Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್: ರೈಲ್ವೆ ಪೊಲೀಸ್‌ ಟ್ವೀಟ್‌ನಲ್ಲಿ ಹೇಳಿದ್ದೇನು? - Vistara News

ಬಾಲಿವುಡ್

Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್: ರೈಲ್ವೆ ಪೊಲೀಸ್‌ ಟ್ವೀಟ್‌ನಲ್ಲಿ ಹೇಳಿದ್ದೇನು?

ಸೋನು ಸೂದ್ (Sonu Sood) ಅವರು ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಪೊಲೀಸರು ಎಚ್ಚರಿಕೆಯ ಮೆಸೇಜ್‌ ನೀಡಿದ್ದಾರೆ.

VISTARANEWS.COM


on

Sonu Sood
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ ನಟ ಸೋನು ಸೂದ್ (Sonu Sood) ಅವರು ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗುತ್ತಿದ್ದು, ಸೋನು ಸೂದ್ ಅಭಿಮಾನಿಗಳು ವಿಡಿಯೊ ನೋಡಿ ಸಂತಸ ವ್ಯಕ್ತಪಡಿಸಿದರೆ ರೈಲ್ವೆ ಪೊಲೀಸರು ಎಚ್ಚರಿಕೆಯ ಮೆಸೇಜ್‌ ನೀಡಿದ್ದಾರೆ.

ರೈಲಿನ ಪ್ರಯಾಣವನ್ನು ಆನಂದಿಸುತ್ತಿರುವ ವಿಡಿಯೊವನ್ನು ನಟ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಚರ್ಚೆಗಳು ಆಗುತ್ತಿವೆ. ಸೋನು ಸೂದ್ ಫುಟ್‌ಬೋರ್ಡ್‌ನಲ್ಲಿ ಕುಳಿತು ಚಲಿಸುತ್ತಿರುವ ರೈಲಿನ ಬಾಗಿಲಿನ ಬಳಿ ಹ್ಯಾಂಡಲ್ ಅನ್ನು ಹಿಡಿದುಕೊಂಡು ಇಣುಕಿ ನೋಡುವುದನ್ನು ಕಾಣಬಹುದು. ಅವರು ವಿಡಿಯೊವನ್ನು ಹಂಚಿಕೊಂಡ ತಕ್ಷಣ, ನೆಟ್ಟಿಗರು ಸೋನು ಅವರನ್ನು ಡೌನ್ ಟು ಅರ್ಥ್ ಎಂದು ಶ್ಲಾಘಿಸಿದ್ದಾರೆ. ಹಾಗೇ ʻʻಸ್ಟಾರ್ ಆದ ನಂತರವೂ ಸರಳವಾಗಿ ಇದ್ದಾರೆ. ಪ್ರತಿ ಕ್ಷಣ ತಮ್ಮ ಲೈಫ್‌ ಅನ್ನು ಆನಂದಿಸುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Sonu sood | ಶ್ರೀಮಂತನಾದ ಸೋನು ಸೂದ್‌ ಈಗ ರೈತ!

ಆದರೆ ಈ ವಿಡಿಯೊ ರೈಲ್ವೆ ಅಧಿಕಾರಿಗಳ ಕಣ್ಣಿಗೂ ಬಿದ್ದಿದ್ದು ಎಚ್ಚರಿಕೆ ಮತ್ತು ಸಲಹೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಮುಂಬೈ ವಿಭಾಗದ ರೈಲ್ವೆ ಪೊಲೀಸ್ ಹ್ಯಾಂಡಲ್ ಟ್ವೀಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ನಟನಿಗೆ ಸಲಹೆ ನೀಡಿದೆ. ಟ್ವೀಟ್‌ ಮೂಲಕ ʻʻಸೋನು ಸೂದ್ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ ‘ಮನರಂಜನೆ’ಯ ಮೂಲವಾಗಿರಬಹುದು. ನಿಜ ಜೀವನದಲ್ಲಿ ಅಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ ಮತ್ತು ಎಲ್ಲರಿಗೂ ‘ಹೊಸ ವರ್ಷದ ಶುಭಾಶಯಗಳು” ಎಂದು GRP ಹ್ಯಾಂಡಲ್ ಟ್ವೀಟ್ ಮಾಡಿದೆ.

