DA Hike 2023: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ; ಹೆಚ್ಚಾಗಲಿದೆ ಇಷ್ಟು ತುಟ್ಟಿ ಭತ್ಯೆ - Vistara News

ದೇಶ

DA Hike 2023: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ; ಹೆಚ್ಚಾಗಲಿದೆ ಇಷ್ಟು ತುಟ್ಟಿ ಭತ್ಯೆ

DA Hike 2023: ಕೇಂದ್ರ ಸರ್ಕಾರದ ಒಂದು ಕೋಟಿ ನೌಕರರಿಗೆ ಶೀಘ್ರದಲ್ಲಿಯೇ ತುಟ್ಟಿ ಭತ್ಯೆ ಹೆಚ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಜುಲೈ 1ರಿಂದಲೇ ಅನ್ವಯವಾಗುವಂತೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

DA Hike 2023 For Central Govt Employees
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ನೀಡಲಿದೆ. ಕೇಂದ್ರ ಸರ್ಕಾರವು ನೌಕರರಿಗೆ (Central Government Employees) ನೀಡುವ ತುಟ್ಟಿ ಭತ್ಯೆಯನ್ನು (Dearness Allowance) ಶೇ.3ರಷ್ಟು ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ. ಘೋಷಣೆಯಾದರೆ ನೌಕರರಿಗೆ ಶೇ.42ರ ಬದಲು ಶೇ.45ರಷ್ಟು ತುಟ್ಟಿ ಭತ್ಯೆ (DA Hike 2023) ಸಿಗಲಿದೆ. ಅದರಲ್ಲೂ, ಜುಲೈ 1ರಿಂದಲೇ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಸದ್ಯ ಶೇ.42ರಷ್ಟು ತುಟ್ಟಿಭತ್ಯೆ ನೀಡಲಾಗುತ್ತದೆ. ಇದಕ್ಕೆ ಈಗ ಶೇ.3ರಷ್ಟು ತುಟ್ಟಿ ಭತ್ಯೆ ಸೇರಲಿದೆ. ಹಾಗಾಗಿ, ದೇಶದ ಒಂದು ಕೋಟಿಗೂ ಅಧಿಕ ನೌಕರರು ಹಾಗೂ ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ. ನೌಕರರ ಪ್ರಸಕ್ತ ಸಂಬಳ, ಜೀವನ ವೆಚ್ಚದ ಹೆಚ್ಚಳ ಆಧರಿಸಿ ಹಾಗೂ ಕನ್ಸುಮರ್‌ ಪ್ರೈಸ್‌ ಇಂಡೆಕ್ಸ್‌ ಫಾರ್‌ ಇಂಡಸ್ಟ್ರಿಯಲ್‌ ವರ್ಕರ್ಸ್‌ (CPI-IW) ನೀಡುವ ಮಾಸಿಕ ವರದಿ ಅನ್ವಯ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ.

ದೇಶದಲ್ಲಿ ಸದ್ಯ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದರೆ, 69.76 ಲಕ್ಷ ಪಿಂಚಣಿದಾರರಿದ್ದಾರೆ. ಆದಾಗ್ಯೂ, ಆಲ್‌ ಇಂಡಿಯಾ ರೈಲ್ವೆಮೆನ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಗೋಪಾಲ್‌ ಮಿಶ್ರಾ ಅವರು ತುಟ್ಟಿ ಭತ್ಯೆ ಏರಿಕೆ ಕುರಿತು ಪ್ರತಿಕ್ರಿಯಿಸಿದ್ದು, “ನಾವು ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಬೇಕು” ಎಂಬುದಾಗಿ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: DA Hike News : ಕಳೆದ ಐದು ತಿಂಗಳ ಬಾಕಿ ತುಟ್ಟಿ ಭತ್ಯೆ; ಯಾವ ವೇತನ ಶ್ರೇಣಿಯವರಿಗೆ ಎಷ್ಟು ಹಣ ಲಭ್ಯ?

