ಕ್ರೈಂ
Cyber Fraud: ಜಾಲತಾಣದಲ್ಲಿ ವ್ಯಕ್ತಿ ಪರಿಚಯ, ಆತನ ನಂಬಿದ ಮಹಿಳೆ ಬ್ಯಾಂಕ್ ಖಾತೆಯಿಂದ 12 ಲಕ್ಷ ರೂ. ಮಾಯ
Cyber Fraud: ಮಹಾರಾಷ್ಟ್ರದ ಥಾಣೆ ನಗರದಲ್ಲಿ ವಾಸಿಸುವ ಮಹಿಳೆಯು ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ವಂಚನೆ ಕುರಿತು ಮಹಿಳೆಯು ದೂರು ನೀಡಿದ್ದಾರೆ.
ಮುಂಬೈ: ಆನ್‌ಲೈನ್ ಜಗತ್ತಿನಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ವಂಚನೆ (Cyber Fraud) ಪ್ರಕರಣಗಳು ಮಿತಿಮೀರಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವವರು, ಆಮಿಷವೊಡ್ಡಿ ಒಟಿಪಿ ಕೇಳಿದರೆ ಕೊಡುವವರು ಸೇರಿ ಹಲವು ರೀತಿಯ ಜನರು ಹಣ ಕಳೆದುಕೊಳ್ಳುವವರಿದ್ದಾರೆ. ಈ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ಜನ ಮೋಸ ಹೋಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ 36 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಥಾಣೆ ನಗರದಲ್ಲಿ ಮಹಿಳೆಯೊಬ್ಬರಿಗೆ ಕಳೆದ ನವೆಂಬರ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿದ ಮಹಿಳೆಯು ಹಣ ಕಳೆದುಕೊಂಡಿದ್ದಾರೆ. ಮಹಿಳೆಗೆ 12.47 ಲಕ್ಷ ರೂಪಾಯಿ ವಂಚನೆಯಾಗಿದ್ದು, ಕಪೂರ್‌ಬಾವ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚನೆ ಜಾಲಕ್ಕೆ ಸಿಲುಕಿದ್ದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನು ಕಳೆದ ವರ್ಷದ ನವೆಂಬರ್‌ನಲ್ಲಿ ಮೆಸೇಜ್ ಮಾಡಿ, ಪರಿಚಯ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರ ಮಧ್ಯೆ ಸ್ನೇಹವುಂಟಾಗಿದೆ. ತಾನು ಮಲೇಷ್ಯಾದವನು, ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ. ಕೆಲವು ದಿನಗಳ ಬಳಿಕ ನಿಮಗೆ ಉಡುಗೊರೆಯೊಂದನ್ನು ಕಳುಹಿಸಿದ್ದೇನೆ ಎಂದು ಮಹಿಳೆಗೆ ತಿಳಿಸಿದ್ದಾನೆ. ಹಾಗೆಯೇ, ಉಡುಗೊರೆಯಲ್ಲಿ ಒಂದಷ್ಟು ಡಾಲರ್ ಇದೆ ಎಂಬುದಾಗಿಯೂ ಹೇಳಿದ್ದಾನೆ.
ವ್ಯಕ್ತಿ ಕಳುಹಿಸಿದ ಉಡುಗೊರೆ ಸ್ವೀಕರಿಸಲು ಉತ್ಸುಕಳಾಗಿದ್ದ ಮಹಿಳೆಗೆ ದೆಹಲಿಯ ಕಸ್ಟಮ್ಸ್ ಇಲಾಖೆಯಿಂದ ಮಾತನಾಡುತ್ತಿದ್ದೇನೆ ಎಂದು ಯುವತಿಯೊಬ್ಬಳು ಕರೆ ಮಾಡಿದ್ದಾಳೆ. ವಿದೇಶದಿಂದ ಉಡುಗೊರೆ ಬಂದಿರುವ ಕಾರಣ ಕಸ್ಟಮ್ಸ್ ಶುಲ್ಕ ನೀಡಬೇಕು ಎಂದು ಹೇಳಿದ್ದಾಳೆ. ಇದನ್ನು ನಂಬಿದ ಮಹಿಳೆಯು ಕರೆ ಮಾಡಿದ ಯುವತಿಗೆ ಹಲವು ಬಾರಿ ಹಣ ಕಳುಹಿಸಿದ್ದಾಳೆ.
