Money Guide : ಜಾಸ್ತಿ ದುಡ್ಡು ಉಳಿಸೋದು ಹೇಗೆ, ಲಾಭವೇನು? - Vistara News

ಮನಿ-ಗೈಡ್

Money Guide : ಜಾಸ್ತಿ ದುಡ್ಡು ಉಳಿಸೋದು ಹೇಗೆ, ಲಾಭವೇನು?

ನೀವು ನಿಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಹಣದ ಉಳಿತಾಯ ಮಾಡಬೇಕು. ಆದಾಯದಿಂದ ಉಳಿತಾಯದ ( Money Guide ) ಮೊತ್ತ ಕಳೆದಾಗ ಸಿಗುವುದನ್ನು ಮಾತ್ರ ಖರ್ಚು ಮಾಡಬೇಕು.

VISTARANEWS.COM


on

savings
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾವುದೇ ಹಣಕಾಸು ನಿರ್ವಹಣೆಯ ಮೊದಲ ಪಾಠವೇ ಉಳಿತಾಯ. ಉಳಿತಾಯ ಎನ್ನುವ ಬಿತ್ತನೆಯ ಮೂಲಕ ಸಂಪತ್ತಿನ ಗಿಡವನ್ನು ಬೆಳೆಸಬಹುದು (Money Guide) ಎನ್ನುತ್ತಾರೆ ವಿಸ್ತಾರ ಮನಿಪ್ಲಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್.‌ ಮನಿಪ್ಲಸ್‌ ವಿಡಿಯೊದ ಲಿಂಕ್‌ ಕೆಳಗಿದೆ.

ನಮಗೆ ಸಾಮಾನ್ಯವಾಗಿ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಖರ್ಚು ಕಳೆದು ಬಳಿಕ ಉಂಟಾಗುವುದೇ ಉಳಿತಾಯ ಎನ್ನುವ ಭಾವನೆ ಇದೆ. ಆದರೆ ಆದಾಯ ಮೈನಸ್‌ ಉಳಿತಾಯ = ಖರ್ಚು ಆಗಬೇಕು. ಆದಾಯದ ಪರಿಕಲ್ಪನೆ ಬದಲಾಗಬೇಕು. ಅಂದ್ರೆ ಬಂದ ಸಂಬಳದಲ್ಲಿ ಮೊದಲು ಉಳಿತಾಯದ ಹಣವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದನ್ನು ಕಳೆದ ಬಳಿಕ ಉಳಿಯುವ ಹಣವನ್ನು ಖರ್ಚಿಗೆ ಬಳಸಬೇಕು. ಆದಾಯದಲ್ಲಿ ಮೊದಲು ಉಳಿತಾಯವನ್ನು ಕಳೆಯಬೇಕು.

ಹೂಡಿಕೆ ಮಾಡಲು ಹಣ ಬೇಕು, ಅದಕ್ಕಾಗಿ ಹಣವನ್ನು ಉಳಿಸಲೇ ಬೇಕು. ನಮ್ಮ ಅಜ್ಜಿ, ತಾತ ಮೊದಲಾದ ಹಿರಿಯರು ಸಾಸಿವೆ ಡಬ್ಬಿಯಲ್ಲಿ ಅಥವಾ ಮನೆಯ ದೇವರ ಹುಂಡಿಯಲ್ಲೋ ಹಣ ಉಳಿಸುತ್ತಿದ್ದರು. ಕಷ್ಟಕಾಲಕ್ಕೆ ಈ ಆಪದ್ಧನ ನೆರವಾಗುತ್ತಿತ್ತು. ಇವತ್ತು ನಮ್ಮ ಹಣವನ್ನು ಡಬ್ಬದಲ್ಲಿ ಇಡಬಾರದು, ಬೆಳೆಸುವ ಕೆಲಸವನ್ನು ಮಾಡಬೇಕು.

ತುರ್ತು ಅಗತ್ಯಗಳಿಗೆ ಬೇಕಾದ ಹಣವನ್ನು ಇಟ್ಟು ಉಳಿದ ಉಳಿತಾಯದ ಹಣವನ್ನು ಬೇರೆ ಬೇರೆ ಹಣಕಾಸು ಸಾಧನಗಳಲ್ಲಿ ಇನ್ವೆಸ್ಟ್‌ ಮಾಡಬಹದು. ಉಳಿತಾಯ ಮತ್ತು ಹೂಡಿಕೆಯು ಶ್ರೀಮಂತಿಕೆಯಾಗುತ್ತದೆ. ಖರ್ಚನ್ನು ಮೈನಸ್‌ ಮಾಡಿದರೂ ಉಳಿತಾಯವಾಗುತ್ತದೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳು, ಪಿಪಿಎಫ್‌, ಎನ್‌ಪಿಎಸ್‌, ಬ್ಯಾಂಕ್‌ ಎಫ್‌ ಡಿ, ಮ್ಯೂಚುವಲ್‌ ಫಂಡ್‌ ಎಸ್‌ಐಪಿ, ಇಟಿಎಫ್‌, ಸ್ಟಾಕ್ಸ್‌ ಹೀಗೆ ಬೇರೆ ಬೇರೆ ಸಾಧನಗಳಲ್ಲಿ ಇನ್ವೆಸ್ಟ್‌ ಮಾಡಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ನಿಧಿಯನ್ನು ಪಡೆಯಲು ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಇಂಟರ್‌ಚೇಂಜ್ ಶುಲ್ಕವನ್ನು (ATM Cash Withdrawal Fee) ಪ್ರತಿ ವಹಿವಾಟಿಗೆ ಗರಿಷ್ಠ 23 ರೂ. ಹೆಚ್ಚಿಸಲು ಒತ್ತಾಯಿಸಿದೆ. ಇವರ ಬೇಡಿಕೆ ಏನು ಇತ್ಯಾದಿ ವಿವರ ಇಲ್ಲಿದೆ.

