Kushi Trailer: ಸಮಂತಾ- ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಟ್ರೈಲರ್‌ ಔಟ್‌! - Vistara News

South Cinema

Kushi Trailer: ಸಮಂತಾ- ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಟ್ರೈಲರ್‌ ಔಟ್‌!

Kushi Trailer: ಸೆಪ್ಟೆಂಬರ್ 1ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. 2 ನಿಮಿಷ 41 ಸೆಕೆಂಡ್ ಟ್ರೈಲರ್‌ ಇದ್ದು, ಸಮಂತಾ ಆರಾಧ್ಯ ಪಾತ್ರವನ್ನು ನಿಭಾಯಿಸಿದ್ದಾರೆ.

VISTARANEWS.COM


on

v Samantha Ruth Prabhu, Vijay Deverakonda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ತೆಲುಗು ಚಿತ್ರ ಖುಷಿ ಸಿನಿಮಾದ ಟ್ರೈಲರ್‌ (Kushi Trailer) ಬಿಡುಗಡೆಗೊಂಡಿದೆ. ಅಂತರ-ಧರ್ಮೀಯ ಪ್ರೇಮಕಥೆಯನ್ನು ಸುಂದರವಾಗಿ ಹೆಣೆಯಲಾಗಿದೆ. ಸೆಪ್ಟೆಂಬರ್ 1ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. 2 ನಿಮಿಷ 41 ಸೆಕೆಂಡ್ ಟ್ರೈಲರ್‌ ಇದ್ದು, ಸಮಂತಾ ಆರಾಧ್ಯ ಪಾತ್ರವನ್ನು ನಿಭಾಯಿಸಿದ್ದಾರೆ.

ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಮತ್ತು ಶರಣ್ಯ ಕೂಡ ನಟಿಸಿದ್ದಾರೆ. ʻʻನಾ ರೋಜಾ ನುವ್ವೆʼʼ ಮತ್ತು ಆರಾಧ್ಯʼʼ ಸೇರಿದಂತೆ ಚಿತ್ರದ ಮೂರು ರೊಮ್ಯಾಂಟಿಕ್ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ.

2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ:Kushi Movie : ಶೂಟಿಂಗ್‌ ವೇಳೆ ಅವಘಡದಲ್ಲಿ ವಿಜಯ್‌ ದೇವರಕೊಂಡ -ಸಮಂತಾಗೆ ಗಾಯ

ಸಮಂತಾ ರುತ್ ಪ್ರಭು (Samantha Ruth Prabhu) ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ಬ್ರೇಕ್‌ ಪಡೆದಿದ್ದಾರೆ. ಈಗಾಗಲೇ ನಟಿ ಬಾಲಿಯಲ್ಲಿ ಸಖತ್‌ ಎಂಜಾಯ್‌ ಕೂಡ ಮಾಡಿ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಬಾಲಿಯೂ ಮುಂಚೆ ನಟಿ ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದರು ಫೋಟೊ ಮತ್ತು ವಿಡಿಯೊಗಳನ್ನು ನಟಿ ಹಂಚಿಕೊಂಡಿದ್ದರು.

ವಿಜಯ್, ಶ್ರೀಲೀಲಾ ಅವರೊಂದಿಗೆ ತಾತ್ಕಾಲಿಕವಾಗಿ VD 12 ಎಂಬ ಗೌತಮ್ ತಿನ್ನನೂರಿಯ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Kannada New Movie: 1980-90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ನಟಿಸುತ್ತಿದ್ದಾರೆ.

VISTARANEWS.COM


on

Kannada New Movie Mandela nari shrinivas
Koo

ಬೆಂಗಳೂರು: ʻಮಂಡೇಲಾʼ (Kannada New Movie) ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ. ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ ಹಲವು ಹಿಟ್‌ ಸಿನಿಮಾಗಳನ್ನು ನೀಡಿದವರು. ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ.