ಕೇಂದ್ರ ಸರ್ಕಾರವು ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆ ಏರಿಕೆ ಮಾಡುತ್ತದೆ. ಈ ವರ್ಷದ ಮೊದಲ ತುಟ್ಟಿ ಭತ್ಯೆ ಏರಿಕೆಯನ್ನು ಕಳೆದ ಮಾರ್ಚ್‌ 24ರಂದು ಘೋಷಿಸಲಾಗಿತ್ತು. ಜನವರಿ 1ರಿಂದಲೇ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗಿತ್ತು. ಶೇ.38ರಷ್ಟು ಇದ್ದ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರವು ಶೇ.4ರಷ್ಟು ಏರಿಕೆ ಮಾಡಿ, ಒಟ್ಟು ಶೇ.42ರಷ್ಟು ತುಟ್ಟಿ ಭತ್ಯೆ ನೀಡಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಶೇ.4ರಷ್ಟು ಏರಿಕೆ ಮಾಡಬೇಕು ಎಂಬುದು ಗೋಪಾಲ್‌ ಮಿಶ್ರಾ ಬೇಡಿಕೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ದೇಶದ ಮೊದಲ ಅಂಡರ್‌ ವಾಟರ್‌ ಮೆಟ್ರೋ ಸೇವೆಗೆ ಮೋದಿ ನಾಳೆ ಚಾಲನೆ; ಏನೆಲ್ಲ ವೈಶಿಷ್ಟ್ಯ?

ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಲಿದ್ದಾರೆ. ಈ ಸೇವೆಯ ವೈಶಿಷ್ಟ್ಯಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

VISTARANEWS.COM


on

PM Narendra Modi
Koo

ಕೋಲ್ಕೊತಾ: ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋ (Underwater Metro) ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಮಾರ್ಚ್‌ 6) ಚಾಲನೆ ನೀಡಲಿದ್ದಾರೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಲ್ಲಿ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ. ಹೌರಾ ಹಾಗೂ ಕೋಲ್ಕೊತಾಗೆ ಮೆಟ್ರೋ ಸಂಪರ್ಕ ಕಲ್ಪಿಸುವ, ಹೂಗ್ಲಿ ನದಿಯ (Hooghly River) ನೀರಿನ ಮಧ್ಯೆ ಸಾಗುವ, 16.6 ಕಿಲೋಮೀಟರ್‌ ಉದ್ದದ ಮೆಟ್ರೋ ಸೇವೆಗೆ ಮೋದಿ ಚಾಲನೆ ನೀಡಲಿದ್ದು, ಇದು ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋ ಸೇವೆ ಎನಿಸಲಿದೆ.

ಮೆಟ್ರೋ ಸುರಂಗ, ನೀರಿನ ಮಧ್ಯೆಯೇ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿ ಹಲವು ರೀತಿಯಲ್ಲಿ ಎಂಜಿನಿಯರಿಂಗ್‌ ಅದ್ಭುತಗಳಿಗೆ ಈ ಮೆಟ್ರೋ ಸೇವೆಯು ಸಾಕ್ಷಿಯಾಗಲಿದೆ. 16.6 ಕಿಲೋಮೀಟರ್‌ ಮಾರ್ಗದ ಮಧ್ಯೆ ಆರು ಮೆಟ್ರೋ ಸ್ಟೇಷನ್‌ಗಳಿದ್ದು, ಇವುಗಳಲ್ಲಿ ಮೂರು ಭೂಮಿಯ ಕೆಳಗೇ ಇವೆ. ವಾಯುಮಾಲಿನ್ಯ ತಡೆ, ಟ್ರಾಫಿಕ್‌ ಕಿರಿಕಿರಿ ತಪ್ಪಿಸುವುದು ಹಾಗೂ ಹೊಸ ಪ್ರಯಾಣದ ಅನುಭವದ ದಿಸೆಯಲ್ಲಿ ಅಂಡರ್‌ವಾಟರ್‌ ಮೆಟ್ರೋ ಸೇವೆ ಮಹತ್ವ ಪಡೆದಿದೆ. ಹಾಗಾದರೆ, ಅಂಡರ್‌ ವಾಟರ್‌ ಮೆಟ್ರೋ ವೈಶಿಷ್ಟ್ಯಗಳು ಏನೆಲ್ಲ ಇವೆ? ಇಲ್ಲಿದೆ ಮಾಹಿತಿ.

