Gold price | ಬಂಗಾರದ ದರದಲ್ಲಿ 100 ರೂ. ಏರಿಕೆ, ಬೆಳ್ಳಿ ದರ ಯಥಾಸ್ಥಿತಿ - Vistara News

ಚಿನ್ನದ ದರ

Gold price | ಬಂಗಾರದ ದರದಲ್ಲಿ 100 ರೂ. ಏರಿಕೆ, ಬೆಳ್ಳಿ ದರ ಯಥಾಸ್ಥಿತಿ

ಬಂಗಾರದ ದರದಲ್ಲಿ (Gold price) ಸೋಮವಾರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.

VISTARANEWS.COM


on

gold bond
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ 100 ರೂ. ಏರಿಕೆಯಾಗಿದ್ದು, 24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ಗೆ 52,640 ರೂ.ಗೆ (Gold price) ಹೆಚ್ಚಳವಾಗಿದೆ.

ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರದಲ್ಲಿ 10 ರೂ. ಹೆಚ್ಚಳವಾಗಿದ್ದು, 4೮,೨೬೦ ರೂ.ಗೆ ಹೆಚ್ಚಳವಾಗಿದೆ. ಬೆಳ್ಳಿಯ ದರ ಯಥಾಸ್ಥಿತಿಯಲ್ಲಿದ್ದು, ಕೆ.ಜಿಗೆ 67,500 ರೂ.ಗಳಾಗಿದೆ.

ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ ಕ್ರಮೇಣ ಏರಿಕೆಯ ಹಾದಿಯಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳು ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಚಿನ್ನದ ದರ

Gold Rate Today: ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಇಷ್ಟಿದೆ

Gold Rate Today: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಭಾನುವಾರ ಮತ್ತು ಇಂದು (ಆಗಸ್ಟ್‌ 26) ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಭಾನುವಾರ ಮತ್ತು ಇಂದು (ಆಗಸ್ಟ್‌ 26) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,560 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,950 ಮತ್ತು ₹ 6,69,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,432 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 73,040 ಮತ್ತು ₹ 7,30,400 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,710₹ 7,319
ಮುಂಬೈ₹ ₹ 6,695 ₹ 7,304
ಬೆಂಗಳೂರು₹ 6,695₹ 7,304
ಚೆನ್ನೈ₹ 6,695 ₹ 7,304

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 84.40 ಹಾಗೂ 8 ಗ್ರಾಂಗೆ ₹ 675.20 ಇದೆ. 10 ಗ್ರಾಂ ₹ 844 ಹಾಗೂ 1 ಕಿಲೋಗ್ರಾಂ ₹ 84,400 ಬೆಲೆ ಬಾಳುತ್ತದೆ.

ಚಿನ್ನ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣ ಬೆಲೆಯಲ್ಲಿ ಮೇಕಿಂಗ್‌ ಚಾರ್ಜಸ್‌ (Making Charges) ಪ್ರಧಾನ ಪಾತ್ರ ವಹಿಸುತ್ತದೆ. ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿನ್ನದ ಬೆಲೆಯನ್ನು ಆಧರಿಸಿ ತಯಾರಿಕಾ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ತಯಾರಿಕಾ ಶುಲ್ಕಗಳಲ್ಲಿ ಹಣವನ್ನು ಉಳಿಸಲು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ 8 ಗ್ರಾಂ ಚಿನ್ನದ ಸರದ ಬೆಲೆ 40,000 ರೂ. ಎಂದಿಟ್ಟುಕೊಳ್ಳೋಣ. ಪ್ರತಿ ಗ್ರಾಂಗೆ 300 ರೂ. ಫ್ಲಾಟ್ ದರದಲ್ಲಿ ತಯಾರಿಕಾ ಶುಲ್ಕವು 2,400 ರೂ. ಆಗಿರುತ್ತದೆ. 12%ದಂತೆ ಲೆಕ್ಕ ಹಾಕಿದರೆ ಇದು ಗರಿಷ್ಠ 4,800 ರೂ.ವರೆಗೆ ಹೆಚ್ಚಾಗುತ್ತದೆ.

