Shah Rukh Khan: ʼಡಂಕಿʼ ಸಿನಿಮಾದ ಮೊದಲ ಹಾಡು ಎಂಟ್ರಿಗೆ ಡೇಟ್ ಫಿಕ್ಸ್‌! Vistara News

ಬಾಲಿವುಡ್

Shah Rukh Khan: ʼಡಂಕಿʼ ಸಿನಿಮಾದ ಮೊದಲ ಹಾಡು ಎಂಟ್ರಿಗೆ ಡೇಟ್ ಫಿಕ್ಸ್‌!

Shah Rukh Khan: ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೇ ರಾಜಕುಮಾರ್ ಹಿರಾನಿ ಅವರು ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.

VISTARANEWS.COM


on

Shah Rukh Khan Dunki song Lutt Putt Gaya to release date
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಾರುಖ್‌ ಖಾನ್‌ ನಟನೆಯ (Shah Rukh Khan) ಡಂಕಿ ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್‌ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಡಂಕಿ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಂಕಿ ಸಿನಿಮಾದ ರೊಮ್ಯಾಂಟಿಕ್ ಹಾಡು ಇದೇ ತಿಂಗಳ‌ 22ರಂದು ರಿಲೀಸ್ ಆಗಲಿದೆ. ಲಪ್ ಪಟ್ ಗಯಾ ಎಂಬ ಸಾಹಿತ್ಯವುಳ್ಳ ಸುಮಧುರ ಹಾಡಿಗೆ ಪ್ರೀತಂ ಚಕ್ರವರ್ತಿ ಟ್ಯೂನ್ ಹಾಕಿದ್ದಾರೆ.

ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Shah Rukh Khan: ದೀಪಾವಳಿ ಹಬ್ಬಕ್ಕೆ ಬಂತು ಡಂಕಿ ಹೊಸ ಪೋಸ್ಟರ್!

ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳುವುದಕ್ಕೆ ಬರುತ್ತಿದ್ದಾರೆ. ಇನ್ನೇನು ಡಿಸೆಂಬರ್‌ ಕೊನೇ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಮನರಂಜನಾ ಪೋರ್ಟಲ್ ಬಾಲಿವುಡ್ ಹಂಗಾಮಾ ವರದಿ ಮಾಡಿದಂತೆ, ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ ಡಂಕಿ ಸಿನಿಮಾ ಡಿಜಿಟಲ್ ಹಕ್ಕುಗಳನ್ನು ಜಿಯೋ ಸಿನಿಮಾಗೆ 155 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

The Kapil Sharma Show: 6 ವರ್ಷದ ಮುನಿಸು ಮರೆತು ಒಟ್ಟಿಗೆ ಪಾರ್ಟಿ ಮಾಡಿದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್!

The Kapil Sharma Show ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Kapil Sharma and Sunil Grover
Koo

