, ಸುಮಾರು 75 ಸಾವಿರ ಕೋಟಿ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಭಾರತವು ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್ ಕಂಪನಿಗಳಿಂದ ಸುಮಾರು 100 ಶತಕೋಟಿ ಡಾಲರ್ ವೆಚ್ಚದಲ್ಲಿ 500 ಜೆಟ್‌ಗಳನ್ನು ಖರೀದಿಸುವ ಸಾಧ್ಯತೆ ಇದೆ. ಮಹತ್ವದ ಒಂದು ಬೆಳವಣಿಗೆಯಲ್ಲಿ, ನಮ್ಮ ಸಾರ್ವಜನಿಕ ವಲಯದ ಎಚ್‌ಎಎಲ್‌ ಉತ್ಪಾದಿಸುವ ಲಘು ಯುದ್ಧ ವಿಮಾನ ತೇಜಸ್‌ ಎಂಕೆ 1ಎ ಅನ್ನು ಆಮದು ಮಾಡಿಕೊಳ್ಳಲು ಅರ್ಜೆಂಟೀನಾ ಮತ್ತು ಮಲೇಷ್ಯಾ ಸಜ್ಜಾಗಿವೆ.

ಭಾರತದ ರಕ್ಷಣಾ ಕ್ಷೇತ್ರವು ಹಿಂದೆಂದಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. ಈಗ ನೂರೈವತ್ತು ಕೋಟಿ ಡಾಲರ್‌ ಮೊತ್ತದಷ್ಟು ಇರುವ ಭಾರತದ ರಕ್ಷಣಾ ರಫ್ತು ಪ್ರಮಾಣ 2024ರ ವೇಳೆಗೆ ಐದುನೂರು ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಏರೋ ಇಂಡಿಯಾ ಒಂದು ಚಿಮ್ಮು ಹಲಗೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಖಾಸಗಿ ಕ್ಷೇತ್ರ ಹಾಗೂ ಹೂಡಿಕೆದಾರರ ಪಾತ್ರ ಮಹತ್ವದ್ದು. ಅನುಭವ, ಬೇಡಿಕೆ, ಕೌಶಲ್ಯ ಎಲ್ಲವನ್ನೂ ಹೊಂದಿರುವ ಉದ್ಯಮಗಳಿಗೆ, ಉದ್ಯೋಗಿಗಳಿಗೆ ಇದು ಸುವರ್ಣಾವಕಾಶ. ಈ ಹಿಂದೆ ಅತಿ ದೊಡ್ಡ ರಕ್ಷಣಾ ಉಪಕರಣ ಆಮದು ರಾಷ್ಟ್ರವಾಗಿದ್ದ ಭಾರತ ಈಗ ಐವತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಎಂಬುದೇ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ರಫ್ತು ಮತ್ತಷ್ಟು ಹೆಚ್ಚಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಅವಕಾಶವಿದೆ. ಇದಕ್ಕೆ ನಮ್ಮ ಹೆಮ್ಮೆಯ ಸಂಸ್ಥೆಗಳಾದ ಎಚ್‌ಎಎಲ್‌, ಡಿಆರ್‌ಡಿಒ, ಇಸ್ರೋ ಮುಂತಾದವುಗಳು ನೀಡಿದ ಕೊಡುಗೆ ಬಹಳಷ್ಟಿದೆ.

ಇದನ್ನೂ ಓದಿ : ವಿಸ್ತಾರ TOP 10 NEWS: ಐದು ದಿನದ ಏರೋ ಇಂಡಿಯಾಕ್ಕೆ ಭವ್ಯ ಚಾಲನೆಯಿಂದ, ಮಹದಾಯಿ ಕುರಿತು ಗೋವಾ ಅರ್ಜಿ ವಜಾವರೆಗಿನ ಪ್ರಮುಖ ಸುದ್ದಿಗಳಿವು

