‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್! - Vistara News

ಸಿನಿಮಾ

‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

‌Actor Dwarakish: ಅಂಬರೀಶ್, ಅನಂತನಾಗ್ ರೀತಿಯಲ್ಲಿ ವಿಧಾನ ಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ನಟ ದ್ವಾರಕೀಶ್‌ ಅವರು, 2004 ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು.

VISTARANEWS.COM


on

Actor Dwarakish
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ನಟ ದ್ವಾರಕೀಶ್ (‌Actor Dwarakish) ಅವರು ಬರೀ ನಟ, ನಿರ್ಮಾಪಕ ಅಷ್ಟೇ ಅಲ್ಲ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಅಂಬರೀಶ್, ಅನಂತನಾಗ್ ಅವರ ರೀತಿಯಲ್ಲಿ ವಿಧಾನಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ಅವರು, 2004ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಹೀಗಾಗಿ ಆಪ್ತಮಿತ್ರ ಸಿನಿಮಾಕ್ಕೂ ರಾಜಕೀಯಕ್ಕೂ ನಂಟು ಇದೆ.

ʼಕನ್ನಡ ನಾಡುʼ ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ದ್ವಾರಕೀಶ್‌ ಅವರು, 2004ರಲ್ಲಿ ಆ ಪಕ್ಷದಿಂದ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು. ಹುಣಸೂರು ತಮ್ಮ ಹುಟ್ಟೂರು ಆಗಿದ್ದರಿಂದ ಅಲ್ಲಿ ಜನರು ಕೈ ಹಿಡಿಯುತ್ತಾರೆ ಎಂದು ಚುನಾವಣಾ ಕಣಕ್ಕಿಳಿದಿದ್ದರು. ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಹೋದಾಗ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆ ಚುನಾವಣೆಯಲ್ಲಿ ಕೇವಲ 2300 ಮತಗಳನ್ನು ಪಡೆದು ಡೆಪಾಸಿಟ್ ಸಹ ಕಳೆದುಕೊಂಡರು.

ಇದನ್ನೂ ಓದಿ | Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

ಅಂದು ಕನ್ನಡ ನಾಡು ಪಕ್ಷದಿಂದ ಗೆದ್ದಿದ್ದು ಕೇವಲ ಸುರಪುರದ ರಾಜುಗೌಡ ಮಾತ್ರ (ಈಗ ಉಪಚುನಾವಣೆ ನಡೆಯಿತ್ತಿದ್ದು, ರಾಜುಗೌಡ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ). ಆಪ್ತಮಿತ್ರ ಸಿನಿಮಾ ಶೂಟಿಂಗ್ ನಡುವೆಯೇ ದ್ವಾರಕೀಶ್‌ ಅವರು ಪ್ರಚಾರ ನಡೆಸಿದರು. ಆದರೆ ಕ್ಷೇತ್ರದ ಜನ ಕೈ ಹಿಡಿದಿರಲಿಲ್ಲ, ಆಪ್ತಮಿತ್ರ ಸಿನಿಮಾ ಮಾತ್ರ ಕೈ ಹಿಡಿದಿತ್ತು. ಬ್ಯಾಲೆಟ್‌ನಲ್ಲಿ ಸೋಲಿಸಿದ್ದ ಜನ‌, ಸಿನಿಮಾ ಮಂದಿರದಲ್ಲಿ ದ್ವಾರಕೀಶ್ ಅವರನ್ನು ನಿರ್ಮಾಪಕ ಹಾಗೂ ಸಹನಟನಾಗಿ ಗೆಲ್ಲಿಸಿದ್ದರು.

ಅಣ್ಣಾವ್ರಿಗೆ ಆಪ್ತ, ವಿಷ್ಣುವರ್ಧನ್‌ಗೆ ಆಪ್ತಮಿತ್ರ ದ್ವಾರಕೀಶ್;‌ ಇವರ ನಂಟು ಹೇಗಿತ್ತು?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್‌ (81) (Actor Dwarakish) ಅವರು ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆ, ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ದ್ವಾರಕೀಶ್‌ ಅವರು ಸ್ನೇಹಜೀವಿಯೂ ಆಗಿದ್ದರು. ಅದರಲ್ಲೂ, ಡಾ.ರಾಜಕುಮಾರ್‌ (Dr Rajkumar), ಡಾ.ವಿಷ್ಣುವರ್ಧನ್‌ (Dr Vishnuvardhan) ಅವರೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. ಅದರಲ್ಲೂ, ವಿಷ್ಣುವರ್ಧನ್‌ ಅವರ ಜತೆ ಹೆಚ್ಚು ಆತ್ಮೀಯತೆ ಹೊಂದಿದ್ದರು.

