Urfi Javed | ಮೊಬೈಲ್‌ಗಳಿಂದ ಮಾನ ಮುಚ್ಚಿಕೊಂಡ ಉರ್ಫಿ: ʻಲ್ಯಾಪ್‌ಟಾಪ್‌ ಇನ್ಮುಂದೆ ಸ್ಕರ್ಟ್‌ʼ ಅಂದ್ರು ನೆಟ್ಟಿಗರು! - Vistara News

ಬಾಲಿವುಡ್

Urfi Javed | ಮೊಬೈಲ್‌ಗಳಿಂದ ಮಾನ ಮುಚ್ಚಿಕೊಂಡ ಉರ್ಫಿ: ʻಲ್ಯಾಪ್‌ಟಾಪ್‌ ಇನ್ಮುಂದೆ ಸ್ಕರ್ಟ್‌ʼ ಅಂದ್ರು ನೆಟ್ಟಿಗರು!

ಹೊಸ ವಿಡಿಯೊ ಒಂದನ್ನು ಉರ್ಫಿ (Urfi Javed)ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ. ಇದೀಗ ನೆಟ್ಟಿಗರು ಉರ್ಫಿ ವಿರುದ್ಧ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Urfi Javed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಾಲಿವುಡ್‌ನ ಕಾಂಟ್ರೋವರ್ಸಿಯಲ್ ಕ್ವೀನ್ ಹಾಗೂ ಹಿಂದಿ ಬಿಗ್ ಬಾಸ್ OTT ಸೀಸನ್ 1ರ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ತಮ್ಮ ಉಡುಗೆಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಹೊಸ ವಿಡಿಯೊ ಒಂದನ್ನು ಉರ್ಫಿ ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದು, ಚಾರ್ಜಿಂಗ್ ವೈರ್‌ಗಳೊಂದಿಗೆ ತೂಗಾಡುತ್ತಿರುವ ಮೊಬೈಲ್‌ಗಳನ್ನು ಒಳ ಉಡುಪಿನ ರೀತಿಯಲ್ಲಿ ಧರಿಸಿಕೊಂಡಿದ್ದಾರೆ.

ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡ ಉರ್ಫಿ ಜಾವೇದ್‌ ʻʻಮೊಬೈಲ್‌ ಸಂಪೂರ್ಣವಾಗಿ ಚಾರ್ಜ್‌ ಮಾಡಲಾಗಿದೆʼʼಎಂದು ಶೀರ್ಷಿಕೆ ನೀಡಿದ್ದಾರೆ. ಇದೀಗ ನೆಟ್ಟಿಗರು ಈ ಪೋಸ್ಟ್‌ಗೆ ತಮಾಷೆಯಾಗಿ ಕಮೆಂಟ್‌ ಮಾಡಿದ್ದು ಉರ್ಫಿ ಅವರ ಕಾಲೆಳೆದಿದ್ದಾರೆ. ಅದರಲ್ಲಿ ಒಬ್ಬರು ʻʻನನ್ನ ಮೊಬೈಲ್‌ ವಾಪಸ್‌ ಕೊಡಿʼʼಎಂದು ಬರೆದರೆ, ಇನ್ನೊಬ್ಬರು ʻʻಮೊಬೈಲ್‌ ನಂಬರ್‌ ಏನಿದೆ? ನಾನು ಯಾವ ನಂಬರ್‌ಗೆ ಕರೆ ಮಾಡಲಿ?ʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻಪ್ಯಾಂಟ್‌ ಯಾಕೆ ಧರಿಸಿದ್ದೀರಿ, ಲ್ಯಾಪ್‌ ಟಾಪ್‌ ಅನ್ನೇ ಸ್ಕರ್ಟ್‌ ತರಹ ಧರಿಸಬಹುದಿತ್ತುʼʼಎಂದು ಕಮೆಂಟ್‌ ಮಾಡಿದ್ದಾರೆ. ಹಾಗೇ ʻʻಮೊಬೈಲ್‌ ಚಾರ್ಜ್‌ ಆಗಿದೆ ಹೌದು, ವಾಲ್‌ಪೇಪರ್‌ ಕಾಣುತ್ತಿಲ್ಲʼʼ ಎಂದು ನೆಟ್ಟಿಗರು ಮನಬಂದಂತೆ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Urfi Javed | ʻಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ: ಉರ್ಫಿ ಜಾವೇದ್ ಗರಂ ಆಗಿದ್ಯಾಕೆ?