ಅಂಡರ್‌ ವಾಟರ್‌ ಮೆಟ್ರೋದ ವೈಶಿಷ್ಟ್ಯಗಳು

  • ಹೌರಾ ಹಾಗೂ ಕೋಲ್ಕೊತಾ ಮಧ್ಯೆ, ನೀರಿನಲ್ಲಿ ಮೆಟ್ರೋ ಸಾಗುವ ಜತೆಗೆ, ಮೆಟ್ರೋ ನಿಲ್ದಾಣವೂ ಇದೆ.
  • ಹೂಗ್ಲಿ ನದಿ ನೀರಿನ ಮಧ್ಯೆಯೇ ಮೆಟ್ರೋ 520 ಮೀಟರ್‌ ಸಂಚರಿಸಲಿದೆ. ಕೇವಲ 45 ಸೆಕೆಂಡ್‌ನಲ್ಲಿ ಮೆಟ್ರೋ ಇಷ್ಟು ದೂರ ಕ್ರಮಿಸಲಿದೆ.
  • ಈಸ್ಟ್-ವೆಸ್ಟ್ ಮೆಟ್ರೋದ 16.6 ಕಿಲೋಮೀಟರ್‌ ಮೆಟ್ರೋ ಮಾರ್ಗದಲ್ಲಿ 10.8 ಕಿಲೋಮೀಟರ್‌ ಮಾರ್ಗವು ಭೂಮಿಯ ಒಳಗೆ ಇದೆ. ಹೂಗ್ಲಿ ನದಿಯ ಆಳದಲ್ಲಿರುವ ಸುರಂಗದ ಮೂಲಕ ಮೆಟ್ರೋ ಸಾಗಲಿದೆ.
  • ನದಿಯ 16 ಮೀಟರ್‌ ಆಳದಲ್ಲಿ ಪ್ರಯಾಣಿಕರು ಮೆಟ್ರೋ ಮೂಲಕ ಸಾಗಲಿದ್ದಾರೆ, ಇದು ಅದ್ಭುತ ಅನುಭವ ಎಂದು ಹೇಳಲಾಗುತ್ತಿದೆ.
  • ಹೌರಾ ಮೈದಾನ್‌ ಮೆಟ್ರೋ ನಿಲ್ದಾಣವು ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋ ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಿದೆ

ಇದನ್ನೂ ಓದಿ: Namma Metro : Good News; ಮೆಟ್ರೋ ಸಂಚಾರ ಶೀಘ್ರವೇ ನಾಗಸಂದ್ರದಿಂದ ಮಾದಾವರಕ್ಕೆ ವಿಸ್ತರಣೆ

ದೇಶದ ಮೊದಲ ಮೆಟ್ರೋ

ಕೋಲ್ಕೊತಾ ಮೆಟ್ರೋ ದೇಶದ ಮೊದಲ ಮೆಟ್ರೋ ಸಿಸ್ಟಂ ಎನಿಸಿದೆ. ಅಷ್ಟೇ ಅಲ್ಲ, ಏಷ್ಯಾದಲ್ಲೇ ಐದನೇ ಮೆಟ್ರೋ ಎನಿಸಿದೆ. ಮೊದಲ ಬಾರಿಗೆ 1984ರ ಅಕ್ಟೋಬರ್‌ 24ರಂದು ಕೋಲ್ಕೊತಾದಲ್ಲಿ ಮೊದಲ ಬಾರಿಗೆ ಮೆಟ್ರೋ ಸೇವೆ ಆರಂಭಿಸಲಾಯಿತು. ಮೊದಲು 3.4 ಕಿಲೋಮೀಟರ್‌ ವ್ಯಾಪ್ತಿಗೆ ಆರಂಭವಾದ ಮೆಟ್ರೋ ಸೇವೆ ಈಗ ನೂರಾರು ಕಿಲೋಮೀಟರ್‌ವರೆಗೆ ವ್ಯಾಪಿಸಿದೆ. ಇಂತಹ ಕೋಲ್ಕೊತಾದಲ್ಲಿಯೇ ಈಗ ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋಗೆ ಚಾಲನೆ ನೀಡಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯಲಿರುವ ಮೋದಿ; ಇದರಲ್ಲೂ ಇದೆ ಒಂದು ದಾಖಲೆ!