ಇದನ್ನೂ ಓದಿ: Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ
ಹೀಗೆ ಮಹಿಳೆಯು ಪದೇಪದೆ ಹಣ ಕಳುಹಿಸಿದರೂ ಉಡುಗೊರೆ ಬಂದಿಲ್ಲ. ಬಳಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿ ಹಾಗೂ ಕಸ್ಟಮ್ಸ್ ಇಲಾಖೆಯಿಂದ ಕರೆ ಮಾಡಿದ್ದೇನೆ ಎಂಬುದಾಗಿ ಹೇಳಿದವರಿಗೆ ಕಾಲ್ ಮಾಡಿದ್ದಾಳೆ. ಆಗ ಇಬ್ಬರ ಮೊಬೈಲ್‌ಗೂ ಕರೆ ಹೋಗಿಲ್ಲ. ಇದಾದ ಬಳಿಕವೇ ಮಹಿಳೆಗೆ ತಾನು ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಮಹಿಳೆಯ ಬ್ಯಾಂಕ್ ಖಾತೆಯಿಂದ 12.47 ಲಕ್ಷ ರೂ. ಮಾಯವಾಗಿತ್ತು. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆನ್‌ಲೈನ್ ವಂಚನೆ ಬಗ್ಗೆ ಇರಲಿ ಜಾಗೃತಿ
ಈಗ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್‌ಗಳಿವೆ. ಬಹುತೇಕ ಜನ ಆನ್‌ಲೈನ್ ವಹಿವಾಟು ನಡೆಸುತ್ತಾರೆ. ಹಾಗಾಗಿ, ಆನ್‌ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತವೆ. ಇದರಿಂದಾಗಿ, ಜನ ಯಾವುದೇ ಕಾರಣಕ್ಕೂ ಮೊಬೈಲ್ ಕರೆ ಮಾಡಿ, ಮೆಸೇಜ್ ಮಾಡಿ ಒಟಿಪಿ ಕೇಳಿದರೆ ಕೊಡಬಾರದು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರನ್ನು ನಂಬಬಾರದು. ಉಡುಗೊರೆ ಬಂದಿದೆ, ಕಸ್ಟಮ್ಸ್ ಸುಂಕ ಕೊಡಿ ಎಂಬುದು ಸೇರಿ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು.
ಕರ್ನಾಟಕ
Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ
ಎಂಟು ವರ್ಷದ ಬಾಲಕನೊಬ್ಬನ ಶವ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ (Mysterious death). ಯಾರೋ ದುಷ್ಕರ್ಮಿಗಳು ಕೊಂದು ಎಸೆದಿರುವ ಶಂಕೆ ಇದೆ.
ಹುಬ್ಬಳ್ಳಿ: ಇಲ್ಲಿನ ದೊಡ್ಡ ಮನಿ ಕಾಲೊನಿಯ ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದು, ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆತನನ್ನು ಕೊಲೆ ಮಾಡಿ ಎಸೆದಿರುವ (Mysterious death) ಸಂಶಯವಿದೆ.
ನದೀಮ್ ಹಸನಸಾಬ್ ಹುಬ್ಬಳ್ಳಿ (8) ಮೃತ ಬಾಲಕ. ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಈ ಹುಡುಗನಿಗಾಗಿ ಎಲ್ಲ ಕಡೆ ಹುಡುಕಾಟ ನಡೆದಿತ್ತು. ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಎಲ್ಲೂ ಆತ ಪತ್ತೆಯಾಗಿರಲಿಲ್ಲ.
