Children’s Day: ಮಕ್ಕಳ ದಿನಕ್ಕೆ ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಸಿನಿಮಾಗಳು! Vistara News

ಕಲೆ/ಸಾಹಿತ್ಯ

Children’s Day: ಮಕ್ಕಳ ದಿನಕ್ಕೆ ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಸಿನಿಮಾಗಳು!

ಇಂದು ಮಕ್ಕಳ ದಿನಾಚರಣೆ(ನ.14). ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ (Children’s Day) ಆಚರಿಸಲಾಗುತ್ತದೆ.

VISTARANEWS.COM


on

Children must watch movies on this Children's Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು (ನವೆಂಬರ್ 14) ಮಕ್ಕಳ ದಿನಾಚರಣೆ (Children’s Day). ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ಮಕ್ಕಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ನೆಹರು ಅವರು ಮಕ್ಕಳ ವಲಯದಲ್ಲಿ ‘ಚಾಚಾ’ ಎಂದೇ ಜನಪ್ರಿಯವಾಗಿದ್ದರು. ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯಬೇಕೆಂದು ಅವರು ಕನಸು ಕಂಡಿದ್ದರು. ಮಕ್ಕಳ ದಿನಾಚರಣೆಯಂದು ಭಾರತದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಶಿಕ್ಷಣದ ಅಗತ್ಯ ಮತ್ತು ಭವಿಷ್ಯದ ಬಗೆಗಿನ ಚರ್ಚೆಗಳು, ಮಂಥನಗಳು ನಡೆಯುತ್ತವೆ.

ಮಕ್ಕಳ ದಿನಾಚರಣೆ ದಿನದಂದ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚ ಮಾಡಿದರಷ್ಟೇ ಸಾಲದು. ಅವುಗಳನ್ನು ಜಾರಿಗೊಳಿಸುವ ಮಾರ್ಗಗಳನ್ನು ಶೋಧಿಸುವುದು ಅತ್ಯಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ಚ್ಯುತಿ ಬರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಮಕ್ಕಳ ಮೇಲಿನ ದೌರ್ಜನ್ಯಗಳು ಕೂಡ ಹೆಚ್ಚುತ್ತಿವೆ. ಹಾಗಾಗಿ ಪಂಡಿತ ಜವಾಹರ್ ಲಾಲ್ ನೆಹರು ಅವರ ಜನ್ಮದಿನದಂದು, ಮಕ್ಕಳ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಜತೆಗೆ ಅವುಗಳ ಅನುಷ್ಠಾನದ ಬಗ್ಗೆ ಮಾತನಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ ಈ ಬಾರಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳು ನೋಡಲೇಬೇಕಾದ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಿದೆ.

| ಬೆಟ್ಟದ ಹೂವು

ಡಾ. ಪುನೀತ್ ರಾಜಕುಮಾರ್ ಅವರು ಬಾಲ ನಟರಾಗಿ ಅದ್ಭುತವಾಗಿ ಅಭಿನಯಿಸಿದ ಚಿತ್ರವಿದು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು. ವಾಟ್ ದೆನ್ ರಾಮನ್ ಕಾದಂಬರಿ ಆಧಾರಿತ ಚಿತ್ರವಿದು. ಬಡತನ ಕಾರಣದಿಂದ ರಾಮು ಎಂಬ ಬಾಲಕನಿಗೆ ಶಾಲೆಗೆ ಹೋಗಲು ಇಲ್ಲವೇ ತನ್ನಿಷ್ಟದ ಪುಸ್ತಕವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ರಾಮು ಬೆಟ್ಟದಿಂದ ವಿಶಿಷ್ಟ ಹೂವುಗಳನ್ನು ತಂದು ಅಮೆರಿಕನ್ ಟೀಚರ್‌ರೊಬ್ಬರಿಗೆ ನೀಡುತ್ತಾನೆ. ಅವರು ನೀಡುವ ದುಡ್ಡನ್ನು ತೆಗೆದುಕೊಳ್ಳುತ್ತಾನೆ. ಹೀಗೆ ಒಂದಿಷ್ಟು ಹಣ ಹೊಂದಿಸುವ ರಾಮು, ತನ್ನಿಷ್ಟದ ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಖರೀದಿಸಲು ಮುಂದಾಗುತ್ತಾನೆ. ಆದರೆ, ಪುಸ್ತಕ ಖರೀದಿಸಬೇಕಾ ಅಥವಾ ಮನೆಯವರಿಗಾಗಿ ಕಂಬಳಿ ಖರೀದಿಸಬೇಕೋ ಎಂಬ ಗೊಂದಲಕ್ಕೀಡಾಗಿ, ಕೊನೆಗೆ ಪುಸ್ತಕ ಬಿಟ್ಟು ಕಂಬಳಿ ಖರೀದಿಸುತ್ತಾನೆ. ಈ ಚಿತ್ರದಲ್ಲಿನ ಅಪ್ಪು ಅಭಿನಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

| ಕೊಟ್ರೇಶಿ ಕನಸು

1994ರಲ್ಲಿ ತೆರೆ ಕಂಡ ಕೊಟ್ರೇಶಿ ಕನಸು ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್. ವಿಜಯ್ ರಾಘವೇಂದ್ರ ಅವರು ಬಾಲ ನಟರಾಗಿ ಅಭಿನಯಿಸಿದ ಸಿನಿಮಾ ಇದು. ಅತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಇದಕ್ಕೆ ದಕ್ಕಿದೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ಸಿಕ್ಕಿದೆ. ದಲಿತ ಹುಡುಗನೊಬ್ಬ ಶಿಕ್ಷಣವನ್ನು ಕಲಿಯುವುದಕ್ಕಾಗಿ ಹೋರಾಟ ಮಾಡುವ ಕತೆ ಇದು. ಕುಂವೀ ಅವರ ಕಾದಂಬರಿಯನ್ನು ಇದು ಆಧರಿಸಿದೆ.

| ಸಿಂಹದ ಮರಿ ಸೈನ್ಯ

ಮಕ್ಕಳ ಸಾಹಸ ಪ್ರಧಾನ ಸಿನಿಮಾವಿದು. ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರ 1981ರಲ್ಲಿ ತೆರೆ ಕಂಡಿತು. ಮಾ. ಅರ್ಜುನ್ ಸರ್ಜಾ, ಮಾ. ಭಾನುಪ್ರಕಾಶ್, ಮಾ. ಬಿ ಆರ್ ಪ್ರಸನ್ನಕುಮಾರ್, ಬೇಬಿ ಇಂದಿರಾ, ರೇಖಾ ಹಾಗೂ ಅಮರೀಷ್ ಪುರಿ, ಸುಂದರ ಕೃಷ್ಣ ಅರಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಲನ್ ಅಪಹರಿಸಿದ ಮಕ್ಕಳನ್ನು ವಾಪಸ್ ಕರೆ ತರಲು ಅರ್ಜುನ್ ಸರ್ಜಾ ನೇತೃತ್ವದಲ್ಲಿ ಮೂರ್ನಾಲ್ಕು ಮಕ್ಕಳು ಕಾಡಿಗೆ ಹೋಗಿ, ಖದೀಮರನ್ನು ಪೊಲೀಸರಿಗೆ ಹಿಡಿದುಕೊಡುವ ಚಿತ್ರಕತೆ ಇದು. ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಸಿನಿಮಾ ಕೆರಿಯರ್ ಶುರುವಾಯಿತು.

| ಪುಟಾಣಿ ಏಜೆಂಟ್ 123

ಕನ್ನಡದ ಮಕ್ಕಳ ಚಿತ್ರಗಳ ಪೈಕಿ ಇಂದಿಗೂ ತನ್ನದೇ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ ಈ ಸಿನಿಮಾ. 1979ರಲ್ಲಿ ತೆರೆ ಕಂಡ, ಮಾ. ರಾಮಕೃಷ್ಣ ಹೆಗಡೆ, ಮಾಸ್ಟರ್ ಭಾನು ಪ್ರಕಾಶ್, ಇಂದಿರಾ ಜತೆಯಲ್ಲಿ ಅಂಬರೀಷ್, ಮಂಜುಳಾ , ಶ್ರೀನಾಥ ಮತ್ತಿತರರು ನಟಿಸಿದ್ದಾರೆ. ಯಾವುದೇ ತಪ್ಪು ಮಾಡದೇ ಜೈಲಿನಲ್ಲಿರುವ ಜನರನ್ನು ಹೊರಗೆ ಕರೆ ತರುವ ಕೆಲಸವನ್ನು ಮೂರು ಮಕ್ಕಳು ಮಾಡುತ್ತಾರೆ.

