Animal Movie: ರಣವೀರ್‌ ಕಪೂರ್‌ ತುಟಿಗೆ ತುಟಿ ಒತ್ತಿದ ರಶ್ಮಿಕಾ ಮಂದಣ್ಣ; ಮುತ್ತಿನ ಸುರಿಮುಳೆಯ ಹಾಡು ಔಟ್‌! Vistara News

ಬಾಲಿವುಡ್

Animal Movie: ರಣವೀರ್‌ ಕಪೂರ್‌ ತುಟಿಗೆ ತುಟಿ ಒತ್ತಿದ ರಶ್ಮಿಕಾ ಮಂದಣ್ಣ; ಮುತ್ತಿನ ಸುರಿಮುಳೆಯ ಹಾಡು ಔಟ್‌!

Animal song Hua Main: ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ, ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ.

VISTARANEWS.COM


on

Rashmika Mandanna kisses Ranbir Kapoor
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ (Ranbir Kapoor) ನಟನೆಯ ಅನಿಮಲ್‌ (Animal) ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕ್ಯಾರಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ಚಿತ್ರತಂಡ  ʼಹುವಾ ಮೈನ್‌ʼ ಹಾಡನ್ನು (Animal song Hua Main) ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ.

ರಶ್ಮಿಕಾ ಮಂದಣ್ಣ ಅವರು ಬಾಯ್‌ಫ್ರೆಂಡ್ ಮನೆಯವರು ಮದುವೆ ಒಪ್ಪದೇ ಇದ್ದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ನಮಗೆ ಹೊಸ ಐಡಿಯಾಗಳನ್ನು ನೀಡುವಂತಹ ದೃಶ್ಯಗಳು ಈ ಹಾಡಿನಲ್ಲಿದೆ. ʻಹುವಾ ಮೈನ್ʼ ಎಂಬ ಶೀರ್ಷಿಕೆಯ ಅನಿಮಲ್‌ನ ಮೊದಲ ಹಾಡಿನಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಸರಳವಾದ ಮದುವೆ ಹಾಗೂ ಲಿಪ್‌ ಲಾಕ್‌ ಪ್ರಮುಖ ಹೈಲೈಟ್‌.

ಅನಿಮಲ್‌ ಸಿನಿಮಾದ ಈ ಹಾಡು ನೋಡಿದಾಗ ರಶ್ಮಿಕಾ ಮಂದಣ್ಣ ತುಂಬ ಬೋಲ್ಡ್‌ ಆಗಿ ನಟಿಸಿರುವಂತೆ ಕಾಣುತ್ತದೆ. ಪ್ಯಾನ್‌ ಇಂಡಿಯಾ ಚಿತ್ರವಾಗಿ ಇದು ತೆರೆಗೆ ಬರಲಿದೆ. ಹಿಂದಿಯಲ್ಲಿ ʼಹುವಾ ಮೈನ್‌ʼ, ತೆಲುಗಿನಲ್ಲಿ ʼಅಮ್ಮಾಯಿʼ, ತಮಿಳಿನಲ್ಲಿ ʼನೀ ವಾಡಿʼ, ಮಲೆಯಾಳಂನಲ್ಲಿ ʼಪೆನ್ನಾಳೆʼ ಮತ್ತು ಕನ್ನಡದಲ್ಲಿ ʼಓ ಬಾಲೆʼ ಟೈಟಲ್‌ನಲ್ಲಿ ಹಾಡು ಇದೀಗ ರಿಲೀಸ್‌ ಆಗಿದೆ. . ರಣಬೀರ್‌ ಕಪೂರ್‌ ತಂದೆಯಾಗಿ ಅನಿಲ್‌ ಕಪೂರ್‌ ಕಾಣಿಸಿಕೊಂಡಿದ್ದಾರೆ. ಸನ್ನಿ ಡಿಯೋಲ್‌ ಮುಖ್ಯ ಖಳನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ʼʼಇದು ಕ್ರೈಮ್‌ ಡ್ರಾಮ ಮತ್ತು ತಂದೆ-ಮಗನ ಕಥೆ ಹೇಳುತ್ತದೆ. ಅಭಿಮಾನಿಗಳು ನಿರೀಕ್ಷಿಸದ ರೀತಿ ನನ್ನ ಪಾತ್ರ ಮೂಡಿ ಬಂದಿದೆ. ನನ್ನ ಪಾತ್ರಕ್ಕೆ ಸ್ವಲ್ಪ ನೆಗೆಟಿವ್‌ ಛಾಯೆಯೂ ಇದೆʼʼ ಎಂದು ರಣಬೀರ್‌ ಕಪೂರ್‌ ಹೇಳಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: Animal Movie: ನಟ ರಣಬೀರ್‌ ಜತೆ ಲಿಪ್‌ಲಾಕ್‌ ಮಾಡಿದ ರಶ್ಮಿಕಾ; ಕಿಚ್ಚು ಹಚ್ಚಿದ ಅನಿಮಲ್‌ ಚಿತ್ರದ ಪೋಸ್ಟರ್‌