ಇತ್ತೀಚೆಗೆ ಪ್ರಧಾನಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಉದ್ಘಾಟಿಸಿದ, ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎನಿಸಿದ ಎಚ್‌ಎಎಲ್‌ ಫ್ಯಾಕ್ಟರಿಯಲ್ಲಿ 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳು ನಿರ್ಮಾಣವಾಗಲಿವೆ. ಇವು ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಹಾಗೆಯೇ ದೇಶದ ಮೊದಲ ಮೇಕ್‌ ಇನ್‌ ಇಂಡಿಯಾ ಹಗುರ ಯುದ್ಧ ವಿಮಾನ ತೇಜಸ್‌ ನಮ್ಮ ಹೆಮ್ಮೆ. ವೈಮಾನಿಕ ಕ್ಷೇತ್ರ ಭವಿಷ್ಯದ ಕ್ಷೇತ್ರ. ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ಇದರೊಂದಿಗೆ ಇದರ ಸುತ್ತಲಿನ ಇತರ ಹಲವು ವಲಯಗಳೂ ಬೆಳೆಯಲಿವೆ. ಇದು ಸ್ಟಾರ್ಟಪ್‌ಗಳಿಗೆ, ಯುವ ಉದ್ಯಮಿಗಳಿಗೆ ಹೊಸ ಆವಿಷ್ಕಾರಗಳಿಗೆ ನೆರವಾಗಲಿದೆ. ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಉದ್ಯಮಶೀಲತೆಯನ್ನೂ ಸುಗಮಗೊಳಿಸಲಾಗಿದ್ದು, ಕೆಂಪು ಪಟ್ಟಿಯ ಬದಲಿಗೆ ಕೆಂಪು ಹಾಸು ಹಾಸಲಾಗುತ್ತಿದೆ. ಸುಸ್ಥಿರವಾದ ಅಭಿವೃದ್ಧಿಗೆ ಇದು ಮೂಲವಾಗಬೇಕು. ಸ್ಥಳೀಯರಿಗೂ ಹೆಚ್ಚಿನ ಉದ್ಯೋಗ, ಕೌಶಲ ವೃದ್ಧಿಗೆ ಕಾರಣವಾಗಬೇಕು. ದೇಶದ ಲಕ್ಷ ಕೋಟಿ ಜಿಡಿಪಿ ಕನಸಿಗೆ ವೈಮಾನಿಕ ಕ್ಷೇತ್ರವೂ ಕೊಡುಗೆ ನೀಡುವಂತಾಗಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Aero India

Aero india 2023 : ರಕ್ಷಣಾ ಇಲಾಖೆಯಿಂದ 32 ಕಂಪನಿಗಳ ಜತೆ ಒಪ್ಪಂದ

ಏರೋ ಇಂಡಿಯಾದಲ್ಲಿ (Aero india 2023) ರಕ್ಷಣಾ ವಲಯಕ್ಕೆ ಅಗತ್ಯಕ್ಕೆ ತಕ್ಕ ಹಾಗೆ ಒಂಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

VISTARANEWS.COM


on

Aero India
Koo

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ (Aero india 2023) 35 ಕಂಪನಿಗಳ ಜತೆ ರಕ್ಷಣಾ ಇಲಾಖೆಯು ಒಪ್ಪಂದ ಮಾಡಿಕೊಂಡಿದೆ. ಬಂಧನ್ ಕಾರ್ಯಕ್ರಮದಡಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2,930.98 ಕೋಟಿ ರೂಪಾಯಿ ಮೊತ್ತದ ಒಪ್ಪಂದ ನಡೆದಿದೆ. ಕಾರ್ಯಕ್ರಮದಲ್ಲಿ ಒಟ್ಟು 266 ಕಂಪನಿಗಳು ಪಾಲ್ಗೊಂಡಿದ್ದವು.

ಒಪ್ಪಂದಗಳಿಗೆ ಸಹಿ ಹಾಕಿದ ಕಂಪನಿಗಳು

ಬೆಲಾಟೆಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್-630 ಕೋಟಿ, ಏಡಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್-500 ಕೋಟಿ, ಫಿಕ್ಸಲ್ ಸ್ಪೇಸ್ ಇಂಡಿಯಾ ಪ್ರೈ.ಲಿ-300 ಕೋಟಿ, ಡೈನಾಮೆಟಿಕ್ ಟೆಕ್ನಾಲಜೀಸ್-250 ಕೋಟಿ, ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ &ಏರೋಸ್ಪೇಸ್ ಟೆಕ್ನಾಲಜೀಸ್ , TESCOM-100 ಕೋಟಿ, ಡೆಲ್ಪ್ಟ್ (ಜೆ.ಕೆ.ಪೇಪರ್ ಲಿ.)-100 ಕೋಟಿ, ನೆಕ್ಸ್ಟ್ ಬಿಗ್ ಇನೋವೇಷನ್ ಲ್ಯಾಬ್ಸ್ ಲಿ.-100 ಕೋಟಿ, SASMOS HET ಟೆಕ್ನಾಲಜಿಸ್ ಲಿ.-75 ಕೋಟಿ, MS ವೇವ್ಸ್ ಮಷಿನ್-50 ಕೋಟಿ, ಭೂಮಿ ಎನ್ ಟೆಕ್ ಇಕ್ವಿಪ್ ಮೆಂಟ್ಸ್ ಪ್ರೈ.ಲಿ-50 ಕೋಟಿ, ಏರೋ ಪ್ಲಾಟಿನ್ ಟೆಕ್ನಾಲಜಿಸ್ ಪ್ರೈ.ಲಿ-30 ಕೋಟಿ, ಕಾಸ್ಟ್ ಕ್ರಾಪ್ಟ್-30 ಕೋಟಿ, ಡಕಂ ಏರೋಸ್ಪೇಸ್ ಟೆಕ್ನಾಲಜೀಸ್ ಪ್ರೈ.ಲಿ-25 ಕೋಟಿ, ಎಲ್ಡಾಸ್ ಟೆಕ್ನಾಲಜಿ-23 ಕೋಟಿ, ಟೆಕ್ಸಲ್ ಎಂಜಿನಿಯರ್ಸ್-20 ಕೋಟಿ.

