Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು! Vistara News

ಕ್ರೈಂ

Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!

Great robbery: ದಿಲ್ಲಿಯಲ್ಲಿ ಕಳ್ಳರು ಜ್ಯುವೆಲ್ಲರಿ ಶಾಪ್‌ ಒಂದರಿಂದ ಬರೋಬ್ಬರಿ 25 ಕೋಟಿ ರೂ.(25 crore) ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಸಿಸಿ ಟಿವಿ ಕ್ಯಾಮರಾ(cc tv camera) ಅಳವಡಿಸಿದ್ದರೂ ಅದರ ಸಂಪರ್ಕ ಕಡಿತಗೊಳಿಸಿ ಈ ಕೃತ್ಯ ಎಸಗಲಾಗಿದೆ.

VISTARANEWS.COM


on

Crime image
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಚಿನ್ನಾಭರಣಗಳಂತಹ ಬೆಲೆಬಾಳುವ ವಸ್ತುಗಳ ರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳ ಮೊರೆ ಹೋದರೂ ಕಳ್ಳರು ಅದೆಲ್ಲವನ್ನೂ ಬೇಧಿಸಿ ಸೊತ್ತುಗಳನ್ನು ಕಳವು ಮಾಡೇ ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಸಿಸಿ ಟಿವಿ ಕ್ಯಾಮರಾ(cc tv camera) ಅಳವಡಿಸಿದ ಜ್ಯುವೆಲ್ಲರಿ ಶಾಪ್‌ ಒಂದರಿಂದ ಕಳ್ಳರು ಬರೋಬ್ಬರಿ 25 ಕೋಟಿ ರೂ.(25 crore) ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ.

ದಕ್ಷಿಣ ದೆಹಲಿಯ ಜುಂಗ್‌ಪುರದ ಭೋಗಲ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೆಪ್ಟಂಬರ್‌ 25 ಮತ್ತು 26ರ ಮಧ್ಯೆ ಅಂಗಡಿಯ ಗೋಡೆಗೆ ಕನ್ನ ಕೊರೆದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅಂಗಡಿ ಮಾಲಕ ಬಾಗಿಲು ತೆರೆಯಲು ಬಂದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ.

ಉಮ್ರಾವ್‌ ಸಿಂಗ್‌ ಜ್ಯುವೆಲ್ಲರಿಯಿಂದ ಈ ಕಳವು ನಡೆದಿದೆ. 1948ರಲ್ಲಿ ಆರಂಭವಾದ ಈ ಜ್ಯುವೆಲ್ಲರಿ ಈ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಸೋಮವಾರ ಮಧ್ಯರಾತ್ರಿ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ. ಆಭರಣ ಅಂಗಡಿಯ ‌ಗೋಡೆಗೆ ರಂಧ್ರವನ್ನು ಕೊರೆದು ಕಳ್ಳರು ಲಾಕರ್ ಹೊಂದಿರುವ ಸ್ಟ್ರಾಂಗ್ ರೂಮ್ ಗೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಎಂದರೆ ಬೆಳ್ಳಿಯ ಆಭರಣಗಳನ್ನು ಅಲ್ಲೇ ಬಿಟ್ಟಿರುವ ಖದೀಮರು ಚಿನ್ನ ಮತ್ತು ವಜ್ರದ ಆಭರಣಗಳನ್ನು ದೋಚಿದ್ದಾರೆ.

ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಪ್ರಯೋಜಕ್ಕೆ ಬರಲಿಲ್ಲ

ಈ ಜ್ಯುವೆಲ್ಲರಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರೂ ಪ್ರಯೋಜನವಾಗಲಿಲ್ಲ. ಕಳ್ಳರು ಕ್ಯಾಮರಾದ ಸಂಪರ್ಕ ಕತ್ತರಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಅಂಗಡಿಯ ನಾಮಫಲಕ ಮುರಿದಿರುವುದನ್ನು ನೋಡಿದ ಅಂಗಡಿ ಮಾಲಕರಿಗೆ ಅನುಮಾನ ಮೂಡಿತ್ತು. ಬಳಿಕ ಅವರು ಅಂಗಡಿಯ ಬಾಗಿಲು ತೆರೆದಾಗ ಎಲ್ಲಾ ವಜ್ರ ಮತ್ತು ಚಿನ್ನದ ಆಭರಣಗಳು ಕಾಣೆಯಾಗಿರುವುದು ಕಂಡುಬಂತು. ಅಲರಾಂ ಸಂಪರ್ಕವನ್ನೂ ಕಳ್ಳರು ಕಡಿತಗೊಳಿಸಿದ್ದರು.

