Munawar Faruqui: ಮತ್ತೊಂದು ಮದುವೆಯಾದರಾ ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ? - Vistara News

ಬಾಲಿವುಡ್

Munawar Faruqui: ಮತ್ತೊಂದು ಮದುವೆಯಾದರಾ ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ?

Munawar Faruqui: ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ತಮ್ಮ ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

VISTARANEWS.COM


on

Munawar Faruqui gets married for second timeʼ Munawar Faruqui gets married for second timeʼ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ (Munawar Faruqui)  ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮೆಹಜಬೀನ್ ಕೋಟ್ವಾಲಾ (Mehzabeen Coatwala) ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮುನಾವರ್ ಮದುವೆಯಲ್ಲಿ ಅವರ ಆತ್ಮೀಯರು ಮಾತ್ರ ಹಾಜರಿದ್ದರು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಮುಂಬೈನ ಐಟಿಸಿ ಗ್ರ್ಯಾಂಡ್ ಮರಾಠಾದಲ್ಲಿ ಆರತಕ್ಷತೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮುನಾವರ್ ಅವರ ಸ್ನೇಹಿತ-ನಟ ಹಿನಾ ಖಾನ್ ಈ ಸಮಾರಂಭಕ್ಕೆ ಆಹ್ವಾನಿತರಾದವರಲ್ಲಿ ಒಬ್ಬರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಿನಾ ಈ ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಮುನಾವರ್ ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು.

ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಆಸ್ಪತ್ರೆಗೆ ದಾಖಲು

ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

ಏ. 10ರ ಮಧ್ಯರಾತ್ರಿ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಮೇಲೆ ರೆಸ್ಟೋರೆಂಟ್ ಮಾಲೀಕರು ಮೊಟ್ಟೆ ಎಸೆದಿದ್ದರು. ಆರೋಪಿಗಳು ಮುನಾವರ್ ಫಾರೂಕಿ ಅವರನ್ನು ಮಿನಾರಾ ಮಸೀದಿ ಪ್ರದೇಶದ ತಮ್ಮ ರೆಸ್ಟೋರೆಂಟ್‌ ಇಫ್ತಾರ್‌ಗೆ ಆಹ್ವಾನಿಸಿದ್ದರು. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ತಿರದ ಮತ್ತೊಂದು ಉಪಾಹಾರ ಗೃಹಕ್ಕೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡು ಮುನಾವರ್ ಫಾರೂಕಿ ಮೇಲೆ ಮೇಲೆ ಮೊಟ್ಟೆಗಳನ್ನು ಎಸೆದಿರುವುದಾಗಿ ವರದಿಯಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯ ವಿರುದ್ಧ ಪೈದೋನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Sonakshi Sinha: ಶತ್ರುಘ್ನ ತಮ್ಮ ಮಗಳೊಂದಿಗೆ ಅಸಮಾಧಾನ ಹೊಂದಿದ್ದಾರೆ. ಆದರೆ ಈ ಮುನಿಸು ಹೆಚ್ಚು ಕಾಲ ಉಳಿಯುವುದಿಲ್ಲ. ಶತ್ರುಘ್ನ ಕೂಡ ಮದುವೆ (Sonakshi Sinha’s Wedding) ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸೋನಾಕ್ಷಿ ಅವರ ಮಾವ ಪಹ್ಲಾಜ್ ನಿಹಲಾನಿ ತಿಳಿಸಿದ್ದಾರೆ.

VISTARANEWS.COM


on

By

Sonakshi Sinha
Koo

ಮುಂಬಯಿ: ಬಾಲಿವುಡ್ ನಟಿ (bollywood actress) ಸೋನಾಕ್ಷಿ ಸಿನ್ಹಾ (Sonakshi Sinha) ಮುಸ್ಲಿಂ ಹುಡುಗನ ಜತೆ ಮದುವೆ ಆಗುತ್ತಿರುವ ಬಗ್ಗೆ (Sonakshi Sinha’s Wedding) ಮತ್ತು ತಮ್ಮ ಮದುವೆ ಬಗ್ಗೆ ಮೊದಲೇ ತಿಳಿಸದಿದ್ದಕ್ಕಾಗಿ ತಂದೆ ಶತ್ರುಘ್ನ ಸಿನ್ಹಾ (Shatrughan Sinha) ಅವರು ಅಸಮಾಧಾನಗೊಂಡಿದ್ದಾರೆ ಎಂದು ಸೋನಾಕ್ಷಿ ಅವರ ಮಾವ ಪಹ್ಲಾಜ್ ನಿಹಲಾನಿ (Pahlaj Nihalani) ಖಚಿತಪಡಿಸಿದ್ದಾರೆ.

ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ತಿಳಿದು ಬಂದಿತ್ತು.

ಈ ಬಗ್ಗೆ ಪಹ್ಲಾಜ್ ನಿಹಲಾನಿ ಅವರು ಪ್ರತಿಕ್ರಿಯೆ ನೀಡಿದ್ದು, ಶತ್ರುಘ್ನ ತಮ್ಮ ಮಗಳೊಂದಿಗೆ ಅಸಮಾಧಾನ ಹೊಂದಿದ್ದಾರೆ. ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಖಚಿತಪಡಿಸಿದರು. ಶತ್ರುಘ್ನ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.


ಸೋನಾಕ್ಷಿ ಅವರ ಮುದ್ದಿನ ಮಗಳು. ಅವರು ಮದುವೆಗೆ ಬಾರದೇ ಇರಲು ಸಾಧ್ಯವೇ ಇಲ್ಲ. ಶತ್ರುಜಿ ಅವರು “”ಈಗಿನ ಮಕ್ಕಳು ಪೋಷಕರ ಅನುಮತಿ ಪಡೆಯದೇ ಮದುವೆಯಾಗುತ್ತಾರೆ. ಸೋನಾಕ್ಷಿ ತನ್ನ ಇಷ್ಟದ ಹುಡುಗನನ್ನು ಮದುವೆಯಾಗುವುದಾದರೆ ನಾನೇಕೆ ಅಸಮಾಧಾನಗೊಳ್ಳಬೇಕುʼʼ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ನಲವತ್ತು ವರ್ಷಗಳ ಹಿಂದೆ ತಮಗೆ ಇಷ್ಟವಾದ ಹುಡುಗಿಯನ್ನು ಮದುವೆಯಾಗಿದ್ದಾರೆ. ನಾನು ನನ್ನ ಹೆಂಡತಿಯನ್ನು ಮದುವೆಯಾದಾಗ ನಾನು ನನ್ನ ಜೀವನ ಸಂಗಾತಿಯನ್ನು ಆರಿಸಿಕೊಂಡೆ. ಒಬ್ಬನು ತನ್ನ ಮಕ್ಕಳಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರಬಾರದು ಎಂದು ಶತ್ರುಘ್ನ ಸಿನ್ಹಾ ಇತ್ತೀಚೆಗೆ ಹೇಳಿದ್ದರು.

ಶತ್ರುಘ್ನ ಅವರ ಆರಂಭಿಕ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡ ಪಹ್ಲಾಜ್, ಚುನಾವಣೆಯಿಂದಾಗಿ ಅವರು ಸುಮಾರು ಮೂರು ತಿಂಗಳ ಕಾಲ ಮುಂಬಯಿನಿಂದ ಹೊರಗಿದ್ದರು. ಶತ್ರುಘ್ನ ಅವರ ಪತ್ನಿಗೆ ಈ ವಿಷಯ ಗೊತ್ತಿರಬೇಕು. ಶತ್ರುಘ್ನ ಅವರು ಹಿಂದಿರುಗಿದ ಅನಂತರ ಅವರಿಗೆ ಈ ಬಗ್ಗೆ ಹೇಳಲು ನಿರ್ಧರಿಸಿರಬೇಕು. ಈಗ ಅವರು ಮುಂಬಯಿಗೆ ಮರಳಿದ್ದಾರೆ ಮತ್ತು ಸೋನಾಕ್ಷಿ ಮತ್ತು ಅವರ ಕುಟುಂಬದ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ತಿಳಿಸಿದರು.