ಸೋನು ನಗರದಲ್ಲಿ ಪ್ರಯಾಣಿಸಲು ರೈಲಿನಲ್ಲಿ ಹೋಗುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆಯೂ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುವ ವಿಡಿಯೋವನ್ನು ಶೇರ್ ಮಾಡಿದ್ದರು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ಸಹಾಯ ಮಾಡಿ ದೇಶದ ಗಮನ ಸೆಳೆದಿದ್ದರು. ಸೋನು ಕೊನೆಯದಾಗಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ | Vaani Kapoor | ಬಾಲಿವುಡ್‌ ಬೆಡಗಿ ವಾಣಿ ಕಪೂರ್‌ ಡ್ರೆಸ್‌ ಝಲಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kangana Ranaut: ಕಂಗನಾ ರಣಾವತ್‌ಗೆ ಕಪಾಳಮೋಕ್ಷ; ಹೃತಿಕ್ ರೋಷನ್ ರಿಯಾಕ್ಷನ್‌ ಏನು?

Kangana Ranaut: ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಜೋಯಾ ಅಖ್ತರ್, ಸೋನಿ ರಜ್ದಾನ್, ಅರ್ಜುನ್ ಕಪೂರ್ ಮತ್ತು ಪ್ರಜಕ್ತಾ ಕೋಲಿ ಸೇರಿದಂತೆ ಹಲವು ಬಾಲಿವುಡ್ ಗಣ್ಯ ವ್ಯಕ್ತಿಗಳು ಕಂಗನಾ ರಣಾವತ್‌ಗೆ​ ಬೆಂಬಲವನ್ನು ನೀಡಿದ್ದಾರೆ. ಅನುಪಮ್ ಖೇರ್, ಮಿಕಾ ಸಿಂಗ್, ರವೀನಾ ಟಂಡನ್ ಮತ್ತು ಶೇಖರ್ ಸುಮನ್ ಸೇರಿದಂತೆ ಹಲವಾರು ವ್ಯಕ್ತಿಗಳು ಘಟನೆಯನ್ನು ಖಂಡಿಸಿದ್ದಾರೆ.

VISTARANEWS.COM


on

Kangana Ranaut Slapped incident Hrithik Roshan Backs Post
Koo

ಬೆಂಗಳೂರು: ಲೋಕಸಭಾ ಚುನಾವಣೆ(Lok Sabha Election 2024)ಯಲ್ಲಿ ಹಿಮಾಚಲಪ್ರದೇಶದ ಮಂಡಿಯಿಂದ ಸಂಸದರಾಗಿ ಆಯ್ಕೆಯಾದ ಕಂಗನಾ ರಣಾವತ್ (Kangana Ranaut)ಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೇಬಲ್‌ ಕುಲ್ವಿಂದರ್‌ ಕೌರ್‌ರನ್ನು ಅರೆಸ್ಟ್‌ ಮಾಡಲಾಗಿದೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಗುರುವಾರ ಕಂಗನಾ ಮೇಲೆ CISF ಸಿಬ್ಬಂದಿ ಕೌರ್‌ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಜೋಯಾ ಅಖ್ತರ್, ಸೋನಿ ರಜ್ದಾನ್, ಅರ್ಜುನ್ ಕಪೂರ್ ಮತ್ತು ಪ್ರಜಕ್ತಾ ಕೋಲಿ ಸೇರಿದಂತೆ ಹಲವು ಬಾಲಿವುಡ್ ಗಣ್ಯ ವ್ಯಕ್ತಿಗಳು ಕಂಗನಾ ರಣಾವತ್‌ಗೆ​ ಬೆಂಬಲವನ್ನು ನೀಡಿದ್ದಾರೆ. ಅನುಪಮ್ ಖೇರ್, ಮಿಕಾ ಸಿಂಗ್, ರವೀನಾ ಟಂಡನ್ ಮತ್ತು ಶೇಖರ್ ಸುಮನ್ ಸೇರಿದಂತೆ ಹಲವಾರು ವ್ಯಕ್ತಿಗಳು ಘಟನೆಯನ್ನು ಖಂಡಿಸಿದ್ದಾರೆ.

