Jote Joteyali: ಹಸೆಮಣೆ ಏರಲು ಸಜ್ಜಾದ `ಜೊತೆ ಜೊತೆಯಲಿ' ಧಾರಾವಾಹಿ ನಟಿ ಶಿಲ್ಪಾ ಅಯ್ಯರ್ - Vistara News

ಕಿರುತೆರೆ

Jote Joteyali: ಹಸೆಮಣೆ ಏರಲು ಸಜ್ಜಾದ `ಜೊತೆ ಜೊತೆಯಲಿ’ ಧಾರಾವಾಹಿ ನಟಿ ಶಿಲ್ಪಾ ಅಯ್ಯರ್

ಕುಟುಂಬಸ್ಥರು (Jote Joteyali) ಸೂಚಿಸಿದ ವರನ ಜತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ.

VISTARANEWS.COM


on

Jote Joteyali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ʻಜೊತೆ ಜೊತೆಯಲಿʼ ಧಾರಾವಾಹಿಯ (Jote Joteyali) ಖ್ಯಾತಿಯ ನಟಿ ಶಿಲ್ಪಾ ಅಯ್ಯರ್ ಅವರು ಎಂಗೇಜ್‌ ಆಗಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಇತ್ತೀಚೆಗೆ ಸಚಿನ್ ವಿಶ್ವನಾಥ್ ಜತೆ ಎಂಗೇಜ್‌ ಆಗಿದ್ದಾರೆ. ಇದೀಗ ಎಂಗೇಜ್‌ಮೆಂಟ್‌ ಫೋಟೊಶೂಟ್‌ ವಿಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬಸ್ಥರು ಸೂಚಿಸಿದ ವರನ ಜತೆ ಜನವರಿಯಲ್ಲಿ ಶಿಲ್ಪಾ ಅವರ ನಿಶ್ಚಿತಾರ್ಥ ನೆರವೇರಿದೆ. ಪ್ರೇಮಿಗಳ ದಿನ ಫೆ.14ರಂದು ತಮ್ಮ ಎಂಗೇಜ್‌ಮೆಂಟ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಸಚಿನ್‌ ಅವರು ವೃತ್ತಿಯಲ್ಲಿ ಲಾಯರ್‌.

ಇದನ್ನೂ ಓದಿ: Swara Bhaskar: ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್

ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ನಂತರ ಬಣ್ಣದ ಲೋಕದಲ್ಲಿ ತಮನ್ನು ತೊಡಗಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Pavithra Jayaram: ನನ್ನ ಗಂಡನಿಗೂ ಪವಿತ್ರಾಗೂ ‘ಸಂಬಂಧ’ ಇದ್ದದ್ದು ನಿಜ ಎಂದ ಚಂದ್ರಕಾಂತ್‌ ಪತ್ನಿ!

Pavithra Jayaram: ಘಟನೆಯಿಂದ ಖಿನ್ನತೆಗೊಳಗಾಗಿ ಚಂದ್ರಕಾಂತ್‌ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪವಿತ್ರಾ ಮಗಳು ಅಮ್ಮ ಹಾಗೂ ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಬೇರೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಚಂದ್ರಕಾಂತ್‌ ಅವರ ಪತ್ನಿ ಶಿಲ್ಪಾ ಪ್ರೇಮಾ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Pavitra Jayaram Relationship With Chandu Shilpa Prema statement
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram)‌ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡರು. ಇದಾದ ಬಳಿಕ ಈ ಘಟನೆಯಿಂದ ಖಿನ್ನತೆಗೊಳಗಾಗಿ ಚಂದ್ರಕಾಂತ್‌ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪವಿತ್ರಾ ಮಗಳು ಅಮ್ಮ ಹಾಗೂ ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಬೇರೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಚಂದ್ರಕಾಂತ್‌ ಅವರ ಪತ್ನಿ ಶಿಲ್ಪಾ ಪ್ರೇಮಾ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಹೇಳಿಕೆ ನೀಡಿದ್ದಾರೆ.