| C/O ಫುಟ್‌ಪಾತ್

C/O ಫುಟ್‌ಪಾತ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಮಾ. ಕಿಶನ್ ಅತ್ಯಂತ ಕಿರಿಯ ನಿರ್ದೇಶಕ ಎಂಬ ಕೀರ್ತಿಗೆ ಪಾತ್ರರಾದರು. ಸುದೀಪ್, ಜಾಕಿಶ್ರಾಫ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜತೆಗೆ ನಟನೆ ಕೂಡ ಮಾಡಿರುವ ಕಿಶನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿಂದಿ ಆಯುವ ಬಾಲಕನೊಬ್ಬನಿಗೆ, ಶಾಲೆಗೆ ಹೋಗುವ ಮಕ್ಕಳು ಟೀಸ್ ಮಾಡುತ್ತಾರೆ. ಆಗ ಬಾಲಕ ಹೇಗೆ ಶಾಲೆ ಸೇರಿಕೊಳ್ಳುತ್ತಾನೆ ಎಂಬುದೇ ಇಡೀ ಸಿನಿಮಾದ ಕತೆ. ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳೂ ಬಂದಿವೆ.

| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು

ಇತ್ತೀಚಿನ ದಿನಗಳಲ್ಲಿ ತೆರೆ ಕಂಡ ಅತ್ಯುತ್ತಮ ಮಕ್ಕಳ ಚಿತ್ರಗಳ ಪೈಕಿ ಇದು ಒಂದು. ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರವು ಗಡಿ ನಾಡಿನ ಕನ್ನಡ ಶಾಲೆಗಳ ದುಃಸ್ಥಿತಿಯನ್ನು ತೆರೆದಿಡುತ್ತದೆ. ಕೇರಳ ಸರ್ಕಾರವು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚಲು ಹೊರಟಾಗ, ಆ ಶಾಲೆಯ ಮಕ್ಕಳು ಹೇಗೆ, ನ್ಯಾಯಾಲಯದವರೆಗೂ ಹೇಗೆ ಶಾಲೆಯನ್ನು ಉಳಿಸಿಕೊಳ್ಳುತ್ತಾರೆಂಬುದು ಈ ಸಿನಿಮಾದ ತಿರುಳು. ಸಾಕಷ್ಟು ಭಾವನಾತ್ಮಕ ಅಂಶಗಳನ್ನು ಚಿತ್ರದಲ್ಲಿ ಕಾಣಬಹುದು.

| ತಾರೆ ಜಮೀನ್ ಪರ್

2007ರಲ್ಲಿ ತೆರೆ ಕಂಡ ತಾರೆ ಜಮೀನ್ ಪರ್ ಸೂಪರ್ ಸಕ್ಸೆಸ್ ಆದ ಚಿತ್ರ. ಡಿಸ್ಲೆಕ್ಸಿಯಾ ಎಂಬ ವಿರಳ ಸಮಸ್ಯೆಯನ್ನು ಹೊಂದಿರುವ ಬಾಲಕನ ಸುತ್ತ ಹೆಣೆದ ಕತೆ. ಈ ಪ್ರಾಬ್ಲೆಮ್ ಹೊಂದಿದ ಮಕ್ಕಳು ಕಲಿಕೆಯಲ್ಲಿ ಹಿಂದಿರುತ್ತಾರೆ. ಅವರಿಗೆ ಎಲ್ಲವೂ ಗೊಂದಲಮಯ. ಈ ಸಮಸ್ಯೆಯನ್ನು ಎದುರಿಸುತ್ತಿರುವ ಬಾಲಕನಲ್ಲಿ ಸುಪ್ತವಾಗಿ ಪ್ರತಿಭೆಯನ್ನು ಅವರ ಶಿಕ್ಷಕ ಹೇಗೆ ಹೊರ ತೆಗೆಯುತ್ತಾರೆಂಬುದೇ ಸಿನಿಮಾದ ಒಟ್ಟು ಜೀವಾಳ. ಡಿಸ್ಲೆಕ್ಸಿಯಾ ವಿರಳ ಪ್ರಾಬ್ಲೆಮ್ ಬಗ್ಗೆಯೂ ಈ ಚಿತ್ರವೂ ಜನರನ್ನು ಜಾಗೃತಗೊಳಿಸುತ್ತದೆ. ಶಿಕ್ಷಕನ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಡಿಸ್ಲೆಕ್ಸಿಯಾ ಸಮಸ್ಯೆ ಇರುವ ಮಗುವಾಗಿ ದರ್ಶನ್ ಸಫಾರಿ ಅದ್ಭುತವಾಗಿ ನಟಿಸಿದ್ದಾರೆ. ಅಮೂಲ್ ಗುಪ್ತೆ ಜತೆಗೂಡಿ ಆಮೀರ್ ಖಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

| ಚಿಲ್ಲರ್ ಪಾರ್ಟಿ

2011ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಚಿಲ್ಲರ್ ಪಾರ್ಟಿ ಅನೇಕ ಬಾಲ‌ ಕಲಾವಿದರಿಗೆ ವೇದಿಕೆಯನ್ನು ಒದಗಿಸಿತು. ಮುಂಬೈನ ಸೊಸೈಟಿಯಲ್ಲಿರುವ ಕೆಲವು ಮಕ್ಕಳು ಅನಾಥ ಹುಡುಗ ಮತ್ತು ಆತನ ನಾಯಿ ಭಿಡು ಜತೆಗೆ ಗೆಳೆತನವನ್ನು ಸಂಪಾದಿಸುತ್ತಾರೆ. ಆದರೆ, ದುರಾಸೆಯ ರಾಜಕಾರಣಿಯೊಬ್ಬ ಎಲ್ಲ ಬೀದಿನಾಯಿಗಳನ್ನು ಹಿಡಿದು ಹೊರ ಹಾಕುವ ಪ್ಲ್ಯಾನ್ ಮಾಡುತ್ತಾನೆ. ಈ ರಾಜಕಾರಣಿಯಿಂದ ತಮ್ಮ ಸ್ನೇಹಿತ ಭಿಡುವನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆಂಬುದೇ ಸಿನಿಮಾದ ತಿರುಳು. ನಿತಿಶ್ ತಿವಾರಿ ಮತ್ತು ವಿಕಾಸ್ ಬೆಹ್ಲ್ ಅವರು ಈ ಸಿನಿಮಾದ ನಿರ್ದೇಶಕರು.

| ಮೈ ಫ್ರೆಂಡ್ ಗಣೇಶ

2007ರಲ್ಲಿ ತೆರೆ ಕಂಡ ಮೈ ಫ್ರೆಂಡ್ ಗಣೇಶ ಚಿತ್ರವು ಸಾಕಷ್ಟು ಸದ್ದು ಮಾಡಿತ್ತು. 8 ವರ್ಷದ ಮಗುವಿನ ತಂದೆ ತಾಯಿ ಸದಾ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ಮಗುವಿಗೆ ಸಾಕಷ್ಟು ಟೈಮ್ ಕೊಡುತ್ತಿರಲಿಲ್ಲ. ಆಗ ಆ ಮಗುವಿಗೆ ಗಣೇಶನೇ ಸ್ನೇಹಿತನಾಗಿ ಬರುತ್ತಾನೆ. ಇಬ್ಬರು ಸೇರಿ ಹಲವರಿಗೆ ಸಹಾಯ ಮಾಡುತ್ತಾರೆ. ಕೆಟ್ಟವರಿಗೆ ನೀತಿಯ ಪಾಠ ಕಲಿಸುತ್ತಾರೆ. ಮಕ್ಕಳಲ್ಲಿ ಬಾಲ್ಯದಲ್ಲೇ ದೇವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸುವ ಸಿನಿಮಾ ಇದಾಗಿದೆ ಎಂದು ಹೇಳಬಹುದು.

| ಚೋಟಾ ಚೇತನ್

ಇದು ಭಾರತದ ಮೊದಲ ತ್ರಿಡಿ ಫಿಲ್ಮ್. ಅತ್ಯುತ್ತಮ ಚಿತ್ರ ಮತ್ತು ಅತ್ಯದ್ಭುತ ಎಫೆಕ್ಟ್‌ಗಳಿಂದಾಗಿ ಚೋಟಾ ಚೇತನ್ ಈಗಲೂ ಮಕ್ಕಳ ಫೇವರಿಟ್ ಚಿತ್ರವಾಗಿ ಉಳಿದಿದೆ. 1998ರಲ್ಲಿ ತೆರೆ ಕಂಡ ಈ ಸಿನಿಮಾ ಭಾರೀ ಸದ್ದು ಮಾಡಿತ್ತು. ಹಳ್ಳಿಗಾಡಿನ ಲಕ್ಷ್ಮೀ ಮತ್ತು ಆಕೆಯ ಸ್ನೇಹಿತರಿಗೆ ಶಾಲೆಯಲ್ಲಿ ಟೀಸ್ ಭಾರಿ ತೊಂದರೆ ಸೃಷ್ಟಿಸುತ್ತದೆ. ಆಗ ಅವರಿಗೆ ಚೇತನ್ ಎಂಬ ಮಾಯಾ ವಿದ್ಯೆ ಬಲ್ಲ ಯುವಕ ಸಿಗುತ್ತಾನೆ. ಆತನ ನೆರವಿನಿಂದ ಮಕ್ಕಳ ಹೇಗೆ ತಮ್ಮಸಂಕಟ ದೂರ ಮಾಡಿಕೊಳ್ಳುತ್ತಾರೆಂಬುದೇ ಈ ಚಿತ್ರ. ಮೂಲತಃ ಮಲಯಾಳಂ ಭಾಷೆಯ ಮೈ ಡಿಯರ್ ಕುಟ್ಟಿಚಟ್ಟನ್ ಚಿತ್ರದ ಹಿಂದಿ ಡಬ್ಬಿಂಗ್ ಸಿನಿಮಾ ಇದು.