VISTARANEWS.COM


on

By

ATM Cash Withdrawal Fee
Koo

ಎಟಿಎಂನಲ್ಲಿ (ATM) ಇನ್ನು ಮುಂದೆ ಹಣ ಪಡೆಯುವ (Cash Withdrawal) ಮುನ್ನ ಯೋಚಿಸಿ. ಯಾಕೆಂದರೆ ಈಗಾಗಲೇ ಬ್ಯಾಂಕ್‌ಗಳು ವಿಧಿಸುತ್ತಿರುವ ಎಟಿಎಂ ಸೇವಾ ಶುಲ್ಕ (ATM Cash Withdrawal Fee) ಇನ್ನೂ ಹೆಚ್ಚಾಗಬಹುದು. ಎಟಿಎಂ ಆಪರೇಟರ್‌ಗಳು ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸುತ್ತಿದ್ದು, ಈಗಾಗಲೇ ಇವರು ತಮ್ಮ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (NPCI) ಸಲ್ಲಿಸಿದ್ದಾರೆ.

ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ನಿಧಿಯನ್ನು ಪಡೆಯಲು ಎಟಿಎಂ ಆಪರೇಟರ್‌ಗಳು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಇಂಟರ್‌ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ ಗರಿಷ್ಠ 23 ರೂ. ಹೆಚ್ಚಿಸಲು ಒತ್ತಾಯಿಸಿದೆ. ಎರಡು ವರ್ಷಗಳ ಹಿಂದೆ ಈ ವಿನಿಮಯ ದರವನ್ನು ಕೊನೆಯದಾಗಿ ಹೆಚ್ಚಿಸಲಾಗಿತ್ತು ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಟಾನ್ಲಿ ಜಾನ್ಸನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಕುರಿತು ಭಾರತೀಯ ರಿಸರ್ವ್ ಅನ್ನು ಸಂಪರ್ಕಿಸಲಾಗುತ್ತಿದೆ. ಅವರು ನಮ್ಮ ವಿನಂತಿಯನ್ನು ಬೆಂಬಲಿಸುವಂತೆ ತೋರುತ್ತಿದೆ. ಸಿಎಟಿಎಂಐ ಶುಲ್ಕವನ್ನು 21 ರೂ. ಗೆ ಏರಿಸಲು ಪ್ರಸ್ತಾಪಿಸಿದೆ. ಆದರೆ ಕೆಲವು ಎಟಿಎಂ ತಯಾರಕರು 23 ರೂ. ಗೆ ಹೆಚ್ಚಿಸುವಂತೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.


ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಕೊನೆಯದಾಗಿ 2021ರಲ್ಲಿ 15 ರಿಂದ 17ಕ್ಕೆ ಹೆಚ್ಚಿಸಲಾಗಿತ್ತು. ಹಿಂದಿನ ಬಾರಿ ಈ ಶುಲ್ಕ ಹೆಚ್ಚಳಕ್ಕೆ ಹಲವಾರು ವರ್ಷಗಳನ್ನು ತೆಗೆದುಕೊಂಡಿತು. ಆದರೆ ಈಗ ಎಲ್ಲರೂ ಇದಕ್ಕೆ ಹೊಂದಿಕೊಂಡಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಇನ್ನು ಅನುಮೋದನೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿಗಬಹುದು ಎಂದು ಜಾನ್ಸನ್ ತಿಳಿಸಿದ್ದಾರೆ.

ಇದನ್ನೂ ಓದಿ: Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

ಇಂಟರ್‌ಚೇಂಜ್ ಶುಲ್ಕ ಎಂದರೇನು?

ಎಟಿಎಂ ಇಂಟರ್ ಚೇಂಚ್ ಶುಲ್ಕವು ಎಟಿಎಂ ಕಾರ್ಡ್ ಅನ್ನು ವಿತರಿಸುವ ಬ್ಯಾಂಕ್ (ವಿತರಕರು) ಪಾವತಿಸುವ ಶುಲ್ಕವಾಗಿದೆ. ಎಟಿಎಂ ಕಾರ್ಡ್ ಅನ್ನು ನಗದು ಹಿಂಪಡೆಯಲು ಬಳಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಗ್ರಾಹಕರಿಗೆ ವಿಧಿಸಬಹುದಾದ ಶುಲ್ಕವಾಗಿದೆ. ಪ್ರಸ್ತುತ ಆರು ಪ್ರಮುಖ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬಯಿ ಮತ್ತು ನವದೆಹಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆದಾರರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ಹಾಗೂ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟು ಸೌಲಭ್ಯವನ್ನು ಒದಗಿಸುತ್ತದೆ. ಬಳಿಕ ನಡೆಯುವ ಪ್ರತಿ ವಹಿವಾಟಿಗೆ ಶುಲ್ಕ ವಿಧಿಸಲಾಗುತ್ತದೆ.