ಇದೊಂದು ವಿಭಿನ್ನ ಪ್ರಯೋಗದ ಚಿತ್ರ ಎಂದೂ ಹೇಳಬಹುದು. ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ.

1980-90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ನಟಿಸುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

ಕನ್ನಡದಲ್ಲಿ ಈಗಾಗಲೇ ʻಬಾ ನಲ್ಲೆ ಮಧುಚಂದ್ರಕೆʼ, ʻಬೆಳದಿಂಗಳ ಬಾಲೆʼಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ಚಿತ್ರದ ನಾಯಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ವ್ಯಕ್ತಪಡಿಸಿದರು.

ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಜುಲೈ 2 ಅಥವಾ 3ನೇ ವಾರ ಈ ಚಿತ್ರ ಸೆಟ್ಟೇರಲಿದೆ. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ.

Continue Reading

ಟಾಲಿವುಡ್

Ram Charan: ರಾಮ್‌ಚರಣ್‌ ಮಗಳಿಗೆ ಸಿಕ್ತು ಪ್ರಭಾಸ್‌ರಿಂದ ಪುಟಾಣಿ ಬುಜ್ಜಿ!

Ram Charan: ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ.

VISTARANEWS.COM


on

Ram Charan Instagram story of daughter Klin Kaara receiving bujji
Koo

ಬೆಂಗಳೂರು: ಟಾಲಿವುಡ್ ಸೂಪರ್‌ಸ್ಟಾರ್ ರಾಮ್ ಚರಣ್ (Ram Charan) ಮತ್ತು ಪ್ರಭಾಸ್‌ (Prabhas) ನಡುವೆ ಒಳ್ಳೆಯ ಆತ್ಮೀಯತೆ ಇದೆ. ಪ್ರಭಾಸ್ ನಟನೆಯ ‘ಕಲ್ಕಿ 2898 AD’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ‘ಬುಜ್ಜಿ’ ಕಾರ್ ಮೂಲಕ ಸಿನಿಮಾ ಪ್ರಮೋಷನ್ ಆರಂಭಿಸಲಾಗಿದೆ. ಕೆಲವು ದಿನಗಳ ಹಿಂದೆ ಭೈರವ ಹಾಗೂ ಬುಜ್ಜಿಯ ಟೀಸರ್‌ವನ್ನು ‘ಕಲ್ಕಿ 2898 ಎಡಿ’ ತಂಡ ಬಿಡುಗಡೆಗೊಳಿಸಿತ್ತು. ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸಿರೀಸ್‌ವನ್ನು ಈಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ʻಬುಜ್ಜಿʼ ವಾಹನವನ್ನು ಹೋಲುವ ಚಿಕ್ಕ ಬೇಬಿ ರಾಕರ್ ಅನ್ನು ಚಿತ್ರತಂಡ ರಾಮ್‌ಚರಣ್‌ ಮಗಳು ಕ್ಲಿಂಕಾರಳಿಗೆ ಉಡುಗೊರೆಯಾಗಿ ನೀಡಿದೆ.

ಕಲ್ಕಿ 2898 ಎಡಿ’ ಸಿನಿಮಾ ಜೂನ್‌ 27ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೆ ಭೈರವ ಹಾಗೂ ಬುಜ್ಜಿಯ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿತ್ತು. ಇದೀಗ ಇದೇ ಭೈರವ ಹಾಗೂ ಬುಜ್ಜಿಯ ಅನಿಮೇಟೆಡ್ ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಭೈರವನ ಪಾತ್ರ ಮಾಡಿದ್ದು, ಭೈರವನ ಜೊತೆಗಾತಿಯಾಗಿ ಬುಜ್ಜಿ ಎಂಬ ಯಂತ್ರವಿದೆ. ಇನ್ನು ʻಬುಜ್ಜಿʼ ಯಂತ್ರಕ್ಕೆ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ, ‘ಬಿ&ಬಿ: ಬುಜ್ಜಿ ಮತ್ತು ಭೈರವ’ ಸಾಕಷ್ಟು ಆಕ್ಷನ್ ಮತ್ತು ಕಾಮಿಡಿ ಇದೆ. ಅನಿಮೇಟೆಡ್ ಸರಣಿಯ ಭೈರವನ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. 