| ಐ ಆ್ಯಮ್ ಕಲಾಂ

2010ರಲ್ಲಿ ತೆರೆ ಕಂಡ ಸಿನಿಮಾ ಇದು. 12 ವರ್ಷದ ಚೋಟು ಎಂಬ ಬುದ್ಧಿವಂತ ಹುಡುಗನಿಗೆ ಬಡತನದ ಕಾರಣದಿಂದಾಗಿ ಓದುವುದನ್ನು ಮುಂದುವರಿಸಲು ಆಗುವುದಿಲ್ಲ. ಅನಿವಾರ್ಯವಾಗಿ ಆತ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಚೋಟು ಒಮ್ಮೆ ಟಿವಿಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭಾಷಣ ಕೇಳಿ, ತನ್ನೆಲ್ಲ ಅಡೆ ತಡೆಗಳನ್ನು ಮೀರಿ ಹೇಗೆ ಸಾಧಕನಾಗಿ ಬದಲಾಗುತ್ತಾನೆಂಬುದು ಚಿತ್ರದ ತಿರುಳು.

| ಮಿಸ್ಟರ್ ಇಂಡಿಯಾ

ಭಾರತದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರವಿದು. ಮೇಲ್ನೋಟಕ್ಕೆ ದೊಡ್ಡವರ ಚಿತ್ರ ಎನಿಸಿದರೂ, ಮಕ್ಕಳ ಕತೆಯನ್ನು ಹೊಂದಿದೆ. ಹಾಗೆ ನೋಡಿದರೆ, ಇದು ಭಾರತದ ಮೊದಲ ಸೂಪರ್ ಹೀರೋ ಸಿನಿಮಾ. ನಟ ಅನಿಲ್ ಕಪೂರ್ ಅವರು ಅನಾಥ ಮಕ್ಕಳನ್ನು ಸಾಕುವ ನಾಯಕನಾಗಿ ಗಮನ ಸೆಳೆಯುತ್ತಾರೆ. ವಾಚ್ ಬಳಸಿಕೊಂಡು ಅವರು ಮಾಯವಾಗುವ ದೃಶ್ಯಗಳು ಮಕ್ಕಳಿಗೆ ಬಹಳ ಇಷ್ಟವಾಗಿದ್ದವು. ಭಯಂಕರ ವಿಲನ್ ಮೊಗ್ಯಾಂಬೋ ಅವರನ್ನು ಮಿಸ್ಟರ್ ಇಂಡಿಯಾ ಸೋಲಿಸುವ ಚಿತ್ರವು ಬಹಳ ಫೇಮಸ್ ಆಗಿತ್ತು.

| ಚಿಲ್ಡ್ರನ್ ಆಫ್ ಹೆವೆನ್

ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಇರಾನಿ ಚಿತ್ರವಿದು. ಮಜಿದ್ ಮಜಿದಿ ಈ ಚಿತ್ರದ ನಿರ್ದೇಶಕರು. 1997ರಲ್ಲಿ ತೆರೆ ಕಂಡ ಚಿತ್ರವು ವ್ಯಾಪಕ ಪ್ರಶಂಸೆಯನ್ನು ಪಡೆದುಕೊಂಡಿತು. ಅಲ್ಲದೇ, ಹಿಂದಿಯೂ ಸೇರಿದಂತೆ ವಿಶ್ವದ ಅನೇಕ ಭಾಷೆಗಳಲ್ಲಿ ಈ ಚಿತ್ರವು ರಿಮೇಕ್ ಆಗಿ ಸಕ್ಸೆಸ್ ಕಂಡಿದೆ. ಅಲಿ ತನ್ನ ತಂಗಿ ಝಾಹ್ರಾಳ ಒಂದು ಜೊತೆ ಶೂಗಳ ಪೈಕಿ ಒಂದ ಶೂ ಕಳೆದು ಹಾಕುತ್ತಾನೆ. ಇಬ್ಬರು ಈ ವಿಷಯನ್ನು ಪೋಷಕರಿಗೆ ತಿಳಿಸದೇ ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಬಡ ತಂದೆ ಮತ್ತ ಕಾಯಿಲೆಪೀಡಿತ ತಾಯಿ ಇರುತ್ತಾರೆ. ಮತ್ತೊಂದು ಜೊತೆ ಶೂ ಖರೀದಿಸುವವರೆಗೂ, ಅಲಿಯ ಶೂಗಳನ್ನೇ ಇಬ್ಬರು ಬಳಸುತ್ತಿರುತ್ತಾರೆ. ಆದರೆ, ಅಂತಿಮವಾಗಿ ಅಲಿ ತನ್ನ ಸಹೋದರಿಗೆ ಹೊಸ ಶೂ ಕೊಡಿಸುತ್ತಾನೋ ಇಲ್ಲವೋ, ಓಟದ ಸ್ಪರ್ಧೆಯಲ್ಲಿ ಶೂ ಬಹುಮಾನ ಗೆಲ್ಲುತ್ತಾನೋ ಇಲ್ಲವೋ ಎಂಬುದು ಈ ಸಿನಿಮಾದ ಕತೆ. ಅನೇಕ ಭಾವನಾತ್ಮಕ ದೃಶ್ಯಗಳಿಂದಾಗಿ ಸಾಕಷ್ಟು ರಿಚ್ ಆಗಿರುವ ಈ ಸಿನಿಮಾಗೆ ಭಾರೀ ಮೆಚ್ಚುಗೆ ದೊರೆಯಿತು.

ಈ ಸುದ್ದಿಯನ್ನೂ ಓದಿ: Children’s day: ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

Raja Marga Column: ಇವರು ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ; 511 ಪುಸ್ತಕ, 19 ಮಹಾಕಾವ್ಯ!

Raja Marga Column: ಅವರೊಬ್ಬ ಆಯುರ್ವೇದಿಕ್‌ ಡಾಕ್ಟರ್‌. ಅವರು ಬರೆದಿದ್ದು 511 ಪುಸ್ತಕ, 19 ಮಹಾಕಾವ್ಯ ಬರೆದಿದ್ದಾರೆ. ಅವರು ಇಷ್ಟೊಂದು ಹೇಗೆ ಬರೆದರು ಎಂಬ ಕುತೂಹಲವೇ? ಇಲ್ಲಿದೆ ಪೂರ್ಣ ವಿವರ.

