Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್‌ ಭಯೋತ್ಪಾದಕ ಬಂಧನ - Vistara News

ಕ್ರೈಂ

Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್‌ ಭಯೋತ್ಪಾದಕ ಬಂಧನ

ಕಳೆದ ವರ್ಷ ಭಟ್ಕಳದಲ್ಲಿ ಬಂಧಿಸಲ್ಪಟ್ಟಿದ್ದ ಐಸಿಸ್ ಉಗ್ರ ಜವಾಹರ್‌ ದಾಮುದಿ ನೀಡಿದ ಮಾಹಿತಿಯ ಆಧಾರದಲ್ಲಿ ಎನ್‌ಐಎ, ದೆಹಲಿಯಲ್ಲಿ ಐಎಸ್‌ಗೆ ಕೆಲಸ ಮಾಡುತ್ತಿದ್ದ ಮೊಹ್ಸಿನ್‌ ಎಂಬ ಉಗ್ರನನ್ನು(Terrorist Arrest) ಬಂಧಿಸಿದೆ.

VISTARANEWS.COM


on

mumbai Man Arrested
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉಗ್ರರ ಬೇಟೆಯನ್ನು ಚುರುಕುಗೊಳಿಸಿದ್ದು, ದೇಶದ ರಾಜಧಾನಿ ದೆಹಲಿಯಲ್ಲಿಯೇ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಜತೆ ಸಂಬಂಧ ಹೊಂದಿದ ಉಗ್ರನೋರ್ವನನ್ನು (Terrorist Arrest) ಬಂಧಿಸಲಾಗಿದೆ.

2021ರಲ್ಲಿ ಕರ್ನಾಟಕದ ಭಟ್ಕಳದಲ್ಲಿ ಬಂಧಿಸಲ್ಪಟಿದ್ದ ಐಸಿಸ್ ಉಗ್ರ, ಜಾಲಿಯ ಉಮರ್‌ ಸ್ಟ್ರೀಟ್‌ ನಿವಾಸಿ ಜುಫ್ರಿ ಜವಾಹರ್‌ ದಾಮುದಿ (30) ನೀಡಿದ್ದ ಮಾಹಿತಿಯ ಆಧಾರದಲ್ಲಿ ಈತನನ್ನು ಬಂಧಿಸಿಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತನನ್ನು ಮೊಹ್ಸಿನ್‌ ಅಹ್ಮದ್‌ ಎಂದು ಗುರುತಿಸಲಾಗಿದ್ದು, ದೆಹಲಿಯ ಬಟ್ಲಾ ಹೌಸ್‌ನಲ್ಲಿರುವ ಆತನ ನಿವಾಸದಲ್ಲಿಯೇ ಹೆಡೆಮುರಿಕಟ್ಟಲಾಗಿದೆ. ಆತ ಐಎಸ್‌ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ಆನ್‌ಲೈನ್‌ನಲ್ಲಿಯೂ ಐಎಸ್‌ ಪರವಾಗಿ ಕೆಲಸ ಮಾಡುವುದರಲ್ಲಿ ಸಕ್ರೀಯವಾಗಿದ್ದ ಎನ್ನಲಾಗಿದೆ.

ಪಟನಾ ಮೂಲದ ಮೊಹ್ಸಿನ್‌ ಐಎಸ್‌ ಬಗ್ಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಸಹಾನುಭೂತಿ ಹೊಂದಿರುವವರಿಂದ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಹೀಗೆ ಸಂಗ್ರಹವಾದ ಹಣವನ್ನು ಆತ ಕ್ರಿಪ್ಟೋಕರೆನ್ಸಿ ಮೂಲಕ ಸಿರಿಯಾ ಮತ್ತು ಇತರ ದೇಶಗಳಲ್ಲಿ ಚಟುವಟಿಕೆ ನಡೆಸುತ್ತಿರುವ ಐಎಸ್‌ಗೆ ರವಾನಿಸುತ್ತಿದ್ದ ಎನ್ನಲಾಗಿದೆ.

ಬಂಧಿತನನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಏಳು ದಿನಗಳ ಕಾಲ ಎನ್‌ಐಎ ತನ್ನ ವಶಕ್ಕೆ ಪಡೆದುಕೊಂಡು, ತನಿಖೆ ಮುಂದುವರಿಸಿದೆ. ಕಳೆದ ವಾರ ಎನ್‌ಐಎಯು ಬೆಂಗಳೂರು, ತುಮಕೂರು ಸೇರಿದಂತೆ ದೇಶದ 13ಕಡೆ ದಾಳಿ ನಡೆಸಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದ 48 ಮಂದಿಯನ್ನು ಬಂಧಿಸಿತ್ತು. ಇವರಲ್ಲಿ ಕೆಲವರು ಐಎಸ್‌ ಸಂಬಂಧ ಹೊಂದಿದ್ದರೆನ್ನಲಾಗಿದ್ದು, ಹೀಗಾಗಿ ಮೊಹ್ಸಿನ್‌ ಬಂಧನ ಮಹತ್ವ ಪಡೆದಿದೆ ಎನ್ನಲಾಗುತ್ತಿದೆ.

ಭಟ್ಕಳದಲ್ಲಿ ಬಂಧಿಸಿಲ್ಪಟ್ಟಿದ್ದ ದಾಮುದಿ ಉಗ್ರ ಸಂಘಟನೆಯ ನಿಯತಕಾಲಿಕೆ ʼವಾಯ್ಸ್‌ ಆಫ್‌ ಹಿಂದ್‌ʼ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದ. ಈತನಿಂದ ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ಗಳು, ಹಾರ್ಡ್‌ ಡಿಸ್ಕ್‌ಗಳು, ಮೆಮೊರಿ ಕಾರ್ಡ್‌ಗಳು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದನ್ನು ಪರಿಶೀಲಿಸಿದಾಗ ಮೊಹ್ಸಿನ್‌ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ಭಾರತದಲ್ಲಿ ಅಶಾಂತಿಯನ್ನು ಉಂಟುಮಾಡುವ ಕೆಲಸದಲ್ಲಿ ಇವರೆಲ್ಲರೂ ತೊಡಗಿದ್ದರು ಎಂದು ಎನ್‌ಐಎ ಮೂಲಗಳು ವಿವರಿಸಿವೆ.

ಇದನ್ನೂ ಓದಿ| Terror Accused | ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ, ಒಂದೇ ದಿನ ಇಬ್ಬರು ಅರೆಸ್ಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Sudipa Chatterjee: ಬಾಂಗ್ಲಾದೇಶಿ ಕುಕ್ಕಿಂಗ್‌ ಶೋವೊಂದರ ಆಂಕರ್‌ ಆಗಿರುವ ಸುದೀಪಾ ಅವರು ಬೀಫ್‌ ಖಾದ್ಯ ತಯಾರಿಸುತ್ತಿದ್ದ ಸ್ಪರ್ಧಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ವಿಡಿಯೋದಲ್ಲಿ ಬಹಳ ವೇಗವಾಗಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರಿಂದ ಖಂಡನೆ ವ್ಯಕ್ತವಾಗಿತ್ತು. ಅದೂ ಅಲ್ಲದೇ ಸುದೀಪಾ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸಚಿವ ಬಬುಲ್‌ ಸುಪ್ರಿಯೋ ಅವರಿಗೆ ಆಪ್ತರಾಗಿರುವ ಕಾರಣ ಈ ವಿಚಾರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು.

