Prajwal Revanna Case: ಹಾಸನ, ಬೆಂಗಳೂರು ದಾಳಿ ವೇಳೆ ಸಿಕ್ಕ ಪೆನ್‌ಡ್ರೈವ್‌, ಹಾರ್ಡ್‌ ಡಿಸ್ಕ್‌ ಎಷ್ಟು? ಎಫ್‌ಎಸ್‌ಎಲ್‌ಗೆ ರವಾನೆ - Vistara News

ಕ್ರೈಂ

Prajwal Revanna Case: ಹಾಸನ, ಬೆಂಗಳೂರು ದಾಳಿ ವೇಳೆ ಸಿಕ್ಕ ಪೆನ್‌ಡ್ರೈವ್‌, ಹಾರ್ಡ್‌ ಡಿಸ್ಕ್‌ ಎಷ್ಟು? ಎಫ್‌ಎಸ್‌ಎಲ್‌ಗೆ ರವಾನೆ

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಹಾಗೂ ಬಂಧಿತರಾಗಿರುವ ಇಬ್ಬರಿಗೆ ಸೇರಿದ ಹಾಸನ ಮತ್ತು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎಸ್ಐಟಿ ಹತ್ತು ಪೆನ್ ಡ್ರೈವ್ ಮತ್ತು ಒಂದು ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ತೆಗೆದುಕೊಂಡಿದೆ. ಇವುಗಳನ್ನು ಎಫ್‌ಎಸ್‌ಎಲ್‌ ವರದಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲು ಎಸ್‌ಐಟಿ ನಿರ್ಧರಿಸಿದೆ. ಇದು ಮೂಲ ಕಾಪಿಯೇ? ಅಥವಾ ಒಬ್ಬರಿಂದ ಒಬ್ಬರಿಗೆ ಹಂಚಿಕೆ ಆಗಿರುವುದೇ ಎಂಬ ನಿಟ್ಟಿನಲ್ಲಿ ಎಫ್‌ಎಸ್‌ಎಲ್‌ನಲ್ಲಿ ಪರಿಶಿಲನೆ ನಡೆಸಲಾಗುತ್ತದೆ.

VISTARANEWS.COM


on

Prajwal Revanna Case pen drive and hard disk were found during the raids in Hassan and Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಹಾಗೂ ಬೆಂಗಳೂರಿನ ಹಲವು ಕಡೆ ಎಸ್ಐಟಿ ದಾಳಿ ನಡೆಸಿದ್ದ ವೇಳೆ ಹತ್ತು ಪೆನ್ ಡ್ರೈವ್, ಒಂದು ಹಾರ್ಡ್ ಡಿಸ್ಕ್ ಪತ್ತೆಯಾಗಿದೆ. ಈಗ ಈ ಎಲ್ಲವನ್ನೂ ಎಫ್ಎಸ್ಎಲ್‌ಗೆ ಕಳುಹಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಹಾಗೂ ಬಂಧಿತರಾಗಿರುವ ಇಬ್ಬರಿಗೆ ಸೇರಿದ ಹಾಸನ ಮತ್ತು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎಸ್ಐಟಿ ಹತ್ತು ಪೆನ್ ಡ್ರೈವ್ ಮತ್ತು ಒಂದು ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ತೆಗೆದುಕೊಂಡಿದೆ.

ಎಫ್‌ಎಸ್‌ಎಲ್‌ಗೆ ರವಾನೆ

ಈ ಎಲ್ಲ ಹತ್ತು ಪೆನ್ ಡ್ರೈವ್ ಮತ್ತು ಒಂದು ಹಾರ್ಡ್ ಡಿಸ್ಕ್ ಅನ್ನು ಎಫ್‌ಎಸ್‌ಎಲ್‌ ವರದಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲು ಎಸ್‌ಐಟಿ ನಿರ್ಧರಿಸಿದೆ. ಇದು ಮೂಲ ಕಾಪಿಯೇ? ಅಥವಾ ಒಬ್ಬರಿಂದ ಒಬ್ಬರಿಗೆ ಹಂಚಿಕೆ ಆಗಿರುವುದೇ ಎಂಬ ನಿಟ್ಟಿನಲ್ಲಿ ಎಫ್‌ಎಸ್‌ಎಲ್‌ನಲ್ಲಿ ಪರಿಶಿಲನೆ ನಡೆಸಲಾಗುತ್ತದೆ.