ಇದನ್ನೂ ಓದಿ : Aero India 2023 : ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ತಂಡ, ನೂತನ F-35 ಯುದ್ಧ ವಿಮಾನ ಪ್ರದರ್ಶನ

ವೈಭವ್ ಎಂಟರ್ ಪ್ರೈಸಸ್-20 ಕೋಟಿ, ಹಿಮಾನ್ಸಿ ಥರ್ಮಲ್ ಸೊಲ್ಯೂಷನ್ಸ್-16.28 ಕೋಟಿ, ಎವಿಟಮ್ ಟೆಕ್ನಾಲಜೀಸ್ -16 ಕೋಟಿ, ಆರವ ಏರೋಸ್ಪೇಸ್-16 ಕೋಟಿ, SST ಕಟಿಂಗ್ ಟೂಲ್ಸ್-15 ಕೋಟಿ, ಆಲ್ಟೀಸ್ ಏರೋಸ್ಪೇಸ್ ಪ್ರೈ.ಲಿ-15 ಕೋಟಿ, ಉದಯ್ ಎಂಟರ್ ಪ್ರೈಸಸ್-15 ಕೋಟಿ, ಸೋಮಾ ಆಟೋಮೇಶನ್-12 ಕೋಟಿ, IIGP ವಾಲ್ವ್ ಟೆಕ್ನಾಲಜೀಸ್ ಪ್ರೈ.ಲಿ-12 ಕೋಟಿ, ಲವೀರಾ ಟೆಕ್ನಾಲಜಿ ಪ್ರೈ.ಲಿ-11 ಕೋಟಿ, ಗರುಡ ಏರೋಟೆಕ್-10 ಕೋಟಿ, G S ಗಿಯರ್ಸ್ ಪ್ರೈ.ಲಿ-8 ಕೋಟಿ, ಇನ್ಫಿನಿಟಿ ಏರೋಟೆಕ್-7 ಕೋಟಿ, ಡಟಾಕ್ಯೂ ಸರ್ವೀಸಸ್ ಪ್ರೈ.ಲಿ-2.70 ಕೋಟಿ, ಬುರ್ಜಿ ಏರೋಸ್ಪೇಸ್-2 ಕೋಟಿ, ಜನರಸ್ ಏರೋಸ್ಪೇಸ್ & ಇನ್ಪಾರ್ಮೇಶನ್ ಟೆಕ್ನಾಲಜಿ ಪ್ರೈ.ಲಿ-320 ಕೋಟಿ, ಏಸೋನಾಟೆಕ್ ಮ್ಯಾನಿಫ್ಯಾಕ್ಚರಿಂಗ್ ಪ್ರೈ.ಲಿ-150 ಕೋಟಿ.