VISTARANEWS.COM


on

Sudipa Chatterjee
Koo

ಕೋಲ್ಕತ್ತಾ: ಅಡುಗೆ ಕಾರ್ಯಕ್ರಮವೊಂದರಲ್ಲಿ ಸ್ಪರ್ಧಿಯೋರ್ವ ತಯಾರಿಸಿದ್ದ ಬೀಫ್‌ ಖಾದ್ಯವನ್ನು ಪ್ರೊಮೋಟ್‌ ಮಾಡಿದ್ದಾರೆ ಎಂಬ ಕಾರಣಕ್ಕೆ ಖ್ಯಾತ ಬೆಂಗಾಳಿ ನಟಿ(Bengali actress)ಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದಿದೆ. ನಟಿ ಸುದೀಪಾ ಚಟರ್ಜಿ(Sudipa Chatterjee) ತಮಗೆ ನಿರಂತರವಾಗಿ ಬೆದರಿಕೆ(Death threats) ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಂಗ್ಲಾದೇಶಿ ಕುಕ್ಕಿಂಗ್‌ ಶೋವೊಂದರ ಆಂಕರ್‌ ಆಗಿರುವ ಸುದೀಪಾ ಅವರು ಬೀಫ್‌ ಖಾದ್ಯ ತಯಾರಿಸುತ್ತಿದ್ದ ಸ್ಪರ್ಧಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ವಿಡಿಯೋದಲ್ಲಿ ಬಹಳ ವೇಗವಾಗಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರಿಂದ ಖಂಡನೆ ವ್ಯಕ್ತವಾಗಿತ್ತು. ಅದೂ ಅಲ್ಲದೇ ಸುದೀಪಾ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸಚಿವ ಬಬುಲ್‌ ಸುಪ್ರಿಯೋ ಅವರಿಗೆ ಆಪ್ತರಾಗಿರುವ ಕಾರಣ ಈ ವಿಚಾರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಅದೂ ಅಲ್ಲದೇ ಈ ಬಗ್ಗೆ ಸ್ವತಃ ಬಬುಲ್‌ ಸುಪ್ರಿಯೋ ಪ್ರತಿಕ್ರಿಯಿಸಿದ್ದು, ರಾಜಕೀಯ ಕಾರಣಕ್ಕಾಗಿ ಆಕೆಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸುದೀಪಾ, ನನ್ನನ್ನು ಟ್ರೋಲ್ ಮಾಡುತ್ತಿರುವ ಹೆಚ್ಚಿನ ಜನರು ವೀಡಿಯೊವನ್ನು ನೋಡಿಲ್ಲ ಎಂದು ನನಗೆ ಖಾತ್ರಿಯಿದೆ. ನಾನು ಎಂದಿಗೂ ಗೋಮಾಂಸವನ್ನು ತಿನ್ನುವುದಿಲ್ಲ, ಅದನ್ನು ಬೇಯಿಸುವುದು ಬಿಟ್ಟುಬಿಡಿ, ಅದನ್ನು ಮುಟ್ಟಲಿಲ್ಲ. ಎರಡನೆಯದಾಗಿ, ಕರೀಂ ಜಹಾನ್ (ಕಾರ್ಯಕ್ರಮದಲ್ಲಿ ಭಾಗವಹಿಸಿದವರು) ಅಡುಗೆ ಮಾಡುವ ವೀಡಿಯೊಗಳು ಇನ್ನೂ ಎಡಿಟ್ ಆಗಿಲ್ಲ, ನಾನು ಗೋಮಾಂಸವನ್ನು ಮುಟ್ಟಿದ್ದೇನೆ ಎಂದು ತಪ್ಪು ಭಾವಿಸಿದ್ದೀರಿ ಎಂದು ಹೇಳಿದ್ದಾರೆ.