ಸೆಕ್ಸ್‌ ಕೇಸಲ್ಲಿ ಎಕ್ಸ್‌ ಮಾನ್ಯತೆ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ!

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ವೇರಿಫೈಡ್‌ ಅಕೌಂಟ್‌ ಸ್ಟೇಟಸ್‌ನಿಂದ ಪ್ರಜ್ವಲ್‌ ಹೊರಬಿದ್ದಿದ್ದಾರೆ. ಅವರಿಗಿದ್ದ ಬ್ಲ್ಯೂ ಟಿಕ್‌ ಮಾನ್ಯತೆ ಈಗ ಅಮಾನ್ಯಗೊಂಡಿದೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ ಈ ಮೊದಲು ಟ್ವಿಟರ್‌ ಆಗಿತ್ತು. ಆಗಿನಿಂದಲೂ ಅಫೀಶಿಯಲ್‌ ಖಾತೆದಾರರಿಗೆ ಬ್ಲ್ಯೂ ಟಿಕ್‌ ಅನ್ನು ನೀಡಲಾಗುತ್ತಿತ್ತು. ಅದಕ್ಕೆ ಕೆಲವೊಂದಿಷ್ಟು ಪ್ರಕ್ರಿಯೆಗಳು ಇದ್ದವು. ಈ ಕಾರಣಕ್ಕೆ ಗಣ್ಯರು, ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವರು ಈ ಬ್ಲ್ಯೂಟಿಕ್‌ ಅನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಎಲಾನ್‌ ಮಸ್ಕ್‌ ಟ್ವಿಟರ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಹಲವು ಬದಲಾವಣೆಯನ್ನು ತಂದರು. ಬ್ಲ್ಯೂ ಟಿಕ್‌ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಹ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಲ್ಯೂಟಿಕ್‌ ಅನ್ನು ವಾಪಸ್‌ ಪಡೆಯುವ ಅಧಿಕಾರವನ್ನು ಎಕ್ಸ್‌ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಏನಾಗಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಬ್ಲ್ಯೂ ಟಿಕ್‌ ಬೇಕೆಂದರೆ ದುಡ್ಡೆಷ್ಟು?

ಗ್ರಾಹಕರು ದುಡ್ಡು ಕೊಟ್ಟು ಈ ಬ್ಲ್ಯೂ ಟಿಕ್ ಮಾರ್ಕ್ ಖರೀದಿಸಬಹುದು. ಮೆಟಾ ವೆರಿಫೈಡ್ ಸಬ್ಸ್‌ಕ್ರಿಪ್ಷನ್ ಆಧಾರಿತ ಸೇವೆಯ ಅನ್ವಯ ಬಳಕೆದಾರರು ತಿಂಗಳಿಗೆ 699 ರೂ. ಪಾವತಿಸಿದರೆ ಬ್ಲೂ ಟಿಕ್ ದೊರೆಯಲಿದೆ. ಇದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಎರಡಕ್ಕೂ ಅನ್ವಯವಾಗಲಿದೆ. ಆದರೆ, ಈಗ ಪ್ರಜ್ವಲ್‌ ಕೇಸ್‌ನಲ್ಲಿ ಯಾವ ಕಾರಣಕ್ಕೆ ಬ್ಲ್ಯೂಟಿಕ್‌ ಅನ್ನು ತೆಗೆಯಲಾಗಿದೆ ಎಂದು ಈವರೆಗೂ ಎಕ್ಸ್‌ ಸ್ಪಷ್ಟನೆ ನೀಡಿಲ್ಲ.