ಬೆಂಗಳೂರು: ಹಾಸ್ಯ, ಮನರಂಜನೆಯ ರಸದೌತಣ ನೀಡುವ ದಿ ಕಪಿಲ್‌ ಶರ್ಮಾ ಶೋ (The Kapil Sharma Show) ಮೂಲಕ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಹೌದು, ಆರು ವರ್ಷದ ಮುನಿಸು, ವದಂತಿ, ಸ್ಪಷ್ಟನೆ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ ಕಾಮಿಡಿ ಶೋ (Netflix Show) ಪ್ರೋಮೊ ಬಿಡುಗಡೆ ಮಾಡಿರುವ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್‌ ಜತೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಆರು ವರ್ಷದ ಬಳಿಕ ಇಬ್ಬರು ಹಾಸ್ಯ ಕಲಾವಿದರು ಮುನಿಸು ಮರೆತು ಒಂದಾದಂತಾಗಿದೆ. ಕಪಿಲ್ ಮತ್ತು ಸುನೀಲ್ ಇತ್ತೀಚೆಗೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ಪ್ರೋಮೊದಲ್ಲಿ ಮೊದಲು ಕಪಿಲ್‌ ಶರ್ಮಾ ಕಾಣಿಸಿಕೊಂಡಿದ್ದರು. “ಹಾಯ್‌ ಗೆಳೆಯರೆ, ನಾನು ಕಪಿಲ್‌ ಶರ್ಮಾ. ಶೀಘ್ರದಲ್ಲೇ ಹೊಸ ಶೋ ಹೊತ್ತು ನಿಮ್ಮೆದುರು ಬರುತ್ತೇನೆ” ಎಂದು ಕಪಿಲ್‌ ಶರ್ಮಾ ಹೇಳುತ್ತಾರೆ. ಆಗ ಸುನಿಲ್‌ ಗ್ರೋವರ್‌, “ನಾನು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದರು. ಆಗ ಕಪಿಲ್‌ ಶರ್ಮಾ, “ಸರಿ ಹಾಗಾದರೆ, ಇಬ್ಬರೂ ಬರೋಣ, 190ಕ್ಕೂ ಅಧಿಕ ದೇಶಗಳಿಗೆ ಬರೋಣ” ಎಂದಿದ್ದರು. ಹಾಗೆಯೇ ಇಬ್ಬರ ನಡುವಿನ ಸಂಭಾಷಣೆ ಮುಂದುವರಿಯುತ್ತದೆ.

ಇದನ್ನೂ ಓದಿ: Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

ಇದೇ ವೇಳೆ ವಿಡಿಯೊ ಫ್ರೇಮ್‌ನಲ್ಲಿ ಹಾಸ್ಯ ಕಲಾವಿದರಾದ ರಾಜೀವ್‌, ಕಿಕು, ಕೃಷ್ಣಾ ಹಾಗೂ ನಟಿ ಅರ್ಚನಾ ಪೂರನ್‌ ಸಿಂಗ್‌ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌, ದಿ ಕಪಿಲ್‌ ಶರ್ಮಾ ಶೋ ಮೂಲಕವೇ ದೇಶದ ಮನೆಮಾತಾಗಿರುವ ಕಲಾವಿದರು ನೆಟ್‌ಫ್ಲಿಕ್ಸ್‌ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದಿ ಕಪಿಲ್‌ ಶರ್ಮಾ ಶೋನಲ್ಲಿ ಸುನೀಲ್‌ ಗ್ರೋವರ್‌ ಅವರು ಮಾಡುತ್ತಿದ್ದ “ಡಾ ಮಶೂರ್‌ ಗುಲಾಟಿ” ಪಾತ್ರವು ಮನೆಮಾತಾಗಿತ್ತು.

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸುನಿಲ್‌ ಗ್ರೋವರ್‌ ಅವರು ದಿ ಕಪಿಲ್‌ ಶರ್ಮಾ ಶೋ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

Continue Reading

ಬಾಲಿವುಡ್

Triptii Dimri: ತೃಪ್ತಿ ಡಿಮ್ರಿ ಬೆತ್ತಲೆ ಸೀನ್‌; 5 ನಿಮಿಷಕ್ಕೊಮ್ಮೆ ನಟಿಯ ಬಳಿ ರಣಬೀರ್ ಕೇಳಿದ್ದೇನು?

Triptii Dimri: ಸಿನಿಮಾ ಸಕ್ಸಸ್‌ಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ರಣಬೀರ್ ಕಪೂರ್ ಅವರ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ.

