Parineeti Chopra: 'ಓ ಪ್ರಿಯಾ'; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ! - Vistara News

ಬಾಲಿವುಡ್

Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ!

Parineeti Chopra: ಹಿಂದಿ ಮತ್ತು ಪಂಜಾಬಿಯಲ್ಲಿ ಸಾಹಿತ್ಯವನ್ನು ಹೊಂದಿರುವ (lyrics in Hindi and Punjabi) ಹಾಡಿನಲ್ಲಿ, ಪರಿಣಿತಿ ರಾಘವ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Parineeti Chopra with Raghav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಪರಿಣಿತಿ ಚೋಪ್ರಾ (Parineeti Chopra) ಕೆವಲ ನಟಿ ಮಾತ್ರವಲ್ಲ ಗಾಯಕಿಯೂ ಹೌದು. ನಟಿ ಆಗಾಗ ತಾವು ಹಾಡಿರುವ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಅವರೊಂದಿಗಿನ ವಿವಾಹಕ್ಕಾಗಿ ನಟಿ ʻಓ ಪಿಯಾʼ (O Piya) ಎಂಬ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ಈ ಸುಮಧುರವಾದ ಹಾಡು ಅವರ ಮದುವೆ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಹಿಂದಿ ಮತ್ತು ಪಂಜಾಬಿಯಲ್ಲಿ ಸಾಹಿತ್ಯವನ್ನು ಹೊಂದಿರುವ (lyrics in Hindi and Punjabi) ಹಾಡಿನಲ್ಲಿ, ಪರಿಣಿತಿ ರಾಘವ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಸಮಾರಂಭದಲ್ಲಿ ʻಓ ಪಿಯಾʼ ಹಾಡನ್ನು ನಟಿಯು ರಾಘವ್‌ ಅವರಿಗಾಗಿ ಹಾಡಿದ್ದಾರೆ ಎಂತಲೂ ವರದಿಯಾಗಿದೆ. ಈ ಹಾಡನ್ನು ಗೌರವ್ ದತ್ತಾ ಸಂಯೋಜಿಸಿದ್ದಾರೆ. ಗೌರವ್, ಸನ್ನಿ ಎಂಆರ್ ಮತ್ತು ಹರ್ಜೋತ್ ಕೌರ್ ಅವರ ಸಾಹಿತ್ಯವಿದೆ. ಇದೀಗ ಈ ಹಾಡು ಯಟ್ಯೂಬ್‌ನಲ್ಲಿ ಲಭ್ಯವಾಗಿದ್ದು, ಪರಿಣಿತಿ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪರಿಣಿತಿ ಅವರ ಸೋದರಸಂಬಂಧಿ, ನಟ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ಭಾಗಿಯಾಗಿಲ್ಲ. ಉದಯಪುರದಲ್ಲಿ ಪರಿಣಿತಿ ಮತ್ತು ರಾಘವ್ ಸ್ನೇಹಿತರು ಮತ್ತು ಕುಟುಂಬದವರಿಗೆ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಗಣ್ಯರು ಸಮರಾಂಭದಲ್ಲಿ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: Parineeti Chopra: ದೇವನಾಗರಿ ಲಿಪಿಯಲ್ಲಿ ʻರಾಘವ್ʼ ಹೆಸರು; ಲೆಹೆಂಗಾ ತಯಾರಿಸಲು 104 ದಿನಗಳು ಬೇಕಾಯ್ತು!

ಈ ಮುಂಚೆ ಚಂಡೀಗಢದಲ್ಲಿ ಆರತಕ್ಷತೆ ಇರಲಿದೆ ಎಂದು ವರದಿಯಾಗಿತ್ತು. ಹೊಸ ವರದಿಯ ಪ್ರಕಾರ, ಚಂಡೀಗಢ ಮತ್ತು ದೆಹಲಿಯಲ್ಲಿನ ಆರತಕ್ಷತೆಗಳನ್ನು ರದ್ದುಗೊಳಿಸಲಾಗಿದ್ದು, ಪರಿಣಿತಿ ಮತ್ತು ರಾಘವ್ ಈಗ ತಮ್ಮ ಸ್ನೇಹಿತರಿಗೆ ಮುಂಬೈನಲ್ಲಿ ಅಕ್ಟೋಬರ್ 4ರಂದು ಆರತಕ್ಷತೆ ಆಯೋಜಿಸಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Anant-Radhika Bash: ಪ್ರಿ ವೆಡ್ಡಿಂಗ್‌ನಲ್ಲಿ ಮಿಂಚಿದ ರಾಧಿಕಾ ಮರ್ಚಂಟ್‌; ಸಂಗೀತ ಪ್ರದರ್ಶನಕ್ಕೆ ಮನಸೋತ ಅತಿಥಿಗಳು!

