Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್‌ ನಟಿ ಬಿಪಾಶಾ ಬಸು - Vistara News

ಬಾಲಿವುಡ್

Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್‌ ನಟಿ ಬಿಪಾಶಾ ಬಸು

ಬಾಲಿವುಡ್‌ ನಟಿ ಬಿಪಾಶಾ ಬಸು (Bipasha Basu) ಮಗಳ ಜತೆ ಇರುವ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ.

VISTARANEWS.COM


on

Bipasha Basu daughter Devi,
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ನಟಿ ಬಿಪಾಶಾ ಬಸು (Bipasha Basu) ಇದೇ ಮೊದಲ ಬಾರಿಗೆ ಮಗಳ ಜತೆ ಇರುವ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮಗಳ ಮುಖವನ್ನು ಹಾರ್ಟ್‌ ಎಮೋಜಿಯಿಂದ ಮರೆಮಾಚಿ ವಿಶೇಷ ಕ್ಯಾಪ್ಷನ್‌ ನೀಡಿದ್ದಾರೆ.

ಬಿಪಾಶಾ ಬಸು ಹೆಣ್ಣು ಮಗುವಿಗೆ ನವೆಂಬರ್‌ 12ರಂದು ಜನ್ಮ ನೀಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಅವರು ಕಳೆದ ಆಗಸ್ಟ್‌ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿ ತಿಳಿಸಿದ್ದರು. ಇದೀಗ ಮಗಳು ದೇವಿ ಹಾಗೂ ಪತಿ ಕರಣ್‌ ಸಿಂಗ್‌ ಗ್ರೋವರ್‌ ಜತೆ ಇರುವ ಫೋಟೊ ಶೇರ್‌ ಮಾಡಿಕೊಂಡುʻʻ ನಮ್ಮ ಈ ಮುದ್ದು ಮಗಳಿಗೆ ಕ್ವಾರ್ಟರ್ ಕಪ್ ಆಫ್ ತಂದೆಯ ಪ್ರೀತಿ, ಕ್ವಾರ್ಟರ್ ಕಪ್ ಆಫ್ ತಾಯಿ ಪ್ರೀತಿ ಹಾಗೇ ಅರ್ಧ ಕಪ್ ಅಮ್ಮನ ಆಶೀರ್ವಾದ ಮತ್ತು ಪ್ರೀತಿʼʼ ಹೀಗೆ ಹಲವಾರು ಅಂಶಗಳನ್ನು ಹೇಳಿಕೊಂಡು ಕ್ಯೂಟ್‌ ಆಗಿ ಮುದ್ದು ಮಗಳ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Bipasha Basu | ಬೇಬಿ ಬಂಪ್ ಫೋಟೋ ಪ್ರಕಟಿಸಿದ ಬಿಪಾಶಾ, ಅಭಿಮಾನಿಗಳು ಏನೆಂದರು?

ತಮ್ಮ ಮಗಳಿಗೆ ದೇವಿಯ ಆಶೀರ್ವಾದ ಎಂದು ಕರೆಯುವ ಬಿಪಾಶಾ ಮಗಳಿಗೆ ‘ದೇವಿ’ ಎಂದೂ ನಾಮಕರಣ ಮಾಡಿದ್ದಾರೆ. ಮಗುವಿನ ಹೆಸರು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮೊದಲು ತಮ್ಮ ಪತಿ ಕರಣ್‌ ಸಿಂಗ್‌ ಗ್ರೋವರ್‌ ಜತೆ ಬೇಬಿ ಬಂಪ್‌ ಫೋಟೊ ತೆಗೆಸಿಕೊಂಡು ಅದನ್ನು ಪೋಸ್ಟ್‌ ಮಾಡಿದ್ದರು. ಫೋಟೊ ಕುರಿತು ನೆಟ್ಟಿಗರಿಂದ ಸಾಕಷ್ಟು ಚರ್ಚೆಗಳೂ ಆಗಿದ್ದವು.

