Shah Rukh Khan: ಬಿಡುಗಡೆ ಮುನ್ನವೇ 6 ಲಕ್ಷ ಟಿಕೆಟ್‌ ಮಾರಾಟ; ಸಾರ್ವಕಾಲಿಕ ದಾಖಲೆ ಬರೆದ ಶಾರುಖ್ ಸಿನಿಮಾ ʻಜವಾನ್‌ʼ! - Vistara News

ಬಾಲಿವುಡ್

Shah Rukh Khan: ಬಿಡುಗಡೆ ಮುನ್ನವೇ 6 ಲಕ್ಷ ಟಿಕೆಟ್‌ ಮಾರಾಟ; ಸಾರ್ವಕಾಲಿಕ ದಾಖಲೆ ಬರೆದ ಶಾರುಖ್ ಸಿನಿಮಾ ʻಜವಾನ್‌ʼ!

Shah Rukh Khan: ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಭಾರತದಲ್ಲಿ ಜವಾನ್‌ನ ಪ್ರಿ ಬುಕ್ಕಿಂಗ್‌ ಟಿಕೆಟ್‌ ಮಾರಾಟದ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ.

VISTARANEWS.COM


on

Shah Rukh Khan Look In jawan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಾರುಖ್ ಖಾನ್‌ (Shah Rukh Khan) ಜವಾನ್ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಸೆಪ್ಟೆಂಬರ್ 7 ರಂದು ಜವಾನ್‌ ಸಿನಿಮಾ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಭಾನುವಾರ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಭಾರತದಲ್ಲಿ ಜವಾನ್‌ನ (Jawan advance booking) ಪ್ರಿ ಬುಕ್ಕಿಂಗ್‌ ಟಿಕೆಟ್‌ ಮಾರಾಟದ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ( Jawan opening day)ಬರೋಬ್ಬರಿ ಆರು ಲಕ್ಷ ಟಿಕೆಟ್‌ಗಳು (Jawan box office) ಮಾರಾಟವಾಗಿವೆ.

ಮಲ್ಟಿಪ್ಲೆಕ್ಸ್‌ಗಳ ಸಂಖ್ಯೆಗಳನ್ನು ಹಂಚಿಕೊಂಡಿರುವ ಮನೋಬಾಲಾ, ಬ್ಲಾಕ್ ಸೀಟ್‌ಗಳಿಲ್ಲದ ಡೇಟಾವನ್ನು ಟ್ವೀಟ್ ಮಾಡಿದ್ದಾರೆ, “ಜವಾನ್ ಭಾರತದಲ್ಲಿ 5,00,000 (5 ಲಕ್ಷ) ಟಿಕೆಟ್ ಮಾರಾಟದ ಮೈಲಿಗಲ್ಲು. ರಾಷ್ಟ್ರೀಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಜವಾನ್ ಪ್ರಿ ಬುಕ್ಕಿಂಗ್‌ ಪಿವಿಆರ್‌- 1,12,299, ಐನಾಕ್ಸ್‌ – 75,661, ಸಿನಿಪೊಲೀಸ್‌ – 40,577. ಒಟ್ಟು ಮಾರಾಟವಾದ ಟಿಕೆಟ್‌ಗಳು – 2,28,538. ಒಟ್ಟು -9.01 ಕೋಟಿ ರೂ. ಈಗಾಗಲೇ ಕಲೆಕ್ಷನ್‌ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

