Sudeep birthday | ಒಟಿಟಿ ಅಖಾಡದಲ್ಲೂ ಅಬ್ಬರಿಸಲು ‘ವಿಕ್ರಾಂತ್‌ ರೋಣ’ ಸಿನಿಮಾ ಸಿದ್ಧ ! - Vistara News

ಸಿನಿಮಾ

Sudeep birthday | ಒಟಿಟಿ ಅಖಾಡದಲ್ಲೂ ಅಬ್ಬರಿಸಲು ‘ವಿಕ್ರಾಂತ್‌ ರೋಣ’ ಸಿನಿಮಾ ಸಿದ್ಧ !

ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 2ರಂದು ‘ವಿಕ್ರಾಂತ್‌ ರೋಣ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲಿದೆ.

VISTARANEWS.COM


on

Sudeep birthday
ಸುದೀಪ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿರುವ ಹೊತ್ತಲ್ಲೇ ‘ವಿಕ್ರಾಂತ್‌ ರೋಣ’ನ ಅಭಿಮಾನಿ ಬಳಗಕ್ಕೂ ಸಿಹಿಸುದ್ದಿ ಸಿಕ್ಕಿದೆ. ನಾಳೆ ಸುದೀಪ್‌ ಅವರ ಬರ್ತ್‌ ಡೇ (Sudeep birthday) ಜೊತೆಗೆ ‘ವಿಕ್ರಾಂತ್‌ ರೋಣ’ ಕೂಡ ಒಟಿಟಿಗೆ ಎಂಟ್ರಿ ಕೊಡಲಿದೆ. ಹೀಗಾಗಿ ಫ್ಯಾನ್ಸ್‌ ಡಬಲ್‌ ಸಂಭ್ರಮದಲ್ಲಿದ್ದಾರೆ. ಈಗಾಗಲೇ ‘ವಿಕ್ರಾಂತ್‌ ರೋಣ’ ಚಿತ್ರ ₹250 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದ್ದು, ಒಟಿಟಿ ಪ್ಲಾಟ್‌ಫಾರಂಗೂ ದೊಡ್ಡ ಮೊತ್ತಕ್ಕೆ ಸೋಲ್ಡ್‌ ಆಗಿದೆ.

ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಜುಲೈ 28ರಂದು ಸಿನಿಮಾ ಜಗತ್ತಿನಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿತ್ತು. ಇದೇ ಮೊದಲ ಬಾರಿಗೆ ಕನ್ನಡಿಗರ ಚಿತ್ರ ಒಂದು ಹಾಲಿವುಡ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಂತಾಗಿತ್ತು. ಹೀಗೆ ವಿಕ್ರಾಂತ್‌ ರೋಣ ಚಿತ್ರ ಹಾಲಿವುಡ್‌ನಲ್ಲೂ ಭರ್ಜರಿ ಕಲೆಕ್ಷನ್‌ ಮಾಡಿದೆ. ಇಷ್ಟಲ್ಲಾ ನಿರೀಕ್ಷೆ ಜೊತೆಯಲ್ಲೇ ಒಟಿಟಿ ಪ್ಲಾಟ್‌ಫಾರಂನಲ್ಲೂ ಅಬ್ಬರಿಸಲು ಸಜ್ಜಾಗಿದೆ ನಟ ಸುದೀಪ್‌ ಸಿನಿಮಾ.

