Singer Mangli |‘ಪಾದರಾಯ’ ಪ್ಯಾನ್‌ ಇಂಡಿಯಾ ಸಿನಿಮಾಗೆ ಗಾಯಕಿ ಮಂಗ್ಲಿ ನಾಯಕಿ! - Vistara News

ಸಿನಿಮಾ

Singer Mangli |‘ಪಾದರಾಯ’ ಪ್ಯಾನ್‌ ಇಂಡಿಯಾ ಸಿನಿಮಾಗೆ ಗಾಯಕಿ ಮಂಗ್ಲಿ ನಾಯಕಿ!

ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ ಈ ಚಿತ್ರಕ್ಕೆ ಗಾಯಕಿ ಮಂಗ್ಲಿ (Singer Mangli) ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.

VISTARANEWS.COM


on

Singer Mangli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯʼ. ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ ಈ ಚಿತ್ರಕ್ಕೆ ಗಾಯಕಿ ಮಂಗ್ಲಿ (Singer Mangli) ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.

‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಗಮನಸೆಳೆದು, ಅಪಾರ ಖ್ಯಾತಿ ಗಳಿಸಿಕೊಂಡ ತೆಲುಗಿನ ಗಾಯಕಿ ಮಂಗ್ಲಿ. ಆ ನಂತರ ಕನ್ನಡದಲ್ಲೂ ಹಲವು ಹಾಡುಗಳಿಗೆ ದನಿಯಾಗಿರುವ ಮಂಗ್ಲಿ ಕನ್ನಡಿಗರ ಪ್ರೀತಿಗೂ ಪಾತ್ರರಾಗಿದ್ದಾರೆ. ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಮಂಗ್ಲಿ ಪಾದರ್ಪಣೆ ಮಾಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ‘ಪಾದರಾಯ’ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಗಾಯಕಿ, ನಿರೂಪಕಿಯಾಗಿ ಸೈ ಎನಿಸಿಕೊಂಡ ಮಂಗ್ಲಿ ನಾಯಕಿಯಾಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ.

ಇದನ್ನೂ ಓದಿ | Pathaan Film | ಧಾರವಾಡದಲ್ಲಿ ಪಠಾಣ್‌ ಸಿನಿಮಾ ಪ್ರದರ್ಶನಕ್ಕೆ ಆಕ್ಷೇಪ: ಪೋಸ್ಟರ್‌ ಹರಿದು ಪ್ರತಿಭಟಿಸಿದ ಹಿಂದು ಕಾರ್ಯಕರ್ತರು

ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಪಾದರಾಯ’ ಚಿತ್ರದಲ್ಲಿ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತವನ್ನು ಆಚರಿಸುತ್ತಿದ್ದಾರೆ.

‘ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಚಿತ್ರದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

ಸಿದ್ದೇಶ್ವರ ಎಂಟರ್‌ಪ್ರೈಸಿಸ್‌ ಬ್ಯಾನರ್ ನಡಿ ಆರ್.ಚಂದ್ರು ‘ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್ ಸಹ ನಿರ್ಮಾಣವಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಸಂಕಲನ, ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ಇದನ್ನೂ ಓದಿ | Ajith Kumar | `ತುನಿವು’ ಸಿನಿಮಾ ಬಿಡುಗಡೆ ವೇಳೆ ಟ್ರಕ್‌ನಿಂದ ಬಿದ್ದು ಅಜಿತ್‌ ಅಭಿಮಾನಿ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

Kangana Ranaut: ಸಿನಿಮಾ ರಂಗದಿಂದ ರಾಜಕೀಯಕ್ಕೆ ಕಾಲಿಟ್ಟ ನಟಿ ಕಂಗನಾ ರಣಾವತ್ ಈಗ ಸಂಸದೆಯಾಗಿದ್ದಾರೆ. ಸಂಸದರು ತಿಂಗಳಿಗೆ 1 ಲಕ್ಷ ರೂ. ಮೂಲ ವೇತನವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಭರಿಸಲು 2018ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ ಈ ಮೊತ್ತವನ್ನು ನೀಡಲಾಗುತ್ತಿದೆ. ಸಂಬಳದ ಜತೆ ಇನ್ನೂ ಏನೇನು ಸೌಲಭ್ಯವನ್ನು ಅವರು ಪಡೆಯುತ್ತಾರೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Kangana Ranaut
Koo