ಶಿಲ್ಪಾ ಪ್ರೇಮಾ ಈ ಬಗ್ಗೆ ಮಾತನಾಡಿ ʻʻಇಬ್ಬರ ಮಧ್ಯೆ ಸಂಬಂಧ ಇರುವುದು 5 ವರ್ಷ ಮುಂಚೆಯೇ ತಿಳಿದಿತ್ತು. ನನಗೆ ಗೊತ್ತಾದ ಮೇಲೆ ರಾತ್ರಿಯೆಲ್ಲ ಕುಡಿದು ನನಗೆ ಚಂದ್ರಕಾಂತ್‌ ಹೊಡೆಯುತ್ತಿದ್ದರು. ಒಮ್ಮೆ ಪವಿತ್ರಾ ಕೂಡ ನನಗೆ ನೇರವಾಗಿ ಕೆರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೇಳಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಅವರ ಲೈಫ್ ಅವರದ್ದು ಅವರ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಪವಿತ್ರಾ ಮಗ ಹೇಳಿದ್ದ. ಮನೆಗೆ ಬಂದರೂ ಪವಿತ್ರಾ ಫೋಟೊವನ್ನು ಚಂದ್ರಕಾಂತ್‌ ನೋಡುತ್ತಿದ್ದರು. ಇವರೂ ನನಗೆ ಸಹಾಯ ಮಾಡದೇ ಇದ್ದರೂ ನನ್ನ ಮಕ್ಕಳನ್ನು ನಾನೇ ಸಲುಹಿದೆʼʼ ಎಂದರು.

ಮಾಧ್ಯಮವೊಂದಕ್ಕೆ ಚಂದ್ರಕಾಂತ್‌ ತಾಯಿ ಕೂಡ ಮಾತನಾಡಿ ʻʻಪವಿತ್ರಾ ನನ್ನ ಮಗನನ್ನು ಮನೆಗೆ ಬರದೇ ಇರುವ ರೀತಿ ಮಾಡಿದ್ದಾಳೆ. ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ. ಮನೆಗೆ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಅವಳ ಸಹವಾಸ ಮಾಡಬೇಡ ಎಂದು ಹೇಳಿದರೂ ಕೇಳುತ್ತಿರಲಿಲ್ಲʼʼ ಎಂದರು.

ಇದನ್ನೂ ಓದಿ: Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

ಪವಿತ್ರಾ ಮಗಳ ಸ್ಪಷ್ಟನೆ ಏನು?

ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್‌ ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್‌ ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್‌ ಇದ್ದು ಹೋಗಿದ್ದರು. ಚಂದ್ರಕಾಂತ್‌ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್‌ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್‌ ಅವರ ಸಂಬಂಧವೂ ಹಾಗೆ ಇತ್ತುʼʼ‌ ಎಂದರು.

ಮಾತು ಮುಂದುವರಿಸಿ ʻʻನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ನಾನು, ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್‌. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿʼʼ ಎಂದಿದ್ದಾರೆ ಪ್ರತೀಕ್ಷಾ.

Continue Reading

ಕಿರುತೆರೆ

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Pavithra Jayaram: ಆಂಧ್ರಪ್ರದೇಶದ ಕರ್ನೂಲು ಬಳಿ ಮೇ 12ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

VISTARANEWS.COM


on

Pavithra Jayaram Chandrakant are just friends, daughter said
Koo

ಮಂಡ್ಯ: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram)‌ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಬಗ್ಗೆ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಪವಿತ್ರಾ ಅವರ ಮಗಳು ಪ್ರತೀಕ್ಷಾ ಅವರು ʻʻಅಮ್ಮ ಹಾಗೂ ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಬೇರೆ ಯಾವುದೇ ರೀತಿಯ ಸಂಬಂಧ ಇರಲಿಲ್ಲʼʼ ಎಂದು ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

ಪವಿತ್ರಾ ಜಯರಾಮ್‌ ಅವರ ನಿಧನದ ಬಳಿಕ ಖಿನ್ನತೆಗೊಳಗಾಗಿ ಚಂದ್ರಕಾಂತ್‌ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪವಿತ್ರಾ ಅವರ ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್‌ ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್‌ ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್‌ ಇದ್ದು ಹೋಗಿದ್ದರು. ಚಂದ್ರಕಾಂತ್‌ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್‌ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್‌ ಅವರ ಸಂಬಂಧವೂ ಹಾಗೆ ಇತ್ತುʼʼಎಂದರು.