“ನಗರದಾದ್ಯಂತ, ಎಲ್ಲಾ ಚಿತ್ರಮಂದಿರಗಳು – ದೆಹಲಿ NCR – 39,535 (1.91 ಕೋಟಿ ರೂ), ಮುಂಬೈ – 39,600 (1.57 ಕೋಟಿ ರೂ.), ಬೆಂಗಳೂರು – 39,325 (1.42 ಕೋಟಿ ರೂ.), ಹೈದರಾಬಾದ್ – 58,898 (1.35 ಕೋಟಿ ರೂ.), ಕೋಲ್ಕತ್ತಾ – 40,035 (1.16 ಕೋಟಿ ರೂ). ಭಾರತದಾದ್ಯಂತ, ಎಲ್ಲಾ ಥಿಯೇಟರ್‌ಗಳು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. 5,17,700 ಟಿಕೆಟ್‌ಗಳಂತೆ ಒಟ್ಟು -14.47 ಕೋಟಿ ರೂ. [ನಿರ್ಬಂಧಿತ ಸೀಟುಗಳನ್ನು ಹೊರತುಪಡಿಸಿ].”ಎಂದು ಬರೆದುಕೊಂಡಿದ್ದಾರೆ. ಹೊಸ ವರದಿಯ ಪ್ರಕಾರ, ಜವಾನ್ ಮುಂಗಡ ಬುಕ್ಕಿಂಗ್ ಸುಮಾರು 40 ಕೋಟಿ ರೂ. ಗಳಿಕೆಯನ್ನು ತಲುಪುವ ಹಾದಿಯಲ್ಲಿದೆ, ಇದು ಬಾಲಿವುಡ್ ಚಲನಚಿತ್ರದ ಸಾರ್ವಕಾಲಿಕ ದಾಖಲೆಯಾಗಿದೆ.

ಇದನ್ನೂ ಓದಿ: Upcoming Movies 2023: ಸೆಪ್ಟೆಂಬರ್‌ನಲ್ಲಿ ಜವಾನ್‌, ಸಲಾರ್‌ಗೆ ಪೈಪೋಟಿ ಕೊಡಲಿರುವ ಸಿನಿಮಾಗಳ ಪಟ್ಟಿ!

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಜವಾನ್‌ನ ಪ್ರಿ ಬುಕಿಂಗ್ ಮತ್ತು ವಿವಿಧ ನಗರಗಳಲ್ಲಿ ಬೆಳಗಿನ ಪ್ರದರ್ಶನಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಜವಾನ್ ದೆಹಲಿ, ಯುಪಿ, ರಾಜಸ್ಥಾನ, ಬಿಹಾರ ಮತ್ತು ಹಿಂದಿ ಬೆಲ್ಟ್‌ನಲ್ಲಿ ಅಸಾಧಾರಣ ಫಲಿತಾಂಶಗಳನ್ನು ತೋರಿಸುತ್ತಿವೆ. ಎಷ್ಟರಮಟ್ಟಿಗೆ ಎಂದರೆ ಹಲವಾರು ಪ್ರದರ್ಶಕರು ಬೆಳಗ್ಗೆ 6 ಗಂಟೆಗೆ ಪ್ರದರ್ಶನಗಳನ್ನು ಪ್ರಾರಂಭಿಸುತ್ತಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; Jawan Movie: ಬುರ್ಜ್ ಖಲೀಫಾದಲ್ಲಿ `ಜವಾನ್‌ ಟ್ರೈಲರ್‌’ ಲಾಂಚ್‌; ಕೆಂಪು ಬಟ್ಟೆ ಧರಿಸಿ ಬನ್ನಿ ಎಂದ ಶಾರುಖ್‌!

ಜವಾನ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಶಾರುಖ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ ಪಠಾಣ್‌ ಅಂತೇ ಸತತ ಎರಡನೇ ಬಾರಿಗೆ ಜವಾನ್‌ ಸಿನಿಮಾ ಕೂಡ 1000 ಕೋಟಿ ರೂ. ಗಳಿಕೆ ಕಾಣುವ ನಿರೀಕ್ಷೆಯಿದೆ. ಅಟ್ಲೀ ನಿರ್ದೇಶನದ ಜವಾನ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ್ದು, ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್, ಯೋಗಿ ಬಾಬು ಮತ್ತು ರಿಧಿ ಡೋಗ್ರಾ ಸೇರಿದಂತೆ ಇತರರು ನಟಿಸಿದ್ದಾರೆ. ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Sonakshi Sinha: ಸೋನಾಕ್ಷಿ ಸಿನ್ಹಾಗೆ ದುಬಾರಿ ಗಿಫ್ಟ್‌ ನೀಡಿದ ಪತಿ ಜಹೀರ್ ಇಕ್ಬಾಲ್!