VISTARANEWS.COM


on

Triptii on intimate scene in animal
Koo

ಬೆಂಗಳೂರು: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ (Triptii Dimri) ʼಅನಿಮಲ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಇನ್ನೆರಡು ವಾರಗಳಲ್ಲಿ 900 ಕೋಟಿ ರೂ. ಗಳಿಸುವ ಹಂತಕ್ಕೆ ತಲುಪಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೆಚ್ಚಾಗಿ ಸಿನಿಮಾದಲ್ಲಿ ಸೌಂಡ್‌ ಮಾಡಿದ್ದು ನಟಿ ತೃಪ್ತಿ ಡಿಮ್ರಿ ಅವರ ಬೆತ್ತಲೆ ಸೀನ್‌. ಸಿನಿಮಾ ಸಕ್ಸೆಸ್‌ಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ರಣಬೀರ್ ಕಪೂರ್ ಅವರ ಜತೆ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಚಿತ್ರದಲ್ಲಿ ತೃಪ್ತಿ ಡಿಮ್ರಿ ಅವರು ʻಜೋಯಾʼ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ತೃಪ್ತಿ ಡಿಮ್ರಿ ಅಭಿನಯವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಇತ್ತೀಚಿನ ಮಾಧ್ಯಮದ ಸಂದರ್ಶನವೊಂದರಲ್ಲಿ “ಜೋಯಾʼ ತಮ್ಮ ಬೋಲ್ಡ್‌ ಸೀನ್‌ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಮಾತ್ರವಲ್ಲ ಬೋಲ್ಡ್‌ ಸೀನ್‌ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ರಣಬೀರ್‌ ಕಪೂರ್‌ ಅವರು ಹೇಗೆ ತಮಗೆ ಸಪೋರ್ಟಿವ್‌ ಆಗಿದ್ದರು ಎಂಬದನ್ನು ಬಹಿರಂಗಪಡಿಸಿದರು.

ಇಂಟಿಮೇಟ್ ದೃಶ್ಯದ ಕುರಿತು ತೃಪ್ತಿ ಡಿಮ್ರಿ ಮಾತನಾಡಿ ʻʻಪ್ರಾಜೆಕ್ಟ್‌ಗೆ ಸಹಿ ಮಾಡುವಾಗ ಈ ರೀತಿ ಒಂದು ಬೋಲ್ಡ್‌ ದೃಶ್ಯವಿದೆ ಎಂದಿದ್ದರು ನಿರ್ದೇಶಕರು. ಶೂಟ್‌ ಮಾಡುವ ಮುಂಚೆ ಕೂಡ ಪಾತ್ರದ ಬಗ್ಗೆ ಅದೆಷ್ಟೋ ಬಾರಿ ನನಗೆ ನಿರ್ದೇಶಕರು ವಿವರಿಸಿದ್ದರು. ಇಂತಹ ದೃಶ್ಯಗಳನ್ನು ಶೂಟ್‌ ಮಾಡುವಾಗ ಸುತ್ತಮುತ್ತಲಿನ ಪರಿಸರವೂ ಬಹಳ ಮುಖ್ಯ. ನಿಮ್ಮ ಸುತ್ತಲಿನ ಜನರು ಮೊದಲು ನಿಮಗೆ ಕಮ್‌ಫರ್ಟ್‌ ಆಗಿರಬೇಕು. ಆಗ ಮಾತ್ರ ಇಂತಹ ದೃಶ್ಯಗಳನ್ನು ಶೂಟ್‌ ಮಾಡಲು ಸಾದ್ಯʼʼ ಎಂದರು.

ಇದನ್ನೂ ಓದಿ: Animal Cast Fees: ‘ಅನಿಮಲ್’ ಚಿತ್ರಕ್ಕೆ ರಣಬೀರ್ ಕಪೂರ್ ಪಡೆದ ಸಂಭಾವನೆ ಎಷ್ಟು?