ಮಾತು ಮುಂದುವರಿಸಿ ʻʻನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ನಾನು , ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್‌. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿʼʼಎಂದಿದ್ದಾರೆ ಪ್ರತೀಕ್ಷಾ.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಕೈ ಮೇಲೆ `777′ ಟ್ಯಾಟೂ ಹಾಕಿದ ನೀತು: ದರ್ಶನ್‌ಗೆ ಏನಾದ್ರು ಲಿಂಕ್‌ ಇದ್ಯಾ?

ದುರಂತ ಸಾವು

ಆಂಧ್ರಪ್ರದೇಶದ ಕರ್ನೂಲು ಬಳಿ ಮೇ 12ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಚಂದ್ರಕಾಂತ್‌ ಕೂಡ ನಟರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು ಎಂದು ವರದಿಯಾಗಿತ್ತು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.

Continue Reading

ಕಿರುತೆರೆ

Gurucharan Singh: ಕಾಣೆಯಾಗಿದ್ದ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ ಮತ್ತೆ ಮನೆಗೆ ವಾಪಸ್‌!

Gurucharan Singh: ವರದಿಯ ಪ್ರಕಾರ, ಗುರುಚರಣ್ ವಿಚಾರಣೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ“ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ” ಎಂದು ಹೇಳಿದ್ದಾನೆ. ಕಳೆದ ಕೆಲವು ದಿನಗಳಲ್ಲಿ, ನಟ ಅಮೃತಸರ ಮತ್ತು ಲುಧಿಯಾನ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿದ್ದರು. ಆದರೆ ನಂತರ ಅವರು ಮನೆಗೆ ಮರಳಬೇಕೆಂದು ಅರಿತುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Gurucharan Singh returns home after almost a month
Koo

ಬೆಂಗಳೂರು: ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದ   ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಧಾರವಾಹಿ ನಟ ಗುರುಚರಣ್ ಸಿಂಗ್ (Gurucharan Singh) ಮೇ.17ರಂದು ಮನೆಗೆ ಮರಳಿದ್ದಾರೆ. ಪೊಲೀಸರ ಪ್ರಕಾರ, ಸಿಂಗ್ ವಿಚಾರಣೆಯ ಸಮಯದಲ್ಲಿ ತನ್ನ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವರದಿಯ ಪ್ರಕಾರ, ಗುರುಚರಣ್ ವಿಚಾರಣೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ“ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ” ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ನಟ ಅಮೃತಸರ ಮತ್ತು ಲುಧಿಯಾನ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿದ್ದರು. ಆದರೆ ನಂತರ ಅವರು ಮನೆಗೆ ಮರಳಬೇಕೆಂದು ಅರಿತುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 22 ರಂದು ನಟ ದೆಹಲಿಯಿಂದ ಮುಂಬೈಗೆ ವಿಮಾನ ಹಿಡಿಯಬೇಕಿತ್ತು. ಆದರೆ ಅವರು ವಿಮಾನ ಹತ್ತಲಿಲ್ಲ ಮತ್ತು ಕಾಣೆಯಾಗಿದ್ದರು.

ಏಪ್ರಿಲ್ 22ರಂದು ರಾತ್ರಿ 8.30 ಕ್ಕೆ ಮಗ ಮುಂಬೈಗೆ ತೆರಳಿದ್ದ ಎಂದು ತಂದೆ ದೂರು ನೀಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

ಗುರುಚರಣ್ ಆಗಾಗ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಮತ್ತು ಹಣಕಾಸಿನ ಚಟುವಟಿಕೆಗಳಿಗಾಗಿ ಅನೇಕ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡಿದ್ದರು. ಈತ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಿಸಿದ್ದ ಎಂದು ಪೊಲೀಸರು ಪತ್ತೆ ಮಾಡಿದ್ದರು.

ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.