ದೆಹಲಿ: ನಟಿ ಕಂಗನಾ ರಣಾವತ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಂಗನಾ ರಾಜಕೀಯ ರಂಗವನ್ನು ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. 2024ರ ಲೋಕಸಭೆಯ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಜಯಗಳಿಸಿದ ನಟಿ ಕಂಗನಾ ರಣಾವತ್‌ (Kangana Ranaut) ಅವರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ.

ಸಿನಿಮಾ ರಂಗದಿಂದ ರಾಜಕೀಯಕ್ಕೆ ಕಾಲಿಟ್ಟ ನಟಿ ಸಂಸದೆಯಾದ ಕಾರಣ ಹಲವು ರೀತಿಯ ಸವಲತ್ತುಗಳನ್ನು ಹೊಂದಿರುತ್ತಾರೆ. ಹಾಗಾದ್ರೆ ಅವರ ಸಂಬಳ ಮತ್ತು ಸವಲತ್ತುಗಳ ಬಗ್ಗೆ ತಿಳಿಯೋಣ:

ತಿಂಗಳ ಸಂಬಳ: ಸಂಸದರು ತಿಂಗಳಿಗೆ 1 ಲಕ್ಷ ರೂ. ಮೂಲ ವೇತನವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಭರಿಸಲು 2018ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ ಈ ಮೊತ್ತವನ್ನು ನೀಡಲಾಗುತ್ತಿದೆ.

ಸವಲತ್ತುಗಳ ವಿವರ ಹೀಗಿದೆ:

  • ಕ್ಷೇತ್ರ ಭತ್ಯೆ : ಕಂಗನಾ ಅವರಿಗೆ ತಮ್ಮ ಕ್ಷೇತ್ರದಲ್ಲಿ ಕಚೇರಿಗಳನ್ನು ನಿರ್ವಹಿಸಲು ಮತ್ತು ಮತದಾರರೊಂದಿಗೆ ಸಂವಹನ ಸಾಧಿಸುವ ವೆಚ್ಚವನ್ನು ಭರಿಸಲು ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 70,000 ರೂ. ನೀಡುತ್ತಾರೆ.
  • ದೈನಂದಿನ ಭತ್ಯೆ : ಸಂಸತ್ತಿನ ಅಧಿವೇಶನಗಳು ಮತ್ತು ಸಮಿತಿ ಸಭೆಗಳಲ್ಲಿ ದಿಲ್ಲಿಯಲ್ಲಿದ್ದಾಗ ಕಂಗನಾ ಅವರು ವಸತಿ, ಆಹಾರ ಮತ್ತು ಇತರ ವೆಚ್ಚಗಳಿಗಾಗಿ 2000 ರೂ. ದೈನಂದಿನ ಭತ್ಯೆಯಾಗಿ ಪಡೆಯುತ್ತಾರೆ.
  • ಪ್ರಯಾಣ ಭತ್ಯೆ : ಎಲ್ಲಾ ಸಂಸದರು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ವರ್ಷಕ್ಕೆ 34 ಬಾರಿ ಉಚಿತ ದೇಶಿಯ ವಿಮಾನ ಪ್ರಯಾಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರು ಅಧಿಕೃತ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಉಚಿತ ಪ್ರಥಮ ದರ್ಜೆ ರೈಲು ಪ್ರಯಾಣವನ್ನು ಸಹ ಪಡೆಯುತ್ತಾರೆ ಮತ್ತು ತಮ್ಮ ಕ್ಷೇತ್ರಗಳಲ್ಲಿ ರಸ್ತೆಯಲ್ಲಿ ಪ್ರಯಾಣಿಸಲು ಮೈಲೇಜ್ ಭತ್ಯೆವನ್ನು ಪಡೆಯಬಹುದು.
  • ವಸತಿ: ಸಂಸದರಿಗೆ ಅವರ 5 ವರ್ಷದ ಆಡಳಿತ ಅವಧಿಯಲ್ಲಿ ಬಂಗಲೆಗಳು, ಪ್ಲ್ಯಾಟ್‌ಗಳು ಅಥವಾ ಹಾಸ್ಟೆಲ್ ಕೊಠಡಿಗಳು ಹಾಗೂ ಬಾಡಿಗೆ ಮುಕ್ತ ವಸತಿಯನ್ನು ಒದಗಿಸಲಾಗುವುದು. ಒಂದು ವೇಳೆ ಅಧಿಕೃತ ವಸತಿ ಸೌಕರ್ಯವನ್ನು ಬಳಸದವರಿಗೆ ತಿಂಗಳಿಗೆ 2,00,000 ರೂ. ವಸತಿ ಭತ್ಯೆವನ್ನು ಪಡೆಯಬಹುದು.
  • ವೈದ್ಯಕೀಯ ಸೌಲಭ್ಯ : ಕಂಗನಾ ಮತ್ತು ಅವರ ಕುಟುಂಬದವರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CCHS) ಅಡಿಯಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಪಡೆಯುತ್ತಾರೆ. ಇದರಿಂದ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
  • ಇತರೆ: ಸಂಸದರಿಗೆ ವರ್ಷಕ್ಕೆ 1,50,000 ರೂ.ನಷ್ಟು ಉಚಿತ ದೂರವಾಣಿ ಕರೆಗಳನ್ನು ನೀಡಲಾಗುತ್ತದೆ ಮತ್ತು ಅವರು ತಮ್ಮ ನಿವಾಸದಲ್ಲಿ ಮತ್ತು ಕಚೇರಿಗಳಲ್ಲಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಅವರಿಗೆ ವರ್ಷಕ್ಕೆ 50,000 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು 4,000 ಕಿಲೋ ಲೀಟರ್‌ನಷ್ಟು ನೀರನ್ನು ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Continue Reading

ಬಾಲಿವುಡ್

Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Hamare Baarah: ಗುರುವಾರ, ಸುಪ್ರೀಂ ಕೋರ್ಟ್ ಚಿತ್ರದ ಟೀಸರ್ ಅನ್ನು “ಆಕ್ಷೇಪಾರ್ಹ” ಎಂದು ಕರೆದಿದೆ. ಮಾತ್ರವಲ್ಲ ಸಿನಿಮಾ ಬಿಡುಗಡೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಚಿತ್ರ ಇದೇ ಜೂನ್ 14 ರಂದು ರಿಲೀಸ್‌ ಆಗಬೇಕಿತ್ತು. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಪೀಠ ಸೂಚಿಸಿದೆ.

VISTARANEWS.COM


on

Hamare Baarah Release Supreme Court has imposed a stay
Koo

ಬೆಂಗಳೂರು: ಹಮ್ ದೋ, ಹಮಾರೆ ಬಾರಾ’ (Hamare Baarah) ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧ ಮಾಡಿ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈಗ ಹಮಾರೆ ಬಾರಾ ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಗುರುವಾರ, ಸುಪ್ರೀಂ ಕೋರ್ಟ್ ಚಿತ್ರದ ಟೀಸರ್ ಅನ್ನು “ಆಕ್ಷೇಪಾರ್ಹ” ಎಂದು ಕರೆದಿದೆ. ಮಾತ್ರವಲ್ಲ ಸಿನಿಮಾ ಬಿಡುಗಡೆಯನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಚಿತ್ರ ಇದೇ ಜೂನ್ 14 ರಂದು ರಿಲೀಸ್‌ ಆಗಬೇಕಿತ್ತು.