ಬಾಕ್ಸ್‌ ಆಫೀಸ್​ ಶೇಕ್‌
ವಿಕ್ರಾಂತ್‌ ರೋಣ ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್ ಆಗಿದೆ. ಇದರ ಜೊತೆಗೆ ಕಿಚ್ಚ ಸುದೀಪ್‌ ಹುಟ್ಟುಹಬ್ಬ ಬಂದಿದೆ. ಈ ಬಾರಿ ಸುದೀಪ್ ಫ್ಯಾನ್ಸ್‌ ಸಖತ್ತಾಗಿ ಸೆಲೆಬ್ರೆಷನ್‌ ಮಾಡೋದಕ್ಕೆ ತಯಾರಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚ ಸುದೀಪ್‌ ಬರ್ತ್‌ ಡೇ ವಿಚಾರ ಟ್ರೆಂಡ್‌ ಆಗುತ್ತಿದೆ. ಬಾಕ್ಸ್‌ ಆಫೀಸ್​​ ಶೇಕ್‌ ಮಾಡಿ, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ‘ವಿಕ್ರಾಂತ್‌ ರೋಣ’ ಬಾಲಿವುಡ್‌ನ ಸ್ಟಾರ್‌ಗಳಿಗೂ ನಡುಕ ತರಿಸಿತ್ತು. ಹೀಗಾಗಿಯೇ ‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಿದ್ದಾಗ ಬಾಲಿವುಡ್‌ನ ಯಾವ ಸ್ಟಾರ್‌ ಸಿನಿಮಾ ಕೂಡ ರಿಲೀಸ್‌ ಆಗಿರಲಿಲ್ಲ.

ಈ ಬಾರಿ ಕಿಚ್ಚ ಸುದೀಪ್‌ ಅಭಿಮಾನಿ ಬಳಗಕ್ಕೆ ಗಿಫ್ಟ್‌ ಮೇಲೆ ಗಿಫ್ಟ್‌ ಸಿಗುತ್ತಿದೆ. ಒಂದು ಕಡೆ ‘ವಿಕ್ರಾಂತ್ ರೋಣ’ ಸಿನಿಮಾ ಬಿಗ್‌ ಹಿಟ್‌ ಆಗುವುದರ ಜೊತೆಗೆ ಸುದೀಪ್‌ ಅವರ ಮತ್ತಷ್ಟು ಹೊಸ ಸಿನಿಮಾಗಳು ಸೆಪ್ಟೆಂಬರ್‌ 2ರಂದು ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೋಟ್ಯಂತರ ಅಭಿಮಾನಿಗಳು ಈ ಘಳಿಗೆಗಾಗಿ ಕಾಯುತ್ತಿದ್ದಾರೆ. ನಾಳೆ ಯಾವೆಲ್ಲಾ ಸರ್ಪ್ರೈಸ್‌ ಸಿಗಬಹುದು ಅಂತಾ ಕಾದು ನೋಡಬೇಕಿದೆ.

ಇದನ್ನೂ ಓದಿ: Kichcha Sudeep | ಕಿಚ್ಚ ಸುದೀಪ್‌ ಬರ್ತ್‌ ಡೇಗೆ ಅಂಚೆ ಇಲಾಖೆಯಿಂದ ಸ್ಪೆಷಲ್‌ ಗಿಫ್ಟ್!‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