Anant-Radhika Bash: ವರದಿಯ ಪ್ರಕಾರ ಕೊನೆಯ ದಿನ ಅತಿಥಿಗಳ ಪಟ್ಟಿಯಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಮತ್ತು ಇತರ ಉನ್ನತ ವ್ಯಾಪಾರ ಉದ್ಯಮಿಗಳು ಮತ್ತು ಹಾಲಿವುಡ್ ಖ್ಯಾತನಾಮರು ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ಒಟ್ಟು 1200 ಅತಿಥಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಪಾರ್ಟಿಯಲ್ಲಿ ರಾಧಿಕಾ, ಅನಂತ್, ನೀತಾ ಅಂಬಾನಿ, ಮುಖೇಶ್ ಅಂಬಾನಿ ಮತ್ತು ಕುಟುಂಬದ ವಿಶೇಷ ಫೋಟೊಗಳು ವೈರಲ್‌ ಆಗಿವೆ. ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮಗ ಅಬ್ರಾಮ್ ಖಾನ್ ಅವರು ಅಂಬಾನಿ ಪಾರ್ಟಿಯಲ್ಲಿ ಎಂಜಾಯ್‌ ಮಾಡಿದ್ದರು.

VISTARANEWS.COM


on

Anant-Radhika Bash legendary singer Andrea Bocelli performs
Koo

ಬೆಂಗಳೂರು: ಇಟಲಿಯ ಪೋರ್ಟೊಫಿನೊದಲ್ಲಿ (Portofino) ರಾಧಿಕಾ ಮರ್ಚಂಟ್‌ ಮತ್ತು ಅನಂತ್ ಅಂಬಾನಿಯವರ ವಿವಾಹ ಪೂರ್ವದ ಅದ್ಧೂರಿ ಸಮಾರಂಭ ತಾರಾ ಬಳಗದಿಂದ ಕೂಡಿದ್ದವು. ಖ್ಯಾತ ಇಟಾಲಿಯನ್ ಟೆನರ್ ಆಂಡ್ರಿಯಾ ಬೊಸೆಲ್ಲಿ (Andrea Bocelli) ಸಂಗೀತ ಪ್ರದರ್ಶನ ನೀಡಿದ್ದರು. ವೇದಿಕೆಯಲ್ಲಿ `ಫಾಲಿಂಗ್ ಇನ್ ಲವ್ ವಿತ್ ಯು’ ಹಾಡನ್ನು ಹಾಡಿರುವ ವೀಡಿಯೊಗಳು ಇದೀಗ ವೈರಲ್‌ ಆಗುತ್ತಿವೆ.

ಆಂಡ್ರಿಯಾ ಬೊಸೆಲ್ಲಿ ಅವರ (Andrea Bocelli) ಕ್ಲಿಪ್ ಅನ್ನು ಹಂಚಿಕೊಂಡ ಪೂಕಿ ಬೂ ಹೀಗೆ ಬರೆದಿದ್ದಾರೆ, “ಇದಕ್ಕಿಂತ ಕನಸು ಕಾಣಲು ಸಾಧ್ಯವಿಲ್ಲ!! ಆಂಡ್ರಿಯಾ ಬೊಸೆಲ್ಲಿ ಇಟಲಿಯಲ್ಲಿ ಅನಂತ್ ಮತ್ತು ರಾಧಿಕಾ ಜೋಡಿಗಾಗಿ ಎಲ್ವಿಸ್ ಪ್ರೀಸ್ಲಿಯವರ ಸಾಂಪ್ರದಾಯಿಕ ಹಾಡು – ಫಾಲಿಂಗ್ ಇನ್ ಲವ್ ವಿಥ್ ಯು ಹಾಡಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ವರದಿಯ ಪ್ರಕಾರ ಕೊನೆಯ ದಿನ ಅತಿಥಿಗಳ ಪಟ್ಟಿಯಲ್ಲಿ ಜೆಫ್ ಬೆಜೋಸ್, ಬಿಲ್ ಗೇಟ್ಸ್ ಮತ್ತು ಇತರ ಉನ್ನತ ವ್ಯಾಪಾರ ಉದ್ಯಮಿಗಳು ಮತ್ತು ಹಾಲಿವುಡ್ ಖ್ಯಾತನಾಮರು ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ಒಟ್ಟು 1200 ಅತಿಥಿಗಳು ಭಾಗವಹಿಸಿದ್ದರು. ಪಾರ್ಟಿಯಲ್ಲಿ ರಾಧಿಕಾ, ಅನಂತ್, ನೀತಾ ಅಂಬಾನಿ, ಮುಖೇಶ್ ಅಂಬಾನಿ ಮತ್ತು ಕುಟುಂಬದ ವಿಶೇಷ ಫೋಟೊಗಳು ವೈರಲ್‌ ಆಗಿವೆ. ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮಗ ಅಬ್ರಾಮ್ ಖಾನ್ ಅವರು ಅಂಬಾನಿ ಪಾರ್ಟಿಯಲ್ಲಿ ಎಂಜಾಯ್‌ ಮಾಡಿದ್ದರು.