Sonakshi Sinha: ಮನದನ್ನೆಯ ಮನವೊಲಿಸಲು ಉಡುಗೊರೆ ನೀಡುವುದನ್ನು ನಾವು ನೋಡಿರುತ್ತೇವೆ. ಈಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮುಖದಲ್ಲಿ ಕೂಡ ಈ ಗಿಫ್ಟ್ ಪಡೆದ ಖುಷಿ ಕಾಣಿಸುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಮಯದಲ್ಲಿ ಜಹೀರ್ ಇಕ್ಬಾಲ್ ಪತ್ನಿಗೆ ಐಷಾರಾಮಿ BMW i7 ಕಾರ್ ಉಡುಗೊರೆ ನೀಡಿದ್ದಾರೆ.ಈ ಕಾರಿನಲ್ಲಿಯೇ ಕುಳಿತು ಪತಿ-ಪತ್ನಿಯರು ಆರತಕ್ಷತೆಗೆ ಆಗಮಿಸಿದ್ದಾರಂತೆ.

VISTARANEWS.COM


on

Sonakshi Sinha
Koo

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಕೊನೆಗೂ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇದೀಗ, ವಿವಾಹ ಸಂದರ್ಭದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಕ್ಲಿಪ್‌ನಲ್ಲಿ, ಸಿನ್ಹಾ ಅವರು ಐಷಾರಾಮಿ BMW i7 ಕಾರಿನೊಳಗೆ ಕುಳಿತಿರುವುದು ಕಂಡುಬಂದಿದೆ. ಇದನ್ನು ಪತಿ ಇಕ್ಬಾಲ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಟರಿ ಚಾಲಿತ ಐಷಾರಾಮಿ ಸೆಡಾನ್ i7 ಆರಂಭಿಕ ಬೆಲೆ ರೂ 2.03 ಕೋಟಿ(ಎಕ್ಸ್ ಶೋ ರೂಮ್‌ ಬೆಲೆ)ಯಷ್ಟಿದೆ. ಆದರೆ ಟಾಪ್ ಮಾಡೆಲ್ ರೂ 2.50 ಕೋಟಿ (ಎಕ್ಸ್ ಶೋ ರೂಂ)ವರೆಗೆ ಇದೆಯಂತೆ.  ಆದರೆ ದಬಾಂಗ್‌ ನಟಿಗೆ ಪತಿ ಯಾವ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ವೀಡಿಯೊದಲ್ಲಿ, ಸಿನ್ಹಾ ಬಿಳಿ ಬಣ್ಣದ EVಯಲ್ಲಿ ತನ್ನ ಜೀವನ ಸಂಗಾತಿಯೊಂದಿಗೆ ರೈಡ್ ಗೆ ಹೊರಡುವ ಆನಂದದ ಕ್ಷಣಗಳನ್ನು ಕಾಣಬಹುದು.  ಮುಂಬೈನ ಬಾಸ್ಟಿಯನ್‌ನಲ್ಲಿ ಅವರು ಆರತಕ್ಷತೆಗೆ ಆಗಮಿಸುತ್ತಿದ್ದ ಸಮಯದಲ್ಲಿ ಕ್ಲಿಪ್ ಅನ್ನು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಮದುವೆ ಲವ್ ಜಿಹಾದ್?; ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಅತ್ಯಾಧುನಿಕ ವಿನ್ಯಾಸದ ಕಾರ್ ಇದಾಗಿದ್ದು,  ಕಂಪನಿಯ ಸಿಗ್ನೇಚರ್ ಶೈಲಿಯ ಪ್ರಕಾಶಿತ ಕಿಡ್ನಿ-ಆಕಾರದ ಗ್ರಿಲ್ ಹಾಗು LED ಹೆಡ್‌ಲೈಟ್ ಸೆಟಪ್ ಗಳನ್ನು ಮುಂಭಾಗದಲ್ಲಿ ಹೊಂದಿದೆ. DRL ಗಳ ಪ್ರಭಾವಶಾಲಿ ಸೆಟ್‌ನೊಂದಿಗೆ ಜೋಡಿಸಲಾಗಿದೆ. ಪ್ರಸ್ತುತ ಮಾರಾಟದಲ್ಲಿರುವ G70 ಪೀಳಿಗೆಯ 7-ಸರಣಿಯಂತೆಯೇ EV ವಿನ್ಯಾಸವನ್ನು ಹಂಚಿಕೊಳ್ಳುತ್ತದೆ.