Narendra Modi: ಮಾರ್ಚ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂಗೆ ಭೇಟಿ ನೀಡಲಿದ್ದು, ಅದೇ ರಾತ್ರಿ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ತಂಗಲಿದ್ದಾರೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ.

VISTARANEWS.COM


on

Narendra Modi
Koo

ದಿಸ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಹಲವು ದೇಶಗಳಿಗೆ ಭೇಟಿ ನೀಡುವುದು, ರಾಜಕೀಯ ಸಮಾವೇಶಗಳಲ್ಲಿ ಅಬ್ಬರದ ಭಾಷಣ ಮಾಡುವುದರ ಜತೆಗೆ ಪ್ರಾಣಿಗಳು, ಅರಣ್ಯದ ಬಗ್ಗೆಯೂ ಅಷ್ಟೇ ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಚೀತಾಗಳನ್ನು ಬಿಟ್ಟಿದ್ದರು. ಕರ್ನಾಟಕದ ಬಂಡೀಪುರಕ್ಕೂ ಅವರು ಭೇಟಿ ನೀಡಿ, ಸಫಾರಿ ಕೈಗೊಂಡಿದ್ದರು. ಇಷ್ಟೆಲ್ಲ ಆಸಕ್ತಿ ಹೊಂದಿರುವ ನರೇಂದ್ರ ಮೋದಿ (Narendra Modi) ಅವರು ಅಸ್ಸಾಂನಲ್ಲಿರುವ ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ (Kaziranga National Park) ಒಂದು ರಾತ್ರಿ ಕಳೆಯಲಿದ್ದಾರೆ.

ನರೇಂದ್ರ ಮೋದಿ ಅವರು ಕಾಜಿರಂಗ ಅಭಯಾರಣದಲ್ಲಿ ಒಂದು ರಾತ್ರಿ ತಂಗುವ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ. “ನರೇಂದ್ರ ಮೋದಿ ಅವರು ಮಾರ್ಚ್‌ 8ರಂದು ಅಸ್ಸಾಂಗೆ ಆಗಮಿಸಲಿದ್ದಾರೆ. ಅದೇ ದಿನ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ತೆರಳಲಿದ್ದು, ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಕಾಜಿರಂಗ ದಟ್ಟಾರಣ್ಯದಲ್ಲಿ ಒಂದು ರಾತ್ರಿ ಕಳೆಯಲಿದ್ದಾರೆ” ಎಂದು ಹೇಳಿದರು.