Continue Reading

ಮನಿ-ಗೈಡ್

Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

Money Guide: ಭವಿಷ್ಯದ ಉಳಿತಾಯ ಯೋಜನೆಗಳಲ್ಲಿ ನೌಕರರ ಭವಿಷ್ಯ ನಿಧಿ ಪ್ರಮುಖವಾದುದು. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಜತೆಗೆ ತುರ್ತು ಅಗತ್ಯದ ಸಂದರ್ಭದಲ್ಲಿ ಒಂದಷ್ಟು ಮೊತ್ತ ಮರಳಿ ಪಡೆಯುವ ಸೌಲಭ್ಯವೂ ಇದೆ. ಈ ಅಕೌಂಟ್‌ಗೆ ನೀವು ಮೊಬೈಲ್‌ ನಂಬರ್‌ ನಮೂದಿಸಬೇಕಾಗುತ್ತದೆ. ಒಂದುವೇಳೆ ನೀವು ಆರಂಭದಲ್ಲಿ ನೀಡಿದ ನಂಬರ್‌ ಅನ್ನು ಬದಲಾಯಿಸಬೇಕೆಂದಿದ್ದರೆ ಅದಕ್ಕೂ ಅವಕಾಶ ಇದೆ. ಸುಲಭವಾಗಿ, ಮನೆಯಲ್ಲೇ ಕುಳಿತು ಮೊಬೈಲ್‌ ನಂಬರ್‌ ಬದಲಾಯಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ನೌಕರರ ಭವಿಷ್ಯ ನಿಧಿ (Employees’ Provident Fund) ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಎಂಪ್ಲಾಯ್‌ ಪ್ರೊವಿಡೆಂಟ್‌ ಫಂಡ್‌ ಆರ್ಗನೈಸೇಷನ್‌ (EPFO) ಇದನ್ನು ನಿಯಂತ್ರಿಸುತ್ತದೆ. ನೀವು ಒಮ್ಮೆ ಇಪಿಎಫ್‌ ಯೋಜನೆಯಲ್ಲಿ ಹೆಸರು ನೋಂದಾಯಿಸಿದರೆ ಯೂನಿವರ್ಸಲ್‌ ಅಕೌಂಟ್‌ ನಂಬರ್‌ (UAN) ನೀಡಲಾಗುತ್ತದೆ. ಇಇಪಿಎಫ್‌ ಯೋಜನೆ ಆರಂಭಿಸುವಾಗ ನೀವು ಮೊಬೈಲ್‌ ನಂಬರ್‌ ನೀಡಬೇಕಾಗುತ್ತದೆ. ಬಳಿಕ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಮೊತ್ತ ಕಡಿತವಾದಾಗ ಈ ಬಗ್ಗೆ ಮಸೇಜ್‌ ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ಒಂದುವೇಳೆ ನಿಮ್ಮ ಮೊಬೈಲ್‌ ನಂಬರ್‌ ಬದಲಾಗಿದ್ದರೆ ಅದನ್ನು ಅಪ್‌ಡೇಟ್‌ ಮಾಡುವುದು ಮುಖ್ಯ. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ (Money Guide).

ಮೊಬೈಲ್‌ ನಂಬರ್‌ ಯಾಕೆ ಮುಖ್ಯ?

ನಿಮ್ಮ ಕೊಡುಗೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮಾತ್ರವಲ್ಲ ಬ್ಯಾಲನ್ಸ್‌ ಚೆಕ್‌ ಮಾಡಲು ಕೂಡ ಮೊಬೈಲ್‌ ನಂಬರ್‌ ಮುಖ್ಯ. ಜತೆಗೆ ಪಿಎಫ್‌ ವೆಬ್‌ಸೈಟ್ ಅಥವಾ ಉಮಂಗ್ ಆ್ಯಪ್ ಮೂಲಕ ಯಾವುದೇ ಮಾಹಿತಿಯನ್ನು ಪಡೆಯಲು, ನಿಮ್ಮ ಖಾತೆಯಲ್ಲಿನ ವಿವರ ತಿಳಿದುಕೊಳ್ಳಲು ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಸಕ್ರಿಯವಾಗಿರುವುದು ಬಹಳ ಮುಖ್ಯ. ಯಾಕೆಂದರೆ ಇದಕ್ಕೆ ಬರುವ ಒಟಿಪಿಯನ್ನು ಆರಂಭದಲ್ಲಿ ನಮೂದಿಸಬೇಕಾಗುತ್ತದೆ.

ಮೊಬೈಲ್‌ ನಂಬರ್‌ ಯಾವೆಲ್ಲ ಪ್ರಯೋಜನ ಲಭ್ಯ?

ನಿಮ್ಮ ಮೊಬೈಲ್‌ ನಂಬರ್‌ ಬಳಸಿ ಇಪಿಎಫ್‌ನ ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಬಹುದು.