Continue Reading

ದೇಶ

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

90ರ ದಶಕದ ಜನಪ್ರಿಯ ಟಿವಿ ಶೋ ಸುರಭಿಯು ಒಂದು ವಾರಕ್ಕೆ 14 ಲಕ್ಷ ಪೋಸ್ಟ್‌ ಕಾರ್ಡ್‌ಗಳನ್ನು ಸ್ವೀಕರಿಸಿತ್ತು. ಇದರಿಂದ ಪೋಸ್ಟ್‌ಕಾರ್ಡ್‌ಗಳನ್ನು ಪಡೆಯಲು ಅಂಚೆ ಕಚೇರಿಗೆ ಟೆಂಪೋ ಬಾಡಿಗೆಗೆ ಪಡೆದು ಹೋಗಬೇಕಾಗಿತ್ತು ಎಂದು ಕಾರ್ಯಕ್ರಮದ ನಿರೂಪಕ ಸಿದ್ಧಾರ್ಥ್ ಕಾಕ್ (Siddharth Kak) ನೆನಪಿಸಿಕೊಂಡಿದ್ದಾರೆ.

VISTARANEWS.COM


on

By

Siddharth Kak
Koo

90ರ ದಶಕದಲ್ಲಿ ದೂರದರ್ಶನದಲ್ಲಿ (Doordarshan ) ಪ್ರಸಾರವಾಗುತ್ತಿದ್ದ ಜನಪ್ರಿಯ ಭಾರತೀಯ ಸಾಂಸ್ಕೃತಿಕ ಸರಣಿ ‘ಸುರಭಿ’ಯು (Surabhi) ವೀಕ್ಷಕರಿಂದ 14 ಲಕ್ಷ ಪೋಸ್ಟ್‌ಕಾರ್ಡ್‌ಗಳನ್ನು (post card) ಸ್ವೀಕರಿಸುತ್ತಿತ್ತು. ಇದರಿಂದಾಗಿ ಅದು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ( Limca Book of World Record) ಸೇರಿತ್ತು. ಈ ಕಾರ್ಯಕ್ರಮದ ನಿರೂಪಕ ಸಿದ್ಧಾರ್ಥ್ ಕಾಕ್ (Siddharth Kak) ಅವರು ಈ ಸಂಗತಿಯನ್ನು ಈಗ ನೆನಪಿಸಿಕೊಂಡಿದ್ದಾರೆ.

ಅವರು ಸ್ವೀಕರಿಸುತ್ತಿದ್ದ ಭಾರಿ ಪ್ರಮಾಣದ ಪೋಸ್ಟ್‌ಕಾರ್ಡ್‌ಗಳ ಕಾರಣ ಅಂಚೆ ಇಲಾಖೆಯು ಪೋಸ್ಟ್‌ಕಾರ್ಡ್‌ಗಳ ಬೆಲೆಯನ್ನು ಹೆಚ್ಚಿಸಬೇಕಾಯಿತು. ಮತ್ತು ಸ್ಪರ್ಧೆಗೆ ಪ್ರತ್ಯೇಕ ಪೋಸ್ಟ್‌ಕಾರ್ಡ್‌ಗಳನ್ನು ಪರಿಚಯಿಸಿತು ಎಂದು ಅವರು ತಿಳಿಸಿದರು. ರೇಣುಕಾ ಶಹಾನೆ ಅವರೊಂದಿಗೆ ಕಾಕ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ನಮ್ಮ ಸಂಶೋಧನಾ ತಂಡವು ಕೆಮರಾದ ಹಿಂದೆ ಇರಲಿಲ್ಲ, ಅದು ಕೆಮರಾದ ಮುಂದೆ ಇತ್ತು. ದೇಶವು ನಮ್ಮ ಸಂಶೋಧನಾ ತಂಡವಾಗಿತ್ತು. ಏಕೆಂದರೆ ಅವರು ನೀವು ತಿಳಿದುಕೊಳ್ಳಲು ಬಯಸುವ ಎಲ್ಲವನ್ನೂ ಅವರು ನಿಮಗೆ ಹೇಳುತ್ತಿದ್ದರು. ಇಂತಹ ಅದ್ಭುತ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.