VISTARANEWS.COM


on

Dr Pradeep Kumar Hebri Raja Marga Column
Koo
RAJAMARGA Rajendra Bhat

ಕನ್ನಡದ ಒಬ್ಬ ಲೇಖಕ -511 ಪುಸ್ತಕಗಳು -19 ಮಹಾಕಾವ್ಯಗಳನ್ನು ಬರೆದಿದ್ದಾರೆ (He written 511 Books, 19 Mahakavyas!) ಎಂದರೆ ನಂಬತ್ತೀರಾ? ನಾನು ಖಂಡಿತವಾಗಿಯೂ ಹೇಳಬಲ್ಲೆ. ಇಷ್ಟೊಂದು ವಿಸ್ತಾರವಾಗಿ ಭಾರತದ ಯಾವ ಲೇಖಕನೂ ಬರೆದ ನಿದರ್ಶನ ಇಲ್ಲ! ಜಾಗತಿಕವಾಗಿ, ನನಗೆ ಗೊತ್ತಿಲ್ಲ. ಅವರೇ ಈಗ ಮಂಡ್ಯದಲ್ಲಿ ಇರುವ ಡಾ. ಪ್ರದೀಪ್ ಕುಮಾರ್ ಹೆಬ್ರಿ (Dr. Pradeep Kumar Hebri). ಹೌದು, ಮೂಲತಃ ಕಾರ್ಕಳದ ಹೆಬ್ರಿಯ (ಈಗ ಅದು ಪ್ರತ್ಯೇಕ ತಾಲೂಕು ಆಗಿದೆ) ಒಬ್ಬ ಆಯುರ್ವೇದ ವೈದ್ಯರು (Arurvedic Doctor) ಕಳೆದ 36 ವರ್ಷಗಳಲ್ಲಿ ಬರೆದು ಮುಗಿಸಿದ್ದು ಬರೋಬ್ಬರಿ 511 ಪುಸ್ತಕಗಳನ್ನು! ಅದರಲ್ಲಿಯೂ ಅವರ ಆಸಕ್ತಿಯ ಹರವು ತುಂಬಾ ವಿಸ್ತಾರ ಆದದ್ದು. ಕವನ ಸಂಕಲನ, ಶಿಶು ಸಾಹಿತ್ಯ, ಆರೋಗ್ಯ, ಲಲಿತ ಪ್ರಬಂಧ, ವಚನ ಸಾಹಿತ್ಯ, ವಿಜ್ಞಾನ, ಅಂಕಣ, ಸಣ್ಣ ಕತೆಗಳು, ಕಾದಂಬರಿಗಳು, ಧಾರ್ಮಿಕ, ಆಧ್ಯಾತ್ಮ, ಜೀವನ ಚರಿತ್ರೆ, ಪ್ರವಾಸ ಕಥನ, ವ್ಯಕ್ತಿತ್ವ ವಿಕಸನ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ! ಅವರು ಬರೆದ ಎಲ್ಲ ಪುಸ್ತಕಗಳು ಕೂಡ ಪ್ರಿಂಟ್ ಆಗಿ ಪಬ್ಲಿಷ್ ಆಗಿವೆ ಮತ್ತು ಓದುಗರ ಮಡಿಲು ಸೇರಿವೆ ಎಂದರೆ ಅದು ಅದ್ಭುತ (Raja Marga Column)!

1989ರಿಂದಲೂ ನಿರಂತರ ಅವರು ಬರೆಯುತ್ತಲೇ ಇದ್ದಾರೆ!

ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ (ಈಗ ಪ್ರತ್ಯೇಕ ತಾಲೂಕು ಆಗಿದೆ) ಜನಿಸಿದ ಪ್ರದೀಪ್ ಕುಮಾರ್ ಅವರು ಹೆಚ್ಚು ಓದಿದ್ದು ಸರಕಾರಿ ಶಾಲೆಗಳಲ್ಲಿ. ಆಯುರ್ವೇದ ಪದವಿ ಪಡೆದದ್ದು ಉದ್ಯಾವರದ ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ. ಮುಂದೆ ಅವರು ಮಂಡ್ಯ ಜಿಲ್ಲೆಯನ್ನು ತನ್ನ ಕರ್ಮಭೂಮಿ ಮಾಡಿಕೊಂಡರು. ಆಯುರ್ವೇದ ಪ್ರಾಕ್ಟೀಸ್ ಮಾಡುತ್ತ ಬಿಡುವಿನ ಸಮಯದಲ್ಲಿ ಸಾಹಿತ್ಯ ಅಧ್ಯಯನ ಮಾಡುತ್ತ ಬರೆಯಲು ಆರಂಭ ಮಾಡಿದರು.

1989ರಲ್ಲಿ ಪ್ರಕಟ ಆದ ‘ಈ ಬಾಳ ಪಯಣ’ ಅವರ ಮೊದಲ ಪುಸ್ತಕ. ಮುಂದೆ ಬರೆಯುವ ಆಸಕ್ತಿ ಹೆಚ್ಚಾಯಿತು. ಅದಕ್ಕಾಗಿ ತನ್ನ ವೈದ್ಯಕೀಯ ಪ್ರಾಕ್ಟೀಸ್ ಸೀಮಿತ ಮಾಡಿದರು. ಮುಂದೆ ಅವರು ನಿರಂತರವಾಗಿ ಓದಿದರು, ದಣಿವು ಅರಿಯದೇ ಬರೆದರು. ವರ್ಷಕ್ಕೆ ಸರಾಸರಿ 18-20 ಪುಸ್ತಕಗಳನ್ನು ಬರೆದರು! ಅದರ ಜೊತೆಗೆ ವರ್ಷಕ್ಕೆ ಸರಾಸರಿ 100 ಬೇರೆಯವರ ಪುಸ್ತಕಗಳನ್ನು ಪೂರ್ಣವಾಗಿ ಓದಿ ಮುನ್ನುಡಿ ಬರೆದುಕೊಟ್ಟಿದ್ದಾರೆ. ಪುಸ್ತಕಗಳ ಪರಿಚಯಗಳನ್ನು ಪತ್ರಿಕೆಗೆ ಬರೆದು ಎಳೆಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಕರ್ನಾಟಕದ ಯಾವ ಸ್ಟಾರ್ ಲೇಖಕನೂ ಕೂಡ ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದ ಉದಾಹರಣೆ ದೊರೆಯುವುದಿಲ್ಲ! ಅಂತಹದ್ದರಲ್ಲಿ ನಮ್ಮ ಹೆಬ್ರಿಯ ಪ್ರದೀಪ್ ಕುಮಾರ್ ಅವರು 511 ಪುಸ್ತಕಗಳನ್ನು ಬರೆದು ಪಬ್ಲಿಷ್ ಮಾಡಿದರು ಅಂದರೆ ಅದು ಖಂಡಿತವಾಗಿ ವಿಸ್ಮಯ ಎಂದೇ ಹೇಳಬಹುದು. ಅದನ್ನು ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಸಾಧ್ಯ ಮಾಡಿ ತೋರಿಸಿದ್ದಾರೆ. ಇದು ಖಂಡಿತವಾಗಿ ಜಾಗತಿಕ ದಾಖಲೆ!

19 ಮಹಾಕಾವ್ಯಗಳನ್ನು ಅವರು ಬರೆದಿದ್ದಾರೆ!

ಅವರ ಇತರ 500 ಪುಸ್ತಕಗಳ ತೂಕ ಒಂದೆಡೆ ಆದರೆ ಅವರು ಬರೆದ 19 ಮಹಾಕಾವ್ಯಗಳದ್ದು ಇನ್ನೊಂದು ತೂಕ! ಇಷ್ಟೊಂದು ಕಾವ್ಯಗಳನ್ನು ಬರೆದವರು ಭಾರತದಲ್ಲಿ ಖಂಡಿತವಾಗಿ ಇಲ್ಲ! ಅದೊಂದು ತಪಸ್ಸು. ಅದರಲ್ಲಿಯೂ ಅವರು ಬರೆದ ‘ಯುಗಾವತಾರಿ’ ಮಹಾಕಾವ್ಯ ಆರು ಸಂಪುಟಗಳಲ್ಲಿ ಹೊರಬಂದಿದ್ದು 6000 ಪುಟಗಳನ್ನು ಹೊಂದಿದೆ! ಇದು ಜಗತ್ತಿನ ಅತೀ ದೊಡ್ಡದಾದ ಮಹಾ ಕಾವ್ಯ ಅನ್ನುವುದು ಕನ್ನಡದ ಹೆಮ್ಮೆ.

ಇಡೀ ಮಹಾಭಾರತವನ್ನು ‘ಜಯ ಭಾರತ’ ಎಂಬ ಶೀರ್ಷಿಕೆಯಲ್ಲಿ ಅವರು ಕಾವ್ಯಕ್ಕೆ ಇಳಿಸಿದ್ದು ಅದರ ಪುಟಗಳ ಸಂಖ್ಯೆಯೇ 1800! ಅದೂ ನಾಲ್ಕು ಸಂಪುಟಗಳನ್ನು ಹೊಂದಿದೆ. ಮಧ್ವಾಚಾರ್ಯರ ಬಗ್ಗೆ ಬರೆದ ಪೂರ್ಣಪ್ರಜ್ಞ, ಅಕ್ಕ ನಾಗಲಾಂಬಿಕೆ ಬಗ್ಗೆ ಬರೆದ ಶರಣ ಮಾತೆ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಬಗ್ಗೆ ಬರೆದ ಕಲ್ಪತರು, ಅಕ್ಕ ಮಹಾದೇವಿಯ ಬಗ್ಗೆ ಬರೆದ ಉಡುತಡಿಯ ಕಿಡಿ, ಪ್ರಭು ರಾಮಚಂದ್ರರ ಬಗ್ಗೆ ಬರೆದ ರಘು ಕುಲೋತ್ತಮ, ರಾಮಾನುಜರ ಬಗ್ಗೆ ಬರೆದ ದಿಗ್ವಿಚೇತ, ಡಾಕ್ಟರ್ ಬಾಲಗಂಗಾಧರನಾಥ ಸ್ವಾಮೀಜಿ ಬಗ್ಗೆ ಬರೆದ ದಿವ್ಯ ದಿನಕರ, ಕಾವೇರಿ ಹೋರಾಟಗಾರ ಮಾದೇಗೌಡ ಬಗ್ಗೆ ಬರೆದ ಕಾವೇರಿ ಪುತ್ರ ಇವೆಲ್ಲವೂ ಜನಪ್ರಿಯ ಆಗಿವೆ. ಅವರ ಇಪ್ಪತ್ತನೇ ಮಹಾಕಾವ್ಯ ಸುತ್ತೂರು ಸ್ವಾಮಿಗಳ ಬಗ್ಗೆ ಬರೆದ ‘ರಾಜಗುರು ತಿಲಕ’ ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ.