Continue Reading

Aero India

Aero India 2023: ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65: ಸಿಎಂ ಬೊಮ್ಮಾಯಿ

Aero India 2023: ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ದೇಶೀಯ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

VISTARANEWS.COM


on

Approval for release of funds for various infrastructure projects in state cabinet meeting
Koo

ಬೆಂಗಳೂರು: ರಕ್ಷಣಾ ವಲಯದಲ್ಲಿ (Aero India 2023) ಬಂಧನ್‌ ಎನ್ನುವುದು ರಕ್ಷಣಾ ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮಧ್ಯೆ ಇರುವ ದೀರ್ಘಕಾಲದ ಸಂಬಂಧವಾಗಿದ್ದು, ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65 ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಏರೋ ಇಂಡಿಯಾ 2023ರ ಬಂಧನ್ – ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ರಕ್ಷಣೆ ಮತ್ತು ಏರೋಸ್ಪೇಸ್ ವಲಯವು ಸ್ಥಾಪಿತ ಕ್ಷೇತ್ರವಾಗಿದ್ದು, ಇದರಲ್ಲಿ ಅತ್ಯಂತ ಪರಿಣಿತರು ಮಾತ್ರ ಕೆಲಸವನ್ನು ಸಂಪೂರ್ಣಗೊಳಿಸಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದೊಂದಿಗೆ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ರಕ್ಷಣಾ ವಲಯವು ತೆರೆದುಕೊಂಡಿದೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಬೇಡಿಕೆಯ ಶೇ.80 ರಷ್ಟನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಪ್ರಧಾನಿಗಳ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ದೇಶದಲ್ಲಿಯೇ ತಯಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Budget: ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೇಕು ಪ್ರತ್ಯೇಕ ಅನುದಾನ: ಸಿಎಂಗೆ ಪ್ರೊ. ಎಂ.ಆರ್.‌ ದೊರೆಸ್ವಾಮಿ ಪತ್ರ

ನಮ್ಮ ಉತ್ಪಾದನೆ ಸಾಮರ್ಥ್ಯ ಅಂದುಕೊಂಡದ್ದಕ್ಕಿಂತ ಹೆಚ್ಚಿದೆ

ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ನಮ್ಮ ದೇಶದ ಉತ್ಪಾದನಾ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ. ಎಂಎಸ್ಎಂಇ ಕೂಡ ಇದನ್ನು ಉತ್ಪಾದನೆ ಮಾಡಬಲ್ಲುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಕ್ಷಣಾ ವಸ್ತುಗಳ ಉತ್ಪಾದನಾ ಸಂಸ್ಥೆಗಳು ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲುದಾಗಿದೆ ಎಂದು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ವಿಫುಲ ಅವಕಾಶ

ಉತ್ಪಾದನಾ ವಲಯದಲ್ಲಿ ಡೊಮೈನ್ ಬದಲಾವಣೆಯಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ಆದ್ದರಿಂದ ನಾವು ಮಹತ್ವಾಕಾಂಕ್ಷೆಯಿಂದ ವೈಜ್ಞಾನಿಕವಾಗಿ ಯೋಚನೆ ಮಾಡಬೇಕಿದೆ. ಈ ಎಲ್ಲ ವಿಷಯಗಳನ್ನು ಬಂಧನ್ ಹೆಸರಲ್ಲಿ ನಾವು ಒಟ್ಟಿಗೆ ತಂದಿದ್ದೇವೆ. ಇಂದು ಸಹಿ ಆಗಿರುವ ಎಲ್ಲ ಒಪ್ಪಂದಗಳು ಭವಿಷ್ಯದ ಅಗತ್ಯ, ಬೆಳವಣಿಗೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಾಕ್ಷಿಯಾಗಲಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | Payment aggregator : ರಿಲಯನ್ಸ್‌, ಜೊಮ್ಯಾಟೊ ಸೇರಿ 32 ಕಂಪನಿಗಳಿಗೆ ಪೇಮೆಂಟ್‌ ಅಗ್ರಿಗೇಟರ್‌ ಲೈಸೆನ್ಸ್ ವಿತರಣೆ

32 ಒಪ್ಪಂದಗಳಿಗೆ ರಾಜ್ಯ ಸಹಿ

ಬೆಂಗಳೂರಿನಲ್ಲಿ ಏರೋ ಸ್ಪೇಸ್ ಪಾರ್ಕ್ ಸ್ಥಾಪನೆ ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರದ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ಸಂಸ್ಥೆಗಳು ಶೇ.65 ಪಾಲನ್ನು ಪೂರೈಸುತ್ತಿದೆ. 2900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿವೆ. ಈ ಏರೋ ಇಂಡಿಯಾ ಪ್ರದರ್ಶನ “ಟಾಕ್ ಆಫ್ ದಿ ಟೌನ್” ಆಗಿದೆ ಎಂದು ಸಿಎಂ ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Continue Reading

Aero India

Aero India 2023: ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂ.1 ಆಗಲು ಅರ್ಹ: ಸಿಎಂ ಬೊಮ್ಮಾಯಿ