ಡಿಸೆಂಬರ್‌ 1ರಂದು ತೆರೆಗೆ

ತೆಲುಗಿನ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ʼವಾರಿಸುʼ ಚಿತ್ರದ ಮೂಲಕ ಈ ವರ್ಷಾರಂಭದಲ್ಲಿ ಗೆಲುವು ದಾಖಲಿಸಿದ್ದ ರಶ್ಮಿಕಾ ಮಂದಣ್ಣ ಕೂಡ ʼಅನಿಮಲ್‌ʼ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಅಮಿತಾಬ್‌ ನಟನೆಯ ʼಗುಡ್‌ ಬೈʼ ಸಿನಿಮಾ ಮೂಲಕ ಭರ್ಜರಿಯಾಗಿ ಬಾಲಿವುಡ್‌ ಪ್ರವೇಶಿಸಿದ್ದ ರಶ್ಮಿಕಾಗೆ ಆ ಚಿತ್ರದ ಮೂಲಕ ನಿರೀಕ್ಷಿತ ಗೆಲುವು ದಕ್ಕಿರಲಿಲ್ಲ. ಬಳಿಕ ಸಿದ್ಧಾರ್ಥ್‌ ಮಲ್ಹೋತ್ರಾ ಜತೆಗೆ ನಟಿಸಿದ್ದ ʼಮಿಷನ್‌ ಮಜ್ನುʼ ಒಟಿಟಿ ಮೂಲಕ ರಿಲೀಸ್‌ ಆಗಿತ್ತು. ಇತ್ತ ರಣಬೀರ್‌ ಕಪೂರ್‌ ಕೂಡ ದೊಡ್ಡದೊಂದು ಗೆಲುವಿಗೆ ಕಾಯುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ʼಬ್ರಹ್ಮಾಸ್ತ್ರ ʼ ಚಿತ್ರ ಸಾಧಾರಣ ಯಶಸ್ವಿಯಾಗಿತ್ತು. ಈ ವರ್ಷ ಬಿಡುಗಡೆಯಾದ ʼತು ಜೂಟಿ ಮೆ ಮಕ್ಕಾರ್‌ʼ ಚಿತ್ರ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಲವ್‌ ರಂಜನ್‌ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಕನ್ನಡ ಚಿತ್ರಗಳನ್ನು ನಿರಾಕರಿಸುತ್ತಿರುವ ಒಟಿಟಿ ವೇದಿಕೆಗಳು: ರಿಷಬ್ ಶೆಟ್ಟಿ ಆರೋಪ

Acotr Rishab Shetty: ಚಂದಾದಾರರು ಇಲ್ಲ ಎಂಬ ಕಾರಣ ನೀಡಿ ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ಖರೀದಿಸುತ್ತಿಲ್ಲ ಎಂದು ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆರೋಪಿಸಿದ್ದಾರೆ.

VISTARANEWS.COM


on

OTT are not open to Kannada Films Says Actor Rishab Shetty
Koo

ಪಣಜಿ, ಗೋವಾ: ಒಟಿಟಿ ವೇದಿಕೆಗಳು (OTT Platforms) ಕನ್ನಡ ಚಿತ್ರರಂಗಕ್ಕೆ (Kannada Film Industry) ಮುುಕ್ತವಾಗಿಲ್ಲ ಎಂದು ‘ಕಾಂತಾರ’ ಚಿತ್ರದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Actor Rishab Shetty) ಅವರು ಆರೋಪಿಸಿದ್ದಾರೆ. ಗೋವಾದಲ್ಲಿ (Goa State) ಆಯೋಜಿಸಲಾಗಿರುವ 54ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (IFFI) ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಅವರು, ಒಟಿಟಿಗಳ ತಾರತಮ್ಯ ನೀತಿಯನ್ನು ಖಂಡಿಸಿದರು.