Dr Pradeep Kumar Hebri Raja Marga Column Raja Guru tilaka

ಕನ್ನಡದ ಆದಿಕವಿಗಳು ಬರೆದ ಭಾಮಿನಿ ಮೊದಲಾದ ಸಿದ್ಧ ಷಟ್ಪದಿಗಳ ಜೊತೆಗೆ ಮಹಾಭಾಮಿನಿ, ಶ್ರೀ ಗುರು, ಪದವರ್ಧಿನಿ ಮೊದಲಾದ ಷಟ್ಪದಿಗಳ ಆವಿಷ್ಕಾರ ಮಾಡಿ ಬೆಳೆಸಿದ ಕೀರ್ತಿಯೂ ಅವರಿಗೆ ಸಿಗಬೇಕು.

‘ಬರವಣಿಗೆಯ ವೈಭವ’ ಅವರು

ಇಷ್ಟೊಂದು ಹೇಗೆ ಬರೆಯಲು ಸಾಧ್ಯವಾಯಿತು? ಎಂದವರನ್ನು ಕೇಳಿದಾಗ ಅವರು ಹೇಳಿದ ಮಾತು ತುಂಬಾನೆ ಇಷ್ಟ ಆಯಿತು.

“ಬರವಣಿಗೆ ಒಂದು ತಪಸ್ಸು. ನಾನು ಕಳೆದ 36 ವರ್ಷಗಳಿಂದ ನಿರಂತರ ಬರೆಯುತ್ತಿದ್ದೇನೆ. ಹಗಲು ನನಗೆ ಉಪನ್ಯಾಸಗಳು, ಪ್ರಯಾಣ, ಹೊಟ್ಟೆಪಾಡು ಇರುತ್ತವೆ. ನಾನು ರಾತ್ರಿ ಏಳೂವರೆ ಘಂಟೆಗೆ ಬರೆಯಲು ಆರಂಭ ಮಾಡಿದರೆ ಮುಗಿಸುವುದು ರಾತ್ರಿ ಮೂರೂವರೆ ಘಂಟೆಗೆ! ನಾನು ಬರೇ ಪೆನ್ನು, ಪುಸ್ತಕ ಹಿಡಿದು ಬರೆಯುವವನು. ಆಧುನಿಕ ತಂತ್ರಜ್ಞಾನ ನನಗೆ ಒಗ್ಗುವುದಿಲ್ಲ. ಮುನ್ನುಡಿಗಳನ್ನು ಬರೆಯಲು ವರ್ಷಕ್ಕೆ ನೂರಾರು ಪುಸ್ತಕಗಳು ಬರುತ್ತವೆ. ಅವುಗಳನ್ನು ಪೂರ್ತಿಯಾಗಿ ಓದಬೇಕು. ನಿರಂತರ ಓದುವಿಕೆ, ಆಸಕ್ತಿ ಮತ್ತು ಅಧ್ಯಯನ ಇವುಗಳಿಂದ ನನಗೆ ಬರೆಯಲು ಸಾಧ್ಯವಾಗುತ್ತದೆ. ನನ್ನ ಪುಸ್ತಕಗಳ ಬಗ್ಗೆ ಎಂಟು ಜನ ಲೇಖಕರು ಬರೆದು ಪಿ.ಎಚ್.ಡಿ ಪೂರ್ತಿ ಮಾಡಿದ್ದಾರೆ! 22 ಮಂದಿ ನನ್ನ ಬಗ್ಗೆ, ನನ್ನ ಕೃತಿಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಮಂಡ್ಯದ ಜನತೆ ತುಂಬಾ ಪ್ರೀತಿಯಿಂದ ‘ರಾಜ ದೀಪ’ ಮತ್ತು ‘ಕಾವ್ಯ ತಪಸ್ವೀ ‘ಎಂಬ ಎರಡು ಬೃಹತ್ ಅಭಿನಂದನಾ ಗ್ರಂಥಗಳನ್ನು ಸಮರ್ಪಣೆ ಮಾಡಿ ನನ್ನನ್ನು ಸನ್ಮಾನ ಮಾಡಿದ್ದಾರೆ. ಜನರು ಪ್ರೀತಿಯಿಂದ ಉಪನ್ಯಾಸಕ್ಕೆ, ಗಮಕ ವಾಚನ, ವ್ಯಾಖ್ಯಾನಕ್ಕೆ ಕರೆಯುತ್ತಾರೆ. ಅದಕ್ಕೂ ಸಮಯ ಕೊಡಬೇಕು. ಆದರೆ ಬರವಣಿಗೆ, ಅದರಲ್ಲಿಯೂ ಕಾವ್ಯರಚನೆ ನನ್ನ ಆದ್ಯತೆ. ಅದು ನಿಲ್ಲಬಾರದು. ನನ್ನ ಕೊನೆಯ ಉಸಿರಿನತನಕವೂ ಬರೆಯುತ್ತ ಇರಬೇಕು ಎಂದು ನನ್ನ ಆಸೆ ಇದೆ” ಎನ್ನುತ್ತಾರೆ.

Dr Pradeep Kumar Hebri Raja Marga

ಅವರಿಗೆ ಸಿಕ್ಕಿದ ಸನ್ಮಾನ, ಪ್ರಶಸ್ತಿಗಳ ಬಗ್ಗೆ ಒಂದು ಬೃಹತ್ ಪುಸ್ತಕವನ್ನೇ ಬರೆಯಬಹುದು! ಅವರ ಕೃತಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಅವರ ಇಬ್ಬರು ಅಭಿಮಾನಿಗಳು ‘ಆರವತ್ತಾರಕ್ಕಾರತಿ’ ಮತ್ತು ‘ಹೆಬ್ರಿ ಸವಿನುಡಿ’ ಎಂಬ ಪುಸ್ತಕಗಳನ್ನು ಅವರ ಬಗ್ಗೆ ಬರೆದು ಗುರುವಂದನೆ ಮಾಡಿದ್ದಾರೆ. ಅವರ ಲೇಖನ ಮತ್ತು ಕವಿತೆಗಳು ಹಲವಾರು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಲೇಖನಗಳು ಬಂದಿವೆ. ಏಳು ತಾಲೂಕು ಮತ್ತು ಒಂದು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟವು ಅವರಿಗೆ ದೊರೆತಿವೆ. ಶರಣ ಸಾಹಿತ್ಯದ ಬಗ್ಗೆ ಅವರು ಬರೆದಷ್ಟು ಮತ್ತು ಭಾಷಣ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಅನ್ನುವುದು ಕನ್ನಡದ ಹೆಮ್ಮೆ. ಅದರ ಜೊತೆಗೆ ಅಧ್ಯಯನ ಮಾಡಿ ಕಾನೂನು ಪದವಿ, ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ ಫಿಲ್ ಪೂರ್ತಿ ಮಾಡಿದ್ದಾರೆ. ಕರ್ನಾಟಕ ಸಂಗೀತ, ತಬಲಾ, ನಾಟಕ, ಯಕ್ಷಗಾನ ಕೂಡ ಕಲಿತಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಎಂ ಎನ್ ರಾಜಲಕ್ಷ್ಮಿ ಅವರ ಬೆಂಬಲವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಇದನ್ನೂ ಓದಿ: Raja Marga Column : ಯೋಧರ ಕುಟುಂಬದ ವೀರಗಾಥೆಗಳು; ‌ಬೇಕಿರುವುದು ಸಾಂತ್ವನ ಅಲ್ಲ, ಸೆಲ್ಯೂಟ್!

ಭರತವಾಕ್ಯ

ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಅವರು ಕನ್ನಡದ ಮುಕುಟಮಣಿ ಅನ್ನೋದೇ ಭರತವಾಕ್ಯ. ಅವರು ಈ ರವಿವಾರ ಕಾರ್ಕಳದ ಶ್ರೇಷ್ಟ ‘ಜ್ಞಾನ ಸುಧಾ’ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಕಳ ತಾ.ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶಿಖರೋಪನ್ಯಾಸ ಮಾಡಲಿದ್ದಾರೆ ಅನ್ನುವುದು ನಮ್ಮೆಲ್ಲರ ಭಾಗ್ಯ. ಆರವತ್ತಾರರ ಅವರಿಗೆ ಶುಭವಾಗಲಿ.