ಶತ್ರುಘ್ನ ಹೇಳಿದ್ದೇನು?

ಸೋನಾಕ್ಷಿ ವಿವಾಹದ ಕುರಿತು ಮಾತನಾಡಿದ್ದ ಶತ್ರುಘ್ನ ಅವರು, ನನಗೆ ಸೋನಾಕ್ಷಿ ಮದುವೆ ಬಗ್ಗೆ ಯಾಕೆ ತಿಳಿದಿಲ್ಲ ಎಂದು ನನ್ನ ಹತ್ತಿರದ ಜನರು ನನ್ನನ್ನು ಕೇಳುತ್ತಿದ್ದಾರೆ. ನಾನು ಹೇಳುವುದು ಇಷ್ಟೇ, ಅವರು ಇವತ್ತಿನ ಮಕ್ಕಳು ತಂದೆ ತಾಯಿಯ ಅನುಮತಿ ಕೇಳುವುದಿಲ್ಲ. ಕೇವಲ ಮಾಹಿತಿ ನೀಡುತ್ತಾರೆ. ನಾವು ಆ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು.

ಅವರ ಈ ಹೇಳಿಕೆ ಬಳಿಕ ಮದುವೆಯ ವದಂತಿಗಳನ್ನು ಅವರು ದೃಢೀಕರಿಸದೇ ಇದ್ದರೂ, ಸೋನಾಕ್ಷಿಗೆ ತಮ್ಮ ಜೀವನದ ಮಹತ್ವದ ದಿನಕ್ಕಾಗಿ ಎಲ್ಲಾ ಆಶೀರ್ವಾದಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದರು.

ನನ್ನ ಮಗಳು ಮದುವೆಯಾದರೆ ನಾನು ಅವಳಿಗೆ ನನ್ನ ಆಶೀರ್ವಾದವನ್ನು ನೀಡುತ್ತೇನೆ. ಅವಳ ನಿರ್ಧಾರ ಮತ್ತು ಆಯ್ಕೆಯನ್ನು ಬೆಂಬಲಿಸುತ್ತೇನೆ. ಸೋನಾಕ್ಷಿಗೆ ತನ್ನ ಒಡನಾಡಿಯನ್ನು ಆಯ್ಕೆ ಮಾಡುವ ಹಕ್ಕಿದೆ ಮತ್ತು ಅವಳ ಮದುವೆಯ ದಿನದಂದು ನಾನು ಅತ್ಯಂತ ಸಂತೋಷದ ತಂದೆಯಾಗುತ್ತೇನೆ. ನಾನು ಯಾವಾಗಲೂ ಅವಳಿಗೆ ಶುಭ ಹಾರೈಸುತ್ತೇನೆ ಎಂದು ಶತ್ರುಘ್ನ ಹೇಳಿದರು. ಮುಂಬಯಿನಲ್ಲಿ ಆತ್ಮೀಯರ ಸಮ್ಮುಖದಲ್ಲಿ ಜೂನ್ 23ರಂದು ಸೋನಾಕ್ಷಿ ಮತ್ತು ಜಹೀರ್ ವಿವಾಹವಾಗಲಿದ್ದಾರೆ.

Continue Reading

ಬಾಲಿವುಡ್

Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

Shah Rukh Khan: ಈ ಚಿತ್ರವು ನಿರ್ದೇಶಕ ಶಂಕರ್ ಅವರ 1999ರ ತಮಿಳು ಚಿತ್ರ ʻಮುಧಲ್ವನ್‌ʼನ (mudhalvan) ರಿಮೇಕ್ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಅಷ್ಟಾಗಿ ಸಕ್ಸೆಸ್‌ ಆಗದಿದ್ದರೂ ದೂರದರ್ಶನದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತ್ತು.