“ಮಾರ್ಚ್‌ 8ರ ರಾತ್ರಿಯನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕಳೆಯಲಿರುವ ನರೇಂದ್ರ ಮೋದಿ ಅವರು ಮಾರ್ಚ್‌ 9ರಂದು ಅರಣ್ಯದಲ್ಲಿ ಸಫಾರಿ ಕೈಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರ ಭೇಟಿಯಿಂದಾಗಿ ಕಾಜಿರಂಗ ಅಭಯಾರಣ್ಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಇದಾದ ಬಳಿಕ ಮೋದಿ ಅವರು ಜೊರ್ಹಾತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಹೆಸರು ವಾಸಿಯಾಗಿದೆ. 429.69 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ವಿಶ್ವದಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳಲ್ಲಿ ಮೂರನೇ ಎರಡು ಭಾಗದಷ್ಟು ಘೇಂಡಾಮೃಗಗಳು ಇದೇ ರಾಷ್ಟ್ರೀಯ ಉದ್ಯಾನದಲ್ಲಿವೆ. ಆನೆ, ಕರಡಿ ಹಾಗೂ ಚಿರತೆಗಳಿಗೂ ಕಾಜಿರಂಗ ಅಭಯಾರಣ್ಯವು ಆಶ್ರಯ ತಾಣವಾಗಿದೆ. ಈ ಉದ್ಯಾನದಲ್ಲಿ ಸಫಾರಿಗೆ ತೆರಳಲು 3,500-4,500 ರೂ. ಪಾವತಿಸಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

Rahul Gandhi: ಮಧ್ಯಪ್ರದೇಶದಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್‌ ಗಾಂಧಿ ಅವರು, ಇಡೀ ದೇಶಕ್ಕೆ ಎಕ್ಸ್‌ರೇ ಹಾಗೂ ಎಂಆರ್‌ಐ ಸ್ಕ್ಯಾನ್‌ ಮಾಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Rahul Gandhi
Koo

ಭೋಪಾಲ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ದೇಶದ ಹಲವು ರಾಜ್ಯಗಳಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಕೈಗೊಳ್ಳುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನ್ಯಾಯ ಯಾತ್ರೆ ವೇಳೆ ಜನರೊಂದಿಗೆ ಮಾತುಕತೆ ನಡೆಸುವ ಜತೆಗೆ ಜನರ ಪ್ರಶ್ನೆಗಳಿಗೆ ಉತ್ತರಗಳನ್ನೂ ನೀಡುತ್ತಿದ್ದಾರೆ. ಹೀಗೆ, ಮಧ್ಯಪ್ರದೇಶದಲ್ಲಿ ನ್ಯಾಯ ಯಾತ್ರೆ ಕೈಗೊಳ್ಳುವ ವೇಳೆ ವ್ಯಕ್ತಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು” ಎಂದು ಹೇಳಿದ್ದಾರೆ. ಈ ವಿಡಿಯೊ (Viral Video ಈಗ ಭಾರಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್‌ ಗಾಂಧಿ ಅವರಿಗೆ, ವ್ಯಕ್ತಿಯೊಬ್ಬರು ಒಂದು ಪ್ರಶ್ನೆ ಕೇಳಿದರು. “ದೇಶದಲ್ಲಿ ಒಬಿಸಿಗಳ ಸಹಭಾಗಿತ್ವ ಹೇಗೆ ಹೆಚ್ಚಾಗುತ್ತದೆ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ, “ನಿಮಗೆ ಗಾಯವಾದರೆ ನೀವೇನು ಮಾಡುತ್ತೀರಿ? ಆಸ್ಪತ್ರೆಗೆ ಹೋಗುತ್ತೀರಿ. ಆಗ ನಿಮಗೆ ವೈದ್ಯರು ಎಕ್ಸ್‌ರೇ ತೆಗೆಯಬೇಕು ಎಂಬುದಾಗಿ ಹೇಳುತ್ತಾರೆ. ಅದರಂತೆ, ನೀವು ಎಕ್ಸ್‌ರೇ ತೆಗೆಸಿದಾಗ ಸಮಸ್ಯೆಯ ಪ್ರಮಾಣ ಗೊತ್ತಾಗುತ್ತದೆ. ಅದರಂತೆ, ಇಡೀ ಭಾರತವನ್ನು ಜಾತಿ ಜನಗಣತಿ ಮೂಲಕ ಎಕ್ಸ್‌ರೇ ತೆಗೆಯಬೇಕು” ಎಂದು ಹೇಳಿದರು.