ಶುಕ್ರವಾಗ ಕುರುಚಲು ಗಿಡಗಳಿರುವ ನಿರ್ಜನ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗನಿಗೆ ಶಾಲೆಗೆ ರಜೆ ಸಿಕ್ಕಿದೆ. ಹೀಗಾಗಿ ಆತ ಘಂಟಿಕೇರಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ಸಂಜೆಯವರೆಗೂ ಆಟವಾಡುತ್ತಿದ್ದ ಆತ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಶುಕ್ರವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದೊಡ್ಡಮನಿ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದಿರುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆಯಾದರೂ ಇಷ್ಟು ಸಣ್ಣ ಹುಡುಗನನ್ನು ಯಾಕೆ ಕೊಲೆ ಮಾಡಿದರು ಎಂಬ ಸಂಶಯವಿದೆ. ಕುಟುಂಬದ ವಿವರಗಳು, ಈ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಹಂತಕರನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಕಾಂತಾರ’ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ! ದೂರು ದಾಖಲು
ಬೆಂಗಳೂರು: ʼಕಾಂತಾರʼ ಚಲನಚಿತ್ರದ ದೃಶ್ಯವೊಂದು ಕೊಲೆ ಬೆದರಿಕೆಗೆ ಬಳಕೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಜಮೀನು ವ್ಯಾಜ್ಯ ಸಂಬಂಧ ಹಿರಿಯ ನಾಗರಿಕರೊಬ್ಬರಿಗೆ ಹೀಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಕುಣಿಗಲ್‌ನಲ್ಲಿ ನರಸಿಂಹಮೂರ್ತಿ ಎಂಬ ಹಿರಿಯ ನಾಗರಿಕರಿಗೆ ಶರತ್ ಕುಮಾರ್ ಎಂಬಾತ ಹೀಗೆ ಹತ್ಯೆ ಬೆದರಿಕೆ ಒಡ್ಡಿದ್ದಾನೆ. ಕುಣಿಗಲ್‌ನಲ್ಲಿ ಪತ್ನಿ ಹೆಸರಿನಲ್ಲಿ ನರಸಿಂಹ ಮೂರ್ತಿ ಎರಡು ಎಕರೆ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಕುರಿತು ಶರತ್ ಕುಮಾರ್ ಎಂಬಾತ ತಗಾದೆ ತೆಗೆದಿದ್ದ. ಜಮೀನಿಗೆ ಈತ ಅತಿಕ್ರಮ ಪ್ರವೇಶ ಮಾಡಿದ್ದಾನೆ ಎಂದು ಈ ಹಿಂದೆ ನರಸಿಂಹಮೂರ್ತಿ ದೂರು ನೀಡಿದ್ದರು. ಸದ್ಯ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶರತ್ ಕುಮಾರ್ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ವಾಟ್ಸ್ಯಾಪ್ ಮೂಲಕ ʼಕಾಂತಾರʼ ಚಿತ್ರದ ದೃಶ್ಯಗಳನ್ನು ಕಳಿಸಿ ಇದೇ ರೀತಿ ಸಾಯ್ತೀಯ ಎಂದು ಬೆದರಿಕೆ ಹಾಕಿದ್ದಾನೆ ಎಂದು ನರಸಿಂಹಮೂರ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮೃತರು ಮೈಸೂರಿನವರು
ಕರ್ನಾಟಕ
Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್ ಸಿಲಿಂಡರ್ ಲೀಕ್ ಆಗಿ 7 ಕಾರ್ಮಿಕರ ದಾರುಣ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಡಹಳ್ಳಿಯಲ್ಲಿ ವಾರದ ಹಿಂದೆ ಸಂಭವಿಸಿದ ಗ್ಯಾಸ್ ಲೀಕೇಜ್ ಪ್ರಕರಣದಲ್ಲಿ ಗಾಯಗೊಂಡಿದ್ದವರು ದಿನಕ್ಕೊಬ್ಬರಂತೆ ಸಾಯುತ್ತಿದ್ದು, ಈಗ ಸಾವಿನ ಸಂಖ್ಯೆ ಏಳಕ್ಕೇರಿದೆ.
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಳೆದ ಭಾನುವಾರ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸೋರಿಕೆ (Fire tragedy) ಪ್ರಕರಣವೊಂದು ಏಳು ಮಂದಿಯ ಪ್ರಾಣವನ್ನೇ ಕಸಿದಿದೆ. ಸಾವನ್ನಪ್ಪಿದವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರಾಗಿರುವುದರಿಂದ ಆರು ದಿನಗಳ ಕಳೆದರೂ ಇದರ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ.
