OTT Release This Week | ಚಿತ್ರಮಂದಿರಗಳಲ್ಲಿ ಪ್ರಬಲ ಪೈಪೋಟಿ ನೀಡಿದ ಸಿನಿಮಾಗಳು ಈ ವಾರ ಒಟಿಟಿಯಲ್ಲಿ! - Vistara News

ಒಟಿಟಿ

OTT Release This Week | ಚಿತ್ರಮಂದಿರಗಳಲ್ಲಿ ಪ್ರಬಲ ಪೈಪೋಟಿ ನೀಡಿದ ಸಿನಿಮಾಗಳು ಈ ವಾರ ಒಟಿಟಿಯಲ್ಲಿ!

ಚಿತ್ರಮಂದಿರಗಳಲ್ಲಿ ಪ್ರಬಲ ಪೈಪೋಟಿ (Ott Release This Week) ನೀಡಿದ ಸಿನಿಮಾಗಳು ಈ ವಾರ ಒಟಿಟಿಗೆ ಲಗ್ಗೆ ಇಟ್ಟಿವೆ. ಇಲ್ಲಿವೆ ಸಿನಿಮಾಗಳ ಪಟ್ಟಿ!

VISTARANEWS.COM


on

Ott Release This Week
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ವಾರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ (OTT Release This Week ) ಕಂಡ ಹಲವು ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಸಿನಿಮಾಗಳ ಜತೆ ವೆಬ್‌ ಸಿರೀಸ್‌ಗಳು ಬಿಡುಗಡೆಯಾಗುತ್ತಿವೆ. ಮೆಗಾಸ್ಟಾರ್‌ ಚಿರಂಜೀವಿ ನಟನೆಯ ʻಗಾಡ್‌ ಫಾದರ್‌ʼ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್‌ 18ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ.

ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಮೆಗಾಸ್ಟಾರ್ ನಿಭಾಯಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಕೂಡ ನಟಿಸಿದ್ದಾರೆ. ಈ ಚಿತ್ರ ಮೋಹನ್‌ ರಾಜಾ ನಿರ್ದೇಶನದಲ್ಲಿ ಮೂಡಿ ಬಂದಿದೆ. ನೀರವ್‌ ಶಾ ಛಾಯಾಗ್ರಹಣವಿದ್ದು, ಥಮನ್‌ ಸಂಗೀತ ನಿರ್ದೇಶನವಿದೆ. ತೆಲುಗಿನಲ್ಲಿ ಮತ್ತೊಂದು ಸಿನಿಮಾ ʻಐರಾವತಂʼ ಸಿನಿಮಾ ಡಿಸ್ನಿ ಹಾಟ್‌ ಸ್ಟಾರ್‌ನಲ್ಲಿ ನವೆಂಬರ್‌ 17ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ | Kannada Movie | ಮಾನ್ಸೂನ್‌ ರಾಗ, ಗುರು ಶಿಷ್ಯರು, ತೋತಾಪುರಿ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್

Ott Release This Week
Ott Release This Week

ಕಾರ್ತಿ ಅಭಿನಯದ ಸರ್ದಾರ್‌!
ಕಾಲಿವುಡ್‌ನಲ್ಲಿ ಕಾರ್ತಿ ಅಭಿನಯದ ʻಸರ್ದಾರ್‌ʼ ಸಿನಿಮಾ ಒಟಿಟಿಯಲ್ಲಿ ಬರುತ್ತಿದೆ. ಆಹಾ ಒಟಿಟಿಯಲ್ಲಿ ನವೆಂಬರ್‌ 18ರಂದು ʻಸರ್ದಾರ್‌ʼ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಬಂದಿದೆ. ಕಾರ್ತಿ ಅಭಿನಯದ ʻಸರ್ದಾರ್‌ʼ ಚಿತ್ರದಲ್ಲಿ ನಟ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೈ ಏಜೆಂಟ್‌ ಹಾಗೂ ಪೊಲೀಸ್‌ ಪಾತ್ರದಲ್ಲಿ ಕಾರ್ತಿ ನಟನೆ ಮಾಡಿದ್ದು, ಪಿ.ಎಸ್‌ ಮಿತ್ರನ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದಲ್ಲಿ ವಾಟರ್‌ ಮಾಫಿಯಾ, ಹೀಗೆ ಹಲವು ಸಂದೇಶಗಳನ್ನು ಒಳಗೊಂಡಿದೆ.