ಇದನ್ನೂ ಓದಿ | Bipasha Basu | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಬಿಪಾಶಾ ಬಸು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Sonakshi Sinha: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

Sonakshi Sinha: ಇತ್ತೀಚೆಗಷ್ಟೇ ಜಹೀರ್ ಇಕ್ಬಾಲ್ ಜೊತೆ ಹೊಸ ಬದುಕಿಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾ ಈಗ ಪ್ರೆಗ್ನೆಂಟ್ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊ ತೆಗೆಯಲು ಪ್ರಯತ್ನಿಸಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Sonakshi Sinha
Koo

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಇತ್ತೀಚೆಗಷ್ಟೇ ತಮ್ಮ ಪ್ರೇಮಿ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಹೊಸತರಲ್ಲೇ ನಟಿ ತಮ್ಮ ಪತಿಯ ಜೊತೆ ಆಸ್ಪತ್ರೆಯೊಂದರ ಹೊರಗೆ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ಆಕೆ ಗರ್ಭಿಣಿಯೇ ಎಂಬ ಸಂಶಯ ನೆಟ್ಟಿಗರಲ್ಲಿ ವ್ಯಕ್ತವಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ಹೊರಗೆ ನಟಿ ಸೋನಾಕ್ಷಿ ಅವರು ತಮ್ಮ ಪತಿ ಜಹೀರ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಕೆಲವರು ಅವರನ್ನು ಪೋಟೊಗಳಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿ ಪೋಟೊ ಕ್ಲಿಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಇದರಲ್ಲಿ ಕಂಡುಬಂದಿದೆ. ಈ ವಿಡಿಯೊ ಹಾಗೂ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿಯೇ ಎಂಬ ಸಂಶಯನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

Sonakshi Sinha

ಯಾಕೆಂದರೆ ಈ ಹಿಂದೆ ಮದುವೆಯಾದ ಬಾಲಿವುಡ್ ನಟಿಯರಾದ ಆಲಿಯಾ ಭಟ್, ಸ್ವರಾ ಭಾಸ್ಕರ್ ಅವರು ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಅನೇಕರು ಗಾಸಿಪ್ ಮಾಡಿದ್ದರು. ಹಾಗಾಗಿ ಸೋನಾಕ್ಷಿ ಅವರು ಕೂಡ ಇವರಂತೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ನೆಟ್ಟಿಜನ್ ಮನಸ್ಸಿನಲ್ಲಿ ಮೂಡಿದೆ ಎನ್ನಲಾಗಿದೆ. ಹಾಗಾಗಿ ನೆಟ್ಟಿಜನ್ ಸೋನಾಕ್ಷಿಯವರನ್ನು ಗರ್ಭಿಣಿ ಅವತಾರದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರು ಜೂನ್ 23ರಂದು ವಿವಾಹವಾದರು. ಅವರ ಮದುವೆಯ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅವರ ಜೋಡಿ ನೋಡಿ ಸ್ವರ್ಗದಲ್ಲಿ ಮಾಡಿದ ಪರಿಪೂರ್ಣ ಜೋಡಿ ಎಂದು ಹೊಗಳಿದ್ದಾರೆ.

Sonakshi Sinha

ಆದರೆ ಇವರಿಬ್ಬರು ಅಂತರ್ಧಮೀಯ ವಿವಾಹವಾಗಿದ್ದರಿಂದ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಸೋನಾಕ್ಷಿ ಅವರ ತಂದೆ ಶತ್ರುಘ್ನ ಸಿನ್ಹಾ ಕೂಡ ಅಸಮಾಧಾನಗೊಂಡಿದ್ದರು. ಅವರ ಮದುವೆಯಿಂದ ಅವರ ಕುಟುಂಬದವರು ಸಂತೋಷವಾಗಿಲ್ಲ ಎನ್ನಲಾಗಿತ್ತು. ಆದರೆ ಆ ಬಳಿಕ ಶತ್ರುಘ್ನ ಸಿನ್ಹಾ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಈ ದಂಪತಿ ಮದುವೆಗೂ ಮುನ್ನ 7 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಹಾಗಾಗಿ ಇವರು ಲಿವಿಂಗ್ ಟು ಗೇದರ್ ರಿಲೆಷನ್ಶಿಪ್‌ನಲ್ಲಿದ್ದರು ಎಂದು ಅನೇಕರು ಊಹಿಸಿದ್ದರು.

ಆದರೆ ನಟಿ ಈ ವದಂತಿಯನ್ನು ಅಲ್ಲಗೆಳೆದಿದ್ದು, ತಾನು ಹೆತ್ತವರೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದರು.