ಪತ್ರಕರ್ತೆ ಫಾಯೆ ಡಿಸೋಜಾ ಅವರು ಕಪಾಳಮೋಕ್ಷ ಘಟನೆಯನ್ನು ಖಂಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, “ಹಿಂಸೆ ಎಂದಿಗೂ ಉತ್ತರವಾಗುವುದಿಲ್ಲ” ಎಂದು ಹೇಳಿದ್ದಾರೆ. “ವಿಶೇಷವಾಗಿ ಗಾಂಧಿಯವರ ಅಹಿಂಸೆಯ ಆದರ್ಶಗಳಿಂದ ಹುಟ್ಟಿದ ನಮ್ಮ ದೇಶದಲ್ಲಿ ಅಲ್ಲ. ಯಾರೋ ಮಾಡಿದ ಅಭಿಪ್ರಾಯಗಳು ಮತ್ತು ಹೇಳಿಕೆಗಳೊಂದಿಗೆ ನಾವು ಎಷ್ಟು ಭಿನ್ನಾಭಿಪ್ರಾಯ ಹೊಂದಿದ್ದೇವೆ ಎಂಬುದು ಮುಖ್ಯವಲ್ಲ, ನಾವು ಹಿಂಸೆಯಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಮತ್ತು ನಾವು ಅದನ್ನು ಕ್ಷಮಿಸಬಾರದು, ಹಿಂಸೆ ಎಂದಿಗೂ ಉತ್ತರವಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಹೃತಿಕ್ ರೋಷನ್, ಆಲಿಯಾ ಭಟ್, ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ, ಜೋಯಾ ಅಖ್ತರ್ ಮತ್ತು ಸೋನಿ ರಜ್ದಾನ್ ಸೇರಿದಂತೆ ಅನೇಕರು ಲೈಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

Liked by Hrithik
byu/Icy-One-5297 inBollyBlindsNGossip

ಏನಿದು ಘಟನೆ?

2020 ರಲ್ಲಿ, ಕಂಗನಾ ರಣಾವತ್‌ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

100 ರೂಪಾಯಿಗೆ ಸಿಗುವ ಮಹಿಳೆಯರು ಎಂದು ಕಂಗನಾ ಕೊಟ್ಟಿರುವ ಹೇಳಿಕೆಯು ಎಕ್ಸ್ ನಲ್ಲಿ(ಟ್ವಿಟರ್​) ಕಂಗನಾ ಮತ್ತು ಗಾಯಕ-ನಟ ದಿಲ್ಜೀತ್ ದೋಸಾಂಜ್ ನಡುವೆ ಗಲಾಟೆಗೆ ಕಾರಣವಾಗಿತ್ತು. ಫೆಬ್ರವರಿ 2021 ರಲ್ಲಿ, ಅಂತಾರಾಷ್ಟ್ರೀಯ ಪಾಪ್ ಸೆನ್ಸೇಷನ್ ರಿಹಾನ್ನಾ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರನೌತ್ ಪ್ರತಿಭಟನಾಕಾರರನ್ನು “ಭಯೋತ್ಪಾದಕರು” ಎಂದು ಕರೆದಿದ್ದರು ಮತ್ತು ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಸಿಬ್ಬಂದಿ ರೈತರ ಚಳವಳಿ ಕುರಿತು ನೀಡಿದ್ದ ಹೇಳಿಕೆಯಿಂದ ನನಗೆ ನೋವಾಗಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

