OTT releases:‌ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುವ ಸಿನಿಮಾ, ಶೋಗಳಿವು! Vistara News

ಬಾಲಿವುಡ್

OTT releases:‌ ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುವ ಸಿನಿಮಾ, ಶೋಗಳಿವು!

OTT releases:‌ ಈ ವಾರ ಒಟಿಟಿಯಲ್ಲಿ ಯಾವೆಲ್ಲ ಚಿತ್ರಗಳು, ಶೋಗಳು ರಿಲೀಸ್‌ ಆಗುತ್ತಿವೆ ಎನ್ನುವುದ ಮಾಹಿತಿ ಇಲ್ಲಿದೆ.

VISTARANEWS.COM


on

ott
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಒಟಿಟಿ ವೀಕ್ಷಕರಿಗೆ ಈ ವಾರ ಹಬ್ಬದ ವಾತಾವರಣ. ಯಾಕೆಂದರೆ ವಿವಿಧ ಅಭಿರುಚಿಗೆ ತಕ್ಕಂತೆ ಆ್ಯಕ್ಷನ್‌, ಡ್ರಾಮಾ, ರೊಮ್ಯಾನ್ಸ್‌, ಮಿಸ್ಟ್ರಿ ಹೀಗೆ ವೈವಿಧ್ಯಮಯ ಸಿನಿಮಾ, ಸೀರಿಸ್‌ಗಳು ಪ್ರಸಾರವಾಗುತ್ತಿವೆ (OTT releases). ಹೇಗೂ ದೀಪಾವಳಿ ಪ್ರಯುಕ್ತ ರಜೆ ಇರುವುದರಿಂದ ನೆಚ್ಚಿನ ಸಿನಿಮಾ ನೋಡುತ್ತ ಕಾಲ ಕಳೆಯಬಹುದು ಎನ್ನುವುದೇ ಹಲವರ ಪಾಲಿಗೆ ʼಡಬಲ್‌ ಧಮಾಕʼ. ಹಾಗಾದರೆ ಒಟಿಟಿಯಲ್ಲಿ ಈ ವಾರದ ರಿಲೀಸ್‌ ಯಾವುವು ಎನ್ನುವುದನ್ನು ನೋಡೋಣ:

ದಿ ಕಿಲ್ಲರ್‌ (The Killer), ನೆಟ್‌ಫ್ಲಿಕ್ಸ್‌

‘ದಿ ಕಿಲ್ಲರ್’ ಅಮೆರಿಕಾದ ಆ್ಯಕ್ಷನ್‌ ಥ್ರಿಲ್ಲರ್ ಚಿತ್ರವಾಗಿದ್ದು, ಡೇವಿಡ್ ಫಿಂಚರ್ ನಿರ್ದೇಶಿಸಿದ್ದಾರೆ. ಇದು ಅಲೆಕ್ಸಿಸ್ ʼಮ್ಯಾಟ್ಜ್ʼ ನೊಲೆಂಟ್ ಮತ್ತು ಲ್ಯೂಕ್ ಜಕಾಮನ್ ಅವರ ಫ್ರೆಂಚ್ ಗ್ರಾಫಿಕ್ ಕಾದಂಬರಿ ಸರಣಿಯನ್ನು ಆಧರಿಸಿದೆ. ಈ ಕಥೆಯು ಕೊಲೆಗಾರನ ಸುತ್ತ ಸುತ್ತುತ್ತದೆ. ಮೈಕೆಲ್ ಫಾಸ್ಬೆಂಡರ್, ಅರ್ಲಿಸ್ ಹೊವಾರ್ಡ್, ಚಾರ್ಲ್ಸ್ ಪಾರ್ನೆಲ್, ಕೆರ್ರಿ ಒ’ಮ್ಯಾಲೆ, ಸಲಾ ಬೇಕರ್, ಸೋಫಿ ಮತ್ತಿತರರು ನಟಿಸಿರುವ ಈ ಚಿತ್ರ ನವೆಂಬರ್‌ 10ರಿಂದ ಪ್ರಸಾರವಾಗಲಿದೆ.

