Ranbir Kapoor: ರಣಬೀರ್ ಕಪೂರ್ ಸಿನಿಮಾಗೆ ʻಎʼ ಸರ್ಟಿಫಿಕೇಟ್‌; ಸಿನಿಮಾ ಅವಧಿ ಇಷ್ಟೊಂದು! - Vistara News

ಬಾಲಿವುಡ್

Ranbir Kapoor: ರಣಬೀರ್ ಕಪೂರ್ ಸಿನಿಮಾಗೆ ʻಎʼ ಸರ್ಟಿಫಿಕೇಟ್‌; ಸಿನಿಮಾ ಅವಧಿ ಇಷ್ಟೊಂದು!

Ranbir Kapoor: ‘ಅನಿಮಲ್’ ಸಿನಿಮಾ ರನ್‌ಟೈಮ್‌ 3 ಗಂಟೆ 21 ನಿಮಿಷಗಳು ಆಗಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಕೂಡ ಅಂದೇ ದಿನ ಬಿಡುಗಡೆಯಾಗುತ್ತಿದ್ದು, ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗುತ್ತಿವೆ.

VISTARANEWS.COM


on

Ranbir Kapoor Animal gets A certificate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ರಣಬೀರ್ ಕಪೂರ್ (Ranbir Kapoor) ಅವರ ಚಿತ್ರ, ‘ಅನಿಮಲ್’, ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಇದೀಗ ಸಿನಿಮಾಗೆ ʻಎʼ ಸರ್ಟಿಫಿಕೇಟ್‌ ದೊರಕಿದೆ. ಇದರ ರನ್‌ಟೈಮ್ ಕೂಡ 3 ಗಂಟೆಗಳಿಗಿಂತ ಹೆಚ್ಚು ಎಂದು ತಿಳಿದುಬಂದಿದೆ. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರಕ್ಕೆ ಸಿಬಿಎಫ್‌ಸಿ ‘ಎ’ ಪ್ರಮಾಣಪತ್ರವನ್ನು ನೀಡಿದೆ ಎಂದು ಚಿತ್ರ ನಿರ್ಮಾಪಕರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ‘ಅನಿಮಲ್’ ಸಿನಿಮಾ ರನ್‌ಟೈಮ್‌ 3 ಗಂಟೆ 21 ನಿಮಿಷಗಳು ಆಗಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಕೂಡ ಅಂದೇ ದಿನ ಬಿಡುಗಡೆಯಾಗುತ್ತಿದ್ದು, ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗುತ್ತಿವೆ.

ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿದೆ.

ಇದನ್ನೂ ಓದಿ: Ranbir Kapoor: ಬುರ್ಜ್ ಖಲೀಫಾದಲ್ಲಿ ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಪ್ರಿವ್ಯೂ!

ಇದನ್ನೂ ಓದಿ: Ranbir Kapoor: ಬುರ್ಜ್ ಖಲೀಫಾದಲ್ಲಿ ರಣಬೀರ್ ಕಪೂರ್ ಅಭಿನಯದ ʻಅನಿಮಲ್‌ʼ ಪ್ರಿವ್ಯೂ!

ಸ್ಯಾಮ್ ಬಹದ್ದೂರ್

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಸ್ಯಾಮ್‌ ಮಾಣೆಕ್‌ ಶಾ ಪಾತ್ರವನ್ನೇ ವಿಕ್ಕಿ ನಿರ್ವಹಿಸಿದ್ದಾರೆ. ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

ಬಾಲಿವುಡ್ ನ ಆದರ್ಶ ಜೋಡಿಯಲ್ಲಿ ಶಾರುಖ್ ಮತ್ತು ಗೌರಿ ಅವರೂ ಸೇರಿದ್ದಾರೆ. ಈ ಜೋಡಿ ಮದುವೆಯಾಗಿ 33 ವರ್ಷಗಳಾಗಿದ್ದು ಮೂವರು ಮಕ್ಕಳ ಪೋಷಕರಾಗಿದ್ದರೆ. ಧರ್ಮದ ವಿಚಾರದಲ್ಲಿ ಗೌರಿ (Gauri Khan) ಈಗಲೂ ಹಿಂದುವಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ಅವರೇ ಹೇಳಿದ್ದಾರೆ.

