Aishwarya Rai:  ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ದಂಪತಿಯ 17ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು? - Vistara News

ಬಾಲಿವುಡ್

Aishwarya Rai:  ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ದಂಪತಿಯ 17ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು?

Aishwarya Rai: ಫೋಟೊದಲ್ಲಿ ಐಶ್ವರ್ಯಾ ಅವರು ಕ್ಯೂಟ್‌ ಆಗಿ ಕಂಡಿದ್ದಾರೆ. ಅಭಿಷೇಕ್ ಬೀಜ್ ಶರ್ಟ್‌ನಲ್ಲಿ ಸೆಲ್ಫಿಗೆ ನಗುತ್ತ ಪೋಸ್‌ ಕೊಟ್ಟಿದ್ದಾರೆ. ಆರಾಧ್ಯ ಮುದ್ದಾಗಿ ನಗುತ್ತಿದ್ದಾಳೆ. 2007 ಏಪ್ರಿಲ್ 20ರಂದ ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಜೋಡಿ.

VISTARANEWS.COM


on

Aishwarya Rai Abhishek Bachchan celebrate 17th wedding anniversary
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್‌ 20ರಂದು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಐಶ್ವರ್ಯಾ ಅವರು ಮಗಳು ಮತ್ತು ಪತಿ ಅಭಿಷೇಕ್ ಬಚ್ಚನ್ ಜತೆ ಕ್ಯೂಟ್‌ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ದಂಪತಿಯ ಅಭಿಮಾನಿಗಳು ಹಾಗೂ ಸಿನಿ ತಾರೆಯರಿಂದ ಸಾಕಷ್ಟು ವಿಶಸ್‌ಗಳು ಹರಿದು ಬಂದಿವೆ.

ಫೋಟೊದಲ್ಲಿ ಐಶ್ವರ್ಯಾ ಅವರು ಕ್ಯೂಟ್‌ ಆಗಿ ಕಂಡಿದ್ದಾರೆ. ಅಭಿಷೇಕ್ ಬೀಜ್ ಶರ್ಟ್‌ನಲ್ಲಿ ಸೆಲ್ಫಿಗೆ ನಗುತ್ತ ಪೋಸ್‌ ಕೊಟ್ಟಿದ್ದಾರೆ. ಆರಾಧ್ಯ ಮುದ್ದಾಗಿ ನಗುತ್ತಿದ್ದಾಳೆ. 2007 ಏಪ್ರಿಲ್ 20ರಂದ ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಜೋಡಿ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮಾಜಿ ವಿಶ್ವ ಸುಂದರಿ ಕಂಜೀವರಂ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರೆ, ಅಭಿಷೇಕ್ ಬಿಳಿ ಶೆರ್ವಾನಿ ಧರಿಸಿದ್ದರು. ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ʻಧೈ ಅಕ್ಷರ್ ಪ್ರೇಮ್ ಕೆʼ (2000), ʻಕುಚ್ ನಾ ಕಹೋʼ (2003), ʻಉಮ್ರಾವ್ ಜಾನ್ʼ ಮತ್ತು ʻಧೂಮ್ 2ʼ (2006), ʻಗುರುʼ (2007), ʻರಾವನ್ ʼ(2010) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಮದುವೆಗೆ ಸುಮಾರು 6-7 ಕೋಟಿ ಖರ್ಚು ಮಾಡಲಾಗಿದೆ. ಮದುವೆಯ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದಳು.

ಇದನ್ನೂ ಓದಿ: Aishwarya Rai: ತಂದೆ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಐಶ್ವರ್ಯಾ ರೈ!