ಇನ್ನು ಕೆಲವು ತಿಂಗಳುಗಳ ಹಿಂದೆ ಖ್ಯಾತ ಯೂಟ್ಯೂಬರ್‌ ಕಾಮಿಯಾ ಜಾನಿ (Kamiya Jani) ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಕಾಮಿಯಾ ಜಾನಿ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದು, ʼಕರ್ಲಿ ಟೇಲ್ಸ್‌ʼ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಕಾಮಿಯಾ ಜಾನಿ ಈ ಹಿಂದೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಗೋಮಾಂಸ ಭಕ್ಷಣೆಯ ಕುರಿತು ವಿಡಿಯೋ ಮಾಡಿದ್ದರು. ಅವರು ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಸರ್ಕಾರ ರೂಪಿಸಿರುವ ‘ಪರಿಕ್ರಮ’ ಎಂಬ ಯೋಜನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

Continue Reading

ಕರ್ನಾಟಕ

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Ballari News: ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

Illegal ganja storage in Ballari Arrest of two accused Rs 19 10 lakh Valuable ganja seized
Koo

ಬಳ್ಳಾರಿ: ನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು (Ballari News) ವಶಪಡಿಸಿಕೊಳ್ಳಲಾಗಿದೆ.

ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರು. ಮೌಲ್ಯದ 19 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಅಕ್ರಮ ಶೇಖರಣೆ ಪ್ರಕರಣದಲ್ಲಿ ನಗರದ ರಾಣಿತೋಟದ ಬೀರಪ್ಪಗುಡಿ ಹತ್ತಿರದ ನಿವಾಸಿ ವಾಹೀದ್‌ (38) ಹಾಗೂ ರೂಪನಗುಡಿ ರಸ್ತೆಯ ಮಾರಮ್ಮದೇವಿ ಗುಡಿ ಬಳಿಯ ಪಿ. ಚಾಂದ್ ಬಾಷಾ (40) ಅವರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಪತ್ತೆಯಾಗಬೇಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಕೂಲಿ ಕೆಲಸ ಮಾಡಿಕೊಂಡಿರುವ ಬಂಧಿತ ಇಬ್ಬರು ಆರೋಪಿಗಳ ಬಳಿ ನಾಪತ್ತೆಯಾಗಿರುವ ನಾಲ್ವರು ಗಾಂಜಾವನ್ನು ತಂದಿಡುತ್ತಿದ್ದರು. ಬಳಿಕ ಇದನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಬಳಿಕ ಈ ಪ್ರಕರಣದ ಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಎಸ್ಪಿ ಹೇಳಿದರು.

ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ರಾಯದುರ್ಗ ಕಡೆಗಳಿಂದ ಗಾಂಜಾ ಅಕ್ರಮವಾಗಿ ಬಳ್ಳಾರಿಗೆ ಪೂರೈಕೆಯಾಗುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ. ಗಾಂಜಾ ಪೂರೈಕೆ ಮಾಡುವ ಒಂದು ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಗಡಿಪ್ರದೇಶದಲ್ಲಿ ಈ ರೀತಿಯ ಅಕ್ರಮ ಮಾದಕ ದ್ರವ್ಯಗಳ ಸಾಗಾಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಈ ವರ್ಷದಲ್ಲಿ 13 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿದೆ. ಬಳ್ಳಾರಿಗೆ ಪೂರೈಕೆಯಾಗುವ ಅಕ್ರಮ ಗಾಂಜಾ ಎಲ್ಲಿ ಸರಬರಾಜಾಗುತ್ತದೆ ಎಂಬುದರ ಕಡೆ ನಿಗಾ ಇಡಲಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಪೂರೈಕೆ ಮಾಡಲಾಗುತ್ತಿದೆಯೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಂ, ಮಾದಕ ದ್ರವ್ಯ ಅಪರಾಧ ಕುರಿತು ಜಾಗೃತಿ ಮೂಡಿಸುವ ಕಾರ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 45 ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆದಿವೆ ಎಂದು ಎಸ್ಪಿ ರಂಜೀತ್ ಕುಮಾರ್ ಬಂಡಾರು ವಿವರಿಸಿದರು.

ಗಾಂಜಾ ಪ್ರಕರಣವನ್ನು ಬೇಧಿಸಿದ ಸೈಬರ್‌ ಹಾಗೂ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ವಿತರಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಈ ವೇಳೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಇದ್ದರು.