ಅರ್ಜಿದಾರರ ಪರ ವಕೀಲ ಫೌಜಿಯಾ ಶಕೀಲ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಅರ್ಜಿಯ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಬಾಂ ಬೆ ಹೈಕೋರ್ಟ್‌ಗೆ ಸೂಚಿಸಿದೆ. ನ್ಯಾಯಮೂರ್ತಿ ಮೆಹ್ತಾ ಅವರು ಚಿತ್ರದ ಟ್ರೈಲರ್‌ ಬಗ್ಗೆಯೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. “ಇಂದು ಬೆಳಗ್ಗೆ ನಾವು ಟೀಸರ್‌ ನೋಡಿದ್ದೇವೆ. ಆಕ್ಷೇಪಾರ್ಹವಾಗಿದೆ. ಟೀಸರ್ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ” ಎಂದು ಸಂದೀಪ್ ಮೆಹ್ತಾ ಹೇಳಿದ್ದಾರೆ. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಪೀಠ ಸೂಚಿಸಿದೆ.

ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ ಈ ಹಿಂದೆ ತಿಳಿಸಿತ್ತು. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು.

ಇದನ್ನೂ ಓದಿ: Hamare Baarah: ಮುಸ್ಲಿಂ ಮಹಿಳೆಯರ ಕುರಿತ ಹಮಾರೆ ಬಾರಾ ಸಿನಿಮಾ ರಿಲೀಸ್‌ಗೆ ಕೋರ್ಟ್‌ ಗ್ರೀನ್‌ ಸಿಗ್ನಲ್!

ಸಿನಿಮಾದ ಕತೆ ಏನು?

ಮನ್ಸೂರ್‌ ಅಲಿ ಖಾನ್‌ ಸಂಜಾರಿ ಎಂಬ ಮುಸ್ಲಿಂ ವ್ಯಕ್ತಿಯ ಸುತ್ತಲೂ ನಡೆಯುವ ಕತೆಯನ್ನು ಹೆಣೆಯಲಾಗಿದೆ. ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲ ಪತ್ನಿಯು ಹೆರಿಗೆ ವೇಳೆಯೇ ನಿಧನರಾಗುತ್ತಾರೆ. ಆದರೆ, ಮಕ್ಕಳು ಬೇಕು ಎಂಬ ಕಾರಣಕ್ಕಾಗಿ ಎರಡನೇ ಮದುವೆಯಾಗುವ ಆತನು, ಎರಡನೇ ಪತ್ನಿಯೊಂದಿಗೆ 5 ಮಕ್ಕಳೊಂದಿಗೆ ಪಡೆಯುವ ಆತನು, ಪತ್ನಿಯು 6ನೇ ಬಾರಿ ಗರ್ಭಿಣಿಯಾಗುತ್ತಾರೆ. ಆಗ ವೈದ್ಯರು, ಮಹಿಳೆ ಜೀವಕ್ಕೆ ಕುತ್ತಿದೆ, ಗರ್ಭಪಾತ ಮಾಡಿಸಬೇಕು ಎಂದು ಹೇಳುತ್ತಾರೆ. ಆದರೆ, ಗರ್ಭಪಾತಕ್ಕೆ ಮನ್ಸೂರ್‌ ಅಲಿ ಖಾನ್‌ ಸಂಜಾರಿ ನಿರಾಕರಿಸುತ್ತಾನೆ.

ಮನ್ಸೂರ್‌ ಅಲಿ ಖಾನ್‌ ಸಂಜಾರಿಯ ಮೊದಲನೇ ಪತ್ನಿಯ ಮಗಳು ಮಲತಾಯಿಯ ಹಕ್ಕುಗಳಿಗಾಗಿ ಹೋರಾಡಲು ಕೋರ್ಟ್‌ ಮೊರೆ ಹೋಗುತ್ತಾಳೆ. ಕೋರ್ಟ್‌ನಲ್ಲಿ ಆಕೆಯ ವಾದ ಏನಿರುತ್ತದೆ? ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳೇನು? ಮುಸ್ಲಿಂ ಮಹಿಳೆಯರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡುತ್ತಾಳೆ. ಕತೆಯಲ್ಲಿ ಮುಂದೇನಾಗುತ್ತದೆ ಎಂಬುದೇ ಕುತೂಹಲವಾಗಿದೆ. ಆದರೆ, ಸಿನಿಮಾಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಂಘಟನೆಗಳು ಕೋರ್ಟ್‌ ಮೊರೆ ಹೋಗಿದ್ದವು.