ದೂರು ದಾಖಲಾದ್ರೂ ಬುದ್ಧಿ ಬರ್ತಿಲ್ಲ ಅಂದ್ರು ಟ್ರೋಲಿಗರು!
ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಯುಟ್ಯೂಬರ್‌, ಕಂಟೆಂಟ್ ಕ್ರಿಯೇಟರ್‌ ಆಗಿರುವ ಹಿಂದೂಸ್ತಾನಿ ಭಾವು ಅವರು ಉರ್ಫಿ ಜಾವೇದ್‌ ಬಗ್ಗೆ ಮಾತನಾಡಿದ್ದರು. ವಿಡಿಯೊದಲ್ಲಿ ಉರ್ಫಿ ಜಾವೇದ್‌ ಕುರಿತು ಹಿಂದೂಸ್ತಾನಿ ಭಾವು ʻʻಉರ್ಫಿ ತುಂಡು ಬಟ್ಟೆ ಹಾಕುವುದನ್ನು ನಿಲ್ಲಿಸಬೇಕು. ಇದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರು ಸುಧಾರಿಸದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಹೇಳಿದ್ದರು. ಈ ಬಗ್ಗೆ ಉರ್ಫಿ ಜಾವೇದ್‌ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ʻʻನೀವು ನಿಮ್ಮ ಬೈಗುಳದಿಂದ ಎಷ್ಟು ಜನರು ಸುಧಾರಿಸಿದ್ದಾರೆ? ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳುಹಿಸಬಲ್ಲೆʼʼಎಂದು ಉರ್ಫಿ ವಾರ್ನಿಂಗ್ ಕೊಟ್ಟಿದ್ದರು.

ಅತ್ಯಾಚಾರಿಗಳ ವಿರುದ್ಧ ದೂರು ನೀಡಿ!
ಈ ಹಿಂದೆ ಅಷ್ಟೇ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಉರ್ಫಿ ಜಾವೇದ್ ಗರಂ ಆಗಿದ್ದರು. ʻನನ್ನ ದೇಹ, ನನ್ನ ಇಷ್ಟ. ಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ ಎಂದು ದೂರು ನೀಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಇದನ್ನೂ ಓದಿ | Urfi Javed | ಜೈಲಿಗೆ ಕಳುಹಿಸಬಲ್ಲೆ: ಹಿಂದೂಸ್ತಾನಿ ಭಾವುಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಉರ್ಫಿ ಜಾವೇದ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Vicky Kaushal: ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇದ್ದಿತ್ತು. ಆದರೆ ಚಿತ್ರಕ್ಕೆ ಮಾತ್ರ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಈ ಚಿತ್ರ ಕಳಪೆ ಕಲೆಕ್ಷನ್ ಮಾಡಿದೆ. ಚಿತ್ರದ ‘ತೌಬಾ ತೌಬಾ’ ಹಾಡು ತುಂಬಾ ಜನಪ್ರಿಯವಾಗಿರುವುದಕ್ಕೆ ಈ ಓಪನಿಂಗ್ ಇಷ್ಟಾದರು ಆಗಿದೆ ಎನ್ನಲಾಗಿದೆ.
‘ಬ್ಯಾಡ್ ನ್ಯೂಜ್’ ಸಿನಿಮಾಗೆ ಮುಂದಿನ ವಾರದವರೆಗೆ ಯಾವುದೇ ಸಿನಿಮಾಗಳ ಸ್ಪರ್ಧೆಯಿಲ್ಲ.

VISTARANEWS.COM


on

Vicky Kaushal box office collection Movie Collects Only 8 Crore
Koo

ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ಡಿಮ್ರಿ (Triptii Dimri) ಅಭಿನಯದ ‘ಬ್ಯಾಡ್ ನ್ಯೂಸ್’ (Bad Newz Movie) ಸಿನಿಮಾ ಜುಲೈ 19ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇದ್ದಿತ್ತು. ಆದರೆ ಚಿತ್ರಕ್ಕೆ ಮಾತ್ರ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಈ ಚಿತ್ರ ಕಳಪೆ ಕಲೆಕ್ಷನ್ ಮಾಡಿದೆ. ಚಿತ್ರ ಮೊದಲ ದಿನ ಕೇವಲ 8.50 ಕೋಟಿ ರೂಪಾಯಿ ಅಷ್ಟೇ ಗಳಿಕೆ ಮಾಡಲು ಸಾಧ್ಯವಾಗಿದೆ.