Continue Reading

ಕರ್ನಾಟಕ

Bitcoin Scam: ಬಿಟ್‌ಕಾಯಿನ್‌ ಕೇಸ್; ಪೊಲೀಸರ ಮೇಲೆ ಜೀಪ್‌ ಹತ್ತಿಸಿದ್ದ DySP ಶ್ರೀಧರ್‌ ಪೂಜಾರ್‌ಗೆ ಜಾಮೀನು!

Bitcoin Scam: ಬಿಟ್‌ಕಾಯಿನ್‌ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್‌ ಪೂಜಾರ್‌ ಅವರು ಕೂಡ ಇದ್ದರು. ಬಿಟ್‌ಕಾಯಿನ್‌ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್‌, ಪಾಸ್‌ವರ್ಡ್‌ ಬದಲಾವಣೆ, ಬಿಟ್‌ಕಾಯಿನ್‌ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್‌ ಪೂಜಾರ್‌ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಈಗ ಹೈಕೋರ್ಟ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

VISTARANEWS.COM


on

Bitcoin Scam
Koo

ಬೆಂಗಳೂರು: ರಾಜ್ಯದಲ್ಲಿ ನಡೆದ ಬಿಟ್‌ಕಾಯಿನ್‌ ಹಗರಣಕ್ಕೆ (Bitcoin Scam) ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್‌ ಪೂಜಾರ್‌ (Sridhar Pujar) ಅವರಿಗೆ ಹೈಕೋರ್ಟ್‌ (Karnataka High Court) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶ್ರೀಧರ್‌ ಪೂಜಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌, “ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್‌ ದಾಖಲಿಸಿದ್ದಾರೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಿದ್ದಾರೆ. ಒಂದೇ ಕೇಸ್‌ಗೆ ಎರಡೆರಡು ಬಾರಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿದ್ದಾರೆ” ಎಂದು ಹೇಳಿದರು. ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಉಮಾ ಅಸಮಾಧಾನ ವ್ಯಕ್ತಪಡಿಸಿದರು. “ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ” ಎಂದ ಅವರು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.

ಬಿಟ್‌ಕಾಯಿನ್‌ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಸಿಸಿಬಿ ತಂಡದಲ್ಲಿ ಶ್ರೀಧರ್‌ ಪೂಜಾರ್‌ ಅವರು ಕೂಡ ಇದ್ದರು. ಬಿಟ್‌ಕಾಯಿನ್‌ ಪ್ರಕರಣದ ಆರೋಪಿಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಹ್ಯಾಕಿಂಗ್‌, ಪಾಸ್‌ವರ್ಡ್‌ ಬದಲಾವಣೆ, ಬಿಟ್‌ಕಾಯಿನ್‌ ವರ್ಗಾವಣೆ ಸೇರಿ ಹಲವು ಅಕ್ರಮ ಎಸಗಿರುವ ಕುರಿತು ಶ್ರೀಧರ್‌ ಪೂಜಾರ್‌ ವಿರುದ್ಧ ಆರೋಪಿಗಳು ಕೇಳಿಬಂದಿದ್ದವು. ಅದರಂತೆ, ಎಸ್‌ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಳೆದ ಪೆಬ್ರವರಿಯಲ್ಲಿ ಶ್ರೀಧರ್‌ ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದರು. ಇದೇ ವೇಳೆ, ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದ ಶ್ರೀಧರ್‌ ಪೂಜಾರ್‌, ಪರಾರಿಯಾಗಿದ್ದರು.

Karnataka High court

ಏನಿದು ಬಿಟ್‌ ಕಾಯಿನ್‌ ಹಗರಣ?

ನವೆಂಬರ್ 2020ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಅವರು ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂಬ ವಿಷಯ ಹೊರಬಂದಿತ್ತು. ಶ್ರೀಕಿ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ನಡೆದ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.