ವಿದೇಶಕ್ಕೆ ಹೋದ ಬಳಿಕ ಕೊನೆಯದಾಗಿ ಟ್ವೀಟ್‌ ಮಾಡಿದ್ದ ಪ್ರಜ್ವಲ್‌

ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

ಪ್ರಜ್ವಲ್‌ ರೇವಣ್ಣ ದೇಶಬಿಟ್ಟು 19 ದಿನ ಕಳೆದಿದರೂ ಸುಳಿವಿಲ್ಲ. ಈಗಿನ ಪ್ರಕಾರ, ಸದ್ಯಕ್ಕೆ ಪ್ರಜ್ವಲ್ ವಾಪಸಾಗುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಎಸ್‌ಐಟಿ ಅಧಿಕಾರಿಗಳ ಮುಂದಿನ ನಡೆ ಏನು? ಬೇರೆ ದೇಶಕ್ಕೆ ಹೋಗಿ ಅವರನ್ನು ಬಂಧಿಸಿ ಕರೆತರಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲವಾದರೆ ಬೇರೆ ಯಾವ ಮಾರ್ಗವಿದೆ? ಅಥವಾ ಪ್ರಜ್ವಲ್‌ ಬರುವವರೆಗೂ ಕಾಯುತ್ತಾ ಕೂರಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.

ಈಗಿನ ಮಾಹಿತಿ ಪ್ರಕಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸದ್ಯ ಎಸ್‌ಐಟಿ ತಂಡದವರು ಬೇರೆ ದೇಶಕ್ಕೆ ತೆರಳಿ ಪ್ರಜ್ವಲ್‌ ಅವರನ್ನು ಕರೆತರಲು ಸಾಧ್ಯವಿಲ್ಲ. ಇನ್ನು ಪ್ರಜ್ವಲ್‌ ಇಲ್ಲಿಂದ ಜರ್ಮನಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿ ಹೋಗಿದ್ದಾರಾದರೂ ಅವರು ಜರ್ಮನಿಯಲ್ಲಿಯೇ ಇದ್ದಾರಾ? ಅಥವಾ ಅಲ್ಲಿಂದ ಬೇರೆ ದೇಶಕ್ಕೇನಾದರೂ ಹೋಗಿದ್ದಾರಾ ಎಂಬುದೂ ಖಾತ್ರಿಯಾಗಿಲ್ಲ. ಆದರೆ, ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಂತೆ ಫ್ಲೈಟ್‌ ಟಿಕೆಟ್‌ ಅನ್ನು ಮಾತ್ರ ಬುಕ್‌ ಮಾಡುತ್ತಾ ಕುಳಿತಿದ್ದಾರೆ. ಕೊನೇ ಕ್ಷಣದಲ್ಲಿ ಫ್ಲೈಟ್‌ ಹತ್ತದೆ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಅದು ಬಿಟ್ಟರೆ ಇತ್ತ ಸುಳಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.

ಹೀಗಾಗಿ ಮೊದಲು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲದೆ ಹೋದರೆ ಈಗಾಗಲೇ ಜಾರಿ ಮಾಡಲಾಗಿರುವ ಬ್ಲೂ ಕಾರ್ನರ್ ನೋಟಿಸ್‌ನಿಂದಾಗಿ ಯಾವ ದೇಶದಿಂದಾದರೂ ಮಾಹಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳಿಂದ ಮಾಹಿತಿ ಬರುವವರೆಗೂ ಕಾಯಲೇಬೇಕು.

ಇದನ್ನೂ ಓದಿ: HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

ಪ್ರಜ್ವಲ್‌ ಇರುವ ದೇಶ ಗೊತ್ತಾದರೆ ಎಸ್‌ಐಟಿ ಅರೆಸ್ಟ್‌ ಮಾಡಬಹುದಾ?