“ಭಾರತವೀಗ ಮಾಹಿತಿ, ಅಂಕಿ-ಅಂಶಗಳ ಯುಗದಲ್ಲಿ ಜೀವಿಸುತ್ತಿದೆ. ಹಾಗಾಗಿ, ದೇಶಾದ್ಯಂತ ಜಾತಿ ಜನಗಣತಿ ನಡೆಯಬೇಕು. ಇದರಿಂದ ದೇಶದಲ್ಲಿ ಹಿಂದುಳಿದವರು ಎಷ್ಟಿದ್ದಾರೆ, ದಲಿತರು, ಆದಿವಾಸಿಗಳು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ ಸೇರಿ ಎಲ್ಲರೂ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಇದರಿಂದ ದೇಶದಲ್ಲಿ ಒಬಿಸಿ, ದಲಿತರ ಸಹಭಾಗಿತ್ವ, ಅವರಿಗೆ ಯೋಜನೆಗಳ ಉಪಯೋಗ ಸಿಗಲು ನೆರವಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಎಂಎಸ್‌ಪಿಗೂ, ಎಂಆರ್‌ಪಿಗೂ ವ್ಯತ್ಯಾಸ ತಿಳಿಯದ ರಾಹುಲ್‌ ಗಾಂಧಿ; ನೀವೇ ವಿಡಿಯೊ ನೋಡಿ

ಕಾಂಗ್ರೆಸ್‌ ಆಡಳಿತಕ್ಕೆ ಬಂದರೆ ಜಾತಿಗಣತಿ

“ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್‌ ಮೊದಲಿನಿಂದಲೂ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಿದೆ. ನಾವೇನಾದರೂ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿದುಕೊಂಡು, ಒಬಿಸಿಯವರ ಏಳಿಗೆಗೆ ದುಡಿಯುತ್ತೇವೆ. ನಾವು ಸ್ವಾತಂತ್ರ್ಯ, ಶ್ವೇತ ಕ್ರಾಂತಿ, ಕಂಪ್ಯೂಟರ್‌ ಕ್ರಾಂತಿಗಾಗಿ ಹೋರಾಡಿದ್ದೇವೆ. ಈಗ ಜಾತಿ ಜನಗಣತಿಗಾಗಿಯೂ ಹೋರಾಡುತ್ತೇವೆ. ದೇಶದ ಎಕ್ಸ್‌ರೇ ಹಾಗೂ ಎಂಆರ್‌ಐ ಆಗುವವರೆಗೆ ಸುಮ್ಮನಿರುವುದಿಲ್ಲ” ಎಂದು ರಾಹುಲ್‌ ಗಾಂಧಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Maldives: ಚೀನಾ ಜತೆ ಒಪ್ಪಂದದ ಬೆನ್ನಲ್ಲೇ ಮಾಲ್ಡೀವ್ಸ್‌ ಉದ್ಧಟತನ;‌ ಭಾರತ ಸೇನೆಗೆ ಡೆಡ್‌ಲೈನ್

Maldives: ಭಾರತದ ಸೈನಿಕರನ್ನು ಹಿಂತೆಗೆದುಕೊಳ್ಳಿ ಎಂಬುದಾಗಿ ಇದಕ್ಕೂ ಮೊದಲು ಕೂಡ ಮಾಲ್ಡೀವ್ಸ್‌ ಆದೇಶಿಸಿತ್ತು. ಇದಕ್ಕೆ ಭಾರತ ಕೂಡ ಒಪ್ಪಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ, ಮಾಲ್ಡೀವ್ಸ್‌ ಮತ್ತೊಂದು ಉದ್ಧಟತನ ಮೆರೆದಿದೆ.

