Colors Kannada: ಕಿರುತೆರೆಗೆ ʼಬೆಳ್ಳುಳ್ಳಿ ಕಬಾಬ್ʼ ಚಂದ್ರು; ರಾವುಲ್ಲಾ ಮಾಲೀಕನ ಒನ್‌ ಮೋರ್‌ ಕಾರ್ಯಕ್ರಮ ಯಾವಾಗ? - Vistara News

ಕಿರುತೆರೆ

Colors Kannada: ಕಿರುತೆರೆಗೆ ʼಬೆಳ್ಳುಳ್ಳಿ ಕಬಾಬ್ʼ ಚಂದ್ರು; ರಾವುಲ್ಲಾ ಮಾಲೀಕನ ಒನ್‌ ಮೋರ್‌ ಕಾರ್ಯಕ್ರಮ ಯಾವಾಗ?

Colors Kannada: ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಸವಿರುಚಿ’ ಸದ್ಯದಲ್ಲೇ ಆರಂಭವಾಗಲಿದೆ. ಈ ಕಾರ್ಯಕ್ರಮದ ಪ್ರೋಮೊ ರಿಲೀಸ್‌ ಆಗಿದೆ.

VISTARANEWS.COM


on

colors kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡಿಗರಿಗೆ ಸ್ವಾದಿಷ್ಟ ಮನರಂಜನೆಯನ್ನು ಉಣಬಡಿಸುತ್ತಾ ಬಂದಿರುವ ಕಲರ್ಸ್ ಕನ್ನಡ (Colors Kannada) ಚಾನಲ್‌ ತನ್ನ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಸವಿರುಚಿ’ (Saviruchi)ಯನ್ನು ಮತ್ತೆ ಆರಂಭಿಸಲಿದೆ.

ಯುಗಾದಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತೆ ‘ಸವಿರುಚಿ’ಯ ಹೊಸ ಕಂತುಗಳು ಮೂಡಿ ಬರಲಿವೆ. ಏಪ್ರಿಲ್ 9ರಂದು ಆರಂಭವಾಗಲಿರುವ ‘ಸವಿರುಚಿ’ಯ ಹೊಸ ಸೀಸನ್‌ನ ನೀವು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು.

ಹೊಸ ಸೀಸನ್ ‘ಸವಿರುಚಿ’ಯಲ್ಲಿ ಹಲವು ಹೊಸ ಅಂಶಗಳು ಇರಲಿವೆ. ಕರ್ನಾಟಕದ ಮೂಲೆಮೂಲೆಗಳ ಪಾಕ ಪ್ರವೀಣರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನು ಪರಿಚಯಿಸುವುದರಿಂದಾಗಿ ಈ ಸೀಸಸ್‌ ಅನ್ನು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

ಯುಗಾದಿ ಹಬ್ಬದ ದಿನವೇ ಹೊಸ ಸೀಸನ್ ಶುರುವಾಗುತ್ತಿರುವುದರ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ʼ‘ಹಬ್ಬ ಅಂದರೆ ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ರುಚಿರುಚಿಯಾದ ಅಡುಗೆಯನ್ನು ಆನಂದಿಸುವುದು. ಈ ಯುಗಾದಿಯ ಸಡಗರವನ್ನು ‘ಸವಿರುಚಿ’ಯ ಹೊಸ ಸೀಸನ್ ಇನ್ನಷ್ಟು ರಸವತ್ತಾಗಿಸಲಿದೆʼ’ ಎಂದರು. ‘ʼನಮ್ಮ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರೇ, ಅವರೆಲ್ಲರಿಗೂ ಯುಗಾದಿಯ ಶುಭಾಶಯ ಕೋರುತ್ತಾ ಉಡುಗೊರೆಯಾಗಿ ‘ಸವಿರುಚಿ’ಯ ಹೊಸ ಸೀಸನ್ನನ್ನು ಅವರಿಗೆ ನೀಡುತ್ತಿದ್ದೇವೆʼ’ ಎಂದು ಅವರು ಹೇಳಿದರು.

‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಜಾಹ್ನವಿ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಅವರ ಜತೆಗೆ ಇತ್ತೀಚೆಗೆ ʼಬೆಳ್ಳುಳ್ಳಿ ಕಬಾಬ್ʼ ಮೂಲಕ ಎಲ್ಲೆಡೆ ಜನಪ್ರಿಯರಾಗಿರುವ ಬಿ.ಕೆ.ಚಂದ್ರು ಕೂಡ ಇರುವುದು ಮಜವನ್ನು ಮತ್ತೊಂದು ಹಂತಕ್ಕೆ ಏರಿಸಲಿದೆ.

ಇದನ್ನೂ ಓದಿ: Sonu Srinivas Gowda: ಸೋನು ಗೌಡ ದತ್ತು ಪಡೆದ ಪ್ರಕರಣ; ಮಗುವಿನ ಪಾಲಕರಿಗೂ ಸಂಕಷ್ಟ; ಕಾನೂನು ಏನು ಹೇಳುತ್ತದೆ?

‘ಸವಿರುಚಿ’ಯಲ್ಲಿ ಬರೀ ಅಡುಗೆ ಮಾಡುವುದಷ್ಟೇ ಅಲ್ಲದೆ, ಅದರ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯಗಳೂ ಇರುವುದು ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲಿವೆ. ಈಗಾಗಲೇ ಒಂದು ಚೆಂದದ ಕಾರ್ಯಕ್ರಮದ ಪರಿಮಳ ನಿಮ್ಮ ಮೂಗಿಗೆ ಬರತೊಡಗಿದ್ದರೆ ಏಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಕಲರ್ಸ್ ಕನ್ನಡ ನೋಡಲು ಮರೆಯಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Raja Rani Show: ‘ರಾಜಾ ರಾಣಿ’ ಶೋನಲ್ಲಿ ಕುಣಿದು ಕುಪ್ಪಳಿಸಿದ ‘ಕರ್ನಾಟಕ ಜೋಡಿ’; ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ?

Raja Rani Show: ಈಗಾಗಲೇ ಈ ಶೋನ ಹಲವು ಪ್ರೋಮೋಗಳು ರಿಲೀಸ್‌ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ದಿವ್ಯಶ್ರೀ ಜಿಜಿ ದಂಪತಿ, ರಂಜಿತಾ ಸೀರುಂಡೆ ರಘು, ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಮತ್ತು ಅಕ್ಷತಾ ಸೇರಿ ಇನ್ನೂ ಹಲವು ಜೋಡಿಗಳು ಈ ಸಲದ ಶೋನಲ್ಲಿರಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ರಾಜಾರಾಣಿ’ ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ರಾಜರಾಣಿ ಸೀಸನ್ 1’ರಲ್ಲಿ ನಟಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ವಿನ್ನರ್ಸ್ ಆಗಿದ್ದರು. ಅಂತೆಯೇ ಸೀಸನ್ 2 ನಲ್ಲಿ ನಟಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ಗೆದ್ದಿದ್ದರು.

VISTARANEWS.COM


on

Raja Rani Show performance Karnataka Jodi in colors
Koo

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ʻಕರ್ನಾಟಕ ಜೋಡಿʼ (Karnataka Jodi) ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. ಈ ಮಧ್ಯವಯಸ್ಕ ಗೋವಿಂದರಾಜ್ ದಂಪತಿ ‘ ಯಾಮಿನಿ ಯಾಮಿನಿ’ ಹಾಡಿನ ಗುಂಗು ಹಿಡಿಸಿತ್ತು. ಈ ದಂಪತಿ ‘ಕದಂಬ’ ಚಿತ್ರದ ‘ಯಾಮಿನಿ ಯಾರಮ್ಮ ನೀನು ಯಾಮಿನಿ..’ ಸಾಂಗ್‌ಗೆ ಇವರು ಡ್ಯಾನ್ಸ್‌ ಮಾಡಿದಾಗ ಅದು ತುಂಬ ದೊಡ್ಡಮಟ್ಟದಲ್ಲಿ ವೈರಲ್ ಆಯ್ತು (Raja Rani Show). ಆನಂತರ ಇವರ ಫಾಲೋವರ್ಸ್ ಸಂಖ್ಯೆ ಕೂಡ ಜಾಸ್ತಿ ಆಗಿತ್ತು. ಇದೀಗ ಜೋಡಿ  ‘ರಾಜಾ ರಾಣಿ’ ರೀಲೋಡೆಡ್‌ ಶೋನಲ್ಲಿ ಬಂದು ಹೆಜ್ಜೆ ಹಾಕಿದೆ.