ಹೊಸಕೋಟೆ ತಾಲೂಕಿನ ಮೇಡಹಳ್ಳಿಯಲ್ಲಿ ಕಳೆದ ಭಾನುವಾರ ಶೆಡ್ ಒಂದರಲ್ಲಿ ರಾತ್ರಿ ಅನಿಲ ಸೋರಿಕೆ ಆಗಿದ್ದು, ರಾತ್ರಿ ಯಾರೋ ಕರೆಂಟ್ ಹಾಕಿದಾಗ ಬೆಂಕಿ ಹತ್ತಿಕೊಂಡು ಎಂಟು ಮಂದಿಗೆ ಬೆಂಕಿಯ ಗಾಯಗಳಾಗಿದ್ದವು. ಆರಂಭಿಕ ಹಂತದಲ್ಲಿ ಇದೇನೂ ತುಂಬ ದೊಡ್ಡ ಅವಘಡದಂತೆ ಕಾಣಿಸಿರಲಿಲ್ಲ. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಒಬ್ಬೊಬ್ಬರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಈಗ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರನ್ನು ಕರೆದುಕೊಂಡು ಬಂದು ಇಲ್ಲಿ ಕಾಮಗಾರಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಒಂದು ಶೆಡ್‌ನಲ್ಲಿ ವಾಸವಾಗಿರಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿಯೂ ಈ ಕಾರ್ಮಿಕರು ಮೇಡಹಳ್ಳಿಯ ಅಂತಹುದೇ ಒಂದು ಶೆಡ್‌ನಲ್ಲಿ ಮಲಗಿದ್ದರು. ಹೊರಗಡೆ ಊಟ ಮಾಡಿಕೊಂಡು ಬಂದು ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಯಾವುದೋ ಕಾರಣದಿಂದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು.
ನಡುವೆ ರಾತ್ರಿ ಯಾರೋ ಲೈಟ್ ಆನ್ ಮಾಡಿದಾಗ ಸೋರಿಕೆಯಾದ ಅನಿಲದಿಂದಾಗಿ ಬೆಂಕಿ ಹತ್ತಿಕೊಂಡಿತ್ತು. ಇದರಿಂದ ಮಲಗಿದ್ದವರಿಗೆಲ್ಲ ಸುಟ್ಟ ಗಾಯಗಳಾಗಿತ್ತು. ಅವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಆರೋಗ್ಯವಾಗಿದ್ದಾರೆ ಎಂಬಂತೆ ಕಂಡುಬಂದ ಇವರ ದೇಹದ ಒಳಗೆ ಬೆಂದ ಗಾಯಗಳು ಘಾಸಿಗೊಳಿಸಿತ್ತು. ಹೀಗಾಗಿ ದಿನ ಕಳೆದಂತೆ ಒಬ್ಬೊಬ್ಬರೇ ಪ್ರಾಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಶುಕ್ರವಾರ ಏಳನೇ ಸಾವು ಸಂಭವಿಸಿದೆ.
ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಮೃತ ಕಾರ್ಮಿಕರು. ಈ ಘಟನೆಗೆ ಸಂಬಂಧಿಸಿ ಅರವಿಂದ ಗುಪ್ತಾ, ಮತ್ತು ಬಾಸ್ಕರ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಿಂದ, ಬಿಹಾರದಿಂದ ಕಾರ್ಮಿಕರನ್ನು ಕರೆತರುವ ಲೇಬರ್ ಕಂಟ್ರಾಕ್ಟರ್‌ಗಳು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕೆಲಸಕ್ಕಾಗಿ ಕರೆತಂದು ಸೂಕ್ತ ಮೂಲ ಸೌಕರ್ಯ ನೀಡದ ಕಾರಣ ಅವಘಡ ಸಂಭವಿಸಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು
ಕ್ರೈಂ
Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ
ಸೇನಾ ನಿವೃತ್ತ ಅಧಿಕಾರಿಗೆ ಮೊದಲು ಮಹಿಳೆಯೊಬ್ಬಳು ಟೆಕ್ಸ್ಟ್ ಮೆಸೇಜ್ ಮಾಡಿದ್ದಾಳೆ. ಅದರಲ್ಲಿ ಅವಳು ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಅದರೊಂದಿಗೆ ಆಕೆ ತಾನು ಥೈಲ್ಯಾಂಡ್ನವಳು ಎಂಬ ವಿವರಣೆ ಕೊಟ್ಟಿದ್ದು, ಜತೆಗೊಂದು ಲಿಂಕ್ ಕಳಿಸಿದ್ದಾಳೆ. ಆ ಲಿಂಕ್ನ್ನು ಯಾವಾಗ ಸೇನಾ ನಿವೃತ್ತ ಅಧಿಕಾರಿ ಕ್ಲಿಕ್ ಮಾಡಿದರೋ, ಆಗಲೇ ಅವರು ವಂಚಕರ ಬಲೆಗೆ ಬಿದ್ದರು!