  • ಯುಎಎನ್‌ (UAN)ನ ಸ್ಥಿತಿಯ ಪರಿಶೀಲನೆ (ಸಕ್ರಿಯ ಅಥವಾ ನಿಷ್ಕ್ರೀಯ).
  • ಇಪಿಎಫ್‌ನ ಸಂಪೂರ್ಣ ಮಾಹಿತಿ.
  • ಎಸ್‌ಎಂಎಸ್‌ ಮೂಲಕ ಬ್ಯಾಲನ್ಸ್‌ ಪರಿಶೀಲನೆ.
  • ಕ್ಲೈಮ್‌ ಮಾಡಿದ್ದರೆ ಅದರ ಮಾಹಿತಿ.
  • ನಿಮ್ಮ ಖಾತೆಗೆ ಜಮೆ ಆಗುತ್ತಿರುವ ಮೊತ್ತದ ಮಾಹಿತಿ.
  • ಹಣ ವರ್ಗಾವಣೆಯಾಗುತ್ತಿದ್ದರೆ ಅದರ ಮಾಹಿತಿ.
  • ಬ್ಯಾಂಕ್‌ ಅಕೌಂಟ್‌, ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆಯಾ ಎನ್ನುವುದರ ಪರಿಶೀಲನೆ.
  • ವಿವಿಧ ಆನ್‌ಲೈನ್‌ ಸೇವೆಗಳ ಒಟಿಪಿ ಪಡೆದುಕೊಳ್ಳಲು.

ಮೊಬೈಲ್‌ ನಂಬರ್‌ ಬದಲಾಯಿಸುವುದು ಹೇಗೆ?

ಒಂದುವೇಳೆ ನೀವು ಆರಂಭದಲ್ಲಿ ನೀಡಿದ್ದ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸಬೇಕು ಎಂದು ಬಯಸಿದರೆ ಸುಲಭವಾಗಿ, ಆನ್‌ಲೈನ್‌ನಲ್ಲೇ ಈ ಕೆಲಸ ಮಾಡಬಹುದು. ಅದು ಹೇಗೆ ಎನ್ನುವ ಹಂತ ಹಂತದ ಮಾಹಿತಿ ಇಲ್ಲಿದೆ.

  • ಮೊದಲು https://unifiedportal-mem.epfindia.gov.in/memberinterface/ ವೆಬ್‌ಸೈಟ್‌ಗೆ ತೆರಳಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • UAN ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ
  • ‘Manage’ ಆಯ್ಕೆಯಲ್ಲಿನ ‘Contact Details’ ಆಪ್ಶನ್‌ ಕ್ಲಿಕ್‌ ಮಾಡಿ.
  • ‘Change Mobile No.’ ಆಯ್ಕೆ ಸೆಲೆಕ್ಟ್‌ ಮಾಡಿ.
  • ಎರಡು ಬಾರಿ ಹೊಸ ಮೊಬೈಲ್‌ ನಂಬರ್‌ ನಮೂದಿಸಿ. ಬಳಿಕ ‘Get Mobile OTP’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿಯನ್ನು ನಮೂದಿಸಿ.
  • ಬಳಿಕ ನಿಮ್ಮ ಮೊಬೈಲ್‌ ನಂಬರ್‌ ಯಶಸ್ವಿಯಾಗಿ ಬದಲಾಗುತ್ತದೆ.

ಪಾಸ್‌ವರ್ಡ್‌ ಮರೆತು ಹೋಗಿದ್ದರೆ ಹೀಗೆ ಮಾಡಿ

ಒಂದು ವೇಳೆ ಪಾಸ್‌ವರ್ಡ್‌ ಮರೆತು ಹೋಗಿದ್ದರೆ ಮೊಬೈಲ್‌ ನಂಬರ್‌ ಬದಲಾಯಿಸಲು ಹೀಗೆ ಮಾಡಿ.

  • ಮೊದಲು https://unifiedportal-mem.epfindia.gov.in/memberinterface/ ವೆಬ್‌ಸೈಟ್‌ಗೆ ತೆರಳಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • ಬಲ ಬದಿಯಲ್ಲಿ ಕಾಣಿಸುವ, ಲಾಗಿನ್‌ ಬಾಕ್ಸ್‌ನ ಕೆಳಗಡೆ ಇರುವ ʼForgot Passwordʼ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • UAN, ಕ್ಯಾಪ್ಚಾ ನಮೂದಿಸಿ ʼSubmitʼ ಬಟನ್‌ ಕ್ಲಿಕ್‌ ಮಾಡಿ.
  • ಹೆಸರು, ಹುಟ್ಟಿದ ದಿನಾಂಕ, ಲಿಂಗದ ವಿವರಗಳನ್ನು ಭರ್ತಿ ಮಾಡಿ ʼVerifyʼ ಬಟನ್‌ ಸೆಲೆಕ್ಟ್‌ ಮಾಡಿ.
  • ಮತ್ತೊಮ್ಮೆ ಕ್ಯಾಪ್ಚಾ, ಆಧಾರ್‌ ನಂಬರ್‌ ನಮೂದಿಸಿ ʼVerifyʼ ಆಯ್ಕೆ ಕ್ಲಿಕ್‌ ಮಾಡಿ.
  • ಆಧಾರ್‌ಗೆ ಲಿಂಕ್‌ ಆಗಿರುವ, ಹೊಸ ಮೊಬೈಲ್‌ ನಂಬರ್‌ ನಮೂದಿಸಿ, ಬಳಿಕ ‘Get OTP’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿ ನಮೂದಿಸಿ, ‘Verify’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಪಾಸ್‌ವರ್ಡ್‌ ಎರಡು ಬಾರಿ ನಮೂದಿಸಿ ‘Submit’ ಆಯ್ಕೆ ಕ್ಲಿಕ್‌ ಮಾಡಿ.
  • ಈಗ ಪಾಸ್‌ವರ್ಡ್‌ ಮತ್ತು ಮೊಬೈಲ್‌ ನಂಬರ್‌ ಬದಲಾಗಿರುತ್ತದೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

Continue Reading

ಮನಿ-ಗೈಡ್

EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಕ್ಲೈಮ್ ಸೆಟ್ಲ್ ಮೆಂಟ್ ನಲ್ಲಿ ವಿಳಂಬವನ್ನು ತಡೆಯಲು 2024ರ ಮೇ ತಿಂಗಳಿನಿಂದ ಹಲವಾರು ಬದಲಾವಣೆಗಳನ್ನು (EPF Account Rules) ಮಾಡಿದೆ. ಈ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವ ಸದಸ್ಯರ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.