Ott Release This Week
Ott Release This Week

ಮಹಿಳಾ ಪ್ರಧಾನ ಸಿನಿಮಾ!
ʻಅನಲ್‌ ಮೇಲೆ ಪಣಿ ತಳಿʼಎನ್ನುವ ಮತ್ತೊಂದು ತಮಿಳು ಸಿನಿಮಾ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್‌ ಆಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ಸೋನಿ ಲಿವ್‌ನಲ್ಲಿ ನವೆಂಬರ್‌ 17ರಂದು ಸ್ಟ್ರೀಮ್‌ ಆಗಿದೆ. ಹಿಂದಿಯಲ್ಲಿ ʻಧಾರಾವಿ ಬ್ಯಾಂಕ್‌ʼ ವೆಬ್‌ ಸಿರೀಸ್‌ ಮ್ಯಾಕ್ಸ್‌ ಪ್ಲೇಯರ್‌ನಲ್ಲಿ ಈಗಾಗಲೇ ಬಿಡುಗಡೆಗೊಂಡಿದೆ. ಸುನಿಲ್‌ ಶೆಟ್ಟಿ ಡಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻಸೀತಾ ರಾಮಂ ́ ಚಿತ್ರ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್‌ ಪ್ರೈಂನಲ್ಲಿ ಈ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಡಿಸ್ನಿ ಹಾಟ್‌ ಸ್ಟಾರ್‌ನಲ್ಲಿ ಬಿಡುಗಡೆ ಕಂಡಿದೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನಟನೆಯ 2ನೇ ಹಿಂದಿ ಚಿತ್ರ ನೇರವಾಗಿ ಒಟಿಟಿಗೆ? ನಟಿ ಟ್ರೋಲ್‌ ಆಗಿದ್ಯಾಕೆ?



ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

OTT Release: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹಾರರ್ ಕಾಮಿಡಿ ಚಿತ್ರ ʼಮುಂಜ್ಯʼ

ಆದಿತ್ಯ ಸರ್ಪೋತದಾರ್ ನಿರ್ದೇಶನದ ಶಾರ್ವರಿ, ಮೋನಾ ಸಿಂಗ್, ಅಭಯ್ ವರ್ಮಾ ಮತ್ತು ಸತ್ಯರಾಜ್ ನಟಿಸಿರುವ ಹಾರರ್- ಕಾಮಿಡಿ ಚಿತ್ರ ಮುಂಜ್ಯ ಈಗ ಒಟಿಟಿಯಲ್ಲಿ ತೆರೆ ಕಂಡಿದೆ. ಜೂನ್ ನಲ್ಲಿ ಥಿಯೇಟರ್ ಗೆ ಲಗ್ಗೆ ಇಟ್ಟು ಯಶಸ್ವಿ ಪ್ರದರ್ಶನ ಕಂಡ ಒಂದು ತಿಂಗಳ ಬಳಿಕ ಈ ಚಿತ್ರ ಇದೀಗ ಒಟಿಟಿಗೆ (OTT Release) ಬಂದಿದೆ. ಇದನ್ನು ಎಲ್ಲಿ, ಯಾವಾಗ ವೀಕ್ಷಿಸಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

OTT Release
Koo

ಹಾರರ್ ಕಾಮಿಡಿ ಚಿತ್ರ (horror comedy film) ʼಮುಂಜ್ಯʼ ಈಗ ಒಟಿಟಿಗೆ (OTT Release) ಲಗ್ಗೆ ಇಟ್ಟಿದೆ. ಆದಿತ್ಯ ಸರ್ಪೋತದಾರ್ (Aditya Sarpotadar) ನಿರ್ದೇಶನದ ಈ ಚಿತ್ರದಲ್ಲಿ ಶಾರ್ವರಿ, ಮೋನಾ ಸಿಂಗ್, ಅಭಯ್ ವರ್ಮಾ ಮತ್ತು ಸತ್ಯರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ನಲ್ಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡ ಒಂದು ತಿಂಗಳ ಬಳಿಕ ಈ ಚಿತ್ರ ಇದೀಗ ಒಟಿಟಿಗೆ ಬಂದಿದೆ.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ʼಮುಂಜ್ಯʼ ಚಿತ್ರ ಬಿಡುಗಡೆಯ ಸುದ್ದಿಯನ್ನು ಒಟಿಟಿ ಹಂಚಿಕೊಂಡಿದೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶಾರ್ವರಿ ಮತ್ತು ಅಭಯ್ ವರ್ಮಾ ಅವರ ಮೋಷನ್ ಪೋಸ್ಟರ್ ಕಾಣಿಸಿಕೊಂಡಿದೆ. ಶಾರ್ವರಿ ಚಿತ್ರದಲ್ಲಿ ಬೆಲ್ಲ/ಮುನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