ಒಟಿಟಿ ವೇದಿಕೆಗಳು ಕನ್ನಡ ಚಿತ್ರರಂಗಕ್ಕೆ ಮುಕ್ತವಾಗಿಲ್ಲ(Kannada Cinema). ಇದೊಂದು ತುಂಬ ಕೆಟ್ಟ ಸಂಕೇತವಾಗಿದೆ. ಕನ್ನಡದಲ್ಲಿ ಚಂದಾದಾರರು ಇಲ್ಲ. ಈ ಕುರಿತು ನೋಡುತ್ತೇವೆ ಎನ್ನುತ್ತಿವೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಕನ್ನಡದಲ್ಲಿ ಎರಡು ನಿರ್ಮಾಣ ಸಂಸ್ಥೆಗಳು ಸಕ್ರಿಯವಾಗಿದ್ದವು. ರಕ್ಷಿತ್ ಶೆಟ್ಟಿ ಅವರ ಪರಮವಾಹ ಸ್ಟುಡಿಯೋ ಮತ್ತು ನನ್ನ ರಿಷಬ್ ಶೆಟ್ಟಿ ಫಿಲ್ಮ್ ನಿರಂತರಾಗಿ ಕೆಲಸ ಮಾಡುತ್ತಿದ್ದವು. ಇವುಗಳ ಹೊರತಾಗಿಯೂ ಕೆಲವು ನಿರ್ಮಾಣ ಸಂಸ್ಥೆಗಳು ಚಿತ್ರಗಳನ್ನು ತಯಾರಿಸುತ್ತಿದ್ದವು. ನಾವು ನಿರಂತರವಾಗಿ ಫಿಲ್ಮ್ ಫೆಸ್ಟಿವಲ್ ಮಾಡುತ್ತಿದ್ದೇವೆ. ಆದರೂ, ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ರಿಷಬ್ ಶೆಟ್ಟಿ ಆರೋಪಿಸಿದರು.

ಇದೇ ವೇಳೆ, ಐಎಫ್‌ಎಫ್ಐ ಮತ್ತು ಅದರ ಪ್ರಾಯೋಜಕರಿಗೆ ಮನವಿ ಮಾಡಿಕೊಂಡು ರಿಷಬ್ ಶೆಟ್ಟಿ ಅವರು ಕನ್ನಡ ಚಿತ್ರಗಳಿಗೆ ಮನ್ನಣೆ ನೀಡಿ ಎಂದು ಹೇಳಿದರು.

ಒಟಿಟಿಗಳ ತಾರತಮ್ಯ ನೀತಿಯಲ್ಲಿ ಹಿನ್ನೆಲೆಯಲ್ಲಿ ನಾನು ಐಎಫ್ಎಫ್ಐ ಮತ್ತು ಅದರ ಪ್ರಾಯೋಜಕರಿಗೆ ನಮ್ಮ ಚಲನಚಿತ್ರಗಳಿಗೆ ಮನ್ನಣೆ ನೀಡುವಂತೆ ವಿನಂತಿಸಲು ಬಯಸುತ್ತೇನೆ. ಥಿಯೇಟರ್‌ಗಳಲ್ಲಿ ಕಡಿಮೆ ಮಾನ್ಯತೆ ಹೊಂದಿರುವ ಚಲನಚಿತ್ರಗಳು ಸಹ ಸ್ವಲ್ಪ ಮನ್ನಣೆಯನ್ನು ಪಡೆಯಬೇಕು ಮತ್ತು ಅವುಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತೆಗೆದುಕೊಳ್ಳಬೇಕು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು.

ಕಾಂತಾರ; ಚಾಪ್ಟರ್‌ 1 ಫಸ್ಟ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ

ಕಾಂತಾರʼ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಯಾವಾಗ ಎಂಬುದು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇದೀಗ ಡಿವೈನ್ಸ್‌ ಸ್ಟಾರ್‌ ತಮ್ಮ ರೌದ್ರಾವತಾರವನ್ನು ತೋರಿಸಿದ್ದಾರೆ. ಇಂಗ್ಲಿಷ್‌ನಲ್ಲಿಯೇ ಕಾಂತಾರ ಚಾಪ್ಟರ್‌ -1 ಲುಕ್ ಔಟ್ ಆಗಿದೆ. ಪ್ರತಿಕ್ಷಣವು ದೈವಿಕ ಸ್ಪರ್ಶ ನೀಡುವಂತಹ ಹಿನ್ನೆಲೆ ಧ್ವನಿಯಲ್ಲಿ ತಮ್ಮ ಅವತಾರವನ್ನು ಬಹಿರಂಗೊಳಿಸಿದ್ದಾರೆ.