ಮೊದಲೆರಡು ತಿಂಗಳುಗಳಲ್ಲಿ ನಾವು ಸುಮಾರು 4ರಿಂದ 5, 10-15, 100ರಿಂದ 200 ಅಕ್ಷರಗಳ ಪತ್ರಗಳನ್ನು ಪಡೆದುಕೊಂಡಿದ್ದೇವು. ನಾಲ್ಕೈದು ತಿಂಗಳ ಅನಂತರ, ನಮಗೆ ಸುಮಾರು ಐದು ಸಾವಿರ ಪತ್ರಗಳು ಬರಲಾರಂಭಿಸಿದವು ಮತ್ತು ಅದು ನಿರ್ವಹಿಸಲಾಗದಂತಾಯಿತು. ಹಾಗಾಗಿ ಪ್ರತಿ ಪತ್ರವನ್ನು ತೆರೆಯುವುದು ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಅದನ್ನು ಹೇಗೆ ಮಾಡಬೇಕೆಂದು ಹೇಳಿದೆ. ನೀವು ಸಾವಿರಾರು ಪತ್ರಗಳನ್ನು ಹೊಂದಿರುವಾಗ, ಎಲ್ಲಾ ಪತ್ರಗಳನ್ನು ಓದಲು ಸುಮಾರು ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ. ನಾವು ಪ್ರತಿ ವಾರ ನಮ್ಮ ಪ್ರದರ್ಶನವನ್ನು ಹೊಂದಿದ್ದೇವು ಎಂದರೆ ನಮ್ಮ ಸಾಹಸ ಕಲ್ಪಿಸಿಕೊಳ್ಳಿ. ಆದ್ದರಿಂದ ನಾವು ವೀಕ್ಷಕರಿಗೆ ಪೋಸ್ಟ್‌ಕಾರ್ಡ್ ಕಳುಹಿಸಲು ಕೇಳಿಕೊಂಡೆವು ಎಂದವರು ನೆನಪಿಸಿಕೊಂಡರು.

ವಾರದಲ್ಲಿ 14 ಲಕ್ಷ ಪೋಸ್ಟ್ ಕಾರ್ಡ್

ಪೋಸ್ಟ್‌ಕಾರ್ಡ್‌ಗೆ ಆಗ ಸುಮಾರು 15 ಪೈಸೆ ವೆಚ್ಚವಾಗುತ್ತಿತ್ತು. ಇದು ಸಬ್ಸಿಡಿ ಹೊಂದಿದ್ದ ಪೋಸ್ಟ್‌ಕಾರ್ಡ್ ಆಗಿತ್ತು. ಆದರೆ ಇದರ ನೈಜ ಬೆಲೆ ಸುಮಾರು 50 -60 ಪೈಸೆ. ಇದು ಹಳೆಯ ಸಂವಹನ ವಿಧಾನವಾದ್ದರಿಂದ ಸರ್ಕಾರ ಇದರ ದರ ತಗ್ಗಿಸಿತ್ತು. ಜನರು ಅದನ್ನು ಪಿಂಚಣಿಗಾಗಿ ಬರೆಯಲು, ಹಳ್ಳಿಯಿಂದ ಕಳುಹಿಸಲು ಬಳಸಬಹುದಿತ್ತು. ನಾವು ಬಹಳಷ್ಟು ಪೋಸ್ಟ್‌ಕಾರ್ಡ್‌ಗಳನ್ನು ಪಡೆಯಲು ಪ್ರಾರಂಭಿಸಿದೇವು. ನಾವು ಅದನ್ನು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿಸಿದ್ದೇವೆ. ನಾವು ಒಂದು ವಾರದಲ್ಲಿ 1.4 ಮಿಲಿಯನ್ (14 ಲಕ್ಷ) ಪೋಸ್ಟ್‌ಕಾರ್ಡ್‌ಗಳನ್ನು ಸ್ವೀಕರಿಸುತ್ತಿದ್ದೆವು ಎಂದು ಕಾಕ್‌ ತಿಳಿಸಿದರು.