VISTARANEWS.COM


on

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ 2.5 ಎಕರೆ ಭೂಮಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯಾದ್ಯಂತ ರಾಜಕುಮಾರ್‌ ಅಭಿಮಾನಿಗಳು ಚೇತನ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅನೇಕ ಸಂಘಸಂಸ್ಥೆಗಳು ಅವರ ವಿರುದ್ಧ ದೂರು ದಾಖಲಿಸಿವೆ.
ರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆ ರಾಜಕುಮಾರ್ ಸೇನೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ನಟ ಚೇತನ್ ಅಹಿಂಸಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಪಡಿಸಿದೆ. ರಾಜ್‌ಕುಮಾರ್ ಅಭಿಮಾನಿಗಳಾದ ನಮಗೆ ಅವಮಾನ ಉಂಟಾಗಿದ್ದು, ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದಾರೆ‌.
ಡಾ. ರಾಜ್‌ಕುಮಾರ್ ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಅಣ್ಣಾವ್ರ ಜನ್ಮದಿನದಂದೇ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಪೋಸ್ಟ್ ಮಾಡಿದ್ದರು
ತಮ್ಮ ಅಭಿಪ್ರಾಯ ಕುರಿತು ಪ್ರತಿಕ್ರಿಯೆ ನೀಡಿರುವ ಚೇತನ್, ನಾನು ಆಕ್ಷೇಪ ಎತ್ತಿದ್ದು ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ್ದಲ್ಲ. ನಾನು ಅಮೇರಿಕಾದಲ್ಲಿ ಇದ್ದಾಗಲೂ ಅವರ ಸಿನೆಮಾ ನೋಡಿಕೊಂಡು ಬೇಳೆದಿದ್ದೇನೆ. ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಆದರೆ ಅವರ ಕಾಲಾನಂತರ ಅವರ ಹೆಸರಲ್ಲಿ ಸರ್ಕಾರ ಭೂಮಿ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಮತ ಗಳಿಕೆಯ ಉದ್ದೇಶದಿಂದಲೇ ಸರ್ಕಾರ ಭೂಮಿ ಕೊಟ್ಟಿದೆ. ಅದರ ಬಗ್ಗೆ ಪ್ರಶ್ನೆ ಎತ್ತಿದ್ದೇನೆ. ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಕೊಡುಗೆ ಕೊಟ್ಟಿದ್ದಾರೆ ಎಂದಿದ್ದಾರೆ.
ಚೇತನ್‌ ಹೇಳಿಕೆಯಲ್ಲಿ ಏನಿದೆ?
ಸರ್ಕಾರಗಳು ಭೂಮಿಯನ್ನು ಮಂಜೂರು ಮಾಡುವಾಗ ಕೇವಲ ಮತ ಬ್ಯಾಂಕ್ ಮೇಲೆ ಕಣ್ಣಿಡಬಾರದು. ಅದರ ಬದಲು ದೂರದೃಷ್ಟಿ ಮತ್ತು ಸಾರ್ವಜನಿಕ ಉಪಯುಕ್ತತೆಯನ್ನು ಗಮನಿಸಬೇಕು. 21ನೇ ಶತಮಾನದ ಭಾರತದಲ್ಲಿ ಭೂಮಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಪುಟ್ಟಣ್ಣ ಕಣಗಾಲ್, ಸರೋಜಾದೇವಿ, ವಿಷ್ಣುವರ್ಧನ್ ಸೇರಿದಂತೆ ಅನೇಕ ಮಂದಿ ಕೊಡುಗೆ ನೀಡಿದ್ದಾರೆ. ಆದರೆ ಅವರ ಸಮಾಧಿಗಳಿಗೆ ಜಾಗ ಕೊಟ್ಟಿಲ್ಲ. ಕುವೆಂಪು ಅವರ ಸಮಾಧಿಯನ್ನೇ ಕುಪ್ಪಳ್ಳಿಯಲ್ಲಿ ಮಾಡಲಾಗಿದೆ. ರಾಜಕುಮಾರ್‌ ಅವರ ಸಮಾಧಿಯನ್ನು ಗಾಜನೂರಿನಲ್ಲಿ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮಗೆ ರಾಜ್‌ಕುಮಾರ್ ಅವರ ಮೇಲೆ ಒಬ್ಬ ಶ್ರೇಷ್ಠ ಕಲಾವಿದ ಎಂಬ ಗೌರವವಿದೆ. ಆದರೆ, ಸ್ಮಾರಕ ಸಂಕೀರ್ಣಕ್ಕಾಗಿ ಬೆಂಗಳೂರಿನ ಪ್ರಮುಖ ಜಾಗದಲ್ಲಿ 2.5 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದ್ದಾರೆ.
ಅಣ್ಣಾವ್ರು ಕನ್ನಡ ಭಾಷೆ, ಕಲೆ ಮತ್ತು ನಾಡಿಗೆ ನೀಡಿದ ಕೊಡುಗೆಯನ್ನು ಅರಿಯದೆ ಚೇತನ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಸಮಾಧಿ ಸ್ಥಳಗಳಿಗೆ ಎಕರೆಗಟ್ಟಲೆ ಜಾಗ ನೀಡಿದಾಗ ಚೇತನ್ ಅವರಿಗೆ ಸಾರ್ವಜನಿಕ ಉಪಯುಕ್ತತೆ ನೆನಪಾಗಲಿಲ್ಲವೇ? ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವದ ಸ್ಮಾರಕದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.
ಈ ಹಿಂದೆಯೂ ಚೇತನ್‌ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಾನೂನು ಸಂಕಷ್ಟ ಎದುರಿಸಿದ್ದರು. ಅನೇಕ ರಾಜಕೀಯ ಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದರು.

