Bhairavi Vaidya: ʻಚೋರಿ ಚೋರಿ ಚುಪ್ಕೆ ಚುಪ್ಕೆʼ ಸಿನಿಮಾ ಖ್ಯಾತಿಯ ನಟಿ ಭೈರವಿ ವೈದ್ಯ ನಿಧನ - Vistara News

ಬಾಲಿವುಡ್

Bhairavi Vaidya: ʻಚೋರಿ ಚೋರಿ ಚುಪ್ಕೆ ಚುಪ್ಕೆʼ ಸಿನಿಮಾ ಖ್ಯಾತಿಯ ನಟಿ ಭೈರವಿ ವೈದ್ಯ ನಿಧನ

Bhairavi Vaidya: ಭೈರವಿ ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು. ಅವರ ಅಂತ್ಯಕ್ರಿಯೆ ಯಾವಾಗ, ಎಲ್ಲಿ ಎಂಬ ಮಾಹಿತಿ ಇದುವೆರೆಗೆ ತಿಳಿದು ಬಂದಿಲ್ಲ.

VISTARANEWS.COM


on

Bhairavi Vaidya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಾಲ್ ಮತ್ತು ಚೋರಿ ಚೋರಿ ಚುಪ್ಕೆ ಚುಪ್ಕೆ ಸಿನಿಮಾ (Chori Chori Chupke Chupke) ಖ್ಯಾತಿಯ ಹಿರಿಯ ನಟಿ ಭೈರವಿ ವೈದ್ಯ ನಿಧನರಾಗಿದ್ದಾರೆ. ಅವರಿಗೆ ಕೇವಲ 67 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ಕಾಯಿಲೆಗೆ ನಟಿ ತುತ್ತಾಗಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ನಟಿ ಅಕ್ಟೋಬರ್ 8ರಂದು ಕೊನೆಯುಸಿರೆಳೆದರು. ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರುವ ಭೈರವಿ ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ್ದರು. ಅವರ ಅಂತ್ಯಕ್ರಿಯೆ ಯಾವಾಗ, ಎಲ್ಲಿ ಎಂಬ ಮಾಹಿತಿ ಇದುವೆರೆಗೆ ತಿಳಿದು ಬಂದಿಲ್ಲ.

ನಟಿ ಗುಜರಾತಿ ಮತ್ತು ಹಿಂದಿ ಸಿನಿಮಾ ಎರಡರಲ್ಲಿಯೂ ಸಕ್ರಿಯರಾಗಿದ್ದರು. ಇತ್ತೀಚಿನ ಟಿವಿ ಶೋ ನಿಮಾ ಡೆನ್ಜಾಂಗ್ಪಾದಲ್ಲಿ (Nima Denzongpa) ಕಾಣಿಸಿಕೊಂಡಿದ್ದರು. ಹಸ್ರತೇನ್ ಮತ್ತು ಮಹಿಸಾಗರದಂತಹ (Hasratein and Mahisagar) ಶೋಗಳಲ್ಲಿ ಅವರ ಪಾತ್ರಗಳನ್ನು ಅಭಿಮಾನಿಗಳು ಮೆಚ್ಚಿದ್ದರು.

ಕಾರ್ಯಕ್ರಮವೊಂದರಲ್ಲಿ ಭೈರವಿ ಮೊಮ್ಮಗಳಾಗಿ ನಟಿಸಿದ ಅನುಪಮಾ ನಟಿ ನಿಶಿ ಸಕ್ಸೇನಾ ಅವರು ನಿಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ “ಭೈರವಿಜಿ ನನಗೆ ತುಂಬಾ ಹತ್ತಿರವಾಗಿದ್ದರು. ಅವರು ಈ ಜಗತ್ತಿನಲ್ಲಿಲ್ಲ ಎಂದು ತಿಳಿದಾಗ ನನಗೆ ಆಘಾತವಾಯಿತು. ಅವರು ನನ್ನ ಡ್ಯಾಡಿ ಪಾತ್ರದಲ್ಲಿ ನಟಿಸಿದ್ದರು. ಶೂಟಿಂಗ್‌ ಸಮಯದಲ್ಲಿ ಒಂದೇ ಕ್ಯಾಬ್ ಬುಕ್ ಮಾಡಿ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sir Michael Gambon: ‘ಹ್ಯಾರಿ ಪಾಟರ್’ ಚಿತ್ರದ ನಟ, ಸರ್ ಮೈಕೆಲ್ ಗ್ಯಾಂಬೊನ್ ನಿಧನ