ದೀನಾ ಹಾಶೆಮ್: ಡಾರ್ಕ್‌ ಲಿಟ್ಲ್‌ ಮಿಸ್ಪರ್ಸ್‌ (Dina Hashem: Dark Little Whispers), ಅಮೆಜಾನ್‌ ಪ್ರೈಮ್‌ ವಿಡಿಯೊ

ಈ ಶೋದಲ್ಲಿ ಸ್ಟ್ಯಾಂಡ್-ಅಪ್ ಕಾಮೆಡಿಯನ್‌ ದೀನಾ ಹಾಶೆಮ್ ಸಾವಿನ ಬೆದರಿಕೆಗಳು, ಅಸ್ತಿತ್ವದ ಸಂದಿಗ್ಧತೆಗಳಿಂದ ಹಿಡಿದು ಸಂಬಂಧದ ಸಮಸ್ಯೆಗಳವರೆಗೆ ವಿವಿಧ ವಿಷಯಗಳ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಅರಬ್-ಅಮೆರಿಕನ್ ಆಗಿರುವ ತನ್ನ ಬಗ್ಗೆ ವಿವರಗಳನ್ನು ನೀಡುತ್ತಾರೆ. ಇದು ಕೂಡ ನವೆಂಬರ್‌ 10ರಂದು ಸ್ಟ್ರೀಮಿಂಗ್‌ ಆಗಲಿದೆ.

007: ರೋಡ್‌ ಎ ಮಿಲಿಯನ್‌ (007: Road to a Million), ಅಮೆಜಾನ್‌ ಪ್ರೈಮ್‌ ವಿಡಿಯೊ

‘007: ರೋಡ್ ಟು ಎ ಮಿಲಿಯನ್’ ಶೋ ಒಂಬತ್ತು ಜೋಡಿ ಜೀವನವನ್ನು ಬದಲಾಯಿಸುವ ಮಿಲಿಯನ್ ಮೊತ್ತದ ಬಹುಮಾನದ ಅನ್ವೇಷಣೆಯಲ್ಲಿ ತೊಡಗುವ ರೀತಿಯನ್ನು ತಿಳಿಸುತ್ತದೆ. ಬಾಂಡ್ ಸವಾಲುಗಳಿಂದ ಪ್ರೇರಿತರಾಗಿ ಅವರು ಸಾಹಸವನ್ನು ಪ್ರದರ್ಶಿಸುವುದನ್ನು ಚಿತ್ರೀಕರಿಸಲಾಗಿದೆ. ನವೆಂಬರ್‌ 10ರಿಂದ ಈ ಶೋವನ್ನು ವೀಕ್ಷಿಸಬಹುದು.

ಎಟ್‌ ದಿ ಮೂವ್‌ಮೆಂಟ್‌ (At the Moment), ನೆಟ್‌ಫ್ಲಿಕ್ಸ್‌

ನವೆಂಬರ್‌ 10ರಂದು ಪ್ರಸಾರವಾಗುವ ಇದೊಂದು ಡ್ರಾಮಾಗಳ ಸರಣಿ. ಕೊರೊನಾ ಸಾಂಕ್ರಾಮಿಕ ರೋಗ ಹರಡಿದ್ದ ಕಾಲಘಟ್ಟದ ಕಥೆಯನ್ನು ಇದು ಹೇಳುತ್ತದೆ. 10 ವಿಶಿಷ್ಟ ಪ್ರೇಮಕಥೆ ಇಲ್ಲಿದ್ದು, ಜೋಡಿಯ ಉತ್ಸಾಹ ಮತ್ತು ನೋವಿನ ಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.

ಫೇಮ್‌ ಆಫ್ಟರ್‌ ಫೇಮ್‌ (Fame After Fame), ನೆಟ್‌ಫ್ಲಿಕ್ಸ್‌

ಇದು ರಿಯಾಲಿಟಿ ಶೋ ಸರಣಿಯಾಗಿದ್ದು, ಸ್ಪ್ಯಾನಿಷ್ ಟಿವಿಯಲ್ಲಿ 14 ಯಶಸ್ವಿ ವರ್ಷಗಳನ್ನು ಪೂರೈಸಿದ ಬಳಿಕ ಅಮೆರಿಕದಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಹುಡುಕುವವರ ಪಾಡನ್ನು ವಿವರಿಸುತ್ತದೆ. ಇದು ಕೂಡ ನವೆಂಬರ್‌ 10ರಿಂದ ವೀಕ್ಷಣೆಗೆ ಲಭ್ಯ.