ಪುಣೆ: ಮಹಾರಾಷ್ಟ್ರದ ಪುಣೆಯ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಆನ್‌ಲೈನ್ ವಂಚನೆ ಜಾಲದಲ್ಲಿ ಸಿಲುಕಿ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘Money For Likes’ ಸ್ಕ್ಯಾಮ್ ಎಂಬ ಹೊಸಬಗೆಯ ಸೈಬರ್ ವಂಚನೆಗೆ ಒಳಗಾಗಿ ಅವರು 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ನಿವೃತ್ತ ಸೇನಾ ಅಧಿಕಾರಿ ಕೊಟ್ಟ ದೂರನ್ನು ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿ ಈಗ ತನಿಖೆ ನಡೆಸುತ್ತಿದ್ದಾರೆ.
ಲೈಕ್ಸ್ಗಾಗಿ ಹಣ ಎಂಬುದು ಒಂದು ಹೊಸ ಮಾದರಿಯ ಸೈಬರ್ ವಂಚನೆಯಾಗಿದೆ. ಯೂಟ್ಯೂಬ್, ವಾಟ್ಸ್ಆ್ಯಪ್, ಲಿಂಕ್ಡ್ ಇನ್ ಗಳಲ್ಲೆಲ್ಲ ಈ ಜಾಲ ಹಬ್ಬಿದೆ. ‘ನೀವು ನಮ್ಮ ಪೋಸ್ಟ್/ವಿಡಿಯೊಗಳಿಗೆ ಲೈಕ್ಸ್ ಕೊಟ್ಟರೆ, ನಾವದಕ್ಕೆ ಹಣ ಕೊಡುತ್ತೇವೆ’ ಎಂದು ಇವರ ಮಾತು ಶುರುವಾಗುತ್ತದೆ. ಒಂದು ಲೈಕ್ಸ್ಗೆ 50/100/150..ಹೀಗೆ ಇಂತಿಷ್ಟು ಎಂದು ಹಣ ಫಿಕ್ಸ್ ಮಾಡುತ್ತಾರೆ. ಬರುಬರುತ್ತ ಪ್ರೀಪೇಯ್ಡ್ ಟಾಸ್ಕ್ಗಾಗಿ ನೀವು ಇಷ್ಟು ಹಣವನ್ನು ನಮಗೆ ಮೊದಲು ಕೊಡಬೇಕು. ನಂತರ ಅದನ್ನೂ ಸೇರಿಸಿ, ನಿಮಗೆ ಹೆಚ್ಚಿನ ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಅದನ್ನು ನಂಬಿ, ಅವರು ಕೊಡುವ ಹಣಕ್ಕಾಗಿ ನೀವೇನಾದರೂ ಅವರ ವಿಡಿಯೊ/ಪೋಸ್ಟ್ಗಳಿಗೆ ಲೈಕ್ಸ್ ಬಟನ್ ಒತ್ತಲು ಶುರು ಮಾಡಿದಿರೋ, ನೀವು ವಂಚನೆಯ ಬಲೆಗೆ ಬಿದ್ದಿರಿ ಎಂದೇ ಅರ್ಥ. ಈ ನಿವೃತ್ತ ಸೇನಾ ಅಧಿಕಾರಿಗೆ ಆಗಿದ್ದೂ ಅದೇ.. 65 ವರ್ಷದ ಅವರು, ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಸೈಬರ್ ವಂಚಕರಿಗೆ ಸುರಿದಿದ್ದಾರೆ.