Continue Reading

Latest

Sonakshi Sinha: ಸೋನಾಕ್ಷಿ ಸಿನ್ಹಾ ಮದುವೆ ಲವ್ ಜಿಹಾದ್?; ಶತ್ರುಘ್ನ ಸಿನ್ಹಾ ಹೇಳಿದ್ದೇನು?

Sonakshi Sinha: ಜಹೀರ್ ಇಕ್ಬಾಲ್ ಜೊತೆ ಪುತ್ರಿ ಸೋನಾಕ್ಷಿ ಸಿನ್ಹಾ ಮದುವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ತಂದೆ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ. ದ್ವೇಷವನ್ನು ಹರಡುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ವಿವಾಹವು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ನಿರ್ಧಾರ. ಮಧ್ಯಪ್ರವೇಶಿಸಲು ಯಾರಿಗೂ ಹಕ್ಕಿಲ್ಲ. ಈ ಪ್ರತಿಭಟನೆ ಮೊದಲಾದವು ನಿರುದ್ಯೋಗಿಗಳ ಕೆಲಸ. ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಕೆಲಸದಲ್ಲಿ ತೊಡಗಿಕೊಳ್ಳಿ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ನನಗೆ ಸಾಧ್ಯವಿಲ್ಲ ಎಂದು ಹಿರಿಯ ನಟ ಬೇಸರ ವ್ಯಕ್ತಪಡಿಸಿದರು.

VISTARANEWS.COM


on

Sonakshi Sinha
Koo

ಮುಂಬೈ: ಜಹೀರ್ ಇಕ್ಬಾಲ್ ಜೊತೆ ಪುತ್ರಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ತಂದೆ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ. ದ್ವೇಷವನ್ನು ಹರಡುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಜೂನ್ 23ರಂದು ಮುಂಬೈಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಜೊತೆ ವಿವಾಹಬಂಧನಕ್ಕೆ ಸಾಕ್ಷಿಯಾಗಿದ್ದರು. ಅವರ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಶತ್ರುಘ್ನ ಸಿನ್ಹಾ ಅವರ ತವರು ಬಿಹಾರದ ಪಾಟ್ನಾದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಹಿಂದೂ ಶಿವ ಭವಾನಿ ಸೇನೆ ಹೆಸರಿನ ಸಂಘಟನೆ ಈ ಅಂತಧರ್ಮಿಯ ವಿವಾಹವನ್ನು “ಲವ್ ಜಿಹಾದ್’ ಎಂದು ಕರೆದಿದೆ ಹಾಗೂ ರಾಜಧಾನಿಗೆ ಎಂದಿಗೂ ಭೇಟಿ ನೀಡದಂತೆ ಎಚ್ಚರಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶತ್ರುಘ್ನ ಸಿನ್ಹಾ “ವಿವಾಹವು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ನಿರ್ಧಾರ. ಮಧ್ಯಪ್ರವೇಶಿಸಲು ಯಾರಿಗೂ ಹಕ್ಕಿಲ್ಲ. ಈ ಪ್ರತಿಭಟನೆ ಮೊದಲಾದವು ನಿರುದ್ಯೋಗಿಗಳ ಕೆಲಸ. ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಕೆಲಸದಲ್ಲಿ ತೊಡಗಿಕೊಳ್ಳಿ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ನನಗೆ ಸಾಧ್ಯವಿಲ್ಲ’ ಎಂದು ಹಿರಿಯ ನಟ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