VISTARANEWS.COM


on

By

Gauri Khan
Koo

ಬಾಲಿವುಡ್ ನ (bollywood) ಆದರ್ಶ ದಂಪತಿಗಳ ಸಾಲಿನಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan), ಗೌರಿ ಖಾನ್ (Gauri Khan) ದಂಪತಿಯೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರಿಬ್ಬರ ನಡುವಿನ ಪ್ರೀತಿ ಮತ್ತು ಹೊಂದಾಣಿಕೆ. ಇದು ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಂತೆ ಮಾಡಿದೆ.

ಅಭಿಮಾನಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವ ಈ ದಂಪತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾನು ನಿಮ್ಮೊಂದಿಗೆ ಬೆಳೆಯಲು ಬಯಸುತ್ತೇನೆ ಎಂದು ಹೇಳಿ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ.

ಗೌರಿ ಮತ್ತು ಶಾರುಖ್ ಖಾನ್ ಅವರ ಧರ್ಮ ಬೇರೆಬೇರೆಯಾದರೂ ಇದು ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮದುವೆಯ ಮೊದಲು ಕೆಲವು ತೊಂದರೆಗಳು ಎದುರಾದರೂ ಮದುವೆಯ ಬಳಿಕ ದಂಪತಿ ಎಂದರೆ ಹೀಗಿರಬೇಕು ಎನ್ನುವಷ್ಟು ಇವರಿಬ್ಬರೂ ಮಾದರಿಯಾಗಿದ್ದಾರೆ.

ಕಿಂಗ್ ಖಾನ್ ಮೊದಲಿನಿಂದಲೂ ತನ್ನ ರಾಣಿಗೆ ಆದರ್ಶ ಪತಿ. ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಮದುವೆಯಾದ ಬಳಿಕ ಗೌರಿ ಮುಸ್ಲಿಂ ಆಗಿ ಮತಾಂತರವಾಗುತ್ತಾರೆ ಎನ್ನುವ ಹೇಳಿಕೆಗಳು ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ಅವರಿಗೂ ಪದೇಪದೇ ತಾವು ಮುಸ್ಲಿಂ ಆಗಿ ಮತಾಂತರಗೊಳ್ಳುವುದಿಲ್ಲ ಎಂದು ಹೇಳಬೇಕಾದ ಸಂದರ್ಭಗಳು ಎದುರಾಗಿತ್ತು.

ಇತ್ತೀಚೆಗೆ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್‌ನಲ್ಲಿಹೃತಿಕ್ ರೋಷನ್ ಅವರ ಪತ್ನಿ ಸುಸ್ಸಾನ್ನೆ ಖಾನ್ ಅವರೊಂದಿಗೆ ಗೌರಿ ಆಗಮಿಸಿದ್ದರು. ಅಲ್ಲಿ ಗೌರಿ ಮುಸ್ಲಿಂ ಆಗಿ ಮತಾಂತರಗೊಳ್ಳದಿರುವ ಕುರಿತು ಚರ್ಚೆ
ನಡೆದಿತ್ತು.

ಯಾಕೆ ಮತಾಂತರವಾಗಲಿಲ್ಲ?

ಶಾರುಖ್ ಖಾನ್ ಅವರ ಧರ್ಮಕ್ಕೆ ನಾನು ಮತಾಂತರವಾಗುವುದಿಲ್ಲ ಎಂದು ಗೌರಿ ಖಾನ್ ಹೇಳಿರುವ ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡಿದೆ. ಇದರಲ್ಲಿ ಅವರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಉಳಿಯಲು ಕಾರಣವನ್ನೂ ಕೊಟ್ಟಿದ್ದಾರೆ.

ನಮ್ಮಿಬ್ಬರ ಮಧ್ಯೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಮತ್ತು ಅವರೂ ನನ್ನ ಧರ್ಮವನ್ನು ಗೌರವಿಸುತ್ತಾರೆ. ಹೀಗಾಗಿ ನಾನು ಮತಾಂತರಗೊಂಡು ಮುಸ್ಲಿಂ ಆಗಬೇಕು ಈ ಎನ್ನುವುದರಲ್ಲಿ ಅರ್ಥವಿಲ್ಲ. ಪರಸ್ಪರ ಜೊತೆಯಾಗಿ ಬಾಳಲು ಅದು ಅನಿವಾರ್ಯ ಎಂಬುದನ್ನು ನಾನು ನಂಬುವುದಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?