Continue Reading

ಬಾಲಿವುಡ್

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

VISTARANEWS.COM


on

Maharaj Movie Objects by Bajrang Dal Starring Junaid Khan
Koo

ಬೆಂಗಳೂರು: ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಸಿನಿ ಪಯಣ ಶುರು ಮಾಡಿದ್ದಾರೆ. ಇದೀಗ ಅವರ ಸಿನಿಮಾ ಬಿಡುಗಡೆಯಾಗುವ ಮೊದಲೇ (Maharaj Movie) ವಿವಾದಕ್ಕೆ ಗುರಿಯಾಗಿದೆ. ಜುನೈದ್‌ (Junaid Khan) ನಟಿಸಿರುವ ‘ಮಹಾರಾಜ್’ ಸಿನಿಮಾ ಜೂನ್ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಪ್ರದರ್ಶನಗೊಳ್ಳಲಿದೆ. ಆದರೀಗ ಸಿನಿಮಾ ಬಗ್ಗೆ ಬಜರಂಗದಳದಿಂದ ಆಕ್ಷೇಪ ವ್ಯಕ್ತವಾಗಿದೆ. ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯ ಸಿನಿಮಾದಲ್ಲಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ್ ಪಿ ಮಲ್ಹೋತ್ರಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಜುನೈದ್ ಜತೆ ಮಹಾರಾಜ್ ಚಿತ್ರದಲ್ಲಿ ಜೈದೀಪ್ ಅಹ್ಲಾವತ್, ಶಾಲಿನಿ ಪಾಂಡೆ ಮತ್ತು ಶಾರ್ವರಿ ವಾಘ್ ಅವರು ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಇನ್ನೂ ಟ್ರೈಲರ್‌ ರಿಲೀಸ್‌ ಮಾಡಿಲ್ಲ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ದೃಶ್ಯಗಳು ಇವೆ ಎಂದು ವಿರೋಧಿಸಿ ಬಜರಂಗದಳ ಈ ರೀತಿ ಪತ್ರ ಬರೆದುಕೊಂಡಿದೆ.

ʻʻಈ ಸಿನಿಮಾದಲ್ಲಿ ಹಿಂದು ಧರ್ಮದ ಗುರುವನ್ನು ವಿಲನ್‌ ರೀತಿ ತೋರಿಸಲಾಗಿದೆ. ಭಗವಾನ್‌ ಶ್ರೀಕೃಷ್ಣನನ್ನು ಕೆಲವೊಂದು ದೃಶ್ಯಗಳಲ್ಲಿ ಕೆಟ್ಟದ್ದಾಗಿ ತೋರಿಸಿದ್ದಾರೆ. ಕೃಷ್ಣ ಲೀಲೇಯನ್ನೇ ಪ್ರಮುಖ ಹೈಲೈಟ್‌ ಮಾಡಿದ್ದಾರೆ. 150 ವರ್ಷಗಳ ಹಿಂದಿನ ನ್ಯಾಯಾಲಯದ ತೀರ್ಪನ್ನು ಆಧರಿಸಿದ ಚಲನಚಿತ್ರವು ಒಂದು ಧರ್ಮಕ್ಕೆ ವಿರುದ್ಧವಾಗಿದೆ. ಆ ಸಮಯದಲ್ಲಿ ಬ್ರಿಟಿಷ್ ಸರ್ಕಾರವಿತ್ತು. ಆಗ ಬ್ರಿಟಿಷರು ಹಿಂದುಗಳು ಮತ್ತು ಹಿಂದು ಧರ್ಮದ ವಿರುದ್ಧವಾಗಿದ್ದರು. ಆ ರೀತಿಯ ದೃಶ್ಯ ಸಿನಿಮಾದಲ್ಲಿದೆ. ಮಾತ್ರವಲ್ಲ ಮತಾಂತರಗೊಂಡ ದೃಶ್ಯಗಳು ಇವೆ. ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಆಗಬೇಕು. ನಮಗೆ ಸಿನಿಮಾ ತೋರಿಸಬೇಕು. ಧರ್ಮ ಅಥವಾ ಯಾವುದೇ ಹಿಂದು ಸಮುದಾಯದ ವಿರುದ್ಧ ಯಾವುದೇ ಆಕ್ಷೇಪಣೆ ಇದ್ದರೆ, ಆ ದೃಶಗಳನ್ನು ತೆಗೆಯಬೇಕು. ಒಂದು ವೇಳೆ ಸರಿಯಾಗಿದ್ದರೆ ನಾವು ಆಕ್ಷೇಪಣೆ ಎತ್ತುವುದಿಲ್ಲ. ಹಾಗೂ ಬಿಡುಗಡೆ ಮಾಡಿದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಕೊಡುವುದಿಲ್ಲʼʼಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ಯಶ್ ರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಎರಡನ್ನೂ ಮಾಧ್ಯಮವೊಂದು ಪತ್ರದ ಬಗ್ಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಪತ್ರದ ಕುರಿತು ಇದುವೆರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಯಶ್ ರಾಜ್ ಫಿಲ್ಮ್ಸ್ ಹಾಗೂ ನೆಟ್‌ಫ್ಲಿಕ್ಸ್ ನೀಡಿಲ್ಲ ಎಂದು ವರದಿಯಾಗಿದೆ.