ರಾಜಾ ರಾಣಿ ಶೋಗೆ ‘ಕರ್ನಾಟಕ ಜೋಡಿ’ ಬಂದಿರುವ ಕುರಿತ ಪ್ರೋಮೋ ರಿಲೀಸ್ ಆಗಿದೆ. ಅದರಲ್ಲಿ ಇಬ್ಬರು ಕೂಡ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  “ನಮಗೆ 51 ವಯಸ್ಸು ಆದಮೇಲೆ ನಮ್ಮ ಕೆಲಸ ಶುರುವಾಗಿದೆ. ನಾವು ಇಲ್ಲಿವರೆಗೂ ಬರ್ತಿವಿ ಎಂದು ಗೊತ್ತಿರಲಿಲ್ಲ..” ಎಂದು ಗೋವಿಂದರಾಜ್‌ ಹೇಳಿದ್ದಾರೆ. “ಈ ವಯಸ್ಸಿನಲ್ಲೂ ಇಷ್ಟೊಂದು ರೊಮ್ಯಾನ್ಸ್ ಹೇಗೆ” ಎಂದು ನಿರೂಪಕಿ ಅನುಪಮಾ ಗೌಡ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಗೋವಿಂದರಾಜ್, “ಹುಣಸೆಮರ ಮುಪ್ಪಾದ್ರೂ, ಹುಳಿ ಮುಪ್ಪಾಗುತ್ತಾ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

ಗೋವಿಂದರಾಜ್ ಹಾಗೂ ವೈಲಾ ದಂಪತಿ ಇದೀಗ ಕರ್ನಾಟಕ ಜೋಡಿ ಎಂದೇ ನೆಟ್ಟಿಗರಿಗೆ ಹೆಚ್ಚು ಪರಿಚಿತರಾಗಿಬಿಟ್ಟಿದ್ದಾರೆ. ಸೂಪರ್ ಹಿಟ್ ಸಿನಿಮಾ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಾ, ರೀಲ್ಸ್ ಮಾಡುತ್ತಾ ಈ ಜೋಡಿ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಹಾಡಿಗೆ 50ರ ಹರೆಯದ ಜೋಡಿಯ ಸ್ಟೆಪ್ಸ್, ಹಾವಭಾವ ನೋಡಿದವರು ಫಿದಾ ಆಗಿದ್ದರು. ಮುಖ್ಯವಾಗಿ ಕ್ಯಾಮರಾ ವರ್ಕ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರೀತಿಸಿ ಮದುವೆ ಆಗಿರುವ ಗೋವಿಂದರಾಜ್- ವೈಲಾ ಜೋಡಿ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. 26 ವರ್ಷಗಳ ಹಿಂದೆ ವೈಲಾ ಅವರನ್ನು ಮೊದಲ ಬಾರಿ ನೋಡಿದಾಗಲೇ ಗೋವಿಂದರಾಜ್ ಪ್ರೀತಿಲಿ ಬಿದ್ದಿದ್ದರಂತೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇಬ್ಬರು ಮದುವೆ ಆಗಿ ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದಾರೆ.ಗೋವಿಂದರಾಜ್ ಅವರಿಗೆ 50 ವಯಸ್ಸು ಇನ್ನು ವೈಲಾ ಅವರಿಗರ 48 ವರ್ಷ ಎಂದು ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ರಾಜಾರಾಣಿ’ ರಿಯಾಲಿಟಿ ಶೋ ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ರಾಜರಾಣಿ ಸೀಸನ್ 1’ರಲ್ಲಿ ನಟಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ವಿನ್ನರ್ಸ್ ಆಗಿದ್ದರು. ಅಂತೆಯೇ ಸೀಸನ್ 2 ನಲ್ಲಿ ನಟಿ ಕಾವ್ಯಾ ಮಹದೇವ್ ಹಾಗೂ ಕುಮಾರ್ ದಂಪತಿ ಗೆದ್ದಿದ್ದರು. ಇದರ ಬೆನ್ನಲ್ಲೇ ಇದೀಗ ‘ರಾಜ ರಾಣಿ ರೀಲೋಡೆಡ್’ ಎಂಬ ಶೀರ್ಷಿಕೆ ಅಡಿ ಸೀಸನ್‌ 3 ಬರುತ್ತಿದೆ.ವಿಶಿಷ್ಟ ಜೋಡಿಗಳ ಸಮಾಗಮದ ‘ರಾಜ ರಾಣಿ’ (Raja Rani) ಶೋನಲ್ಲಿ ಅದಿತಿ ಪ್ರಭುದೇವ ಜಡ್ಜ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೃಜನ್ ಲೋಕೇಶ್, ಹಿರಿಯ ನಟಿ ತಾರಾ ಜೊತೆ ಅದಿತಿ ಕೂಡ ಜಡ್ಜ್ ಆಗಿ ಸಾಥ್ ನೀಡುತ್ತಿದ್ದಾರೆ.