VISTARANEWS.COM


on

By

EPF Account Rules
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಲವು ಬದಲಾವಣೆಗಳನ್ನು (EPF Account Rules) ಮಾಡಿದೆ. ಕ್ಲೈಮ್ ಸೆಟ್ಲಮೆಂಟ್ (claim settlement) ಮಾಡುವಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ಮಾಡುವ ಮೂಲಕ ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವ ಸದಸ್ಯರಿಗೆ ಹೊರೆಯನ್ನು ಕಡಿಮೆ ಮಾಡಲು ಈ ಬದಲಾವಣೆಗಳನ್ನು ಮಾಡಲಾಗಿದೆ.

ಇದರಲ್ಲಿ ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯದ ವಿಸ್ತರಣೆ, ಬಹು-ಸ್ಥಳದ ಕ್ಲೈಮ್ ಸೆಟಲ್‌ಮೆಂಟ್‌, ಸಾವಿನ ಹಕ್ಕುಗಳ ತ್ವರಿತ ಪ್ರಕ್ರಿಯೆ ಮತ್ತು ಕೆಲವು ಆನ್‌ಲೈನ್ ಕ್ಲೈಮ್‌ಗಳಿಗೆ ಕಡ್ಡಾಯವಾದ ಡಾಕ್ಯುಮೆಂಟ್ ಅಪ್‌ಲೋಡ್‌ ಮಾಡುವಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ.

ಸ್ವಯಂ ಸೆಟಲ್ ಮೆಂಟ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಘೋಷಿಸಿದ ಅತ್ಯಂತ ಮಹತ್ವದ ಬದಲಾವಣೆಯೆಂದರೆ ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯದ ವಿಸ್ತರಣೆ. ಇದು 68ಬಿ ಮತ್ತು 68ಕೆ ನಿಯಮಗಳ ಅಡಿಯಲ್ಲಿ ವಸತಿ, ಶಿಕ್ಷಣ ಮತ್ತು ವಿವಾಹದ ಹಕ್ಕುಗಳನ್ನು ಒಳಗೊಂಡಿದೆ. ಈ ಈ ಕುರಿತು 2024ರ ಮೇ 13ರಂದು ಪ್ರಕಟಣೆ ಹೊರಡಿಸಲಾಗಿದೆ. ಇದು ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುವ ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ನಿಯಮ 68ಜೆ ಅಡಿಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆಯೇ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ಸದಸ್ಯರು 1 ಲಕ್ಷ ರೂ. ವರೆಗೆ ಮುಂಗಡ ಹಣವನ್ನು ಇಪಿಎಫ್ ಖಾತೆಯಿಂದ ಪಡೆಯಬಹುದು. 2024ರ ಏಪ್ರಿಲ್ 16ರ ಸುತ್ತೋಲೆಯಲ್ಲಿ ನವೀಕರಿಸಲಾದ ಈ ನಿಯಮವು ಸ್ವಯಂ-ಸೆಟಲ್‌ಮೆಂಟ್ ನ ಅಡಿಯಲ್ಲಿ ಈ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ಖಚಿತಪಡಿಸುತ್ತದೆ.

ನಿಯಮ 68ಕೆ ಅಡಿಯಲ್ಲಿ ಮದುವೆ ಅಥವಾ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಇಪಿಎಫ್ ನಿಧಿಯಿಂದ ಹಣ ಹಿಂಪಡೆಯಲು ಅನುಮತಿ ನೀಡಲಾಗಿದೆ. ಈ ನಿಯಮವು ಸದಸ್ಯರು ತಮ್ಮ ಮಕ್ಕಳು ಅಥವಾ ಅವರ ಒಡಹುಟ್ಟಿದವರ ಮದುವೆಗೆ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಹಾಗೆಯೇ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ.ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯವನ್ನು ವಿಸ್ತರಿಸುವ ಮೂಲಕ ಸದಸ್ಯರಿಗೆ ಹೆಚ್ಚು ಅಗತ್ಯವಿರುವಾಗ ಹಣವನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ.


ಬಹು ಸ್ಥಳದ ಕ್ಲೈಮ್ ಸೆಟಲ್ ಮೆಂಟ್

ಇಪಿಎಫ್‌ಒ ಬಹು-ಸ್ಥಳದ ಕ್ಲೈಮ್ ಸೆಟಲ್ ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ. 2020ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಈ ಉಪಕ್ರಮವು ದೇಶದಾದ್ಯಂತ ಕೆಲಸದ ಹೊರೆಯನ್ನು ಹೆಚ್ಚು ಸಮವಾಗಿ ವಿತರಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಕ್ಲೈಮ್ ಪಾವತಿ ವಿಳಂಬವನ್ನು ಕಡಿಮೆ ಮಾಡಿ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