Continue Reading

ಬಾಲಿವುಡ್

Bigg Boss OTT 3: ಬಿಗ್‌ ಬಾಸ್‌ ಒಟಿಟಿಯಲ್ಲಿ ಇಬ್ಬರ ಹೆಂಡಿರ ಮುದ್ದಿನ ಗಂಡ; ಗೋಳೋ ಎಂದು ಅತ್ತ ಮೊದಲ ಪತ್ನಿ!

Bigg Boss OTT 3: ಖ್ಯಾತ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ ಅವರು ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ. ಆದರೆ, ಈಗ ಅರ್ಮಾನ್‌ ಮಲಿಕ್‌ ಬಿಗ್‌ ಬಾಸ್‌ ಮನೆಯಿಲ್ಲಿದ್ದಾರೆ. ಹೊಸ ಪ್ರೋಮೊದಲ್ಲಿ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್, ಕೃತಿಕಾ ಮತ್ತು ಅವರ ಪತಿಯ ಎರಡನೇ ಮದುವೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ.

VISTARANEWS.COM


on

Bigg Boss OTT 3 Armaan Malik both Kritika Malik and Payal Malik in bigg bos house
Koo

ಬೆಂಗಳೂರು: ಬಿಗ್ ಬಾಸ್ OTT ಸೀಸನ್‌ನಲ್ಲಿ (Bigg Boss OTT 3) ಅರ್ಮಾನ್ ಮಲಿಕ್ (Arman Malik) ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಭಾಗವಹಿಸಿರುವುದು ಗೊತ್ತೇ ಇದೆ.

ಈ ಶೋ ಬಹುಪತ್ನಿತ್ವವನ್ನು ಉತ್ತೇಜಿಸುತ್ತಿದೆ ಎಂದು ಹಲವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಹೊಸ ಪ್ರೋಮೊ ಒಂದು ವೈರಲ್‌ ಆಗಿದೆ.

ಹೊಸ ಪ್ರೋಮೊದಲ್ಲಿ ಅರ್ಮಾನ್ ಮಲಿಕ್ ಮೊದಲ ಪತ್ನಿ ಪಾಯಲ್, ಕೃತಿಕಾ ಮತ್ತು ಅವರ ಪತಿಯ ಎರಡನೇ ಮದುವೆ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಅರ್ಮಾನ್ ಮತ್ತು ಕೃತಿಕಾ ವಿವಾಹಿತ ಜೋಡಿಯಾಗಿ ಹೇಗೆ ಮರಳಿದರು ಎಂಬುದನ್ನು ಪಾಯಲ್ ವಿವರಿಸಿದ್ದಾರೆ.

ಇದನ್ನೂ ಓದಿ: Kanguva Release Date: ʻಕಂಗುವ’ ರಿಲೀಸ್‌ ಡೇಟ್‌ ಅನೌನ್ಸ್‌; ಧ್ರುವ ಸರ್ಜಾ ಸಿನಿಮಾ ಜತೆ ಕ್ಲ್ಯಾಶ್‌!

ಅವರಿಬ್ಬರ ನಿರ್ಧಾರದಿಂದ ಪಾಯಲ್ ಎಷ್ಟು ದುಃಖಿತರಾಗಿದ್ದಾರೆಂಬುವುದು ಎಂಬುದು ಈ ಪ್ರೋಮೊದಲ್ಲಿದೆ.

Continue Reading

ಸಿನಿಮಾ

Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ದಿ ಬ್ಲಫ್ ಇನ್ ಆಸ್ಟ್ರೇಲಿಯಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಪತಿ ನಿಕ್ ಜೋನಾಸ್, ಮಗಳು ಮಾಲತಿ ಮೇರಿ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಕೆಲವು ಅಮೂಲ್ಯ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಬೆಳ್ಳುಳ್ಳಿ ಎಸಳು ಪದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ ಎಂಬುದರ ಕುರಿತು ಅವರು ಹೇಳಿರುವುದು ವೈರಲ್ ಆಗಿದೆ.