Continue Reading

Latest

29 ವರ್ಷಗಳ ‘ನೋ ಕಿಸ್ ಪಾಲಿಸಿ’ ಮುರಿದ ಕಾಜೋಲ್: ಆ ಒಂದು ದೃಶ್ಯಕ್ಕಾಗಿ ಕಟ್ಟುನಿಟ್ಟಿನ ನಿಯಮ ಬದಿಗಿಟ್ಟಿದ್ದೇಕೆ?

VISTARANEWS.COM


on

ಬಾಲಿವುಡ್‌ನ ಹಿರಿಯ ನಟಿ ಕಾಜೋಲ್ ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಎಂದೂ ಮಾಡದ ಕೆಲಸವೊಂದನ್ನು ‘ದಿ ಟ್ರಯಲ್’ ವೆಬ್ ಸರಣಿಯಲ್ಲಿ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಸುಮಾರು 29 ವರ್ಷಗಳಿಂದ ತೆರೆಮೇಲೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ಹೊಂದಿದ್ದ ಕಾಜೋಲ್, ಮೊದಲ ಬಾರಿಗೆ ಈ ಪಾಲಿಸಿಯನ್ನು ಮುರಿದಿದ್ದರು. ಸಹನಟರಾದ ಜಿಶು ಸೇನ್‌ಗುಪ್ತಾ ಮತ್ತು ಅಲಿ ಖಾನ್ ಜೊತೆಗಿನ ಅವರ ಲಿಪ್‌ಲಾಕ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಈಗ ಮೊದಲ ಬಾರಿಗೆ ಕಾಜೋಲ್ ಈ ಬೋಲ್ಡ್ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಾಜೋಲ್, ಈ ದೃಶ್ಯವು ಕೇವಲ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಆ ದೃಶ್ಯವು ಕಥೆಯ ಅವಿಭಾಜ್ಯ ಭಾಗವಾಗಿತ್ತು. ನಾನು ನಿರ್ವಹಿಸುತ್ತಿದ್ದ ಪಾತ್ರದ ಆಂತರಿಕ ಗೊಂದಲಗಳು, ಆಕೆಯ ಮನೋಸ್ಥಿತಿ ಮತ್ತು ಜೀವನದ ಸಂಘರ್ಷಗಳನ್ನು ತೋರಿಸಲು ಆ ದೃಶ್ಯ ಅನಿವಾರ್ಯವಾಗಿತ್ತು. ಒಂದು ವೇಳೆ ಅದನ್ನು ತೆಗೆದುಹಾಕಿದ್ದರೆ ಪಾತ್ರದ ಆಳವೇ ಇಲ್ಲವಾಗುತ್ತಿತ್ತು. ಕಥೆಯ ಬೇಡಿಕೆಗೆ ಬದ್ಧಳಾಗಿ ನಾನು ನನ್ನ ನಿಯಮವನ್ನು ಬದಿಗಿರಿಸಬೇಕಾಯಿತು” ಎಂದು ಅವರು ವಿವರಿಸಿದ್ದಾರೆ.