2024ರ ಮೇ 8ರ ಸುತ್ತೋಲೆಯ ಪ್ರಕಾರ ಇಪಿಎಫ್‌ಒ ಬಹು-ಸ್ಥಳದ ಕ್ಲೈಮ್ ಇತ್ಯರ್ಥಕ್ಕಾಗಿ ಲಿಂಕ್ ಆಫೀಸ್ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ಮೂಲಕ ಇರುವ ಸ್ಥಳದಲ್ಲೇ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳನ್ನು ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತದೆ. ಇದರಿಂದ ಸದಸ್ಯರ ಕ್ಲೈಮ್ ಸೆಟ್ಲಮೆಂಟ್ ಪ್ರಕ್ರಿಯೆಯು ಹೆಚ್ಚು ವೇಗವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನಿಯೋಜಿತ ಪ್ರಾದೇಶಿಕ ಕಚೇರಿ (DRO) ಮತ್ತು ಸಹಯೋಗದ ಪ್ರಾದೇಶಿಕ ಕಚೇರಿ (CRO) ನಡುವಿನ ಸಂಪರ್ಕ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಈ ಎರಡೂ ಕಚೇರಿಗಳ ಉಸ್ತುವಾರಿಯನ್ನು ಆರ್ ಪಿಎಫ್ ಸಿ ಗೆ ವಹಿಸಲಾಗಿದೆ.ಇದರಿಂದ ಯಾವುದೇ ಸಮಸ್ಯೆಗಳಿಲ್ಲದೆ ಕ್ಲೈಮ್ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದು ಸುತ್ತೋಲೆ ಹೇಳಿದೆ.

ಡೆತ್ ಕ್ಲೈಮ್‌ಗಳಿಗೆ ಹೊಸ ನಿಯಮ

ಸಾವಿನ ಹಕ್ಕುಗಳ ಪ್ರಕ್ರಿಯೆಗೆ ಇಪಿಎಫ್ ಒ ​​ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. 2024ರ ಮೇ 17ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ಸಾವಿನ ಪ್ರಕರಣಗಳಲ್ಲಿನ ಕ್ಲೈಮ್‌ಗಳನ್ನು ಆಧಾರ್ ದೃಢೀಕರಣದ ಅಗತ್ಯವಿಲ್ಲದೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ ಇದಕ್ಕಾಗಿ ಪ್ರಭಾರ ಅಧಿಕಾರಿ (ಒಐಸಿ) ಯಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ.

ಯೂನಿವರ್ಸಲ್ ಅಕೌಂಟ್ ನಂಬರ್ (UAN) ನಲ್ಲಿ ಸದಸ್ಯರ ವಿವರಗಳು ಸರಿಯಾಗಿದ್ದರೂ ಆಧಾರ್ ಡೇಟಾಬೇಸ್‌ನಲ್ಲಿ ನಿಖರವಾಗಿಲ್ಲದ ಅಥವಾ ಅಪೂರ್ಣವಾಗಿರುವ ಪ್ರಕರಣಗಳಿಗೆ ಮಾತ್ರ ಈ ಸೂಚನೆಗಳು ಅನ್ವಯಿಸುತ್ತವೆ. ಈ ಕ್ರಮವು ವಂಚನೆಯ ಹಿಂಪಡೆಯುವಿಕೆಗಳನ್ನು ತಡೆಯುತ್ತದೆ ಮತ್ತು ನಿಜವಾದ ಹಕ್ಕುಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತದೆ ಎಂದು ಖಚಿತಪಡಿಸುತ್ತದೆ.


ಕಡ್ಡಾಯ ಚೆಕ್ ಲೀಫ್

ಕೆಲವು ಅರ್ಹ ಪ್ರಕರಣಗಳಿಗೆ ಚೆಕ್ ಲೀಫ್ ಅಥವಾ ದೃಢೀಕೃತ ಬ್ಯಾಂಕ್ ಪಾಸ್‌ಬುಕ್‌ನಚಿತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡುವ ಅಗತ್ಯವನ್ನು ಇಪಿಎಫ್‌ಒ ​​ಸಡಿಲಗೊಳಿಸಿದೆ.

ಇದನ್ನೂ ಓದಿ: UPI Safety Tips: ಈ ಟಿಪ್ಸ್ ಪಾಲಿಸಿ, ಮೊಬೈಲ್ ನಿಂದ ಹಣ ಪಾವತಿಸುವಾಗ ಆಗುವ ವಂಚನೆಯಿಂದ ಪಾರಾಗಿ

2024ರ ಮೇ 28ರ ಸುತ್ತೋಲೆಯಲ್ಲಿ ಘೋಷಿಸಲಾದ ಈ ಬದಲಾವಣೆಯು ಆನ್‌ಲೈನ್ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಈ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡದ ಕಾರಣ ತಿರಸ್ಕರಿಸಿದ ಕ್ಲೈಮ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

ಡಾಕ್ಯುಮೆಂಟ್ ಅಪ್‌ಲೋಡ್‌ಗಳ ಅಗತ್ಯವಿಲ್ಲದೇ ಕ್ಲೈಮ್‌ಗಳ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಇಪಿಎಫ್ ಒ ​​ಹಲವಾರು ಮೌಲ್ಯೀಕರಣಗಳನ್ನು ಪರಿಚಯಿಸಿದೆ. ಈ ದೃಢೀಕರಣಗಳಲ್ಲಿ ಸಂಬಂಧಪಟ್ಟ ಬ್ಯಾಂಕ್ ಅಥವಾ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೂಲಕ ಬ್ಯಾಂಕ್ KYC ಯ ಆನ್‌ಲೈನ್ ಪರಿಶೀಲನೆ, ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಅನ್ನು ಬಳಸಿಕೊಂಡು ಉದ್ಯೋಗದಾತರಿಂದ ಬ್ಯಾಂಕ್ KYC ಯ ಪರಿಶೀಲನೆ ಮತ್ತು ನೋಂದಣಿ ಮಾಡಿರುವ ಆಧಾರ್ ಸಂಖ್ಯೆಯನ್ನು ಪರಿಶೀಲಿಸುವುದು ಸೇರಿದೆ.