ಶಾರುಖ್‌ನಂತೆ ನನ್ನ ಧರ್ಮವನ್ನು ಯಾವತ್ತೂ ಅಗೌರವಗೊಳಿಸುವುದಿಲ್ಲ. ಮಗ ಆರ್ಯನ್ ತನ್ನ ತಂದೆಯ ಧರ್ಮವನ್ನು ಅನುಸರಿಸುತ್ತಾನೆ. ಆರ್ಯನ್ ಗೆ ಶಾರುಖ್‌ ಎಂದರೆ ತುಂಬಾ ಇಷ್ಟ.ಹೀಗಾಗಿ ಆತ ಅವರ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಮುಸ್ಲಿಂ ಎಂದು ಅವರಿಬ್ಬರು ಯಾವಾಗಲೂ ಹೇಳುತ್ತಿರುತ್ತಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ ಗೌರಿ ಖಾನ್.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 33 ವರ್ಷಗಳಾಗಿವೆ. ಬಾಲಿವುಡ್‌ನ ಈ ಸುವರ್ಣ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳಿದ್ದಾರೆ.

Continue Reading

ಕ್ರಿಕೆಟ್

Andre Russell Dance: ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ‘ಲುಟ್ ಪಟ್ ಗಯಾ’ ಹಾಡಿಗೆ ಡ್ಯಾನ್ಸ್​ ಮಾಡಿದ ಆ್ಯಂಡ್ರೆ ರಸೆಲ್​

Andre Russell Dance: ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

VISTARANEWS.COM


on

Andre Russell Dance:
Koo

ಮುಂಬಯಿ: ಭಾನುವಾರ(ಮೇ 26) ನಡೆದಿದ್ದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಗೆಲುವಿನ ಬಳಿಕ ಕೆಕೆಆರ್​ ತಂಡ ಪಬ್​ನಲ್ಲಿ ಪಾರ್ಟಿ ಮಾಡಿತ್ತು. ಇದೇ ವೇಳೆ ಆ್ಯಂಡ್ರೆ ರಸೆಲ್(Andre Russell Dance)​ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ(Ananya Pandey) ಜತೆ ಶಾರೂಖ್ ಖಾನ್ ಅಭಿನಯದ ಡಂಕಿ ಚಿತ್ರದ​ ‘ಲುಟ್ ಪಟ್ ಗಯಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್​ ಖಾನ್​ ನಟನೆಯ(Shah Rukh Khan) ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ವೆಸ್ಟ್​ ಇಂಡೀಸ್​ ತಂಡ ಸ್ಫೋಟಕ ಬ್ಯಾಟರ್​ ರಸೆಲ್(Andre Russell) ಬಾಲಿವುಡ್​ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ವಿಡಿಯೊ ಕೂಡ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ​’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಮೇ 9 ರಂದು ಬಿಡುಗಡೆಯಾಗಿತ್ತು.

ಈ ಹಾಡಿನಲ್ಲಿ ರಸೆಲ್​ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚುವ ಜತೆಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ಮೂರನೇ ಟ್ರೋಫಿ ಗೆದ್ದ ಕೆಕೆಆರ್​


ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ನೀರಸ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ 18.3 ಓವರ್​ಗಳಲ್ಲಿ 113 ರನ್​ಗೆ ಸರ್ವಪತನ ಕಂಡಿತು. ಈ ಅಲ್ಪ ಮೊತ್ತವನ್ನು ಚೇಸಿಂಗ್​ ನಡೆಸಿದ ಕೆಕೆಆರ್​ ಕೇವಲ 10.3 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಬಾರಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇದು ಕೆಕೆಆರ್​ಗೆ ಒಲಿದ ಮೂರನೇ ಐಪಿಎಲ್​ ಟ್ರೋಫಿ.