ಈ ಸಿನಿಮಾ ರಿಲೀಸ್‌ಗೂ ಮುಂಚೆ ವಿಕ್ಕಿ ಕೌಶಲ್ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ 8.20 ಕೋಟಿ ಗಳಿಸಿತ್ತು ಮತ್ತು ‘ಬ್ಯಾಡ್ ನ್ಯೂಜ್’ ಅದಕ್ಕಿಂತ ಸ್ವಲ್ಪ ಹೆಚ್ಚು ಗಳಿಕೆ ಕಂಡಿದೆ. ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡಬಹುದು ಎಂದು ವರದಿಯಾಗಿದೆ. ‘ಬ್ಯಾಡ್ ನ್ಯೂಜ್’ ಈಗ ವರ್ಷದ ಐದನೇ ಅತಿ ಹೆಚ್ಚು ಆರಂಭಿಕ ಚಿತ್ರವಾಗಿದೆ.

ಚಿತ್ರದ ‘ತೌಬಾ ತೌಬಾ’ ಹಾಡು ತುಂಬಾ ಜನಪ್ರಿಯವಾಗಿರುವುದಕ್ಕೆ ಈ ಓಪನಿಂಗ್ ಇಷ್ಟಾದರು ಆಗಿದೆ ಎನ್ನಲಾಗಿದೆ.
‘ಬ್ಯಾಡ್ ನ್ಯೂಜ್’ ಸಿನಿಮಾಗೆ ಮುಂದಿನ ವಾರದವರೆಗೆ ಯಾವುದೇ ಸಿನಿಮಾಗಳ ಸ್ಪರ್ಧೆಯಿಲ್ಲ. ಈ ಮೊದಲು ರಿಲೀಸ್ ಆಗಿದ್ದ ‘ಗುಡ್ ನ್ಯೂಸ್’ ಸಿನಿಮಾದ ರೀತಿಯ ಕಥೆಯ ಎಳೆಯನ್ನೇ ಇಟ್ಟುಕೊಂಡು ‘ಬ್ಯಾಡ್ ನ್ಯೂಸ್’ ಮಾಡಲಾಗಿದೆ. ಅವಳಿ ಮಕ್ಕಳಿಗೆ ಇಬ್ಬರು ತಂದೆಯರು ಎಂಬರ್ಥದಲ್ಲಿ ಸಿನಿಮಾ ಮೂಡಿ ಬಂದಿದೆ. ಇನ್ನು, ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಚಿತ್ರಕ್ಕೆ ಕೇವಲ 6.1 ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: Krishan Kumar: ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಲಿಪ್-ಲಾಕ್‌ ದೃಶ್ಯಗಳಿಗೆ ಕತ್ತರಿ ಹಾಕಿದೆ ಎಂದು ವರದಿಯಾಗಿತ್ತು. ದೃಶ್ಯಗಳಲ್ಲಿ ಒಂದು 9 ಸೆಕೆಂಡುಗಳ ಕಾಲ ಕಿಸ್ಸಿಂಗ್‌ ಸೀನ್‌ ಇದ್ದರೆ, ಇನ್ನೆರಡು ದೃಶ್ಯಗಳಲ್ಲಿ 10 ಸೆಕೆಂಡುಗಳು ಮತ್ತು 8 ಸೆಕೆಂಡುಗಳು ಕಾಲ ಚುಂಬನದ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿತ್ತು. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದಾರೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿತ್ತು. ನೀರಿನಲ್ಲಿ ತೃಪ್ತಿ ಡಿಮ್ರಿ ರೊಮ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದರು.

ಬ್ಯಾಡ್ ನ್ಯೂಸ್’ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೊ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಆನಂದ್ ತಿವಾರಿ ನಿರ್ದೇಶನದ ಬ್ಯಾಡ್ ನ್ಯೂಜ್ ನಲ್ಲಿ ನೇಹಾ ಧೂಪಿಯಾ ಕೂಡ ಕಾಣಿಸಿಕೊಂಡಿದ್ದಾರೆ.