“ಆಪ್ನೆ ಮುಂಜ್ಯ ಕೋ ಯಾದ್ ಕಿಯಾ, ಔರ್ ವೋ ಅಪ್ನಿ ಮುನ್ನಿ ಕೋ ಧೂಂಡ್ನೆ ದೌಡಾ ಚಲಾ ಆ ಗಯಾ… ಸಾರಿ ಮುನ್ನಿಗಳು ಪ್ಲೀಸ್ ಬಿ ವೇರ್ (ನನ್ನ ಮುಂಜ್ಯನನ್ನು ನೆನಪಿಸಿಕೊಂಡಾಗ ಅವನು ತನ್ನ ಮುನ್ನಿಯನ್ನು ಹುಡುಕಿಕೊಂಡು ಓಡ್ಕೊಂಡು ಬಂದ.. ಎಲ್ಲ ಮುನ್ನಿಗಳು ದಯವಿಟ್ಟು ಜಾಗೃತರಾಗಿರಿ) ಎನ್ನುವ ಶೀರ್ಷಿಕೆಯೊಂದಿಗೆ ಪೋಸ್ಟರ್ ಹಂಚಿಕೆಯಾಗಿದೆ.


ʼಮುಂಜ್ಯʼ ಚಿತ್ರ ನಾಮಸೂಚಕ ಪೌರಾಣಿಕ ಪ್ರಾಣಿಯ ಕಥೆಯನ್ನು ಆಧರಿಸಿದೆ. ಜೀವನದಲ್ಲಿ ʼಬಿಟ್ಟುʼ ಹೇಗೆ ವಿನಾಶವನ್ನು ಉಂಟುಮಾಡುತ್ತಾನೆ ಎನ್ನುವುದು ಕಥೆಯಾಗಿದೆ. ಇದನ್ನು ʼದಿ ಫ್ಯಾಮಿಲಿ ಮ್ಯಾನ್ʼ ಖ್ಯಾತಿಯ ಅಭಯ್ ವರ್ಮಾ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮೋನಾ ಸಿಂಗ್ ಪಮ್ಮಿ ಪಾತ್ರವನ್ನು ನಿರ್ವಹಿಸಿದ್ದು, ತಾಯಿ ʼಬಿಟ್ಟುʼವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ಕಾಣಬಹುದು.

ಇದನ್ನೂ ಓದಿ: Samantha Ruth Prabhu: ಪ್ರೀತಿ ಒಂದು ತ್ಯಾಗ! ಮಾರ್ಮಿಕ ಸಂದೇಶ ಪೋಸ್ಟ್‌ ಮಾಡಿದ ಸಮಂತಾ ರುತ್ ಪ್ರಭು ಪೋಸ್ಟ್

ʼಮುಂಜ್ಯʼ ಚಿತ್ರಕಥೆಯನ್ನು ಯೋಗೀಶ್ ಚಂಡೇಕರ್ ಮತ್ತು ನಿರೇನ್ ಭಟ್ ಬರೆದಿದ್ದು, ಸಚಿನ್ ಸಾಂಘ್ವಿ ಮತ್ತು ಜಿಗರ್ ಸಾರಯ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜೂನ್ 7ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ʼಮುಂಜ್ಯʼ ಚಿತ್ರ Sacnilk.comನ ಇತ್ತೀಚಿನ ವರದಿಯ ಪ್ರಕಾರ, ಇದು ಭಾರತದಲ್ಲಿ 120 ಕೋಟಿ ರೂ. ಆದಾಯ ಗಳಿಸಿತ್ತು.
ʼಮುಂಜ್ಯʼ ಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ ಇದು ಪ್ರೀತಿ, ಗೀಳು, ಸ್ವಾಧೀನ, ಮಾಟಮಂತ್ರ ಮತ್ತು ಭಯಾನಕ ಕಥೆಯ ಜೊತೆಗೆ ಹಾಸ್ಯವನ್ನು ಬೆರೆಸಲಾಗಿದೆ.

Continue Reading

ಸಿನಿಮಾ

Kalki 2898AD: ಎರಡು ಪ್ರಮುಖ ಒಟಿಟಿಗಳಲ್ಲಿ ಹಲವು ಭಾಷೆಗಳಲ್ಲಿ ಲಗ್ಗೆ ಇಟ್ಟ ಕಲ್ಕಿ 2898 ಎಡಿ!

ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಅಭಿನಯದ ಬಹುಜನರ ಮೆಚ್ಚುಗೆ ಗಳಿಸಿದ ಚಿತ್ರ ಕಲ್ಕಿ 2898 ಎಡಿ (Kalki 2898AD) ವಿಭಿನ್ನ ಭಾಷೆಗಳಲ್ಲಿ ಎರಡು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಯ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಎಲ್ಲಿ ನೋಡಬಹುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Kalki 2898 AD
Koo

ಕಲ್ಕಿ 2898 ಎಡಿ (Kalki 2898AD) ಈ ವರ್ಷದ ಅತೀ ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ಒಂದಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡದೇ ಇದ್ದರೂ ಐದು ಭಾಷೆಗಳಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಂದಾಗ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಅಮಿತಾಭ್ ಬಚ್ಚನ್ (Amitabh Bachchan ), ದೀಪಿಕಾ ಪಡುಕೋಣೆ (Deepika Padukone), ಪ್ರಭಾಸ್ (Prabhas), ಕಮಲ್ ಹಾಸನ್ (Kamal Haasan) ನಟಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ಮಿಸಿದ್ದಾರೆ.

ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿತ್ತು. ಆರಂಭಿಕ ದಿನದಂದು 180 ಕೋಟಿ ರೂ. ಗಳಿಕೆ ಕಂಡ ಚಿತ್ರಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಯಿತು.

ಕಲ್ಕಿ 2898 ಎಡಿ ಜೂನ್ 27ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಸುದೀರ್ಘವಾಗಿ ಚಿತ್ರ ಮಂದಿರಗಳಲ್ಲಿ ಓಡಿ ಸಂಭ್ರಮ ಪಟ್ಟ ಈ ಚಿತ್ರ ಆಗಸ್ಟ್ 22ರಿಂದ ಒಟಿಟಿಯಲ್ಲಿ ಪ್ರದರ್ಶನ (OTT releases) ಕಾಣಲಿದೆ. ನೆಟ್‌ಫ್ಲಿಕ್ಸ್ (netflix) ಮತ್ತು ಅಮೆಜಾನ್ ಪ್ರೈಮ್ (amazon prime) ಎರಡರಲ್ಲೂ ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

Kalki 2898 AD
Kalki 2898 AD


ಚಲನಚಿತ್ರದ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನವನ್ನು ಪ್ರಾರಂಭಿಸಿದೆ. ಇನ್ನು ತಮಿಳು, ತೆಲುಗು, ಕನ್ನಡ ಮತ್ತು ಮಲಯಂ ಆವೃತ್ತಿಗಳು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.


ಏಕಕಾಲಕ್ಕೆ ಎರಡು ಸ್ಟ್ರೀಮಿಂಗ್ ದೈತ್ಯ ಒಟಿಟಿಯಲ್ಲಿ ಚಲನಚಿತ್ರದ ಡ್ಯುಯಲ್ ಪ್ಲಾಟ್‌ಫಾರ್ಮ್ ಬಿಡುಗಡೆ ತಂತ್ರವು ‘ಕಲ್ಕಿ 2898 ಎಡಿ’ ಚಿತ್ರವನ್ನು ವಿವಿಧ ಪ್ರದೇಶಗಳು ಮತ್ತು ಭಾಷೆಗಳಲ್ಲಿ ವ್ಯಾಪಕವಾಗಿ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದೆ. ಈ ವಿಧಾನವು ವೀಕ್ಷಕರನ್ನು ಹೆಚ್ಚಿಸುವುದು ಮಾತ್ರವಲ್ಲದೆ ವೈವಿಧ್ಯಮಯ ಭಾಷಾ ಆದ್ಯತೆಗಳನ್ನು ಸಹ ಒದಗಿಸುತ್ತದೆ. ಇದು ಅಪರೂಪವಾಗಿ ಕಂಡುಬರುತ್ತದೆ.

ಇದನ್ನೂ ಓದಿ: Actress Kangana Ranaut : ಬಾಲಿವುಡ್ ಪಾರ್ಟಿಗಳಲ್ಲಿ ನಡೆಯೋದೇನು? ಅಸಲಿ ಕತೆ ರಿವೀಲ್‌ ಮಾಡಿದ ಕಂಗನಾ!

‘ಕಲ್ಕಿ 2898 ಎಡಿ’ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1050 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 700 ಕೋಟಿ ರೂ. ಗಿಂತ ಹೆಚ್ಚು ಗಳಿಸಿದೆ. ಚಿತ್ರದ ಒಟಿಟಿ ಆವೃತ್ತಿಯು ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಲಾಗದ ಹೆಚ್ಚಿನ ಪ್ರೇಕ್ಷಕರನ್ನು ತಲುಪುವಂತೆ ಮಾಡಲಿದೆ ಎನ್ನುವುದು ಚಿತ್ರ ತಂಡದ ನಿರೀಕ್ಷೆಯಾಗಿದೆ.

Continue Reading

ಸಿನಿಮಾ

OTT Releases: ಇಂಡಿಯನ್ 2, ಟರ್ಬೊ ಸೇರಿದಂತೆ ಹಲವು ಹೊಸ ಚಿತ್ರಗಳು ಈ ವಾರ ಒಟಿಟಿಯಲ್ಲಿ!

ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಘುಡಚಡಿ, ಕಮಲ್ ಹಾಸನ್ ಅವರ ಇಂಡಿಯನ್ 2 ಸೇರಿದಂತೆ ಹಲವು ಹೊಸ ಚಿತ್ರಗಳು, ವೆಬ್ ಸರಣಿಗಳು ಈ ವಾರ ಒಟಿಟಿ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ (OTT Releases) ಒದಗಿಸಲಿದೆ. ಒಟಿಟಿಯ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾದಲ್ಲಿ ಈ ವಾರ ಪ್ರದರ್ಶನ ಕಾಣಲಿರುವ ಚಿತ್ರ, ಸರಣಿಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

OTT Releases
Koo

ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಜಿಯೋ ಸಿನಿಮಾ ವೀಕ್ಷಕರು ನೀವಾಗಿದ್ದರೆ ಈ ವಾರ ಪೂರ್ತಿ ಭರ್ಜರಿ ಮನೋರಂಜನೆ ಗ್ಯಾರಂಟಿ. ಹಲವು ಹೊಸ ಚಿತ್ರಗಳು (new film), ವೆಬ್ ಸರಣಿಗಳು (Web series) ಈ ವಾರ ಒಟಿಟಿಯಲ್ಲಿ ತೆರೆ (OTT Releases) ಕಾಣಲಿದೆ. ಹೀಗಾಗಿ ಈ ವಾರಾಂತ್ಯದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಕಾಲ ಕಳೆಯಲು ಪ್ರವಾಸ, ಲಂಚ್, ಡಿನ್ನರ್ ಯೋಜನೆ ಮಾಡಬೇಕಿಲ್ಲ. ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ, ಸರಣಿಗಳನ್ನು ಮನೆಯಲ್ಲೇ ವೀಕ್ಷಿಸಬಹುದು.

ಈ ಬಾರಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಘುಡಚಡಿ, ಇಂಡಿಯನ್ 2, ಟರ್ಬೊ ಸೇರಿದಂತೆ ಇನ್ನು ಹಲವು ಸಿನಿಮಾ, ವೆಬ್ ಸರಣಿಗಳು ಬಿಡುಗಡೆಯಾಗಲಿದೆ.


ಆರ್ ಯು ಶ್ಯೂರ್‌?

ಪ್ರವಾಸದ ಕುರಿತಾಗಿರುವ ವೆಬ್ ಸರಣಿ ಇದಾಗಿದ್ದು, ಜಂಗ್‌ಕುಕ್ ಮತ್ತು ಜಿಮಿನ್ ಅವರು ವಿವಿಧ ಪ್ರದೇಶಗಳನ್ನು ಅನ್ವೇಷಿಸಿ ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಅಮೆರಿಕದ ಜೆಜು ದ್ವೀಪ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಸಪೊರೊಗೆ ಅವರು ಭೇಟಿ ನೀಡುವ ಸಂಪೂರ್ಣ ಚಿತ್ರಣವನ್ನು ಈ ವೆಬ್ ಸರಣಿ ಹೊಂದಿದೆ. ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 8ರಂದು ಬಿಡುಗಡೆಯಾಗಲಿದೆ.


ದಿ ಅಂಬ್ರೆಲಾ ಅಕಾಡೆಮಿ ಸರಣಿ- 4

ವಿಶೇಷ ಶಕ್ತಿ ಹೊಂದಿರುವ ದತ್ತು ಪಡೆದ ಒಡಹುಟ್ಟಿದವರ ಕಥೆಯನ್ನು ‘ದಿ ಅಂಬ್ರೆಲಾ ಅಕಾಡೆಮಿ’ ಹೊಂದಿದೆ. ತಂದೆಯ ಸಾವಿನ ಸತ್ಯವನ್ನು ತಿಳಿಯಲು ಅವರು ಒಂದಾಗುವ ಈ ಸರಣಿಯಲ್ಲಿ ಎಲಿಯಟ್ ಪೇಜ್, ಟಾಮ್, ಹಾಪರ್, ಡೇವಿಡ್ ಕ್ಯಾಸ್ಟನೆಡಾ, ಎಮ್ಮಿ ರೇವರ್- ಲ್ಯಾಂಪ್‌ಮನ್, ರಾಬರ್ಟ್ ಶೀಹನ್ ಮತ್ತು ಏಡನ್ ಗಲ್ಲಾಘರ್ ನಟಿಸಿದ್ದಾರೆ. ಇದು ನಾಲ್ಕನೆಯ ಮತ್ತು ಅಂತಿಮ ಸರಣಿಯಾಗಿದ್ದು, ನೆಟ್‌ಫ್ಲಿಕ್ಸ್ ನಲ್ಲಿ ಆಗಸ್ಟ್ 8ರಂದು ಬಿಡುಗಡೆಯಾಗಲಿದೆ.