ಸಿನಿಮಾ ವಿಚಾರಕ್ಕೆ ಬಂದರೆ ಆರ್ ಬಾಲ್ಕಿಯವರ 2023ರ ಚಲನಚಿತ್ರ ʻಘೂಮರ್‌ʼನಲ್ಲಿ ಅಭಿಷೇಕ್ ಕೊನೆಯದಾಗಿ ಕಾಣಿಸಿಕೊಂಡರು. ಶೀಘ್ರದಲ್ಲೇ ಶೂಜಿತ್ ಸಿರ್ಕಾರ್ ಅವರ ಮುಂದಿನ ಚಿತ್ರದಲ್ಲಿ ಅಭಿಷೇಕ್ ನಟಿಸಲಿದ್ದಾರೆ. ಐಶ್ವರ್ಯಾ ರೈ ಅವರು ಕೊನೆಯದಾಗಿ ಪೊನ್ನಿಯನ್ ಸೆಲ್ವನ್ 2ನಲ್ಲಿ ಕಾಣಿಸಿಕೊಂಡಿದ್ದರು.ಚಿತ್ರದಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದ್ದರು. ಇದುವೆರೆಗೆ ಹೊಸ ಸಿನಿಮಾವನ್ನು ನಟಿ ಅನೌನ್ಸ್‌ಮಾಡಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Munawar Faruqui:  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ ಎರಡನೇ ಪತ್ನಿ ಸಿಂಗಲ್‌ ಪೇರೆಂಟ್‌!

Munawar Faruqui: ಇನ್ನು ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಕೂಡ ಸಿಂಗಲ್‌ ಪೇರೆಂಟ್‌ ಎಂದು ವರದಿಯಾಗಿದೆ. ಮೆಹಜಬೀನ್‌ಗೆ ಈಗಾಗಲೇ 10 ವರ್ಷದ ಮಗಳಿದ್ದಾಳೆ ಎಂದು ವರದಿಯಾಗಿದೆ. ಮೆಹಜಬೀನ್ ಕೋಟ್ವಾಲಾ ಆಗಗಾಗ ಮಗಳ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಮೆಹಜಬೀನ್ ಕೋಟ್ವಾಲಾ ಕೂಡ ಮೊದಲ ಗಂಡನಿಂದ ಡಿವೋರ್ಸ್‌ ಪಡೆದುಕೊಂಡಿದ್ದಾರೆ.

VISTARANEWS.COM


on

Munawar Faruqui second wife Mehzabeen Coatwala single mom and makeup artist
Koo

ಬೆಂಗಳೂರು: ಬಿಗ್ ಬಾಸ್ 17 ವಿನ್ನರ್ ಮತ್ತು ಸ್ಟ್ಯಾಂಡ್-ಅಪ್ ಕಮಿಡಿಯನ್ಮು ಮುನಾವರ್ ಫಾರೂಕಿ (Munawar Faruqui) ಎರಡನೇ ಬಾರಿಗೆ ವಿವಾಹವಾದರು ಎಂದು ವರದಿಯಾಗಿತ್ತು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದು, ಜೋಡಿಯ ಫೋಟೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ

ಮೆಹಜಬೀನ್ ಮೇಕಪ್ ಕಲಾವಿದೆ. ಆರ್ ಮಾಧವನ್, ವರುಣ್ ಧವನ್, ಯುಜ್ವೇಂದ್ರ ಚಾಹಲ್ ನಂತಹ ನಟರುಗಳ ಪತ್ನಿಯರಿಗೆ, ನೃತ್ಯಗಾರ್ತಿ ಧನಶ್ರೀ ವರ್ಮಾ ಅವರಂತಹ ಅನೇಕ ಗಣ್ಯ ವ್ಯಕ್ಯಿಗಳಿಗೆ ಮೇಕಪ್‌ ಮಾಡಿದ್ದಾರೆ. ಸಾಕಷು ಫ್ಯಾನ್ಸ್‌ ಫಾಲೋವರ್ಸ್‌ ಕೂಡ ಹೊಂದಿದ್ದಾರೆ. ವರದಿಯ ಪ್ರಕಾರ, ಮುನಾವರ್‌ನಂತೆ, ಮೆಹಜಬೀನ್ ಅವರಿಗೆ ಕೂಡ ಇದು ಎರಡನೇ ಮದುವೆ. ಮುನಾವರ್ ಅವರಿಗೆ ಈಗಾಗಲೇ ಒಬ್ಬ ಮಗನೂ ಇದ್ದಾನೆ. ಮೊದಲ ಹೆಂಡತಿ ಜತೆ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ ಮುನಾವರ್‌.