ʼʼನಾಲ್ಕು ಮಹಡಿಯ ಕಟ್ಟಡದ ಟೆರೇಸ್‌ ಮೇಲಿನಿಂದ ಕೆಳ ಅಂತಸ್ತಿಗೆ ಬಂದ ಕಳ್ಳರು ಗೋಡೆಯನ್ನು ಡ್ರಿಲ್‌ನಿಂದ ಕೊರೆದು ಸ್ಟ್ರಾಂಗ್‌ ರೂಮ್‌ ಪ್ರವೇಶಿಸಿರುವ ಸಾಧ್ಯತೆ ಇದೆ. 10ರಿಂದ 15 ಲಕ್ಷ ರೂಪಾಯಿ ನಗದು ಕೂಡ ಕಳವಾಗಿದೆ. ಕಳ್ಳರ ಪೈಕಿ ಒಬ್ಬಾತ ಸ್ಟ್ರಾಂಗ್ ರೂಮ್ ಪ್ರವೇಶಿಸಿ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಚೀಲದಲ್ಲಿ ತುಂಬಿ ಹೊರಗಡೆ ಸಾಗಿಸಿರಬೇಕು” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: NCP Crisis: ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದ ಎನ್‌ಸಿಪಿ ಎರಡೂ ಬಣ!

ಅಪರಾಧಿಗಳಿಗೆ ಅಂಗಡಿ ಮತ್ತು ಆಭರಣಗಳ ಬಗ್ಗೆ ಮೊದಲೇ ಮಾಹಿತಿ ಇತ್ತು ಮತ್ತು ಸ್ಟ್ರಾಂಗ್ ರೂಮ್ ಅನ್ನು ಹೇಗೆ ತಲುಪಬೇಕೆಂದು ಅವರಿಗೆ ತಿಳಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳ್ಳರಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆಯೂ ತಿಳಿದಿರುವ ಸಾಧ್ಯತೆ ಇದೆ. ದರೋಡೆ ನಡೆದ ರೀತಿಯನ್ನು ನೋಡಿದರೆ, ಅಪರಾಧಿಗಳು ತಮ್ಮ ಕೃತ್ಯದ ಬಗ್ಗೆ ಯೋಜನೆ ರೂಪಿಸಲು ಮೊದಲೇ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಇನ್ನಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Kalaburagi News: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರಿಗೆ ಗಂಭೀರ ಗಾಯ

Kalaburagi News: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯಲ್ಲಿ ಕೆಂಡ ಹಾಯುತ್ತಿದ್ದಾಗ ಅವಘಡ ನಡೆದಿದೆ.

VISTARANEWS.COM


on

women seriously injured
Koo

ಕಲಬುರಗಿ: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Kalaburagi News) ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯಲ್ಲಿ ಕೆಂಡ ಹಾಯುತ್ತಿದ್ದಾಗ ಅವಘಡ ನಡೆದಿದೆ.

ಒಬ್ಬೊಬ್ಬರೆ ಅಗ್ನಿ ಕೊಂಡ ಹಾಯುವಾಗ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಸೋಲಾಪುರ ಮೂಲದ ಮಹಿಳೆ ಸೇರಿದಂತೆ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಕೈಕಾಲು, ಕತ್ತಿನ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | ಪ್ರೇಯಸಿಯನ್ನು ಕೊಂದು, ಆಕೆಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟ ಯುವಕ

ಯಸಳೂರು ಆರ್‌ಎಫ್ಒ ಅಮಾನತು

ಹಾಸನ: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕು ಯಸಳೂರು ಆರ್‌ಎಫ್‌ಒ ಅಮಾನತುಗೊಂಡಿದ್ದಾರೆ. ಆರ್‌ಎಫ್‌ಒ ಅವರನ್ನು ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್‌ ಆದೇಶ ಹೊರಡಿಸಿದ್ದಾರೆ.