ಇದನ್ನೂ ಓದಿ: Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

ಜುಲೈ 12ರಿಂದ ಮೂರು ದಿನಗಳ ಕಾಲ ವಿವಾಹ ಮಹೋತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13ರಂದು ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಉಡುಪನ್ನು ಧರಿಸುವ ನಿರೀಕ್ಷೆಯಿದೆ..

Continue Reading

ಬಾಲಿವುಡ್

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

Priyanka Chopra: ಕಾರ್ಲ್ ಅರ್ಬನ್ ಕೂಡ ಈ ಸಿನಿಮಾ ಭಾಗವಾಗಿದ್ದಾರೆ. ರುಸ್ಸೋ ಬ್ರದರ್ಸ್ ಬ್ಯಾನರ್ ಎಜಿಬಿಒ ಸ್ಟುಡಿಯೋಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ಮಾಪಕಿಯಾಗಿಯೂ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಿಯಾಂಕಾ ಅವರು ತಮ್ಮ ಅಮೆಜಾನ್ ಒರಿಜಿನಲ್ ಸರಣಿ ಸಿಟಾಡೆಲ್‌ನಲ್ಲಿ ನಟಿಸಿದ ನಂತರ ದಿ ರುಸ್ಸೋ ಬ್ರದರ್ಸ್‌ನೊಂದಿಗೆ ಇದು ಎರಡನೇ ಯೋಜನೆಯಾಗಿದೆ.

VISTARANEWS.COM


on

Priyanka Chopra The Bluff team Malti enjoys
Koo

ಬೆಂಗಳೂರು: `ದಿ ಬ್ಲಫ್’ ಚಿತ್ರದ ಶೂಟಿಂಗ್‌ಗಾಗಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹೊಸ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರು ಮಗಳು ಮಾಲತಿ ಮೇರಿ ಚೋಪ್ರಾ ಜೊನಾಸ್ ಮತ್ತು ಚಿತ್ರತಂಡದ ಜತೆ ಎಂಜಾಯ್‌ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಮಾಲತಿ ಅಮ್ಮನ ಜತೆ ಸಖತ್‌ ಚಿಲ್‌ ಮಾಡಿದ್ದಾಳೆ. ವಿಡಿಯೊದಲ್ಲಿ ಮಾಲತಿ ಟೀಂ ಜತೆ ಆಟವಾಡಿರುವ, ಹಣ್ಣುಗಳನ್ನು ತಿನ್ನುವುದು , ಬಳಿಕ ಪ್ರಿಯಾಂಕ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿವೆ. ಕ್ಲಿಪ್ ಉದ್ದಕ್ಕೂ, ಪ್ರಿಯಾಂಕಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಕ್ಲಿಪ್‌ನಲ್ಲಿ ಮಾಲತಿ ನೀಲಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೊವನ್ನು ಹಂಚಿಕೊಂಡಿರುವ ಪ್ರಿಯಾಂಕಾ, “ನಾವು ಹೊಸ ಯೋಜನೆಯನ್ನು ಶುರು ಮಾಡಿದ್ದೇವೆ. ನಮ್ಮ ಕುಟುಂಬಗಳು ಮತ್ತು ಮನೆಗಳಿಂದ ದೂರವಿರುತ್ತೇವೆ. ಆದರೆ ನಮ್ಮ ಸುತ್ತ ಮುತ್ತ ಸುತ್ತುವರೆದಿರುವ ಪ್ರತಿಯೊಬ್ಬರೂ ಸಂತೋಷವನ್ನು ನೀಡುವಾಗ ಕಾಲ ಕಳೆಯುವುದು ಸುಲಭವಾಗುತ್ತದೆʼʼಎಂದು ಬರೆದುಕೊಂಡಿದ್ದಾರೆ,