ಇಂಟಿಮೇಟ್ ದೃಶ್ಯ ಮಾಡುವಾಗೆಲ್ಲ ರಣಬೀರ್ ಪ್ರತಿ 5 ನಿಮಿಷಗಳಿಗೊಮ್ಮೆ ಬಂದು ʻʻare you Okay” ಎಂದು ಎಷ್ಟೋ ಬಾರಿ ಬಂದು ಕೇಳಿದ್ದೂ ಇದೆ. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರು, ಡಿಒಪಿ (ಛಾಯಾಗ್ರಹಕರು) ಮತ್ತು ನಟರು ಸೇರಿದಂತೆ 5ಕ್ಕಿಂತ ಹೆಚ್ಚು ಜನರಿರಲಿಲ್ಲ. ಸೆಟ್‌ನಲ್ಲಿ ಬೇರೆಯವರಿಗೆ ಅವಕಾಶ ಕೂಡ ನೀಡಲಿಲ್ಲ, ಎಲ್ಲಾ ಮಾನಿಟರ್‌ಗಳನ್ನು ಮುಚ್ಚಲಾಗಿತ್ತು. ಯಾವುದೇ ಹಂತದಲ್ಲಿ ನೀವು ಅಹಿತಕರವೆಂದು ಭಾವಿಸಿದರೆ, ನಮಗೆ ತಿಳಿಸಿ ಎಂದು ನಿರ್ದೇಶಕರು ನನಗೆ ಕೇರ್‌ ಮಾಡಿ ಈ ದೃಶ್ಯವನ್ನು ತೆಗೆದರುʼʼ ಎಂದರು. ರಣಬೀರ್ ಆಗಾಗ ನನ್ನನ್ನು ವಿಚಾರಿಸುತ್ತಾ, ‘ನೀವು ಆರಾಮದಾಯಕವಾಗಿದ್ದೀರಾ?’ ಎಂದು ಕೇಳುತ್ತಿದ್ದರು, ಈ ವಿಷಯಗಳು ನಿಜವಾಗಿಯೂ ಮುಖ್ಯವೆಂದು ನಾನು ಭಾವಿಸುತ್ತೇನೆʼʼ ಎಂದರು.

ಇದನ್ನೂ ಓದಿ: Sam Bahadur Box Office: ʻಅನಿಮಲ್‌ʼ ಭರ್ಜರಿ ಓಪನಿಂಗ್‌; ವಿಕ್ಕಿ ಕೌಶಲ್ ಸಿನಿಮಾದ ವೇಗಕ್ಕೆ ಬ್ರೇಕ್‌

ʻʻಈ ರೀತಿ ಶೂಟ್‌ಗಳನ್ನು ಪ್ರೇಕ್ಷಕರು ನೋಡದ ಕಾರಣ ಹಲವು ಬಾರಿ ನನಗೆ ನೆಗೆಟಿವ್‌ ಆಗಿ ಪ್ರಶ್ನಿಸಿದ್ದಾರೆ. ಆದರೆ ಅಂತಹ ಬೋಲ್ಡ್‌ ದೃಶ್ಯಗಳನ್ನು ಮಾಡುವಾಗ ಸೆಟ್‌ಗಳಲ್ಲಿ ಅತ್ಯಂತ ಸೂಕ್ಷ್ಮವಾಗಿರುತ್ತಾರೆ. ನನಗೆ ತುಂಬಾ ಆರಾಮದಾಯಕವಾಗುವಂತೆ ಈ ಸೀನ್‌ ಮಾಡಲಾಯಿತು. ಸ್ವಲ್ಪವೂ ನನಗೆ ಸಮಸ್ಯೆಯಾಗಲಿಲ್ಲʼʼ ಎಂದಿದ್ದಾರೆ.

“ನಾನು ಸಂದೀಪ್ ಸರ್ ಅವರೊಂದಿಗೆ ಪಾತ್ರಕ್ಕಾಗಿ ಚರ್ಚೆ ನಡೆಸಿದಾಗ, ಇದು ನೆಗೆಟಿವ್‌ ಪಾತ್ರ ಎಂದು ಅವರು ಹೇಳಿದರು. ನಾನು ಸಂಪೂರ್ಣವಾಗಿ ನೆಗೆಟಿವ್‌ ಆಗಿ ತೋರಿಸುವುದಿಲ್ಲ. ಬದಲಿಗೆ, ಜನರು ಜೋಯಾ ಪಾತ್ರದ ಮುಗ್ಧತೆಯನ್ನು ನೋಡಬೇಕು ಎಂದಿದ್ದರುʼʼ ಎಂದು ಹೇಳಿದರು.

ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

Continue Reading

ದೇಶ

ಐಶ್ವರ್ಯಾ-ಅಭಿಷೇಕ್ ಡಿವೋರ್ಸ್ ವದಂತಿ; ಒಟ್ಟಾಗಿ ಕಾಣಿಸಿಕೊಂಡ ದಂಪತಿ

VISTARANEWS.COM


on

Aishwarya rai and Abhishek Bachchan getting divorce rumours circulated
Koo

ಮುಂಬೈ: ಭಾರತದ ಸುಪ್ರಸಿದ್ಧ ತಾರಾ ಜೋಡಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya rai) ಮತ್ತು ಅಭಿಷೇಕ್ ಬಚ್ಚನ್ (Abhishek bachchan) ಡಿವೋರ್ಸ್ ಪಡೆದುಕೊಳ್ಳಲಿದ್ದಾರೆಂಬ ವದಂತಿ ಜೋರಾಗಿದೆ(divorce rumours). ಈ ಜೋಡಿಯು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಅವರ ಅಭಿಮಾನಿಗಳು ಅವರ ಅನ್ಯೋನ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ, ಬಿಗ್ ಬಿ ಅಮಿತಾಭ್ (Amitabh Bachhan) ಅವರು ತಮ್ಮ ಸೊಸೆ ಐಶ್ವರ್ಯ ಅವರ ಇನ್‌ಸ್ಟಾ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಡಿವೋರ್ಸ್ ವದಂತಿ ಮತ್ತಷ್ಟು ಜೋರಾಗಿದೆ.

ಈ ಎಲ್ಲ ವದಂತಿಗಳ ಮಧ್ಯೆಯೇ ಐಶ್ವರ್ಯಾ ಮತ್ತು ಅಭಿಷೇಕ್ ಅವರು ತಮ್ಮ ಪುತ್ರಿಯೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ವದಂತಿಗಳಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದೂ, ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ನೇಟಿಜೆನ್ಸ್ ಬಿಂಬಿಸುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದಾ ಅವರ ಪುತ್ರ ಅಗಸ್ತ್ಯ ನಂದಾ ಅಭಿನಯಿಸಿರುವ ಮೊದಲ ಚಿತ್ರ ದಿ ಆರ್ಚೀಸ್ ಪ್ರೀಮಿಯರ್ ಶೋಗೆ ಇಡೀ ಬಚ್ಚನ್ ಕುಟುಂಬವು ಆಗಮಿಸಿತ್ತು. ಅಮಿತಾಭ್ ಬಚ್ಚನ್ ಕುಟುಂಬ, ನಂದಾ ಕುಟುಂಬಗಳು ಒಟ್ಟಾಗಿ ಈ ಪ್ರೀಮಿಯರ್ ಶೋ ವೀಕ್ಷಿಸಿವೆ. ಇದರಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಅವರು ತಮ್ಮ ಪುತ್ರಿಯೊಂದಿಗೆ ಮಾಧ್ಯಮಗಳಿಗೆ ಪೋಸು ನೀಡಿದ್ದು ವಿಶೇಷವಾಗಿತ್ತು.

ದಿ ಆರ್ಚೀಸ್‌ ಚಿತ್ರದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಮತ್ತು ಬಚ್ಚನ್ ಅವರ ಮೊಮ್ಮಗ ಅಗಸ್ತ್ಯರಲ್ಲದೆ, ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ ನೋಡುಗರ​ ಗಮನ ಸೆಳೆದಿದೆ.

ಇವರೇ ನೋಡಿ ಅಮಿತಾಭ್ ಅವರ ಸಹೋದರ

ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ‘ದಿ ಆರ್ಚೀಸ್​’ (The Archies Film) ಚಿತ್ರ ಡಿಸೆಂಬರ್​ 7ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಹಲವು ವಿಶೇಷತೆಗಳು ಕಂಡು ಬಂದವು. ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರು ಶ್ರೀದೇವಿಯವರ ಹಳೇಯ ಗೌನ್‌ ಧರಿಸಿ ತಾಯಿಯನ್ನು ಸ್ಮರಿಸಿಕೊಂಡಿದ್ದಾರೆ.