ಇದನ್ನೂ ಓದಿ: Jackfruit seeds: ಹಲಸಿನ ಬೀಜ ಎಂದು ಕಡೆಗಣಿಸಬೇಡಿ, ಇದರ ಉಪಯೋಗ ಎಷ್ಟೊಂದು!

ಏನಿದು ಬುಜ್ಜಿ ಕಾರ್‌?

ಬರೋಬ್ಬರಿ 7 ಕೋಟಿ ವೆಚ್ಚದಲ್ಲಿ ಈ ಕಾಲ್ಪನಿಕ ವಾಹನವನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. ಬುಜ್ಜಿ ವಾಹನವನ್ನು ಹೋಲುವ ಚಿಕ್ಕ ಬೇಬಿ ರಾಕರ್ ಅನ್ನು ಚಿತ್ರತಂಡ ಕ್ಲಿಂಕಾರಳಿಗೆ ಉಡುಗೊರೆಯಾಗಿ ನೀಡಿದೆ. ಇದನ್ನು ಫೋಟೊ ಉಪಾಸನಾ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಬುಜ್ಜಿ ರಾಕರ್ ಜತೆ ಕ್ಲಿಂಕಾರ ಆಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಉಡುಗೊರೆ ಜೊತೆಗೆ ಒಂದು ಪತ್ರವನ್ನು ಕಳುಹಿಸಲಾಗಿದೆ. ಉಪಾಸನಾ ಸಂತಸ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಐದನೇ ಸೂಪರ್‌ ಸ್ಟಾರ್‌ ಬುಜ್ಜಿ ಬೇರೆ ಯಾರೂ ಅಲ್ಲ ನಾಯಕ ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ ಎಂದೇ ಕರೆಯಲ್ಪಡುವ ವಿಶೇಷ ವಾಹನ. ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಎನಿಸಿಕೊಂಡಿದೆ ಎಂದು ಚಿತ್ರ ತಂಡ ವಿವರಿಸಿದೆ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿತ್ತು.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜತೆಗೆ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

Continue Reading

ಸ್ಯಾಂಡಲ್ ವುಡ್

Rishab Shetty: ರಿಷಬ್ ನಿರ್ಮಾಣದ ‘ಶಿವಮ್ಮ’ ಟ್ರೈಲರ್‌ ಔಟ್‌; ಜೂನ್‌ 14ಕ್ಕೆ ತೆರೆಗೆ

Rishab Shetty: ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್‌ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿತ್ತು. ಈ ಚಿತ್ರವನ್ನು ಜೈ ಶಂಕರ್‌ ಆರ್ಯರ್‌ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಈ ಹಿಂದೆ ಅಷ್ಟೇ ಈ ಸಿನಿಮಾಗೆ 27ನೇ ಬೂಸಾನ್‌ ಅಂತಾರಾಷ್ಟ್ರೀಯ ಪ್ರಶಸ್ತಿ (Busan International Film Festival) ಲಭಿಸಿತ್ತು.