ವಿವಾಹದ ಬಳಿಕ ಸೋನಾಕ್ಷಿ ಹಾಗೂ ಜಹೀರ್ ದಂಪತಿ ಬಾಂದ್ರಾ ನಿವಾಸದಲ್ಲಿ ಆತ್ಮೀಯ ಸಮಾರಂಭ ಆಯೋಜಿಸಿದ್ದರು. ಬಳಿಕ ಮದುವೆಯ ಚಿತ್ರಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಂಡು “ಏಳು ವರ್ಷಗಳ ಹಿಂದೆ ಇದೇ ದಿನದಂದು ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಕಂಡುಕೊಂಡೆವು. ಅದನ್ನು ಶಾಶ್ವತವಾಗಿ ಹಿಡಿದಿಡಲು ವಿವಾಹವಾದೆವು. ಇಂದು ಆ ಪ್ರೀತಿ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ವಿಜಯಿಯಾಗಲು ಮಾರ್ಗದರ್ಶನ ನೀಡಿದೆ. ಎರಡೂ ಕುಟುಂಬಗಳ ಆರ್ಶೀವಾದದೊಂದಿಗೆ ನಾವು ಗಂಡ ಹೆಂಡತಿಯರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

Continue Reading

ಸಿನಿಮಾ

Kalki 2898 AD: ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್‌-ದೀಪಿಕಾ ಜೋಡಿಯ ʼಕಲ್ಕಿʼ? ಏನಿದು ಲೆಕ್ಕಾಚಾರ?

Kalki 2898 AD: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ ಸಿನಿಮಾ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಅಭೂತಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 200 ಕೋಟಿ ರೂ. ಗಳಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

VISTARANEWS.COM


on

Kalki 2898 AD
Koo

ಮುಂಬೈ: ಸದ್ಯ ಎಲ್ಲೆಡೆ ʼಕಲ್ಕಿʼಯದ್ದೇ ಹವಾ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಸೃಷ್ಟಿಸಿರುವ ಮ್ಯಾಜಿಕ್ಕೇ ಅಂತಹದ್ದು. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿಯೂ ಈ ಸಿನಿಮಾಕ್ಕಿದೆ. ಟಾಲಿವುಟ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಸಿನಿಮಾ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchanಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಜೂನ್‌ 27ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಅಭೂತಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 200 ಕೋಟಿ ರೂ. ಗಳಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼ ಚಿತ್ರದ ಅಡ್ವಾನ್ಸ್‌ ಬುಕ್ಕಿಂಗ್‌ ಶರವೇಗದಲ್ಲಿ ಸಾಗುತ್ತಿದೆ. ವಿಶೇಷ ಎಂದರೆ ʼಕಲ್ಕಿʼ ಎಲ್ಲ 210 ಐಮ್ಯಾಕ್ಸ್‌ (IMAX) ತೆರೆಗಳಲ್ಲಿ ಬಿಡುಗಡೆಯಾಗಲಿರುವ ಮೊದಲ ಭಾರತೀಯ ಸಿನಿಮಾ ಎನಿಸಿಕೊಳ್ಳಲಿದೆ. ಈ ತೆರೆಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗುಗಳಲ್ಲಿ ʼಕಲ್ಕಿʼಯ 2ಡಿ ಮತ್ತು 3ಡಿ ಆವೃತ್ತಿ ರಿಲೀಸ್‌ ಆಗಲಿದೆ.

