GOLD PRICE: ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ 280 ರೂ, ಬೆಳ್ಳಿಯಲ್ಲಿ 500 ರೂ. ಇಳಿಕೆ - Vistara News

ಚಿನ್ನದ ದರ

GOLD PRICE: ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ 280 ರೂ, ಬೆಳ್ಳಿಯಲ್ಲಿ 500 ರೂ. ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ ಇಳಿಕೆಯಾಗಿದ್ದು ದೇಶಿ ಮಾರುಕಟ್ಟೆ ಮೇಲೆ ಕೂಡ ಗುರುವಾರ ಪ್ರಭಾವ ಬೀರಿತು. ಬೆಳ್ಳಿ ಮತ್ತು ಪ್ಲಾಟಿನಮ್‌ ದರ ಕೂಡ ತಗ್ಗಿತು.

VISTARANEWS.COM


on

gold coin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಂಗಾರದ ದರದಲ್ಲಿ ಗುರುವಾರ ಬೆಂಗಳೂರಿನಲ್ಲಿ 280 ರೂ. ಇಳಿಕೆಯಾಗಿದೆ. ಬೆಳ್ಳಿ ಹಾಗೂ ಪ್ಲಾಟಿನಂ ದರಗಳೂ ತಗ್ಗಿವೆ.

24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ದರ 51,820 ರೂ.ಗೆ ಇಳಿಮುಖವಾಗಿದೆ. 22 ಕ್ಯಾರಟ್‌ನ 10 ಗ್ರಾಮ್‌ ಬಂಗಾರದ ದರದಲ್ಲಿ 47,500 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ದರ ಕೆಜಿಗೆ 67,000 ರೂ.ಗೆ ತಗ್ಗಿದೆ. ಪ್ಲಾಟಿನಮ್‌ ದರ 10 ಗ್ರಾಮ್‌ಗೆ 23,810 ರೂ. ಆಗಿದೆ.

ಅಮೆರಿಕದಲ್ಲಿ ಡಾಲರ್‌ ಪ್ರಾಬಲ್ಯದ ಪರಿಣಾಮ ಹೂಡಿಕೆದಾರರು ಚಿನ್ನದಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದು, ದರದ ಮೇಲೆ ಪ್ರಭಾವ ಬೀರಿತು. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಜೂನ್‌ 26) ಚಿನ್ನದ ಬೆಲೆ ಇಳಿಕೆಯಾಗಿದೆ. ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿತ್ತು. ಮಂಗಳವಾರ ಅದೇ ದರ ಕಾಯ್ದುಕೊಂಡಿದ್ದರೆ ಇಂದು ಮತ್ತೆ ಇಳಿಕೆಯಾಗಿದೆ. ಹಾಗಾದರೆ ಬೆಲೆ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಜೂನ್‌ 26) ಚಿನ್ನದ ಬೆಲೆ ಇಳಿಕೆಯಾಗಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿತ್ತು. ಮಂಗಳವಾರ ಅದೇ ದರ ಕಾಯ್ದುಕೊಂಡಿದ್ದರೆ ಇಂದು ಮತ್ತೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹ 25 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 23 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,600 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,200 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,800. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,000 ಮತ್ತು ₹ 6,60,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,600 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,000 ಮತ್ತು ₹ 7,20,000 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,615 ₹ 7,215
ಮುಂಬೈ₹ 6,600 ₹ 7,200
ಬೆಂಗಳೂರು₹ 6,600₹ 7,200
ಚೆನ್ನೈ₹ 6,660 ₹ 7,266

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಕೊಂಚ ಇಳಿಮುಖವಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 90.95 ಹಾಗೂ 8 ಗ್ರಾಂಗೆ ₹ 727.60 ಇದೆ. 10 ಗ್ರಾಂಗೆ ₹ 909.50 ಹಾಗೂ 1 ಕಿಲೋಗ್ರಾಂಗೆ ₹ 90,950 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

Continue Reading

ಚಿನ್ನದ ದರ

Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ (ಜೂನ್‌ 25) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿ ಗ್ರಾಹಕರು ನಿರಾಳರಾಗಿದ್ದರು.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ (ಜೂನ್‌ 25) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸೋಮವಾರ ಮತ್ತೆ ದರ ಇಳಿಕೆಯಾಗಿ ಗ್ರಾಹಕರು ನಿರಾಳರಾಗಿದ್ದರು.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,625 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,223 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,000. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,250 ಮತ್ತು ₹ 6,62,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,784 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,230 ಮತ್ತು ₹ 7,22,300 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,640₹ 7,238
ಮುಂಬೈ₹ 6,625₹ 7,223
ಬೆಂಗಳೂರು₹ 6,625₹ 7,223
ಚೆನ್ನೈ₹ 6,680 ₹ 7,288

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಕೊಂಚ ಇಳಿಮುಖವಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 91.05 ಹಾಗೂ 8 ಗ್ರಾಂಗೆ ₹ 728.40 ಇದೆ. 10 ಗ್ರಾಂಗೆ ₹ 910.50 ಹಾಗೂ 1 ಕಿಲೋಗ್ರಾಂಗೆ ₹ 91,050 ಬೆಲೆ ಬಾಳುತ್ತದೆ.