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

Actor Darshan : ಅಶ್ಲೀಲ ಮಸೇಜ್‌ ಕಳಿಸಿದ್ದಕ್ಕೆ ರೇಣುಕಾಸ್ವಾಮಿಯನ್ನು ಕೊಂದು ಹಾಕಿರುವ ಆರೋಪ ಹೊತ್ತಿರುವ ನಟ ದರ್ಶನ್‌ ಗ್ಯಾಂಗ್‌, ಕೃತ್ಯದ ಬಳಿಕ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಕಾಲ್‌ ಮಾಡಿದ್ದರು ಎನ್ನಲಾಗಿದೆ. ಅವರ ಸೂಚನೆ ಪ್ರಕಾರವೇ ಮೃತದೇಹವನ್ನು ಕಾಮಾಕ್ಷಿಪಾಳ್ಯದಲ್ಲಿ ಬಿಸಾಡಲಾಗಿತ್ತಂತೆ.

VISTARANEWS.COM


on

By

Actor Darshan
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಸ್ಟಡಿಯಲ್ಲಿರುವ ನಟ ದರ್ಶನ್‌ (Actor Darshan), ಪವಿತ್ರಾ ಗೌಡ (Pavitra Gowda) ಸೇರಿ ಇತರ ಆರೋಪಿಗಳ ತೀವ್ರ ವಿಚಾರಣೆಯು ನಡೆಯುತ್ತಿದೆ. ಈ ಮಧ್ಯೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವ ಗುಮಾನಿಯು ಶುರುವಾಗಿದೆ.

ರೇಣುಕಾಸ್ವಾಮಿ ಕೊಲೆಯಾದ ಬಳಿಕ ಆರೋಪಿಗಳು ಒರ್ವ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರದಲ್ಲಿ ನಡೆದ ಕೊಲೆ ನಂತರ ಮೃತದೇಹವನ್ನು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದು ಯಾಕೆ? ಎಲ್ಲಿಯೂ ಜಾಗ ಇಲ್ಲವೆಂದು ಕಾಮಾಕ್ಷಿ ಪಾಳ್ಯಕ್ಕೆ ತಂದು ಹಾಕಿದ್ದರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಡ್‌ಬಾಡಿ ಹಾಕಬೇಡಿ ಎಂದಿದ್ದರಾ? ಆರೋಪಿಗಳು ಪೊಲೀಸ್‌ ಅಧಿಕಾರಿ ಸೂಚನೆ ಮೇರೆಗೆ ಮೃತದೇಹ ಕಾಮಾಕ್ಷಿಪಾಳ್ಯಕ್ಕೆ ತಂದು ಎಸೆಯಲಾಗಿದೆ. ಮೃತ ದೇಹ ಎಸೆದ ಬಳಿಕ ಸಹ ಪೊಲೀಸ್ ಅಧಿಕಾರಿ ಜತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ದೊಡ್ಡ ಮೊತ್ತಕ್ಕೆ ಡೀಲ್?‌