ವಿಷ್ಣುವರ್ಧನ್-ದ್ವಾರಕೀಶ್‌ ಜೋಡಿ ಮೋಡಿ

ಕನ್ನಡ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಜೋಡಿಯು ಮೋಡಿ ಮಾಡಿತ್ತು. ಕಳ್ಳ-ಕುಳ್ಳ, ಕಿಟ್ಟು-ಪುಟ್ಟು, ಸಿಂಗಾಪೂರ್‌ನಲ್ಲಿ ರಾಜ-ಕುಳ್ಳ, ಗುರು-ಶಿಷ್ಯರು, ಕಿಲಾಡಿಗಳು ಸೇರಿ ಹಲವು ಸೂಪರ್‌ ಡೂಪರ್‌ ಹಿಟ್‌ ಆದ ಸಿನಿಮಾಗಳಲ್ಲಿ ಇವರ ಜೋಡಿಯು ಮೋಡಿ ಮಾಡಿತ್ತು. ದ್ವಾರಕೀಶ್‌ ನಿರ್ದೇಶನದ ಮೊದಲ ಚಿತ್ರ ನೀ ಬರೆದ ಕಾದಂಬರಿಯು ಕೂಡ ಭಾರಿ ಹಿಟ್‌ ಆಯಿತು. “ಒಂದು ದಿನವೂ ವಿಷ್ಣುವರ್ಧನ್‌ ಕಾಲ್‌ಶೀಟ್‌ ಇಲ್ಲ ಎಂದಿರಲಿಲ್ಲ” ಎಂಬುದಾಗಿ ಆಗಾಗ ದ್ವಾರಕೀಶ್‌ ಅವರು ಹೇಳುತ್ತಲೇ ಇದ್ದರು.

ಗೆಳೆಯನಿಗಾಗಿ ಸಿನಿಮಾ ಮಾಡಿದ ವಿಷ್ಣು

ಆಪ್ತಮಿತ್ರ ಸಿನಿಮಾ ಬಿಡುಗಡೆಗೂ ಮೊದಲು ದ್ವಾರಕೀಶ್‌ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು. ಅವರು ಮನೆ ಕೂಡ ಮಾರಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದರು. ಆಗ, ದ್ವಾರಕೀಶ್‌ ನೆರವಿಗೆ ಧಾವಿಸಿದ ವಿಷ್ಣುವರ್ಧನ್‌ ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ದ್ವಾರಕೀಶ್‌ ನಿರ್ಮಾಣದ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದರು. ಆಪ್ತ ಮಿತ್ರ ಸಿನಿಮಾವು ಹಿಟ್‌ ಆಗಿ, ಕಾಲವನ್ನು ತಡೆಯೋರು ಯಾರೂ ಇಲ್ಲ ಎಂದು ವಿಷ್ಣು-ದ್ವಾರಕೀಶ್‌ ಜೋಡಿ ಹಾಡು ಮನೆಮಾತಾಗಿದ್ದಲ್ಲದೆ, ದ್ವಾರಕೀಶ್‌ ಅವರು ಮತ್ತೆ ಸ್ವಂತ ಮನೆಗೆ ಯಜಮಾನರಾದರು. ಅಷ್ಟರಮಟ್ಟಿಗೆ, ಇವರ ಜೋಡಿ, ಸ್ನೇಹವು ಗಟ್ಟಿಯಾಗಿತ್ತು.

ಸ್ನೇಹದ ಸೊಗಸಿನ ಮಧ್ಯೆ ಮುನಿಸು

ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಮಧ್ಯೆ ಆಗಾಗ ಮುನಿಸು, ರಾಜಿ ನಡೆಯುತ್ತಲೇ ಇದ್ದವು. ನಾನು ಯಾವಾಗ ವಿಷ್ಣುವರ್ಧನ್‌ ಜತೆ ಮುನಿಸಿಕೊಂಡು, ನಂತರ ಒಂದಾಗಿ ಸಿನಿಮಾ ಮಾಡಿದ್ದೇನೆಯೋ, ಆ ಸಿನಿಮಾಗಳೆಲ್ಲ ಹಿಟ್‌ ಆಗಿವೆ ಎಂದು ದ್ವಾರಕೀಶ್‌ ಅವರೇ ಹೇಳುತ್ತಿದ್ದರು. ಆದರೆ, ಆಪ್ತಮಿತ್ರ ಸಿನಿಮಾ ಬಳಿಕ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಅವರ ಬಗ್ಗೆ ನೀಡಿದ ಹೇಳಿಕೆಯು ಇಬ್ಬರ ಮಧ್ಯೆ ಮತ್ತೆ ಬಿರುಕು ಮೂಡಿಸಿತು.