ಕೆಜಿಎಫ್ ಚಾಪ್ಟರ್ 2 (KGF Chapter 2) ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೇಗೆ ಖ್ಯಾತಿ ಗಳಿಸಿತೋ ಅದೇ ರೀತಿ ಕಾಂತಾರ 2 ಕೂಡ ಅಷ್ಟೇ ಎತ್ತರದ ನಿರೀಕ್ಷೆಯನ್ನು ಹೊತ್ತುಕೊಂಡಿದೆ. ಕಾಂತಾರ-2 ಸಿನಿಮಾ ಅಪ್‌ಡೇಟ್‌ಗಾಗಿ ಸಿನಿರಸಿಕರು ಹಲವು ದಿನಗಳಿಂದ ಕಾದು ಕುಳಿತ್ತಿದ್ದರು. ಇದೀಗ ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ.

ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ವಿಶ್ವಾದ್ಯಂತ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್‌. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಈ ಸುದ್ದಿಯನ್ನೂ ಓದಿ: Rishab Shetty: ಕನ್ನಡಿಗ ಕಲಾವಿದರೇ ಮೊದಲ ಆದ್ಯತೆ ಎಂದ ರಿಷಬ್‌; ಹೇಗಿರಲಿದೆ ಕಾಂತಾರ ಚಾಪ್ಟರ್‌ 1?

Continue Reading

ದೇಶ

ಮುಂದಿನ ದಿನಗಳಲ್ಲಿ ತೆಲುಗು ಜನರು ದೇಶವನ್ನೇ ಆಳಲಿದ್ದಾರೆ; ಚರ್ಚೆ ಹುಟ್ಟು ಹಾಕಿದ ಬಿಆರ್‌ಎಸ್‌ ನಾಯಕ

Ranbir Kapoor: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಅನಿಮಲ್‌ʼ ಚಿತ್ರದ ಪ್ರಮೋಷನ್‌ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಚಿವ ಮಲ್ಲ ರೆಡ್ಡಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅದರ ವಿವರ ಇಲ್ಲಿದೆ.

VISTARANEWS.COM


on

reddy
Koo

ಹೈದರಾಬಾದ್‌: ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ ಅನಿಮಲ್‌ (Animal) ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ಆ ಪ್ರಯುಕ್ತ ಚಿತ್ರತಂಡ ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸುತ್ತಿದೆ. ಈ ಮಧ್ಯೆ ಹೈದರಾಬಾದ್‌ನಲ್ಲಿ ಚಿತ್ರತಂಡ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್‌ ರಾಷ್ಟ್ರ ಸಮಿತಿ (Bharat Rashtra Samithi-BRS) ಮುಖಂಡ, ಸಚಿವ ಚಮಕುರ ಮಲ್ಲ ರೆಡ್ಡಿ, ”ಮುಂದಿನ 5 ವರ್ಷಗಳಲ್ಲಿ ತೆಲುಗು ಮಂದಿ ಹಾಲಿವುಡ್‌, ಬಾಲಿವುಡ್‌ ಆಳಲಿದ್ದಾರೆ. ಹೀಗಾಗಿ ರಣಬೀರ್‌ ಕಪೂರ್‌ ಮುಂಬೈಯಿಂದ ಹೈದರಾಬಾದ್‌ಗೆ ಸ್ಥಳಾಂತರವಾಗಲಿದ್ದಾರೆ” ಎಂದಿದ್ದಾರೆ. ಸದ್ಯ ಅವರ ಮಾತು ವಿವಾದದ ಕಿಡಿ ಹೊತ್ತಿಸಿದ್ದು, ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಲ್ಲ ರೆಡ್ಡಿ ಹೇಳಿದ್ದೇನು?

“ಕೇಳಿ ರಣಬೀರ್ ಕಪೂರ್, ಐದು ವರ್ಷಗಳಲ್ಲಿ ಹಾಲಿವುಡ್, ಬಾಲಿವುಡ್ ಎಲ್ಲವನ್ನೂ ತೆಲುಗು ಜನರು ಆಳುತ್ತಾರೆ. ಒಂದು ವರ್ಷದ ನಂತರ ನೀವು ಹೈದರಾಬಾದ್‌ಗೆ ಸ್ಥಳಾಂತರಗೊಳ್ಳುತ್ತೀರಿ. ಯಾಕೆಂದರೆ ಮುಂಬೈ ಹಳೆಯದಾಗಿದೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇದೆ. ಹೀಗಾಗಿ ಹಿಂದೂಸ್ಥಾನವನ್ನು ಹೈದರಾಬಾದ್ ಆಳಲಿದೆʼʼ ಎಂದು ಮಲ್ಲ ರೆಡ್ಡಿ ವೇದಿಕೆ ಮೇಲೆ ಹೇಳಿದ್ದಾರೆ.