ಬೆಲೆ ಲೆಕ್ಕ ಹಾಕಿ: ಚಿನ್ನದ ದರ ಅದರ ಶುದ್ಧತೆಯ ಮೇಲೆ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತಿರುತ್ತದೆ. ಜ್ಯುವೆಲ್ಲರಿಗಳು ದಿನಂಪ್ರತಿ ಆಯಾ ದಿನದ ಬೆಲೆ ಪ್ರದರ್ಶಿಸುತ್ತವೆ. ಇದನ್ನು ಗಮನಿಸಿ. ಆಭರಣದ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹೀಗಾಗಿ ಖರೀದಿಗೆ ತೆರಳುವ ಮುನ್ನ ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಬೆಲೆಗಳನ್ನು ಹೋಲಿಸಿ: ಮೊದಲೇ ಹೇಳಿದಂತೆ ಆಭರಣದ ಬೆಲೆಯಲ್ಲಿ ತಯಾರಿಕಾ ವೆಚ್ಚವೂ ಸೇರಿರುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ. ಆದ್ದರಿಂದ ವಿವಿಧ ಹಂತಗಳಲ್ಲಿನ ಶುಲ್ಕಗಳನ್ನು ಹೋಲಿಸಿ ಎನ್ನುವುದು ತಜ್ಞರು ನೀಡುವ ಟಿಪ್ಸ್‌.

ಇದನ್ನೂ ಓದಿ: UPS: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಏಕೀಕೃತ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು

Continue Reading

ಚಿನ್ನದ ದರ

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬಂಗಾರ ಖರೀದಿಯ ಮುನ್ನ ಬೆಲೆ ಚೆಕ್‌ ಮಾಡಿ

Gold Rate Today: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಶನಿವಾರ ಏರಿಕೆಯಾಗಿದ್ದು, ಇಂದು (ಆಗಸ್ಟ್‌ 25) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,560 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,950 ಮತ್ತು ₹ 6,69,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,432 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 73,040 ಮತ್ತು ₹ 7,30,400 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,710₹ 7,319
ಮುಂಬೈ₹ 6,695₹ 7,304
ಬೆಂಗಳೂರು₹ 6,695₹ 7,304
ಚೆನ್ನೈ₹ 6,695₹ 7,304

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಬೆಳ್ಳಿ 1 ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ (BIS) ಹಾಲ್‌ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ ಬಿಐಎಸ್ ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Cash Limit At Home: ಮನೆಯಲ್ಲಿ ಎಷ್ಟು ಹಣ ಇರಿಸಿಕೊಳ್ಳಬಹುದು? ಮಿತಿಗಿಂತ ಹೆಚ್ಚಿದ್ದರೆ ಏನಾಗುತ್ತದೆ?

Continue Reading

ಚಿನ್ನದ ದರ

Gold Rate Today: ಸತತವಾಗಿ ಇಳಿದಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆ; ಬಂಗಾರ ಇಂದು ಇಷ್ಟು ದುಬಾರಿ

Gold Rate Today: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 24) ಮತ್ತೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 39 ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ಸತತವಾಗಿ ಇಳಿಕೆಯಾಗಿದ್ದ ಚಿನ್ನದ ದರ ಇಂದು (ಆಗಸ್ಟ್‌ 24) ಮತ್ತೆ ಏರಿಕೆಯಾಗಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 35 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 39 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,304 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,560 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,950 ಮತ್ತು ₹ 6,69,500 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,432 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 73,040 ಮತ್ತು ₹ 7,30,400 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,695 ₹ 7,304
ಮುಂಬೈ₹ 6,695 ₹ 7,304
ಬೆಂಗಳೂರು₹ 6,695 ₹ 7,304
ಚೆನ್ನೈ₹ 6,695 ₹ 7,304

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.

ಜಾಗತಿಕ ಉದ್ವಿಗ್ನತೆಗಳು: ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

ಚೀನಾದ ಪ್ರಭಾವ: ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

ಹೂಡಿಕೆ ಮಾಡಬಹುದೆ?: ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

    ಇದನ್ನೂ ಓದಿ: Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!

    Continue Reading

    ಚಿನ್ನದ ದರ

    Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

    Gold Rate Today: ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಕಳೆದ ಮೂರು ದಿನಗಳಿಂದ ಇಳಿಕೆ ಕಾಣುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ (ಆಗಸ್ಟ್‌ 23) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 20 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 22 ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,660 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,265 ಇದೆ.

    VISTARANEWS.COM


    on

    Gold Rate Today
    Koo

    ಬೆಂಗಳೂರು: ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಕಳೆದ ಮೂರು ದಿನಗಳಿಂದ ಇಳಿಕೆ ಕಾಣುತ್ತಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ (ಆಗಸ್ಟ್‌ 23) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 20 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 22 ಕಡಿಮೆಯಾಗಿದೆ.

    ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,660 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,265 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,280 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,600 ಮತ್ತು ₹ 6,66,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,120 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 72,650 ಮತ್ತು ₹ 7,26,500 ತಲುಪಿದೆ.

    ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
    ದಿಲ್ಲಿ₹ 6,660 ₹ 7,265
    ಮುಂಬೈ₹ 6,660 ₹ 7,265
    ಬೆಂಗಳೂರು₹ 6,660 ₹ 7,265
    ಚೆನ್ನೈ₹ 6,660 ₹ 7,265

    ಬೆಳ್ಳಿ ಧಾರಣೆ

    ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 82 ಹಾಗೂ 8 ಗ್ರಾಂಗೆ ₹ 656 ಇದೆ. 10 ಗ್ರಾಂ ₹ 820 ಹಾಗೂ 1 ಕಿಲೋಗ್ರಾಂ ₹ 82,000 ಬೆಲೆ ಬಾಳುತ್ತದೆ.

    ಚಿನ್ನದ ಕ್ಯಾರಟ್‌ ಎಂದರೇನು?

    ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”

    24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರೆಟ್ ಚಿನ್ನದಿಂದ ಖರೀದಿಸಲಾಗುತ್ತದೆ.

    24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

    22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

    18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

    ಇದನ್ನೂ ಓದಿ: Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು?

    Continue Reading
    Advertisement
    Gode Bengaluru
    ಬೆಂಗಳೂರು11 ಗಂಟೆಗಳು ago

    Gode Bengaluru : ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ; ʻಗೋಡೆ ಬೆಂಗಳೂರುʼ ಘೋಷಿಸಿದ ಅನ್‌ಬಾಕ್ಸಿಂಗ್‌

    Pralhad Joshi
    ದೇಶ11 ಗಂಟೆಗಳು ago

    Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ

    African boy successfully undergoes surgery for rare aplastic anemia
    ಬೆಂಗಳೂರು12 ಗಂಟೆಗಳು ago

    Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    Self Harming
    ಚಿತ್ರದುರ್ಗ15 ಗಂಟೆಗಳು ago

    Self Harming: ಪ್ರೀತ್ಸೆ ಅಂತ ಪ್ರಾಣ ತಿಂದ ಯುವಕ; ಕಾಲೇಜು ಕಟ್ಟಡದ ಮೇಲಿಂದು ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    Actress Amulyas brother film director Deepak aras passes away
    ಸಿನಿಮಾ17 ಗಂಟೆಗಳು ago

    Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

    Fraud case Union Minister Pralhad Joshis brother duped of ticket for Lok Sabha polls
    ಬೆಂಗಳೂರು17 ಗಂಟೆಗಳು ago

    Fraud Case : ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಕೋಟಿ ರೂ. ಲೂಟಿ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹೋದರನ ವಿರುದ್ಧ ಎಫ್‌ಐಆರ್‌ ದಾಖಲು

    Dina bhavishya
    ಭವಿಷ್ಯ24 ಗಂಟೆಗಳು ago

    Dina Bhavishya : ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಪಿತೂರಿ ಮಾಡುವ ಜನರ ಬಗ್ಗೆ ಇರಲಿ ಎಚ್ಚರ

    Gosavi samaj lathicharged Sri Ram Sene calls for bandh in Lakshmeshwara town on October 19
    ಗದಗ2 ದಿನಗಳು ago

    Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

    A man killed his wife and her lover then committed suicide
    ಬೆಂಗಳೂರು2 ದಿನಗಳು ago

    Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

    Parvati Nair to play dual role in suspense thriller un Paravail Tamil film
    ಸಿನಿಮಾ2 ದಿನಗಳು ago

    Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

    galipata neetu
    ಕಿರುತೆರೆ11 ತಿಂಗಳುಗಳು ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ1 ವರ್ಷ ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Bigg Boss- Saregamapa 20 average TRP
    ಕಿರುತೆರೆ1 ವರ್ಷ ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ12 ತಿಂಗಳುಗಳು ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ10 ತಿಂಗಳುಗಳು ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ11 ತಿಂಗಳುಗಳು ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Action Prince Dhruva Sarja much awaited film Martin to hit the screens on October 11
    ಸಿನಿಮಾ2 ವಾರಗಳು ago

    Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

    Sudeep's birthday location shift
    ಸ್ಯಾಂಡಲ್ ವುಡ್2 ತಿಂಗಳುಗಳು ago

    Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

    Actor Darshan
    ಸ್ಯಾಂಡಲ್ ವುಡ್2 ತಿಂಗಳುಗಳು ago

    Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

    ಮಳೆ2 ತಿಂಗಳುಗಳು ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ2 ತಿಂಗಳುಗಳು ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ2 ತಿಂಗಳುಗಳು ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ2 ತಿಂಗಳುಗಳು ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು2 ತಿಂಗಳುಗಳು ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ2 ತಿಂಗಳುಗಳು ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ3 ತಿಂಗಳುಗಳು ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    ಟ್ರೆಂಡಿಂಗ್‌