ಕಾರ್ಲ್ ಅರ್ಬನ್ ಕೂಡ ಈ ಸಿನಿಮಾ ಭಾಗವಾಗಿದ್ದಾರೆ. ರುಸ್ಸೋ ಬ್ರದರ್ಸ್ ಬ್ಯಾನರ್ ಎಜಿಬಿಒ ಸ್ಟುಡಿಯೋಸ್ ಮತ್ತು ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ಮಾಪಕಿಯಾಗಿಯೂ ಪ್ರಿಯಾಂಕಾ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಿಯಾಂಕಾ ಅವರು ತಮ್ಮ ಅಮೆಜಾನ್ ಒರಿಜಿನಲ್ ಸರಣಿ ಸಿಟಾಡೆಲ್‌ನಲ್ಲಿ ನಟಿಸಿದ ನಂತರ ದಿ ರುಸ್ಸೋ ಬ್ರದರ್ಸ್‌ನೊಂದಿಗೆ ಇದು ಎರಡನೇ ಯೋಜನೆಯಾಗಿದೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಪ್ರಿಯಾಂಕಾ ಚೋಪ್ರಾ ಆಗಾಗ ಮಗಳು ಮಾಲತಿ ಮೇರಿಯ ಕುರಿತಾದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಮ್ಮನ ಜತೆ ಶಾಪಿಂಗ್ ಮಾಡುವುದರಿಂದ ಹಿಡಿದು ತಂದೆ ನಿಕ್‌ ಜೋನಾಸ್‌ ಜತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ತನಕ ಫ್ಯಾನ್ಸ್‌ ಹೃದಯ ಗೆಲ್ಲುತ್ತಲೇ ಇರುತ್ತಾಳೆ ಮಾಲತಿ.

Continue Reading

ಬಾಲಿವುಡ್

Sanjeeda Shaikh: ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಓಡಿದಳು ಎಂದ ಖ್ಯಾತ ನಟಿ!

Sanjeeda Shaikh: ʻಹೀರಾಮಂಡಿʼಯಲ್ಲಿ ಸದ್ಯ ನಟಿಸಿರುವ ನಟಿ ಸಂದರ್ಶನವೊಂದರಲ್ಲಿ ನೈಟ್ ಕ್ಲಬ್ ಅನುಭವವನ್ನ ಹಂಚಿಕೊಂಡಿದ್ದಾರೆ. ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಮುಂದಕ್ಕೆ ಸಾಗಿದಳು (Sanjeeda Shaikh) ಎಂದಿದ್ದಾರೆ ಸಂಜೀದಾ ಶೇಖ್. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಕೂಡ ಕಾಣಿಸಿಕೊಂಡರು ಸಂಜೀದಾ . ಕಿರುತೆರೆಯತ್ತ ಮುಖ ಮಾಡಿದ್ದ ಸಂಜೀದಾ ಶೇಖ್ ಇಲ್ಲಿಯವರೆಗೆ ಹತ್ತಾರು ಧಾರಾವಾಹಿಯಲ್ಲಿ ನಟಿಸಿದ್ದಾರೆ.

VISTARANEWS.COM


on

Sanjeeda Shaikh Says a Woman Groped Her
Koo

ಬೆಂಗಳೂರು: 2006ರಲ್ಲಿ ರವಿ ಗರಣಿ ನಿರ್ದೇಶಿಸಿದ್ದ, ಶಿವಧ್ವಜ್ ನಾಯಕರಾಗಿ ಅಭಿನಯಿಸಿದ್ದ `ಶುಭಂ’ ಚಿತ್ರದಲ್ಲಿ ಸಂಜೀದಾ ಶೇಖ್‌ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು. ʻಹೀರಾಮಂಡಿʼಯಲ್ಲಿ ಸದ್ಯ ನಟಿಸಿರುವ ನಟಿ ಸಂದರ್ಶನವೊಂದರಲ್ಲಿ ನೈಟ್ ಕ್ಲಬ್ ಅನುಭವವನ್ನ ಹಂಚಿಕೊಂಡಿದ್ದಾರೆ. ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಮುಂದಕ್ಕೆ ಸಾಗಿದಳು (Sanjeeda Shaikh) ಎಂದಿದ್ದಾರೆ ಸಂಜೀದಾ ಶೇಖ್.