VISTARANEWS.COM


on

Shah Rukh Khan Took ₹1 As Signing Amount For 'Nayak'
Koo

ಬೆಂಗಳೂರು: ಶಂಕರ್ ನಿರ್ದೇಶನದ 2001ರಲ್ಲಿ ಬಿಡುಗಡೆಯಾದ ʻನಾಯಕ್‌ʼ ಸಿನಿಮಾದಲ್ಲಿ (Shah Rukh Khan) ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗೆ (Shah Rukh Khan) ಮೊದಲು ಸಹಿ ಹಾಕಿದ್ದು ಶಾರುಖ್‌. ಜತೆಗೆ ಶಾರುಖ್ ಖಾನ್ ಅವರು ʻನಾಯಕ್ʼ ಚಿತ್ರಕ್ಕೆ ಸಹಿ ಹಾಕುವಾಗ ಮುಂಗಡ ಪಡೆದಿದ್ದು ಕೇವಲ ಒಂದು ರೂ. ಅಂತೆ. ಈ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಶಾರುಖ್‌ ಹೇಳಿಕೊಂಡಿದ್ದಾರೆ. ಈ ಚಿತ್ರವು ನಿರ್ದೇಶಕ ಶಂಕರ್ ಅವರ 1999ರ ತಮಿಳು ಚಿತ್ರ ʻಮುಧಲ್ವನ್‌ʼನ (mudhalvan) ರಿಮೇಕ್ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಅಷ್ಟಾಗಿ ಸಕ್ಸೆಸ್‌ ಆಗದಿದ್ದರೂ ದೂರದರ್ಶನದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತ್ತು.

ಸಂದರ್ಶನದಲ್ಲಿ, ಶಾರುಖ್ ಖಾನ್ ಸಿನಿಮಾ ಬಗ್ಗೆ ಮಾತನಾಡಿ ʻʻಈ ಸಿನಿಮಾಗೆ ನಾನು ಒಪ್ಪಿಗೆ ನೀಡಿ ಸಹಿ ಹಾಕುವಾಗ ಮುಂಗಡ ಸಂಭಾವನೆ ಪಡೆದಿದ್ದು ಕೇವಲ ಒಂದು ರೂ. ಜತೆಗೆ ಡೇಟ್‌ ನೀಡಲು ಸದಾ ಸಿದ್ದ ಎಂದು ಭರವಸೆ ಕೊಟ್ಟೆ. ಆದರೆ ನನಗೆ ನಾಯಕ್‌ ಮೂಲ ಆವೃತ್ತಿ ಇಷ್ಟ ಆಗಿತ್ತು. ಹಿಂದಿ ರಿಮೇಕ್‌ ಮಾಡುವುದು ಸರಿಯೆನಿಸಲಿಲ್ಲʼʼ ಎಂದರು. ಶಾರುಖ್‌ ಮಾತು ಮುಂದುವರಿಸಿ ʻʻನಾನು ಸಹಿ ಮಾಡಿದ್ದು, ದಿನಾಂಕ ನೀಡಿರುವ ಸಾಕ್ಷಿ ಇನ್ನೂ ನನ್ನ ಬಳಿ ಇದೆ. ಶಂಕರ್‌ ಜತೆ ಇನ್ನೂ ಕೂಡ ನನಗೆ ಕೆಲಸ ಮಾಡುವ ಬಯಕೆ ಇದೆ. ಅವರು ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಂತೆ. ಅವರ ಜತೆ ಸಿನಿಮಾ ಮಾಡುವುದು ಅದೃಷ್ಟʼʼ ಎಂದರು.

ಇದನ್ನೂ ಓದಿ: Shah Rukh Khan: ಖ್ಯಾತ ಹಾಲಿವುಡ್‌ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್‌!

ಸಿನಿಮಾ ವಿಚಾರಕ್ಕೆ ಬಂದರೆ ಶಾರುಖ್ ಅವರ ಮಗಳು ಸುಹಾನಾ ಖಾನ್ ಅವರ ಜತೆ ʻದಿ ಕಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ 200 ಕೋಟಿ ರೂ. ಮತ್ತೊಂದೆಡೆ, ಅನಿಲ್ ಕಪೂರ್ ಬಿಗ್ ಬಾಸ್ OTT ಸೀಸನ್ 3 ಅನ್ನು ಹೋಸ್ಟ್‌ ಮಾಡುತ್ತಿದ್ದಾರೆ.