“ನಿರ್ದೇಶಕ ಎಸ್.ಎಸ್.ರಾಜಮೌಳಿ, ನಿರ್ಮಾಪಕ ದಿಲ್ ರಾಜು ಈಗಾಗಲೇ ಛಾಪು ಮೂಡಿಸಿದ್ದಾರೆ. ಇದೀಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸರದಿ. ನಮ್ಮ ಹೈದರಾಬಾದ್ ಅಗ್ರಸ್ಥಾನದಲ್ಲಿದೆ. ತೆಲುಗು ಜನರು ಸ್ಮಾರ್ಟ್. ನಮ್ಮ ನಾಯಕಿ ರಶ್ಮಿಕಾ ಮಂದಣ್ಣ ತುಂಬಾ ಸ್ಮಾರ್ಟ್. ʼಪುಷ್ಪʼ ಚಿತ್ರವು ಸಂಚಲನ ಸೃಷ್ಟಿಸಿದೆ. ಅಶ್ವಮೇಧ ಯಾಗವನ್ನು ಇಲ್ಲಿ ನಡೆಸಲಾಯಿತು. ʼಅನಿಮಲ್ʼ ಚಿತ್ರ 500 ಕೋಟಿ ರೂ. ಗಳಿಸಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಣಬೀರ್ ಕಪೂರ್‌ ಜತೆಗೆ ನಟ ಮಹೇಶ್ ಬಾಬು ಮತ್ತು ಎಸ್.ಎಸ್.ರಾಜಮೌಳಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ಮಲ್ಲ ರೆಡ್ಡಿ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. “ಅವರು ಕೇವಲ ವೋಟ್ ಬ್ಯಾಂಕ್‌ಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆʼʼ, ʼʼಅವರು ರಾಜಕಾರಣಿ. ಅವರಿಗೆ ಮತಗಳು ಬೇಕು. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆʼʼ ಎಂದು ಹಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Rashmika Mandanna: ಕನ್ನಡದಲ್ಲೇ ಮಾತನಾಡಿದ ರಶ್ಮಿಕಾ; ರಣಬೀರ್ ಮಾತಿಗೆ ಕನ್ನಡಿಗರು ಫಿದಾ!

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ. ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಅನಿಲ್‌ ಕಪೂರ್‌, ಬಾಬ್ಬಿ ಡಿಯೋಲ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಈ ಮೊದಲು ಬಿಡುಗಡೆಯಾದ ಹಾಡುಗಳಲ್ಲಿ ರಣಬೀರ್‌ ಮತ್ತು ರಶ್ಮಿಕಾ ಲಿಪ್‌ ಲಾಕ್‌ ಮಾಡುವ ಧಾರಾಳ ದೃಶ್ಯಗಳು ಕಂಡು ಬಂದಿದ್ದು, ಆ ಬಗ್ಗೆ ಚರ್ಚೆ ನಡೆದಿತ್ತು. ಈ ಸಿನಿಮಾ ಹಿಂದಿ ಜತೆಗೆ ಕನ್ನಡ, ತಮಿಳು, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡ ಕೆಲವು ದಿನಗಳಿಂದ ದೇಶದ ವಿವಿಧ ನಗರಗಳಲ್ಲಿ ಪ್ರಚಾರ ನಡೆಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Shah Rukh Khan: ʼಡಂಕಿʼಯಲ್ಲಿ ಕುಸ್ತಿ ಸೀನ್; ‘ಜವಾನ್’ ನೆನಪಿಸಿಕೊಂಡ ಫ್ಯಾನ್ಸ್‌

Shah Rukh Khan: ಶಾರುಖ್‌ ಖಾನ್‌ ಅಭಿನಯದ ʼಡಂಕಿʼ ಬಾಲಿವುಡ್‌ ಚಿತ್ರದ ಹಾಡು ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಶಾರುಖ್‌ ಖಾನ್‌ ಕುಸ್ತಿ ಮಾಡುವ ದೃಶ್ಯವಿದ್ದು, ಅವರು ಈ ಹಿಂದಿನ ʼಜವಾನ್‌ʼ ಚಿತ್ರದಲ್ಲೂ ಇಂತಹದ್ದೇ ಸೀನ್‌ನಲ್ಲಿ ಕಾಣಿಸಿಕೊಂಡಿದ್ದರು.