ಇನ್ನು ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಕೂಡ ಸಿಂಗಲ್‌ ಪೇರೆಂಟ್‌ ಎಂದು ವರದಿಯಾಗಿದೆ. ಮೆಹಜಬೀನ್‌ಗೆ ಈಗಾಗಲೇ 10 ವರ್ಷದ ಮಗಳಿದ್ದಾಳೆ ಎಂದು ವರದಿಯಾಗಿದೆ. ಮೆಹಜಬೀನ್ ಕೋಟ್ವಾಲಾ ಆಗಗಾಗ ಮಗಳ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಮೆಹಜಬೀನ್ ಕೋಟ್ವಾಲಾ ಕೂಡ ಮೊದಲ ಗಂಡನಿಂದ ಡಿವೋರ್ಸ್‌ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Munawar Faruqui: ಮತ್ತೊಂದು ಮದುವೆಯಾದರಾ ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ?

ಮುನಾವರ್ ಫಾರೂಕಿ ಈ ತಿಂಗಳ ಆರಂಭದಲ್ಲಿ ಮೆಹಜಬೀನ್ ಕೋಟ್ವಾಲಾ (Mehzabeen Coatwala) ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು ಎನ್ನಲಾಗಿದೆ.ಮೂಲಗಳ ಪ್ರಕಾರ ಮುನಾವರ್ ಮದುವೆಯಲ್ಲಿ ಅವರ ಆತ್ಮೀಯರು ಮಾತ್ರ ಹಾಜರಿದ್ದರು. ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಮುಂಬೈನ ಐಟಿಸಿ ಗ್ರ್ಯಾಂಡ್ ಮರಾಠಾದಲ್ಲಿ ಆರತಕ್ಷತೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮುನಾವರ್ ಅವರ ಸ್ನೇಹಿತ-ನಟ ಹಿನಾ ಖಾನ್ ಈ ಸಮಾರಂಭಕ್ಕೆ ಆಹ್ವಾನಿತರಾದವರಲ್ಲಿ ಒಬ್ಬರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಿನಾ ಸಮಾರಂಭದ ಫೋಟೊಗಳನ್ನು ಹಂಚಿಕೊಂಡಿದ್ದರು.

2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

Continue Reading

ಬಾಲಿವುಡ್

Madhu Chopra: ಮಗಳು-ಅಳಿಯನ ವಯಸ್ಸಿನ ಅಂತರ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಹೇಳಿದ್ದೇನು?

Madhu Chopra: ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

VISTARANEWS.COM


on

Madhu Chopra on Priyanka Chopra-Nick Jonas' age gap
Koo

ಬೆಂಗಳೂರು: ಪ್ರಿಯಾಂಕಾ (Priyanka Chopra) ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1ರಂದು ಮದುವೆಯಾದರು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ (Madhu Chopra) ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ತಮ್ಮ ಮಗಳು ಮತ್ತು ನಿಕ್ ಜೋನಾಸ್ ಅವರ ಸಂಬಂಧವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಗಳು ಮತ್ತು ಅಳಿಯನಿಗೆ ಇರುವ 10 ವರ್ಷ ವಯಸ್ಸಿನ ಅಂತರ ಬಗ್ಗೆ ಮಾತನಾಡಿದ್ದಾರೆ.

ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್‌ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.

ಇದನ್ನೂ ಓದಿ: Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೊಗಳು ವೈರಲ್​ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ಬಳಿಕ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್‌ ಮಾಡಿದರು.

ಕೆಲವು ದಿನಗಳ ಹಿಂದೆ ಪ್ರಿಯಾಂಕ ಚೋಪ್ರಾ (Priyanka Chopra) ತಮ್ಮ ಸಹೋದರ ಸಿದ್ಧಾರ್ಥ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.ಸಿದ್ಧಾರ್ಥ ಹಾಗೂ ನೀಲಂ ಎಂಗೇಜ್ ಮೆಂಟ್ ನಲ್ಲಿ ಕುಟುಂಬದ ಸದಸ್ಯರು ಹಾಗೂ ಒಂದಷ್ಟು ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ಸಿದ್ದಾರ್ಥ ಹಾಗೂ ನೀಲಂ ಜೋಡಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ದಂಪತಿಗಳ ಜೊತೆ ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರ್ ಚೋಪ್ರಾ, ಆತ್ಮೀಯ ಸ್ನೇಹಿತೆ ತಮನ್ನಾ ದತ್ ಪಾಲ್ಗೊಂಡಿದ್ದರು. ಇನ್ನು ಸಾಂಪ್ರಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಿಯಾಂಕ ಕುಟುಂಬದ ಫೋಟೊ ಸಖತ್ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

Continue Reading

ಸಿನಿಮಾ

India Highest Paid Item Girl : ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಯಾರು? ಮಲೈಕಾ, ಸನ್ನಿ, ನೋರಾ ಅಲ್ವೇ ಅಲ್ಲ!