Continue Reading

ಕಲೆ/ಸಾಹಿತ್ಯ

Kannada Pustaka Habba: ಡಿ. 3ರಂದು ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ ಸಮಾರೋಪ

Kannada Pustaka Habba: ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ – 2023’ ಸಮಾರೋಪದ ಸಮಾರಂಭವು ಡಿ.3ರಂದು ಬೆಂಗಳೂರಿನ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ ಆವರಣದಲ್ಲಿ ನಡೆಯಲಿದೆ.

VISTARANEWS.COM


on

Kannada Pustaka Habba
Koo

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ (Rashtrotthana Sahitya) ವತಿಯಿಂದ ಆಯೋಜಿಸಿರುವ 3ನೇ ʼಕನ್ನಡ ಪುಸ್ತಕ ಹಬ್ಬ – 2023ʼರ ಸಮಾರೋಪ ಸಮಾರಂಭವನ್ನು (Kannada Pustaka Habba-2023) ಡಿಸೆಂಬರ್‌ 3 ರಂದು ಸಂಜೆ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂವತ್ತಮೂರು ದಿನಗಳ ಈ ಪುಸ್ತಕ ಹಬ್ಬದಲ್ಲಿ (ನ.1 ರಿಂದ ಡಿ.3) ಈಗಾಗಲೇ ಇಪ್ಪತ್ತೇಳು ದಿನಗಳು ಕಳೆದಿದ್ದು, ಭಾನುವಾರ ಸಾಯಂಕಾಲ ಪುಸ್ತಕ ಹಬ್ಬ ಮುಕ್ತಾಯಗೊಳ್ಳಲಿದೆ.

ಸಮಾರೋಪಕ್ಕೂ ಮುನ್ನ ಡಿಸೆಂಬರ್ 2ರಂದು ‘ನವೋತ್ಥಾನದ ಅಧ್ವರ್ಯು: ಸ್ವಾಮಿ ದಯಾನಂದ ಸರಸ್ವತಿ’ ವಿಷಯವಾಗಿ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಮಾತನಾಡಲಿದ್ದಾರೆ. ಅದೇ ದಿನ ‘ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲುಗಳು’ ವಿಷಯವಾಗಿ ಡಿ. ಎಂ. ಘನಶ್ಯಾಮ ಮತ್ತು ರಮೇಶ ದೊಡ್ಡಪುರ ಅವರು ಸಂವಾದ ನಡೆಸಲಿದ್ದಾರೆ.

ಡಿಸೆಂಬರ್ 3ರಂದು ಬೆಳಗ್ಗೆ, ‘ಸನಾತನ ಧರ್ಮ ಮತ್ತು ವಚನ ಸಾಹಿತ್ಯ’ ವಿಷಯವಾಗಿ ಡಾ. ಜ್ಯೋತಿ ಶಂಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದದ ಅಧ್ಯಕ್ಷತೆಯನ್ನು ರಾಷ್ಟೋತ್ಥಾನ ಪರಿಷತ್ ಅಧ್ಯಕ್ಷ ಎಂ. ಪಿ. ಕುಮಾರ್ ಅವರು ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಶಿವಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

ಸ್ಪರ್ಧೆಗಳ ವಿಜೇತರಿಗೆ ಬಹುಮಾನ

ಕಾರ್ಯಕ್ರಮದಲ್ಲಿ, ದಾವಣಗೆರೆಯ ಸಾಹಿತ್ಯ ಪರಿಚಾರಕರಾದ ಉಮೇಶ ಅವರನ್ನು ಗೌರವಿಸಲಾಗುತ್ತದೆ. ಕನ್ನಡ ಪುಸ್ತಕ ಹಬ್ಬದ ನಿಮಿತ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು, ಆಯ್ದ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು.

ನವೆಂಬರ್ 1ರಿಂದ ‘ಕನ್ನಡ ಪುಸ್ತಕ ಹಬ್ಬ’ದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಸಾವಿರಾರು ಜನ ಪುಸ್ತಕಪ್ರಿಯರು ಆಗಮಿಸಿ, ತಮ್ಮ ಆಯ್ಕೆಯ-ಆಸಕ್ತಿಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪುಸ್ತಕ ಹಬ್ಬಕ್ಕೆ ಭೇಟಿ ನೀಡಿ, ಬೆರಗು ಕಂಗಳಿಂದ ಪುಸ್ತಕಗಳನ್ನು ನೋಡಿ, ತಮ್ಮ ಆಯ್ಕೆಯ ಪುಸ್ತಕವನ್ನು ಖರೀದಿಸಿ ಎದೆಗವಚಿಕೊಂಡು ಸಂಭ್ರಮಿಸಿದ್ದು ವಿಶೇಷವಷ್ಟೇ ಅಲ್ಲ, ಪುಸ್ತಕಪ್ರಪಂಚದಲ್ಲಿ ಆಶಾದಾಯಕ ಸಂಗತಿ.

ವಿವಿಧ ಕಾರ್ಯಕ್ರಮಗಳು ಸಂಪನ್ನ

ಕಳೆದ ನಾಲ್ಕು ವಾರಗಳಲ್ಲಿ ಪುಸ್ತಕ ಹಬ್ಬದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆದಿವೆ. ನವೆಂಬರ್ 1ರಂದು ಪ್ರಸಿದ್ಧ ನಟ, ಕಲಾವಿದ ಸುಚೇಂದ್ರ ಪ್ರಸಾದ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ‘ವಿಜಯ ಕರ್ನಾಟಕ’ದ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಮತ್ತು ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ- ಸಂಯೋಜಕರಾದ ರಘುನಂದನ್ ಅವರು ಆಗಮಿಸಿದ್ದರು. ಅಂದು ಸಂಜೆಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ‘ಸಂಸ್ಕೃತಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ‘ಕನ್ನಡಪ್ರಭ’ ಮತ್ತು ‘ಸುವರ್ಣ ಸುದ್ದಿವಾಹಿನಿ’ಯ ಪ್ರಧಾನ ಸಂಪಾದಕರಾದ ರವಿ ಹೆಗಡೆಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇನ್ನು ಶನಿವಾರ ಭಾನುವಾರಗಳಂದು ಸಾಹಿತ್ಯ-ಸಂಸ್ಕೃತಿ-ರಾಷ್ಟ್ರೀಯತೆ-ಮಾಧ್ಯಮ ಮೊದಲಾದ ವಿಷಯಗಳನ್ನು ಕುರಿತು ಕಾರ್ಯಕ್ರಮಗಳು ನಡೆದಿದ್ದು, ನವೆಂಬರ್ 4 ರಂದು ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ವಿಷಯವಾಗಿ ಅಡ್ಡಂಡ ಕಾರ್ಯಪ್ಪ, ‘ಭಾರತೀಯತೆಯ ಸತ್ತ್ವ ‘ ಕುರಿತು ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿದರು. ನವೆಂಬರ್ 5ರಂದು ನಿವೃತ್ತ ಭೂವಿಜ್ಞಾನಿ, ಪ್ರಸಿದ್ಧ ವಿಜ್ಞಾನಲೇಖಕರಾದ ಡಾ. ಟಿ. ಆರ್. ಅನಂತರಾಮು ಅವರೊಂದಿಗೆ ಮತ್ತು ಸಂಸ್ಕೃತಿ ಚಿಂತರು, ಅಂಕಣಕಾರರೂ ಆದ ಡಾ. ಆರತಿ ವಿ. ಬಿ. ಅವರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆದವು.

ನವೆಂಬರ್ 11ರಂದು ಅಜಿತ್ ಹನಮಕ್ಕನವರ್ ಅವರು ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ವಿಷಯವಾಗಿ ಮಾತನಾಡಿದರೆ, ಐವರು ಯುವ ಮಿತ್ರರು (ಪ್ರೊ. ಚೇತನ್, ಸುದೀಪ್, ಸ್ಫೂರ್ತಿ ಮುರಳೀಧರ್, ಚಂದನಾ ವೆಂಕಟೇಶ್, ಕಿರಣಕುಮಾರ್ ವಿವೇಕವಂಶಿ) ‘ನಾನೇಕೆ ಓದುತ್ತೇನೆ?’ ಎಂಬ ಕುರಿತು ಚರ್ಚೆಯನ್ನು ನಡೆಸಿಕೊಟ್ಟರು.