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿಯೇ ಅಥವಾ ಇನ್ಯಾವುದೋ ದೇಶದಲ್ಲಿ ಅಡಗಿದ್ದಾರೆ ಎಂಬುದು ಗೊತ್ತಾದರೆ ಎಸ್‌ಐಟಿ ಹೋಗಿ ಅರೆಸ್ಟ್‌ ಮಾಡಬಹುದಾ ಎಂದು ಕೇಳಿದರೆ, ಅದು ಸಾಧ್ಯವಿಲ್ಲ ಎಂಬ ಉತ್ತರ ಸಿಗಲಿದೆ. ಹಾಗಾಗಿ ಅವರು ಯಾವ ದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕರೆ ಇಂಟರ್ ಪೋಲ್ ಮುಖಾಂತರ ಹಸ್ತಾಂತರ ಮಾಡಿಕೊಳ್ಳಬಹುದು. ಅದು ಕೂಡ ಆ ದೇಶ ಹಾಗೂ ನಮ್ಮ ದೇಶದ ನಡುವೆ ಹಸ್ತಾಂತರ ಒಪ್ಪಂದ (Extradition Treaty) ಇರಬೇಕು. ಆಗ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿ ಹಸ್ತಾಂತರ ಮಾಡಿಕೊಳ್ಳಬಹುದು. ಅದೂ ಆಗದೇ ಹೋದರೆ, ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನೆ ಕೂರಬಹುದೇ ಹೊರತು ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ಆಗ ಪ್ರಜ್ವಲ್ ತಾನಾಗಿಯೇ ಬರುವವರೆಗೂ ಕಾಯಲೇಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ರಸ್ತೆಯಲ್ಲೇ ಸಿಸಿಟಿವಿ ಕ್ಯಾಮೆರಾ ಅಳವಡಿಗೆ- ಸೇನಾ ಮಾಹಿತಿ ಪಾಕಿಸ್ತಾನಕ್ಕೆ ರವಾನೆ-ಆರೋಪಿ ಬಂಧನ

VISTARANEWS.COM


on

ಪಂಜಾಬ್‌ನ ಪಠಾಣ್‌ಕೋಟ್‌ನ ಪೊಲೀಸರು ಶಂಕಿತ ಬೇಹುಗಾರಿಕೆ ಜಾಲವನ್ನು ಬಯಲಿಗೆಳೆದಿದ್ದಾರೆ. ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಚಕ್ ಧಾರಿವಾಲ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಬಂಧಿತ ಆರೋಪಿ.ಈತ ಸೇನೆ ಮತ್ತು ಅರೆಸೇನಾ ಪಡೆಗಳ ಚಲನವಲನಗಳ ಮೇಲೆ ಕಣ್ಣಿಡಲು ರಾಷ್ಟ್ರೀಯ ಹೆದ್ದಾರಿ-44 ರ ಪಠಾಣ್‌ಕೋಟ್-ಜಮ್ಮು ಪ್ರದೇಶದ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ ಎಂದು ಪೋಲಿಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

40 ಸಾವಿರ ಆಸೆಗೆ ಭಾರತೀಯ ಸೇನಾ ಮಾಹಿತಿ ರವಾನೆ

ಪಾಕಿಸ್ತಾನ ಮತ್ತು ವಿದೇಶದಲ್ಲಿರುವವರಿಗೆ ಸಿಸಿಟಿವಿ ಕಣ್ಗಾವಲು ಮಾಹಿತಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ರವಾನಿಸಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸಿಂಗ್ ಜನವರಿಯಲ್ಲಿ ಸುಜನ್‌ಪುರ ಬಳಿಯ ಹೆದ್ದಾರಿಯಲ್ಲಿರುವ ಅಂಗಡಿಯಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ನಿರ್ದೇಶನ ಬರುತ್ತಿದ್ದು, 40,000ರೂ.ಗಳನ್ನು ಪಡೆದಿರುವುದಾಗಿ ಪೊಲೀಸ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸದ್ಯ ಬಂಧಿತನಿಂದ ಸಿಸಿಟಿವಿ ಕ್ಯಾಮೆರಾ, ಇಂಟರ್‌ನೆಟ್‌ ವೈಫೈ ರೂಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಸಂಬಂಧ ನಾಲ್ವರು ಆರೆಸ್ಟ್

ಪಠಾಣ್‌ಕೋಟ್-ಜಮ್ಮು ಹೆದ್ದಾರಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಸುಜನ್‌ಪುರ ಪೊಲೀಸರು, ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ವಿಕ್ರಮ್‌ಜಿತ್ ಸಿಂಗ್ ಅಲಿಯಾಸ್ ವಿಕ್ಕಾ, ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕ್ಕಿ ಮತ್ತು ತರಣ್‌ಪ್ರೀತ್ ಸಿಂಗ್ ಅಲಿಯಾಸ್ ತನ್ನು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳು ಅಪರಾಧ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳಿಗೆ ವಿವರಣೆ ನೀಡಲಾಗಿದ್ದು, ಬೇಹುಗಾರಿಕೆಯ ಹಿಂದಿನ ಹಣಕಾಸಿನ ಮೂಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.