2023ರಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್‌ ʻಕಿಂಗ್‌ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ.ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.ಇನ್ನು ಶಾರುಖ್‌ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Continue Reading

ಬಾಲಿವುಡ್

Uorfi Javed: ನೈಟ್‌ ಪಾರ್ಟಿಯ ಕಿಲಾಡಿ ಓರಿ ಮತ್ತು ಉರ್ಫಿ ಮದುವೆ ಆಗ್ತಾರಾ?

Uorfi Javed: ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಯನ್ನು ಕನಿಷ್ಠ 20 ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

VISTARANEWS.COM


on

Uorfi Javed and Orry were spotted outside a restaurant in Mumbai
Koo

ಬೆಂಗಳೂರು: ಬಿಗ್ ಬಾಸ್ (Big Boss) ಮನೆ ಸೇರಿದ್ದ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ, ಸೆಲಿಬ್ರೆಟಿ ಪಾರ್ಟಿಗಳಿಗೆ ಹೋಗಿ (Uorfi Javed) ಅಲ್ಲಿನ ನಟ, ನಟಿಯರ ಎದೆಯ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವುದರಲ್ಲೇ ಫೇಮಸ್‌. ಇದೀಗ ಉರ್ಫಿ ಹಾಗೂ ಓರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಉರ್ಫಿ ಅವರು ಓರಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಮದುವೆ ಬಗ್ಗೆ ಮಾತನಾಡಿ, ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ.  ಇದೀಗ ಓರಿ ಹಾಗೂ ಉರ್ಫಿ ಫೋಟೊಗಳು ವೈರಲ್‌ ಆಗಿವೆ.

ಡಿನ್ನರ್‌ಗೆ ಉರ್ಫಿ ಹಸಿರು ಉಡುಗೆಯಲ್ಲಿ ಕಂಡು ಬಂದರೆ, ಓರಿ ಮರೂನ್ ಟಿ-ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳಿಗೆ ಉರ್ಫಿ ಮತ್ತು ಓರಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಮದುವೆ ಬಗ್ಗೆ ಮಾತನಾಡಿ, ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟಿಸಿದ್ದಾರೆ. ಮಾಧ್ಯಮದವರೂ ಓರಿಗೆ ಉರ್ಫಿಯನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಉರ್ಫಿ ಮದುವೆಯಾಗೋಕೆ ಓಕೆ ಅಂದ್ರೆ ನನಗೂ ಓಕೆ ಎಂದು ಓರಿ ಹೇಳಿದ್ದಾರೆ.  ಇದಕ್ಕೂ ಮುನ್ನ ಉರ್ಫಿಗೂ ಈ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉರ್ಫಿ ತಮಾಷೆಯಾಗಿಯೇ ಉತ್ತರ ನೀಡಿ, ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನೀವೆಲ್ಲ ನನ್ನ ಮದುವೆ ಬಗ್ಗೆ ಆತುರದಲ್ಲಿದ್ದೀರಿ ಹೇಳಿದ್ದಾರೆ.

ಈ ಹಿಂದೆ, ಪೋಸ್ಟ್ ಆಗಿದ್ದ ಮತ್ತೊಂದು ವಿಡಿಯೊದಲ್ಲಿ, ಉರ್ಫಿ ಅವರು ಓರಿಯನ್ನು ಮದುವೆಯಾಗಲು ಬಯಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

ಓರಿ ಯಾರು?

ಓರಿ ಹೇಳಿಕೊಂಡಿರುವ ಪ್ರಕಾರ, ಶ್ರೀಮಂತ ಜನರೇ ಓರಿಯನ್ನು ಪಾರ್ಟಿ ಕರೆಯುತ್ತಾರೆ ಮತ್ತು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋಟೋಗೆ ಪೋಸು ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ನಾನು ಫೋಟೋ ತೆಗೆಸಿಕೊಳ್ಳಲು ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಣ ಪಡೆದುಕೊಳ್ಳುತ್ತೇನೆ. ಈ ಫೋಟೋಗಳಿಗಾಗಿ ಒಂದು ರಾತ್ರಿಗೆ ಕನಿಷ್ಠ 20ರಿಂದ 30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