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

VISTARANEWS.COM


on

CM Basavaraj Bommai says Karnataka deserves to be no.1 in aerospace sector:
Koo

ಬೆಂಗಳೂರು: ಏರೋಸ್ಪೇಸ್ (Aero India 2023) ವಲಯದಲ್ಲಿ ಲಂಡನ್ ಮತ್ತು ಸಿಂಗಾಪುರದ ನಂತರ ಕರ್ನಾಟಕ ರಾಜ್ಯವಿದ್ದು, ಕರ್ನಾಟಕ ನಂ.1 ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿ, ಬೆಂಗಳೂರು ಸತತ 14 ಬಾರಿ ಏರ್ ಶೋ ಏರ್ಪಡಿಸಿದೆ. ದೇಶದ ಯಾವುದೇ ರಾಜ್ಯ ಇಷ್ಟೊಂದು ಏರ್ ಶೋ ಏರ್ಪಡಿಸಿಲ್ಲ. ಈ ಬಾರಿ ಅತಿ ದೊಡ್ಡ ಶೋ, ಹೆಚ್ಚಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಪ್ರದರ್ಶನಗಳು ನಡೆಯುತ್ತಿದೆ ಎಂದರು.

ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಎಂಜಿನಿಯರ್‌ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೋ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಹಿರಿಯರು 1960ರಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಯಶಸ್ಬಿಯಾಗಿ ಏರ್ ಶೋ ಆಯೋಜನೆ ಮಾಡಿದ್ದಾರೆ ಎಂದು ಅಭಿನಂದಿಸಿದರು.‌

ನಮ್ಮ ರಾಜ್ಯ ಯುವ ಪ್ರತಿಭಾವಂತ ಉದ್ಯಮಿಗಳು, ತಂತ್ರಜ್ಞರು, ಉದ್ಯಮಗಳು ಬೆಳೆಯಲು ಕಾರಣರಾಗಿದ್ದಾರೆ. ಯುವ ಪ್ರತಿಭಾವಂತರು ಇರುವುದರಿಂದ ಏರೊ ಸ್ಪೇಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಏರೊಸ್ಪೇಸ್ ನೀತಿ ರಾಜ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಉದ್ಯಮಗಳಿಗೆ ಸೂಕ್ತ ಅವಕಾಶಗಳಿವೆ. ನಾವು ಶೇ.65 ರಷ್ಟು ರಕ್ಷಣಾ ಪರಿಕರ ಉತ್ಪಾದನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.70 ರಷ್ಟು ಉತ್ಪಾದನೆ ಮಾಡುತ್ತೇವೆ.
ಈಗಾಗಲೇ ಅನೇಕರು ಇಲ್ಲಿ ಬಂಡವಾಳ ಹೂಡಿದ್ದಾರೆ, ಇನ್ನು ಅನೇಕರು ಬಂಡವಾಳ ಹೂಡುವ ಇಚ್ಛೆ ಹೊಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Sevalal Jayanthi: ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಯುಎಸ್ ಕಾನ್ಸುಲೇಟ್ ರಾಯಭಾರಿ ಬೆಂಗಳೂರು ಏರೋ ಇಂಡಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿ ಉತ್ತಮ ಪರಿಸರ, ಆರ್ಥಿಕ ಪರಿಸ್ಥಿತಿಯಿದ್ದು, ನಮ್ಮ ಬೆಳವಣಿಗೆಯಲ್ಲಿ ನೀವು ಭಾಗಿದಾರರಾಗಿ ಎಂದು ಕರೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ ಹಾಜರಿದ್ದರು.

Continue Reading

Aero India

Aero India 2023: ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಹೂಡಿಕೆದಾರರಿಗೆ ಸರ್ಕಾರ ಆಹ್ವಾನ

ಭಾರತದಲ್ಲಿ ರಕ್ಷಣಾ ವಲಯದ ಉದ್ದಿಮೆಗೆ ಸರ್ಕಾರ ಉತ್ತೇಜನ ಮುಂದುವರಿಸಲಿದೆ. ಇದು ದೇಶವನ್ನು ಸ್ವಾವಲಂಬಿಯಾಗಿಸುವುದಲ್ಲದೆ, ಉದ್ಯೋಗ ಸೃಷ್ಟಿಗೆ ಕೂಡ ಸಹಕಾರಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Aero India 2023) ವಿವರಿಸಿದ್ದಾರೆ.

