Amitabh Bachchan: ಹರಾಜಿಗಿದೆ ಅಮಿತಾಭ್ ಭವ್ಯ ಬಂಗಲೆ; ದರ ಎಷ್ಟು ನೋಡಿ! - Vistara News

ಬಾಲಿವುಡ್

Amitabh Bachchan: ಹರಾಜಿಗಿದೆ ಅಮಿತಾಭ್ ಭವ್ಯ ಬಂಗಲೆ; ದರ ಎಷ್ಟು ನೋಡಿ!

Amitabh Bachchan: ಸಾಲಗಾರರು ಮತ್ತು ಸಹ-ಸಾಲಗಾರರು ಬಾಕಿಯನ್ನು ಮರುಪಾವತಿಸಲು ವಿಫಲವಾದ ಕಾರಣ, ಅಡವಿಟ್ಟ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಬ್ಯಾಂಕ್ ನೋಟಿಸ್‌ನಲ್ಲಿ ತಿಳಿಸಿದೆ.

VISTARANEWS.COM


on

Amitabh Bachchan next door bungalow
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಮುಂಬೈನ ಜುಹು ಬೀಚ್ ಬಳಿಯಿರುವ ಬಾಲಿವುಡ್ ಸ್ಟಾರ್ ಅಮಿತಾಭ್‌ ಬಚ್ಚನ್ (Amitabh Bachchan) ಅವರ ಜಲ್ಸಾ (Jalsa) ಜಲ್ಸಾ ಸಮೀಪದ ಬಂಗಲೆ (juhu beach Mubai) ಹರಾಜಿಗೆ ಇಡಲಾಗಿದೆ. ಡಾಯ್ಚ ಬ್ಯಾಂಕ್ (duetsche bank) ಈ ಬಂಗಲೆಯನ್ನು 25 ಕೋಟಿ ರೂ.ಗೆ ಹರಾಜು ಹಾಕಿದೆ.

ಬಂಗಲೆಯ ಕಾರ್ಪೆಟ್ ಪ್ರದೇಶವು 1,164 ಚದರ ಅಡಿ ಮತ್ತು ಓಪನ್‌ ಸ್ಪೇಸ್‌ 2,175 ಚದರ ಅಡಿ ಇದೆ. ಡಾಯ್ಚ ಬ್ಯಾಂಕ್ ಹೊರಡಿಸಿದ ಸೂಚನೆಯ ಪ್ರಕಾರ ಮಾರ್ಚ್ 27ರಂದು ಹರಾಜು ನಿಗದಿಪಡಿಸಲಾಗಿದೆ. 2002ರ ಆರ್ಥಿಕ ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯಿದೆ (SARFAESI) ಅಡಿಯಲ್ಲಿ ಬಂಗಲೆಯನ್ನು ಡಾಯ್ಚ ಬ್ಯಾಂಕ್ ಹರಾಜು ಮಾಡುತ್ತಿದೆ.

ಸಾರ್ವಜನಿಕ ಸೂಚನೆಯ ಪ್ರಕಾರ, ಬ್ಯಾಂಕ್ ಏಪ್ರಿಲ್ 2022ರಲ್ಲಿ ಡಿಮ್ಯಾಂಡ್ ನೋಟಿಸ್ ಕಳುಹಿಸಿದೆ. ಸಾಲಗಾರರು ಮತ್ತು ಸಹ-ಸಾಲಗಾರರಾದ ಸೆವೆನ್ ಸ್ಟಾರ್ ಸ್ಯಾಟಲೈಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರೊಂದಿಗೆ 12.89 ಕೋಟಿ ರೂ. ಬಾಕಿ ಮೊತ್ತವನ್ನು 60 ದಿನಗಳಲ್ಲಿ ಮರುಪಾವತಿಸಲು ಕೇಳಲಾಗಿದೆ. ಸಾಲಗಾರರು ಮತ್ತು ಸಹ-ಸಾಲಗಾರರು ಬಾಕಿಯನ್ನು ಮರುಪಾವತಿಸಲು ವಿಫಲವಾದ ಕಾರಣ, ಅಡವಿಟ್ಟ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಬ್ಯಾಂಕ್ ನೋಟಿಸ್‌ನಲ್ಲಿ ತಿಳಿಸಿದೆ. ಮಾರ್ಚ್ 27ರಂದು ನಡೆದ ಹರಾಜಿನ ಬೆಲೆ 25 ಕೋಟಿ ಮತ್ತು ಇಎಂಡಿ ಮೊತ್ತ 2.50 ಕೋಟಿ ರೂ ಎಂದು ವರದಿಯಾಗಿದೆ.