ಅಪೂರ್ವ (Apurva), ಡಿಸ್ನಿ + ಹಾಟ್‌ಸ್ಟಾರ್‌

ಟ್ರೇಲರ್‌ನಿಂದಲೇ ಕುತೂಹಲ ಕೆರಳಿಸಿರುವ ಹಿಂದಿ ಚಿತ್ರ ʼಅಪೂರ್ವʼ ನವೆಂಬರ್‌ 15ರಂದು ರಿಲೀಸ್‌ ಆಗಲಿದೆ. ಥ್ರಿಲ್ಲರ್ ಚಿತ್ರವಾಗಿರುವ ಇದನ್ನು ನಿಖಿಲ್‌ ನಾಗೇಶ್‌ ಭಟ್‌ ನಿರ್ದೇಶಿಸಿದ್ದಾರೆ. ಅಭಿಷೇಕ್‌ ಬ್ಯಾನರ್ಜಿ, ತಾರಾ ಸುತಾರಿಯಾ, ಧೈರ್ಯ ಕರ್ವಾ ಮತ್ತು ರಾಜ್‌ಪಾಲ್‌ ಯಾದವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿದ್ದಾರೆ. ಚಂಬಲ್‌ ಕಣಿವೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಿತ್ರ ಬದುಕುಳಿಯಲು ಮತ್ತು ಬದುಕಲು ಏನು ಬೇಕಾದರೂ ಮಾಡುವ ಸಾಮಾನ್ಯ ಮಹಿಳೆಯ ಜೀವನದ ಸುತ್ತ ಸುತ್ತುತ್ತದೆ.

ದಿ ಗ್ರ್ಯಾಂಡ್‌ ಟೂರ್‌ ಸೀಸನ್‌ 5 (The Grand Tour Season 5), ಅಮೆಜಾನ್‌ ಪ್ರೈಮ್‌ ವಿಡಿಯೊ

ಫಿಲ್ ಚರ್ಚ್ವರ್ಡ್ ನಿರ್ದೇಶಿಸಿದ ಕ್ರೀಡಾ ಸಾಕ್ಷ್ಯ ಚಿತ್ರ ಇದು. ಆತಿಥೇಯರಾದ ಜೆರೆಮಿ ಕ್ಲಾರ್ಕ್ಸನ್, ರಿಚರ್ಡ್ ಹ್ಯಾಮಂಡ್ ಮತ್ತು ಜೇಮ್ಸ್ ಮೇ ಮಧ್ಯ ಯುರೋಪಿಗೆ ರಸ್ತೆ ಪ್ರವಾಸವನ್ನು ಪ್ರಾರಂಭಿಸುತ್ತಾರೆ. ಈ ಪ್ರಯಾಣವನ್ನು, ಅಪಾಯಕಾರಿ ಸಾಹಸವನ್ನು ಈ ಸೀಸನ್‌ ಪ್ರದರ್ಶಿಸುತ್ತದೆ. ನವೆಂಬರ್‌ 16ರಿಂದ ‘ದಿ ಗ್ರ್ಯಾಂಡ್‌ ಟೂರ್‌ ಸೀಸನ್‌ 5’ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಬಹುದು.

ಇದನ್ನೂ ಓದಿ: Aamir Khan: ʻಸಿತಾರೆ ಜಮೀನ್ ಪರ್‌ʼನಲ್ಲಿ ಆಮೀರ್ -ದರ್ಶೀಲ್ ಸಫಾರಿ ಮತ್ತೆ ಒಂದಾಗ್ತಾರಾ?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Animal Cast Fees: ‘ಅನಿಮಲ್’ ಚಿತ್ರಕ್ಕೆ ರಣಬೀರ್ ಕಪೂರ್ ಪಡೆದ ಸಂಭಾವನೆ ಎಷ್ಟು?

Animal Cast Fees: ಇದರ ಜತೆಗೆ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಈ ಸಿನಿಮಾಗಾಗಿ ಎಷ್ಟೆಲ್ಲ ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.

VISTARANEWS.COM


on

Animal Cast Fees Ranbir Kapoor were paid
Koo

ಬೆಂಗಳೂರು: ರಣಬೀರ್ ಕಪೂರ್ (Animal Cast Fees) ಅಭಿನಯದ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1ರಂದು ಥಿಯೇಟರ್‌ಗೆ ಲಗ್ಗೆ ಇಟ್ಟು ಮೂರು ದಿನಗಳಲ್ಲಿ 200 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ ಸಿನಿಮಾ. ಇದರ ಜತೆಗೆ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಈ ಸಿನಿಮಾಗಾಗಿ ಎಷ್ಟೆಲ್ಲ ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.