Continue Reading

ಮನಿ ಗೈಡ್

Money Guide: ಹೆಚ್ಚಿನ ಬಡ್ಡಿ ಮಾತ್ರವಲ್ಲ, ಪಿಪಿಎಫ್ ನಿಂದ ಇನ್ನೂ ಏನೇನು ಪ್ರಯೋಜನ?

ಮ್ಯೂಚುವಲ್ ಫಂಡ್‌, ಬ್ಯಾಂಕ್ ಸ್ಥಿರ ಠೇವಣಿ, ಹಣಕಾಸು ಸಂಸ್ಥೆಗಳು ಹೊರತರುವ ವಿವಿಧ ಯೋಜನೆಗಳ ಮೂಲಕ ನೇರ ಹೂಡಿಕೆ (Money Guide) ಉತ್ತಮವಾಗಿದ್ದರೂ ಪಿಪಿಎಫ್ ತನ್ನದೇ ಆದ ಹಲವಾರು ಕಾರಣಗಳಿಂದ ಅತ್ಯುತ್ತಮ ಆಯ್ಕೆಯಾಗಿದೆ ಅದು ಯಾಕೆ ಗೊತ್ತೇ? ಇಲ್ಲಿದೆ ಅದಕ್ಕೆ ಕಾರಣ.

VISTARANEWS.COM


on

By

Money Guide
Koo

ಹೂಡಿಕೆ (investment) ಮಾಡುವಾಗ ಹೆಚ್ಚಿನ ಲಾಭ (Money Guide) ಪಡೆಯುವ ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಹೀಗಾಗಿ ಹೆಚ್ಚಿನವರು ಆಯ್ಕೆ ಮಾಡುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund). ಇದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವಂತೂ ಇದ್ದೇ ಇದೆ. ಯಾಕೆಂದರೆ ಇದು ಶೇ. 7.1 ರಷ್ಟು ಬಡ್ಡಿ ದರವನ್ನು (interest rate) ಹೊಂದಿದೆ. ಹೀಗಾಗಿ ಹೂಡಿಕೆ ಮೇಲೆ ನಿರ್ಧಿಷ್ಟ ಮೊತ್ತ ಮರಳಿ ಕೈ ಸೇರುವ ಖಚಿತತೆ ಇರುತ್ತದೆ.

ಆದರೂ ಕೆಲವರು ಪಿಪಿಎಫ್ (PPF) ಮೇಲೆ ಹೂಡಿಕೆ ಮಾಡಲು ಆಸಕ್ತಿ ವಹಿಸುವುದಿಲ್ಲ. ಬದಲಿಗೆ ಅವರು ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌, ಬ್ಯಾಂಕ್ ಸ್ಥಿರ ಠೇವಣಿ ಅಥವಾ ಹಣಕಾಸು ಸಂಸ್ಥೆಗಳು ಹೊರತಂದಿರುವ ವಿವಿಧ ಯೋಜನೆಗಳ ಮೂಲಕ ನೇರ ಹೂಡಿಕೆಯತ್ತ ಗಮನ ಹರಿಸುತ್ತಾರೆ. ಈ ಯೋಜನೆಗಳು ಉತ್ತಮವಾಗಿದ್ದರೂ ಪಿಪಿಎಫ್ ತನ್ನದೇ ಆದ ಹಲವಾರು ಕಾರಣಗಳಿಂದ ಅತ್ಯುತ್ತಮ ಆಯ್ಕೆ ಎಂಬುದನ್ನು ಖಚಿತಪಡಿಸುತ್ತದೆ. ಅವು ಯಾವುದು ಗೊತ್ತೇ?

ಪಿಪಿಎಫ್ ಸುರಕ್ಷಿತ

ಪಿಪಿಎಫ್ ಅನ್ನು 1968ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿತು. ಇದರರ್ಥ ಪಿಪಿಎಫ್ ಖಾತೆಯ ಮಾಲೀಕರ ಹಣ ಮತ್ತು ಆದಾಯವನ್ನು ಸರ್ಕಾರವು ಖಾತರಿಪಡಿಸುತ್ತದೆ.

ಪಿಪಿಎಫ್ ಬಡ್ಡಿ ದರ

ಪಿಪಿಎಫ್ ಬಡ್ಡಿದರವು ಮೊದಲಿನಷ್ಟು ಹೆಚ್ಚಿಲ್ಲದಿರಬಹುದು. ಆದರೆ ಈಗ ಶೇ. 7.1ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಹಣಕಾಸು ಸಚಿವಾಲಯವು ಈ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ.