2019ರ ಜುಲೈನಲ್ಲಿ 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಬೆಳಕಿಗೆ ಬಂದಿತ್ತು. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಅವರಿಂದ ನಗದು ಪಡೆದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ‌ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

Continue Reading

ಪ್ರಮುಖ ಸುದ್ದಿ

Murder of Renukaswamy : ದರ್ಶನ್​ ಗ್ಯಾಂಗ್​ನಿಂದ ಕೊಲೆಯಾದ ರೇಣುಕಾ ಸ್ವಾಮಿ ಬಗ್ಗೆ ವಿಕಿಪೀಡಿಯಾ ಪೇಜ್​

Murder of Renukaswamy: ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಘಟನೆಯು ಕರ್ನಾಟಕ ಚಲನಚಿತ್ರೋದ್ಯಮ ಸೇರಿದಂತೆ ದೇಶಾದ್ಯಂತ ಆಘಾತಗಳನ್ನು ಉಂಟುಮಾಡಿತು ಮತ್ತು ಸಾಮಾಜಿಕ ಮಾಧ್ಯಮದ ವಿಷಕಾರಿ ಬದಿಯ ಪ್ರಶ್ನೆಯನ್ನು ಹುಟ್ಟುಹಾಕಿತು. ಎಂದು ಪೇಜ್​ನಲ್ಲಿ ಬರೆಯಲಾಗಿದೆ.

VISTARANEWS.COM


on

Murder of Renukaswamy
Koo

ಬೆಂಗಳೂರು: ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆಯಾದ ರೇಣುಕಾಸ್ವಾಮಿ ಬಗ್ಗೆ ವಿಕೀಪಿಡಿಯಾ ಪೇಜೊಂದು ಸೃಷ್ಟಿಯಾಗಿದೆ. ಹಲವಾರು ಸುದ್ದಿಗಳನ್ನು ಮೂಲಗಳನ್ನು ಬಳಸಿಕೊಂಡು ಪೇಜ್​ ಸೃಷ್ಟಿ ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ (Murder of Renukaswamy) ಎಂಬ ಪೇಜ್ ತೆರೆಯಲಾಗಿದೆ.

ರೇಣುಕಾಸ್ವಾಮಿ (1991- ಜೂನ್ 8, 2024) ಚಿತ್ರದುರ್ಗದ ನಿವಾಸಿಯಾಗಿದ್ದು, ದರ್ಶನ್ ಅವರ ದೀರ್ಘಕಾಲದ ಸಂಗಾತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ನಂತರ ಕನ್ನಡ ನಟ ದರ್ಶನ್ ಅವರೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಘಟನೆಯು ಕರ್ನಾಟಕ ಚಲನಚಿತ್ರೋದ್ಯಮ ಸೇರಿದಂತೆ ದೇಶಾದ್ಯಂತ ಆಘಾತಗಳನ್ನು ಉಂಟುಮಾಡಿತು ಮತ್ತು ಸಾಮಾಜಿಕ ಮಾಧ್ಯಮದ ವಿಷಕಾರಿ ಬದಿಯ ಪ್ರಶ್ನೆಯನ್ನು ಹುಟ್ಟುಹಾಕಿತು. ಎಂದು ಪೇಜ್​ನಲ್ಲಿ ಬರೆಯಲಾಗಿದೆ.

ರೇಣುಕಾಸ್ವಾಮಿ ಅವರು ಕಾಶಿನಾಥ ಶಿವನಗೌಡರ ಮತ್ತು ರತ್ನಪ್ರಭಾ ದಂಪತಿಯ ಏಕೈಕ ಪುತ್ರ. ಅವರು ಕುಟುಂಬದ ಏಕೈಕ ಆದಾಯ ಗಳಿಸುವವರಾಗಿದ್ದರು ಮತ್ತು 2023 ರಲ್ಲಿ ವಿವಾಹವಾದರು. ಕೊಲೆಯ ಸಮಯದಲ್ಲಿ, ಅವರ ಪತ್ನಿ ತಮ್ಮ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದರು ಮತ್ತು ರೇಣುಕಾಸ್ವಾಮಿ ಕೊಲೆ ನಡೆದ ಫಾರ್ಮಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ವಿಕಿಯಲ್ಲಿ ಮಾಹಿತಿ ಹಾಕಲಾಗಿದೆ.