ನಿಮಾ ಡೆನ್ಜಾಂಗ್ಪಾ ಪಾತ್ರದಲ್ಲಿ ನಟಿಸಿದ ಸುರಭಿ ದಾಸ್ “ಭೈರವಿ ಜೀ ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾವು ಅವರೊಂದಿಗೆ ಶೂಟಿಂಗ್ ಮಾಡುವಾಗ ಸುಂದರ ಸಮಯವನ್ನು ಕಳೆದಿದ್ದೇವೆ. ಇದೆಲ್ಲ ಇನ್ನು ನೆನಪು ಮಾತ್ರʼʼಎಂದು ಹೇಳಿಕೊಂಡಿದ್ದಾರೆ. ನಟಿ ಹುಮ್ರಾಜ್, ಹೇರಾ ಫೆರಿ, ವಾಟ್ಸ್ ಯುವರ್ ರಾಶೀ (What’s Your Rashee), ಕ್ಯಾ ದಿಲ್ ನೆ ಕಹಾ ಮತ್ತು ಇತರ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Election Results 2024: ಕಂಗನಾ ರಣಾವತ್‌ ಎದುರು ʼಮಂಡಿʼಯೂರಿದ ಖ್ಯಾತ ರಾಜಕಾರಣಿಯ ಮಗ!

Election Results 2024: 2024ರ ಚುನಾವಣೆಯ ಫಲಿತಾಂಶದ ದಿನದಂದು ಕಂಗನಾ ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಕಂಗನಾ ರಣಾವತ್‌ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 65,807 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

VISTARANEWS.COM


on

Election Results 2024 Kangana Ranaut on lead
Koo

ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ (Election Results 2024) ಗೆದ್ದು ಬೀಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ವಿನ್‌ ಆಗಿದ್ದಾರೆ. ಆ ಮೂಲಕ ನಟಿಯ ಗೆಲುವು ಖಚಿತವಾಗಿದೆ.

“ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಪರಿಣಾಮಗಳನ್ನು ಅವರು ಅನುಭವಿಸಬೇಕಾಗುತ್ತದೆ. ನನ್ನ ‘ಜನ್ಮಭೂಮಿ’ ಹಿಮಾಚಲ ಪ್ರದೇಶದಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್‌ ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ಆದರೆ ನಾನು ಇಲ್ಲಿ ಇದ್ದೇ ಇರುತ್ತೇನೆʼʼಎಂದು ಗೆಲ್ಲುವ ಮುಂಚೆ ಕಂಗನಾ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Election Results 2024: ಇಂದೋರ್‌ನಲ್ಲಿ NOTAಕ್ಕೆ ಲಭಿಸಿತು ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತ; ಹಿಂದಿನ ದಾಖಲೆಗಳೆಲ್ಲ ಉಡೀಸ್‌

2024ರ ಚುನಾವಣೆಯ ಫಲಿತಾಂಶದ ದಿನದಂದು ಕಂಗನಾ ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Continue Reading

Lok Sabha Election 2024

Election Results 2024: ಮತ ಎಣಿಕೆಯ ಮೊದಲು ತಾಯಿಯಿಂದ ಮೊಸರು-ಸಕ್ಕರೆಯ ಆಶೀರ್ವಾದ ಪಡೆದ ಕಂಗನಾ!