ದರ್ಶನ್ ಹೆಸರು ಹೊರಬಾರದಂತೆ ದೊಡ್ಡ ಮೊತ್ತಕ್ಕೆ ಮಾತುಕತೆ ನಡೆದಿತ್ತಾ? ಎಂಬ ಶಂಕೆಯು ವ್ಯಕ್ತವಾಗಿದೆ. ಜತೆಗೆ A13 ದೀಪಕ್ ಎಂಬಾತ ಪ್ರಭಾವಿ ರಾಜಕಾರಣಿ ಸಂಬಂಧಿಕನಾಗಿದ್ದಾನೆ. ಹೀಗಾಗಿ ದೀಪಕ್ ಫೋಟೋ ರಿಲೀಸ್ ಮಾಡದೇ ಗೌಪ್ಯತೆ ಕಾಪಾಡೋದಕ್ಕೂ ದೊಡ್ಡ ಮೊತ್ತದ ಹಣ ಡೀಲ್ ನಡೆದಿದೆ ಎನ್ನಲಾಗಿದೆ. ಈತನನ್ನೂ ಕೇಸ್‌ನಿಂದ ಹೊರಗಿಡಲು ಪ್ರಯತ್ನ ನಡೆದಿದ್ದು, ಈತನ ಫೋಟೊ ಸಹ ಹೊರ ಬಾರದಂತೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ವ್ಯವಸ್ಥಿತವಾಗಿ ದೀಪಕ್‌ನನ್ನು ಅಪ್ರೂವರ್ ಮಾಡಿಕೊಂಡು ಕೇಸ್‌ನಿಂದ ಕೈ ಬಿಡುವ ಪ್ಲಾನ್ ನಡೆಯುತ್ತಿದೆ ಎಂದು ಪೊಲೀಸರ ತನಿಖೆ ಮೇಲೆ ಹಲವಾರು ಅನುಮಾನ ಮೂಡಿದೆ.

ಇದನ್ನೂ ಓದಿ: Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

ರೇಣುಕಾಸ್ವಾಮಿ ಹತ್ಯೆ ಹೇಗೆ ನಡೆದಿತ್ತು?

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್‌ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್‌ ಸೇರಿ ಹಲ್ಲೆ ಮಾಡಿದ್ದರು.

ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ 80 ಪರ್ಸೆಂಟ್ ಸಾವನ್ನಪ್ಪಿದ್ದ. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ನಟ ದರ್ಶನ್‌ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Actor Darshan: ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

Actor Darshan: ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಹಲವರು ಲಾಕ್‌ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟ ದರ್ಶನ್ ವಿರುದ್ಧ ಮಂಡ್ಯ ಅನ್ನದಾತರು ಸಿಡಿದೆದ್ದಿದ್ದರು.ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದರು.

VISTARANEWS.COM


on

Darshan Old Case Coming Out darshan gang
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ವಿಚಾರದಲ್ಲಿ ದರ್ಶನ್‌ ಹಾಗೂ ಗ್ಯಾಂಗ್‌ ಈಗಾಗಲೇ ಅರೆಸ್ಟ್‌ ಆಗಿದೆ. ಇದೀಗ ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷಗಳ ಹಿಂದೆ, ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವರು 10 ವರ್ಷಗಳ ಹಿಂದೆ ಪರಿಹಾರ ಕೇಳಲು ಹೋಗಿ ಕಣ್ಣು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಈ ರೀತಿ ವಿಕೃತಿ ತೋರಿಸಲಾಗಿತ್ತು ಎನ್ನಲಾಗಿದೆ.

ಏನಿದು ಘಟನೆ?

ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ವೇಳೆ ಇವರಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಹೊರಗೆ ಬಂದಿತ್ತು. ಇದರಿಂದ ಅವರ ಕಣ್ಣು ಹೋಗಿತ್ತು. ಆ ಬಳಿಕ ದರ್ಶನ್‌ ಕಡೆಯವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ಆ ಬಳಿಕ ದರ್ಶನ್ ಈ ಕುಟುಂಬದ ಕಡೆ ತಿರುಗಿಯೂ ನೋಡಿಲ್ಲ. ಬಳಿಕ ಕಾರ್ಮಿಕ ತನ್ನ ಸಂಬಂಧಿಕರ ಜತೆ ಪರಿಹಾರ ಕೇಳಲು ಫಾರ್ಮ್ ಹೌಸ್​ಗೆ ಹೋದರೆ ದರ್ಶನ್‌ ಗ್ಯಾಂಗ್‌ ಅವರ ಮೇಲೆ ಸಾಕುನಾಯಿ ಛೂ ಬಿಟ್ಟಿದ್ದರಂತೆ. ಮೈಸೂರಿನ ಹೊಟೇಲ್​ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಒಂದು ವೇಳೆ ಈ ವಿಚಾರ ಬಾಯ್ಬಿಟ್ಟರೆ ಪರಿಸ್ಥಿತಿ ಸರಿ ಇರಲ್ಲ ಎಂದು ಬೆದರಿಕೆ ಕೂಡ ಹಾಕಿತ್ತಂತೆ ದರ್ಶನ್‌ ಟೀಂ. ಇದೀಗ ಮಹೇಶ್‌ ಅವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ತಾಯಿ ಮತ್ತು ಹೆಂಡತಿಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಮಹೇಶ್ ಆರೈಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