ಅಗಸ್ತ್ಯ ನಂದ ಅವರ ಚೊಚ್ಚಲ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು. ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ, ಶ್ವೇತಾ ಬಚ್ಚನ್ ಜತೆಗೆ ಅವರ ಮಗಳು ನವ್ಯಾ, ಜಯಾ ಮತ್ತು ಅಮಿತಾಭ್‌ ಎಲ್ಲರೂ ಭಾಗಿಯಾಗಿದ್ದರು. ʻದಿ ಆರ್ಚೀಸ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿಲ್ಲ. ಬದಲಿಗೆ, ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.

ಸಿನಿಮಾದ ಪ್ರೀಮಿಯರ್​ ಶೋನಲ್ಲಿ ಬಚ್ಚನ್‌ ಅವರ ಕುಟುಂಬ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ಇನ್ನೂ ವಿಶೇಷ ಅಂದರೆ ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಂಡರು. ಕಾಲೇಜು ಪದವಿಯ ನಂತರ, ಅಜಿತಾಭ್ ಉದ್ಯಮಿಯಾದರು. ಭಾರತದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ನಂತರ ಲಂಡನ್‌ಗೆ ತೆರಳಿದರು. ಅಲ್ಲೇ ಉದ್ಯಮಿಯಾಗಿ ಮುಂದುವರಿದರು. ರಾಮೋಲಾರನ್ನು ವರಸಿದ ಅಜಿತಾಭ್‌ ಅವರಿಗೆ ಮೂರು ಮಕ್ಕಳಿದ್ದಾರೆ. ಅಜಿತಾಭ್ ಮತ್ತು ಅಮಿತಾಭ್ ಅವರಿಗೆ 5 ವರ್ಷಗಳ ವಯಸ್ಸಿನ ಅಂತರವಿದೆ. ಏಕಾಏಕಿ ಅಜಿತಾಭ್ ಮತ್ತು ಅಮಿತಾಭ್ ಒಟ್ಟಿಗೆ ಕಂಡ ಫ್ಯಾನ್ಸ್‌ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Aishwarya Rai: ನಾವು ತುಂಬ ಮಿಸ್‌ ಮಾಡಿಕೊಳ್ಳುತ್ತೇವೆ ಅಪ್ಪ; ಐಶ್ವರ್ಯಾ ರೈ ಭಾವುಕ ಪೋಸ್ಟ್‌!

Continue Reading

ಬಾಲಿವುಡ್

The Archies Film: ನಿಮಗೆ ಅಮಿತಾಭ್‌ ತಮ್ಮ ಅಜಿತಾಭ್‌ ಗೊತ್ತಾ? ಅವರೇ ಇವರು!

The Archies Film: ಈ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಹಲವು ವಿಶೇಷತೆಳು ಕಂಡು ಬಂದವು. ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರು ಶ್ರೀದೇವಿಯವರ ಹಳೇಯ ಗೌನ್‌ ಧರಿಸಿ ತಾಯಿಯನ್ನು ಸ್ಮರಿಸಿಕೊಂಡಿದ್ದಾರೆ.

VISTARANEWS.COM


on

Ajitabh Bachchan, Younger Brother Of Amitabh At The Archies Film Screening
Koo

ಬೆಂಗಳೂರು: ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ‘ದಿ ಆರ್ಚೀಸ್​’ (The Archies Film) ಚಿತ್ರ ಡಿಸೆಂಬರ್​ 7ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಹಲವು ವಿಶೇಷತೆಗಳು ಕಂಡು ಬಂದವು. ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರು ಶ್ರೀದೇವಿಯವರ ಹಳೇಯ ಗೌನ್‌ ಧರಿಸಿ ತಾಯಿಯನ್ನು ಸ್ಮರಿಸಿಕೊಂಡಿದ್ದಾರೆ.