VISTARANEWS.COM


on

By

Priyanka Chopra
Koo

ಬಾಲಿವುಡ್ ನಟಿ (Bollywood actress) ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ತಮ್ಮ ಪಾದಗಳಿಗೆ ಬೆಳ್ಳುಳ್ಳಿಯ (Garlic) ಎಸಳುಗಳನ್ನು ಉಜ್ಜಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (social media) ಹಂಚಿಕೊಂಡಿದ್ದು, ಹಲವಾರು ಬಳಕೆದಾರರು ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಮಂದಿ ಬೆಳ್ಳುಳ್ಳಿಯನ್ನು ಉಜ್ಜಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ದಿ ಬ್ಲಫ್ ಇನ್ ಆಸ್ಟ್ರೇಲಿಯಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪತಿ ನಿಕ್ ಜೋನಾಸ್, ಮಗಳು ಮಾಲತಿ ಮೇರಿ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಕೆಲವು ಅಮೂಲ್ಯ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರ ಪೋಸ್ಟ್ ನೊಂದಿಗೆ ಇದ್ದ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಚಿತ್ರದ ಸೆಟ್‌ಗಳಲ್ಲಿ ಪ್ರಿಯಾಂಕಾಗೆ ಉಂಟಾದ ಗಮನಾರ್ಹ ಗಾಯಗಳನ್ನು ಇದು ಬಹಿರಂಗಪಡಿಸಿದೆ. ನಟಿ ಕೆಲವು ಎಸಳು ಬೆಳ್ಳುಳ್ಳಿ ಮತ್ತು ಲವಂಗವನ್ನು ಬಲವಾಗಿ ಅವಳ ಪಾದಗಳಿಗೆ ಉಜ್ಜುತ್ತಿರುವ ವಿಡಿಯೋ ಇದರಲ್ಲಿದೆ. ಇದು ವಾಸ್ತವವಾಗಿ ಕೆಲವು ಖಾಯಿಲೆಗಳನ್ನು ಎದುರಿಸಲು ಅನೇಕರು ಬಳಸುವ ಸಾಂಪ್ರದಾಯಿಕ ಔಷಧವಾಗಿದೆ.

ಬೆಳ್ಳುಳ್ಳಿಯನ್ನು ಪಾದಗಳಿಗೆ ಉಜ್ಜುವುದು ಏಕೆ?

ನಟಿ ಪ್ರಿಯಾಂಕಾ ಹಂಚಿಕೊಂಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಇದು ವೈಜ್ಞಾನಿಕ ಅಂಶಗಳ ಬಗ್ಗೆಯೂ ಚರ್ಚೆಯನ್ನು ಹುಟ್ಟು ಹಾಕಿತ್ತು.

ಟಿಸರ್ ಮತ್ತು ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ ಈ ಪ್ರಕ್ರಿಯೆಯ ಸಾಕಷ್ಟು ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಮತ್ತು ಲವಂಗವನ್ನು ಕತ್ತರಿಸಿ ಪುಡಿ ಮಾಡಿದಾಗ ಇದು ಅಲಿನ್ ಅನ್ನು ಅಲಿನೇಸ್ ಕಿಣ್ವದೊಂದಿಗೆ ಸೇರುವಂತೆ ಮಾಡುತ್ತದೆ. ಇದು ಅಲಿಸಿನ್ ಎಂಬ ಹೊಸ ಸಂಯುಕ್ತವನ್ನು ಸೃಷ್ಟಿಸುತ್ತದೆ. ಬೆಳ್ಳುಳ್ಳಿ ಮತ್ತು ಪುಡಿ ಮಾಡಿದ ಲವಂಗವನ್ನು ಪಾದಗಳ ಮೇಲೆ ಉಜ್ಜಿದಾಗ ಅದು ದೇಹದಲ್ಲಿ ರಕ್ತಪ್ರವಾಹ ಚೆನ್ನಾಗಿ ನಡೆಯಲು ಸಹಾಯ ಮಾಡುತ್ತದೆ.

ವೆರಿವೆಲ್ ಹೆಲ್ತ್ ವರದಿಯ ಪ್ರಕಾರ, ಇದು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮದ ಅನಂತರ ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.


ಪ್ರಯೋಜನಗಳೇನು?

ಕ್ಲೀವ್ ಲ್ಯಾಂಡ್ ಕ್ಲಿನಿಕ್ ವರದಿಯ ಪ್ರಕಾರ, ಬೆಳ್ಳುಳ್ಳಿಯು ಉರಿಯೂತದ ಗುಣಲಕ್ಷಣಗಳ ಜೊತೆಗೆ ಅಪಾರವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೀಲು ಮತ್ತು ಸ್ನಾಯುಗಳಲ್ಲಿನ ನೋವನ್ನು ನಿವಾರಿಸಲು ಇದು ಸೂಕ್ತವಾಗಿದೆ. ಬೆಳ್ಳುಳ್ಳಿ ಲವಂಗವನ್ನು ಮೊಡವೆಗಳ ಮೇಲೆ ಉಜ್ಜುವುದರಿಂದ ಮೊಡವೆಗಳನ್ನು ದೂರಮಾಡಬಹುದು. ಆದರೂ ಅದು ನಿಮ್ಮ ಚರ್ಮಕ್ಕೆ ಸೂಕ್ತವೇ ಎಂಬುದನ್ನು ತಿಳಿದುಕೊಳ್ಳಲು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.