ಇನ್ನು, ವಿಷ್ಣುವರ್ಧನ್‌ ಅವರ ಅಗಲಿಕೆಯ ಬಳಿಕ ಯಾವಾಗ ಮಾತನಾಡಿದರೂ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಹೆಸರು ಪ್ರಸ್ತಾಪಿಸದೆ ಇರುತ್ತಿರಲಿಲ್ಲ. “ಸೂಪರ್‌ ಸ್ಟಾರ್‌ ಆಗಿದ್ದ ವಿಷ್ಣುವರ್ಧನ್‌ ಇಲ್ಲದೆ ನಾನಿಲ್ಲ. ಆದರೂ, ಆತನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ” ಎಂದು ದ್ವಾರಕೀಶ್‌ ಅವರು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು.

ಅಣ್ಣಾವ್ರಿಗೂ ಆಪ್ತರಾಗಿದ್ದ ದ್ವಾರಕೀಶ್

ಡಾ.ರಾಜಕುಮಾರ್‌ ಅವರಿಗೆ ದ್ವಾರಕೀಶ್‌ ಅವರು ಅತ್ಯಾಪ್ತರಾಗಿದ್ದರು. ಇವರಿಗೆ ಎರಡು ಸಿನಿಮಾಗಳನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು. ಅದರಲ್ಲೂ, ಮೇಯರ್‌ ಮುತ್ತಣ್ಣ ಸಿನಿಮಾದಲ್ಲಿ ರಾಜಕುಮಾರ್‌ ಹಾಗೂ ದ್ವಾರಕೀಶ್‌ ಅವರು ಒಟ್ಟಿಗೆ ನಟಿಸಿದ್ದರು. ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ರಾಜಕುಮಾರ್‌ ಅವರೊಂದಿಗೆ ನಟಿಸಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. “ಡಾ.ರಾಜಕುಮಾರ್‌ ಅವರು ಯಾವಾಗ ಸಿಕ್ಕರೂ ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಲು ಆಸೆ ಇತ್ತು. ಆದರೆ, ಅವರು ತುಂಬ ಬ್ಯುಸಿ ಇರುತ್ತಿದ್ದರು. ಆತ್ಮೀಯತೆ ಮಾತ್ರ ಚೆನ್ನಾಗಿತ್ತು” ಎಂದು ದ್ವಾರಕೀಶ್‌ ಹೇಳಿದ್ದರು.

ಮುನಿಸು, ಸಿಟ್ಟು, ಸೆಡವಿನ ಮಧ್ಯೆಯೂ ದ್ವಾರಕೀಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹ ಸಂಪಾದಿಸಿದ್ದರು. ರೆಬೆಲ್‌ ಸ್ಟಾರ್‌ ಅಂಬರೀಶ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌, ಶಂಕರ್‌ನಾಗ್‌ ಅವರ ಜತೆಯೂ ದ್ವಾರಕೀಶ್‌ ಅವರು ಉತ್ತಮ ಬಾಂಧವ್ಯ ಹೊಂದಿದ್ದರು.

ಇದನ್ನೂ ಓದಿ | Actor Dwarakish: ಕನ್ನಡ ಸಿನಿಮಾದ ʼಪ್ರಚಂಡ ಕುಳ್ಳʼ ದ್ವಾರಕೀಶ್ ಬಗ್ಗೆ ನೀವರಿಯದ 12 ವಿಶಿಷ್ಟ ಸಂಗತಿಗಳು ಇಲ್ಲಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

VISTARANEWS.COM


on

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕುರಿತು ದಿನಕ್ಕೊಂದು ಹೊಸ ಸುದ್ದಿ ಬರ್ತಿದೆ. ಇದೀಗ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರೀಕರಣಕ್ಕೂ ಮೊದಲು ನಿರ್ದೇಶಕರು ಈ ದೃಶ್ಯಗಳು ನಟಿಯ ಕಂಫರ್ಟ್ ಜೋನ್ ಒಳಗೇ ಇರುತ್ತವೆ ಎಂದು ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಚಿತ್ರೀಕರಣ ಮುಗಿದ ನಂತರ ಔಟ್‌ಪುಟ್ ನೋಡಿದ ಕಿಯಾರಾ ಅವರಿಗೆ ಆ ದೃಶ್ಯಗಳು ತೆರೆಯ ಮೇಲೆ ಅತಿ ಎನಿಸಿದೆಯಂತೆ. ಈ ಕಾರಣದಿಂದ ಅವರು ದೃಶ್ಯಗಳನ್ನು ಎಡಿಟ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಜೂನ್ 4ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ರಿಲೀಸ್ ದಿನಾಂಕ ಸದ್ಯಕ್ಕೆ ಮುಂದೂಡಿಕೆ ಆಗಿದೆ. ಹೊಸ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

Continue Reading

Latest

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

VISTARANEWS.COM


on

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಗಂಡು ಮಗು ಜನಿಸಿದ ವಿಚಾರವನ್ನು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಶೇರ್‌ ಮಾಡಿದ್ದಾರೆ. ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ಗಂಡು ಮಗುವನ್ನು ಸ್ವಾಗತಿಸಿದೆ.