ಆದರೆ, ಈ ದೃಶ್ಯದಲ್ಲಿ ನಟಿಸುವುದು ತಮಗೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂದು ಕಾಜೋಲ್ ಒಪ್ಪಿಕೊಂಡಿದ್ದಾರೆ. “ಆ ಸಮಯದಲ್ಲಿ ನನಗೆ ತುಂಬಾ ಅನಾನುಕೂಲ (Uncomfortable) ಅನಿಸುತ್ತಿತ್ತು. ಸೆಟ್‌ನಲ್ಲಿ ನಿಲ್ಲುವವರೆಗೂ ನನಗೆ ಆ ಕಲ್ಪನೆಯೇ ಸರಿ ಅನ್ನಿಸಿರಲಿಲ್ಲ. ಆದರೆ ಒಬ್ಬ ವೃತ್ತಿಪರ ನಟಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿಯಾಗಿತ್ತು” ಎಂದು ಅವರು ಹೇಳಿದ್ದಾರೆ. 29 ವರ್ಷಗಳ ಸಂಪ್ರದಾಯವನ್ನು ಮುರಿದು ಕಾಜೋಲ್ ತೋರಿದ ಈ ವೃತ್ತಿಪರತೆ ಈಗ ಸಿನಿಮಾ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading

Latest

ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿ ದೇವರುಗಳ ಸಾಗರ: ಮುತ್ತುರಾಜನಿಗೆ ನಾಡಿನ ಗಣ್ಯರ ನಮನ!

VISTARANEWS.COM


on

ವರನಟ ಡಾ. ರಾಜ್‌ಕುಮಾರ್ ಅವರ 97ನೇ ಜನ್ಮದಿನವನ್ನು ಇಂದು ರಾಜ್ಯಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಮುಂಜಾನೆಯಿಂದಲೇ ಅಭಿಮಾನಿ ದೇವರುಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಮುತ್ತುರಾಜನಿಗೆ ಭಕ್ತಿಯ ನಮನ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಸ್ಟುಡಿಯೋ ಆವರಣವು ಬೃಹತ್ ಕಟೌಟ್‌ಗಳು ಮತ್ತು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಕೇವಲ ಆಚರಣೆಗೆ ಸೀಮಿತವಾಗದ ಅಭಿಮಾನಿಗಳು, ಅಣ್ಣಾವ್ರು ಹಾಕಿಕೊಟ್ಟ ಮಾನವೀಯ ಹಾದಿಯಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಅಣ್ಣಾವ್ರ ವ್ಯಕ್ತಿತ್ವವನ್ನು ಸ್ಮರಿಸುತ್ತಾ, “ಅವರು ಕಲೆಯನ್ನು ದೈವಿಕವೆಂದು ಪರಿಗಣಿಸಿ ಸಮಾಜ ಸುಧಾರಣೆಯ ಮಾರ್ಗವಾಗಿ ಬಳಸಿದರು” ಎಂದು ಶ್ಲಾಘಿಸಿದರು. ಬಿ.ವೈ. ವಿಜಯೇಂದ್ರ ಅವರು ರಾಜ್‌ಕುಮಾರ್ ಅವರನ್ನು “ಮಹಾನ್ ಕಲಾ ಚೇತನ” ಎಂದು ಬಣ್ಣಿಸಿ ಗೌರವ ಸಲ್ಲಿಸಿದರು. ಅಣ್ಣಾವ್ರ ಮೇಲಿರುವ ಈ ಅಪಾರ ಗೌರವವು ಅವರ ಭೌತಿಕ ಅಗಲಿಕೆಯ ನಂತರವೂ ಕನ್ನಡಿಗರ ಹೃದಯದಲ್ಲಿ ಅವರು ಅಜರಾಮರ ಎಂಬುದನ್ನು ಸಾಬೀತುಪಡಿಸಿದೆ.

ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಡಾ. ರಾಜ್‌ಕುಮಾರ್, ಭಾರತೀಯ ಚಿತ್ರರಂಗದ ಧ್ರುವತಾರೆಯಾಗಿ ಬೆಳಗಿದವರು. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಮತ್ತು ಕರ್ನಾಟಕ ರತ್ನ ಅಂತಹ ಉನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ, ಅವರು ಎಂದಿಗೂ ಸರಳತೆಯ ಸಾಕಾರಮೂರ್ತಿಯಾಗಿದ್ದರು. ಒಂಬತ್ತು ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಈ ಮಹಾನ್ ಗಾಯಕ ಮತ್ತು ನಟನ ಸಾಧನೆಯನ್ನು ಜಾಗತಿಕ ಮಟ್ಟದ ಪತ್ರಿಕೆಗಳೂ ಕೊಂಡಾಡಿವೆ. ಇಂದಿಗೂ ಅವರ ಚಿತ್ರಗಳು ಮತ್ತು ಹಾಡುಗಳು ಏಳು ಕೋಟಿ ಕನ್ನಡಿಗರಿಗೆ ಬದುಕಿನ ಮೌಲ್ಯಗಳನ್ನು ಕಲಿಸುತ್ತಾ, ಪ್ರತಿ ಮನೆಯಲ್ಲೂ ಸಂಸ್ಕೃತಿಯ ದೀಪವಾಗಿ ಬೆಳಗುತ್ತಿವೆ.

Continue Reading

Latest

ಧುರಂಧರ್ ಸಕ್ಸಸ್ ಎಫೆಕ್ಟ್: ಪೋಷಕ ನಟನಿಗೂ ಸಿಕ್ಕಿತು ಬರೋಬ್ಬರಿ 1 ಕೋಟಿ ಬೋನಸ್; ಬಾಲಿವುಡ್‌ನಲ್ಲಿ ಹೊಸ ಇತಿಹಾಸ

VISTARANEWS.COM


on

ಸಾಮಾನ್ಯವಾಗಿ ಸಿನಿಮಾದ ಗೆಲುವಿನ ಲಾಭ ಕೇವಲ ನಾಯಕ ನಟರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂಬ ಮಾತಿದೆ. ಆದರೆ ಬಾಲಿವುಡ್‌ನ ಬ್ಲಾಕ್‌ಬಸ್ಟರ್ ‘ಧುರಂಧರ್’ ಸರಣಿ ಆ ಮಾತನ್ನು ಸುಳ್ಳು ಮಾಡಿದೆ. ರಣವೀರ್ ಸಿಂಗ್ ನಾಯಕತ್ವದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಜಾಗತಿಕವಾಗಿ ಬರೋಬ್ಬರಿ 3,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಈ ಅಮೋಘ ಗೆಲುವಿನ ಹಿನ್ನೆಲೆಯಲ್ಲಿ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ 1 ಕೋಟಿ ರೂಪಾಯಿ ಬೋನಸ್ ನೀಡಲಾಗಿದೆ. ಚಿತ್ರದಲ್ಲಿ ಪಾಕಿಸ್ತಾನಿ ರಾಜಕಾರಣಿ ‘ಜಮೀಲ್ ಜಮಾಲಿ’ ಎಂಬ ಚಾಣಾಕ್ಷ ಪಾತ್ರದಲ್ಲಿ ಮಿಂಚಿದ್ದ ರಾಕೇಶ್ ಬೇಡಿ ಅವರ ನಟನೆಯನ್ನು ಕಂಡ ನಿರ್ಮಾಪಕರು ಈ ಉದಾರ ನಿರ್ಧಾರ ಕೈಗೊಂಡಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ಈ ಪಾತ್ರಕ್ಕಾಗಿ ರಾಕೇಶ್ ಬೇಡಿ ಅವರಿಗೆ ಮೊದಲು ನಿಗದಿಯಾಗಿದ್ದ ಸಂಭಾವನೆ ಕೇವಲ 50 ಲಕ್ಷ ರೂಪಾಯಿ. ಆದರೆ ಸಿನಿಮಾ ಸೂಪರ್ ಹಿಟ್ ಆದ ಮೇಲೆ ಮತ್ತು ಅವರ ಪಾತ್ರಕ್ಕೆ ಸಿಕ್ಕ ಭಾರಿ ಜನಪ್ರಿಯತೆಯನ್ನು ಗಮನಿಸಿ, ನಿರ್ಮಾಪಕ ಲೋಕೇಶ್ ಧರ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರು ಸಂಭಾವನೆಗಿಂತ ಎರಡು ಪಟ್ಟು ಹೆಚ್ಚು ಮೊತ್ತದ ಚೆಕ್ ನೀಡಿ ಗೌರವಿಸಿದ್ದಾರೆ. ಅವರ ಕಾಮಿಡಿ ಮತ್ತು ಗಂಭೀರ ನಟನೆಯ ಮಿಶ್ರಣವು ಅಭಿಮಾನಿಗಳನ್ನು ಸೆಳೆದಿದ್ದು ಮಾತ್ರವಲ್ಲದೆ, ಅವರ ಸಂಭಾಷಣೆಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳ ಮೂಲಕ ಸಂಚಲನ ಮೂಡಿಸಿದ್ದವು.