ನಟಿ ಸಂಜೀದಾ ಶೇಖ್ ಅವರು ನೈಟ್ ಕ್ಲಬ್‌ನಲ್ಲಿದ್ದಾಗ ನಡೆದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ನಟಿ, ಸಂದರ್ಶನವೊಂದರಲ್ಲಿ, ಮಾತನಾಡಿ ʻʻನನಗೆ ಒಂದು ಘಟನೆ ಬಹಳ ನೆನಪಿದೆ. ಆದರೆ ಅದು ಹುಡುಗಿಯದು. ನಾನು ನೈಟ್‌ಕ್ಲಬ್‌ನಲ್ಲಿದ್ದೆ. ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಮುಂದಕ್ಕೆ ಸಾಗಿದಳು, ಪುರುಷರು ಅನುಚಿತವಾಗಿ ವರ್ತಿಸುವುದು ಕೇಳಿದ್ದೇವೆ. ಆದರೆ ಮಹಿಳೆಯರು ಕಡಿಮೆ ಇಲ್ಲʼʼ ಎಂದು ಹೇಳಿದ್ದಾರೆ,

ಸಂಜೀದಾ ಮಾತು ಮುಂದುವರಿಸಿ,ʻʻತಪ್ಪು ಹಾದಿಯಲ್ಲಿ ಹೋಗಿದ್ದರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇಲ್ಲ ಎಂದಿದ್ದಾರೆ. ಖಾಸಗಿ ಭಾಗ ಟಚ್ ಮಾಡುವುದು ತಪ್ಪು. ಅದು ಯಾರೇ ಆಗಲಿ. ನಿಮ್ಮ ಜೊತೆ ಮಹಿಳೆ ತಪ್ಪಾಗಿ ನಡೆದುಕೊಂಡಿದ್ದರೆ ಪ್ರಶ್ನೆಯನ್ನ ಮಾಡಿ” ಎಂದು ಕೂಡ ಸಂಜೀದಾ ಶೇಖ್ ಹೇಳಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಅದೇ ಸಂದರ್ಶನದಲ್ಲಿ ಸಂಜೀದಾ ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾರೆ. “ನನಗೆ ಈಗ ಏನೇ ಸಂಭವಿಸಿದರೂ ನಾನು ಅದೃಷ್ಟಶಾಲಿ. ಬಹುಶಃ ನಾನು ಖಿನ್ನತೆಗೆ ಒಳಗಾದ ವ್ಯಕ್ತಿ. ಪ್ರತಿ ಸಂಬಂಧದಲ್ಲಿ ನೀವು ಸಂತೋಷವಾಗಿರುವ ಹಂತಗಳಿವೆ. ಖುಷಿ ಇಲ್ಲದ ಹಂತಗಳು ಇವೆ. ಆದರೆ ನಿಮಗೆ ನೀವು ಮೊದಲು ಆದ್ಯತೆ ಕೊಟ್ಟುಕೊಳ್ಳಿʼʼಎಂದರು.

ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಕೂಡ ಕಾಣಿಸಿಕೊಂಡರು ಸಂಜೀದಾ . ಕಿರುತೆರೆಯತ್ತ ಮುಖ ಮಾಡಿದ್ದ ಸಂಜೀದಾ ಶೇಖ್ ಇಲ್ಲಿಯವರೆಗೆ ಹತ್ತಾರು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಬಾಲಿವುಡ್

Shah Rukh Khan: ಖ್ಯಾತ ಹಾಲಿವುಡ್‌ ನಟನಂತೆ ಕಂಡ ಶಾರುಖ್ ಖಾನ್; ವಿಡಿಯೊ ವೈರಲ್‌!