Continue Reading

Latest

Salman Khan-Akshay Kumar: ಸಲ್ಮಾನ್ ಖಾನ್ – ಅಕ್ಷಯ್ ಕುಮಾರ್ ಜೋಡಿಯಾಗಿ ನಟಿಸಿದ 4 ಅತ್ಯುತ್ತಮ ಚಿತ್ರಗಳಿವು!

Salman Khan-Akshay Kumar ಬಾಲಿವುಡ್‌ನ ಸೂಪರ್ ಸ್ಟಾರ್ ನಟರೆನಿಸಿಕೊಂಡ  ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಬಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೇ ಇವರಿಬ್ಬರು ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇವರ ಜೋಡಿ ಅನೇಕ ವೀಕ್ಷಕರನ್ನು ಮೋಡಿ ಮಾಡಿದೆ. ಹಾಗಾಗಿ ಅವರು ಜೊತೆಯಾಗಿ ನಟಿಸಿದ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ. ಆ ಚಿತ್ರಗಳ ಕುರಿತ ಮಾಹಿತಿ ಇಲ್ಲಿವೆ.

VISTARANEWS.COM


on

Salman Khan-Akshay Kumar
Koo

ಮುಂಬೈ : ಬಾಲಿವುಡ್‌ನ ಸೂಪರ್ ಸ್ಟಾರ್ ನಟರೆನಿಸಿಕೊಂಡ  ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಬಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೇ ಇವರಿಬ್ಬರು ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇವರ ಜೋಡಿ ಕೋಟ್ಯಂತರ ವೀಕ್ಷಕರನ್ನು ಮೋಡಿ ಮಾಡಿದೆ. ಹಾಗಾಗಿ ಅವರು ಜೊತೆಯಾಗಿ ನಟಿಸಿದ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ. ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ (Salman Khan-Akshay Kumar) ಚಲನಚಿತ್ರಗಳನ್ನು ನೀವು ಒಮ್ಮೆಯಾದರೂ ನೋಡಬೇಕು ಎಂದು ಬಯಸಿದ್ದರೆ ಅವರ  ಅಭಿನಯದ 4 ಅತ್ಯುತ್ತಮ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಮುಜ್‌ ಸೇ ಶಾದಿ ಕರೋಗಿ

ನಟ ಸಲ್ಮಾನ್ ಖಾನ್ ಮತ್ತು ನಟ ಅಕ್ಷಯ್ ಕುಮಾರ್ ಅವರು ಇದರಲ್ಲಿ ಜೊತೆಯಾಗಿ ನಟಿಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅವರು ಹಿರೋಯಿನ್ ಪಾತ್ರ ಮಾಡಿದ್ದಾರೆ. 2004ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾಸ್ಯ ಹಾಗೂ ಪ್ರಣಯವನ್ನು ಒಳಗೊಂಡಿದೆ. ಇದು ಈಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಮುಜ್‌ ಸೇ ಶಾದಿ ಕರೋಗಿ ಚಿತ್ರದಲ್ಲಿ ಸಲ್ಮಾನ್ ಮತ್ತು ಅಕ್ಷಯ್ ರೂಮ್ ಮೇಟ್‌ಗಳಾಗಿದ್ದು, ಇಬ್ಬರು ಪ್ರಿಯಾಂಕಾ ಚೋಪ್ರಾ ಒಬ್ಬರನ್ನೇ  ಪ್ರೀತಿಸುತ್ತಾರೆ. ಅವರ ಈ ಪೈಪೋಟಿ ಮನರಂಜನೆ ಮತ್ತು ಪ್ರೀತಿಪಾತ್ರವಾಗಿಸುತ್ತದೆ. ಚಿತ್ರದಲ್ಲಿ ಅವರ ಹಾಸ್ಯಮಯ ಸಮಯ ಮತ್ತು ಅವರ ನಡುವಿನ ತಮಾಷೆ ಪ್ರೇಕ್ಷರರಿಗೆ ಮನೋರಂಜನೆಯನ್ನು ನೀಡುತ್ತದೆ.