ʼಬಾಹುಬಲಿ 2ʼ ಮತ್ತು ʼಆರ್‌ಆರ್‌ಆರ್‌ʼ ಚಿತ್ರಗಳ ಬಳಿಕ ಜಾಗತಿಕವಾಗಿ ಮೊದಲ ದಿನವೇ 200 ಕೋಟಿ ರೂ. ಗಳಿಸುವ ಮೂರನೇ ಭಾರತೀಯ ಚಿತ್ರ ʼಕಲ್ಕಿ 2898 ಎಡಿʼ ಆಗಲಿದೆ ಎಂದು ಮೂಲಗಳು ಅಂದಾಜಿಸಿವೆ. ʼʼಕಲ್ಕಿʼ ಭಾರತದಲ್ಲಿ ಮೊದಲ ದಿನವೇ 120-140 ಕೋಟಿ ರೂ. ಗಳಿಸಲಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲೇ ಸುಮಾರು 90-100 ಕೋಟಿ ಕಲೆಕ್ಷನ್‌ ಆಗುವ ನಿರೀಕ್ಷೆ ಇದೆ. ಉತ್ತರ ಭಾರತದಲ್ಲಿ 20 ಕೋಟಿ ರೂ., ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 15+ ಕೋಟಿ ರೂ. ಗಳಿಸುವ ಸಾಧ್ಯತೆ ಇದೆʼʼ ಎಂದು ವರದಿಯೊಂದು ಭವಿಷ್ಯ ನುಡಿದಿದೆ.

ಟಿಕೆಟ್‌ ವಿತರಣೆಯ ಆ್ಯಪ್‌ ಬುಕ್‌ಮೈ ಶೋ ಮೊದಲ 1 ಗಂಟೆಯಲ್ಲಿ ತೆಲಂಗಾಣವೊಂದರಲ್ಲೇ 36,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಟಿಕೆಟ್‌ ಓಪನಿಂಗ್‌ ಆದ ಒಂದು ದಿನದಲ್ಲೇ ದೇಶಾದ್ಯಂತ 1 ಲಕ್ಷ ಟಿಕೆಟ್‌ ಮಾರಾಟವಾಗಿದೆ. ಅದಾಗ್ಯೂ ಇನ್ನು ಕೆಲವು ಮಲ್ಟಿಫ್ಲೆಕ್ಸ್‌ ಟಿಕೆಟ್‌ ವಿತರಣೆ ಆರಂಭಿಸಿಲ್ಲ. ಹೀಗಾದಲ್ಲಿ ಟಿಕೆಟ್‌ ಮಾರಾಟದ ಸಂಖ್ಯೆ ದುಪ್ಪಟ್ಟಾಗಲಿದೆ. ಇತ್ತ ಉತ್ತರ ಅಮೆರಿಕದಲ್ಲಿ ಈಗಾಗಲೇ 1,25,000 ಟಿಕೆಟ್‌ ಮಾರಾಟವಾಗಿದೆ. ಈ ಮೂಲಕ ಪ್ರಭಾಸ್‌ ನಟನೆಯ ʼಸಲಾರ್‌ʼನ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ: Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್‌ ಕಾರು ರೈಡ್‌ ಮಾಡಿದ ರಿಷಬ್‌ ಶೆಟ್ಟಿ ಹೇಳಿದ್ದೇನು?

ವೈಜಯಂತಿ ಮೂವೀಸ್‌ ಈ ʼಕಲ್ಕಿʼ ಚಿತ್ರವನ್ನು ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ದಿಶಾ ಪಠಾಣಿ, ಶೋಭನಾ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆ ಕಾಣಲಿದೆ. ವಿಶೇಷ ಎಂದರೆ ನಾಯಕಿ ದೀಪಿಕಾ ಪಡುಕೋಣೆ ಹಿಂದಿ ಮತ್ತು ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆ.