ಸೇನಾ ನಿವೃತ್ತ ಅಧಿಕಾರಿಗೆ ಮೊದಲು ಮಹಿಳೆಯೊಬ್ಬಳು ಟೆಕ್ಸ್ಟ್ ಮೆಸೇಜ್ ಮಾಡಿದ್ದಾಳೆ. ಅದರಲ್ಲಿ ಅವಳು ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಅದರೊಂದಿಗೆ ಆಕೆ ತಾನು ಥೈಲ್ಯಾಂಡ್ನವಳು ಎಂಬ ವಿವರಣೆ ಕೊಟ್ಟಿದ್ದು, ಜತೆಗೊಂದು ಲಿಂಕ್ ಕಳಿಸಿದ್ದಾಳೆ. ಈ ಲಿಂಕ್ ಓಪನ್ ಮಾಡಿ, ವಿಡಿಯೊಕ್ಕೆ ಲೈಕ್ ಕೊಟ್ಟರೆ ನಿಮಗೆ 50 ರೂಪಾಯಿ ಸಿಗುತ್ತದೆ ಎಂದು ಮೆಸೇಜ್ನಲ್ಲಿ ಒಕ್ಕಣೆ ಬರೆದಿತ್ತು. ಹಾಗೇ, ತನ್ನ ಪ್ರತಿ ವಿಡಿಯೊಕ್ಕೂ ಲೈಕ್ಸ್ ಕೊಡಿ, ನೀವು ಕೊಡುವ ಪ್ರತಿ ಲೈಕ್ಸ್ಗೂ ತಲಾ 50 ರೂಪಾಯಿ ನೀಡಲಾಗುವುದು. ನೀವು ವಿಡಿಯೊಕ್ಕೆ ಲೈಕ್ಸ್ ಕೊಟ್ಟ ಸ್ಕ್ರೀನ್ ಶಾಟ್, ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ವಿಳಾಸದ ವಿವರವನ್ನು ನನಗೆ ಕಳಿಸಿಕೊಡಿ ಎಂದೂ ಆ ಮೆಸೇಜ್ನಲ್ಲಿ ಬರೆಯಲಾಗಿತ್ತು. ಸೇನಾ ನಿವೃತ್ತ ಅಧಿಕಾರಿ ತಕ್ಷಣವೇ ಆ ಲಿಂಕ್ ಪ್ರೆಸ್ ಮಾಡಿ ಲೈಕ್ಸ್ ಕೊಟ್ಟರು. ಆಕೆ ಕೇಳಿದ್ದನ್ನೆಲ್ಲ ಕೊಟ್ಟರು. ಅವರಿಗೆ 150 ರೂಪಾಯಿ ಸ್ವಾಗತ ಇನಾಮು (Welcome Bonus) ಕೂಡ ಬಂತು. ಅಷ್ಟೇ ಅಲ್ಲ ಅವರು ಕೊಟ್ಟ ಫೋನ್ನಂಬರ್ನ್ನು Employee Trial Group ಎಂಬ ಮೆಸೆಂಜರ್ ಗ್ರೂಪ್ಗೆ ಸೇರಿಸಲಾಯಿತು. ಅಲ್ಲಿಗೆ ಅವರು ಸಂಪೂರ್ಣವಾಗಿ ನಂಬಿಬಿಟ್ಟರು ಮತ್ತು ಈ ಲೈಕ್ಸ್ ಜಾಲದ ಮತ್ತಷ್ಟು ಆಳಕ್ಕೆ ಹೋಗಲು ಶುರು ಮಾಡಿದರು.
ಇದನ್ನೂ ಓದಿ: Fraud Case: ಜಸ್ಟ್ ವಾಟ್ಸ್ಆ್ಯಪ್ ಕಾಲ್‌ನಲ್ಲೇ ಲಕ್ಷ ಲಕ್ಷ ಲೂಟಿ ಮಾಡಿದ ಸೈಬರ್ ಕಳ್ಳರು; ಏನಿದು ವಂಚನೆ ಕಹಾನಿ?