ಸಂಗ್ರಹಕ್ಕೆ ಸ್ಥಳವಿರಲಿಲ್ಲ

ಇಷ್ಟೊಂದು ಸಂಖ್ಯೆಯ ಪೋಸ್ಟ್‌ಕಾರ್ಡ್‌ಗಳನ್ನು ಸಂಗ್ರಹಿಸಲು ನಮ್ಮಲ್ಲಿ ಸ್ಥಳವಿಲ್ಲ ಎಂದು ಅಂಧೇರಿ ಅಂಚೆ ಕಚೇರಿಯಿಂದ ಒಮ್ಮೆ ತನಗೆ ಕರೆ ಬಂದಿತ್ತು ಎಂಬುದನ್ನು ಸಿದ್ಧಾರ್ಥ್ ಕಾಕ್ ನೆನಪಿಸಿಕೊಂಡರು.


ನೂರಾರು ಚೀಲಗಳಲ್ಲಿ ಪೋಸ್ಟ್ ಕಾರ್ಡ್‌ಗಳು

ಅಂಧೇರಿ ಅಂಚೆ ಕಚೇರಿಗೆ ಭಾರಿ ಸಂಖ್ಯೆಯ ಪೋಸ್ಟ್‌ಕಾರ್ಡ್‌ಗಳು ಬರುತ್ತಿವೆ. ಇವುಗಳನ್ನು ನೀವೇ ತೆಗೆದುಕೊಂಡು ಹೋಗಿ ಎಂದು ಅಂಚೆ ಇಲಾಖೆಯವರು ಹೇಳುತ್ತಿದ್ದರು. ಹಾಗಾಗಿ ಅಂಚೆ ಕಾರ್ಡ್‌ಗಳನ್ನು ಪಡೆಯಲು ನಾನು ಟೆಂಪೋವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಯಿತು. ಟ್ರಕ್ ಅಂಚೆ ಕಚೇರಿಯನ್ನು ತಲುಪಿದಾಗ ನೂರಾರು ಚೀಲಗಳಲ್ಲಿ ಪೋಸ್ಟ್‌ಕಾರ್ಡ್‌ಗಳು ತುಂಬಿದ್ದವು ಎಂಬ ಸಂಗತಿಯನ್ನು ಕಾಕ್‌ ಸ್ಮರಿಸಿಕೊಂಡರು.

ಅಂಚೆ ಇಲಾಖೆಯಿಂದ ದೂರು

ನಮ್ಮ ಕಾರ್ಡ್‌ಗಳಿಂದ ಫಜೀತಿಗೆ ಸಿಲುಕಿದ್ದ ಅಂಚೆ ಇಲಾಖೆ ಸುರಭಿ ಕಾರ್ಯಕ್ರಮದ ವಿರುದ್ಧ ಕೇಂದ್ರ ಸಂವಹನ ಸಚಿವಾಲಯಕ್ಕೆ ದೂರು ನೀಡಿತು. ಆಗ ಸಚಿವಾಲಯವು ಪೋಸ್ಟ್‌ಕಾರ್ಡ್‌ನ ಬೆಲೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸ್ಪರ್ಧೆಯ ಪೋಸ್ಟ್‌ಕಾರ್ಡ್‌ಗಳನ್ನು ಸಹ ರಚಿಸಬೇಕಾಯಿತು ಎಂಬುದನ್ನು ಕಾಕ್ ತಿಳಿಸಿದರು. ಬಳಿಕ ಸ್ಪರ್ಧೆಯ ಪೋಸ್ಟ್‌ಕಾರ್ಡ್‌ನ ಬೆಲೆಯನ್ನು 2 ರೂ.ಗೆ ಹೆಚ್ಚಿಸಲಾಯಿತು. ನಮ್ಮಲ್ಲಿ ಎಲ್ಲಾ ಪೋಸ್ಟ್‌ಕಾರ್ಡ್‌ಗಳನ್ನು ಎಣಿಸುವ ತಂಡವಿತ್ತು. ಪತ್ರಗಳನ್ನು ಇಡಲು ಒಂದು ಪೂರ್ಣ ಕೊಠಡಿ ಇತ್ತು. ಪ್ರತಿ ವಾರ ಅಂಚೆ ಕಾರ್ಡ್‌ಗಳ ಸುರಿಮಳೆಯಾಗುತ್ತಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: Shah Rukh Khan: ಶಾರುಖ್‌ ಹೊಸ ಸಿನಿಮಾಗಾಗಿ ಕೈ ಜೋಡಿಸಿದ ಅನಿರುದ್ಧ್ ರವಿಚಂದರ್!