ನಟಿ ಪವಿತ್ರಾ ಗೌಡ ಅವರಿಗೆ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ, ಏಕೆಂದರೆ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದರೂ ಸಹ 2024 ರ ಜನವರಿಯಲ್ಲಿ ಗೌಡರೊಂದಿಗಿನ ಸಂಬಂಧದ ಬಗ್ಗೆ ವಿವಾದವನ್ನು ದೃಢಪಡಿಸಿದರು ಎಂಬುದಾಗಿ ವಿಕಿ ಪೇಜ್​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Namma Metro : ಮೆಟ್ರೊ ಕಾಮಗಾರಿ ಎಫೆಕ್ಟ್​​, ಬೆಂಗಳೂರಿನ ರಸ್ತೆ ಮಧ್ಯೆ ಸೃಷ್ಟಿಯಾಯ್ತು ದೊಡ್ಡ ಹೊಂಡ!

2024ರ ಜೂನ್ 7ರಂದು ರೇಣುಕಾಸ್ವಾಮಿಯನ್ನು ದರ್ಶನ್ ಸಹಚರ ರಘು ಅಪಹರಿಸಿದ್ದ. ಕೆಲವು ವರದಿಗಳ ಪ್ರಕಾರ, ದರ್ಶನ್ ಸಂತ್ರಸ್ತನನ್ನು ಬೆಲ್ಟ್ ನಿಂದ ಹೊಡೆದರು ಮತ್ತು ಆರೋಪಿಸಲಾಗಿದೆ. ಅವರ ಕುಟುಂಬವು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿತು. ಜೂನ್ 9, 2024 ರಂದು, ದರ್ಶನ್ ತಮ್ಮ ಇತ್ತೀಚಿನ ಚಿತ್ರ “ಡೆವಿಲ್: ದಿ ಹೀರೋ” ಸೆಟ್​​ನಲ್ಲಿದ್ದಾಗ ಪವಿತ್ರಾ ಗೌಡ ಅವರೊಂದಿಗೆ ವಿಚಾರಣೆಗೆ ಕರೆದೊಯ್ಯಲಾಗಿತ್ತು.

ಸ್ವಾಮಿಯನ್ನು ಕೋಲುಗಳಿಂದ ಥಳಿಸಿ ವಿದ್ಯುತ್ ಆಘಾತಗಳನ್ನು ನೀಡಲಾಗುತ್ತು. ಈ ವೇಳೆ ಪವಿತ್ರಾ ಗೌಡ ಸ್ವಲ್ಪ ಸಮಯದವರೆಗೆ ಶೆಡ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ತೂಗುದೀಪ ಅವರು ಮಾಡಿದ ಪೋಸ್ಟ್​ಗಳಿಗೆ ಸ್ವಾಮಿಯನ್ನು ಶಿಕ್ಷಿಸಲು ಶ್ರೀ ತೂಗುದೀಪ ಅವರನ್ನು ಪ್ರಚೋದಿಸಿದ್ದು ಎಂ.ಎಸ್.ಗೌಡ ಎಂದು ಹೇಳಲಾಗಿದೆ. ಇದೇ ರೀತಿಯ ಹಲವಾರು ಮಾಹಿತಿಗಳ ನೀಡಲಾಗಿದೆ.

Continue Reading
Advertisement
Congress Protest
ಕರ್ನಾಟಕ17 mins ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

NEET Aspirant
ದೇಶ55 mins ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ1 hour ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ1 hour ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ2 hours ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ2 hours ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ2 hours ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Hosur Airport
ಪ್ರಮುಖ ಸುದ್ದಿ2 hours ago

Hosur Airport: ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌!

Sudipa Chatterjee
ದೇಶ2 hours ago

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Kalki 2898AD
ಸಿನಿಮಾ3 hours ago

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ5 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು8 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ12 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