2. ಜಾನ್-ಎ-ಮನ್

ಇದರಲ್ಲಿ ಕೂಡ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಜೊತೆಯಾಗಿ ನಟಿಸಿದ್ದಾರೆ. ಇದರಲ್ಲಿ ನಟಿ ಪ್ರೀತಿ ಜಿಂಟಾ ಹಿರೋಯಿನ್ ಆಗಿ ನಟಿಸಿದ್ದಾರೆ. 2006 ರಲ್ಲಿ ಬಿಡುಗಡೆಯಾದ ಈ ಚಿತ್ರ ಸಂಗೀತ  ಮತ್ತು ಪ್ರಣಯಕ್ಕೆ ಸಂಬಂಧಿಸಿದಾಗಿದೆ. ಇದು ಈಗ ಯೂಟ್ಯೂಬ್‌ನಲ್ಲಿ ನೋಡಲು ಸಿಗುತ್ತದೆ. ಈ ಚಿತ್ರದಲ್ಲಿ ಕೂಡ ಸಲ್ಮಾನ್ ಮತ್ತು ಅಕ್ಷಯ್ ಇಬ್ಬರು ಕೂಡ ಪ್ರೀತಿ ಜಿಂಟಾ ಅವರನ್ನೇ ಪ್ರೀತಿಸುತ್ತಿರುತ್ತಾರೆ. ಹಮ್ಕೊ ಮಾಲೂಮ್ ಹೈ ಮತ್ತು ಕೆಲವು  ಹಾಡುಗಳಲ್ಲಿ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ.

3. ತೀಸ್ ಮಾರ್ ಖಾನ್

2010ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾಸ್ಯ, ಆಕ್ಷನ್ ನಿಂದ ಕೂಡಿದೆ. ಈ ಚಿತ್ರ ಈಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ತೀಸ್ ಮಾರ್ ಖಾನ್ ಚಿತ್ರದಲ್ಲಿ  ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಸಲ್ಮಾನ್ ಖಾನ್ ಅವರು ವಲ್ಲಾ ರೆ ವಾಲಾ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೆಚ್ಚು ಪರದೆಯ ಸಮಯವನ್ನು ಹಂಚಿಕೊಳ್ಳದಿದ್ದರೂ, ಹಾಡಿನಲ್ಲಿ ಅವರ ಕೆಮಿಸ್ಟ್ರಿ ಸೂಪರ್ ಆಗಿ ಕಾಣಿಸಿದೆ. ಇದು ಚಿತ್ರದ ಪ್ರಮುಖ ಹೈಲೈಟ್ ಆಗಿದೆ.

4. ಫಗ್ಲಿ

2014ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾಸ್ಯ ಮತ್ತು  ಥ್ರಿಲ್ಲರ್‌ನಿಂದ ಕೂಡಿದೆ. ಫಗ್ಲಿ ಚಿತ್ರದಲ್ಲಿ, ಸಲ್ಮಾನ್ ಮತ್ತು ಅಕ್ಷಯ್ ಚಿತ್ರದ ಟೈಟಲ್ ಸಾಂಗ್  ಫಗ್ಲಿ ಫಗ್ಲಿ ಕ್ಯಾ ಹೈನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಅಭಿನಯ ಮತ್ತು ಪರದೆಯ ಮೇಲೆ ಅವರ ಜೋಡಿ ಈ ಸಾಂಗ್ ಅನ್ನು ಸೂಪರ್ ಹಿಟ್ ಆಗಿಸಿದೆ.

ಇದನ್ನೂ ಓದಿ: ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ತಮ್ಮ ಅಭಿನಯ ಮತ್ತು ಅಸಾಧಾರಣ ಕೆಮಿಸ್ಟ್ರಿಯಿಂದ ಬಾಲಿವುಡ್‌ನಲ್ಲಿ ಕೆಲವು ಮರೆಯಲಾಗದ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಅವರ ಚಲನಚಿತ್ರಗಳು, ಒಟ್ಟಿಗೆ ಅಥವಾ ವೈಯಕ್ತಿಕವಾಗಿ, ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತವೆ. ಇದು ಅವರನ್ನು ಭಾರತೀಯ ಚಿತ್ರರಂಗದ ಐಕಾನ್‌ಗಳನ್ನಾಗಿ ಮಾಡುತ್ತವೆ.