ಈಗಾಗಲೇ ಈ ಶೋನ ಹಲವು ಪ್ರೋಮೋಗಳು ರಿಲೀಸ್‌ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ದಿವ್ಯಶ್ರೀ ಜಿಜಿ ದಂಪತಿ, ರಂಜಿತಾ ಸೀರುಂಡೆ ರಘು, ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಮತ್ತು ಅಕ್ಷತಾ ಸೇರಿ ಇನ್ನೂ ಹಲವು ಜೋಡಿಗಳು ಈ ಸಲದ ಶೋನಲ್ಲಿರಲಿದ್ದಾರೆ.

Continue Reading

ಕಿರುತೆರೆ

Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ʻಶ್ರೀಗೌರಿ,ʼ ʻನಿನಗಾಗಿʼ; ʻಅಮೃತಧಾರೆʼ ಜಿಗಿತ!

Kannada Serials TRP: ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತುಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿಗಳು ಇವೆ. ಈ ಎರಡೂ ಧಾರಾವಾಹಿಗಳು ಸರಿ ಸುಮಾರು ಒಂದೇ ರೀತಿಯ ಬೇಡಿಕೆ ಹೊಂದಿದೆ.

VISTARANEWS.COM


on

Kannada Serials TRP arce Ninagaagi shri gowri
Koo

ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ʻಪುಟ್ಟಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕ ಮಗಳು ಸಹನಾ ಎಪಿಸೋಡ್‌ ಪ್ರಸಾರವಾಗುತ್ತಿರುವುದರಿಂದ ಭರ್ಜರಿ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ಈಗ ಅದೇ ಬೇಡಿಕೆಯನ್ನು ಧಾರಾವಾಹಿ ಉಳಿಸಿಕೊಂಡಿದೆಯಾದರೂ, ‘ಪುಟ್ಟಕನ ಮಕ್ಕಳು’ ಧಾರಾವಾಹಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿಲ್ಲ ಕಲರ್ಸ್‌ ಕನ್ನಡ ಧಾರಾವಾಹಿಗಳು: ಟ್ರ್ಯಾಕ್‌ಗೆ ಮರಳಿದ ʻಶ್ರಾವಣಿ ಸುಬ್ರಮಣ್ಯʼ!