ಯಸಳೂರು ಆರ್‌ಎಫ್‌ಒ ಜಗದೀಶ್ ಅಮಾನತುಗೊಂಡವರು. ಕಾಮಗಾರಿಯೊಂದರ ವೇಳೆ ವಶಕ್ಕೆ ಪಡೆದಿದ್ದ ಜೆಸಿಬಿ ಬಿಡುಗಡೆಗಾಗಿ 1.20 ಲಕ್ಷಕ್ಕೆ ಜಗದೀಶ್ ಬೇಡಿಕೆ ಇಟ್ಟಿದ್ದರು. ಬಾಚೀಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣ ಮಾಡುವ ವೇಳೆ ಜೆಸಿಬಿ ಸೀಜ್‌ ಮಾಡಿ, ಎಫ್‌ಐಆರ್ ದಾಖಲಿಸಲಾಗಿತ್ತು. ಆರ್‌ಎಫ್‌ಒ ವಿರುದ್ಧ ಅಧಿಕಾರ ದುರ್ಬಳಕೆ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ

ಹುಬ್ಬಳ್ಳಿ: ಲಂಚ ಪಡೆಯುತ್ತಿದ್ದ ವೇಳೆ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರ ಪಿಂಚಣಿಗೆ ಸಂಬಂಧಿಸಿ ಲಂಚ ಪಡೆಯುವ ವೇಳೆ ಬಿಇಒ ಸಿಕ್ಕಿಬಿದ್ದಿದ್ದಾರೆ.

ಬಿಇಒ ವಿದ್ಯಾ ಕುಂದರಗಿ ಆರೋಪಿ. 8 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಿಇಒ ಸಿಕ್ಕಿಬಿದ್ದಿದ್ದಾರೆ. ಮೊದಲು ಹಣ ಕೊಡಲು ನಿವೃತ್ತ ಶಿಕ್ಷಕ ನಿರಾಕರಿಸಿದ್ದಾರೆ. ಆದರೆ, ಕಡತಕ್ಕೆ ಸಹಿ ಮಾಡದೆ ಸತಾಯಿಸಿದ ಹಿನ್ನೆಲೆಯಲ್ಲಿ ಕೊನೆಗೆ ನಿವೃತ್ತ ಶಿಕ್ಷಕ ಲೋಕಾಯುಕ್ತ ಮೊರೆ ಹೋಗಿದ್ದರು.

ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಧಾರವಾಡ ಜಿಲ್ಲೆಯ ಕುಂದಗೋಳ ಬಿಇಒ ವಿದ್ಯಾ ಕುಂದರಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

ಪ್ರೇಯಸಿಯನ್ನು ಕೊಂದು, ಆಕೆಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟ ಯುವಕ

ತಮಿಳುನಾಡಿನಲ್ಲಿ 20 ವರ್ಷದ ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಆಕೆಯ ಶವದ ಫೊಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ ಮಾಡಿ ವಿಕೃತಿ ಮೆರೆದಿದ್ದಾನೆ.

VISTARANEWS.COM


on

Man Kills Girlfriend
Koo

ಚೆನ್ನೈ: ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ, ಮನೆಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮಗಳು ನಡೆದಾಗ, ತುಂಬ ದಿನಗಳ ಬಳಿಕ ಗೆಳೆಯ ಅಥವಾ ಗೆಳತಿ ಸಿಕ್ಕಾಗ, ಗೆಳೆಯ, ಗೆಳತಿ ಸೇರಿ ಆತ್ಮೀಯರ ಬರ್ತ್‌ಡೇ ಇದ್ದಾಗ ಅವರ ಫೋಟೊಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ (WhatsApp Status) ಮಾಡುತ್ತೇವೆ. ವಿಶೇಷ ತಿನಿಸು ತಿಂದ ಖುಷಿಯನ್ನೂ ವಾಟ್ಸ್‌ಆ್ಯಪ್ ಸ್ಟೇಟಸ್‌ ಮೂಲಕ ಹಂಚಿಕೊಳ್ಳುವವರು ಇದ್ದಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ವ್ಯಕ್ತಿಯೊಬ್ಬ, ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ಶವದ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.