ಕೆಂಪು ರಕ್ತ ಕಣಗಳು ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅನ್ನು ಹೈಡ್ರೋಜನ್ ಸಲ್ಫೈಡ್ ಅನಿಲವಾಗಿ ಪರಿವರ್ತಿಸುತ್ತವೆ. ಇದು ರಕ್ತನಾಳಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಂತಿಮವಾಗಿ ಬೆಳ್ಳುಳ್ಳಿ ಕ್ರೀಡಾಪಟುವಿನ ಪಾದಕ್ಕೆ ಚಿಕಿತ್ಸೆ ನೀಡಲು ಉತ್ತಮ ಪ್ರತಿವಿಷವಾಗಿದೆ. ಇದು ಶಿಲೀಂಧ್ರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯನ್ನು ಸತತವಾಗಿ ಆಹಾರದಲ್ಲಿ ಸೇರಿಸುವುದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ಕೊಡುತ್ತದೆ. ಬೆಳ್ಳುಳ್ಳಿಯ ಎಣ್ಣೆ ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ಹೆಲ್ತ್‌ಲೈನ್ ವರದಿಯ ಪ್ರಕಾರ ಪ್ರತಿ ಊಟದಲ್ಲಿ 1 ಎಸಳಿಗಿಂತ ಹೆಚ್ಚು ಬೆಳ್ಳುಳ್ಳಿಯನ್ನು ಸೇವಿಸಲು ಪ್ರಯತ್ನಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಪ್ರಿಯಾಂಕಾ ಬಳಸುತ್ತಿರುವುದು ಏಕೆ?

ಬಳಕೆದಾರರ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ ಅವರು, ಇದು ಉರಿಯೂತ ಮತ್ತು ದೇಹದ ತಾಪವನ್ನು ಇಳಿಸಲು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

Continue Reading

ಬಾಲಿವುಡ್

Payal Ghosh: 9 ವರ್ಷ ಆಯ್ತು ಯಾರ ಜತೆಗೂ ಮಲಗಿಲ್ಲ, ಇರ್ಫಾನ್‌ ಪಠಾಣ್‌ನೇ ಕೊನೆ ಎಂದ ನಟಿ ಪಾಯಲ್‌ ಘೋಷ್‌ !

Payal Ghosh: ಕೋಲ್ಕತ್ತಾದ ಪಾಯಲ್ ಘೋಷ್‌ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟೊಂದು ಯಶಸ್ಸು ಸಿಗಲಿಲ್ಲ.ಈಗಾಗಲೇ ಸಿನಿಮಾ ಮೂಲಕ ಎಲ್ಲೂ ಸುದ್ದಿಯಲ್ಲಿ ಇಲ್ಲದ ಪಾಯಲ್‌ ಘೋಷ್‌, ಪ್ರತಿ ಬಾರಿಯೂ ಇಂಥ ಪೋಸ್ಟ್‌ ಹಾಗೂ ವಿವಾದಾತ್ಮಕ ಕಮೆಂಟ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ.

VISTARANEWS.COM


on

Payal Ghosh says she did not had physical relationship with anyone in past 9 years
Koo