ಸಾಲಗಾರರು ತಮ್ಮ ಸಾಲವನ್ನು ಮರುಪಾವತಿಸಲು ವಿಫಲವಾದ ನಂತರ ಮತ್ತು ಬ್ಯಾಂಕ್‌ಗಳು ತಮ್ಮ ಬಾಕಿಗಳನ್ನು ವಸೂಲಿ ಮಾಡುವ ಅಂತಿಮ ಪ್ರಯತ್ನದಲ್ಲಿ ಹಲವಾರು ಬ್ಯಾಂಕುಗಳು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹರಾಜು ಹಾಕುತ್ತವೆ. ಈ ಜುಹು ಬಂಗಲೆಯ ಹೊರತಾಗಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಪ್ರಸಿದ್ಧ ಜಪಾನೀಸ್ ಮತ್ತು ಕೊರಿಯನ್ ರೆಸ್ಟೋರೆಂಟ್‌ನ ಪಕ್ಕದಲ್ಲಿ ಬಾಂದ್ರಾ ಪೂರ್ವದಲ್ಲಿರುವ ಪರಿನೀ ಕ್ರೆಸೆಂಜೊ ಕಟ್ಟಡದಲ್ಲಿ ವಾಣಿಜ್ಯ ಸ್ಥಳವು ಮಾರಾಟದಲ್ಲಿದೆ. ಹೆಕ್ಟಾ ಹಂಚಿಕೊಂಡ ವಿವರಗಳ ಪ್ರಕಾರ, ಈ ಆಸ್ತಿಯನ್ನು ಮಾರ್ಚ್ 19ರಂದು 21 ಕೋಟಿ ರೂ.ಗೆ ಯೆಸ್ ಬ್ಯಾಂಕ್ ಹರಾಜಿಗೆ ಇಟ್ಟಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Amitabh Bachchan: ಟ್ರಂಪ್ ಮಗಳನ್ನು ಅಮಿತಾಭ್‌ಗೆ ಪರಿಚಯಿಸಿದ ಅಂಬಾನಿ!

ಬಿಗ್​-ಬಿ ಅಮಿತಾಭ್​ ಬಚ್ಚನ್ ಅವರು ಆಗಾಗ ಈ ಬಂಗಲೆಯ ಫೋಟೊಗಳನ್ನು ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬಿಗ್​-ಬಿ ಮನೆಯಲ್ಲಿ ಅಗತ್ಯದ ಎಲ್ಲ ಐಷಾರಾಮಿ ವಸ್ತುಗಳೂ ಇವೆಯಂತೆ. ಮನೆಗೆ ಜಲ್ಸಾ ಎಂದು ಹೆಸರಿಟ್ಟಿದ್ದು, ತಮ್ಮ ಟೇಸ್ಟ್​ಗೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಿಸಿದ್ದಾರಂತೆ. ತಮ್ಮದೇ ಆದ ಮಿನಿ ಗ್ರಂಥಾಲಯ ಕಮ್​ ಸ್ಟಡಿ ರೂಮ್​ ಮಾಡಿಕೊಂಡಿದ್ದಾರೆ ಅಮಿತಾಭ್​.

ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದೇ ರೀತಿಯ ಬಂಗಲೆ ಒಪ್ಪಂದದಲ್ಲಿ, ಮ್ಯಾಕ್ಲಿಯೊಡ್ಸ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಗಿರ್ಧಾರಿ ಲಾಲ್ ಬಾವ್ರಿ ಅವರು ಫೆಬ್ರವರಿ 2024 ರಲ್ಲಿ ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿ 7,000 ಚದರ ಅಡಿಗಳಷ್ಟು ಜಾಗದಲ್ಲಿ 3,600 ಚದರ ಅಡಿ ಬಂಗಲೆಯನ್ನು 101 ಕೋಟಿ ರೂ.ಗೆ ಖರೀದಿಸಿದರು. ಇದರ ನಂತರ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಡಿಸೆಂಬರ್‌ನಲ್ಲಿ ಮುಂಬೈನ ಖಾರ್ ಪ್ರದೇಶದಲ್ಲಿ 5,416 ಚದರ ಅಡಿ ಬಂಗಲೆಯನ್ನು 70.83 ಕೋಟಿ ರೂ.ಗೆ ಖರೀದಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Poonam Pandey: ಪೂನಂ ಪಾಂಡೆಗೆ ಮಕ್ಕಳಿಂದ ಚಿಕ್ಕ ರಿಕ್ವೆಸ್ಟ್‌; ಅಮ್ಮ ಹೊಡಿತಾರೆ ಎಂದ ಹಾಟ್‌ ಬೆಡಗಿ!