ನವೆಂಬರ್ 12ರಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂ. ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಅವರು ‘ಸಾಹಿತ್ಯ ಸಾನ್ನಿಹಿತ್ಯ’ ಪುಸ್ತಕ ಲೋಕಾರ್ಪಣೆ ಮಾಡಿದರು; ದಿವಾಕರ ಹೆಗಡೆ ಅವರು ಪುಸ್ತಕವನ್ನು ಪರಿಚಯಿಸಿದರು. ಅಂದು ಸಾಯಂಕಾಲ ‘ಕನ್ನಡ ಕವಿಗಳು ಕಂಡ ಭಾರತ’ ವಿಷಯವಾಗಿ ಡಾ. ಬಿ. ವಿ. ವಸಂತಕುಮಾರ್ ವಿಶೇಷ ಉಪನ್ಯಾಸ ನೀಡಿದರು, ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಕೆ. ಎನ್. ಚನ್ನೇಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನವೆಂಬರ್ 18 ರಂದು ‘ಏಕರೂಪ ನಾಗರಿಕ ಸಂಹಿತೆ: ಸಾಧ್ಯತೆ-ಸವಾಲುಗಳು’ ವಿಷಯವಾಗಿ ಪ್ರೊ ಎ. ಷಣ್ಮುಖ ಅವರು ವಿಶೇಷ ಉಪನ್ಯಾಸ ನೀಡಿದರು. ಬಹುಶ್ರುತ ವಿದ್ವಾಂಸರಾದ ಡಾ. ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ‘ವ್ಯಾಸಂಗದ ಹವ್ಯಾಸ’ ವಿಷಯವಾಗಿ ಸಂವಾದ ನಡೆಯಿತು. ನವೆಂಬರ್ 19ರಂದು ‘ಕನ್ನಡ ಚಳವಳಿ: ನಡೆದುಬಂದ ದಾರಿ’ ವಿಷಯವಾಗಿ ಚಲುವಾದಿ ಜಗನ್ನಾಥ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ನವೆಂಬರ್ 24, 25 ಎರಡು ದಿಗಳ ಕಾಲ ನಾಲ್ಕು ವಿಶೇಷ ಉಪನ್ಯಾಸಗಳು ನಡೆದಿದ್ದು, ಪೂಜ್ಯ ಸಿದ್ದೇಶ್ವರ ಸ್ವಾಮಿಗಳನ್ನು ಕುರಿತು ಸಂಗಮೇಶ್ ಪೂಜಾರ್, ಸ್ವ, ರಂಗಾ ಹರಿ ಅವರನ್ನು ಕುರಿತು ವಿ. ನಾಗರಾಜ್, ‘ಕನ್ನಡದ ವಿಶಿಷ್ಟ ಕೃತಿ – ಶಾಸನ ಪದ್ಯಮಂಜರಿ’ ಕುರಿತು ಡಾ. ಕೆ. ಆರ್. ಗಣೇಶ್, ‘ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ’ ಕುರಿತು ಡಾ. ಜಿ. ಬಿ. ಹರೀಶ್ ಮಾತನಾಡಿದರು.

(ಈ ಎಲ್ಲ ಉಪನ್ಯಾಸಗಳೂ ಈಗ ರಾಷ್ಟೋತ್ಥಾನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ ಇವೆ)

ವಾರದ ದಿನಗಳಲ್ಲಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಬೆಂಗಳೂರಿನಲ್ಲಿರುವ ಮೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಮತ್ತು ರಾಷ್ಟ್ರೋತ್ಥಾನ ಸಂಗೀತ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೆಂಪೇಗೌಡ ನಗರದಲ್ಲಿರುವ ಸದ್ಗುರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದಲೂ ‘ದಾಸರಪದ ಗಾಯನ’ ಕಾರ್ಯಕ್ರಮ ನಡೆದಿದೆ.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಪುಸ್ತಕಗಳ ಮಾರಾಟದ ದೃಷ್ಟಿಯಿಂದಲೂ ಓದುಗರಿಂದ ಉತ್ತಮ ಸ್ಪಂದನೆ ದೊರೆತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ ಡಿವಿಜಿ, ಎಸ್. ಎಲ್. ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಕೃ, ದೇವುಡು, ತರಾಸು, ಕೆ. ಎನ್. ಗಣೇಶಯ್ಯ, ಜೋಗಿ, ವಸುಧೇಂದ್ರ, ಕೆ. ಎಸ್. ನಾರಾಯಣಾಚಾರ್ಯ, ಸುಧಾ ಮೂರ್ತಿ ಸೇರಿದಂತೆ ಹಲವರು ಪ್ರಸಿದ್ಧ ಲೇಖಕರ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ – ಲೇಖಕರ ಪುಸ್ತಕಗಳಿಗೂ ವಿಶೇಷ ರಿಯಾಯಿತಿ ನೀಡುತ್ತಿರುವುದಕ್ಕೆ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ, ‘ಮೂಲ ಪ್ರಕಾಶಕರೂ ನೀಡದ ರಿಯಾಯಿತಿ ನೀಡುತ್ತಿದ್ದೀರಿ’ ಎಂದು ನಮ್ಮ ಬೆನ್ನು ತಟ್ಟಿದ್ದಾರೆ.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ದ ಎಂಟುನೂರಕ್ಕೂ ಹೆಚ್ಚು ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ನೂರಾರು ವೈವಿಧ್ಯಮಯ ಪುಸ್ತಕಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿಯ ವೈವಿಧ್ಯವನ್ನು ಕಂಡು ಮಕ್ಕಳೂ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ

ಪ್ರತಿದಿನ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಿಗಾಗಿ ‘ಲಕ್ಕಿ ಡ್ರಾ’ದ ವ್ಯವಸ್ಥೆ ಮಾಡಿದ್ದು, ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತಿದೆ. ಪುಸ್ತಕ ಹಬ್ಬದ ಪ್ರಯುಕ್ತ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ

Continue Reading

ಕಲೆ/ಸಾಹಿತ್ಯ

Booker Prize: ಐರ್ಲೆಂಡ್‌ನ ಪಾಲ್‌ ಲಿಂಚ್‌ ಕಾದಂಬರಿ ʼಪ್ರೊಫೆಟ್‌ ಸಾಂಗ್‌ʼಗೆ ಬೂಕರ್‌ ಪ್ರಶಸ್ತಿ

ಪಾಲ್‌ ಲಿಂಚ್‌ ಅವರ ಐದನೆಯ ಕಾದಂಬರಿಯಿದು. ಐರಿಶ್ ಸರ್ಕಾರ ದಬ್ಬಾಳಿಕೆಯ ಆಡಳಿತದತ್ತ ಸಾಗುವುದು, ಕುಟುಂಬ ಮತ್ತು ದೇಶ ದುರಂತದ ಅಂಚಿನಲ್ಲಿರುವುದನ್ನು ಈ ಕೃತಿ ಚಿತ್ರಿಸುತ್ತದೆ.

VISTARANEWS.COM


on

paul lynch booker prize
Koo

ಲಂಡನ್: ಐರಿಶ್ ಬರಹಗಾರ ಪಾಲ್ ಲಿಂಚ್ (Paul Lynch) ಅವರ ಕಾದಂಬರಿ ʼಪ್ರೊಫೆಟ್ ಸಾಂಗ್’ಗೆ (Prophet Song) 2023ರ ಸಾಲಿನ ಬೂಕರ್ ಪ್ರಶಸ್ತಿ (Booker Prize 2023) ದೊರೆತಿದೆ.

ಪಾಲ್‌ ಲಿಂಚ್‌ ಅವರ ಐದನೆಯ ಕಾದಂಬರಿಯಿದು. ಐರಿಶ್ ಸರ್ಕಾರ ದಬ್ಬಾಳಿಕೆಯ ಆಡಳಿತದತ್ತ ಸಾಗುವುದು, ಕುಟುಂಬ ಮತ್ತು ದೇಶ ದುರಂತದ ಅಂಚಿನಲ್ಲಿರುವುದನ್ನು ಈ ಕೃತಿ ಚಿತ್ರಿಸುತ್ತದೆ. ಪಾಶ್ಚಿಮಾತ್ಯ ದೇಶಗಳ ಪ್ರಜಾಪ್ರಭುತ್ವಗಳಲ್ಲಿನ ಅಶಾಂತಿ, ಸಿರಿಯಾದ ದಂಗೆಗಳಂತಹ ವಿಪತ್ತುಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನ ಉದಾಸೀನತೆಯನ್ನು ಎತ್ತಿ ತೋರಿಸಲು ಈ ಕೃತಿ ಪ್ರಯತ್ನಿಸಿದೆ.

“ಬಾಗಿಲಿನ ಮೇಲೆ ಮೊದಲ ಬಡಿತದಿಂದಲೇ ʼಪ್ರೊಫೆಟ್‌ ಸಾಂಗ್‌ʼ ನಮ್ಮ ಅಸ್ಥಿರಗೊಳಿಸುತ್ತದೆ; ಐರ್ಲೆಂಡ್‌ನಲ್ಲಿ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಮಹಿಳೆಯ ಭಯಾನಕ ಅವಸ್ಥೆಯನ್ನು ನಾವು ಅನುಸರಿಸುತ್ತ ಹೋಗುತ್ತೇವೆ” ಎಂದು ಬೂಕರ್‌ ತೀರ್ಪುಗಾರ ಮಂಡಳಿಯ ಅಧ್ಯಕ್ಷರಾದ ಇಸಿ ಎಡುಗ್ಯಾನ್ ಹೇಳಿದರು. “ಇದು ಭಾವನಾತ್ಮಕ ಕಥೆ ಹೇಳುವಿಕೆ, ದಿಟ್ಟತನ ಮತ್ತು ಕೆಚ್ಚೆದೆಯ ವಿಜಯವಾಗಿದೆ” ಎಂದು ಅವರು ಶ್ಲಾಘಿಸಿದ್ದಾರೆ.