ಬೆಂಗಳೂರು: ನಟಿ ಹಾಗೂ ರಾಜಕಾರಣಿ ಪಾಯಲ್‌ ಘೋಷ್‌ (Payal Ghosh) ಆಗಾಗ ತಮ್ಮ ಹೇಳಿಕೆ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇದೀಗ 9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ಆಗಾಗ ತಮ್ಮ ಹೇಳಿಕೆ ಮೂಲಕ ಪಾಯಲ್‌ ಘೋಷ್‌ ಸುದ್ದಿಯಲ್ಲಿ ಇರುತ್ತಾರೆ. ಇದೀಗ 9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ನಟಿ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻ9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ. ಇದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ ಎಂದು ನಟಿ ತಮ್ಮ ಇನ್​ಸ್ಟಾ ಪೋಸ್ಟ್​ನಲ್ಲಿ ಹೇಳಿದ್ದಾರೆ.ನಟಿ ತಾನು ಹಾಗೂ ಇರ್ಫಾನ್ ಪಠಾಣ್ ಲವ್ ಮಾಡುತ್ತಿದ್ದೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್ ಮಾಡಿ ಹೇಳಿದ್ದಾರೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ಈ ಪೋಸ್ಟ್ ನೋಡಿ ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇರ್ಫಾನ್‌ ಪಠಾಣ್‌ ಸಾಂಪ್ರದಾಯಿಕ ಕುಟುಂಬ , ಹಾಗಾಗಿ ನಾನು ಬ್ರೇಕಪ್‌ ಆದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಒಂದು ಕುಟುಂಬವನ್ನು ಹಾಳು ಮಾಡಬೇಡಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ, ಇರ್ಫಾನ್ ಪಠಾಣ್ ಸೌದಿ ಮಾಡೆಲ್ ಸಫಾ ಬೇಗ್ ಅವರನ್ನು ವಿವಾಹವಾದರು. ಹಿಂದೆ ಶಿವಾಂಗಿ ಎಂಬ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದರು. ಕೋಲ್ಕತ್ತಾದ ಪಾಯಲ್ ಘೋಷ್‌ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರೂ ಅಷ್ಟೊಂದು ಯಶಸ್ಸು ಸಿಗಲಿಲ್ಲ.

ಈಗಾಗಲೇ ಸಿನಿಮಾ ಮೂಲಕ ಎಲ್ಲೂ ಸುದ್ದಿಯಲ್ಲಿ ಇಲ್ಲದ ಪಾಯಲ್‌ ಘೋಷ್‌, ಪ್ರತಿ ಬಾರಿಯೂ ಇಂಥ ಪೋಸ್ಟ್‌ ಹಾಗೂ ವಿವಾದಾತ್ಮಕ ಕಮೆಂಟ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ. ʻʻನನ್ನ ಜೀವನದಲ್ಲಿ ಇರ್ಫಾನ್‌ ಪಠಾಣ್‌ಗಿಂತ ಚೆನ್ನಾಗಿರುವ ಆಯ್ಕೆ ಇದ್ದವು. ಆದರೆ, ಪ್ರೀತಿ ಯಾವಾಗಲೂ ಪ್ರೀತಿಯೇ ಅಲ್ಲವೇ? ನನ್ನ ತಂದೆ ನನ್ನ ಸಂಬಂಧಕ್ಕೆ ಎಷ್ಟೇ ವಿರೋಧ ವ್ಯಕ್ತ ಪಡಿಸಿದರೂ ನಾನೆಂದೂ ಮೋಸ ಮಾಡಲಿಲ್ಲ ಎಂದು ಬರೆದಿದ್ದಾರೆ. ನನ್ನ ತಂದೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಆದರೆ ನಾನು ಅವನನ್ನು ಯಾವಾಗಲೂ ಸಪೋರ್ಟ್ ಮಾಡಿದ್ದೆ. ಆದರೆ ಅವನು ನನಗೆ ಕೊಟ್ಟಿದ್ದೇನು?ʼʼ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Continue Reading
Advertisement
UGC NET Exam
ದೇಶ3 hours ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Vodafone Idea
ದೇಶ3 hours ago

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

T20 World Cup 2024
ಪ್ರಮುಖ ಸುದ್ದಿ4 hours ago

T20 World Cup 2024 : ಭಾರತ ತಂಡವನ್ನು ಟೀಕಿಸಿದ ಮೈಕೆಲ್​ ವಾನ್​ಗೆ ತಿರುಗೇಟು ಕೊಟ್ಟ ಗಂಗೂಲಿ

CM SIddaramaiah
ಪ್ರಮುಖ ಸುದ್ದಿ4 hours ago

Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Religious Freedom
ದೇಶ5 hours ago

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Virat Kohli
ಪ್ರಮುಖ ಸುದ್ದಿ5 hours ago

Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

Application Invitation to Join Air Wing NCC July 09 is the last day for submission of application
ಕರ್ನಾಟಕ6 hours ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ6 hours ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ6 hours ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ6 hours ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ9 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