ಪಿಪಿಎಫ್ ಅವಧಿ

ಪಿಪಿಎಫ್ ಅವಧಿಯು 15 ವರ್ಷಗಳು. ಈ ವರ್ಷಗಳಲ್ಲಿ ಹೂಡಿಕೆ ಮಾಡುವ ಸಂಪೂರ್ಣ ಮೊತ್ತವು ಲಾಕ್ ಆಗಿರುತ್ತದೆ. ಲಾಕ್-ಇನ್ ಅವಧಿಯು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೂ ಪಿಪಿಎಫ್ ಖಾತೆದಾರರು ಇದನ್ನು ಶಿಸ್ತಿನಿಂದ ನಿರ್ವಹಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಈ ಅವಧಿಯ ಕೊನೆಯಲ್ಲಿ ದೊಡ್ಡ ಮೊತ್ತದ ಪಾವತಿಯ ರೂಪದಲ್ಲಿ ಅದರಿಂದ ಅವರು ಪ್ರಯೋಜನವನ್ನು ಪಡೆಯುತ್ತಾರೆ.

ಪಿಪಿಎಫ್ ವಿಸ್ತರಣೆ

ಪಿಪಿಎಫ್ ಆರಂಭದಲ್ಲಿ 15 ವರ್ಷಗಳವರೆಗೆ ಲಭ್ಯವಿದ್ದರೆ ಖಾತೆದಾರರು ಅದನ್ನು ಐದು ವರ್ಷಗಳ ಬ್ಯಾಚ್‌ನಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು.


ಪಿಪಿಎಫ್ ತೆರಿಗೆ ಉಳಿತಾಯ

ಪಿಪಿಎಫ್ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿಸುವ ಸಾಧನವಾಗಿದೆ. ಅಂದರೆ ಈ ಉಪಕರಣದ ಮೂಲಕ ಉಳಿಸಿದ ಹಣಕ್ಕೆ ಯಾವುದೇ ಸಮಯದಲ್ಲಿ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ, ಇದು ಬ್ಯಾಂಕ್ ಎಫ್‌ಡಿಗಳು ಮತ್ತು ಇತರ ಹಲವು ಆಧುನಿಕ, ಹೂಡಿಕೆ ಮಾರ್ಗಗಳಿಗಿಂತ ಭಿನ್ನವಾಗಿದೆ.

ಪಿಪಿಎಫ್ ಹೂಡಿಕೆ ಮಿತಿ

ಖಾತೆದಾರರು ಪ್ರತಿ ವರ್ಷ 1,50,000 ರೂ. ಹೂಡಿಕೆ ಮಾಡಬಹುದಾದರೂ ಈ ಮಿತಿಯನ್ನು ತಲುಪಬೇಕು ಎಂಬ ಯಾವುದೇ ಒತ್ತಾಯವಿಲ್ಲ. ವಾಸ್ತವವಾಗಿ, ಅವರು ಪ್ರತಿ ವರ್ಷ 500 ರೂ.ಗಳಷ್ಟು ಕಡಿಮೆ ಹೂಡಿಕೆ ಮಾಡಬಹುದು. ಪಿಪಿಎಫ್‌ನಲ್ಲಿ ಒಬ್ಬ ವ್ಯಕ್ತಿಗೆ ಸಾಧ್ಯವಾದಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಎಂದು ಹೇಳುವುದಾದರೆ ಅದು ಗ್ರಾಹಕನ ಉಳಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

ಪಿಪಿಎಫ್ ಸಾಲ

ಪಿಪಿಎಫ್ ಖಾತೆದಾರರು ಹೂಡಿಕೆ ಮಾಡಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಅದನ್ನು ತೆರೆದ 3 ವರ್ಷಗಳ ಅನಂತರ ಮಾತ್ರ ಆಗಬಹುದು.

ಶಿಸ್ತು ಬದ್ದ ಠೇವಣಿ, ಬಡ್ಡಿ

ಪಿಪಿಎಫ್ ಹೂಡಿಕೆಯಲ್ಲಿ ಯಾವುದೇ ಗೌಪ್ಯತೆ ಇಲ್ಲ. ಪಿಪಿಎಫ್ ಖಾತೆದಾರರು ಮಾಡಬೇಕಾಗಿರುವುದು ಹಣವನ್ನು ಸಾಧ್ಯವಾದಷ್ಟು ಶಿಸ್ತುಬದ್ಧವಾಗಿ ಠೇವಣಿ ಮಾಡುವುದು ಮಾತ್ರ. ಆಗ ನಿರ್ಧಿಷ್ಟ ಬಡ್ಡಿಯನ್ನು ಆನಂದಿಸಬಹುದು.

Continue Reading
Advertisement
Reliance Retail Tira unveils skin care brand Akind
ದೇಶ16 mins ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ19 mins ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು22 mins ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Joshimath Teshil Now Jyotirmath
ದೇಶ30 mins ago

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ATM Cash Withdrawal Fee
ವಾಣಿಜ್ಯ49 mins ago

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

Siddaramaiah
ಕರ್ನಾಟಕ1 hour ago

ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

NEET UG Result 2024
ಶಿಕ್ಷಣ2 hours ago

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Actor Darshan
ಕರ್ನಾಟಕ2 hours ago

Actor Darshan: ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್‌ ಎಂದ ದರ್ಶನ್‌ ಪುತ್ರ ವಿನೀಶ್;‌ ಪೋಸ್ಟ್‌ನಲ್ಲಿ ಇನ್ನೇನಿದೆ?

Viral Video
ವೈರಲ್ ನ್ಯೂಸ್2 hours ago

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

Donkey Population In Pak
ವಿದೇಶ2 hours ago

Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