ಹೌದು, ತಮಿಳುನಾಡಿನ ಚೆನ್ನೈನಲ್ಲಿ 20 ವರ್ಷದ ಆಶಿಕ್‌ ಎಂಬ ಯುವಕನು ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಹೋಟೆಲ್‌ನಲ್ಲಿ ಆಕೆಯನ್ನು ಕೊಂದ ಬಳಿಕ, ಶವದ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟಿದ್ದಾನೆ. ಯುವತಿಯ ಗೆಳೆತಿಯರು ವಾಟ್ಸ್‌ಆ್ಯಪ್ ಸ್ಟೇಟಸ್‌ ನೋಡಿ, ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಆಶಿಕ್‌ನನ್ನು ಬಂಧಿಸಿದ್ದಾರೆ.

Accident

ಹೋಟೆಲ್‌ನಲ್ಲಿ ನಡೆದಿದ್ದೇನು?

ದ್ವಿತೀಯ ವರ್ಷದ ನರ್ಸಿಂಗ್‌ ಅಧ್ಯಯನ ಮಾಡುತ್ತಿರುವ ಯುವತಿ ಹಾಗೂ ಆಶಿಕ್‌ ಕೆಲ ತಿಂಗಳಿಂದ ಪ್ರೀತಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಕಾಲೇಜಿಗೆ ಹೋಗದ ಯುವತಿಯು ಆಶಿಕ್‌ ಜತೆ ಹೋಟೆಲ್‌ನಲ್ಲಿ ತಂಗಿದ್ದಳು. ಯುವತಿಯ ಗೆಳತಿಯರು ಗಾಬರಿಗೊಂಡು ಪರಿಶೀಲಿಸಿದಾಗ, ಆಕೆ ಆಶಿಕ್‌ ಜತೆ ಚೆನ್ನೈ ಹೋಟೆಲ್‌ನಲ್ಲಿರುವುದು ಗೊತ್ತಾಗಿತ್ತು. ಬಾಯ್‌ಫ್ರೆಂಡ್‌ ಜತೆ ಇದ್ದಾಳೆ ಎಂದು ಅವರೂ ಸುಮ್ಮನಾಗಿದ್ದರು. ಆದರೆ, ಆಶಿಕ್‌ ಹೋಟೆಲ್‌ನಲ್ಲಿ ಯುವತಿಯನ್ನು ಕೊಲೆ ಮಾಡಿದ್ದಾನೆ. ಯಾವಾಗ ಯುವತಿಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಕಾಣಿಸಿತೋ, ಯುವತಿಯರು ಗಾಬರಿಗೊಂಡಿದ್ದಾರೆ.

ಇದನ್ನೂ ಓದಿ: Murder Case : ಪ್ರೇಯಸಿಯ ಕತ್ತು ಸೀಳಿದ ಪ್ರೇಮಿ; 4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

ಆಶಿಕ್‌ ಹೇಳುವುದೇನು?

ಹೋಟೆಲ್‌ನಲ್ಲಿ ಯುವತಿ ಜತೆ ಜಗಳ ನಡೆದಿದ್ದು, ಕೋಪದಲ್ಲಿ ಕೊಲೆ ಮಾಡಿದೆ ಎಂಬುದಾಗಿ ಬಂಧಿತ ಆಶಿಕ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. “ನಾನು ಬೇರೊಂದು ಯುವತಿ ಜತೆ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಆಕೆ ಆರೋಪಿಸಿದಳು. ಇದೇ ವೇಳೆ ಇಬ್ಬರ ಮಧ್ಯೆ ಜಗಳ ನಡೆಯಿತು. ಆಗ ನಾನು ಟಿ ಶರ್ಟ್‌ನಿಂದ ಆಕೆಯ ಕತ್ತು ಹಿಸುಕಿದೆ” ಎಂಬುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Pro Pak Slogan: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಇಬ್ಬರ ಬಂಧನ