ಚಿನ್ನದ ಕ್ಯಾರಟ್‌ ಎಂದರೇನು?

ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”

24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರೆಟ್ ಚಿನ್ನದಿಂದ ಖರೀದಿಸಲಾಗುತ್ತದೆ.

24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: JioMart: ಕುಶಲಕರ್ಮಿಗಳು, ನೇಕಾರರ ಉತ್ತೇಜನಕ್ಕೆ ಜಿಯೋಮಾರ್ಟ್‌ನಿಂದ ಮತ್ತೊಂದು ಘೋಷಣೆ

Continue Reading

ಚಿನ್ನದ ದರ

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಇಳಿದ ಚಿನ್ನದ ದರ

Gold Rate Today:  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಜೂನ್‌ 24) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಮತ್ತೆ ದರ ಇಳಿಕೆಯಾಗಿರುವುದರಿಂದ ಗ್ರಾಹಕರು ನಿರಾಳರಾಗಿದ್ದಾರೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 15 ಕಡಿಮೆಯಾಗಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಜೂನ್‌ 24) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿದ್ದರೆ ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಮತ್ತೆ ದರ ಇಳಿಕೆಯಾಗಿರುವುದರಿಂದ ಗ್ರಾಹಕರು ನಿರಾಳರಾಗಿದ್ದಾರೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 15 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,625 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,223 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,000. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,250 ಮತ್ತು ₹ 6,62,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,784 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,230 ಮತ್ತು ₹ 7,22,300 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,640₹ 7,238
ಮುಂಬೈ₹ 6,625 ₹ 7,223
ಬೆಂಗಳೂರು₹ 6,625₹ 7,223
ಚೆನ್ನೈ₹ 6,700 ₹ 7,310

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಕೊಂಚ ಇಳಿಮುಖವಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 91.15 ಹಾಗೂ 8 ಗ್ರಾಂಗೆ ₹ 729.20 ಇದೆ. 10 ಗ್ರಾಂಗೆ ₹ 911.50 ಹಾಗೂ 1 ಕಿಲೋಗ್ರಾಂಗೆ ₹ 91,150 ಬೆಲೆ ಬಾಳುತ್ತದೆ.

ಚಿನ್ನ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣ ಬೆಲೆಯಲ್ಲಿ ಮೇಕಿಂಗ್‌ ಚಾರ್ಜಸ್‌ (Making Charges) ಪ್ರಧಾನ ಪಾತ್ರ ವಹಿಸುತ್ತದೆ. ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿನ್ನದ ಬೆಲೆಯನ್ನು ಆಧರಿಸಿ ತಯಾರಿಕಾ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ತಯಾರಿಕಾ ಶುಲ್ಕಗಳಲ್ಲಿ ಹಣವನ್ನು ಉಳಿಸಲು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ 8 ಗ್ರಾಂ ಚಿನ್ನದ ಸರದ ಬೆಲೆ 40,000 ರೂ. ಎಂದಿಟ್ಟುಕೊಳ್ಳೋಣ. ಪ್ರತಿ ಗ್ರಾಂಗೆ 300 ರೂ. ಫ್ಲಾಟ್ ದರದಲ್ಲಿ ತಯಾರಿಕಾ ಶುಲ್ಕವು 2,400 ರೂ. ಆಗಿರುತ್ತದೆ. 12%ದಂತೆ ಲೆಕ್ಕ ಹಾಕಿದರೆ ಇದು ಗರಿಷ್ಠ 4,800 ರೂ.ವರೆಗೆ ಹೆಚ್ಚಾಗುತ್ತದೆ.

ಬೆಲೆ ಲೆಕ್ಕ ಹಾಕಿ: ಚಿನ್ನದ ದರ ಅದರ ಶುದ್ಧತೆಯ ಮೇಲೆ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತಿರುತ್ತದೆ. ಜ್ಯುವೆಲ್ಲರಿಗಳು ದಿನಂಪ್ರತಿ ಆಯಾ ದಿನದ ಬೆಲೆ ಪ್ರದರ್ಶಿಸುತ್ತವೆ. ಇದನ್ನು ಗಮನಿಸಿ. ಆಭರಣದ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹೀಗಾಗಿ ಖರೀದಿಗೆ ತೆರಳುವ ಮುನ್ನ ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಬೆಲೆಗಳನ್ನು ಹೋಲಿಸಿ: ಮೊದಲೇ ಹೇಳಿದಂತೆ ಆಭರಣದ ಬೆಲೆಯಲ್ಲಿ ತಯಾರಿಕಾ ವೆಚ್ಚವೂ ಸೇರಿರುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ. ಆದ್ದರಿಂದ ವಿವಿಧ ಹಂತಗಳಲ್ಲಿನ ಶುಲ್ಕಗಳನ್ನು ಹೋಲಿಸಿ ಎನ್ನುವುದು ತಜ್ಞರು ನೀಡುವ ಟಿಪ್ಸ್‌.