Shah Rukh Khan: ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

VISTARANEWS.COM


on

Shah Rukh Khan looks Like Johnny Depp
Koo

ಬೆಂಗಳೂರು: ಶಾರುಖ್ ಖಾನ್ ಹಾಗೂ ಮಗ ಅಬ್ರಾಮ್ ಖಾನ್ ಇಟಲಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಎರಡನೇ ವಿವಾಹ ಪೂರ್ವ ಸಮಾರಂಭದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಮಾತನಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಇದೀಗ ಚರ್ಚೆಯಲ್ಲಿರುವುದು ಶಾರುಖ್ ಅವರ ವಿಭಿನ್ನ ಲುಕ್‌. ಶಾರುಖ್‌ ಅವರ ಈ ಲುಕ್‌ ಹಾಲಿವುಡ್ ನಟ ಜಾನಿ ಡೆಪ್‌ಗೆ (Johnny Depp) ಹೋಲಿಸುತ್ತಿದ್ದಾರೆ ಫ್ಯಾನ್ಸ್‌.

ಶಾರುಖ್ ಖಾನ್ ಬಿಳಿ ಸ್ಕಾರ್ಫ್ ಜತೆ ನೀಲಿ ಸೂಟ್ ಧರಿಸಿದ್ದರು. ಜಾನಿ ಡೆಪ್ ನೆನಪಿಸುವಂತೆ ಇತ್ತು ಶಾರುಖ್‌ ಹೇರ್‌ಸ್ಟೈಲ್‌. ʻಪೈರೇಟ್ಸ್ ಆಫ್ ದಿ ಕೆರೆಬಿಯನ್’ ಚಿತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ ಜಾನಿ ಡೆಪ್. ಇಟಲಿಯ ರೋಮ್‌ನಲ್ಲಿ ಇತ್ತೀಚೆಗೆ ನಡೆದ ಅಂಬಾನಿ ಪಾರ್ಟಿಯಲ್ಲಿ ಶಾರುಖ್ ಭಾಗಿಯಾಗಿದ್ದರು. ಕುಟಂಬದ ಜತೆ ಸಖತ್‌ ಎಂಜಾಯ್‌ ಮಾಡಿದ್ದಾರೆ ಶಾರುಖ್‌. ಮಾರ್ಚ್ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಅದ್ಧೂರಿ ವಿವಾಹ ಪೂರ್ವ ಆಚರಣೆಯ ನಂತರ, ಅಂಬಾನಿ ಕುಟುಂಬವು ಯುರೋಪ್‌ನಲ್ಲಿ ಕ್ರೂಸ್‌ ಪಾರ್ಟಿ ಆಯೋಜಿಸಿತ್ತು.

ಶಾರುಖ್, ರಣಬೀರ್ ಮತ್ತು ಅವರ ಕುಟುಂಬದವರಲ್ಲದೆ, ಸಲ್ಮಾನ್ ಖಾನ್, ಸಾರಾ ಅಲಿ ಖಾನ್, ಕರೀನಾ ಕಪೂರ್, ಇಬ್ರಾಹಿಂ ಅಲಿ ಖಾನ್, ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಕರಣ್ ಜೋಹರ್, ದಿಶಾ ಪಟಾನಿ ಮತ್ತು ಕರಿಷ್ಮಾ ಕಪೂರ್ ಐಷಾರಾಮಿ ಕ್ರೂಸ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.

Continue Reading
Advertisement
Bagalkot Lok Sabha Constituency
ಪ್ರಮುಖ ಸುದ್ದಿ17 mins ago

Bagalkot Lok Sabha Constituency: ಬಿಜೆಪಿಯ ಭದ್ರಕೋಟೆ ಭೇದಿಸುವರೇ ಸಂಯುಕ್ತಾ ಪಾಟೀಲ್?

karnataka weather Forecast Putur rain
ಮಳೆ34 mins ago

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

IND vs PAK
ಕ್ರಿಕೆಟ್52 mins ago

IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

Bangalore Rain
ಪ್ರಮುಖ ಸುದ್ದಿ59 mins ago

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Stock Market
ವಾಣಿಜ್ಯ1 hour ago

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Dharwad Lok Sabha Constituency
ಧಾರವಾಡ1 hour ago

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Anant Ambani Radhika Merchant Pre Wedding
ಫ್ಯಾಷನ್2 hours ago

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

Vijaypur Lok Sabha Constituency
ವಿಜಯಪುರ2 hours ago

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

IND vs PAK
ಕ್ರಿಕೆಟ್2 hours ago

IND vs PAK: ಸ್ನೈಪರ್ ಗನ್​ ಕಣ್ಗಾವಲಿನಲ್ಲಿ ಭಾರತ-ಪಾಕ್ ಟಿ20​ ವಿಶ್ವಕಪ್​ ಪಂದ್ಯ

Lok Sabha Election Result 2024
ದೇಶ2 hours ago

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