Poonam Pandey: ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು. ಇದೀಗ ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಂಡರು. ಮೈದಾನಲ್ಲಿ ಕ್ರಿಕೆಟ್ ಆಡುತ್ತಿರುವ ಮಕ್ಕಳು ಪೂನಂ ಪಾಂಡೆ ಕಡೆ ಓದಿ ಬಂದು ಮಾತನಾಡಿಸಿದ್ದಾರೆ. ಜತೆಗೆ ಪೂನಂ ಅಭಿಮಾನಿಯೊಬ್ಬರು ತಾವೇ ಬಿಡಿಸಿದ ಚಿತ್ರವನ್ನು ಪೂನಂಗೆ ಗಿಫ್ಟ್‌ ಮಾಡಿದ್ದಾರೆ.

VISTARANEWS.COM


on

Poonam Pandey instagram id in a public place
Koo

ಬೆಂಗಳೂರು: ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಂಡರು. ಪೂನಂ ನೋಡುತ್ತಲೇ ಮೈದಾನಲ್ಲಿ ಕ್ರಿಕೆಟ್ ಆಡುತ್ತಿರುವ ಮಕ್ಕಳು ಪೂನಂ ಪಾಂಡೆ ಕಡೆ ಓದಿ ಬಂದು ಮಾತನಾಡಿಸಿದರು. ಜತೆಗೆ ಪೂನಂ ಅಭಿಮಾನಿಯೊಬ್ಬರು ತಾವೇ ಬಿಡಿಸಿದ ಚಿತ್ರವನ್ನು ಪೂನಂಗೆ ಗಿಫ್ಟ್‌ ಮಾಡಿದ್ದಾರೆ. ಇದೀಗ ಪೂನಂ ಅವರ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಮಕ್ಕಳು ಪೂನಂ ಹತ್ತಿರ ಓಡಿ ಬರುತ್ತಿದ್ದಂತೆ ಅದರಲ್ಲಿ ಒಬ್ಬ ಬಾಲಕ ಪೂನಂ ಪಾಂಡೆಗೆ ʻನಿಮ್ಮ ಇನ್‌ಸ್ಟಾಗ್ರಾಂ ಐಡಿ ಕೊಡಿʼ ಎಂದು ಕೇಳಿದ್ದಾನೆ. ಇದಕ್ಕೆ ಪೂನಂ ʻನನ್ನ ಇನ್‌ಸ್ಟಾಗ್ರಾಂ ಐಡಿ ನಿನಗೆ ಯಾಕೆ ಬೇಕುʼ? ಅದನ್ನ ತಗೊಂಡು ನೀನೇನು ಮಾಡ್ತೀಯಾ? ಎಂದು ಮರು ಪ್ರಶ್ನೆಯನ್ನ ಹಾಕಿದ್ದಾರೆ. ʻನಿನಗೆ ನಿಮ್ಮ ಅಮ್ಮನನ್ನ ಕಂಡರೆ ಭಯ ಇಲ್ಲವಾ..? ನಿಮ್ಮ ತಾಯಿಗೆ ಈ ವಿಚಾರ ಗೊತ್ತಾದರೆ ಹೊಡೆಯುತ್ತಾರೆʼ ಎಂದಿದ್ದಾರೆ. ಈ ಸನ್ನಿವೇಶದ ವಿಡಿಯೊ ವೈರಲ್‌ ಆಗುತ್ತಿದೆ. ಪೂನಂ ಪಬ್ಲಿಸಿಟಿ ಸ್ಟಂಟ್‌ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇನ್ನು ಮತ್ತೊಬ್ಬರು ಪೂನಂ ಚಿತ್ರವನ್ನು ಬಿಡಿಸಿ ಗಿಫ್ಟ್‌ ಕೊಟ್ಟಿರುವ ಬಗ್ಗೆ ಮಾಧ್ಯಮದ ಜತೆ ಮಾತನಾಡಿದರು. ʻʻಈ ಫೋಟೊ ಫ್ರೇಮ್‌ ನನಗೆ ಗಿಫ್ಟ್‌ ಆಗಿ ಕೊಟ್ಟಿರುವುದು ಆಸ್ಕರ್‌ಗಿಂತ ಕಡಿಮೆಯಿಲ್ಲ. ಫ್ಯಾನ್ಸ್‌ ಪ್ರೀತಿ ನೋಡಿ ನನ್ನ ಜೀವನದಲ್ಲಿ ನಾನು ಏನನ್ನಾದರೂ ಗಳಿಸಿದ್ದೇನೆ ಎಂದು ಖುಷಿಯಾಗುತ್ತಿದೆ. ನಾನು ಈ ಉದ್ಯಮಕ್ಕೆ ಬಂದು 12 ವರ್ಷಗಳು ಕಳೆದಿವೆ. ನೀವು ಜೀವನದಲ್ಲಿ ಏನು ಬೇಕಾದರೂ ಗಳಿಸಬಹುದು ನಿಜವಾದ ಅಭಿಮಾನಿಯನ್ನು ಗಳಿಸುವುದು ಕಷ್ಟʼʼ ಎಂದಿದ್ದಾರೆ.