VISTARANEWS.COM


on

dunki
Koo

ಮುಂಬೈ: ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ (Shah Rukh Khan) ಅಭಿನಯದ ʼಡಂಕಿʼ (Dunki) ಸಿನಿಮಾದ ಕ್ರೇಜ್ ಜೋರಾಗಿದೆ. ‘ಪಠಾಣ್‌’ (Pathaan) ಮತ್ತು ‘ಜವಾನ್‌’ (Jawan) ಚಿತ್ರಗಳ ಮೂಲಕ ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದ ಶಾರುಖ್‌ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ಡಂಕಿ’ ಟೀಸರ್ ಧೂಳೆಬ್ಬಿಸಿದೆ. ʼಡಂಕಿ ಡ್ರಾಪ್ 1ʼ ಬಳಿಕ ಬಂದ ʼಡಂಕಿ ಡ್ರಾಪ್ 2ʼ ಅಂದರೆ ʼಲುಟ್ ಪುಟ್ ಗಯಾʼ ಎಂಬ ಮೆಲೋಡಿ ಹಾಡು ಎಲ್ಲರ ಗಮನ ಸೆಳೆದಿದೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ನಡುವಿನ ಈ ಪ್ರೇಮಗೀತೆ ಹಿಟ್ ಲಿಸ್ಟ್‌ ಸೇರಿದೆ. ಇದೀಗ ಈ ಹಾಡಿನ ಒಂದು ಸೀನ್ ಎಲ್ಲೆಡೆ ವೈರಲ್ ಆಗ್ತಿದ್ದು, ಕಿಂಗ್ ಖಾನ್ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

ʼಲುಟ್ ಪುಟ್ ಗಯಾʼ ಹಾಡಿನಲ್ಲಿ ಕುಸ್ತಿ ಅಖಾಡದಲ್ಲಿ ತಾಪ್ಸಿ ಶಾರುಖ್ ಎತ್ತಿ ಹಾಕುವ ದೃಶ್ಯವಿದೆ. ಅದೇ ರೀತಿ ʼಜವಾನ್ʼ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಶಾರುಖ್ ಅವರನ್ನು ಎತ್ತಿ ಕುಸ್ತಿ ಆಡುತ್ತಾರೆ. ಈ ಎರಡು ಸೀನ್ಸ್ ನೋಡಿ ಫ್ಯಾನ್ಸ್ ಕಿಂಗ್ ಖಾನ್ ಕುಸ್ತಿ ಹಿಂದೆ ಬಿದ್ದಿದ್ಯಾಕೆ ಎಂದು ಚರ್ಚೆ ನಡೆಸುತ್ತಿದ್ದಾರೆ.

‘ಡಂಕಿ’ ಬಾಲಿವುಡ್‌ನ ಯಶಸ್ವಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರುವ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ಗೆ ಕಥೆ ಹೆಣೆದಿದ್ದಾರೆ.

‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಡಿಸೆಂಬರ್ 22ಕ್ಕೆ ‘ಡಂಕಿ’ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Shah Rukh Khan: ಡಂಕಿ Vs ಸಲಾರ್: ಸ್ಕ್ರೀನ್‌ಗಳಿಗಾಗಿ ಆಫ್-ಸ್ಕ್ರೀನ್ ಫೈಟ್!

ʼಸಲಾರ್‌ʼ ಜತೆ ಕ್ಲ್ಯಾಶ್‌

ಈ ವರ್ಷದ ಬಹುದೊಡ್ಡ ಬಾಕ್ಸ್‌ ಆಫೀಸ್‌ ಕ್ಲ್ಯಾಶ್‌ಗೆ ಡಿಸೆಂಬರ್‌ ಸಾಕ್ಷಿಯಾಗಲಿದೆ. ಯಾಕೆಂದರೆ ʼಡಂಕಿʼ ತೆರೆ ಕಾಣುವ ಡಿಸೆಂಬರ್ 22ರಂದೇ ಪ್ರಭಾಸ್‌- ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಸಲಾರ್‌ʼ ಬಿಡುಗಡೆಯಾಗಲಿದೆ. ʼಸಲಾರ್‌ʼ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಪೃಥ್ವಿರಾಜ್ ಸುಕುಮಾರನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಪ್ರಭಾಸ್‌ ಸತತ ಸೋಲಿನಿಂದ ಕಂಗೆಟ್ಟಿದ್ದು, ಈ ಚಿತ್ರದ ಮೂಲಕ ಭರ್ಜರಿಯಾಗಿ ಕಂಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ. ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ಭಾರತ ಸಿನಿರಂಗದಲ್ಲೇ ಸಂಚಲನ ಸೃಷ್ಟಿಸಿದ್ದ ಪ್ರಶಾಂತ್‌ ನೀಲ್‌ ಬಹು ಎಚ್ಚರಿಕೆಯಿಂದ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಎರಡು ಪಾರ್ಟ್‌ಗಳಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ʼಕೆಜಿಎಫ್‌ʼ ಮೂಲಕ ಮೋಡಿ ಮಾಡಿದ್ದ ರವಿ ಬಸ್ರೂರ್‌ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ. ಭುವನ್‌ ಗೌಡ ಕ್ಯಾಮೆರಾ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಬಾಲಿವುಡ್

Bollywood Update: ವಿದ್ಯಾ ಬಾಲನ್‌ ಜತೆ ಅಭಿನಯಿಸಿದ್ದ ನಟನ ಪ್ರೇಮ್‌ ʼಕಹಾನಿʼಗೆ ಕಂಕಣಭಾಗ್ಯ

Bollywood Update: ಕಹಾನಿ ಬಾಲಿವುಡ್‌ ಚಿತ್ರದಲ್ಲಿ ನಟಿ ವಿದ್ಯಾ ಬಾಲನ್‌ ಜತೆ ನಟಿಸಿದ್ದ ಬಂಗಾಳಿ ನಟ ಪರಂಬ್ರತಾ ಚಟರ್ಜಿ ಸಪ್ತಪದಿ ತುಳಿದಿದ್ದಾರೆ.

VISTARANEWS.COM


on

kahaani
Koo

ಕೋಲ್ಕತ್ತಾ: 2012ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ಕಹಾನಿ (Kahaani)ಯಲ್ಲಿ ನಟಿ ವಿದ್ಯಾ ಬಾಲನ್‌ (Vidya Balan) ಜತೆ ಅಭಿನಯಿಸಿದ್ದ ನಟ ಪರಂಬ್ರತಾ ಚಟರ್ಜಿ (Parambrata Chatterjee) ತಮ್ಮ ಗೆಳತಿ, ಮಾನಸಿಕ ಆರೋಗ್ಯ ಕಾರ್ಯಕರ್ತೆ, ಗಾಯಕಿ ಪಿಯಾ ಚಕ್ರವರ್ತಿ (Piya Chakraborty) ಅವರನ್ನು ವಿವಾಹವಾಗಿದ್ದಾರೆ. ಕೋಲ್ಕತ್ತಾದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಇಬ್ಬರು ಜತೆಗಿರುವ ಫೋಟೊವನ್ನು ನಟ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಶೇರ್‌ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ (Bollywood Update).

ಪರಂಬ್ರತಾ ಚಟರ್ಜಿ ಅವರ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸಹ ಕಲಾವಿದರು ಮೆಚ್ಚುಗೆ ಸೂಚಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬಂಗಾಳಿ ಸಿನಿಮಾ ನಟಿ ಶುಭಶ್ರೀ ಗಂಗೂಲಿ, ಕಮೆಂಟ್‌ ಮಾಡಿ ʼʼಕಂಗ್ರಾಜುಲೇಷನ್ಸ್‌ʼʼ ಎಂದು ಹೇಳಿದ್ದಾರೆ. ಮತ್ತೊಬ್ಬ ಕಲಾವಿದರಾದ ಮೊನಮಿ ಘೋಷ್‌ ಕೂಡ ʼʼವ್ಹಾಹ್‌…ಅಭಿನಂದನೆಗಳುʼʼ ಎಂದು ಕಮೆಂಟ್‌ ಮಾಡಿದ್ದಾರೆ. ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಆತ್ಮೀಯರು ಸೇರಿ ಕೆಲವರಷ್ಟೇ ಹಾಜರಿದ್ದರು.