ಈ ಮುಂಚೆ ರಣಬೀರ್ ಕಪೂರ್ ಈ ಸಿನಿಮಾಗಾಗಿ 30 – 35 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ಪ್ರತ್ಯೇಕವಾಗಿ ವರದಿ ಮಾಡಿತ್ತು. ಪ್ರತಿ ಚಿತ್ರಕ್ಕೆ 70 ಕೋಟಿ ರೂ. ಸಂಭಾವನೆಯನ್ನು ರಣಬೀರ್ ಕಪೂರ್ ಪಡೆಯುತ್ತಿದ್ದಾರೆ ಎಂತಲೂ ವರದಿಯಿದೆ. ಆದರೆ ಅನಿಮಲ್‌ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಕಪೂರ್ ತಮ್ಮ ಸಂಭಾವನೆಯನ್ನು ಶೇ. 50ರಷ್ಟು ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಬಿ ಡಿಯೋಲ್ 4-5 ಕೋಟಿ ರೂ., ರಶ್ಮಿಕಾ ಮಂದಣ್ಣ ಅವರಂತಹ ಇತರ ಪಾತ್ರವರ್ಗದವರು 4 ರೂ. ಕೋಟಿ, ಮತ್ತು ಅನಿಲ್ ಕಪೂರ್ 2 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರ (Animal Box Office) ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ, ಸಿನಿಮಾ ಭಾರತದಲ್ಲಿ 200 ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಸಿನಿಮಾ ಕೂಡ ಅಂದೇ ರಿಲೀಸ್‌ ಆಗಿದ್ದು, ಅನಿಮಲ್‌ ಸಿನಿಮಾ ಜಯಭೇರಿ ಬಾರಿಸಿದೆ.

ಇದನ್ನೂ ಓದಿ: Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್‌ ಸೇರಿಯೇ ಬಿಟ್ಟಿತು; ‌ʻಅನಿಮಲ್‌ʼ ಕಮಾಲ್!

ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ಮೂರನೇ ದಿನಕ್ಕೆ ಭಾರತದಲ್ಲಿ 72.50 ಕೋಟಿ ರೂ. ಗಳಿಸಿದೆ. ಡಿಸೆಂಬರ್ 3 ರಂದು ‘ಅನಿಮಲ್’ ಶೇ. 79.0 ರಷ್ಟು ಹಿಂದಿ ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿಯಾಗಿದೆ. ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿತ್ತು.

ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿತ್ತು. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿತ್ತು. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

Continue Reading

ಬಾಲಿವುಡ್

Animal Box Office: 200 ಕೋಟಿ ರೂ. ಗಡಿ ದಾಟಿದ ʻಅನಿಮಲ್‌ʼ!

Animal Box Office : ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಸಿನಿಮಾ ಕೂಡ ಅಂದೇ ರಿಲೀಸ್‌ ಆಗಿದ್ದು, ಅನಿಮಲ್‌ ಸಿನಿಮಾ ಜಯಭೇರಿ ಬಾರಿಸಿದೆ. . ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿತ್ತು.

VISTARANEWS.COM


on

Ranbir Kapoor film crosses Rs 200 crore
Koo

ಬೆಂಗಳೂರು: ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರ (Animal Box Office) ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ, ಸಿನಿಮಾ ಭಾರತದಲ್ಲಿ 200 ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಸಿನಿಮಾ ಕೂಡ ಅಂದೇ ರಿಲೀಸ್‌ ಆಗಿದ್ದು, ಅನಿಮಲ್‌ ಸಿನಿಮಾ ಜಯಭೇರಿ ಬಾರಿಸಿದೆ.

ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ಮೂರನೇ ದಿನಕ್ಕೆ ಭಾರತದಲ್ಲಿ 72.50 ಕೋಟಿ ರೂ. ಗಳಿಸಿದೆ. ಡಿಸೆಂಬರ್ 3 ರಂದು ‘ಅನಿಮಲ್’ ಶೇಕಡಾ 79.0 ರಷ್ಟು ಹಿಂದಿ ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿಯಾಗಿದೆ. ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿತ್ತು.

ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿತ್ತು. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿತ್ತು. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

ಇದನ್ನೂ ಓದಿ: Animal Box Office: ಬಿಡುಗಡೆಯಾದ ಎರಡೇ ದಿನಕ್ಕೆ 100 ಕೋಟಿ ರೂ. ಕ್ಲಬ್‌ ಸೇರಿಯೇ ಬಿಟ್ಟಿತು; ‌ʻಅನಿಮಲ್‌ʼ ಕಮಾಲ್!

ಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

ನಟ ಬಾಬಿ ಡಿಯೋಲ್ (Bobby Deol) ಅವರು ʻಅನಿಮಲ್‌ʼ ಸಿನಿಮಾ ನಟನೆಗಾಗಿ ಭಾರಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಬಾಬಿ ಡಿಯೋಲ್ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ. ಇದೀಗ ಬಾಬಿ ಡಿಯೋಲ್ ಅವರಿಗೆ ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ ನಟ ಭಾವುಕರಾದರು. ನಟ ಕಣ್ಣೀರಿಟ್ಟ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಮುಂಬೈನಲ್ಲಿ ನಟ ಬಾಬಿ ಡಿಯೋಲ್ ಕಾಣಿಸಿಕೊಂಡಾಗ ಮೆಚ್ಚುಗೆಯ ವಿಮರ್ಶೆಗಳಿಗೆ ಪ್ರತಿಕ್ರಿಯಿಸಿದ್ದರು. ಬೂದು ಬಣ್ಣದ ಹೂಡಿ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದರು. ಬಾಬಿ ಡಿಯೋಲ್ ಅವರು ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ “ತುಂಬಾ ಧನ್ಯವಾದಗಳು. ದೇವರು ನಿಜವಾಗಿಯೂ ದಯೆ ತೋರಿದ್ದಾನೆ. ನಮ್ಮ ಚಿತ್ರ ಪಡೆಯುತ್ತಿರುವ ಪ್ರೀತಿ ಕನಸಿನಂತೆ ಭಾಸವಾಗುತ್ತಿದೆ” ಎಂದು ಭಾವುಕರಾಗಿದ್ದರು. ನಟನ ಸಿಬ್ಬಂದಿ ಮತ್ತು ಚಿತ್ರ ತಂಡವು ನಟನನ್ನು ಸಾಂತ್ವನಗೊಳಿಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು.

Continue Reading

ಕ್ರಿಕೆಟ್

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Sachin Tendulkar: ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

VISTARANEWS.COM


on

Sachin Tendulkar says he is super impressed by Vicky Kaushal
Koo

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಡಿಸೆಂಬರ್‌ 2ರ ರಾತ್ರಿ ನಟ ವಿಕ್ಕಿ ಕೌಶಲ್ ಅವರ ʻಸ್ಯಾಮ್ ಬಹದ್ದೂರ್‌ʼ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಕೂಡ ಜತೆಗಿದ್ದರು. ಸ್ಕ್ರೀನಿಂಗ್‌ ಆದ ಬಳಿಕ ಸಚಿನ್ ತೆಂಡೂಲ್ಕರ್ ಜತೆ ವಿಕ್ಕಿ ಪೋಸ್ ನೀಡಿದ್ದಾರೆ.

ಸಚಿನ್ ಚಿತ್ರವನ್ನು ಕಂಡು “ಇದು ತುಂಬಾ ಒಳ್ಳೆಯ ಸಿನಿಮಾ. ವಿಕ್ಕಿ ಅವರ ನಟನೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಫೀಲ್ಡ್ ಮಾರ್ಷಲ್ ಸ್ಯಾಮ್ ನಿಜವಾಗಿಯೂ ಇದ್ದಂತೆ ಭಾಸವಾಯಿತು. ನಮ್ಮ ದೇಶದ ಇತಿಹಾಸ ತಿಳಿಯಲು ಎಲ್ಲಾ ಜನರೇಶನ್‌ ಅವರಿಗೆ ಪ್ರಮುಖ ಚಿತ್ರವಾಗಿದೆʼʼ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು.