ನಟ ದರ್ಶನ್‌ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು

ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಹಲವರು ಲಾಕ್‌ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟ ದರ್ಶನ್ ವಿರುದ್ಧ ಮಂಡ್ಯ ಅನ್ನದಾತರು ಸಿಡಿದೆದ್ದಿದ್ದರು.ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ದರ್ಶನ್ ಹಾಗೂ ಇತರೆ ಕನ್ನಡ ನಟರು ಡಾ.ರಾಜಕುಮಾರ್ ಆದರ್ಶ ಪಾಲಿಸಲಿ. ಕೇವಲ ಹಣಕ್ಕಾಗಿ ಕಲಾವಿದರಾಗುವುದು ಬೇಡ ಎಂದರು. ಈಗೀನ‌ ನಟರು ಪೇಯ್ಡ್ ಆಕ್ಟರ್ಸ್ ಆಗಿದ್ದಾರೆ. ಇವರಿಗೆ ಯಾವುದೇ ಮೌಲ್ಯಗಳಿಲ್ಲ.ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು. ತಪ್ಪಿತಸ್ಥರಿಗೆ ಕಾನೂನು ಕ್ರಮವಾಗಬೇಕು ಎಂದು ಚನ್ನಪಟ್ಟಣದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಗ್ರಹಿಸಿದರು. ನಗರದ ಅಂಚೆಕಚೇರಿ ರಸ್ತೆಯಲ್ಲಿ ಡಾ. ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

Continue Reading
Advertisement
World Anti Child Labor Day celebration in Hosapete
ವಿಜಯನಗರ20 mins ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

Kangana Ranaut
Latest24 mins ago

Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

JP Nadda
Latest36 mins ago

JP Nadda: ವೇದಿಕೆ ಮೇಲೆ ಗುಟ್ಕಾ ತಿಂದ ಕೇಂದ್ರ ಆರೋಗ್ಯ ಸಚಿವ ನಡ್ಡಾ? ವಿಡಿಯೊ ನೋಡಿ

Actor darshan Arrested
ಪ್ರಮುಖ ಸುದ್ದಿ43 mins ago

Actor darshan Arrested : ದರ್ಶನ್‌ಗೆ ಎಣ್ಣೆ ಹೊಡೆಯಲು, ಸಿಗರೇಟ್​ ಸೇದಲು ಠಾಣೆಗೇ ಶಾಮಿಯಾನ ಹಾಕಿದರೆ ಪೊಲೀಸರು?

Hamare Baarah Release Supreme Court has imposed a stay
ಬಾಲಿವುಡ್48 mins ago

Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Stock Market
ವಾಣಿಜ್ಯ50 mins ago

Stock Market: ಷೇರುಪೇಟೆಯಲ್ಲಿ ಗೂಳಿ ಗುಟುರು; ಸೆನ್ಸೆಕ್ಸ್‌, ನಿಫ್ಟಿ ಏರಿಕೆ

Actor Darshan
ಬೆಂಗಳೂರು50 mins ago

Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

Darshan Old Case Coming Out darshan gang
ಕ್ರೈಂ54 mins ago

Actor Darshan: ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

IND vs USA
ಕ್ರೀಡೆ1 hour ago

IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

Actor Darshan case ram gopal varma Reaction
ಸ್ಯಾಂಡಲ್ ವುಡ್1 hour ago

Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