Election Results 2024: ಕಂಗನಾ ತಾಯಿಯ ಆಶೀರ್ವಾದ ಪಡೆದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. . “ತಾಯಿಯೇ ದೇವರ ರೂಪ, ಇಂದು ನನ್ನ ತಾಯಿ ನನಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

VISTARANEWS.COM


on

Election Results 2024 leading from Mandi, takes her mother's blessings
Koo

ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ (Election Results 2024) ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. 2024ರ ಚುನಾವಣೆಯ ಫಲಿತಾಂಶದ ದಿನದಂದು ಅವರು ತಮ್ಮ ತಾಯಿಯ ಆಶೀರ್ವಾದವನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಹಾಗೂ ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ.

ಕಂಗನಾ ತಾಯಿಯ ಆಶೀರ್ವಾದ ಪಡೆದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. . “ತಾಯಿಯೇ ದೇವರ ರೂಪ, ಇಂದು ನನ್ನ ತಾಯಿ ನನಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಗೆಲುವಿನ ವಿಶ್ವಾಸದಲ್ಲಿರುವ ಕಂಗನಾಗೆ ಇದು ದೊಡ್ಡ ದಿನ. “ಮಂಡಿಯು ಹೆಣ್ಣು ಮಕ್ಕಳಿಗೆ ಆಗುವ ಅವಮಾನಗಳನ್ನು ನಾನು ಸಹಿಸುವುದಿಲ್ಲ. ಹಿಮಾಚಲ ಪ್ರದೇಶ ನನ್ನ ‘ಜನ್ಮಭೂಮಿ’ ಮತ್ತು ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆʼʼ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Continue Reading

ಬಾಲಿವುಡ್

Swara Bhasker: ತೂಕ ಹೆಚ್ಚಾಗಿದ್ದರಿಂದ ಸಿನಿಮಾಗಳಲ್ಲಿ ಕೆಲಸ ಸಿಗುತ್ತಿಲ್ಲ; ಬಾಡಿ ಶೇಮ್‌ ಮಾಡಿದಕ್ಕೆ ಸ್ವರಾ ಭಾಸ್ಕರ್ ಗರಂ!

Swara Bhasker: ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದಿದ್ದರು.

VISTARANEWS.COM


on

Swara Bhaskar angry as news outlet
Koo

ಬೆಂಗಳೂರು: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ (Swara Bhasker) ಅವರು 2023ರ ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahmad) ಅವರು ಸ್ವರಾ ಅವರ ಪತಿಯಾಗಿದ್ದಾರೆ. ಇದೀಗ ಮಾಧ್ಯಮವೊಂದು ಸ್ವರಾ ಭಾಸ್ಕರ್ ತೂಕ ಹೆಚ್ಚಾದ ಕಾರಣ ಸಿನಿಮಾಗಳಲ್ಲಿ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ವರದಿ ಮಾಡಿವೆ. ಈ ರೀತಿ ಬಾಡಿ ಶೇಮ್‌ ಮಾಡಿದ ಸುದ್ದಿಗೆ ಸ್ವರಾ ಈಗ ಖಡಕ್‌ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಲೇಖನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಸ್ವರಾ ಭಾಸ್ಕರ್ ಬರೆದಿದ್ದಾರೆ, “ದೇವನಾಗರಿ ಲಿಪಿಯನ್ನು ಓದಲು ಸಾಧ್ಯವಾಗದವರಿಗೆ, ಕೆಲವು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ ಇತ್ತೀಚಿನ ತಾಯಿಯ ಕುರಿತು ಹಾಕಿರುವ ಸುದ್ದಿಯಾಗಿದೆʼʼ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ತೂಕ ಹೆಚ್ಚಾಗುವುದರಿಂದ, ಸ್ವರಾ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ಸುದ್ದಿ ಮಾಡಿದ ಮಾಧ್ಯಮಕ್ಕೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಕಂಗನಾ ರಣಾವತ್ ( Kangana Ranaut ) ಅವರಿಗೆ ಹಿಂದಿ ಚಲನಚಿತ್ರೋದ್ಯಮದ ಅನೇಕ ನಟಿ ನಟಿಯರ ಜತೆ ವೈಮನಸ್ಸು ಇದೆ. ಅವರಲ್ಲಿ ಒಬ್ಬರು ಸ್ವರಾ ಭಾಸ್ಕರ್ (Swara Bhasker). ಕಂಗನಾ ಅವರು ಸ್ವರಾ ಅವರನ್ನು ‘ಬಿ-ಗ್ರೇಡ್ ನಟಿ’ ಎಂದು ಈ ಹಿಂದೆ ಕರೆದಿದ್ದರು. ನಟಿ ಮತ್ತು ರಾಜಕಾರಣಿ ಸ್ವರಾ ತಮಗೆ ಹಾಗೂ ಕಂಗನಾ ನಡುವೆ ಇರುವ ವ್ಯತ್ಯಾಸದ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದರು.

ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದಿದ್ದರು.

Continue Reading

ಬಾಲಿವುಡ್

Urfi Javed: ಉರ್ಫಿ ಜಾವೇದ್‌ಗೆ ಮುಖ ಹೀಗೆ ಊದಿಕೊಳ್ಳುತ್ತೆ; ಆರೋಗ್ಯ ಸಮಸ್ಯೆಯಿಂದ ಬಳಲ್ತಾ ಇದ್ದಾರೆ ಫ್ಯಾಷನ್‌ ಐಕಾನ್‌!

Urfi Javed: ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

VISTARANEWS.COM


on

Urfi Javed shares photos of swollen face, accepts
Koo

ಬೆಂಗಳೂರು: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅವರ ಮುಖ ಊದಿಕೊಂಡಿತ್ತು. ಈ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದಾರೆ.

ಉರ್ಫಿ ಜಾವೇದ್‌ ಪೋಸ್ಟ್‌ನಲ್ಲಿ ʻ”ನನ್ನ ಮುಖದ ವಿಚಾರವಾಗಿ ನಾನು ಹಲವಾರು ಟೀಕೆಗಳನ್ನು ಎದುರಿಸಿದ್ದೆ. ನನಗೆ ಅಲರ್ಜಿ ಇದೆ, ನನ್ನ ಮುಖವು ಹೆಚ್ಚಾಗಿ ಊದಿಕೊಳ್ಳುತ್ತದೆ. ಬೆಳಗ್ಗೆ ಎದ್ದಾಗ ಮುಖ ಸದಾ ಊದಿಕೊಂಡಿರುತ್ತದೆ. ಪ್ರತಿ ಎರಡು ದಿನಕ್ಕೊಮ್ಮೆ ನಾನು ಬೆಳಗ್ಗೆ ಏಳುವಾಗ ನನ್ನ ಮುಖ ಹೀಗೆ ಊದಿಕೊಂಡಿರುತ್ತೆ. ಯಾವಾಗಲೂ ಹೀಗಾದಾಗ ನಾನು ಕಿರಿಕಿರಿಯನ್ನು ಅನುಭವಿಸುತ್ತೇನೆ” ಎಂದು ಉರ್ಫಿ ಜಾವೇದ್ ಬರೆದುಕೊಂಡಿದ್ದಾರೆ.