ವಿಕ್ಕಿ ಅವರು ಸಚಿನ್‌ ತೆಂಡೂಲ್ಕರ್ ಅವರೊಂದಿಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಬಾಲ್ಯದ ಹೀರೊ ಇಂದು ನನ್ನ ಸಿನಿಮಾವನ್ನು ನೋಡಿದ್ದಾರೆ. ಧನ್ಯವಾದಗಳು ಸಚಿನ್‌ ಸರ್. ನಿಮ್ಮ ಮಾತುಗಳಿಗೆʼʼಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಬಹದ್ದೂರ್‌ ಭಾರತದಲ್ಲಿ ಮೊದಲ ದಿನದಂದು 5.50 ಕೋಟಿ ರೂ. ಗಳನ್ನು ಗಳಿಸಿತು. ಭಾರತದಲ್ಲಿ ಶನಿವಾರ 9.25 ಕೋಟಿ ರೂ. ನಿವ್ವಳ ಗಳಿಸಿದೆ ಎಂದೂ ವರದಿಯಾಗಿದೆ. ಡಿಸೆಂಬರ್ 2ರಂದು ಚಿತ್ರದ ಒಟ್ಟು ಕಲೆಕ್ಷನ್‌ 15.5 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ.

ಮೇಘನಾ ಗುಲ್ಜಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಂಡೂಲ್ಕರ್ ಜತೆಗೆ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಅಜಿತ್ ಅಗರ್ಕರ್ ಕೂಡ ಪ್ರದರ್ಶನದಲ್ಲಿ ಹಾಜರಾಗಿದ್ದರು.

ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ, ರಣಬೀರ್ ಕಪೂರ್ ಅವರ ‘ಅನಿಮಲ್‌ ಸಿನಿಮಾ ಜತೆ ಕ್ಲಾಶ್‌ ಆಗಿದೆ. ‘ವಿಕ್ಕಿ ಹೊರತುಪಡಿಸಿ, ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: Sachin Tendulkar : ಲಂಕಾ ವಿರುದ್ಧ ಪಂದ್ಯದ ಬೆಸ್ಟ್​ ಫೀಲ್ಡರ್ ಯಾರೆಂದು ಘೋಷಿಸಿದ ಸಚಿನ್​ ತೆಂಡೂಲ್ಕರ್​

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Continue Reading

ಬಾಲಿವುಡ್

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

Bobby Deol: ಮುಂಬೈನಲ್ಲಿ ನಟ ಬಾಬಿ ಡಿಯೋಲ್ ಕಾಣಿಸಿಕೊಂಡಾಗ ಮೆಚ್ಚುಗೆಯ ವಿಮರ್ಶೆಗಳಿಗೆ ಪ್ರತಿಕ್ರಿಯಿಸಿದರು. ಬೂದು ಬಣ್ಣದ ಹೂಡಿಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ನಟ ಬಾಬಿ ಡಿಯೋಲ್ ಕಣ್ಣೀರಿಟ್ಟ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Bobby Deol cries after paparazzi praise him as Animal
Koo

ಬೆಂಗಳೂರು: ನಟ ಬಾಬಿ ಡಿಯೋಲ್ (Bobby Deol) ಅವರು ʻಅನಿಮಲ್‌ʼ ಸಿನಿಮಾ ನಟನೆಗಾಗಿ ಭಾರಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಬಾಬಿ ಡಿಯೋಲ್ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ಇದ್ದಾರೆ. ಇದೀಗ ಬಾಬಿ ಡಿಯೋಲ್ ಅವರಿಗೆ ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ ನಟ ಭಾವುಕರಾದರು. ನಟ ಕಣ್ಣೀರಿಟ್ಟ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮುಂಬೈನಲ್ಲಿ ನಟ ಬಾಬಿ ಡಿಯೋಲ್ ಕಾಣಿಸಿಕೊಂಡಾಗ ಮೆಚ್ಚುಗೆಯ ವಿಮರ್ಶೆಗಳಿಗೆ ಪ್ರತಿಕ್ರಿಯಿಸಿದರು. ಬೂದು ಬಣ್ಣದ ಹೂಡಿ ಉಡುಗೆಯಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್ ಅವರು ಪೋಟೊಗ್ರಾಫರ್‌ಗಳು (ಪಾಪರಾಜಿ) ಅಭಿನಂದನೆ ಸಲ್ಲಿಸುತ್ತಿದ್ದಂತೆ “ತುಂಬಾ ಧನ್ಯವಾದಗಳು. ದೇವರು ನಿಜವಾಗಿಯೂ ದಯೆ ತೋರಿದ್ದಾನೆ. ನಮ್ಮ ಚಿತ್ರ ಪಡೆಯುತ್ತಿರುವ ಪ್ರೀತಿ ಕನಸಿನಂತೆ ಭಾಸವಾಗುತ್ತಿದೆ” ಎಂದು ಭಾವುಕರಾದರು. ನಟನ ಸಿಬ್ಬಂದಿ ಮತ್ತು ಚಿತ್ರ ತಂಡವು ನಟನನ್ನು ಸಾಂತ್ವನಗೊಳಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಈ ವಿಡಿಯೊಗೆ ನಟನ ಅಭಿಮಾನಿಗಳು “ಈ ವರ್ಷ ಡಿಯೋಲ್ ವರ್ಷವಾಗಿದೆ. ಧರ್ಮೇಂದ್ರ ಅವರ ಸಿನಿಮಾ ರಿಲೀಸ್, ಸನ್ನಿಯ ಗದರ್ 2 ಸೂಪರ್ ಹಿಟ್, ಕರಣ್ ಮದುವೆ, ಸನ್ನಿ ಅವರ ಕಿರಿಯ ಮಗನ ಮೊದಲ ಸಿನಿಮಾ ರಿಲೀಸ್… ಬಾಬಿ ಅನಿಮಲ್ ಸಿನಿಮಾ. ಇದರರ್ಥ ಇಡೀ ಕುಟುಂಬ ಸಾಧನೆಗಳನ್ನು ಮಾಡಿ ಸಂತೋಷವಾಗಿದೆ. ಇದು ಯಶಸ್ಸಿನ ಕಣ್ಣೀರು. ನಟ ಅದಕ್ಕೆ ಅರ್ಹರುʼʼ ಎಂದು ಕಮೆಂಟ್‌ ಮಾಡಿದ್ದಾರೆ.