VISTARANEWS.COM


on

rajanath singh
Koo

ಬೆಂಗಳೂರು: ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆಯುವಂತೆ ಜಾಗತಿಕ ಮಟ್ಟದ ಹೂಡಿಕೆದಾರರು, ಉದ್ಯಮಿಗಳು, ನಾನಾ ಉತ್ಪನ್ನಗಳ ಮೂಲ ಉತ್ಪಾದಕರಿಗೆ (Global original equipment manufactures) ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ-ಇಂಡಿಯಾ ಏರ್‌ ಶೋದ (Aero India 2023) ನೇಪಥ್ಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳ ಸಿಇಒಗಳನ್ನು ಅವರು ಭೇಟಿಯಾದರು.

ಜಾಗತಿಕ ಉತ್ಪಾದಕರು ಭಾರತದಲ್ಲಿ ಜಂಟಿಯಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬಹುದು. ಇಲ್ಲಿಂದಲೇ ಜಗತ್ತಿಗೆ ರಫ್ತು ಮಾಡಬಹುದು ಎಂದು ಅವರು ಆಹ್ವಾನಿಸಿದರು. ಜನರಲ್‌ ಆಟೋಮಿಕ್ಸ್‌, ಬೋಯಿಂಗ್‌, ಎಂಬ್ರೇರ್‌, ರಾಫೆಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರು ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದರು.

ಉದ್ದಿಮೆ ಸ್ಥಾಪಿಸುವವರಿಗೆ ಭೂಮಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚ, ಸರ್ಕಾರದ ರೀತಿ-ನೀತಿ, ಉತ್ತೇಜನ, ಮಾನವ ಸಂಪನ್ಮೂಲದ ಲಭ್ಯತೆ, ದೇಶೀಯ ರಕ್ಷಣಾ ವಲಯದ ಮಾರುಕಟ್ಟೆಯ ವಿವರಗಳನ್ನು ಸಚಿವರು ನೀಡಿದರು.

ಭಾರತವು ರಕ್ಷಣಾ ವಲಯದ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಭಾರತ ಈ ವಲಯದಲ್ಲಿ ಸ್ವಾವಲಂಬಿಯಾಗಲು ಹಾಗೂ ಉದ್ಯೋಗ ಸೃಷ್ಟಿಗೆ ಇದು ಮಹತ್ತರ ಪಾತ್ರ ವಹಿಸಲಿದೆ ಎಂದರು. ರಕ್ಷಣಾ ಉದ್ಯಮ ಕಾರಿಡಾರ್‌ಗಳ ಸ್ಥಾಪನೆಗೆ ಉತ್ತರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಘೋಷಿಸಿರುವ ಇನ್ಸೆಂಟಿವ್‌ಗಳನ್ನೂ ಸಚಿವರು ಪ್ರಸ್ತಾಪಿಸಿದರು.

ಸ್ವದೇಶಿ ಎಲ್‌ಸಿಎ ಎಂಜಿನ್‌ ಉತ್ಪಾದನೆಗೆ ಸಿದ್ಧತೆ: ಭಾರತವು ಶೀಘ್ರದಲ್ಲಿಯೇ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಜಿನ್‌ಗಳನ್ನು ತಯಾರಿಸಲಿದೆ ಎಂದು (light combat aircraft engine) ಡಿಆರ್‌ ಡಿಒ ಮುಖ್ಯಸ್ಥ ಸಮೀರ್ ಕಾಮತ್‌ ತಿಳಿಸಿದ್ದಾರೆ.

Continue Reading
Advertisement
self harming by wadi Acc cement Depute Director
ಕರ್ನಾಟಕ5 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ6 mins ago

ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ15 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್21 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್30 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ31 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

job opportunity
ದೇಶ43 mins ago

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

Office Rental Rises in top 7 cities including bengaluru
ದೇಶ46 mins ago

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

BMTC Bus hits bike
ಕರ್ನಾಟಕ59 mins ago

BMTC Accident : ಕಿಲ್ಲರ್‌ ಬಿಎಂಟಿಸಿ ಬಸ್‌ಗೆ 120 ಮಂದಿ ಬಲಿ!

Kapil Sharma and Sunil Grover
ಬಾಲಿವುಡ್1 hour ago

The Kapil Sharma Show: 6 ವರ್ಷದ ಮುನಿಸು ಮರೆತು ಒಟ್ಟಿಗೆ ಪಾರ್ಟಿ ಮಾಡಿದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Veer Savarkar and Priyank Kharge
ಕರ್ನಾಟಕ31 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ13 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ21 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

ಟ್ರೆಂಡಿಂಗ್‌