ಚಿನ್ನದ ದರ
Gold rate : ಅಮೆರಿಕದಲ್ಲಿ ಬ್ಯಾಂಕ್‌ಗಳ ಪತನ, 60,000 ರೂ. ಗಡಿ ದಾಟಿದ ಬಂಗಾರ ದರ, ಶೀಘ್ರ ಮತ್ತಷ್ಟು ಏರಿಕೆ ಸಂಭವ
ಅಮೆರಿಕ ಮತ್ತು ಯುರೋಪ್‌ನಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಬಿಕ್ಕಟ್ಟಿನ ಪರಿಣಾಮ ಹೂಡಿಕೆದಾರು ( Gold rate) ಬಂಗಾರದಲ್ಲಿ ಹೂಡಿಕೆ ಸುರಕ್ಷಿತ ಎಂದು ಭಾವಿಸಿದ್ದಾರೆ. ಹೀಗಾಗಿ ಅದರ ಬೇಡಿಕೆ ಮತ್ತು ದರ ಹೆಚ್ಚುತ್ತಿದೆ.
ಬೆಂಗಳೂರು: ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕ್‌ಗಳಲ್ಲಿ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಹೂಡಿಕೆದಾರರು ಬಂಗಾರದತ್ತ ಆಕರ್ಷಿತರಾಗಿದ್ದು, ಅದರ ದರ ಜಿಗಿದಿದೆ. ( Gold rate) ಚಿನ್ನ ದರ 60,000 ರೂ.ಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ಬಂಗಾರದಲ್ಲಿ ಹೂಡಿಕೆ ಸುರಕ್ಷಿತ ಎಂದು ಹೂಡಿಕೆದಾರರು ಭಾವಿಸಿರುವುದು ಇದಕ್ಕೆ ಕಾರಣ.
ಯುರೋಪ್‌ನಲ್ಲಿ ಇಸಿಬಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಡ್ಡಿ ದರವನ್ನು ಏರಿಸಿದೆ. ಹಣದುಬ್ಬರವನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡಿದೆ. ಇದು ಕೂಡ ಬಂಗಾರದ ದರ ಏರಿಕೆಗೆ ಕಾರಣವಾಗಿದೆ.
ಮತ್ತಷ್ಟು ಏರಿಕೆ ಸಾಧ್ಯತೆ: ಅಮೆರಿಕದಲ್ಲಿ ಮಾರ್ಚ್ 21 ಮತ್ತು ಮಾರ್ಚ್ 22ರಂದು ಅಮೆರಿಕದ ಫೆಡರಲ್ ರಿಸರ್ವ್ ಸಭೆ ನಡೆಸಲಿದೆ. ಇದರಲ್ಲಿ ಒಂದು ವೇಳೆ ಮತ್ತಷ್ಟು ಬಡ್ಡಿ ದರ ಏರಿಸಿದರೆ ಬಂಗಾರದ ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಐಐಎಫ್‌ಎಲ್ ಸೆಕ್ಯುರಿಟೀಸ್‌ನ ಅಂಜು ಗುಪ್ತಾ. ಹೀಗಿದ್ದರೂ, ಅಮೆರಿಕದಲ್ಲಿ ದೀರ್ಘಕಾಲೀನವಾಗಿ ಹಣದುಬ್ಬರ ಸ್ಥಿರವಾಗುವ ನಿರೀಕ್ಷೆ ಇರುವುದರಿಂದ, ಬಡ್ಡಿ ದರ ಏರಿಕೆಯೂ ಸೀಮಿತವಾಗಿರಬಹುದು ಎನ್ನಲಾಗಿದೆ. ದರ ಏರಿಕೆ ಎಷ್ಟರಮಟ್ಟಿಗೆ ಇರಬಹುದು ಎಂಬುದು ಸ್ಪಷ್ಟವಾಗಿಲ್ಲ.
ಬಂಗಾರದ ದರ ಭಾನುವಾರ ಬೆಂಗಳೂರಿನಲ್ಲಿ 10 ಗ್ರಾಮ್‌ಗೆ (24 ಕ್ಯಾರಟ್) 60,370 ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರ 10 ಗ್ರಾಮ್‌ಗೆ 55,350 ರೂ.ನಷ್ಟಿತ್ತು. ಬೆಳ್ಳಿಯ ದರ ಕೆ.ಜಿಗೆ 74,400 ರೂ. ಇತ್ತು.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಬಂಗಾರದ ದರದಲ್ಲಿ 540 ರೂ. ಇಳಿಕೆ, ಬೆಳ್ಳಿ 200 ರೂ. ದುಬಾರಿ
ಬಂಗಾರದ ದರದಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆಯ ಏರುಗತಿ ಕಂಡು ಬಂದಿದೆ. ಈ ನಡುವೆ (Gold rate) ಮಂಗಳವಾರ ತುಸು ಇಳಿಕೆಯಾಗಿದೆ. ಗ್ರಾಹಕರು ಗಮನಿಸಬಹುದು.
ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 540 ರೂ. ಇಳಿಕೆಯಾಗಿದೆ. ಪ್ರತಿ 10 ಗ್ರಾಮ್ ಚಿನ್ನದ ದರ 59,830 ರೂ.ಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್‌ಗೆ ದರ 54,850 ರೂ.ಗೆ ಅಂದರೆ 500 ರೂ. ಇಳಿಕೆಯಾಗಿದೆ.
ಒಟ್ಟಾರೆಯಾಗಿ ಬಂಗಾರದ ದರ ಏರುಗತಿ:
ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ಬಂಗಾರದ ದರ ಮೊದಲ ಬಾರಿಗೆ 60,370 ರೂ.ಗಳ ಗಡಿ ದಾಟಿತ್ತು. (Gold rate) ಸ್ವರ್ಣ ದರ ಸೋಮವಾರ 500 ರೂ. ಇಳಿಕೆಯಾಗಿದ್ದು, 59,830 ರೂ.ಗೆ ತಗ್ಗಿತ್ತು. (24 ಕ್ಯಾರಟ್) ಕೇವಲ ಬ್ಯಾಂಕಿಂಗ್ ಬಿಕ್ಕಟ್ಟು ಮಾತ್ರವಲ್ಲದೆ, ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿ ದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಪ್ರಭಾವ ಬೀರಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಬ್ಯಾಂಕಿಂಗ್ ಬಿಕ್ಕಟ್ಟಿನ ಪರಿಣಾಮ 60,000 ರೂ.ಗೆ ಜಿಗಿದ ಬಂಗಾರ ದರ, ಮತ್ತಷ್ಟು ಏರಿಕೆ ಸಂಭವ
ಅಮೆರಿಕ-ಯುರೋಪ್‌ನಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಬಿಕ್ಕಟ್ಟು, ಹಣದುಬ್ಬರ, ಬಡ್ಡಿ ದರ ಏರಿಕೆಯ ಪರಿಣಾಮ ಚಿನ್ನದ ದರದಲ್ಲಿ ಹೆಚ್ಚಳ (Gold rate) ಉಂಟಾಗಿದೆ.
ಬೆಂಗಳೂರು: ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 18ರಂದು ಬಂಗಾರದ ದರ ಮೊದಲ ಬಾರಿಗೆ 60,370 ರೂ.ಗಳ ಗಡಿ ದಾಟಿತ್ತು. (Gold rate) ಸ್ವರ್ಣ ದರ ಸೋಮವಾರ 500 ರೂ. ಇಳಿಕೆಯಾಗಿದ್ದು, 59,830 ರೂ.ಗೆ ತಗ್ಗಿತ್ತು. (24 ಕ್ಯಾರಟ್) ಕೇವಲ ಬ್ಯಾಂಕಿಂಗ್ ಬಿಕ್ಕಟ್ಟು ಮಾತ್ರವಲ್ಲದೆ, ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿ ದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಪ್ರಭಾವ ಬೀರಿದೆ.
ಕಳೆದ 10 ದಿನಗಳಲ್ಲಿ 24 ಕ್ಯಾರಟ್ ಬಂಗಾರದ ದರ (10 ಗ್ರಾಮ್ )
ಮಾರ್ಚ್ 20 : 59,830 ರೂ.
ಮಾರ್ಚ್ 19: 60,370 ರೂ.
ಮಾರ್ಚ್ 18: 60,370
ಮಾರ್ಚ್ 17: 58,740
ಮಾರ್ಚ್ 16: 58,470
ಮಾರ್ಚ್ 15 : 57,920
ಮಾರ್ಚ್ 14 : 58,030
ಮಾರ್ಚ್ 13 : 57,270
ಮಾರ್ಚ್ 12 : 56,950
ಮಾರ್ಚ್ 11 : 56,940
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಸಭೆ ನಡೆಸಲಿದ್ದು, ಬಡ್ಡಿ ದರಗಳ ಪರಿಷ್ಕರಣೆ ಬಗ್ಗೆ ಪರಾಮರ್ಶೆಸ ನಡೆಸಲಿದೆ. ಇದು ಬಂಗಾರದ ಅಂತಾರಾಷ್ಟ್ರೀಯ ದರಗಳ ಮೇಲೆ ಪ್ರಭಾವ ಬೀರಬಹುದು. ಆಪತ್ತಿನ ಸಂದರ್ಭ ಜನತೆ ಚಿನ್ನದಲ್ಲಿ ಹೂಡಿಕೆ ಬಯಸುತ್ತಾರೆ. ಮುಖ್ಯವಾಗಿ ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಚಿನ್ನ ಸುರಕ್ಷಿತ ಹೂಡಿಕೆಯ ಸಾಧನವಾಗಿ ಬಳಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಮ್ ಚಿನ್ನದ ದರ (24 ಕ್ಯಾರಟ್) : 59,830, 22 ಕ್ಯಾರಟ್ ಚಿನ್ನದ ದರ : 54,850 ರೂ.