ವಂಚಕರು ಹೇಗಿದ್ದಾರೆಂದರೆ ಅವರು ತಮ್ಮ ಹೊಸ ‘ಗಿರಾಕಿ’ಯ ನಂಬಿಕೆ ಗಳಿಸಿಕೊಳ್ಳಲು ಖತರ್ನಾಕ್ ಐಡಿಯಾಗಳನ್ನು ಮಾಡಿದರು. Employee Trial Group ಎಂಬ ಗ್ರೂಪ್ಗೆ ಸೇನಾ ನಿವೃತ್ತ ಅಧಕಾರಿ ಸೇರುತ್ತಿದ್ದಂತೆ ಇನ್ನೂ ಹಲವರು ತಮ್ಮ ತಮ್ಮ ವಿಡಿಯೊಗಳ ಲಿಂಕ್ ಕಳಿಸಿ, ಲೈಕ್ ಕೊಡುವಂತೆ ಕೇಳತೊಡಗಿದರು. ಅದಾದ ಮೇಲೆ ಪ್ರೀಪೇಯ್ಡ್ಗಾಗಿ 1000 ರೂಪಾಯಿ ತುಂಬಿ, ಅದು ಮುಗಿದ ಬಳಿಕ 1480 ರೂಪಾಯಿ ವಾಪಸ್ ಕೊಡುತ್ತೇವೆ ಎಂದರು. ಅದಕ್ಕೊಪ್ಪಿ ಇವರು ಹಾಗೇ ಮಾಡಿದರು. ಹಣವೂ ಬಂತು. ಕೆಲ ದಿನಗಳ ಬಳಿಕ ನಿವೃತ್ತ ಸೇನಾಧಿಕಾರಿ ಬಳಿ 3000 ರೂಪಾಯಿ ಪಾವತಿಸಿಕೊಂಡು, 4000 ರೂಪಾಯಿ ಮರುಪಾವತಿ ಮಾಡಿದರು. ಅವರನ್ನು ವಿಐಪಿ ಗ್ರೂಪ್ಗೆ ಸೇರ್ಪಡೆಗೊಳಿಸಿದರು. ಇದೆಲ್ಲವನ್ನೂ ಅವರು ತಮ್ಮಿಂದ ವಂಚನೆಗೆ ಒಳಗಾಗುತ್ತಿರುವವರ ನಂಬಿಕೆ ಗಳಿಸಿಕೊಳ್ಳಲು ಮಾಡುತ್ತಿದ್ದರು. ಹೀಗೆ ತುಂಬ ದಿನ ಕಳೆಯಿತು.
ಒಂದು ದಿನ ಪ್ರೀಪೇಯ್ಡ್ಗಾಗಿ ದೊಡ್ಡಮೊತ್ತದ ಹಣವನ್ನು ವಂಚಕರು ಕೇಳಿದರು. ಇಷ್ಟು ದಿನ ಹಣ ವಾಪಸ್ ಬಂದಿತ್ತಲ್ಲ, ಸೇನಾ ನಿವೃತ್ತಾಧಿಕಾರಿ ಕಣ್ಮುಚ್ಚಿ ಅದನ್ನು ಪಾವತಿಸಿದರು. ಆದರೆ ನಂತರ ಅದನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಏನೋ ತಾಂತ್ರಿಕ ತೊಂದರೆಯ ನೆಪ ಹೇಳಿದ ವಂಚಕರು ಇನ್ನಷ್ಟು ಹಣ ಪಾವತಿ ಮಾಡುವಂತೆ ಹೇಳಿದರು. ಸುಮಾರು ಒಂದು ವಾರ ಅವರು ಹೀಗೇ ಮಾಡಿದರು. ಪ್ರತಿಸಲವೂ ಅವರು ಬೇರೆಬೇರೆ ಬ್ಯಾಂಕ್ ಅಕೌಂಟ್ ನಂಬರ್ ಕೊಡುತ್ತಿದ್ದರು. ಸೇನಾ ನಿವೃತ್ತಾಧಿಕಾರಿ ಒಂದು ವಾರದಲ್ಲಿ 13 ಬ್ಯಾಂಕ್ ಅಕೌಂಟ್ಗಳಿಗೆ 26 ಬಾರಿ ಹಣ ಹಾಕಿದ್ದಾರೆ. ಈ ಮೂಲಕ 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ತಮಗೆ ವಂಚನೆಯಾಗಿದೆ ಎಂದು ಅವರಿಗೆ ಅರ್ಥವಾಗುವಷ್ಟರಲ್ಲಿ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿದ್ದರು. ಇಷ್ಟೆಲ್ಲ ಆಗಿ, ಕಳೆದ ತಿಂಗಳು ಅಂದರೆ ಫೆಬ್ರವರಿ ಕೊನೆಯಲ್ಲಿ ಸೇನಾ ನಿವೃತ್ತ ಅಧಿಕಾರಿ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದಾರೆ.