ಅಮೃತಧಾರೆ, ಸೀತಾರಾಮ

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿಗಳು ಇವೆ. ಈ ಎರಡೂ ಧಾರಾವಾಹಿಗಳು ಸರಿ ಸುಮಾರು ಒಂದೇ ರೀತಿಯ ಬೇಡಿಕೆ ಹೊಂದಿದೆ. ʼಅಮೃತಧಾರೆ’ ಧಾರಾವಾಹಿ ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಭೂಮಿಕಾ ಮತ್ತು ಗೌತಮ್‌ ಫಸ್ಟ್‌ನೈಟ್‌ ಎಪಿಸೋಡ್‌ ಒಳ್ಳೆಯ ವೀಕ್ಷಣೆ ಕಂಡಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. ಈಗಾಗಲೇ ಸೀತಾ ರಾಮರ ಎಂಗೇಜ್‌ಮೆಂಟ್‌ ಆಗಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಹಿನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಈ ಧಾರಾವಾಹಿಯನ್ನು ಹಿಂದಿಕ್ಕಿದೆ. 

ನಿನಗಾಗಿ

ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆದ ‘ನಿನಗಾಗಿ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

‘ಶ್ರೀಗೌರಿ’

ಶ್ರೀಗೌರಿ ಕೂಡ ಬೇಡಿಕೆ ಉಳಿಸಿಕೊಂಡಿದೆ. ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮಿ ಬಾರಮ್ಮ’ಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಮುಖ್ಯ ಭೂಮಿಕೆಯಲ್ಲಿ ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ ಅಭಿನಯ ಮಾಡಿದ್ದಾರೆ. ಅಮೂಲ್ಯ ಮೊದಲು ʻಅನುರಾಗ ಸಂಗಮʼ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ʻಸ್ವಾತಿ ಮುತ್ತುʼ, ʻಪುನರ್ ವಿವಾಹʼ, ʻಅರಮನೆʼ, ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಗೌಡಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರಾವಾಹಿ ಕಮಲಿ. ‘ಬಿಗ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.

Continue Reading

ಕಿರುತೆರೆ

Amruthadhare Serial: ಡುಮ್ಮ ಸರ್ ಎದೆ ಢವ ಢವ! ಗೌತಮ್-ಭೂಮಿಕಾ ಮನಸುಗಳು ಬೆರೆತಾಯ್ತು!

Amruthadhare Serial: ರಾಜೇಶ್​ ನಟರಂಗ ಹಾಗೂ ಛಾಯಾ ಸಿಂಗ್‌ ಫಸ್ಟ್‌ನೈಟ್‌ ಸಂಚಿಕೆಯಲ್ಲಿ ನಟನೆಯಲ್ಲಿ ಇಒಬ್ಬರಿಗೊಬ್ಬರು ಮೀರಿಸಿದ್ದಾರೆ. ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇವರ ಕಣ್ಣೋಟದ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬರು ʻʻಧಾರಾವಾಹಿ ಅಂದ್ರೆ ಕೆಲಸ ಇಲ್ದಿರೋರು ನೋಡೋದು ಹಾಗೆ ಹೀಗೆ ಅಂತ ಬರೀ ನೆಗೆಟಿವ್ ಭಾವನೆ ಇತ್ತು. ಆದರೆ ಅಮೃತಧಾರೆ ಇದೆಲ್ಲವನ್ನೂ ಸುಳ್ಳಾಗಿಸಿ ಒಳ್ಳೆ ಸಂದೇಶ, ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಡುಮ್ಮ ಸರ್ ಎದೆ ಢವ ಢವʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ

VISTARANEWS.COM


on

Amruthadhare Serial goutham bhumika in first night scene
Koo

ಬೆಂಗಳೂರು: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ (Amruthadhare Serial) ಪ್ರಮುಖ ಘಟ್ಟ ತಲುಪಿದೆ. ಅಂತೂ ಡುಮ್ಮ ಸರ್‌ ಹಾಗೂ ಭೂಮಿಕಾ ಅವರ ಫಸ್ಟ್‌ನೈಟ್‌ ಆಗಿದೆ. ಸಂಚಿಕೆ ಪ್ರಸಾರ ಕಾಣುವುದಕ್ಕೂ ಮೊದಲು ಫಸ್ಟ್ ನೈಟ್ ಸೀನ್ (Amruthadhare First Night Scene Promo) ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸೀರಿಯಲ್‌ನ ಪ್ರೊಮೋಕ್ಕೆ 35ರಿಂದ 40 ಲಕ್ಷ ವೀಕ್ಷಣೆ ಸಿಕ್ಕಿದೆ. ಕೇವಲ ಇನ್ಸ್‌ಸ್ಟಾ ಗ್ರಾಂ ಒಂದರಲ್ಲೇ ಈ ಸೀರಿಯಲ್ ಪ್ರೋಮೋ ವೀಕ್ಷಣೆ 35 ಲಕ್ಷಕ್ಕೂ ಅಧಿಕವಾಗಿತ್ತು.

ಇನ್ನು ಅಮೃತಧಾರೆ ಸೀರಿಯಲ್‌ ವಿಷಯಕ್ಕೆ ಬಂದರೆ ಡುಮ್ಮ ಸಾರ್ ಎಂದೇ ಖ್ಯಾತಿ ಪಡೆದಿರೋ ಗೌತಮ್ ದಿವಾನ್, ನಾಯಕಿ ಭೂಮಿಕಾ ಎಲ್ಲರ ಬಲು ಮೆಚ್ಚಿನ ಜೋಡಿ. ಗುಂಡು ಗುಂಡಗೆ ದಪ್ಪಗಿರೋ ಕೋಟ್ಯಧಿಪತಿ ಗೌತಮ್‌, ಸಣಕಲಾಗಿರೋ ಮಿಡಲ್ ಕ್ಲಾಸ್ ಹೆಣ್ಣು ಮಗಳು ಭೂಮಿಕಾ ಅಂದರೆ ಬಹಳ ಜನಕ್ಕೆ ಇಷ್ಟ. ಈ ಜೋಡಿಯನ್ನು ಒಂದಾಗಿಸಲು ಗೌತಮ್‌ ಅಜ್ಜಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.  ಅಜ್ಜಿ ಹೇಳಿದ ಒಂದು ಸುಳ್ಳಿನಿಂದ ದಂಪತಿ ಫಸ್ಟ್​ ನೈಟ್​ ತನಕ ಬಂದಿತ್ತು. ಗೌತಮ್‌ , ಭೂಮಿಕಾಗೆ ಫಸ್ಟ್‌ನಟೈಗೆ ಹೇಗೆ ಒಪ್ಪಿಗೆ ಕೊಟ್ರಿ? ಎಂದು ಕೇಳಿದಾಗ ಅಜ್ಜಿನೇ ನಿಮಗೆ ತುಂಬ ಆಸೆ ಎಂದು ಹೇಳಿದ್ರು ಎಂದು ಭೂಮಿಕಾ ಹೇಳುತ್ತಾಳೆ. ಅತ್ತ ಗೌತಮ್‌ ಭೂಮಿಕಾಗೆ ಇನ್ನೊಂದು ರೀತಿಯಲ್ಲಿ ಹೇಳಿ ಕನ್ವಿನ್ಸ್‌ ಮಾಡಿರುತ್ತಾರೆ ಅಜ್ಜಿ. ಆದರೆ ಇವರಿಬ್ಬರಿಗೂ ಅಜ್ಜಿ ಹೇಳಿದ ಸುಳ್ಳು ಗೊತ್ತಾಗಿ ಎಲ್ಲಿ ಮತ್ತೆ ದೂರವಾಗುವರೋ ಎನ್ನುವ ಆತಂಕ ಪ್ರೇಕ್ಷಕರಲ್ಲಿ ಕಾಡುತ್ತಲೇ ಇತ್ತು.