Continue Reading

Latest

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್’

VISTARANEWS.COM


on

ಜಪಾನ್‌ಗೆ ಲಗ್ಗೆ ಇಡಲು ಸಜ್ಜಾದ ʼಧುರಂಧರ್'

ಆದಿತ್ಯ ಧರ್ ನಿರ್ದೇಶನದ ʼಧುರಂಧರ್’ (ಭಾಗ 1) ಈಗ ಜಪಾನ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬರೋಬ್ಬರಿ 1328 ಕೋಟಿ ರೂಪಾಯಿಗಳಿಗೂ ಹೆಚ್ಚು ಸಂಗ್ರಹ ಮಾಡಿ ದಾಖಲೆ ಬರೆದಿತ್ತು. ಇದೀಗ ಜುಲೈ 10, 2026 ರಂದು ಜಪಾನ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ರಣವೀರ್ ಸಿಂಗ್ ಅವರ ಪವರ್‌ಫುಲ್ ಆಕ್ಷನ್ ಮತ್ತು ಅದ್ಭುತ ಮೇಕಿಂಗ್‌ನಿಂದಾಗಿ ಈ ಸಿನಿಮಾ ಜಪಾನ್ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಮೂಡಿಸಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

Continue Reading

Latest

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

VISTARANEWS.COM


on

ಡಾಲಿ ಧನಂಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದಂಪತಿ!

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಡಾ. ಧನ್ಯತಾ ಈಗ ಹೊಸ ಸಂಭ್ರಮದಲ್ಲಿದ್ದಾರೆ. ಮದುವೆಯಾದ ಕೆಲವು ತಿಂಗಳುಗಳ ನಂತರ ಈ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಪೋಸ್ಟ್ ಹಂಚಿಕೊಂಡಿರುವ ಅವರು, Our universe is expanding ಎಂದು ಬರೆಯುವ ಮೂಲಕ ತಂದೆ-ತಾಯಿ ಆಗುತ್ತಿರುವ ಸಂತಸದ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನಟ ಧನಂಜಯ್ ಅವರು 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾ. ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಅದ್ಧೂರಿ ಮದುವೆಯಲ್ಲಿ ಚಿತ್ರರಂಗ ಹಾಗೂ ರಾಜಕೀಯದ ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದರು. ಇದೀಗ ಡಾಲಿ ದಂಪತಿ ನೀಡಿರುವ ಈ ಗುಡ್ ನ್ಯೂಸ್ ಕೇಳಿ ಅವರ ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್‌ನ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

Continue Reading
Advertisement
Latest20 minutes ago

ಸಿಎಂ ಆದ ಮರುದಿನವೇ ಮಾಜಿ ಸಿಎಂ ಸ್ಟಾಲಿನ್‌ ಭೇಟಿಯಾದ ವಿಜಯ್‌

Latest1 day ago

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ

ಚಿತ್ರದುರ್ಗ1 day ago

ಡಿ. ಸುಧಾಕರ್‌ ನಿಧನ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಸಿಎಂ ಸಿದ್ದರಾಮಯ್ಯ

Latest1 day ago

ಸಿಎಂ ವಿಜಯ್‌ ಮೊದಲ ಭಾಷಣ : “8 ಕೋಟಿ ಜನರೂ ನನ್ನವರೇ” ಎಂದ ವಿಜಯ್‌

Latest1 day ago

ತಮಿಳುನಾಡು ಸಿಎಂ ಆಗಿ ವಿಜಯ್‌ ಪದಗ್ರಹಣ

ಪ್ರಮುಖ ಸುದ್ದಿ2 days ago

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್‌ : ನಾಳೆಯೇ ಪ್ರಮಾಣವಚನ ಸಾಧ್ಯತೆ

Latest2 days ago

ರಾಜ್ಯಪಾಲರ ಭೇಟಿಗೆ ವಿಜಯ್‌ :ವಿಸಿಕೆ ಬೆಂಬಲ ಬಹುತೇಕ ಫೈನಲ್‌?

Latest2 days ago

ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪದಗ್ರಹಣ

Rakshit Shetty Richard Anthony Produce By Hombale
ದೇಶ3 days ago

ಸುವೇಂದು ಅಧಿಕಾರಿ ಪ.ಬಂಗಾಳದ ಹೊಸ ಸಿಎಂ, ಶನಿವಾರ ಪ್ರಮಾಣವಚನ

ಪ್ರಮುಖ ಸುದ್ದಿ3 days ago

ಹಡಗಿನಲ್ಲಿ ಹ್ಯಾಂಟವೈರಸ್‌ ದಾಂಗುಡಿ, ಕೊರೋನಾವನ್ನೂ ಮೀರಿಸುತ್ತಾ ಈ ಪಿಡುಗು?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