11 ವರ್ಷ ಪ್ರಸಾರ

ಸುರಭಿ 1990 ರಿಂದ 2001ರವರೆಗೆ ನಡೆಯಿತು. ಇದು ಆರಂಭದಲ್ಲಿ ದೂರದರ್ಶನದ ದೂರದರ್ಶನದಲ್ಲಿ ಪ್ರಸಾರವಾಯಿತು ಮತ್ತು ಭಾನುವಾರದ ಬೆಳಗ್ಗೆ ಸ್ಲಾಟ್‌ನಲ್ಲಿ ಸ್ಟಾರ್ ಪ್ಲಸ್‌ಗೆ ಸ್ಥಳಾಂತರಗೊಂಡಿತು. ಸುರಭಿಯನ್ನು ಸಿದ್ಧಾರ್ಥ್ ಕಾಕ್ ಅವರ ಮುಂಬಯಿ ಮೂಲದ ನಿರ್ಮಾಣ ಸಂಸ್ಥೆ ಸಿನಿಮಾ ವಿಷನ್ ಇಂಡಿಯಾ ನಿರ್ಮಿಸಿತ್ತು.

Continue Reading
Advertisement
RCB vs CSK:
ಕ್ರೀಡೆ3 mins ago

RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

Karnataka Weather Forecast Rain alert
ಮಳೆ9 mins ago

Karnataka Weather : ಮಲೆನಾಡಿನಲ್ಲಿ ಮಳೆ ಮೋಡಿ; ಭಾನುವಾರವೂ ಅಬ್ಬರ ಇರಲಿದೆ ನೋಡಿ

Koppal tragedy
ಕೊಪ್ಪಳ43 mins ago

Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

Prajwal Revanna case Devaraje Gowda should be given mental treatment says Congress
ರಾಜಕೀಯ50 mins ago

Prajwal Revanna Case: ದೇವರಾಜೇಗೌಡರಿಗೆ ಮೆಂಟಲ್‌ ಟ್ರೀಟ್ಮೆಂಟ್‌ ಕೊಡಿಸಬೇಕಿದೆ: ಕಾಂಗ್ರೆಸ್‌ ವ್ಯಂಗ್ಯ

Health Tips in Kannada tomato juice is good for health
ಆರೋಗ್ಯ55 mins ago

Health Tips in Kannada: ಟೊಮ್ಯಾಟೊ ಜ್ಯೂಸ್‌ ಆರೋಗ್ಯಕ್ಕೇಕೆ ಒಳ್ಳೆಯದು ಗೊತ್ತೆ?

T20 World Cup 2024
ಕ್ರೀಡೆ57 mins ago

T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

Cannes 2024 Indian influencer who stitched a 20 kg dress
ಬಾಲಿವುಡ್1 hour ago

Cannes 2024: 20 ಕೆಜಿ ತೂಕದ ಗೌನ್ ಧರಿಸಿ ಬೆರಗುಗೊಳಿಸಿದ ನ್ಯಾನ್ಸಿ ತ್ಯಾಗಿ!

ಕರ್ನಾಟಕ1 hour ago

Prajwal Revanna Case: ನಾನು ಹೊರಬಂದ್ರೆ ಸರ್ಕಾರ ಪತನ ಎಂದ ದೇವರಾಜೇಗೌಡ; ಹಾಗಾದ್ರೆ ಜೈಲಲ್ಲೇ ಇರ್ತಾರೆ ಎಂದ ಪರಮೇಶ್ವರ್‌

Woman
ದೇಶ1 hour ago

ಪತ್ನಿಯ ಶೀಲ ಶಂಕಿಸಿ, ಆಕೆಯ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕಿದ ದುಷ್ಟ; ಏನು ಮಾಡಬೇಕು ಇಂಥವರಿಗೆ?

murder case
ಕ್ರೈಂ1 hour ago

Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ22 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