ಇದನ್ನೂ ಓದಿ: Poonam Pandey: ಪೂನಂ ಪಾಂಡೆಗೆ ಕಾನೂನು ಸಂಕಷ್ಟ; 100 ಕೋಟಿ ರೂ. ಮಾನನಷ್ಟ ಕೇಸ್

ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು.

ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್​ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು..

Continue Reading

ಬಾಲಿವುಡ್

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

AR Rahman: ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

VISTARANEWS.COM


on

AR Rahman says his mother thought his Oscar statuettes were made of gold
Koo

ಬೆಂಗಳೂರು: ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahman) ಅವರಿಗೆ 2ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಬಂದಿವೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿಗಳನ್ನೆಲ್ಲ ಎಲ್ಲಿ ಇಟ್ಟಿದ್ದಾರೆ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಆಗ ರೆಹಮಾನ್ ಅವರು ಉತ್ತರ ನೀಡಿ ʻʻನನ್ನ ತಾಯಿ ಕರೀಮಾ ಬೇಗಂ (Kareema Begum) ದುಬೈ ಮನೆಯಲ್ಲಿ ಸಂಗ್ರಹಿಟ್ಟಿದರು. ಪ್ರಶಸ್ತಿಗಳು ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ಅವರು ಭಾವಿಸಿ ಟವೆಲ್‌ನಲ್ಲಿ ಸುತ್ತಿ ಇಟ್ಟಿದ್ದರುʼಎಂದು ಹೇಳಿದ್ದಾರೆ.

ಈ ಬಗ್ಗೆ ರೆಹಮಾನ್ ಮಾತನಾಡಿ ʻʻನಾನು ದುಬೈನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಂಡಿದ್ದೇನೆ. ಏಕೆಂದರೆ ಅವೆಲ್ಲವೂ ಟವೆಲ್‌ನಲ್ಲಿ ಸುತ್ತಿಡಲಾಗಿತ್ತು. ನನ್ನ ತಾಯಿ ಅದನ್ನು ಟವೆಲ್‌ನಲ್ಲಿ ಸುತ್ತಿಟ್ಟಿದ್ದರು. ಪ್ರಶಸ್ತಿಗಳನ್ನು ಚಿನ್ನದಿಂದ ಮಾಡಿದ್ದಾರೆ ಅಂದುಕೊಂಡಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್​ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ರೆಹಮಾನ್. 2008ರ ಚಲನಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗಾಗಿ ʻಗೋಲ್ಡನ್ ಗ್ಲೋಬ್ʼ ಅನ್ನು ಗೆದಿದ್ದರು.