ಘುಡಚಡಿ

ವಿಭಿನ್ನ ತಲೆಮಾರುಗಳ ಎರಡು ಜೋಡಿಗಳ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪಾರ್ಥ್ ಸಮತಾನ್, ಖುಶಾಲಿ ಕುಮಾರ್, ಅರುಣಾ ಇರಾನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ 9ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.


ಗ್ಯಾರಹ್ ಗ್ಯಾರಹ್

ಕೊಲೆ ಪ್ರಕರಣವನ್ನು ಭೇದಿಸಲು ಹೊರಟ ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆ ಇದು. ರಾಘವ್ ಜುಯಲ್, ಕೃತಿಕಾ ಕಮ್ರಾ ಮತ್ತು ಧೈರ್ಯ ಕರ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಝೀ5ನಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಇಂಡಿಯನ್ 2

ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಇಂಡಿಯನ್ 2’ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊರಗೆಳೆಯಲು ಬಂದ ಸೇನೆಯ ನಾಯಕನೊಬ್ಬನ ಹೋರಾಟದ ಕಥೆ ಇದು. ಇಂಡಿಯನ್ 1996ರ ಹಿಟ್ ಚಲನಚಿತ್ರದ ಮುಂದುವರಿದ ಭಾಗ ಇದಾಗಿದೆ. ಎಸ್. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಮತ್ತು ಕಾಜಲ್ ಅಗರ್ವಾಲ್ ನಟಿಸಿರುವ ಈ ಚಿತ್ರ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಈ ನಾಲ್ಕು ಭಾಷೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಲೈಫ್ ಹಿಲ್ ಗಯಿ

ಹಳೆಯ ಹೊಟೇಲ್‌ವೊಂದರ ಉತ್ತರಾಧಿಕಾರಕ್ಕಾಗಿ ಒಡಹುಟ್ಟಿದವರು ಪರಸ್ಪರ ಸ್ಪರ್ಧೆಗೆ ಇಳಿಯುವ ಕಥೆಯನ್ನು ಹೊಂದಿರುವ ಇದರಲ್ಲಿ ಕುಶಾ ಕಪಿಲ ಮತ್ತು ದಿವ್ಯೆಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.


ಫಿರ್ ಆಯಿ ಹಸೀನ್ ದಿಲ್ರುಬಾ

‘ಹಸೀನ್ ದಿಲ್ರುಬಾʼದ ಮುಂದುವರಿದ ಭಾಗವಾಗಿರುವ ಇದು ರಾಣಿ ಮತ್ತು ರಿಷು ನಡುವೆ ಸುತ್ತುತ್ತದೆ. ತಾಪ್ಸಿ ಪನ್ನು, ವಿಕ್ರಾಂತ್ ಮಾಸ್ಸಿ ಮತ್ತು ಸನ್ನಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 9 ರಂದು ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Divya Seth: ಸುಷ್ಮಾ ಸೇಠ್ ಮೊಮ್ಮಗಳು, ʻಜಬ್ ವಿ ಮೆಟ್ ʼಚಿತ್ರದ ಖ್ಯಾತ ನಟಿಯ ಪುತ್ರಿ ನಿಧನ


ಟರ್ಬೊ

ತೊಂದರೆಗೆ ಸಿಲುಕಿದ ಜೀಪ್ ಚಾಲಕ ಚೆನ್ನೈಗೆ ಹೋಗುತ್ತಾನೆ. ಅಲ್ಲಿ ವಿಚಿತ್ರ ಘಟನೆಗಳನ್ನು ಎದುರಿಸಬೇಕಾಗುತ್ತದೆ. ವೆಟ್ರಿವೇಲ್ ಷಣ್ಮುಘ ಸುಂದರಂ ಅವರ ಚಿತ್ರದಲ್ಲಿ ಮಮ್ಮುಟ್ಟಿ ಜೊತೆ ರಾಜ್ ಬಿ. ಶೆಟ್ಟಿ, ಸುನಿಲ್ ಮತ್ತು ಅಂಜನಾ ಜಯಪ್ರಕಾಶ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 9ರಂದು ಸೋನಿ ಲೈವ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.


ಡಿಜಾಂಗೋ

ಆಗಸ್ಟ್ 9ರಂದು ಒಟಿಟಿಯಲ್ಲಿ ಇದು ಬಿಡುಗಡೆಯಾಗಲಿದೆ. ಕಾಲ್ಪನಿಕ ನಗರದಲ್ಲಿ ಹುಟ್ಟಿಕೊಳ್ಳುವ ಕಥೆ ಇದು. ಡಿಜಾಂಗೊ ಕಳೆದುಹೋದ ಮಗಳು ಸಾರಾಳನ್ನು ಹುಡುಕುವ ಕಥೆಯನ್ನು ಹೊಂದಿದೆ. ಲಿಸಾ ವಿಕಾರಿ, ಮಥಿಯಾಸ್ ಸ್ಕೋನೆರ್ಟ್ಸ್ ಮತ್ತು ನಿಕೋಲಸ್ ಪಿನೋಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಲೈವ್‌ನಲ್ಲಿ ಇದು ಲಭ್ಯ.