Continue Reading

ಬಾಲಿವುಡ್

Krishan Kumar: ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು

Krishan Kumar: ಕ್ರಿಶನ್ ಕುಮಾರ್ ನಿರ್ಮಾಪಕರಾಗಿದ್ದು, “ಬೇವಾಫಾ ಸನಮ್” (1995) ನಲ್ಲಿನ ಪಾತ್ರಕ್ಕಾಗಿ ಮತ್ತು ಭಾರತದಲ್ಲಿನ ಅತಿದೊಡ್ಡ ಸಂಗೀತ ನಿರ್ಮಾಣ ಕಂಪನಿಯಾದ ಟಿ-ಸಿರೀಸ್ ಅನ್ನು ಹೊಂದಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಕ್ರಿಶನ್ ಕುಮಾರ್ ದುವಾ ಪಂಜಾಬಿ ಕುಟುಂಬದಲ್ಲಿ ಜನಿಸಿದರು.

VISTARANEWS.COM


on

Krishan Kumar Daughter Tishaa Dies Of Cancer At 21
Koo

ಬೆಂಗಳೂರು: 90 ರ ದಶಕದ ನಟ ಮತ್ತು ಟಿ-ಸಿರೀಸ್‌ನ ಸಹ-ಮಾಲೀಕ ಕ್ರಿಶನ್ ಕುಮಾರ್ (Krishan Kumar) ಅವರ ಪುತ್ರಿ ತಿಶಾ ಕುಮಾರ್ ನಿಧನರಾಗಿದ್ದಾರೆ. ತಿಶಾ ಕುಮಾರ್ ( Tishaa Dies) ಅವರು ಕೇವಲ 21ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. 

ಆಕೆಯ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈನಿಂದ ಜರ್ಮನಿಗೆ ಕರೆದೊಯ್ಯಲಾಯಿತು. ನಿನ್ನೆ ಜರ್ಮನಿಯ ಆಸ್ಪತ್ರೆಯಲ್ಲಿ ತಿಶಾ ಕೊನೆಯುಸಿರೆಳೆದಿದ್ದಾರೆ. ಟಿ-ಸೀರೀಸ್ ವಕ್ತಾರರು ಈ ಬಗ್ಗೆ ಹಂಚಿಕೊಂಡಿದ್ದಾರೆ, “ಕ್ರಿಶನ್ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ಅವರು ಅನಾರೋಗ್ಯದಿಂದ ದೀರ್ಘಕಾಲದ ಹೋರಾಟದ ನಂತರ ನಿನ್ನೆ ನಿಧನರಾದರು. ಇದು ಕುಟುಂಬಕ್ಕೆ ಕಷ್ಟಕರ ಸಮಯ.ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ. ಕ್ರಿಶನ್ ಕುಮಾರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್​ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ.

ಕ್ರಿಶನ್ ಕುಮಾರ್ ನಿರ್ಮಾಪಕರಾಗಿದ್ದು, “ಬೇವಾಫಾ ಸನಮ್” (1995) ನಲ್ಲಿನ ಪಾತ್ರಕ್ಕಾಗಿ ಮತ್ತು ಭಾರತದಲ್ಲಿನ ಅತಿದೊಡ್ಡ ಸಂಗೀತ ನಿರ್ಮಾಣ ಕಂಪನಿಯಾದ ಟಿ-ಸಿರೀಸ್ ಅನ್ನು ಹೊಂದಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಕ್ರಿಶನ್ ಕುಮಾರ್ ದುವಾ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಚಂದ್ರಭಾನ್, ಕ್ರಿಶನ್ ಟಿ-ಸೀರೀಸ್ ಎಂದು ಕರೆಯಲ್ಪಡುವ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಕಿರಿಯ ಸಹೋದರ.

ಇದನ್ನೂ ಓದಿ: Dhruva Sarja: 3 ವರ್ಷವಾದರೂ ʻಮಾರ್ಟಿನ್‌ʼ ಸಿನಿಮಾ ರಿಲೀಸ್‌ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?ತಿಶಾ ಅವರು 2003ರ ಸೆಪ್ಟೆಂಬರ್ 6ರಂದು ಜನಿಸಿದರು. ಅವರು ಕೃಷ್ಣ ಹಾಗೂ ತಾನ್ಯಾ ಸಿಂಗ್ ಮಗಳು. ದಂಪತಿಗೆ ಇರುವ ಏಕೈಕ ಮಗಳು ಇವರಾಗಿದ್ದರು. ಅವರ ಬಗ್ಗೆ ಹೊರ ಜಗತ್ತಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಇದನ್ನು ಟಿ-ಸೀರಿಸ್ ನಿರ್ಮಾಣ ಮಾಡಿದೆ. ‘ಅನಿಮಲ್’, ‘ಭೂಲ್ ಭುಲಯ್ಯ 2’ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು ಕ್ರಿಶನ್ ಕುಮಾರ್ .