Continue Reading

ಸಿನಿಮಾ

Kangana Ranaut: ʻಎಮರ್ಜೆನ್ಸಿʼ ಬಿಡುಗಡೆ ದಿನಾಂಕ ಘೋಷಿಸಿದ ಕಂಗನಾ ರಣಾವತ್​

Kangana Ranaut: ಬಿಜೆಪಿ ಸಂಸದೆ, ಬಾಲಿವುಡ್‌ ನಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕಂಗನಾ ರಾಣಾವತ್‌ ನಿರ್ದೇಶಿಸಿ, ನಟಿಸುತ್ತಿರುವ ʼಎಮರ್ಜೆನ್ಸಿʼ ಸಿನಿಮಾ ಸದ್ಯ ಕುತೂಹಲ ಕೆರಳಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನವನ್ನು ತೆರೆ ಮೇಲೆ ಅನಾವರಣಗೊಳಿಸಲಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

VISTARANEWS.COM


on

Kangana Ranaut
Koo

ಮುಂಬೈ: ಜೂನ್‌ 25-ಈ ದಿನಾಂಕವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ದಿನವಿದು. ಇಂದಿಗೆ ತುರ್ತು ಪರಿಸ್ಥಿತಿಗೆ 49 ವರ್ಷ ಪೂರ್ಣವಾಗಿದ್ದು, ಈ ಹಿನ್ನಲೆಯಲ್ಲಿ ಬಾಲಿವುಡ್‌ ನಟಿ, ಸಂಸದೆ ಕಂಗನಾ ರಣಾವತ್​ (Kangana Ranaut) ತಾವು ನಿರ್ದೇಶಿಸಿ, ನಿರ್ಮಿಸಿ, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ʼಎಮರ್ಜೆನ್ಸಿʼ (Emergency) ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ʼʼಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿರುವ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಯ ಆರಂಭದಲ್ಲಿ ʼಎಮರ್ಜೆನ್ಸಿʼ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿದ್ದೇವೆ. ಸೆಪ್ಟೆಂಬರ್‌ 6ರಂದು ಚಿತ್ರ ತೆರೆ ಕಾಣಲಿದೆ. ಭಾರತದ ಸಂವಿಧಾನದ ಬಹುದೊಡ್ಡ ವಿವಾದ ತೆರೆ ಮೇಲೆ ಅನಾವರಣಗೊಳ್ಳಲಿದೆʼʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರತಂಡ ಬರೆದುಕೊಂಡಿದೆ.

ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕಂಗನಾ ಕೆಲವು ದಿನಗಳ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು. ಇಲ್ಲದಿದ್ದರೆ ಇಷ್ಟರಲ್ಲಾಗಲೇ ಚಿತ್ರ ತೆರೆ ಕಾಣಬೇಕಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರು ರಿಲೀಸ್‌ ಡೇಟ್‌ ಮುಂದೂಡಿದ್ದರು. ಸದ್ಯ ಅವರು ಹಿಮಾಚಲ ಪ್ರದೇಶ ಮಂಡಿ ಕ್ಷೇತಚರದಿಂದ ಗೆದ್ದು, ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಾಹಜೀಯಕ್ಕೆ ಆದ್ಯತೆ ನೀಡುವುದಾಗಿ ಈ ಹಿಂದೆ ಕಂಗನಾ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈಗ ಅನುಮಾನಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

‘ಎಮರ್ಜೆನ್ಸಿ’ಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದು, ಫಸ್ಟ್‌ ಲುಕ್‌ನಲ್ಲಿ ಇಂದಿರಾ ಗಾಂಧಿ ಅವರನ್ನೇ ಹೋಲುತ್ತಿರುವುದನ್ನು ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಇನ್ನು ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಜತೆಗೆ ತುರ್ತು ಪರಿಸ್ಥಿತಿಯನ್ನೂ ಇಂಚು ಇಂಚಾಗಿ ತೆರೆದಿಡಲಿದೆ. ಹೀಗಾಗಿ ಈಗಾಗಲೇ ಸಿನಿಮಾ ಗಮನ ಸೆಳೆದಿದೆ.