Continue Reading

ಒಟಿಟಿ

Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!

Indian 2 Ott: ಇಂಡಿಯನ್ 2 ಚಿತ್ರವೂ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಆದರೆ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಬರವಣಿಗೆ, ಅತಿಯಾದ ಉದ್ದ, ಭವ್ಯತೆಗೆ ಹೆಚ್ಚಿನ ಒತ್ತು ಧ್ವನಿಮುದ್ರಿಕೆ ಕುರಿತು ಆಕ್ಷೇಪ ಕೇಳಿ ಬಂದಿದ್ದರೂ ಕಮಲ್ ಹಾಸನ್ ಅಭಿನಯಕ್ಕೆ ಮಾತ್ರ ಭಾರಿ ಮೆಚ್ಚುಗೆ ಗಳಿಸಿದೆ.

VISTARANEWS.COM


on

Indian 2 Ott release official date announced
Koo

ಬೆಂಗಳೂರು: ಇಂಡಿಯನ್ 2 (Indian 2 OTT Release) ಜುಲೈ 12 ಚಿತ್ರಮಂದಿರಗಳಲ್ಲಿ (movie theater) ಬಿಡುಗಡೆಯಾಗಿತ್ತು. ಕಮಲ್ ಹಾಸನ್ (kamal hasan), ಸಿದ್ಧಾರ್ಥ್, ಎಸ್.ಜೆ. ಸೂರ್ಯ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ಈ ಚಿತ್ರವು ವಿಮರ್ಶಕರು, ಅಭಿಮಾನಿಗಳಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರವು ಜುಲೈ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಈ ಚಿತ್ರವು ಈಗ ಆಗಸ್ಟ್ 9 ರಂದು ಜನಪ್ರಿಯ OTT ಕಂಪನಿ ನೆಟ್‌ಫ್ಲಿಕ್ಸ್ ಮೂಲಕ ಪ್ರೇಕ್ಷಕರನ್ನು ತಲುಪಲಿದೆ. ಭಾರತೀಯಾಡು 2 ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮನರಂಜನೆ ನೀಡಲಿದೆ.

ಇಂಡಿಯನ್ 2 ಚಿತ್ರವೂ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಆದರೆ ಹೆಚ್ಚಾಗಿ ನಕಾರಾತ್ಮಕ ವಿಮರ್ಶೆಗಳೇ ಕೇಳಿ ಬಂದಿವೆ. ಬರವಣಿಗೆ, ಅತಿಯಾದ ಉದ್ದ, ಭವ್ಯತೆಗೆ ಹೆಚ್ಚಿನ ಒತ್ತು ಧ್ವನಿಮುದ್ರಿಕೆ ಕುರಿತು ಆಕ್ಷೇಪ ಕೇಳಿ ಬಂದಿದ್ದರೂ ಕಮಲ್ ಹಾಸನ್ ಅಭಿನಯಕ್ಕೆ ಮಾತ್ರ ಭಾರಿ ಮೆಚ್ಚುಗೆ ಗಳಿಸಿದೆ.

ಆರು ಗಂಟೆಗಳಿಗೂ ಹೆಚ್ಚು ಅವಧಿಯ ಚಲನಚಿತ್ರ ಇದಾಗಿದ್ದು, ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಇಂಡಿಯನ್ 2ನ ಮುಂದುವರಿದ ಭಾಗ ಇಂಡಿಯನ್ 3 ಚಿತ್ರವನ್ನು 2025ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

ಇಂಡಿಯನ್ 2 ಸಿನಿಮಾ ಕಮಲ್ ಹಾಸನ್ ಅವರ ಕೊನೆಯ ಚಿತ್ರ ʻವಿಕ್ರಮ್ʼ ಕ್ಕಿಂತ ಕಡಿಮೆ ಗಳಿಕೆ ಕಂಡಿದೆ. 2022 ರಲ್ಲಿ ವಿಕ್ರಮ್‌ ಸಿನಿಮಾ ತನ್ನ ಆರಂಭಿಕ ದಿನದಂದು 28 ಕೋಟಿ ರೂ. ಗಳಿಕೆ ಕಂಡಿತ್ತು. ವಿಕ್ರಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. ವಿಶ್ವಾದ್ಯಂತ 430 ಕೋಟಿ ರೂ. ಗಳಿಕೆ ಕಂಡಿತ್ತು. ಅದಕ್ಕೂ ಮೊದಲು, ಕಮಲ್ ಹಾಸನ್ ಕೊನೆಯದಾಗಿ 2018 ರ ವಿಶ್ವರೂಪಂ ಚಿತ್ರದಲ್ಲಿ ನಟಿಸಿದ್ದರು. ಇಂಡಿಯನ್ 2’ ಸಿನಿಮಾಗೆ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಆಗಿದೆ. ಕಮಲ್ ಹಾಸನ್ ಅವರಂಥ ಸಿನಿಮಾಗೆ ಇದು ತುಂಬಾನೇ ಸಣ್ಣ ಮೊತ್ತ.

ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಸ್ಯಾಕ್‌ನಿಲ್ಕ್ ಪ್ರಕಾರ, ಇಂಡಿಯನ್ 2 ತಮಿಳು ಆವೃತ್ತಿಗೆ ಒಟ್ಟಾರೆ 55% ಆಕ್ಯುಪೆನ್ಸಿಯನ್ನು ಹೊಂದಿತ್ತು, ಹೆಚ್ಚು ರಾತ್ರಿ ಪ್ರದರ್ಶನಗಳಿಂದ ಬಂದಿದೆ. ಚೆನ್ನೈ ಶೇ 68ರಷ್ಟು , ಹಿಂದಿ ಶೇ 11 ರಷ್ಟು ಆಕ್ಯುಪೆನ್ಸಿ , ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಕ್ರಮವಾಗಿ ಶೇ. 12.5ರಷ್ಟು ​​ಮತ್ತು ಶೇ. 8ರಷ್ಟು ಆಕ್ಯುಪೆನ್ಸಿ ಇತ್ತು. ಚಿತ್ರದ ತೆಲುಗು ಆವೃತ್ತಿಯು ಉತ್ತಮ ಪ್ರದರ್ಶನ ನೀಡಿದೆ. ಶೇ. 58ರಷ್ಟು ಆಕ್ಯುಪೆನ್ಸಿ ಇತ್ತು ಎನ್ನಲಾಗಿದೆ. ಕಮಲ್ ಹಾಸನ್ ಇತ್ತೀಚೆಗೆ ಕಲ್ಕಿ 2898 ಎಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಜಾಗತಿಕವಾಗಿ 1000 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Continue Reading
Advertisement
karnataka Weather Forecast
ಮಳೆ2 ಗಂಟೆಗಳು ago

Karnataka Weather : ಇಂದು ಅಬ್ಬರಿಸಲಿದೆ ಗುಡುಗು ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ2 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ

Action Prince Dhruva Sarja much awaited film Martin to hit the screens on October 11
ಸಿನಿಮಾ12 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Actor Darshan
ಬೆಂಗಳೂರು13 ಗಂಟೆಗಳು ago

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೇಸ್; ಕ್ಲೈ ಮ್ಯಾಕ್ಸ್ ಹಂತದಲ್ಲಿ ರಿವೈಲ್ ಆಯ್ತು ಜೈಲಿನೊಳಗಿನ ಅಂದರ್ ಕಿ ದರ್ಬಾರ್!

Bengaluru News
ಬೆಂಗಳೂರು15 ಗಂಟೆಗಳು ago

Bengaluru News : ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ; ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬ

HD kumaraswamy And Vijayetata
ಬೆಂಗಳೂರು16 ಗಂಟೆಗಳು ago

HD Kumaraswamy : ಎಲೆಕ್ಷನ್‌ಗೆ 50 ಕೋಟಿ ರೂ.ಗೆ ಡಿಮ್ಯಾಂಡ್‌ ಮಾಡಿ ಉದ್ಯಮಿಗೆ ಬೆದರಿಕೆ; ಎಚ್‌ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

Karnataka weather Forecast
ಪ್ರಮುಖ ಸುದ್ದಿ16 ಗಂಟೆಗಳು ago

Karnataka Rain : ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಹೈರಾಣಾದ ವಾಹನ ಸವಾರರು

MLA Muniratna
ಬೆಂಗಳೂರು17 ಗಂಟೆಗಳು ago

MLA Muniratna: ಶಾಸಕ ಮುನಿರತ್ನ ಕೇಸ್‌; ರಾಜಕಾರಣಿಗಳ ಹನಿಟ್ರ್ಯಾಪ್‌ ಮಾಡುತ್ತಿದ್ದ ರೂಮಿನ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು

Power cut off due to a technical problem in the transformer Bengaluru faces water crisis today
ಬೆಂಗಳೂರು18 ಗಂಟೆಗಳು ago

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Gandhi Jayanti 2024
ಬೆಂಗಳೂರು19 ಗಂಟೆಗಳು ago

Gandhi Jayanti 2024: ಗಾಂಧಿ ಜಯಂತಿ ಹಿನ್ನೆಲೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಿದ ಎನ್‌ಸಿಸಿ ಕೆಡೆಟ್‌ಗಳು

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ12 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