Continue Reading

ಬಾಲಿವುಡ್

Vishal Punjabi: ಮದುವೆಯಾದ 2 ತಿಂಗಳಿಗೆ ಪತ್ನಿಗೆ ಮೋಸ ಮಾಡಿ, ಇನ್ನೊಬ್ಬಳ ಜತೆ ಈ ನಟ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದನಂತೆ!

Vishal Punjabi: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಕಿಯಾರಾ ಆಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಶಾಲ್ ಪಂಜಾಬಿ ಅವರು ಚಿತ್ರೀಕರಿಸಿದ ಯಾವುದಾದರೂ ಒಂದು ಜೋಡಿ ವಿಚ್ಛೇದನದಲ್ಲಿ ಕೊನೆಗೊಂಡಿತೆ? ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ವಿಶಾಲ್‌ ಹೇಳಿದ್ದು ಹೀಗೆ.

VISTARANEWS.COM


on

Wedding FilmerVishal Punjabi recent chat
Koo

ಬೆಂಗಳೂರು: ವೆಡ್ಡಿಂಗ್ ಫಿಲ್ಮರ್ ಎಂದೂ ಕರೆಯಲ್ಪಡುವ ನಿರ್ಮಾಪಕ ವಿಶಾಲ್ ಪಂಜಾಬಿ ( Vishal Punjabi) ಅವರು ಹಲವಾರು ಉನ್ನತ-ಪ್ರೊಫೈಲ್ ಜೋಡಿಗಳ ವೀಡಿಯೊಗ್ರಾಫ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಕಿಯಾರಾ ಆಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಶಾಲ್ ಪಂಜಾಬಿ ಅವರು ಚಿತ್ರೀಕರಿಸಿದ ಯಾವುದಾದರೂ ಒಂದು ಜೋಡಿ ವಿಚ್ಛೇದನದಲ್ಲಿ ಕೊನೆಗೊಂಡಿತೆ? ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ವಿಶಾಲ್‌ ಹೇಳಿದ್ದು ಹೀಗೆ.

ವಿಶಾಲ್ ಪಂಜಾಬಿ ಈ ಬಗ್ಗೆ ಮಾತನಾಡಿ ʻʻಸೆಲೆಬ್ರಿಟಿಗಳಲ್ಲಿಯೇ ಈ ಘಟನೆ ಜಾಸ್ತಿ. ಮದುವೆಯಾದ ಎರಡು ತಿಂಗಳ ನಂತರ ಆಕೆಗೆ ಮೋಸ ಮಾಡುವರು ಇರುತ್ತಿದ್ದರು. ಸೆಟ್‌ನಲ್ಲಿ ತನ್ನ ಮೇಕಪ್ ವ್ಯಾನ್‌ನಲ್ಲಿ ನಟಿಯರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವವರು ಇದ್ದರು. ಹೆಂಡತಿ ಆ ಬಳಿಕ ಅವನನ್ನು ಬೆತ್ತಲೆಯಾಗಿ ನೋಡಿರುವ ಘಟನೆ ಇತ್ತು. ಇದು ಒಬ್ಬ ಖ್ಯಾತ ನಟನ ಸ್ಟೋರಿʼʼಎಂದರು.

ʻʻಕೆಲವೊಮ್ಮೆ ನಾನು ಕರೆ ಮಾಡುವಾಗ ವರ ಕಾಲ್‌ ತೆಗೆದುಕೊಳ್ಳುವುದಿಲ್ಲ, ವಧುವಿಗೆ ಕರೆ ಮಾಡಿದರೆ, ಮದುವೆಯ ವಿಡಿಯೊ ಬೇಡ, ಕರೆ ಮಾಡಬೇಡಿ ಎನ್ನುತ್ತಾರೆ. ಮ್ಯಾನೇಜರ್‌ಗೆ ಕರೆ ಮಾಡಿದರೆ ಅದೇ ರೀತಿ ಉತ್ತರ ಬರುತ್ತದೆ. ಆ ಸಂದರ್ಭದಲ್ಲಿ ನಾನು ಏನು ಮಾಡಬೇಕು? ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲೆ? ಹೀಗಾಗಿ ನಾನು ಕಾಂಟ್ರ್ಯಾಕ್ಟ್‌ ಮಾಡಲು ಆರಂಭಿಸಿದೆʼʼಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.