ಇದನ್ನೂ ಓದಿ: SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

Continue Reading

ಚಿನ್ನದ ದರ

Gold Rate Today: ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ವೀಕೆಂಡ್‌ ಶಾಪಿಂಗ್‌ಗೆ ತೆರಳುವ ಮುನ್ನ ಬೆಲೆ ಚೆಕ್‌ ಮಾಡಿ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಜೂನ್‌ 23) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಶನಿವಾರ ಬೆಲೆ ಇಳಿಕೆಯಾಗಿ ಗ್ರಾಹಕರು ಕೊಂಚ ನಿರಾಳರಾಗಿದ್ದರು. ಇಂದು ಮತ್ತೆ ಬೆಲೆ ಏರಿಕೆಯಾಗದೆ ಸಮಾಧಾನ ಪಟ್ಟುಕೊಂಡಿದ್ದಾರೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಜೂನ್‌ 23) ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ಶನಿವಾರ ಬೆಲೆ ಇಳಿಕೆಯಾಗಿ ಗ್ರಾಹಕರು ಕೊಂಚ ನಿರಾಳರಾಗಿದ್ದರು. ಇಂದು ಮತ್ತೆ ಬೆಲೆ ಏರಿಕೆಯಾಗದೆ ಸಮಾಧಾನ ಪಟ್ಟುಕೊಂಡಿದ್ದಾರೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,635 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,238 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 53,080ಕ್ಕೆ ತಲುಪಿದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 67,150 ಮತ್ತು ₹ 6,63,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 57,904 ಇದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹ 72,380 ಮತ್ತು ₹ 7,23,800 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,650₹ 7,253
ಮುಂಬೈ₹ 6,635₹ 7,238
ಬೆಂಗಳೂರು₹ 6,635₹ 7,238
ಚೆನ್ನೈ₹ 6,695₹ 7,304

ಬೆಳ್ಳಿ ಧಾರಣೆ

ಬೆಳ್ಳಿಯ ಬೆಲೆಯೂ ಯಥಾಸ್ಥಿಯಲ್ಲಿ ಮುಂದುವರಿದಿದೆ. ಬೆಳ್ಳಿ ಒಂದು ಗ್ರಾಂಗೆ ₹ 92.95 ಹಾಗೂ 8 ಗ್ರಾಂಗೆ ₹ 743.60 ಇದೆ. 10 ಗ್ರಾಂಗೆ ₹ 929.50 ಹಾಗೂ 1 ಕಿಲೋಗ್ರಾಂಗೆ ₹ 92,950 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: GST Council meeting : ಹೊಸ ತೆರಿಗೆ ಪ್ರಕಾರ ಯಾವುದು ಅಗ್ಗ ಮತ್ತು ದುಬಾರಿ?

Continue Reading
Advertisement
ಕಿರುತೆರೆ13 mins ago

Shri Devi Mahathme: ಬರ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ”; ವೀಕ್ಷಣೆ ಎಲ್ಲಿ?

Renuka Swamy Murder
ಕರ್ನಾಟಕ21 mins ago

Renuka Swamy Murder: ರೇಣುಕಾಸ್ವಾಮಿ ಕೊಲೆ ಕೇಸ್‌; ಬೆಂಗಳೂರಿನಿಂದ ತುಮಕೂರು ಜೈಲು ಸೇರಿದ ನಾಲ್ವರು ಆರೋಪಿಗಳು

IND vs ENG Semi Final
ಕ್ರೀಡೆ21 mins ago

IND vs ENG Semi Final: ಇಂಡೋ-ಆಂಗ್ಲ ಸೆಮಿಫೈನಲ್​ ಪಂದ್ಯದ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​ ಹೀಗಿದೆ

Lok Sabha Speaker
ದೇಶ24 mins ago

Lok Sabha Speaker: ತುರ್ತು ಪರಿಸ್ಥಿತಿ ಬಗ್ಗೆ ಓಂ ಬಿರ್ಲಾ ಪ್ರಸ್ತಾಪ; ಪ್ರತಿಪಕ್ಷಗಳಿಂದ ಪ್ರತಿಭಟನೆ

actor producer and Cow lover Mahendra Munnoth donated 51 lakh rupees to cow shelter
ಬೆಂಗಳೂರು25 mins ago

Bengaluru News: ಗೋ ಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ಗೋಪ್ರೇಮಿ ಮಹೇಂದ್ರ ಮುನ್ನೋತ್

Bhaavaramayana Ramavatarana book release programme on June 29 in Bengaluru
ಕರ್ನಾಟಕ27 mins ago

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Varthur Santhosh Animal Transport Rules Violation Allegation
ಕ್ರೈಂ31 mins ago

Varthur Santhosh: ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿದ್ದ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

Hijab Ban
ದೇಶ31 mins ago

Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

honey trap harish gowda
ಕ್ರೈಂ37 mins ago

Honey Trap: ಎಂಎಲ್‌ಎ ಹರೀಶ್‌ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್‌ ಸೆರೆ, ಇವರ ಖತರ್‌ನಾಕ್‌ ಐಡಿಯಾ ನೋಡಿ!

Kangana Ranaut Chirag Paswan In Parliament
ಬಾಲಿವುಡ್49 mins ago

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