ಓರಿಯನ್ನು ಬಾಲಿವುಡ್ ʻಬೆಸ್ಟ್‌ ​​ಫ್ರೆಂಡ್ ಫಾರೆವರ್ʼ ಎಂದೇ ಹೇಳುತ್ತಾರೆ. ಓರಿ ತನ್ನ ಫ್ಯಾಷನ್​ನಿಂದಾಗಿಯೂ ಸುದ್ದಿಯಾಗುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಚೇರ್​ ಪರ್ಸನ್ ಆಫೀಸ್​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ (anant ambani pre wedding) ರಿಹಾನ್ನಾ ಅವರೊಂದಿಗೆ ಕಾಣಿಸಿಕೊಂಡು ಓರಿ ಸಖತ್‌ ಸುದ್ದಿಯಾಗಿದ್ದರು. ಈ ರೀತಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಓರಿ ಪಡೆಯುವ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ.

ಮಾಧ್ಯಮವೊಂದರ ಸಂದರ್ಶನದಲ್ಲಿ ಹಲವು ಸಮಾರಂಭಗಳಲ್ಲಿ ಹಾಜಾರಾಗಲು ಪಡೆಯುವ ಸಂಭಾವನೆ ಕುರಿತು ಮಾತನಾಡಿದ್ದರು. ʻʻಕಾರ್ಯಕ್ರಮಗಳಿಗೆ ಹಾಜರಾಗಲು ಮುಖ್ಯ ಕಾರಣ ಎಲ್ಲಿರಿಗೂ ಸಂತೋಷ ನೀಡಬೇಕು ಎಂದು. ಸೆಲೆಬ್ರಿಟಿಗಳು ನನ್ನನ್ನು ಮದುವೆಗೆ ಕರೆಯುತ್ತಾರೆ. 15ರಿಂದ 30 ಲಕ್ಷದವರೆಗೆ ಸಂಭಾವನೆ ನೀಡಿ ಸಂತೋಷಪಡುತ್ತಾರೆ. ನಾನು ಅತಿಥಿಯಾಗಿ ಅಲ್ಲಿ ಭಾಗಿಯಾಗಲ್ಲ. ಒಳ್ಳೆಯ ಸ್ನೇಹಿತನಾಗಿ ಹೋಗುತ್ತೇನೆʼʼ ಎಂದಿದ್ದರು. ಓರಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್​ಗೂ ಬೆಸ್ಟ್ ಫ್ರೆಂಡ್. ಸುಹಾನಾ ಖಾನ್ ಜತೆ ಓರಿ ಹಲವಾರು ಸಲ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಬಾಲಿವುಡ್

Raveena Tandon: ರವೀನಾ ಟಂಡನ್ ವಿಡಿಯೊ ವೈರಲ್​ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

Raveena Tandon: ರವೀನಾ ಟಂಡನ್ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. ಕುಡಿದು ಬಂದು ಹಲ್ಲೆ ನಡೆಸಿದರು ಎಂಬ ಸುಳ್ಳು ಆರೋಪಕ್ಕಾಗಿ ರವೀನಾ ಟಂಡನ್ ಅವರು ಮೊಹ್ಸಿನ್ ಶೇಖ್ ಎಂಬ ವ್ಯಕ್ತಿಗೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