ಇನ್ನೇನು ಜೋಡಿ ಹತ್ತಿರ ಆಗಬೇಕು ಎನ್ನುವಷ್ಟರಲ್ಲಿ ಗೌತಮ್‌ ತಾನು ಕೆಳೆಗೆ ಮಲಗಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ ಭೂಮಿಕಾ ಗೌತಮ್‌ನನ್ನು ತಡೆದು ನನ್ನ ನೋಡಿದ್ರೆ ನಿಮಗೆ ಏನೂ ಅನಿಸಲ್ವಾ? ನಾನು ಹತ್ತಿರ ಬಂದರೆ ನಿಮಗೆ ಏನೂ ಆಗೋದಿಲ್ವಾ ಎಂದೆಲ್ಲಾ ಪ್ರಶ್ನಿಸಿದಾಗ, ಅವಳ ಸ್ಪರ್ಷ ಆಗುತ್ತಿದ್ದಂತೆಯೇ ಗೌತಮ್​ಗೆ ರೋಮಾಂಚನವಾಗುತ್ತದೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಅಲ್ಲಿಗೆ ಫಸ್ಟ್​ನೈಟ್​ ಆಗುತ್ತದೆ. 

ಇದನ್ನೂ ಓದಿ: Rishta Laboni Shimana: ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ನಟಿ ರಿಶ್ತಾ ನಿಧನ

ಇಬ್ಬರೂ ಒಂದಾಗಲು ಬಿಡದ ಶಕುಂತಲಾ

ಇದಕ್ಕೂ ಮುಂಚೆ ಚಿಕ್ಕಮಗಳೂರಿಗೆ ಜೋಡಿಯನ್ನು ಹನಿಮೂನ್‌ಗಾಗಿ ಅಜ್ಜಿ ಕಳುಹಿಸಿರುತ್ತಾರೆ. ಆದರೆ ಅಲ್ಲಿ ಇಬ್ಬರಿಗೂ ಒಂದಾಗಲು ಗೌತಮ್‌ ತಾಯಿ ಶಕುಂತಲಾ ಬಿಡುವುದಿಲ್ಲ. ಭೂಮಿಕಾ ಕೊಲೆಗೆ ಶಕುಂತಲಾ ಸಂಚು ಹೂಡಿದ್ದಳು. ಭೂಮಿಕಾ ಕೂಡ ಕಿಡ್ನಾಪ್‌ ಆಗುತ್ತಾಳೆ. ತನ್ನ ಉಸಿರನ್ನು ನೀಡಿ ಬಳಿಕ ಭೂಮಿಕಾಳನ್ನು ಸೇಫ್‌ ಮಾಡಿ ತರುತ್ತಾನೆ ಗೌತಮ್‌. ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯ ಗೌತಮ್‌ ಸ್ನೇಹಿತ ಆನಂದ್‌ನಿಂದ ಗೊತ್ತಾಗಿ, ಪ್ಲ್ಯಾನ್‌ ಪ್ರಕಾರ ಫಸ್ಟ್‌ನೈಟ್‌ ಮುಹೂರ್ತ ಇಡುತ್ತಾರೆ.

ನಟನೆಗೆ ಮೆಚ್ಚಿದ ಫ್ಯಾನ್ಸ್‌

ರಾಜೇಶ್​ ನಟರಂಗ ಹಾಗೂ ಛಾಯಾ ಸಿಂಗ್‌ ಫಸ್ಟ್‌ನೈಟ್‌ ಸಂಚಿಕೆಯಲ್ಲಿ ನಟನೆಯಲ್ಲಿ ಒಬ್ಬರಿಗೊಬ್ಬರು ಮೀರಿಸಿದ್ದಾರೆ. ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇವರ ಕಣ್ಣೋಟದ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಬ್ಬರು ʻʻಧಾರಾವಾಹಿ ಅಂದ್ರೆ ಕೆಲಸ ಇಲ್ದಿರೋರು ನೋಡೋದು ಹಾಗೆ ಹೀಗೆ ಅಂತ ಬರೀ ನೆಗೆಟಿವ್ ಭಾವನೆ ಇತ್ತು. ಆದರೆ ಅಮೃತಧಾರೆ ಇದೆಲ್ಲವನ್ನೂ ಸುಳ್ಳಾಗಿಸಿ ಒಳ್ಳೆ ಸಂದೇಶ, ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಡುಮ್ಮ ಸರ್ ಎದೆ ಢವ ಢವʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ

Continue Reading

ಕಿರುತೆರೆ

Megha Shetty: ನಟ ಮಾಧವನ್​ ಭೇಟಿ ಮಾಡಿ ಖುಷಿ ಹಂಚಿಕೊಂಡ ಮೇಘಾ ಶೆಟ್ಟಿ!