Pro Pak Slogan: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ವೇಳೆ ಪಾಕ್‌ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

VISTARANEWS.COM


on

Pro Pak Slogans
Koo

ಬೆಂಗಳೂರು: ʼಪಾಕಿಸ್ತಾನ ಜಿಂದಾಬಾದ್ʼ ಘೋಷಣೆ (Pro Pak Slogan) ಕೂಗಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಜೆಪಿ ನಗರದ ಪಬ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ವೇಳೆ ಪಾಕ್‌ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಗುರಪ್ಪನಪಾಳ್ಯ ನಿವಾಸಿಗಳಾದ ಇನಾಯತ್ ಉಲ್ಲಾಖಾನ್, ಸೈಯದ್ ಮುಬಾರಕ್ ಬಂಧಿತ ಆರೋಪಿಗಳು. ಜೆ.ಪಿ. ನಗರ ಮೊದಲನೇ ಹಂತದಲ್ಲಿರುವ ಮೋಖಹಾಲಿಕ್ ಪಬ್‌ನಲ್ಲಿ‌ ಭಾರತ ಮತ್ತು ಆಸ್ಟ್ರೇಲಿಯಾ ಮ್ಯಾಚ್‌ ವೀಕ್ಷಿಸುತ್ತಿದ್ದಾಗ ಆರೋಪಿಗಳು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ. ಇದಕ್ಕೆ ಅಲ್ಲಿದ್ದ ಕೆಲವರು ಆಕ್ಷೇಪಿಸಿದ್ದಾರೆ. ಆದರೂ ಅವರು ಕೂಗಾಡಿದ್ದಾರೆ. ಹೀಗಾಗಿ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಜೆ.ಪಿ ನಗರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ಯಪಾನದ ನಶೆಯಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದೇವೆ ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಇದನ್ನೂ ಓದಿ | Murder case : ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

ನಕಲಿ ನೋಟು ಜಾಲದ ಮೇಲೆ NIA ದಾಳಿ; ಬಳ್ಳಾರಿಯಲ್ಲಿ ಒಬ್ಬ ಅರೆಸ್ಟ್‌

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ತನಿಖಾ ದಳವು (National Investigation Agency) ನಕಲಿ ನೋಟು (Fake Currency) ಜಾಲದ ಮೇಲೆ ಮುಗಿಬಿದ್ದಿದೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ (NIA Raid) ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ (One arrested in Ballary) ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

ನಾಲ್ಕು ರಾಜ್ಯಗಳಲ್ಲಿ ಏನೇನು ಸಿಕ್ಕಿದೆ, ಎಷ್ಟು ಜನ ಬಂಧನ?

ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಲ್ಲಿ ದಾಳಿಯನ್ನು ಸಂಘಟಿಸಿತ್ತು. ನಕಲಿ ನೋಟುಗಳ ಮುದ್ರಣದ ಸ್ಪಷ್ಟ ಸುಳಿವನ್ನು ಪಡೆದೇ ಈ ದಾಳಿ ನಡೆದಿದ್ದು ಆರೋಪಿಗಳು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗಡಿಯಾಚೆಯಿಂದ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತಿರುವ ಬಗ್ಗೆ ಸಂಶಯ ಮೂಡಿತ್ತು. ಈ ನಿಟ್ಟಿನಲ್ಲಿ ನವೆಂಬರ್‌ 24ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ ಆಳ ತನಿಖೆಗೆ ಇಳಿದ ಸಂಸ್ಥೆಗೆ ದೇಶದೊಳಗಿನ ದುಷ್ಟ ಪ್ರಯೋಗಗಳ ಸುಳಿವುಗಳು ಸಿಕ್ಕವು.