VISTARANEWS.COM


on

Raveena Tandon sues man for Rs 100 crore for defamatory
Koo

ಬೆಂಗಳೂರು: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ರವೀನಾ ಮದ್ಯ ಕುಡಿದಿದ್ದರು ಎನ್ನಲಾಗಿತ್ತು. ಸಾರ್ವಜನಿಕರು ರವೀನಾ ಮೇಲೆ ಹಲ್ಲೆ ನಡೆಸಿರುವುದಾಗಿ (Raveena Tandon) ವರದಿಯಾಗಿತ್ತು. ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಇದು ಸುಳ್ಳು ಎಂದು ತಿಳಿದು ಬಂದಿತ್ತು. ಇದೀಗ ರವೀನಾ ಟಂಡನ್ ಸುಳ್ಳು ಆರೋಪ ಮಾಡಿದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ. ಕುಡಿದು ಬಂದು ಹಲ್ಲೆ ನಡೆಸಿದರು ಎಂಬ ಸುಳ್ಳು ಆರೋಪಕ್ಕಾಗಿ ರವೀನಾ ಟಂಡನ್ ಅವರು ಮೊಹ್ಸಿನ್ ಶೇಖ್ ಎಂಬ ವ್ಯಕ್ತಿಗೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರವೀನಾ ಟಂಡನ್​ ಮೇಲೆ ಕೇಳಿಬಂದ ಈ ಆರೋಪಗಳೆಲ್ಲ ಸುಳ್ಳು ಎಂದು ನಂತರದಲ್ಲಿ ಪೊಲೀಸರು ಹೇಳಿಕೆ ನೀಡಿದರು. ಆ ಬಳಿಕ ವೈರಲ್​ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಆ ವ್ಯಕ್ತಿಗೆ ಮನವಿ ಮಾಡಿಕೊಳ್ಳಲಾಯಿತು. ಆದರೆ ವಿಡಿಯೋ ಡಿಲೀಟ್​ ಮಾಡಲು ಆತ ಒಪ್ಪಿಲ್ಲ. ಆದ್ದರಿಂದ ಕಾನೂನಿನ ಮೂಲಕ ಬುದ್ಧಿ ಕಲಿಸಲು ರವೀನಾ ಟಂಡನ್​ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಈ ಬಗ್ಗೆ ಮಾತನಾಡಿದ ನಟಿಯ ವಕೀಲ ಸನಾ ರಯೀಸ್ ಖಾನ್, “ನಟಿಯವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಇತ್ತೀಚೆಗೆ, ಒಬ್ಬ ವ್ಯಕ್ತಿ ಎಕ್ಸ್‌ ಖಾತೆ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದರು. ಉದ್ದೇಶಪೂರ್ವಕವಾಗಿ ರವೀನಾ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ತೋರುತ್ತಿದೆ. ಹೀಗಾಗಿ ನಾವು ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Raveena Tandon: ರವೀನಾ ಟಂಡನ್ ವಿರುದ್ಧ ಸುಳ್ಳು ದೂರು ನೀಡಿದ್ರಾ? ಪೊಲೀಸರು ಹೇಳೋದೇನು?

ಏನಿದು ಪ್ರಕರಣ?

ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿತ್ತು. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿದ್ದರು. “ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ” ಎಂದು ರವೀನಾ ಮೊರೆ ಇಡುತ್ತಿರುವುದು ವಿಡಿಯೊದಲ್ಲಿ ಇತ್ತು.