VISTARANEWS.COM


on

Rishab Shetty Shivamma Yarehanchinala Official Trailer out
Koo

ಬೆಂಗಳೂರು:  ರಿಷಬ್ ಶೆಟ್ಟಿ (Rishab Shetty) ನಿರ್ಮಾಣ ಮಾಡಿ, ಪ್ರಸ್ತುತಪಡಿಸಿದ ‘ಶಿವಮ್ಮ’ ಸಿನಿಮಾ (Shivamma Movie) ವಿಶ್ವಾದ್ಯಂತ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ‘ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022’ರಲ್ಲಿ ನ್ಯೂ ಕರೆಂಟ್ಸ್ ಪುರಸ್ಕಾರ ಪಡೆದಿತ್ತು. ‘ಥ್ರೀ ಕಾಂಟಿನೆಂಟ್ಸ್ ಫೆಸ್ಟಿವಲ್ 2022’ದಲ್ಲಿ ಯುವ ಜ್ಯೂರಿ ಪ್ರಶಸ್ತಿ, ‘ಫಾಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ’ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜಯಶಂಖರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರ್ತಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿದೆ. ಯರೆಹಂಚಿನಾಳ ಎನ್ನುವ ಊರಿನಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.

ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮ ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡುತ್ತಾಳೆ. ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.

ಅನೇಕ ಸಿನಿಮೋತ್ಸವಗಳಲ್ಲಿ ಪ್ರದರ್ಶನ

ಅನೇಕ ಸಿನಿಮೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ. ಚೀನಾದಲ್ಲಿ ನಡೆದ ‘ಹೈನಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಇರಾನ್​ನಲ್ಲಿ ನಡೆದ ‘ಫಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಸ್ವೀಡನ್​ನ ‘ಗೋಥೆಂಬರ್ಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’, ಮ್ಯುನಿಚ್​​ನ ‘ಮುಂಚಿಯನ್ ಸಿನಿಮೋತ್ಸವ, ರಷ್ಯಾದ ‘ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ’, ಸ್ಪೇನ್​ನ ‘ಇಮ್ಯಾಜಿನ್ ಇಂಡಿಯಾ’, ಕೆನಡಾದ ‘ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ’, ಮೆಲ್ಬೋರ್ನ್​ನ ‘ಇಂಡಿಯನ್ ಪಿಲ್ಮ್ ಫೆಸ್ಟಿವಲ್’, ಸ್ವಿಟ್ಜರ್​​ಲ್ಯಾಂಡ್​ನ ‘ಬ್ಲಾಕ್​ ಮೂವಿ ಫಿಲ್ಮ್​ ಫೆಸ್ಟಿವಲ್’ ಮೊದಲಾದ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಫ್ರಾನ್ಸ್‌ನ ನಾಂಟೆಸ್‌ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್‌ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿತ್ತು. ಈ ಚಿತ್ರವನ್ನು ಜೈ ಶಂಕರ್‌ ಆರ್ಯರ್‌ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಈ ಹಿಂದೆ ಅಷ್ಟೇ ಈ ಸಿನಿಮಾಗೆ 27ನೇ ಬೂಸಾನ್‌ ಅಂತಾರಾಷ್ಟ್ರೀಯ ಪ್ರಶಸ್ತಿ (Busan International Film Festival) ಲಭಿಸಿತ್ತು. ಏಷ್ಯಾದ ಅತಿದೊಡ್ಡ ಫಿಲ್ಮ್ಸ್ ಉತ್ಸವದಲ್ಲಿ ಒಟ್ಟು 10 ಚಲನಚಿತ್ರಗಳು ಉನ್ನತ-ಪ್ರೊಫೈಲ್ ನ್ಯೂ ಕರೆಂಟ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.

ಸಿನಿಮಾದ ಕಥೆ ಏನು?

ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದಷ್ಟು ನೈಜವಾಗಿಯೇ ಇಡೀ ಸಿನಿಮಾವನ್ನು ಕಟ್ಟಿರುವುದು ಮತ್ತೊಂದು ವಿಶೇಷ.

ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ, ಚೆನ್ನಪ್ಪ ಹನ್ಸಿ, ಶಿವಾನಂದ್ ಸಾದರ್ ಚಿತ್ರದ ತಾರಾಗಣದಲ್ಲಿದ್ದಾರೆ. ವಿಕಾಸ್ ಯುಆರ್ಎಸ್ ಹಾಗೂ ಸೌಮ್ಯಾನಂದ ಸಾಹಿ ಛಾಯಾಗ್ರಹಣ ‘ಶಿವಮ್ಮ’ ಚಿತ್ರಕ್ಕಿದೆ. ಜೂನ್ 14ಕ್ಕೆ ‘ಕೋಟಿ’, ‘ಶೆಫ್ ಚಿದಂಬರ’ ಹಾಗೂ ‘ಲವ್‌ಲಿ’ ಸಿನಿಮಾಗಳ ಜೊತೆಗೆ ‘ಶಿವಮ್ಮ’ ಕಥೆ ತೆರೆಮೇಲೆ ಅನಾವರಣವಾಗಲಿದೆ.

Continue Reading

ಸ್ಯಾಂಡಲ್ ವುಡ್

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Vasishta Simha: ʻಲವ್ ಲಿ’ ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

VISTARANEWS.COM


on

Vasishta Simha Lovely Kannada Film Trailer Event
Koo

ಬೆಂಗಳೂರು: ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಚಿತ್ರದ ಟ್ರೈಲರ್‌ ಲಾಂಚ್ ಕಾರ್ಯಕ್ರಮಕ್ಕೆ ರಿಷಬ್ ಆಗಮಿಸಿ ಶುಭ ಕೋರಿದ್ದಾರೆ. ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ‘ರಿಕ್ಕಿ’ ಸಿನಿಮಾದಲ್ಲಿ (Rikky Movie) ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಮಧ್ಯೆ ಒಳ್ಳೆಯ ಪರಿಚಯ ಇದೆ. ‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್‌ನಲ್ಲಿ ಮಿಂಚಲಿದ್ದಾರೆ. ಟ್ರೈಲರ್‌ ಲಾಂಚ್ ವೇಳೆ ವೇದಿಕೆಯಲ್ಲಿ ರಿಷಬ್ ಅವರ ಕಾಲಿಗೆ ಬಿದ್ದರು ವಸಿಷ್ಠ ಸಿಂಹ.

ರಿಷಬ್ ಅವರ ಕಾಲಿಗೆ ಬಿದ್ದ ಬಳಿಕ ವಸಿಷ್ಠ ಅವರು ಮಾತನಾಡಿ ʻʻನಾಡಿಗೆ ಹಮ್ಮೆ ತಂದು ಕೊಟ್ಟ ಕಾಂತಾರ ಸಿನಿಮಾವನ್ನು ನೀಡಿದವರು ರಿಷಬ್‌. ನನ್ನ ಮೇಲೆ ಸಿನಿಮಾ ಪ್ರಭಾವ ಬೀರಿದೆ. ಅನುಭವ ಕೂಡ ಕೊಟ್ಟಿದೆ. ಕಾಂತಾರ 1 ಕೂಡ ಆಗ್ತಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕುʼʼ ಎಂದರು.