India Highest Paid Item Girl : ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ. ಕರೀನಾ ಕಪೂರ್ ಐಟಂ ಡ್ಯಾನ್ಸ್​ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ.

VISTARANEWS.COM


on

India Highest Paid Item Girl not Malaika Nora, Katrina, Sunny
Koo

ಬೆಂಗಳೂರು: ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ (India Highest Paid Item Girl ) ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್​ಗಳು ಇದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ಸಾಂಗ್‌ಗಳು ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ.

ಐಟಂ ಸಾಂಗ್‌ಗೆ ಹೆಜ್ಜೆ ಹಾಕುವವರ ಸಂಭಾವನೆ ಗಗನಕ್ಕೇರಿದೆ. ಈ ಒಬ್ಬ ‘ಐಟಂ ಗರ್ಲ್’ ಈಗ ಅನೇಕ ನಾಯಕ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಪುಷ್ಪಾ ದಿ ರೈಸ್‌ ಸಿನಿಮಾದ ಊ ಅಂಟವಾ ಹಾಡಿಗೆ ಚಿತ್ರದಲ್ಲಿ ಐದು ನಿಮಿಷಗಳ ಕಾಲ ಕಾಣಿಸಿಕೊಂಡಿದ್ದಕ್ಕಾಗಿ ದಕ್ಷಿಣದ ಸೂಪರ್‌ಸ್ಟಾರ್ ಸಮಂತಾ ರುತ್ ಪ್ರಭು 5 ಕೋಟಿ ರೂ. ಸಂಭಾವನೆ ಪಡೆದುಕೊಂಡರು. ಭಾರತೀಯ ಚಿತ್ರರಂಗದ ಯಾವ ನಟಿಯರೂ ಈ ರೀತಿ ಹಣ ಗಳಿಕೆ ಮಾಡಿಲ್ಲ. ಐಟಂ ಸಾಂಗ್‌ಗಳಿಗಾಗಿ ಹೆಚ್ಚು ಸಂಭಾವನೆ ಪಡೆಯುವ ಇತರ ನಟಿಯರೆಂದರೆ ನೋರಾ ಫತೇಹಿ ಮತ್ತು ಸನ್ನಿ ಲಿಯೋನ್. ಇಬ್ಬರೂ ಪ್ರತಿ ಹಾಡಿಗೆ 2 ಕೋಟಿ ರೂ ಪಡೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಐಟಂ ಸಾಂಗ್‌ಗಳ ರಾಣಿ ಮಲೈಕಾ ಅರೋರಾ ಇಂದು 50 ಲಕ್ಷದಿಂದ 1 ಕೋಟಿ ರೂ. ಚಾರ್ಚ್‌ ಮಾಡುತ್ತಾರೆ.

ವಿಚಿತ್ರವೆಂದರೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕಡಿಮೆ ಸಂಭಾವನೆ ಪಡೆದುಕೊಂಡಿದ್ದಾರೆ. ಪುಷ್ಪಾ ದಿ ರೈಸ್ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕಾಗಿ ರಶ್ಮಿಕಾ ಕೇವಲ 2 ಕೋಟಿ ರೂ. ಸಂಭಾವನೆ ಪಡೆದರೆ, ಜಾನ್ವಿ ಕಪೂರ್, ತಮನ್ನಾ ಭಾಟಿಯಾ ಮತ್ತು ಪೂಜಾ ಹೆಗ್ಡೆಯಂತಹ ಇತರ ಜನಪ್ರಿಯ ನಟಿಯರೆಲ್ಲರೂ ಪ್ರತಿ ಚಿತ್ರಕ್ಕೆ 5 ಕೋಟಿ ರೂ.ಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಕೇವಲ ಒಂದು ಹಾಡಿಗೆ ಸಮಂತಾ ಗಳಿಸಿದ ಗಳಿಸಿದ್ದು ಬರೋಬ್ಬರಿ 5 ಕೋಟಿ ರೂ.

ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

ಕರೀನಾ ಕಪೂರ್ ಐಟಂ ಡ್ಯಾನ್ಸ್​ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ. ಸಮಂತಾ ಆರಂಭದಲ್ಲಿ ಐಟಂ ಸಾಂಗ್‌ ಮಾಡಲು ಹಿಂಜರಿದಿದ್ದರು. ನಂತರ ಒಪ್ಪಿ ಖುಷಿಯಿಂದ ಡ್ಯಾನ್ಸ್ ಮಾಡಿದರು ಎಂದು ವರದಿಯಾಗಿದೆ.

Continue Reading

ಸಿನಿಮಾ

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

ಬಾಲಿವುಡ್ ನ ಆದರ್ಶ ಜೋಡಿಯಲ್ಲಿ ಶಾರುಖ್ ಮತ್ತು ಗೌರಿ ಅವರೂ ಸೇರಿದ್ದಾರೆ. ಈ ಜೋಡಿ ಮದುವೆಯಾಗಿ 33 ವರ್ಷಗಳಾಗಿದ್ದು ಮೂವರು ಮಕ್ಕಳ ಪೋಷಕರಾಗಿದ್ದರೆ. ಧರ್ಮದ ವಿಚಾರದಲ್ಲಿ ಗೌರಿ (Gauri Khan) ಈಗಲೂ ಹಿಂದುವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ಅವರೇ ಹೇಳಿದ್ದಾರೆ.

VISTARANEWS.COM


on

By

Gauri Khan
Koo

ಬಾಲಿವುಡ್ ನ (bollywood) ಆದರ್ಶ ದಂಪತಿಗಳ ಸಾಲಿನಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan), ಗೌರಿ ಖಾನ್ (Gauri Khan) ದಂಪತಿಯೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಿಬ್ಬರ ನಡುವಿನ ಪ್ರೀತಿ ಮತ್ತು ಹೊಂದಾಣಿಕೆ. ಇದು ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಂತೆ ಮಾಡಿದೆ.

ಅಭಿಮಾನಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವ ಈ ದಂಪತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾನು ನಿಮ್ಮೊಂದಿಗೆ ಬೆಳೆಯಲು ಬಯಸುತ್ತೇನೆ ಎಂದು ಹೇಳಿ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ.

ಗೌರಿ ಮತ್ತು ಶಾರುಖ್ ಖಾನ್ ಅವರ ಧರ್ಮ ಬೇರೆಬೇರೆಯಾದರೂ ಇದು ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮದುವೆಯ ಮೊದಲು ಕೆಲವು ತೊಂದರೆಗಳು ಎದುರಾದರೂ ಮದುವೆಯ ಬಳಿಕ ದಂಪತಿ ಎಂದರೆ ಹೀಗಿರಬೇಕು ಎನ್ನುವಷ್ಟು ಇವರಿಬ್ಬರೂ ಮಾದರಿಯಾಗಿದ್ದಾರೆ.

ಕಿಂಗ್ ಖಾನ್ ಮೊದಲಿನಿಂದಲೂ ತನ್ನ ರಾಣಿಗೆ ಆದರ್ಶ ಪತಿ. ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಮದುವೆಯಾದ ಬಳಿಕ ಗೌರಿ ಮುಸ್ಲಿಂ ಆಗಿ ಮತಾಂತರವಾಗುತ್ತಾರೆ ಎನ್ನುವ ಹೇಳಿಕೆಗಳು ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ಅವರಿಗೂ ಪದೇಪದೇ ತಾವು ಮುಸ್ಲಿಂ ಆಗಿ ಮತಾಂತರಗೊಳ್ಳುವುದಿಲ್ಲ ಎಂದು ಹೇಳಬೇಕಾದ ಸಂದರ್ಭಗಳು ಎದುರಾಗಿತ್ತು.