ರಣಬೀರ್ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಪಠಾಣ್’ ಮತ್ತು ‘ಗದರ್ 2’ ದಾಖಲೆಯನ್ನು ಹಿಂದಿಕ್ಕಿದೆ ಈ ಸಿನಿಮಾ. ‘ಅನಿಮಲ್‌’ ಬಿಡುಗಡೆಯಾದ ಎರಡು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಚಿತ್ರವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: Ranbir Kapoor: ಬುರ್ಜ್ ಖಲೀಫಾದಲ್ಲಿ ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಪ್ರಿವ್ಯೂ!

ವೈರಲ್‌ ವಿಡಿಯೊ

ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಜತೆಗೆ ಅನಿಮಲ್‌ ಬಿಡುಗಡೆಯಾಗಿದ್ರೂ ಕೂಡ ಜಯಭೇರಿ ಬಾರಿಸಿದೆ. ಈಗ, ಆರಂಭಿಕ ಅಂದಾಜಿನ ಪ್ರಕಾರ, ಎರಡನೇ ದಿನದಲ್ಲಿ ಚಿತ್ರ ಭಾರತದಲ್ಲಿ 63.80 ಕೋಟಿ ರೂ. ಗಳಿಸಿದೆ. ಹೀಗಾಗಿ ಒಟ್ಟು 129.80 ಕೋಟಿ ರೂ. ಎಂದು ವರದಿಯಾಗಿದೆ. ಇದಕ್ಕೂ ಮೊದಲು, ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ವಾರಾಂತ್ಯದಲ್ಲಿ, ಭಾರತದಲ್ಲಿ 150 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಮೂಲಕ ಚಿತ್ರದ ಕಲೆಕ್ಷನ್‌ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

Continue Reading
Advertisement
Lakhbir Singh Rode
ದೇಶ10 mins ago

Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

Head injury represetational
ಕರ್ನಾಟಕ21 mins ago

Labourer death: ವಿಜಯಪುರದ ಬಳಿಕ ನಂಜನಗೂಡಿನಲ್ಲೂ ದುರಂತ; ಕಾರ್ಮಿಕ ಸಾವು

lokayukta raid in channakeshava
ಕರ್ನಾಟಕ39 mins ago

Lokayukta Raid: ರಾಜ್ಯದೆಲ್ಲೆಡೆ ಲೋಕಾಯುಕ್ತ ದಾಳಿ, ಬೆಸ್ಕಾಂ ಇಇ ಮನೆಯಲ್ಲಿ ಕೋಟಿ ಕೋಟಿ ಪತ್ತೆ

David Warner
ಕ್ರಿಕೆಟ್48 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ2 hours ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ2 hours ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್3 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ5 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