ʻʻಇಮ್ಯೂನೋಥೆರಪಿ ನಡೆಯುತ್ತಿದೆ. ಮಾಮೂಲಿ ಫಿಲ್ಲರ್ಸ್ ಬಿಟ್ಟರೆ ಬೇರೆ ಏನನ್ನೂ ನಾನು ಮಾಡಿಸಿಕೊಳ್ಳುವುದಿಲ್ಲ. ಇದನ್ನು ನಾನು ನನಗೆ 18 ವರ್ಷವಿದ್ದಾಗಿನಿಂದ ಮಾಡಿಕೊಂಡು ಬಂದಿದ್ದೇನೆ. ಎಂದಾದರೂ ಊದಿಕೊಂಡ ಮುಖ ನೋಡಿದಾಗ, ನನಗೆ ಸಲಹೆ ನೀಡಲು ಬರಬೇಡಿ.” ಎಂದು ಊರ್ಫಿ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ʻಮ್ಯಾಜಿಕ್ʼ ಡ್ರೆಸ್‌ಗೆ ಸಮಂತಾ ಮೆಚ್ಚುಗೆ; ಗೌನ್‌ನಿಂದ ಹಾರಿತು ಬಣ್ಣದ ಚಿಟ್ಟೆ!

ಬಾಲಿವುಡ್‌ಗೆ ಪದಾರ್ಪಣೆ

ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು. ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

Continue Reading
Advertisement
Fazalhaq Farooqi
ಕ್ರೀಡೆ5 mins ago

Fazalhaq Farooqi: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಫಜಲ್ಹಕ್ ಫಾರೂಕಿ

Election Results 2024
Lok Sabha Election 202414 mins ago

Election Results 2024: ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

Karnataka Election Results 2024
Lok Sabha Election 202415 mins ago

Karnataka Election Results 2024: ಗ್ಯಾರಂಟಿ ದರ್ಬಾರ್ ಮಧ್ಯೆಯೂ ಬಿಜೆಪಿ ಗೆದ್ದು ಬೀಗಿದೆ ಎಂದ ವಿಜಯೇಂದ್ರ

Udupi Chikmagalur Result 2024:
ಪ್ರಮುಖ ಸುದ್ದಿ22 mins ago

Bangalore South Election Result 2024 : ತೇಜಸ್ವಿ ಸೂರ್ಯಗೆ ಭಾರಿ ಅಂತರದ ಗೆಲುವು

Election Results 2024
ದೇಶ42 mins ago

Election Results 2024: ನಿತೀಶ್‌ ಕುಮಾರ್‌ ಬೆಂಬಲ ಯಾರಿಗೆ? ಏನಂದ್ರು ಜೆಡಿಯು ನಾಯಕರು?

IND vs IRE T20 World Cup
ಕ್ರೀಡೆ1 hour ago

IND vs IRE T20 World Cup: ಐರ್ಲೆಂಡ್​ ಸವಾಲಿಗೆ ಟೀಮ್​ ಇಂಡಿಯಾ ಸಿದ್ಧ; ವಿಶ್ವಕಪ್​ ಸಾಧನೆ ಹೇಗಿದೆ?

AP Election Results 2024 Live
ದೇಶ1 hour ago

AP Election Results 2024 Live: ಚಂದ್ರಬಾಬು ನಾಯ್ಡುಗೆ ಮತ್ತೆ ಒಲಿಯಲಿದೆ ಸಿಎಂ ಪಟ್ಟ; ಜೂನ್‌ 9ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

election results 2024 naidu
ಪ್ರಮುಖ ಸುದ್ದಿ1 hour ago

Election Results 2024: ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ ಮೋದಿ, ಅಮಿತ್‌ ಶಾ‌; ಕೈ ಮುಖಂಡರಿಂದಲೂ‌ ಕಾಲ್; ನಾಯ್ಡು ಮನಸ್ಸು ಯಾರ ಕಡೆ?

Karnataka election results 2024
ಕರ್ನಾಟಕ1 hour ago

Karnataka election results 2024: ಕರ್ನಾಟಕದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ: ಪ್ರಲ್ಹಾದ್‌ ಜೋಶಿ

Udupi Chikmagalur Result 2024
ಪ್ರಮುಖ ಸುದ್ದಿ1 hour ago

Udupi Chikmagalur Election Result 2024 : ಉಡುಪಿಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್​ ಪೂಜಾರಿಗೆ ವಿಜಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ10 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