Megha Shetty:ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʻಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಮೇಘಾ ಶೆಟ್ಟಿ. ಧನ್ವೀರ್ ನಟನೆಯ ʻಕೈವʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. ‘ಲಂಡನ್ ಕೆಫೆ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಈ ಚಿತ್ರದ ಬಗ್ಗೆ ಮೇಘಾ ಶೆಟ್ಟಿ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

VISTARANEWS.COM


on

Megha Shetty Pose With R Madhavan
Koo

ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ (Megha Shetty) ಆಗಾಗ ರೀಲ್ಸ್‌ ಮಾಡುವುದರ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಇದೀಗ ಹಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ನಟಿ ಇತ್ತೀಚೆಗೆ ಬಹುಭಾಷಾ ನಟ ಆರ್. ಮಾಧವನ್ ಅವರನ್ನು ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ತೆಗೆದ ಸೆಲ್ಫಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Mahindra Discount Offers: ಎಕ್ಸ್‌ಯುವಿ 700, 400 ಇವಿ ಮತ್ತು ಸ್ಕಾರ್ಪಿಯೋ ಮೇಲೆ ಭರ್ಜರಿ ರಿಯಾಯಿತಿ!

“ಅಂತಹ ಅದ್ಭುತ ನಟನೊಂದಿಗೆ ಚರ್ಚೆ ಮಾಡುತ್ತಾ ಸಮಯ ಕಳೆದೆ. ಒಂದೊಳ್ಳೆಯ ಕಲಿಕೆಯ ಅನುಭವ’ ಎಂದು ಮೇಘಾ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಮಾಧವನ್ ಜೊತೆ ಸ್ಮೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.

ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಜೋತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. 

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ʻಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು ಮೇಘಾ ಶೆಟ್ಟಿ. ಧನ್ವೀರ್ ನಟನೆಯ ʻಕೈವʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. ‘ಲಂಡನ್ ಕೆಫೆ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

Continue Reading
Advertisement
Kangana Ranaut
ಪ್ರಮುಖ ಸುದ್ದಿ4 mins ago

Kangana Ranaut : ನಟ ಕಂಗಾನಾಗೆ ಏರ್​ಪೋರ್ಟ್​ ಮಹಿಳಾ ಪೇದೆ ಹೊಡೆಯಲು ಕಾರಣವೇನು? ರೈತರ ಬಗ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಯಾವುದು?

Lok Sabha Election 2024
ದೇಶ11 mins ago

Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!

Viral Video
ವೈರಲ್ ನ್ಯೂಸ್23 mins ago

Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕರ್ನಾಟಕ33 mins ago

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಬೆಂಗಳೂರು1 hour ago

Bangalore News : ಕೇಳಚಂದ್ರ ಕಾಫಿಗೆ ಎಚ್​ಆರ್​ಡಿ ಮುಖ್ಯಸ್ಥರಾಗಿ ಡಾ.ಪಿ.ಕುರಿಯನ್ ರಾಫೆಲ್ ನೇಮಕ

MLC Election Results
ಪ್ರಮುಖ ಸುದ್ದಿ1 hour ago

MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

TA Sharavana congratulated former CM hd Kumaraswamy who was elected to Lok Sabha from Mandya
ಬೆಂಗಳೂರು1 hour ago

TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

Stock market Crash
ಪ್ರಮುಖ ಸುದ್ದಿ1 hour ago

Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Lok Sabha Election 2024
ರಾಜಕೀಯ1 hour ago

Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!

Fancy Handbags Fashion
ಫ್ಯಾಷನ್2 hours ago

Fancy Handbags Fashion: ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ಸಾಥ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