1862ರಲ್ಲಿ ಭಾರತದಲ್ಲಿದ್ದ ಮೂರು ವಿಶ್ವವಿದ್ಯಾನಿಲಯಗಳ ಬಗ್ಗೆ “ಮಹಾರಾಜ್” ಸಿನಿಮಾವನ್ನು ಮಾಡಲಾಗಿದೆ. ದೇಶದಲ್ಲಿ ಸ್ಥಿತಿ ಹದಗೆಟ್ಟಿದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕಾನೂನು ಹೋರಾಟದಲ್ಲಿ ಧೈರ್ಯಶಾಲಿಯಾಗಿ ನುಗ್ಗಿ ಯಾವ ರೀತಿ ಪರಿಸ್ಥಿತಿ ಎದುರಿಸುತ್ತಾನೆ ಎಂಬಾ ಕಥಾಹಂದರವನ್ನು ಹೊಂದಿರುವ ನೈಜ ಕಥೆ ಆಗಿದೆ.

ಜುನೈದ್ ಖಾನ್ ಈಗ ಈ ಸಿನಿಮಾ ,ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 2ನೇ ಸಿನಿಮಾದಲ್ಲಿ ನಟಿ ಸಾಯಿ ಪಲ್ಲ ಜತೆ ಜುನೈದ್ ಖಾನ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮೂರನೇ ಸಿನಿಮಾದಲ್ಲಿ ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಜತೆ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.


Continue Reading

ಸಿನಿಮಾ

Radhika Merchant: ಪ್ರಿವೆಡ್ಡಿಂಗ್‌ಗೆ ಅಂಬಾನಿ ಸೊಸೆ ಧರಿಸಿದ್ದು 65 ವರ್ಷ ಹಳೆಯ ಸ್ಕರ್ಟ್‌! ಇದರ ಬೆಲೆ?