Continue Reading

Latest

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ

VISTARANEWS.COM


on

ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ಪ್ರವಾಸದ ವೇಳೆ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದೆ. ರವಿಶಂಕರ ಗುರೂಜಿ ಅವರ ಜನ್ಮದಿನದ ಅಂಗವಾಗಿ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಧ್ಯಾನ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಮೋದಿ ಆಗಮಿಸಿದ್ದರು. ಎಚ್‌ಎಎಲ್‌ ನಿಂದ ಕನಕಪುರ ರಸ್ತೆಯ ರವಿಶಂಕರ ಗುರೂಜಿ ಆಶ್ರಮಕ್ಕೆ ಮೋದಿ ತೆರಳಿದ್ದರು. ಇದೇ ವೇಳೆ ಕಗ್ಗಲೀಪುರ ಸಮೀಪದ ತಾತಗುಣಿ ಬಳಿ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮೋದಿ ತೆರಳುವ ಮಾರ್ಗದಿಂದ 50 ಮೀಟರ್‌ ದೂರದಲ್ಲಿ ಈ ಜಿಲೆಟಿನ್‌ ಕಡ್ಡಿಗಳು ಸಿಕ್ಕಿವೆ. ಮೋದಿ ಆಗಮನದ ವೇಳೆ ಭಾರಿ ಅವಘಡಕ್ಕೆ ಸಂಚು ರೂಪಿಸಲಾಗಿತ್ತೇ ಎಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ. ಜಿಲೆಟಿನ್ ಕಡ್ಡಿಗಳು ಎಲ್ಲಿಂದ ಬಂದವು?, ಪ್ರಧಾನಮಂತ್ರಿ ಪ್ರಯಾಣಿಸುವ ಮಾರ್ಗದಲ್ಲಿ ಸ್ಫೋಟಿಸಲು ಇಡಲಾಗಿತ್ತೇ? ಘಟನೆ ಹಿಂದೆ ಯಾವುದೇ ಸಂಘಟಿತ ಸಂಚು ಇದೆಯೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕೋರಮಂಗಲ ಠಾಣೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ವಿವಿಧ ಪ್ರದೇಶಗಳಲ್ಲಿ ಸ್ಫೋಟದ ಬೆದರಿಕೆ ನೀಡಿದ್ದಾರೆ. ಜೊತೆಗೆ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕರೆ ಬಂದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. HAL ಪ್ರದೇಶದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ತನಿಖೆಯ ವೇಳೆ ಆರ್ಟ್ ಆಫ್ ಲಿವಿಂಗ್ ಸುತ್ತಮುತ್ತ ಪ್ರದೇಶದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಕ್ರೈಂ

ಪ.ಬಂಗಾಳ ಶೂಟೌಟ್‌ಗೆ ಟ್ವಿಸ್ಟ್‌, ಅಸಲಿಗೆ ಸುವೇಂದು ಟಾರ್ಗೆಟ್‌ ಆಗಿದ್ರಾ?

VISTARANEWS.COM


on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನವಾಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಹಿಂಸಾಚಾರ ಜೋರಾಗಿತ್ತು. ಇದೀಗ ರಕ್ತದೋಕುಳಿಯೇ ಹರಿದಿದೆ. ಬಿಜೆಪಿ ನಾಯಕ ಹಾಗೂ ಸಿಎಂ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.


ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗಾಡಿ ಅಡ್ಡಗಟ್ಟಿ, ಗುಂಡಿನ ದಾಳಿ ಮಾಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಒಬ್ಬ ವ್ಯಕ್ತಿ ಕಾರಿನ ಕಿಟಕಿಯ ಹತ್ತಿರ ಬಂದು ಚಂದ್ರನಾಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈಗ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಹತ್ಯೆ ಕೇಸ್‌ ಟ್ವಿಸ್ಟ್‌ ಪಡೆದುಕೊಂಡಿದೆ. ಅಸಲಿಗೆ ಸುವೇಂದು ಅಧಿಕಾರಿ ಕೊಲೆಗೆ ಟಾರ್ಗೆಟ್‌‌ , ಮಾಡಲಾಗಿತ್ತು ಎನ್ನಲಾಗಿದ್ದು, ಅದು ಮಿಸ್‌‌ ಆಗಿ ಸುವೇಂದು ಆಪ್ತನ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಆಸ್ಟ್ರಿಯಾ ಮೂಲದ ಗ್ಲಾಕ್‌ ಪಿಸ್ತೂಲ್‌ ಬಳಸಿ ಶೂಟ್‌ ಮಾಡಿದ್ದಾರೆ.

Continue Reading

ಕ್ರೈಂ

ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಶೂಟೌಟ್‌‌..!

VISTARANEWS.COM


on

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನವಾಣೆ ಫಲಿತಾಂಶ ಹೊರಬೀಳ್ತಿದ್ದಂತೆ ಹಿಂಸಾಚಾರ ಜೋರಾಗಿತ್ತು. ಇದೀಗ ರಕ್ತದೋಕುಳಿಯೇ ಹರಿದಿದೆ. ಬಿಜೆಪಿ ನಾಯಕ ಹಾಗೂ ಸಿಎಂ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.


ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿನ ದಾಳಿ ಮಾಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಒಬ್ಬ ವ್ಯಕ್ತಿ ಕಾರಿನ ಕಿಟಕಿಯ ಹತ್ತಿರ ಬಂದು ಚಂದ್ರನಾಥ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆದ್ರೀಗ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಹತ್ಯೆ ಕೇಸ್‌ ಟ್ವಿಸ್ಟ್‌ ಪಡೆದುಕೊಂಡಿದೆ. ಸುವೇಂದು ಅಧಿಕಾರಿ ಕೊಲೆಗೆ ಟಾರ್ಗೆಟ್‌‌ , ಮಾಡಲಾಗಿತ್ತು ಎನ್ನಲಾಗಿದ್ದು, ಮಿಸ್‌‌ ಆಗಿ ಆಪ್ತನ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಆಸ್ಟ್ರಿಯಾ ಮೂಲದ ಗ್ಲಾಕ್‌ ಪಿಸ್ತೂಲ್‌ ಬಳಸಿ ಶೂಟೌಟ್‌‌ ಮಾಡಿದ್ದಾರೆ.

Continue Reading
Advertisement
ಬಿಡದಿ ಟೌನ್‌ಶಿಪ್‌
Latest1 day ago

ಬಿಡದಿ ಟೌನ್‌ಶಿಪ್‌ ರೈತರ ವಿರೋಧ : ಜೂನ್ 22ರಂದು ‘ಭೈರಮಂಗಲ ಚಲೋ’

ಸಿಎಂ ಡಿಕೆಶಿ
Latest2 days ago

ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳಿದ್ರೆ ಹುಷಾರ್‌: ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ನೀಟ್ 2026 ಪರೀಕ್ಷೆ
Latest3 days ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NEET ಪರೀಕ್ಷೆಗೆ ಹೆಚ್ಚುವರಿ ಸಮಯ

ಜೋಸೆಫ್‌ ವಿಜಯ್‌
Latest3 days ago

ಎಂಜಿಆರ್‌, ಜಯಲಲಿತಾ ಹಾದಿಯಲ್ಲಿ ಜೋಸೆಫ್ ವಿಜಯ್‌: ಇಂದು ಕೊಲ್ಲೂರು ಮೂಕಾಂಬಿಕೆ ದರ್ಶನ

ರಾಜ್ಯಸಭೆ
Latest3 days ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest4 days ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ5 days ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest5 days ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest5 days ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest5 days ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