VISTARANEWS.COM


on

Mohamed Muizzu And Xi Jinping
Koo

ನವದೆಹಲಿ: ಚೀನಾ ನೀಡುವ ಹಣಕಾಸು ನೆರವಿನ ಆಸೆಗಾಗಿ ಭಾರತದ ಜತೆ ಉದ್ಧಟತನದ ವರ್ತನೆ ತೋರುತ್ತಿರುವ ಮಾಲ್ಡೀವ್ಸ್‌ (Maldives) ಈಗ ಮತ್ತೊಂದು ಉಪಟಳ ಮಾಡಿದೆ. ಭಾರತೀಯ ಸೇನೆಯು ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ವಾಪಸಾಗುತ್ತಿದೆ ಎಂಬುದಾಗಿ ಭಾರತ ಘೋಷಿಸಿದರೂ, ಮೇ 10ರ ನಂತರ ಮಾಲ್ಡೀವ್ಸ್‌ನಲ್ಲಿ ಭಾರತದ (India Maldives Row) ಒಬ್ಬ ಸೈನಿಕನೂ (Indian Troops) ಇರಬಾರದು. ಸಮವಸ್ತ್ರ ಧರಿಸದೆ, ಸಾಮಾನ್ಯ ಉಡುಪು ಧರಿಸಿಯೂ ಕೂಡ ಭಾರತದ ಸೈನಿಕರು ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಘೋಷಣೆ ಮಾಡಿದ್ದಾರೆ.

ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಕಚೇರಿಯ ಉಪ ನಿರ್ದೇಶಕ ಮೇಜರ್ ಜನರಲ್ ಜಾಂಗ್ ಬೌಕುನ್ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು. ಮೌಮೂನ್ ಮತ್ತು ಮೇಜರ್ ಜನರಲ್ ಬಾವೊಕುನ್ “ಮಾಲ್ಡೀವ್ಸ್ ಗಣರಾಜ್ಯಕ್ಕೆ ಉಚಿತವಾಗಿ ಚೀನಾದ ಮಿಲಿಟರಿ ನೆರವು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲಿದೆ” ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದೆ. ಚೀನಾ ಜತೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಮಾಲ್ಡೀವ್ಸ್‌ ಭಾರತಕ್ಕೆ ಗಡುವು ನೀಡಿದೆ.

ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನಲ್ಲಿ ಸೈನಿಕರನ್ನು ನಿಯೋಜಿಸಿದೆ. ಯಾವ ದೇಶದ ಸೇನೆಯೂ ಮಾಲ್ಡೀವ್ಸ್‌ನಲ್ಲಿ ಇರುವುದು ಬೇಕಾಗಿಲ್ಲ ಎಂದು ಮೊಹಮ್ಮದ್‌ ಮುಯಿಜು ಹೇಳಿದ್ದಾರೆ. ಆದರೆ, ಸೈನಿಕರನ್ನು ವಾಪಸ್‌ ಕಳುಹಿಸುವ ಕುರಿತು ಚೀನಾ ಜತೆ ಮಾತನಾಡಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಉಚಿತ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಚೀನಾ ಸಹಿ

ಭಾರತದ ಸೈನಿಕರನ್ನು ಹಿಂತೆಗೆದುಕೊಳ್ಳಬೇಕು ಎಂದು ಇದಕ್ಕೂ ಮೊದಲು ಮಾಲ್ಡೀವ್ಸ್‌ ಮಾರ್ಚ್‌ 15ರ ಗಡುವು ನೀಡಿತ್ತು. ಆದರೆ, ಮಾಲ್ಡೀವ್ಸ್‌ ಹಾಗೂ ಭಾರತದ ಮಧ್ಯೆ ಮಾತುಕತೆ ನಡೆದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ, ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ ಎಂದು ಮುಯಿಜು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ ಸಚಿವರು ನೀಡಿದ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಭಾರತದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಕೂಡ ಆರಂಭವಾಗಿತ್ತು. ಅಷ್ಟೇ ಅಲ್ಲ, ಮೊಹಮ್ಮದ್‌ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ20 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ29 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್35 mins ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ38 mins ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು39 mins ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ1 hour ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ1 hour ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ1 hour ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD DeveGowda reveals the reality of Karnataka drought
ರಾಜಕೀಯ1 hour ago

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ED Raid Bangalore
ಬೆಂಗಳೂರು1 hour ago

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