Radhika Merchant: ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

VISTARANEWS.COM


on

Radhika Merchant archival Dior dress for her pre-wedding
Koo

ಬೆಂಗಳೂರು: ರಾಧಿಕಾ ಮರ್ಚಂಟ್‌ (Radhika Merchant) ಹಾಗೂ ಅನಂತ್ ಅಂಬಾನಿ ಮದುವೆಗೆ ಸಜ್ಜಾಗುತ್ತಿದ್ದಾರೆ. ಈ ಮುಂಚೆ ಇಟಲಿಯಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಫೋಟೊಗಳು ಇದೀಗ ಭಾರಿ ವೈರಲ್‌ ಆಗುತ್ತಿವೆ. ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

ರಾಧಿಕಾ ಮರ್ಚಂಟ್‌ ಇಟಲಿಯ ಪೋರ್ಟೋಫಿನೋದಲ್ಲಿ ನಡೆದ ಆಚರಣೆಗಳಿಗಾಗಿ ಬಾರ್ಬಿಕೋರ್ ಟ್ರೆಂಡ್ ಧರಿಸಿದ್ದರು. ಈ ಉಡುಪನ್ನು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ್ದಾರೆ. ವರದಿಯ ಪ್ರಕಾರ ರಾಧಿಕಾ ಅವರ ಆರ್ಕೈವಲ್ ಡಿಯೊರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ ಎನ್ನಲಾಗಿದೆ . ಇದು ಮೂಲತಃ ಜೀನಿ ಮ್ಯಾಗ್ನಿನ್ ಅವರದ್ದು ಎನ್ನಲಾಗಿದೆ.

ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ. ರಾಧಿಕಾ ಅವರು ಈ ಸ್ಕರ್ಟ್‌ ಜತೆಗೆ ವಜ್ರದ ಉಂಗುರ, ಗುಲಾಬಿ ಬಣ್ಣದ ಹರ್ಮೆಸ್ ಮಿನಿ ಕೆಲ್ಲಿ ಬ್ಯಾಗ್ ಧರಿಸಿದ್ದರು. ಪೋನಿಟೇಲ್‌ಗೆ ರೇಷ್ಮೆಯ ಸ್ಕಾರ್ಫ್‌ ಧರಿಸಿದ್ದರು.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.


Continue Reading

ಬಾಲಿವುಡ್

Ranbir Kapoor: ರಣಬೀರ್ ಕಪೂರ್ ಹೊಸ ಲುಕ್‌ಗೆ ಫ್ಯಾನ್ಸ್‌ ಫಿದಾ; ಟ್ಯಾಟೂ ಹೈಲೈಟ್‌!

Ranbir Kapoor: ದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್‌ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು.

VISTARANEWS.COM


on

Ranbir Kapoor flaunts his Raha tattoo new look
Koo

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಪ್ರಸ್ತುತ ʻರಾಮಾಯಣ; ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದರು. ಇದೀಗ ಹೊಸ ಲುಕ್‌ನಲ್ಲಿ ಕಂಡಿದ್ದಾರೆ ರಣಬೀರ್‌. ಸಂಜಯ್ ಲೀಲಾ ಬನ್ಸಾಲಿಯವರ ಹೊಸ ಪ್ರಾಜೆಕ್ಟ್ ಲವ್ & ವಾರ್ ಸಿನಿಮಾಗಾಗಿ ಲುಕ್‌ ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ.

ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಣಬೀರ್‌ ಅವರ ಈ ಹೊಸ ಲುಕ್‌ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. “ರಣಬೀರ್ ಕಪೂರ್‌ ಹೇರ್‌ ಕಟ್‌ ವೈಬ್‌ʼʼಎಂದು ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ. ಶೇರ್‌ ಮಾಡಿರುವ ಫೋಟೊದಲ್ಲಿ ಗಮನಸೆಳೆದದ್ದು ಟ್ಯಾಟೂ. ರಣಬೀರ್‌ ತಮ್ಮ ಭುಜದ ಮೇಲೆ ಕುತ್ತಿಗೆಯ ಸಮೀಪ ಮಗಳ ಹೆಸರು ರಾಹಾ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಬಹಿರಂಗಗೊಂಡಿದ್ದು ಇದೇ ಮೊದಲು.

ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್‌ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್‌ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. ಈಗ ಈ ‘ಲವ್ ಆ್ಯಂಡ್ ವಾರ್’ ನಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್‌ ನಟಿಸಲಿದ್ದಾರೆ.