ಅಗಸ್ತ್ಯ ನಂದ ಅವರ ಚೊಚ್ಚಲ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು. ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ, ಶ್ವೇತಾ ಬಚ್ಚನ್ ಜತೆಗೆ ಅವರ ಮಗಳು ನವ್ಯಾ, ಜಯಾ ಮತ್ತು ಅಮಿತಾಭ್‌ ಎಲ್ಲರೂ ಭಾಗಿಯಾಗಿದ್ದರು. ʻದಿ ಆರ್ಚೀಸ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿಲ್ಲ. ಬದಲಿಗೆ, ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ.

ಸಿನಿಮಾದ ಪ್ರೀಮಿಯರ್​ ಶೋನಲ್ಲಿ ಬಚ್ಚನ್‌ ಅವರ ಕುಟುಂಬ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ಇನ್ನೂ ವಿಶೇಷ ಅಂದರೆ ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಭ್‌ ಅಪರೂಪವಾಗಿ ಕ್ಯಾಮೆರಾ ಮುಂದೆ ಕಂಡರು. ಕಾಲೇಜು ಪದವಿಯ ನಂತರ, ಅಜಿತಾಭ್ ಉದ್ಯಮಿಯಾದರು. ಭಾರತದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅವರು ನಂತರ ಲಂಡನ್‌ಗೆ ತೆರಳಿದರು. ಅಲ್ಲೇ ಉದ್ಯಮಿಯಾಗಿ ಮುಂದುವರಿದರು. ರಾಮೋಲಾರನ್ನು ವರಸಿದ ಅಜಿತಾಭ್‌ ಅವರಿಗೆ ಮೂರು ಮಕ್ಕಳಿದ್ದಾರೆ. ಅಜಿತಾಭ್ ಮತ್ತು ಅಮಿತಾಭ್ ಅವರಿಗೆ 5 ವರ್ಷಗಳ ವಯಸ್ಸಿನ ಅಂತರವಿದೆ. ಏಕಾಏಕಿ ಅಜಿತಾಭ್ ಮತ್ತು ಅಮಿತಾಭ್ ಒಟ್ಟಿಗೆ ಕಂಡ ಫ್ಯಾನ್ಸ್‌ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Big B style: ಬಿಗ್‌ ಬಿ ಅಮಿತಾಭ್ ಬಚ್ಚನ್‌ರಿಂದ ಕಲಿಯಬಹುದಾದ ಸ್ಟೈಲಿಂಗ್‌ ಟ್ರಿಕ್ಸ್!

ಶ್ರೀದೇವಿ ಮತ್ತು ಬೋನಿ ಕಪೂರ್​ ದಂಪತಿಯ ಮೊದಲ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ‘ದಿ ಆರ್ಚೀಸ್​’ ಸಿನಿಮಾ ಮೂಲಕ ಎರಡನೇ ಪುತ್ರಿ ಖುಷಿ ಕಪೂರ್‌ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವಾಗ ಖುಷಿ ಕಪೂರ್​ ಅವರು ಶ್ರೀದೇವಿಯ ಹಳೇ ಗೌನ್​ ಧರಿಸಿ ಬಂದಿದ್ದಾರೆ. ಖುಷಿ ಕಪೂರ್ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ದಿ ಆರ್ಚೀಸ್‌ನಲ್ಲಿ ಸುಹಾನಾ ಮತ್ತು ಅಗಸ್ತ್ಯರಲ್ಲದೆ, ಚಿತ್ರದಲ್ಲಿ ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ ನೋಡುಗರ​ ಗಮನ ಸೆಳೆದಿದೆ.

Continue Reading
Advertisement
Raja Marga Father and Daughter
ಅಂಕಣ8 mins ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ26 mins ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ56 mins ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ1 hour ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್1 hour ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ8 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್8 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್8 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ9 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ13 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ14 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ19 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