ಟ್ರೈಲರ್‌ ಲಾಂಚ್‌ಗೆ ಆಗಮಿಸಿ ರಿಷಬ್ ಮಾತನಾಡಿ ʻʻರಾಜಾಹುಲಿಯಿಂದ ಇಲ್ಲಿವರೆಗೂ ವಸಿಷ್ಠ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ. ಗೋಧಿ ಬಣ್ಣದಲ್ಲಿ ಇವರ ಬೇಸ್‌ ವಾಯ್ಸ್‌ ಕೇಳಿ, ಯಾವಾಗಲೂ ಮಿಮಿಕ್ರಿ ಮಾಡುತ್ತಿದ್ದೆ. ಚಿಟ್ಟೆ, ಕೆಜಿಎಫ್‌ ಆಯ್ತು. ಈಗ ಲವ್‌ಲಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದಾರೆ. ಇದು ಮಾಸ್‌ ಸಿನಿಮಾ. ನನ್ನ ಮೊದಲ ನಿರ್ದೇಶನದಲ್ಲಿ ಹರಿಪ್ರಿಯಾ ಮೊದಲ ನಾಯಕಿ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ವಸಿಷ್ಠ ಆಸ್ತಿ ಆಗ್ತಾರೆ.ಜೂನ್ 14ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಥಿಯೇಟರ್ ಅಲ್ಲೇ ಸಿನಿಮಾ ನೋಡಿʼʼ ಎಂದರು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಹರಿಪ್ರಿಯಾ ಅವರಿಗೆ ಚಾಕೊಲೇಟ್ ಗಿಫ್ಟ್ ನೀಡಿದ್ದಾರೆ. ಇನ್ನು ಲವ್‌ಲಿ ತಂಡ ರಿಷಬ್ ಅವರಿಗೆ ಪಾದರಕ್ಷೆಗಳನ್ನು ಬಿಟ್ಟು ವರಾಹ ವಿಗ್ರಹ ಗಿಫ್ಟ್ ಕೂಡ ನೀಡಿದ್ದಾರೆ. ಈ ವೇಳೆ ವಸಿಷ್ಠ ಪತ್ನಿ ಹರಿಪ್ರಿಯಾ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೂ ನಾನು ಇಷ್ಟು ನರ್ವಸ್ ಆಗಿರಲಿಲ್ಲ. ನನ್ನ ಗಂಡನ ಸಿನಿಮಾಗೆ ನರ್ವಸ್ ಆಗ್ತಿದೆ’ ಎಂದರು ಹರಿಪ್ರಿಯಾ.

ಲವ್ ಲಿ’ ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಇದೊಂದು ಕಮರ್ಶಿಯಲ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದೆ ಚಿತ್ರತಂಡ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ ಎಂದು ಹಿಂದೊಮ್ಮೆ ವಸಿಷ್ಠ ಸಿಂಹ ಹೇಳಿಕೊಂಡಿದ್ದರು.

Continue Reading
Advertisement
K Kavitha
ದೇಶ16 mins ago

K Kavitha: ಬಿಆರ್‌ಎಸ್‌ ನಾಯಕಿ ಕವಿತಾ ಬಂಧನ ಜುಲೈ 3ರವರೆಗೆ ವಿಸ್ತರಣೆ; ಸಾಕ್ಷ್ಯ ನಾಶದ ಆರೋಪ

MS Dhoni Europe Trip
ಕ್ರೀಡೆ25 mins ago

MS Dhoni Europe Trip: ಐಪಿಎಲ್​ ಮುಗಿಸಿ ಕುಟುಂಬದ ಜತೆ ಯುರೋಪ್​ಗೆ ಪ್ರವಾಸ ಹೋದ ಧೋನಿ

Lok Sabha Election Result 2024 Live
ದೇಶ1 hour ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Job Alert
ಉದ್ಯೋಗ1 hour ago

Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Viral News
ವೈರಲ್ ನ್ಯೂಸ್1 hour ago

Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

Grantha Lokarpane and award ceremony on June 5 in Bengaluru
ಬೆಂಗಳೂರು1 hour ago

Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಿಎಂ ಸಿದ್ದರಾಮಯಯ್ಯ ನೇರ ಹೊಣೆ ಎಂದ ಎಚ್‌ಡಿಕೆ

T20 World Cup 2024 Prize Money
ಕ್ರೀಡೆ2 hours ago

T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

Bagalkot Lok Sabha Constituency
ಪ್ರಮುಖ ಸುದ್ದಿ2 hours ago

Bagalkot Lok Sabha Constituency: ಬಿಜೆಪಿಯ ಭದ್ರಕೋಟೆ ಭೇದಿಸುವರೇ ಸಂಯುಕ್ತಾ ಪಾಟೀಲ್?

karnataka weather Forecast Putur rain
ಮಳೆ2 hours ago

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