ಇದನ್ನೂ ಓದಿ: Kangana Ranaut: ರಾಜಕೀಯಕ್ಕಿಂತ ಸಿನಿಮಾ ಬೆಸ್ಟ್​ ಎಂದ ಕಂಗನಾ! ಪೊಲಿಟಿಕಲ್​ ಜರ್ನಿ ವಿವರಿಸಿದ ನಟಿ

ಗೆಲುವು ಅನಿವಾರ್ಯ

ಕಂಗನಾ ಅಭಿನಯದ ಇತ್ತೀಚಿನ ಚಿತ್ರಗಳು ಯಾವುದೂ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಕಂಗನಾ ಅಭಿನಯಕ್ಕೆ ಪ್ರೇಕ್ಷಕರು, ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರೂ ಮ್ಯಾಜಿಕ್‌ ಮಾಡಿರಲಿಲ್ಲ. ಹೀಗಾಗಿ ಈ ಚಿತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದೆ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಬಿಡುಗಡೆಯಾದ ʼತಲೈವಿʼ ಸಿನಿಮಾದಲ್ಲಿ ಕಂಗನಾ ಅವರು ಜಯಲಲಿತಾ ಅವರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಹೀಗಾಗಿ ಅವರು ಎರಡನೇ ಬಾರಿ ಪ್ರಬಲ ರಾಜಕಾರಣಿ ಪಾತ್ರಕ್ಕೆ ಬಣ್ಣ ಹಚ್ಚಿದಂತಾಗಿದೆ.

Continue Reading
Advertisement
IRCTC
ದೇಶ3 mins ago

IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

1983 World Cup
ಕ್ರೀಡೆ7 mins ago

1983 WC Win Anniversary: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ​ ಸವಿ ನೆನಪನ್ನು ವಿಂಡೀಸ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ರವಿಶಾಸ್ತ್ರಿ, ಗವಾಸ್ಕರ್, ​ಬಿನ್ನಿ

Viral Video
Latest8 mins ago

Viral Video: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

cm siddaramaiah water price hike
ಕರ್ನಾಟಕ13 mins ago

CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Neha Gowda in saree with baby bump
ಸ್ಯಾಂಡಲ್ ವುಡ್14 mins ago

Neha Gowda: ಸೀರೆಯುಟ್ಟು ಸಿಂಪಲ್‌ ಆಗಿ ಗಂಡನ ಜತೆ ಪೋಸ್‌ ಕೊಟ್ಟ ಗರ್ಭಿಣಿ ನೇಹಾ ಗೌಡ!

Viral Video
Latest15 mins ago

Viral Video : ‘ಅಲ್ಲಾಹು ಅಕ್ಬರ್’ ಎನ್ನದ ಹಿಂದೂ ಬಾಲಕನಿಗೆ ಎಂಜಲು ನೆಕ್ಕಲು ಹೇಳಿದ ಮುಸ್ಲಿಂ ಯುವಕರು

Lok Sabha Speaker
ದೇಶ17 mins ago

Lok Sabha Speaker: ಎರಡನೇ ಬಾರಿಗೆ ಲೋಕಸಭೆ ಸ್ಪೀಕರ್‌ ಆಗಿ ಓಂ ಬಿರ್ಲಾ ಆಯ್ಕೆ

Kaagada movie released on 5th July
ಕರ್ನಾಟಕ21 mins ago

Kannada New Movie: ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ “ಕಾಗದ” ಜುಲೈ 5ರಂದು ತೆರೆಗೆ

prajwal revanna case 4th
ಕ್ರೈಂ54 mins ago

Prajwal Revanna Case: ʼಪ್ರತಿ ದಿನ ಫೋನ್‌ ಮಾಡಿ ಬಟ್ಟೆ ಕಳಚಲು ಹೇಳ್ತಿದ್ದ…ʼ ಪ್ರಜ್ವಲ್‌ ವಿರುದ್ಧ ದಾಖಲಾದ 4ನೇ ದೂರಿನಲ್ಲಿ ಏನಿದೆ?

Famous Serial Actress kasthuri shankar half naked photos leaked
ಟಾಲಿವುಡ್1 hour ago

Famous Serial Actress: ಖ್ಯಾತ ಧಾರಾವಾಹಿ ನಟಿಯ ಅರೆನಗ್ನ ಫೋಟೊಗಳು ಲೀಕ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