ಇದನ್ನೂ ಓದಿ: Ranbir Kapoor: ರಣಬೀರ್​ ಕಪೂರ್‌ಗೆ​ ಅಶ್ಲೀಲವಾಗಿ ಬೈಯ್ದ್ರಾ ಫೋಟೋಗ್ರಾಫರ್‌? ವಿಡಿಯೊದಲ್ಲಿ ಏನಿದೆ?

ಈ ‘ಲವ್ ಆ್ಯಂಡ್ ವಾರ್’ ಸಿನಿಮಾ ʻಸಂಗಮ್‌ʼ ರಿಮೇಕ್‌ ಎಂದು ಬಹಳ ಹಿಂದೆಯೇ ವರದಿಯಾಗಿತ್ತು. ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಬನ್ಸಾಲಿಯವರ ‘ಲವ್ ಆ್ಯಂಡ್ ವಾರ್’ ಸಿನಿಮಾ ಒಂದು ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವರದಿಯಾಗಿದೆ. ಮಾತ್ರವಲ್ಲ 1964ರ ಚಲನಚಿತ್ರ ʻಸಂಗಮ್‌ʼ ಸಿನಿಮಾದಿಂದ ಸ್ಫೂರ್ತಿ ಪಡೆದ ‘ಲವ್ ಆ್ಯಂಡ್ ವಾರ್’ ಆಧುನಿಕ ಕಾಲದ ಚಿತ್ರಕಥೆ ಹೊಂದಿರಲಿದೆ ಎಂದು ವರದಿಯಾಗಿದೆ.

ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ಧೃಢ ಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

ನಿತೇಶ್ ತಿವಾರಿ ಅವರ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲೂ ರಣಬೀರ್ ಕಪೂರ್ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇವೆರಡೂ ಸಿನಿಮಾ ಆದ ಬಳಿಕ ‘ಅನಿಮಲ್ 2’ ಚಿತ್ರದ ಕೆಲಸಗಳಲ್ಲಿ ರಣಬೀರ್‌ ತೊಡಗಿಸಿಕೊಳ್ಳಲಿದ್ದಾರೆ.ಇನ್ನು ಎರಡನೇ ಭಾಗದಲ್ಲಿಯೂ ರಶ್ಮಿಕಾ ಮಂದಣ್ಣ ಇರಲಿದ್ದಾರಂತೆ. ರಣವಿಜಯ್ ಪಾತ್ರದ ಮೇಲೆಯೇ ಅನಿಮಲ್ ಪಾರ್ಕ್ ಸಾಗಲಿದೆ ಎನ್ನಲಾಗಿದೆ.

Continue Reading
Advertisement
ind vs pak
ಪ್ರಮುಖ ಸುದ್ದಿ2 hours ago

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

Stabbing in Mangalore:
ಪ್ರಮುಖ ಸುದ್ದಿ3 hours ago

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Modi 3.0 Cabinet
ದೇಶ3 hours ago

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

IND vs PAK:
ಪ್ರಮುಖ ಸುದ್ದಿ4 hours ago

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

Veeraloka
Latest5 hours ago

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

IND vs PAK
ಪ್ರಮುಖ ಸುದ್ದಿ5 hours ago

IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

Modi 3.0 Cabinet
ದೇಶ5 hours ago

Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Modi 3.0 Cabinet
ದೇಶ5 hours ago

Modi 3.0 Cabinet: 30 ಕ್ಯಾಬಿನೆಟ್‌ ದರ್ಜೆ, 5 ಸ್ವತಂತ್ರ, 36 ಸಂಸದರಿಗೆ ರಾಜ್ಯ ಖಾತೆ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್

V Somanna profile
ಪ್ರಮುಖ ಸುದ್ದಿ6 hours ago

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

Terror Attack
ಕ್ರೈಂ6 hours ago

Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