ಪಾಲ್ ಲಿಂಚ್ ಈ ಹಿಂದೆ ಐರ್ಲೆಂಡ್‌ನ ಸಂಡೇ ಟ್ರಿಬ್ಯೂನ್ ಪತ್ರಿಕೆಯ ಮುಖ್ಯ ಚಲನಚಿತ್ರ ವಿಮರ್ಶಕರಾಗಿದ್ದರು. ತಮ್ಮ ಬರವಣಿಗೆಯ ತೀವ್ರವಾದ ವಾಸ್ತವಿಕತೆಯೊಂದಿಗೆ, ಹೆಚ್ಚಿಸಲಾದ ಅರಾಜಕತೆಯೊಂದಿಗೆ, ನಿರಂಕುಶವಾದವನ್ನು ಓದುಗರು ಅರ್ಥಮಾಡಿಕೊಳ್ಳಬೇಕೆಂದು ಲಿಂಚ್‌ ಬಯಸುತ್ತಾರೆ. “ಪುಸ್ತಕದ ಅಂತ್ಯದ ವೇಳೆಗೆ, ತಮಗೇ ತಿಳಿಯದಂತೆಯೇ ಈ ಸಮಸ್ಯೆಯನ್ನು ಅವರು ಸ್ವತಃ ಅನುಭವಿಸುತ್ತಾರೆ” ಎಂದಿದ್ದಾರೆ ಅವರು.

ಐರಿಸ್ ಮುರ್ಡೋಕ್, ಜಾನ್ ಬಾನ್‌ವಿಲ್ಲೆ, ರಾಡಿ ಡಾಯ್ಲ್ ಮತ್ತು ಆನ್ನೆ ಎನ್‌ರೈಟ್ ನಂತರ ಬೂಕರ್ ಪ್ರಶಸ್ತಿಯನ್ನು ಗೆದ್ದ ಐದನೇ ಐರಿಶ್ ಲೇಖಕರಾಗಿದ್ದಾರೆ ಲಿಂಚ್.‌ ಐರಿಶ್ ಬರಹಗಾರ್ತಿ ಅನ್ನಾ ಬರ್ನ್ಸ್ 2018ರಲ್ಲಿ ಗೆದ್ದಿದ್ದಾರೆ. 1969ರಲ್ಲಿ ಸ್ಥಾಪನೆಯಾದ ಬೂಕರ್ ಪ್ರಶಸ್ತಿಯು ಯು.ಕೆ ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಯಾವುದೇ ದೇಶದ ಇಂಗ್ಲಿಷ್ ಭಾಷೆಯ ಕಾದಂಬರಿಗಳಿಗೆ ಮುಕ್ತವಾಗಿದೆ. ಮಾರ್ಗರೆಟ್ ಅಟ್‌ವುಡ್, ಸಲ್ಮಾನ್ ರಶ್ದಿ ಮತ್ತು ಯಾನ್ ಮಾರ್ಟೆಲ್‌ರಂಥ ದೊಡ್ಡ ಬರಹಗಾರರು ಇದನ್ನು ಪಡೆದಿದ್ದಾರೆ.

ʼಪ್ರೊಫೆಟ್ ಸಾಂಗ್’ ಅನ್ನು ಒನ್‌ವರ್ಲ್ಡ್ ಯುಕೆ ಪ್ರಕಾಶನ ಪ್ರಕಟಿಸಿದೆ. ಇದೇ ಪ್ರಕಾಶನದ ಮರ್ಲಾನ್ ಜೇಮ್ಸ್ ಅವರ ʼಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್’ 2015ರಲ್ಲಿ ಮತ್ತು ಪಾಲ್ ಬೀಟಿಯ ʼದಿ ಸೆಲ್ಔಟ್’ 2016ರಲ್ಲಿ ಬೂಕರ್‌ ಪಡೆದಿದ್ದವು. ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಡಬ್ಲಿನ್‌ನ ಲಿಂಚ್‌ 50,000 ಪೌಂಡ್ ಮೊತ್ತದ (52.53 ಲಕ್ಷ ರೂ.) ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು.

ಇದನ್ನೂ ಓದಿ: Booker Prize 2023: ಭಾರತೀಯ ಮೂಲದ ಚೇತನಾ ಮಾರೂ ಕೃತಿ ʼವೆಸ್ಟರ್ನ್‌ ಲೇನ್‌ʼ ಬೂಕರ್‌ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ

Continue Reading

ಕಲೆ/ಸಾಹಿತ್ಯ

ಕರಾವಳಿ ಉತ್ಸವ; ಪ್ರೆಸ್ಟೀಜ್‌ ಫಾಲ್ಕನ್ ಸಿಟಿಯಲ್ಲಿ ತುಳುನಾಡಿನ ಕಲೆ, ಸಂಸ್ಕೃತಿ ಅನಾವರಣ

ಬೆಂಗಳೂರಿನ ಕನಕಪುರ ಮುಖ್ಯರಸ್ತೆಯ ಪ್ರೆಸ್ಟೀಜ್‌ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ ನಮ್ಮ ಕರಾವಳಿ ಉತ್ಸವ ಆಯೋಜಿಸಲಾಗಿದೆ.

VISTARANEWS.COM


on

Karavali utsava 1
Koo

ಬೆಂಗಳೂರು: ಕನಕಪುರ ಮುಖ್ಯರಸ್ತೆಯ ಪ್ರೆಸ್ಟೀಜ್‌ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ ನಮ್ಮ ಕರಾವಳಿ ಉತ್ಸವ ಎಲ್ಲರ ಗಮನ ಸೆಳೆದಿದೆ. ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಿವಾಸಿಗಳ ಸಂಘದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಆಹಾರಗಳ ಸೊಗಡು ಅನಾವರಣವಾಗಿದೆ.

ತುಳುನಾಡಿನ ಬಹು ಮುಖ್ಯ ಆಚರಣೆ ಆದ ಹುಲಿ ವೇಷ ಕುಣಿತ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು. ಅಪಾರ್ಟ್ಮೆಂಟ್ ನಿವಾಸಿಗಳು ಒಟ್ಟಾಗಿ ಕರಾವಳಿ ಉತ್ಸವಕ್ಕೆ ಸಾಥ್ ನೀಡಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದ ಉತ್ಸವದಲ್ಲಿ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರುಗು ಹೆಚ್ಚಿಸಿದವು.

ಇದನ್ನೂ ಓದಿ | Bangalore Kambala : ರಾಜಧಾನಿಯಲ್ಲಿ ಕೋಣಗಳ ರಾಜ ದರ್ಬಾರ್‌ ಹೇಗಿತ್ತು; ಚಿತ್ರಗಳಲ್ಲಿ ನೋಡಿ

ಇದೇ ವೇಳೆ ಮಾತನಾಡಿದ ಪ್ರೆಸ್ಟೀಜ್ ಫಾಲ್ಕನ್ ಸಿಟಿ ನಿವಾಸಿಗಳ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ವಾಯು ಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವಸಂತ್ ಕುಮಾರ್, ನಾವು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ನಮ್ಮ ಅಪಾರ್ಟ್ಮೆಂಟ್‌ನ ಎಲ್ಲ ನಿವಾಸಿಗಳು ಭಾಗಿಯಾಗಿದ್ದಾರೆ ಅಂತ ಮಾಹಿತಿ ನೀಡಿದರು.

ನವೆಂಬರ್‌ 24ರಂದು ನಮ್ಮ ಕರಾವಳಿ ಉತ್ಸವ ಆರಂಭವಾಗಿದ್ದು, ಶುಕ್ರವಾರ, ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನ.26ರಂದು ಮಂಜು ಡ್ರಮ್ಸ್‌ ಕಲೆಕ್ಟೀವ್‌ ತಂಡದಿಂದ ಸೌಂಡ್ಸ್‌ ಆಫ್‌ ಕರಾವಳಿ , ʼಶ್ರೀ ದೇವಿ ಮಹಾತ್ಮೆʼ ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Continue Reading
Advertisement
Assembly Election Results 2023
ದೇಶ4 mins ago

ಕಾಂಗ್ರೆಸ್‌ಗೆ ತೆಲಂಗಾಣ, 3 ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ; ಫಲಿತಾಂಶದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Maratha Mahamela cannot be held Belagavi district administration denies permission for MES
ಕರ್ನಾಟಕ26 mins ago

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Tulu Language
ಕರ್ನಾಟಕ28 mins ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತಿನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ42 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ43 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ55 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್1 hour ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ1 hour ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ2 hours ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ21 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