ಇತ್ತೀಚೆಗೆ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್‌ನಲ್ಲಿಹೃತಿಕ್ ರೋಷನ್ ಅವರ ಪತ್ನಿ ಸುಸ್ಸಾನ್ನೆ ಖಾನ್ ಅವರೊಂದಿಗೆ ಗೌರಿ ಆಗಮಿಸಿದ್ದರು. ಅಲ್ಲಿ ಗೌರಿ ಮುಸ್ಲಿಂ ಆಗಿ ಮತಾಂತರಗೊಳ್ಳದಿರುವ ಕುರಿತು ಚರ್ಚೆ
ನಡೆದಿತ್ತು.

ಯಾಕೆ ಮತಾಂತರವಾಗಲಿಲ್ಲ?

ಶಾರುಖ್ ಖಾನ್ ಅವರ ಧರ್ಮಕ್ಕೆ ನಾನು ಮತಾಂತರವಾಗುವುದಿಲ್ಲ ಎಂದು ಗೌರಿ ಖಾನ್ ಹೇಳಿರುವ ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡಿದೆ. ಇದರಲ್ಲಿ ಅವರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಉಳಿಯಲು ಕಾರಣವನ್ನೂ ಕೊಟ್ಟಿದ್ದಾರೆ.

ನಮ್ಮಿಬ್ಬರ ಮಧ್ಯೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಮತ್ತು ಅವರೂ ನನ್ನ ಧರ್ಮವನ್ನು ಗೌರವಿಸುತ್ತಾರೆ. ಹೀಗಾಗಿ ನಾನು ಮತಾಂತರಗೊಂಡು ಮುಸ್ಲಿಂ ಆಗಬೇಕು ಈ ಎನ್ನುವುದರಲ್ಲಿ ಅರ್ಥವಿಲ್ಲ. ಪರಸ್ಪರ ಜೊತೆಯಾಗಿ ಬಾಳಲು ಅದು ಅನಿವಾರ್ಯ ಎಂಬುದನ್ನು ನಾನು ನಂಬುವುದಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?


ಶಾರುಖ್‌ನಂತೆ ನನ್ನ ಧರ್ಮವನ್ನು ಯಾವತ್ತೂ ಅಗೌರವಗೊಳಿಸುವುದಿಲ್ಲ. ಮಗ ಆರ್ಯನ್ ತನ್ನ ತಂದೆಯ ಧರ್ಮವನ್ನು ಅನುಸರಿಸುತ್ತಾನೆ. ಆರ್ಯನ್ ಗೆ ಶಾರುಖ್‌ ಎಂದರೆ ತುಂಬಾ ಇಷ್ಟ.ಹೀಗಾಗಿ ಆತ ಅವರ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಮುಸ್ಲಿಂ ಎಂದು ಅವರಿಬ್ಬರು ಯಾವಾಗಲೂ ಹೇಳುತ್ತಿರುತ್ತಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ ಗೌರಿ ಖಾನ್.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 33 ವರ್ಷಗಳಾಗಿವೆ. ಬಾಲಿವುಡ್‌ನ ಈ ಸುವರ್ಣ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳಿದ್ದಾರೆ.

Continue Reading
Advertisement
Star Fashion
ಫ್ಯಾಷನ್7 mins ago

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Health Insurance
ಮನಿ-ಗೈಡ್21 mins ago

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

First successful TAVR surgery in the state at Fortis Hospital
ಬೆಂಗಳೂರು24 mins ago

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

MLA Belur Gopalakrishna election campaign for Congress candidates at ripponpete
ರಾಜಕೀಯ31 mins ago

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

Vijayanagara News Distribute good quality sowing seeds and fertilizers says Tehsildar Amaresh G K
ವಿಜಯನಗರ32 mins ago

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Vishwadarshan Education Institute President Hariprakash konemane spoke in Training Workshop for Vishwadarshan Central School Teachers at Yallapura
ಉತ್ತರ ಕನ್ನಡ34 mins ago

Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

indo Chaina border
ದೇಶ34 mins ago

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

Prevention Of Obesity
ಆರೋಗ್ಯ37 mins ago

Prevention Of Obesity: ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ ಸಾಧ್ಯ

Karnataka Weather Forecast
ಮಳೆ39 mins ago

Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

Union Minister Pralhad Joshi Statement
ಕರ್ನಾಟಕ47 mins ago

Pralhad Joshi: ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಾಕುತ್ತಿದ್ದಾರೆ ಸಿದ್ದರಾಮಯ್ಯ: ಜೋಶಿ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ5 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