ಅಕ್ಷಯ್ ಖನ್ನಾ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರಿರುವ ಈ ಚಿತ್ರದಲ್ಲಿ ರಾಕೇಶ್ ಬೇಡಿ ಅವರ ಪಾತ್ರ ಹೈಲೈಟ್ ಆಗಿತ್ತು. ಪ್ರತಿಭಾವಂತ ಪೋಷಕ ನಟರಿಗೆ ಸೂಕ್ತ ಮನ್ನಣೆ ಮತ್ತು ಸಂಭಾವನೆ ಸಿಗಬೇಕು ಎನ್ನುವುದಕ್ಕೆ ಧುರಂಧರ್ ತಂಡದ ಈ ನಡೆ ಮಾದರಿಯಾಗಿದೆ. ಈ ವಿಷಯ ತಿಳಿದ ಸಿನಿಮಾ ಪ್ರಿಯರು ನಿರ್ಮಾಪಕರ ಉದಾರ ಮನಸ್ಸನ್ನು ಶ್ಲಾಘಿಸುತ್ತಿದ್ದು, “ಶ್ರಮಕ್ಕೆ ತಕ್ಕ ಪ್ರತಿಫಲ” ಎಂದು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Continue Reading
Advertisement
Latest14 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

Latest15 hours ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest16 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest16 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

Latest17 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಅನರ್ಹತೆ ಭೀತಿ; ಶಿಕ್ಷೆ ರದ್ದುಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ್‌ ಕುಲಕರ್ಣಿ

Latest17 hours ago

ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸಬೇಡಿ, ಅವರೂ ಬುದ್ದಿವಂತರು; ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

Latest17 hours ago

ಕಾಂತಾರ ಚಾಪ್ಟರ್‌-1 ಮಿಮಿಕ್ರಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೇಲಿನ ಪ್ರಕರಣ ಇತ್ಯರ್ಥ; ಕೋರ್ಟ್‌ ಆದೇಶವೇನು?

Latest18 hours ago

ಒಳಮೀಸಲಾತಿ ಜಾರಿ: ಕೊಟ್ಟ ಮಾತು ಈಡೇರಿಸಿದ ದಲಿತರಾಮಯ್ಯ; ಸಚಿವ ಆರ್.ಬಿ. ತಿಮ್ಮಾಪುರ

Latest18 hours ago

ಒಳ ಮೀಸಲಾತಿಯಿಂದ ಅನ್ಯಾಯ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ; ಬಿಜೆಪಿ ಘೋಷಣೆ

Latest19 hours ago

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಶಿವಕುಮಾರ್;‌ ಪ್ರತಿತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ ಟೀಂ; ಮುಂದುವರೆದ ಹಾವು ಏಣಿಯಾಟ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