ರೆಹಮಾನ್ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 32 ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅದೇ ಭಾರತೀಯ ಪ್ರಶಸ್ತಿಗಳನ್ನು ತಮ್ಮ ತವರು ಚೆನ್ನೈನಲ್ಲಿರುವ ವಿಶೇಷ ಕೋಣೆಯಲ್ಲಿ ಇಟ್ಟಿರುವುದಾಗಿ ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿ ʻʻಕೆಲವು ಪ್ರಶಸ್ತಿಗಳು ನನ್ನ ಬಳಿ ಇದುವೆರೆಗೆ ಬಂದಿಲ್ಲ. ಕೆಲವು ನಿರ್ದೇಶಕರು ಅವುಗಳನ್ನು ಸ್ಮರಣಿಕೆಗಳಂತೆ ಇಟ್ಟುಕೊಂಡಿದ್ದಾರೆʼʼಎಂದರು.

ಇದನ್ನೂ ಓದಿ: AR Rahman: ಪುಟಾಣಿ ಹುಡುಗಿಯ ಮಾತು ಕೇಳಿ ಎಆರ್ ರೆಹಮಾನ್ ಫಿದಾ; ಕೀಬೋರ್ಡ್ ಕೊಡುತ್ತೇನೆ ಎಂದ ಗಾಯಕ!

ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದರು. ʻನಾನು ಸ್ಟುಡಿಯೊವನ್ನು ನಿರ್ಮಿಸಿದಾಗ, ಆಂಪ್ಲಿಫೈಯರ್ ಅಥವಾ ಈಕ್ವಲೈಸರ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಶೆಲ್ಫ್ ಮತ್ತು ಕಾರ್ಪೆಟ್ನೊಂದಿಗೆ ಕೇವಲ ಎಸಿ ಇತ್ತು. ಏನನ್ನೂ ಖರೀದಿಸಲು ಹಣವಿಲ್ಲದೆ ಕುಳಿತಿದ್ದೆ. ಆಗ ನನ್ನ ತಾಯಿ ಆಭರಣಗಳನ್ನು ಒತ್ತೆ ಇಡಲು ನೀಡಿದಳು. ಬಳಿಕ ಮೊದಲ ರೆಕಾರ್ಡರ್ ತಂದೆʼʼ ಎಂದು ಅವರು ಹೇಳಿದರು. ಕರೀಮಾ ಬೇಗಂ 2020ರಲ್ಲಿ ನಿಧನರಾಗಿದ್ದಾರೆ.

Continue Reading

ಬಾಲಿವುಡ್

Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

Munjya Teaser: ಅನಿಮೇಟೆಡ್ ಪಾತ್ರವನ್ನು ಒಳಗೊಂಡಿರುವ ಭಾರತದ ಮೊದಲ CGI (ಕಂಪ್ಯೂಟರ್-ಜನರೇಟೆಡ್ ಇಮೇಜರಿ) ಚಿತ್ರ ಎಂದು ಹೇಳಲಾಗಿದೆ. ‘ಮುಂಜ್ಯ’ ಚಿತ್ರದ ಟೀಸರ್ ಹಾರರ್ ಮತ್ತು ಹಾಸ್ಯದ ಸಮ್ಮಿಶ್ರಣ ಇದೆ.
ʻಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿದೆ.ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇದೆ.

VISTARANEWS.COM


on

Munjya teaser unveils first computer generated actor
Koo

ಬೆಂಗಳೂರು: ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ʻಸ್ತ್ರೀʼ ಚಿತ್ರದ ನಿರ್ಮಾಪಕ ಮತ್ತೊಂದು ಭಯಾನಕ ಚಿತ್ರವೊಂದು ತೆರೆಗೆ ತರಲು ಸಜ್ಜಾಗಿದ್ದಾರೆ. ʻಮುಂಜ್ಯಾʼ ಸಿನಿಮಾದ ಹೆಸರು (Munjya Teaser). ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು ಹೇಳಲಾಗುತ್ತಿದೆ (first computer generated actor) . ʻಮುಂಜ್ಯಾʼ ಟೀಸರ್‌ ಮೇ 21ರಂದು ರಿಲೀಸ್‌ ಆಗಿದೆ.

ಅನಿಮೇಟೆಡ್ ಪಾತ್ರವನ್ನು ಒಳಗೊಂಡಿರುವ ಭಾರತದ ಮೊದಲ CGI (ಕಂಪ್ಯೂಟರ್-ಜನರೇಟೆಡ್ ಇಮೇಜರಿ) ಚಿತ್ರ ಎಂದು ಹೇಳಲಾಗಿದೆ. ‘ಮುಂಜ್ಯ’ ಚಿತ್ರದ ಟೀಸರ್ ಹಾರರ್ ಮತ್ತು ಹಾಸ್ಯದ ಸಮ್ಮಿಶ್ರಣ ಇದೆ.

ʻಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿದೆ. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿದ್ದಾನೆ. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್‌ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿದೆ. ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇದೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ಇದೆ.

ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ. ಚಿತ್ರ ಜೂನ್ 7 ರಂದು ದೇಶಾದ್ಯಂತ ತೆರೆಗೆ ಬರಲಿದೆ.

Continue Reading

ಸಿನಿಮಾ

Suhana Khan: ಇಂದು ಶಾರುಖ್‌ ಪುತ್ರಿಗೆ ಹುಟ್ಟುಹಬ್ಬದ ಸಂಭ್ರಮ: ಅನನ್ಯಾ ಪಾಂಡೆ‌, ನವ್ಯಾ ಕ್ಯೂಟ್‌ ವಿಶಸ್‌!

Suhana Khan: ಬರ್ತ್‌ಡೇ ಗರ್ಲ್ ಸುಹಾನಾ ಖಾನ್‌ಗೆ, ಅನನ್ಯಾ ಪಾಂಡೆ, ಶನಯಾ ಕಪೂರ್ ಮತ್ತು ನವ್ಯಾ ಅವರಿಂದ ವಿಶೇಷವಾಗಿ ವಿಶಸ್‌ ಬಂದಿವೆ. ಮತ್ತೊಂದೆಡೆ, ನವ್ಯಾ ನವೇಲಿ ನಂದಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಸುಹಾನಾ ಅವರ ಫೋಟೊವನ್ನು ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳು ಸುಹಾನಾ” ಎಂದು ಬರೆದಿದ್ದಾರೆ. ಸುಹಾನಾ ಖಾನ್ ಕಳೆದ ತಿಂಗಳು ಇಟಲಿಯ ಮಿಲನ್‌ಗೆ ಸೋಲೊ ಡ್ರಿಪ್‌ ಹೋಗಿದ್ದರು. ತಮ್ಮ ವಕೇಶನ್‌ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು.

VISTARANEWS.COM


on

Suhana Khan Birthday Big Love From Ananya Panday
Koo

ಬೆಂಗಳೂರು: ಇಂದು ಶಾರುಖ್‌ ಪುತ್ರಿ ಸುಹಾನಾ ಖಾನ್ (Suhana Khan) ಅವರಿಗೆ ಜನುಮದಿನದ ಸಂಭ್ರಮ. ಮೇ 21ರಂದು ಶಾರುಖ್ ಒಡೆತನದ ಕೋಲ್ಕತ್ತಾ ನೈಟ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದೆ. ಈ ಮೂಲಕ ಸುಹಾನಾ ಬರ್ತ್​ಡೇಗೆ ಕೆಕೆಆರ್ ಗೆಲುವಿನ ಉಡುಗೊರೆ ನೀಡಿದಂತೆ ಆಗಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಸ್ನೇಹಿತರಾದ ಅನನ್ಯಾ ಪಾಂಡೆ ಅವರಿಗೆ ವಿಶೇಷ ರೀತಿಯಲ್ಲಿ ಶುಭ ಹಾರೈಸಿದರು. ಅನನ್ಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಐಪಿಎಲ್ ಪಂದ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. “ನನ್ನ ಮುದ್ದು ಹುಡುಗಿಗೆ ಜನ್ಮದಿನದ ಶುಭಾಶಯಗಳು! ಇಡೀ ಪ್ರಪಂಚದಲ್ಲಿ ನಿಮ್ಮಂತೆ ಯಾರೂ ಇಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ ಸುಜಿʼʼಎಂದು ಬರೆದುಕೊಂಡಿದ್ದಾರೆ.

ಬರ್ತ್‌ಡೇ ಗರ್ಲ್ ಸುಹಾನಾ ಖಾನ್‌ಗೆ, ಅನನ್ಯಾ ಪಾಂಡೆ, ಶನಯಾ ಕಪೂರ್ ಮತ್ತು ನವ್ಯಾ ಅವರಿಂದ ವಿಶೇಷವಾಗಿ ವಿಶಸ್‌ ಬಂದಿವೆ. ಮತ್ತೊಂದೆಡೆ, ನವ್ಯಾ ನವೇಲಿ ನಂದಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಸುಹಾನಾ ಅವರ ಫೋಟೊವನ್ನು ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳು ಸುಹಾನಾ” ಎಂದು ಬರೆದಿದ್ದಾರೆ. ಸುಹಾನಾ ಖಾನ್ ಕಳೆದ ತಿಂಗಳು ಇಟಲಿಯ ಮಿಲನ್‌ಗೆ ಸೋಲೊ ಡ್ರಿಪ್‌ ಹೋಗಿದ್ದರು. ತಮ್ಮ ವಕೇಶನ್‌ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು.

ಸುಹಾನಾ ತಂದೆ ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ತಮ್ಮ ಆಸ್ತಿಯಲ್ಲಿ ಒಂದಷ್ಟನ್ನು ಶಾರುಖ್ ಖಾನ್ ಅವರು ಮಗಳ ಹೆಸರಿಗೆ ಬರೆದಿದ್ದಾರೆ. ಸುಹಾನಾ ಹೆಸರಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಲೇ ಸುಹಾನಾ ಖಾನ್ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಿದೆ. ಸಿನಿಮಾದಲ್ಲಿ ನಟಿಸದ ಹೊರತಾಗಿಯೂ ಅವರು ಹಣ ಮಾಡಿದ್ದಾರೆ.

ಇದನ್ನೂ ಓದಿ: Suhana Khan: ಬ್ರೇಕಪ್‌ ಬಗ್ಗೆ ಓಪನ್‌ ಆಗಿ ಮಾತನಾಡಿದ ಶಾರುಖ್‌ ಪುತ್ರಿ ಸುಹಾನಾ ಖಾನ್‌; ವಿಡಿಯೊ ಇಲ್ಲಿದೆ

ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಸದ್ಯ ಅವರು ಶಾರುಖ್‌ ಖಾನ್‌ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ತಂದೆ-ಮಗಳು ಜತೆಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Continue Reading
Advertisement
Actor Dhananjay
ಸಿನಿಮಾ50 seconds ago

Actor Dhananjay: ʻಕೋಟಿʼ ಸಿನಿಮಾದ ‘ಜನತಾ ಸಿಟಿ’ ಹಾಡು ಔಟ್‌

Hampi Tour
ಪ್ರವಾಸ2 mins ago

Hampi Tour: ಹಂಪಿ ಪ್ರವಾಸದ ವೇಳೆ ಈ 10 ಸ್ಥಳಗಳಲ್ಲಿ ರಾಮಾಯಣದ ಕುರುಹುಗಳನ್ನು ಹುಡುಕಿ!

road rage bangalore
ಕ್ರೈಂ19 mins ago

Road Rage: ರಾಜಧಾನಿಯಲ್ಲಿ ಹೆಚ್ಚುತ್ತಿದೆ ರೋಡ್‌ ರೇಜ್‌, ಮತ್ತೊಂದು ಹಲ್ಲೆ

Viral Video
ವೈರಲ್ ನ್ಯೂಸ್26 mins ago

Viral Video: ಛೇ…ಇವರೆಂಥಾ ರಾಕ್ಷಸರು! ಕೈ ಕಾಲು ಕಟ್ಟಿ ಥಳಿಸಿ ಯುವಕನ ಹತ್ಯೆ-ವಿಡಿಯೋ ನೋಡಿ

Indian 2
ಸಿನಿಮಾ38 mins ago

Indian 2: ಕಮಲ್‌ ಹಾಸನ್‌ ಅಭಿನಯದ ʼಇಂಡಿಯನ್‌ 2ʼ ಚಿತ್ರದ ಮೊದಲ ಹಾಡು ರಿಲೀಸ್‌; ಕುದುರೆ ಏರಿ ಬಂದ ಉಳಗನಾಯಗನ್‌

dhavala dharini column buddha ಧವಳ ಧಾರಿಣಿ
ಅಂಕಣ1 hour ago

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Karnataka Weather
ಕರ್ನಾಟಕ2 hours ago

Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Brain Tumour In Kids
ಆರೋಗ್ಯ2 hours ago

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

Buddha Purnima
ಧಾರ್ಮಿಕ2 hours ago

Buddha Purnima: ಇಂದು ಬುದ್ಧ ಪೂರ್ಣಿಮೆ; ಬುದ್ಧನ ಬೋಧನೆಯನ್ನು ಸ್ಮರಿಸಿಕೊಳ್ಳುವ ದಿನ

Health Benefits Of Okra
ಆರೋಗ್ಯ3 hours ago

Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ3 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