Dhruva Sarja: 3 ವರ್ಷವಾದರೂ ʻಮಾರ್ಟಿನ್‌ʼ ಸಿನಿಮಾ ರಿಲೀಸ್‌ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?ಇದನ್ನೂ ಓದಿ:

ʻʻಕೆಲವೊಮ್ಮೆ ವಿಡಿಯೊದಲ್ಲಿ ವರನು ಅಳುತ್ತಾ ನಾನು ನಿನ್ನನ್ನು ಪ್ರೀತಿಸುತ್ತೇನೆ, ಬೇಬಿ’ ಎಂದು ಹೇಳುತ್ತಾನೆ. ಅವು ಮೊಸಳೆ ಕಣ್ಣೀರು ಎಂದು ನಿಮಗೆ ತಿಳಿದಿದೆ. ಈ ಕಥೆ ದೊಡ್ಡ ಬಾಲಿವುಡ್ ನಟದ್ದು. ಹೆಸರು ಬೇಡ. ಆ ತುಣುಕಿನ ಮೌಲ್ಯವು ಲಕ್ಷಾಂತರ ಮೌಲ್ಯದ್ದಾಗಿದೆ. ನಾನು ಅದನ್ನು ಮಾರಿ ಹಣ ಸಂಪಾದಿಸಬಹುದು. ಆದರೆ ಅದು ಸರಿಯಲ್ಲʼʼಎಂದರು. ಮದುವೆಯ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು, ವಿಶಾಲ್ ಶಾರುಖ್ ಖಾನ್ ಅವರೊಂದಿಗೆ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ನಲ್ಲಿ ಒಂದು ದಶಕದ ಕಾಲ ಕೆಲಸ ಮಾಡಿದರು.

Continue Reading
Advertisement
Mohammed Shami
ಕ್ರೀಡೆ16 mins ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ17 mins ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ28 mins ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Vicky Kaushal box office collection Movie Collects Only 8 Crore
ಬಾಲಿವುಡ್38 mins ago

Vicky Kaushal: ವಿಕ್ಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಸ್’ ಚಿತ್ರಕ್ಕೆ ಕಳಪೆ ಕಲೆಕ್ಷನ್ ; ಮೊದಲ ದಿನದ ಗಳಿಕೆ ಎಷ್ಟು?

Paris Olympics
ಕ್ರೀಡೆ56 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

bangladesh protests dhaka
ಪ್ರಮುಖ ಸುದ್ದಿ1 hour ago

Bangladesh Protests: ಬಾಂಗ್ಲಾದಲ್ಲಿ ಹಿಂಸಾಚಾರ ಉಲ್ಬಣ, 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ

Music Composer Hamsalekha Ask Apology To Jain Community controversial
ಸಿನಿಮಾ1 hour ago

Music Composer Hamsalekha : ಜೈನ ಫಿಲಾಸಫಿ ಬುಲ್‌‌ಶಿಟ್ ಎಂದು ಅವಮಾನಿಸಿದ ಹಂಸಲೇಖ ಈಗ ಕ್ಷಮಿಸಿ ಅಂತಿದ್ದಾರೆ!

road accident savadatti belagavi news
ಬೆಳಗಾವಿ2 hours ago

Road Accident: ಬೈಕ್‌ಗಳು ಮುಖಾಮುಖಿ ಡಿಕ್ಕಿ, ಇಬ್ಬರು ಸಾವು, ಇಬ್ಬರು ಗಂಭೀರ

road rage bangalore
ಬೆಂಗಳೂರು2 hours ago

Road Rage: ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

Pets in Designer Outfits
Latest2 hours ago

Pets in Designer Outfits : ಅನಂತ್-ರಾಧಿಕಾ ಮದುವೆಯಲ್ಲಿ ಅಂಬಾನಿ ಕುಟುಂಬದ ನಾಯಿಗಳ ಸಂಭ್ರಮ ನೋಡಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ21 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