Continue Reading

ಬಾಲಿವುಡ್

Dhadak 2: ‘ಧಡಕ್ 2’ ಸಿನಿಮಾ ಅನೌನ್ಸ್‌ ಮಾಡಿದ ಕರಣ್‌ ಜೋಹರ್: ʻಅನಿಮಲ್‌ʼ ನಟಿ ನಾಯಕಿ!

Dhadak 2:ಕರಣ್‌ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ನಿರ್ದೇಶಿಸಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

VISTARANEWS.COM


on

Karan Johar announces Dhadak 2
Koo

ಬೆಂಗಳೂರು:  ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar ) ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕರಣ್ ಜೋಹರ್ ತಮ್ಮ ಹೊಸ ಚಿತ್ರಕ್ಕೆ ‘ಧಡಕ್ 2’ (Dhadak 2) ಎಂದು ಹೆಸರಿಟ್ಟಿದ್ದಾರೆ. ಕರಣ್‌ ಜೋಹರ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ʻಅನಿಮಲ್‌ʼ ಸಿನಿಮಾ ಖ್ಯಾತಿಯ ತೃಪ್ತಿ ಡಿಮ್ರಿ ನಟಿಸಲಿದ್ದಾರೆ. ಶಾಜಿಯಾ ಇಕ್ಬಾಲ್ ನಿರ್ದೇಶಿಸಲಿದ್ದಾರೆ.

ʻಗಲ್ಲಿ ಬಾಯ್’ ಖ್ಯಾತಿಯ ಸಿದ್ಧಾಂತ್​ ಚತುರ್ವೇದಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ‘ಧಡಕ್​ 2’ ಸಿನಿಮಾದಲ್ಲಿ ಜಾತಿಯ ಕುರಿತಾದ ಕಹಾನಿ ಇರಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.ಕರಣ್​ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ‘ಧಡಕ್​ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಕರಣ್ ಜೋಹರ್ “ಒಂದು ಕಾಲದಲ್ಲಿ ಒಬ್ಬನಿದ್ದ ರಾಜ, ಒಬ್ಬಳಿದ್ದಳು ರಾಣಿ. ಆದರೆ ಅವರಿಬ್ಬರದ್ದೂ ಬೇರೆ ಜಾತಿ. ಕಥೆ ಮುಗಿಯಿತುʼʼಎಂದು ವಿಡಿಯೊ ಜತೆ ಕ್ಯಾಪ್ಞನ್‌ ಶೇರ್‌ ಮಾಡಿಕೊಂಡಿದ್ದಾರೆ. ಧಡಕ್ 2 ಚಿತ್ರಮಂದಿರಗಳಲ್ಲಿ 2024ರ ನವೆಂಬರ್‌ 22ರಂದು ಬಿಡುಗಡೆಯಾಗುತ್ತಿದೆ.

ಜೀ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್ ಮತ್ತು ಕ್ಲೌಡ್ 9 ಪಿಕ್ಚರ್ಸ್ ನಿರ್ಮಿಸಿರುವ ‘ಧಡಕ್ 2’ ಸಿದ್ಧಾಂತ್ ಚತುರ್ವೇದಿ ಮತ್ತು ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2018ರಲ್ಲಿ ಕರಣ್​ ಜೋಹರ್​ ನಿರ್ಮಾಣ ಮಾಡಿದ್ದ ‘ಧಡಕ್​’ ಸಿನಿಮಾದಲ್ಲಿ ಕೂಡ ಜಾತಿಗೆ ಸಂಬಂಧಿಸಿದ ಕಥೆ ಇತ್ತು. ಆ ಸಿನಿಮಾ ಮೂಲಕ ನಟಿ ಜಾನ್ವಿ ಕಪೂರ್​ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದರು. ಅದು ಮರಾಠಿಯ ‘ಸೈರಾಟ್​’ ಸಿನಿಮಾದ ರಿಮೇಕ್​ ಆಗಿತ್ತು.