ಕರ್ನಾಟಕ
Swameeji death : ಬಾಗಲಕೋಟೆ ಜಿಲ್ಲೆಯ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು ಲಿಂಗೈಕ್ಯ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಮಠಕ್ಕೆ ಸ್ವಾಮೀಜಿಗಳಾಗಿರುವ ಶಿವಲಿಂಗ ಸ್ವಾಮೀಜಿ (Swameeji death) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಪ್ರತಿಷ್ಠಿತ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿಗಳು (63) ಲಿಂಗೈಕ್ಯರಾಗಿದ್ದಾರೆ (Swameeji death). ಅವರು ಗುರುವಾರ ರಾತ್ರಿ 12 ಗಂಟೆy ವೇಳೆಗೆ ಹೃದಯಾಘಾತದಿಂದ ನಿಧನರಾದರು ಎಂದು ಮಠದ ಮೂಲಗಳು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಮಠಕ್ಕೆ ಸ್ವಾಮೀಜಿಗಳಾಗಿರುವ ಇವರು ಸಾಮಾಜಿಕ, ಆಧ್ಯಾತ್ಮಿಕವಾಗಿ ಜನರಿಗೆ ಪ್ರೇರಕ ಶಕ್ತಿಯಾಗಿದ್ದರು.
ಗುರುವಾರ ರಾತ್ರಿ ಮಲಗಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಮಠದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.
ಬಿದರಿ ಗ್ರಾಮದ ಕಲ್ಮಠದ ಆವರಣದೊಳಗೆ ವೀರಶೈವ ಲಿಂಗಾಯತ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮ ಸ್ವಾಮೀಜಿಗಳ ಹುಟ್ಟೂರಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆ ಮಠಕ್ಕೆ ಸ್ವಾಮೀಜಿಯಾಗಿ ಬಂದಿದ್ದರು.
ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಮಂಗಳೂರು: ಮಂಗಳೂರಿನ ಲಾಡ್ಜ್ ಒಂದರಲ್ಲಿ ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ (Family suicide) ಮಾಡಿಕೊಂಡಿದ್ದಾರೆ. ಮಂಗಳೂರಿನ ಕೆಎಸ್ ರಾವ್ ರೋಡ್ ನಲ್ಲಿರುವ ಕರುಣಾ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ.
ಮೈಸೂರು ಮೂಲದ ದೇವೇಂದ್ರ(48) ಎಂಬವರು ತಮ್ಮ ಕುಟುಂಬ ಸಮೇತ ಸಾವಿಗೆ ಶರಣಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಲಾಡ್ಜ್‌ಗೆ ಬಂದಿದ್ದ ಅವರು ಅಲ್ಲೇ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ.
ದೇವೇಂದ್ರ ಅವರು ಮೈಸೂರಿನ ವಾಣಿವಿಲಾಸ ಬಡಾವಣೆ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ :Crime News: ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ಸಿಕ್ಕಿದ ಸಲಿಂಗಪ್ರೇಮಿ ಗಂಡನಿಂದ ಹೆಂಡತಿಗೆ ಕಿರುಕುಳ, ದೂರು
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