ಸಾಕಷ್ಟು ಅಧ್ಯಯನದ ಬಳಿಕ ಎನ್‌ಐಎ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್‌ ತಾನಾಜಿ ಪಾಟೀಲ್‌ ಅಲಿಯಾಸ್‌ ಜಾವೇದ್‌, ಉತ್ತರ ಪ್ರದೇಶದ ಶಹಜಹಾನ್‌ ಪುರ ಜಿಲ್ಲೆಯ ವಿವೇಕ್‌ ಠಾಕೂರ್‌ ಅಲಿಯಾಸ್‌ ಆದಿತ್ಯ ಸಿಂಗ್‌ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್‌ ಎಂಬವರ ಮೇಲೆ ಕಣ್ಣಿಟ್ಟಿತ್ತು ಮತ್ತು ಶನಿವಾರ ದಾಳಿ ಮಾಡಿ ಅವರನ್ನು ಬಂಧಿಸಿತು.

ಇದನ್ನೂ ಓದಿ | Road Accident : ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!

ಇದಲ್ಲದೆ ಬಿಹಾರ ಜಿಲ್ಲೆಯ ರೋಹ್ತಾಸ್‌ ಜಿಲ್ಲೆಯ ಶಶಿಭೂಷಣ್‌, ಮಹಾರಾಷ್ಟ್ರದ ಯಾವತ್ಮಲ್‌ ಜಿಲ್ಲೆಯ ಶಿವ ಪಾಟೀಲ್‌ ಅಲಿಯಾಸ್‌ ಭೀಮರಾವ್‌ ಅವರ ಮನೆಗಳಿಗೂ ದಾಳಿ ಮಾಡಲಾಗಿದೆ.

ವಿವೇಕ್‌ ಠಾಕೂರ್‌ ಮನೆಯಿಂದ 6600 ಮುಖ ಬೆಲೆಯ ಕರೆನ್ಸಿ, ಪ್ರಿಂಟಿಂಗ್‌ ಪೇಪರ್‌ ವಶಪಡಿಸಿಕೊಳ್ಳಲಾಗಿದೆ. ಠಾಕೂರ್‌ ಮತ್ತು ಪಾಟೀಲ್‌ ಗಡಿಯಾಚೆಯಿಂದಲೂ ಕರೆನ್ಸಿಗಳನ್ನು ತರಿಸಿಕೊಂಡು ಇಲ್ಲಿ ಪ್ರಸರಣ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Fake Currency : ನಕಲಿ ನೋಟು ಜಾಲದ ಮೇಲೆ NIA ದಾಳಿ; ಬಳ್ಳಾರಿಯಲ್ಲಿ ಒಬ್ಬ ಅರೆಸ್ಟ್‌

Fake Currency : ರಾಷ್ಟ್ರದ ನಾಲ್ಕು ರಾಜ್ಯದಲ್ಲಿ ಎನ್‌ಐಎ ದಾಳಿ ಮಾಡಿ ನಕಲಿ ನೋಟು ಜಾಲದ ಐವರನ್ನು ಬಂಧಿಸಿದೆ. ಅದರಲ್ಲಿ ಬಳ್ಳಾರಿಯ ಮಹೀಂದ್ರಾ ಕೂಡಾ ಒಬ್ಬ.

VISTARANEWS.COM


on

Fake Currency NIA
Koo

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ತನಿಖಾ ದಳವು (National Investigation Agency) ನಕಲಿ ನೋಟು (Fake Currency) ಜಾಲದ ಮೇಲೆ ಮುಗಿಬಿದ್ದಿದೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ (NIA Raid) ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ (One arrested in Ballary) ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

ನಾಲ್ಕು ರಾಜ್ಯಗಳಲ್ಲಿ ಏನೇನು ಸಿಕ್ಕಿದೆ, ಎಷ್ಟು ಜನ ಬಂಧನ?

ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಲ್ಲಿ ದಾಳಿಯನ್ನು ಸಂಘಟಿಸಿತ್ತು. ನಕಲಿ ನೋಟುಗಳ ಮುದ್ರಣದ ಸ್ಪಷ್ಟ ಸುಳಿವನ್ನು ಪಡೆದೇ ಈ ದಾಳಿ ನಡೆದಿದ್ದು ಆರೋಪಿಗಳು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗಡಿಯಾಚೆಯಿಂದ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತಿರುವ ಬಗ್ಗೆ ಸಂಶಯ ಮೂಡಿತ್ತು. ಈ ನಿಟ್ಟಿನಲ್ಲಿ ನವೆಂಬರ್‌ 24ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ ಆಳ ತನಿಖೆಗೆ ಇಳಿದ ಸಂಸ್ಥೆಗೆ ದೇಶದೊಳಗಿನ ದುಷ್ಟ ಪ್ರಯೋಗಗಳ ಸುಳಿವುಗಳು ಸಿಕ್ಕವು.

ಸಾಕಷ್ಟು ಅಧ್ಯಯನದ ಬಳಿಕ ಎನ್‌ಐಎ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್‌ ತಾನಾಜಿ ಪಾಟೀಲ್‌ ಅಲಿಯಾಸ್‌ ಜಾವೇದ್‌, ಉತ್ತರ ಪ್ರದೇಶದ ಶಹಜಹಾನ್‌ ಪುರ ಜಿಲ್ಲೆಯ ವಿವೇಕ್‌ ಠಾಕೂರ್‌ ಅಲಿಯಾಸ್‌ ಆದಿತ್ಯ ಸಿಂಗ್‌ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್‌ ಎಂಬವರ ಮೇಲೆ ಕಣ್ಣಿಟ್ಟಿತ್ತು ಮತ್ತು ಶನಿವಾರ ದಾಳಿ ಮಾಡಿ ಅವರನ್ನು ಬಂಧಿಸಿತು.

ಇದಲ್ಲದೆ ಬಿಹಾರ ಜಿಲ್ಲೆಯ ರೋಹ್ತಾಸ್‌ ಜಿಲ್ಲೆಯ ಶಶಿಭೂಷಣ್‌, ಮಹಾರಾಷ್ಟ್ರದ ಯಾವತ್ಮಲ್‌ ಜಿಲ್ಲೆಯ ಶಿವ ಪಾಟೀಲ್‌ ಅಲಿಯಾಸ್‌ ಭೀಮರಾವ್‌ ಅವರ ಮನೆಗಳಿಗೂ ದಾಳಿ ಮಾಡಲಾಗಿದೆ.

ವಿವೇಕ್‌ ಠಾಕೂರ್‌ ಮನೆಯಿಂದ 6600 ಮುಖ ಬೆಲೆಯ ಕರೆನ್ಸಿ, ಪ್ರಿಂಟಿಂಗ್‌ ಪೇಪರ್‌ ವಶಪಡಿಸಿಕೊಳ್ಳಲಾಗಿದೆ. ಠಾಕೂರ್‌ ಮತ್ತು ಪಾಟೀಲ್‌ ಗಡಿಯಾಚೆಯಿಂದಲೂ ಕರೆನ್ಸಿಗಳನ್ನು ತರಿಸಿಕೊಂಡು ಇಲ್ಲಿ ಪ್ರಸರಣ ಮಾಡುತ್ತಿದ್ದರು ಎನ್ನಲಾಗಿದೆ.

Continue Reading
Advertisement
Narendra Modi And Rahul Gandhi
ದೇಶ24 mins ago

Election Results 2023: ವಿಧಾನಸಭೆ ಚುನಾವಣೆಗಳು ಲೋಕಸಭೆಯ ಸೆಮಿಫೈನಲ್‌ ಏಕೆ?

Rain disrupted for two more days
ಉಡುಪಿ44 mins ago

Karnataka Weather: ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮಳೆಯಾಟ!

Healthy relationship
ಅಂಕಣ49 mins ago

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Exit Poll_Vist
ದೇಶ1 hour ago

Assembly Election Result 2023: ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು?

Assembly Election Results 2023 Live
ದೇಶ1 hour ago

Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

Girl Child
ಕರ್ನಾಟಕ2 hours ago

ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News8 hours ago

Election Results 2023 Live: ಕೆಲವೇ ಕ್ಷಣಗಳಲ್ಲಿ 4 ರಾಜ್ಯಗಳ ಚುನಾವಣೆ ಫಲಿತಾಂಶ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ8 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ14 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