ಇದನ್ನೂ ಓದಿ: Sahara Movie Trailer: ಕ್ರಿಕೆಟ್ ಆಧಾರಿತ `ಸಹಾರಾ’ ಸಿನಿಮಾ ಟ್ರೈಲರ್‌ ಔಟ್‌ ಮಾಡಿದ RCB ಮಾಜಿ ಆಟಗಾರ

ಕರಣ್‌ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ನಿರ್ದೇಶಿಸಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Continue Reading

ಬಾಲಿವುಡ್

Munawar Faruqui: ಮತ್ತೊಂದು ಮದುವೆಯಾದರಾ ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ?

Munawar Faruqui: ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ತಮ್ಮ ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

VISTARANEWS.COM


on

Munawar Faruqui gets married for second timeʼ Munawar Faruqui gets married for second timeʼ
Koo

ಬೆಂಗಳೂರು: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ (Munawar Faruqui)  ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮೆಹಜಬೀನ್ ಕೋಟ್ವಾಲಾ (Mehzabeen Coatwala) ಅವರನ್ನು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮುನಾವರ್ ಮದುವೆಯಲ್ಲಿ ಅವರ ಆತ್ಮೀಯರು ಮಾತ್ರ ಹಾಜರಿದ್ದರು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಮುಂಬೈನ ಐಟಿಸಿ ಗ್ರ್ಯಾಂಡ್ ಮರಾಠಾದಲ್ಲಿ ಆರತಕ್ಷತೆಯನ್ನು ಕೂಡ ಆಯೋಜಿಸಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮುನಾವರ್ ಅವರ ಸ್ನೇಹಿತ-ನಟ ಹಿನಾ ಖಾನ್ ಈ ಸಮಾರಂಭಕ್ಕೆ ಆಹ್ವಾನಿತರಾದವರಲ್ಲಿ ಒಬ್ಬರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಿನಾ ಈ ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಹಿಂದೆ ಬಿಗ್‌ ಬಾಸ್‌ನಲ್ಲಿ ಆಯೇಷಾ ಖಾನ್‌ ತಮಗೆ ಮೋಸ ಮಾಡಿದ್ದಾರೆ ಎಂದು ಮುನಾವರ್ ಹೇಳಿಕೊಂಡಿದ್ದರು. 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು.

ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಆಸ್ಪತ್ರೆಗೆ ದಾಖಲು

ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

ಏ. 10ರ ಮಧ್ಯರಾತ್ರಿ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಮೇಲೆ ರೆಸ್ಟೋರೆಂಟ್ ಮಾಲೀಕರು ಮೊಟ್ಟೆ ಎಸೆದಿದ್ದರು. ಆರೋಪಿಗಳು ಮುನಾವರ್ ಫಾರೂಕಿ ಅವರನ್ನು ಮಿನಾರಾ ಮಸೀದಿ ಪ್ರದೇಶದ ತಮ್ಮ ರೆಸ್ಟೋರೆಂಟ್‌ ಇಫ್ತಾರ್‌ಗೆ ಆಹ್ವಾನಿಸಿದ್ದರು. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ತಿರದ ಮತ್ತೊಂದು ಉಪಾಹಾರ ಗೃಹಕ್ಕೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡು ಮುನಾವರ್ ಫಾರೂಕಿ ಮೇಲೆ ಮೇಲೆ ಮೊಟ್ಟೆಗಳನ್ನು ಎಸೆದಿರುವುದಾಗಿ ವರದಿಯಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯ ವಿರುದ್ಧ ಪೈದೋನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿತ್ತು.

Continue Reading
Advertisement
Bomb Threat
ಪ್ರಮುಖ ಸುದ್ದಿ5 mins ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ18 mins ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ21 mins ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ53 mins ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ54 mins ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ58 mins ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ58 mins ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

MLA Belur Gopalakrishna latest statement in Hosnagara
ಶಿವಮೊಗ್ಗ1 hour ago

MLC Election: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಖಚಿತ: ಬೇಳೂರು

Toyota Technical Training Institute students Excellent performance in India Skills Competition 2024
ಕರ್ನಾಟಕ1 hour ago

Toyota: ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ 2024; ಟಿಟಿಟಿಐ ವಿದ್ಯಾರ್ಥಿಗಳ ಉತ್ತಮ ಸಾಧನೆ

World Menstrual Hygiene Day in Hosapete
ಆರೋಗ್ಯ1 hour ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು11 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