ಪ್ರಿಯಾ ಮತ್ತು ಪರಂಬ್ರತಾ ಚಟರ್ಜಿ ಸುಮಾರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಪಿಯಾ ಚಕ್ರವರ್ತಿ ಈ ಹಿಂದೆ ಸಂಗೀತ ಸಂಯೋಜಕ-ಗಾಯಕ ಅನುಪಮ್ ರಾಯ್ ಅವರನ್ನು ವಿವಾಹವಾಗಿದ್ದರು. 2015ರಲ್ಲಿ ವಿವಾಹವಾಗಿದ್ದ ಅವರು ಹೊಂದಿಕೆಯಾಗದ ಕಾರಣ 5 ವರ್ಷಗಳ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದರು. ಪರಂಬ್ರತಾ ಈ ಹಿಂದೆ ಸ್ವಸ್ತಿಕಾ ಮುಖರ್ಜಿ ಮತ್ತು ಡಚ್ ಪ್ರಜೆ ಐಕೆ ಸ್ಚೌಟೆನ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್‌ ನಡೆಸುತ್ತಿದ್ದರು. ಬಳಿಕ ಆ ಸಂಬಂಧ ಮುರಿದು ಬಿದ್ದಿತ್ತು.

ಪರಂಬ್ರತ ಚಟರ್ಜಿ ಮೂಲತಃ ಬಂಗಾಳಿ ಕಲಾವಿದ. ಬಂಗಾಳಿ ಸೀರಿಯಲ್‌, ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 2002ರಲ್ಲಿ ತೆರೆಕಂಡ ರಾಷ್ಟ್ರೀಯ ಚಲನಚಿತ್ರ ಪುರಸ್ಕೃತ ಬಂಗಾಳಿ ಸಿನಿಮಾ ʼಹೇಮಂತರ್‌ ಪಖಿʼ ಮೂಲಕ ಬಣ್ಣ ಚಿತ್ರರಂಗ ಪ್ರವೇಶಿಸಿದ್ದರು.

ಇದನ್ನೂ ಓದಿ: ಆಲಿಯಾ ಭಟ್, ಮನೋಜ್‌ ಬಾಜಪೇಯಿಗೆ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್, ಮತ್ತೆ ಯಾರೆಲ್ಲ ಪ್ರಶಸ್ತಿ ಪಡೆದರು?

ಬಳಿಕ ಅನೇಕ ಬಂಗಾಳಿ ಚಿತ್ರಗಳಲ್ಲಿ ನಟಿಸಿ 2012ರಲ್ಲಿ ʼಕಹಾನಿʼ ಚಿತ್ರದ ಸತ್ಯಕಿ ಸಿನ್ಹಾ ಪಾತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ಸುಜೋಯ್‌ ಘೋಷ್‌ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್‌ ಗರ್ಭಿಣಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಕಡಿಮೆ ಬಜೆಟ್‌ನ ಈ ಚಿತ್ರ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಸದ್ದು ಮಾಡಿತ್ತು. ವಿದ್ಯಾ ಬಾಲನ್‌ಗೆ ಸಹಾಯ ಮಾಡುವ ಪೊಲೀಸ್‌ ಪಾತ್ರದಲ್ಲಿ ಪರಂಬ್ರತ ಗಮನ ಸೆಳೆದಿದ್ದರು. ಬಳಿಕ ʼಟ್ರಾಫಿಕ್‌ʼ, ʼಪರಿʼ, ʼಕೌನ್‌ ಪ್ರವೀಣ್‌ ತಂಬೆʼ, ʼಬುಲ್‌ ಬುಲ್‌ʼ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ 2014ರಲ್ಲಿ ತೆರೆಕಂಡ ಮಲೆಯಾಳಂನ ʼಭಾಗ್ಯಲಕ್ಷ್ಮೀʼ ಸಿನಿಮಾದಲ್ಲಿ ಅತಿಥಿ ಪಾತ್ರದ ಮೂಲಕ ದಕ್ಷಿಣ ಬಾರತ ಚಿತ್ರರಂಗಕ್ಕೂ ಪ್ರವೇಶಿಸಿದ್ದರು. ಇಂಗ್ಲಿಷ್‌, ಬಾಂಗ್ಲಾ ದೇಶಿ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಜತೆಗೆ ಅನೇಕ ವೆಬ್‌ ಸೀರಿಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಅನೇಕ ಟೆಲಿಫಿಲಂ, ವೆಬ್‌ ಸೀರಿಸ್‌ಗಳನ್ನು ನಿರ್ದೇಶಿಸಿದ್ದಾರೆ. ಸದ್ಯ ಹಿಂದಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
TV Mohandas Pai Priyank Kharge
ಕರ್ನಾಟಕ2 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ19 mins ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ29 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ44 mins ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ47 mins ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ57 mins ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ1 hour ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

pain
ಆರೋಗ್ಯ1 hour ago

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

BPO Employee Bangalore Nude Photos
ಕರ್ನಾಟಕ1 hour ago

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

Finger Ring
ಫ್ಯಾಷನ್2 hours ago

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