62,000 ರೂ.ಗೆ ಏರಿಕೆ ಸಂಭವ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ದಿಢೀರ್ ಹೆಚ್ಚಳದ ಬಳಿಕ ಬಂಗಾರದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿಯ ದರ 500 ರೂ. ಏರಿಕೆ
ಬಂಗಾರದ ದರದಲ್ಲಿಕಳೆದ ವಾರ ಏರುಗತಿಯಲ್ಲಿತ್ತು. ಈ ವರ್ಷ ದರ 62,000 ರೂ.ಗೆ ಜಿಗಿದರೂ ಆಶ್ಚರ್ಯ (Gold rate) ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ 110 ರೂ. ಇಳಿಕೆಯಾಗಿದ್ದು, 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 57,920 ರೂ.ಗೆ (Gold rate) ತಗ್ಗಿದೆ. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ 100 ರೂ. ತಗ್ಗಿದ್ದು, 53,100 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ 500 ರೂ. ಏರಿಕೆಯಾಗಿದ್ದು 72,500 ರೂ.ಗೆ ವೃದ್ಧಿಸಿದೆ. ಕಳೆದ ಕೆಲ ದಿನಗಳಿಂದ ಸತತ ಏರಿಕೆಯನ್ನು ಚಿನ್ನದ ದರ ದಾಖಲಿಸಿತ್ತು.
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
ಚಿನ್ನದ ದರ
Gold rate : ಖರೀದಿದಾರರೇ ಮರೆಯದಿರಿ, ಕಳೆದ 5 ದಿನಗಳಿಂದ ಚಿನ್ನದ ದರ 2450 ರೂ. ಜಿಗಿತ, ಬೆಳ್ಳಿಯೂ ದುಬಾರಿ
ಬಂಗಾರದ ದರದಲ್ಲಿ ಕಳೆದ 5 ದಿನಗಳಿಂದ 2450 ರೂ. ಏರಿಕೆಯಾಗಿದ್ದು, 58,030 ರೂ.ಗೆ ವೃದ್ಧಿಸಿದೆ. ಇದರೊಂದಿಗೆ ಶೀಘ್ರ 60,000 ರೂ.ಗಳ (Gold rate) ಗಡಿ ದಾಟಿದರೆ ಆಶ್ಚರ್ಯವಿಲ್ಲ.
ಬೆಂಗಳೂರು: ಕಳೆದ ಐದು ದಿನಗಳಿಂದ ಬಂಗಾರದ ದರ (Gold rate) ಸ್ಫೋಟ ಸಂಭವಿಸಿದೆ. ಮಾರ್ಚ್ 10 ರಿಂದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 2450 ರೂ. ಹೆಚ್ಚಳವಾಗಿದ್ದು, ಬುಧವಾರ 24 ಕ್ಯಾರಟ್‌ನ 10 ಗ್ರಾಮ್‌ಗೆ ದರ 58,030 ರೂ.ಗೆ ವೃದ್ಧಿಸಿದೆ. ಈ ಮೂಲಕ 60,000 ರೂ. ಮೈಲಿಗಲ್ಲಿನತ್ತ ದಾಪುಗಾಲಿಕ್ಕಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರ 53,200 ರೂ.ಗೆ ವೃದ್ಧಿಸಿತ್ತು. ಪ್ರತಿ ಕೆಜಿ ಬೆಳ್ಳಿ ದರದಲ್ಲೂ (silver) ಬುಧವಾರ 2500 ರೂ. ಹೆಚ್ಚಳವಾಗಿದ್ದು, 72,000 ರೂ.ಗೆ ಏರಿಕೆಯಾಗಿದೆ.
ದಿನಾಂಕ 22K 24K ಮಾರ್ಚ್ 14, 2023 53,200 58,030 ಮಾರ್ಚ್ 13, 2023 52,500 57,270 ಮಾರ್ಚ್ 12, 2023 52,210 56,950 ಮಾರ್ಚ್ 11, 2023 52,200 56,940 ಮಾರ್ಚ್ 10, 2023 51,450 56,110
62,000 ರೂ.ಗೆ ಏರಿಕೆ ಸಾಧ್ಯತೆ:
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್ ಬ್ಯಾಂಕ್‌ಗಳು 2022ರಲ್ಲಿ 1,136 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್ ಬಂಗಾರವನ್ನು ಸೆಂಟ್ರಲ್ ಬ್ಯಾಂಕ್‌ಗಳು ಖರೀದಿಸಿತ್ತು.
2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.
2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್ ವರದಿ ತಿಳಿಸಿದೆ.
ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:
ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