ನಂತರ ಮಹಮ್ಮದ್ ಎನ್ನುವ ವ್ಯಕ್ತಿ ಈ ಘಟನೆಯನ್ನು ವಿವರಿಸಿದ್ದರು. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ʻʻತನ್ನ ತಾಯಿ, ತಂಗಿ ಹಾಗೂ ಸೊಸೆ ರಿಜ್ವಿ ಕಾಲೆಜು ಬಳಿಯಲ್ಲಿ ಹೋಗುತ್ತಿರುವಾಗ ರವೀನಾ ಅವರ ಡ್ರೈವರ್ ತನ್ನ ತಾಯಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದಿದ್ದರು. ʻʻಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವೀನಾ ಕೂಡ ಮದ್ಯದ ಅಮಲಿನಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರೂ ಅವರ ದೂರನ್ನು ಸ್ವೀಕರಿಸುತ್ತಿಲ್ಲ . ರವೀನಾ ಪೊಲೀಸ್ ಠಾಣೆಯಲ್ಲಿ ಕೇಸ್‌ವನ್ನು ಇತ್ಯರ್ಥಪಡಿಸುವಂತೆ ನಮ್ಮಲ್ಲಿ ಮನವಿ ಮಾಡಿದರು. ಆದರೆ ನಾವು ಏಕೆ ಇತ್ಯರ್ಥಗೊಳಿಸಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಬಳಿಕ ರವೀನಾ ಟಂಡನ್ ಕುಡಿದಿರಲಿಲ್ಲ, ಸುಳ್ಳು ದೂರು ದಾಖಲಾಗಿದೆ ಎಂದು ಸಿಸಿಟಿವಿ ದೃಶ್ಯಗಳ ಮೂಲಕ ತಿಳಿದು ಬಂದಿತ್ತು. ದೂರುದಾರರು ಸುಳ್ಳು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜ್ತಿಲಕ್ ರೋಷನ್ ಈ ಬಗ್ಗೆ ಮಾತನಾಡಿ ʻʻದೂರುದಾರರು ಸುಳ್ಳು ದೂರು ನೀಡಿದ್ದಾರೆ. ನಾವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಆದರೆ ಕಾರು ಡಿಕ್ಕಿ ಹೊಡೆದಿರಲಿಲ್ಲ. ನಟಿ ರವೀನಾ ಟಂಡನ್ ಚಾಲಕನ ಪರ ಇದ್ದಾಗ ಸಾರ್ವಜನಿ ಕರು ನಟಿಯ ಮೇಲೆ ಮಾತಿಗಿಳಿದಿದ್ದಾರೆ. ಬಳಿಕ ರವೀನಾ ಟಂಡನ್ ಮತ್ತು ಕುಟುಂಬ ಇಬ್ಬರೂ ಖಾರ್ ಪೋಲೀಸ್ ಠಾಣೆಗೆ ಹೋಗಿ ಲಿಖಿತ ದೂರುಗಳನ್ನು ನೀಡಿದ್ದರು. ಇನ್ನು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲʼʼಎಂದಿದ್ದರು.

Continue Reading
Advertisement
Euro 2024
ಕ್ರೀಡೆ8 mins ago

Euro 2024: ಉಕ್ರೇನ್​ಗೆ ಆಘಾತವಿಕ್ಕಿದ ರೊಮೇನಿಯಾ; 3-0 ಗೋಲ್​ ಅಂತರದ ಗೆಲುವು

actor darshan yashas surya
ಪ್ರಮುಖ ಸುದ್ದಿ9 mins ago

Actor Darshan: ಹಾಸ್ಯನಟ ಚಿಕ್ಕಣ್ಣ ಬೆನ್ನಲ್ಲೇ ನಟ ಯಶಸ್‌ ಸೂರ್ಯಗೂ ನೋಟೀಸ್‌, ವಿಚಾರಣೆ

Leader of the Opposition
ರಾಜಕೀಯ34 mins ago

Opposition Leader: 10 ವರ್ಷ ಬಳಿಕ ಲೋಕಸಭೆಯಲ್ಲಿ ವಿರೋಧಪಕ್ಷ ನಾಯಕ! ಇವರಿಗೆ ಸಿಗುವ ಸವಲತ್ತುಗಳೇನು?

Sonakshi Sinha
ಬಾಲಿವುಡ್45 mins ago

Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

Viral News
Latest51 mins ago

Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ

Pankaja Munde
ದೇಶ55 mins ago

ಚುನಾವಣೆಯಲ್ಲಿ ಸೋತಿದ್ದಕ್ಕೆ ನಾಲ್ವರ ಆತ್ಮಹತ್ಯೆ; ಸಾಂತ್ವನ ಹೇಳಿ ಕಣ್ಣೀರಿಟ್ಟ ಬಿಜೆಪಿ ನಾಯಕಿ

actor darshan Actor Chikkanna
ಪ್ರಮುಖ ಸುದ್ದಿ1 hour ago

Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Income Tax Returns Filing
ವಾಣಿಜ್ಯ1 hour ago

Income Tax Returns Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!

Vastu Tips
ಧಾರ್ಮಿಕ1 hour ago

Vastu Tips: ಮನೆಮಂದಿಯ ಸಂಕಷ್ಟ ನಿವಾರಿಸುತ್ತದೆ ಈ ಮರ!

ರಾಜಮಾರ್ಗ ಅಂಕಣ she 1
ಅಂಕಣ2 hours ago

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು20 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು20 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